traffic Archives - Good News 24x7 https://www.goodnews24x7.com/tag/traffic/ Kannada Wed, 10 Sep 2025 10:27:44 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg traffic Archives - Good News 24x7 https://www.goodnews24x7.com/tag/traffic/ 32 32 ಗುಂಡಿ ತಪ್ಪಿಸಲು ಹೋಗಿ ರಸ್ತೆಗೆ ಬಿದ್ದ ಮಹಿಳೆ, ಮೈ ಮೇಲೆ ಹರಿದ ಲಾರಿ https://www.goodnews24x7.com/woman-falls-on-road-to-avoid-pothole-lorry-runs-over-her/ Wed, 10 Sep 2025 10:27:44 +0000 https://www.goodnews24x7.com/?p=7462 ರಸ್ತೆಯ ತುಂಬೆಲ್ಲಾ ಗುಂಡಿಗಳು ಇದ್ದರೆ ಅದುವೇ ಮೃತ್ಯು ಕೂಪಗಳಾಗುತ್ತಿವೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಮಂಗಳೂರಿನ ಕೂಳೂರು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿನ ರಸ್ತೆಯ ತುಂಬಾ ಗುಂಡಿ ಬಿದ್ದಿದ್ದು, ಭೀಕರ ಅಪಘಾತವೊಂದು ಸಂಭವಿಸಿದೆ. ಈ ಅಪಘಾತದ ದೃಶ್ಯವು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.…

The post ಗುಂಡಿ ತಪ್ಪಿಸಲು ಹೋಗಿ ರಸ್ತೆಗೆ ಬಿದ್ದ ಮಹಿಳೆ, ಮೈ ಮೇಲೆ ಹರಿದ ಲಾರಿ appeared first on Good News 24x7.

]]>

ರಸ್ತೆಯ ತುಂಬೆಲ್ಲಾ ಗುಂಡಿಗಳು ಇದ್ದರೆ ಅದುವೇ ಮೃತ್ಯು ಕೂಪಗಳಾಗುತ್ತಿವೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಮಂಗಳೂರಿನ ಕೂಳೂರು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿನ ರಸ್ತೆಯ ತುಂಬಾ ಗುಂಡಿ ಬಿದ್ದಿದ್ದು, ಭೀಕರ ಅಪಘಾತವೊಂದು ಸಂಭವಿಸಿದೆ. ಈ ಅಪಘಾತದ ದೃಶ್ಯವು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ ನೋಡಿ.
ಮಂಗಳೂರು: ಕೆಲವರು ವಾಹನ ಕೈಗೆ ಸಿಕ್ಕೊಡನೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ವೇಗವಾಗಿ ವಾಹನ ಓಡಿಸುತ್ತಾರೆ. ಅದಲ್ಲದೇ, ಅತೀ ವೇಗವಾಗಿ ವಾಹನ ಓಡಿಸಿ ಅಪಘಾತಗಳಾಗಿರುವ ಸುದ್ದಿಗಳನ್ನು ನೀವು ಕೇಳಿರುತ್ತೀರಿ. ಆದರೆ ಕಳಪೆ ಕಾಮಗಾರಿಯಿಂದ ರಸ್ತೆ ತುಂಬೆಲ್ಲಾ ಗುಂಡಿಗಳು ಬೀಳುತ್ತಿದ್ದು, ಇದುವೇ ಮೃತ್ಯು ಕೂಪಗಳಾಗುತ್ತಿದೆ. ಮಂಗಳೂರಿನ ಕೂಳೂರಿನಲ್ಲಿ ನಡೆದ ಈ ಘಟನೆಯೇ ಇದಕ್ಕೆ ಸಾಕ್ಷಿಯಾಗಿದೆ. ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿನ ಗುಂಡಿಯಿಂದಾಗಿ ನಿಯಂತ್ರಣ ಕಳೆದುಕೊಂಡು ದ್ವಿಚಕ್ರ ವಾಹನವೊಂದು ಉರುಳಿಬಿದ್ದಿದೆ. ಈ ದ್ವಿಚಕ್ರ ವಾಹನದಲ್ಲಿದ್ದ ಮಹಿಳೆಯೊಬ್ಬರು ಚಲಿಸುತ್ತಿದ್ದ ಲಾರಿಯ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ. ಈ ಅಪಘಾತದ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ.

 

ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ ಅಪಘಾತದ ದೃಶ್ಯವನ್ನು ಕಾಣಬಹುದು. ದ್ವಿಚಕ್ರ ವಾಹನ ಓಡಿಸುತ್ತಿದ್ದ ಮಹಿಳೆಯೊಬ್ಬರು ರಸ್ತೆಯ ಗುಂಡಿಯನ್ನು ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡು ವಾಹನದೊಂದಿಗೆ ರಸ್ತೆಗೆ ಉರುಳಿ ಬೀಳುವುದನ್ನು ಕಾಣಬಹುದು. ಈ ವೇಳೆಯಲ್ಲಿ ಲಾರಿಯೊಂದು ಅತಿ ವೇಗದಿಂದ ಬಂದು ರಸ್ತೆಯ ಮೇಲೆ ಬಿದ್ದಿದ್ದ ಮಹಿಳೆಯ ಮೇಲಿನಿಂದ ಸಾಗಿರುವುದನ್ನು ಕಾಣಬಹುದು. ಸೆಪ್ಟೆಂಬರ್ 9ರ ಬೆಳಗ್ಗೆ 8-30ರ ಸುಮಾರಿಗೆ ಅಪಘಾತ ಸಂಭವಿಸಿದ್ದು, ಇದರಲ್ಲಿ ಮೃತ ಪಟ್ಟ ಮಹಿಳೆಯನ್ನು ಮಾಧವಿ (44) ಎಂದು ಗುರುತಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸ್ಥಳಾಂತರಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಲಾರಿ ಚಾಲಕ ಮೊಹಮ್ಮದ್ ಫಾರೂಕ್‌ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸ್ಥಳೀಯ ನಿವಾಸಿಗಳು ಈ ಅಪಘಾತಕ್ಕೆ ರಸ್ತೆಯ ದುಸ್ಥಿತಿಯೇ ಕಾರಣ ಎಂದು ರಾಜಕಾರಣಿ, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಪೋಸ್ಟ್ ಒಂದೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಬಳಕೆದಾರರೊಬ್ಬರು, ಹೆದ್ದಾರಿಗಳ ನಿರಂತರ ನಿರ್ಲಕ್ಷ್ಯ ಹಾಗೂ ಕಳಪೆ ನಿರ್ವಹಣೆ, ಇತ್ತೀಚೆಗಿನ ದಿನಗಳಲ್ಲಿ ಪುನರಾವರ್ತಿತ ಅಪಘಾತಗಳು ನಡೆಯುವುದಕ್ಕೆ ಕಾರಣವಾಗುತ್ತಿದೆ. ಈ ನಿರ್ಲಕ್ಷ್ಯಕ್ಕಾಗಿ NHAI ಅಧಿಕಾರಿಗಳ ವಿರುದ್ಧವೂ ಪ್ರಕರಣ ದಾಖಲಿಸಬೇಕು. ಇಂತಹ ಹೃದಯವಿದ್ರಾವಕ ಜೀವಹಾನಿಯನ್ನು ತಡೆಗಟ್ಟಲು ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿಯನ್ನು ಹೊಂದಿರಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಗುಂಡಿಯಿಂದ ಮತ್ತೊಂದು ಬಲಿ ದುರಂತ ನಷ್ಟ ಎಂದಿದ್ದಾರೆ. ಮತ್ತೊಬ್ಬರು, ಎಂತಹ ನಾಚಿಕೆಗೇಡು ಅಧಿಕಾರಿಗಳು ತಮ್ಮ ಜವಾಬ್ದಾರಿಗಳನ್ನು ಅರಿತುಕೊಳ್ಳುವುದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.

The post ಗುಂಡಿ ತಪ್ಪಿಸಲು ಹೋಗಿ ರಸ್ತೆಗೆ ಬಿದ್ದ ಮಹಿಳೆ, ಮೈ ಮೇಲೆ ಹರಿದ ಲಾರಿ appeared first on Good News 24x7.

]]>
ಟ್ರಾಫಿಕ್ ಉಲ್ಲಂಘನೆ ಪ್ರಕರಣಗಳಲ್ಲಿ ದಾಖಲೆ ಮಾಡಿದ ಬೆಂಗಳೂರು ಟೆಕ್ಕಿ: ಅರ್ಧ ಲಕ್ಷ ದಂಡ ಪಾವತಿ. https://www.goodnews24x7.com/bangalore-techie-sets-record-in-traffic-violation-cases-pays-half-a-lakh-fine/ Sun, 31 Aug 2025 05:26:44 +0000 https://www.goodnews24x7.com/?p=7094 ಬೆಂಗಳೂರು : ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದವರಿಗೆ ಬೆಂಗಳೂರು ನಗರ ಟ್ರಾಫಿಕ್ ಪೊಲೀಸರ ರಿಯಾಯಿತಿ ಯೋಜನೆಯು ಸೂರನಿಕೆಯಂತೆ ಬಳಸಿಕೊಳ್ಳಲು ಅವಕಾಶ ನೀಡಿದ್ದು, ಅದರಿಂದ ಫಾಯ್ದೆ ಪಡೆದಿರುವ ಉದಾಹರಣೆ ಇಲ್ಲಿದೆ. ಬಳ್ಳಾರಿ ಮೂಲದ ಬೆಂಗಳೂರು ನಿವಾಸಿ ಟೆಕ್ಕಿಯೊಬ್ಬರು ತಮ್ಮ ವಿರುದ್ಧವಿದ್ದ 130 ಕ್ಕೂ…

The post ಟ್ರಾಫಿಕ್ ಉಲ್ಲಂಘನೆ ಪ್ರಕರಣಗಳಲ್ಲಿ ದಾಖಲೆ ಮಾಡಿದ ಬೆಂಗಳೂರು ಟೆಕ್ಕಿ: ಅರ್ಧ ಲಕ್ಷ ದಂಡ ಪಾವತಿ. appeared first on Good News 24x7.

]]>

ಬೆಂಗಳೂರು : ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದವರಿಗೆ ಬೆಂಗಳೂರು ನಗರ ಟ್ರಾಫಿಕ್ ಪೊಲೀಸರ ರಿಯಾಯಿತಿ ಯೋಜನೆಯು ಸೂರನಿಕೆಯಂತೆ ಬಳಸಿಕೊಳ್ಳಲು ಅವಕಾಶ ನೀಡಿದ್ದು, ಅದರಿಂದ ಫಾಯ್ದೆ ಪಡೆದಿರುವ ಉದಾಹರಣೆ ಇಲ್ಲಿದೆ. ಬಳ್ಳಾರಿ ಮೂಲದ ಬೆಂಗಳೂರು ನಿವಾಸಿ ಟೆಕ್ಕಿಯೊಬ್ಬರು ತಮ್ಮ ವಿರುದ್ಧವಿದ್ದ 130 ಕ್ಕೂ ಹೆಚ್ಚು ಉಲ್ಲಂಘನೆ ಪ್ರಕರಣಗಳನ್ನು ನಿವಾರಿಸಿಕೊಂಡು, ಅರ್ಧ ಲಕ್ಷಕ್ಕೂ ಹೆಚ್ಚು ಹಣವನ್ನು ಉಳಿಸಿಕೊಂಡಿದ್ದಾರೆ.

ಅವನಿಗೆ ಸೇರಿದ ಎರಡು ವಾಹನಗಳ ಮೇಲೆ ಒಟ್ಟು ₹1,13,000 ದಂಡ ಬಾಕಿ ಇತ್ತು. ಆದರೆ, ಪೊಲೀಸರು ಪ್ರಾರಂಭಿಸಿದ ರಿಯಾಯಿತಿ ಡ್ರೈವ್‌ ನ ಪ್ರಯೋಜನ ಪಡೆದು, ಕೇವಲ ₹56,500 ಪಾವತಿಸಿ ಎಲ್ಲಾ ಕೇಸ್‌ಗಳನ್ನು ಕ್ಲಿಯರ್ ಮಾಡಿಕೊಂಡಿದ್ದಾರೆ.

ಟ್ರಾಫಿಕ್ ಪೊಲೀಸ್ ಎಎಸ್‌ಐ ದೇವರಾಜ್.ಎಸ್ ಅವರು ಈ ಮಾಹಿತಿಯನ್ನು ವಾಟ್ಸಾಪ್ ಗ್ರೂಪ್‌ಗಳಲ್ಲಿ ಹಂಚಿಕೊಂಡಿದ್ದು, ಈ ಮೂಲಕ ಘಟನೆ ಸಾರ್ವಜನಿಕತೆಗೆ ಬಂದಿದೆ. “ಇದೊಂದು ಇತರ ಟ್ರಾಫಿಕ್ ಉಲ್ಲಂಘಕರಿಗೆ ನಿದರ್ಶನವಾಗಲಿ ಎಂಬ ಆಶಯ ನಮ್ಮದು” ಎಂದು ಅವರು ತಿಳಿಸಿದ್ದಾರೆ.

ಇದುವರೆಗೆ ಈ ರಿಯಾಯಿತಿ ಅಭಿಯಾನದಿಂದ ಸುಮಾರು ₹18.9 ಕೋಟಿ ದಂಡ ಸಂಗ್ರಹವಾಗಿದ್ದು, 6.7 ಲಕ್ಷ ಪ್ರಕರಣಗಳು ನಿವಾರಣೆಯಾಗಿವೆ. ಟೆಕ್ಕಿಯ ಎರಡು ಕಾರುಗಳಲ್ಲೊಂದು ಮೇಲೆ ₹46,500 ಹಾಗೂ ಇನ್ನೊಂದರ ಮೇಲೆ ₹10,000 ದಂಡ ವಿಧಿಸಲಾಗಿತ್ತು. ಈ ದಂಡಗಳು ಬೆಂಗಳೂರಿನ ಎಇಸಿಎಸ್ ಲೇಔಟ್‌ನಲ್ಲಿ ಪಾವತಿಯಾಗಿವೆ.

ದಂಡದ ಹೆಚ್ಚಿನ ಪ್ರಮಾಣವು ನೋ ಪಾರ್ಕಿಂಗ್, ಚಲಿಸುತ್ತಿರುವ ವಾಹನದಲ್ಲಿ ಮೊಬೈಲ್ ಬಳಕೆ, ಹಾಗೂ ಇತರ ಸಾಮಾನ್ಯ ಉಲ್ಲಂಘನೆಗಳಿಂದ ಬರುವ ವರದಿ ಸೇರಿದೆ.

ಬೆಂಗಳೂರು ಟ್ರಾಫಿಕ್ ಪೊಲೀಸ್ ಇಲಾಖೆ ಆರಂಭಿಸಿರುವ ಈ ರಿಯಾಯಿತಿ ಅಭಿಯಾನವು ಜನತೆಯಲ್ಲಿ ಉತ್ತಮ ಸ್ಪಂದನೆ ಪಡೆದುಕೊಂಡಿದೆ ಎಂಬುದು ಸ್ಪಷ್ಟವಾಗಿದೆ.

The post ಟ್ರಾಫಿಕ್ ಉಲ್ಲಂಘನೆ ಪ್ರಕರಣಗಳಲ್ಲಿ ದಾಖಲೆ ಮಾಡಿದ ಬೆಂಗಳೂರು ಟೆಕ್ಕಿ: ಅರ್ಧ ಲಕ್ಷ ದಂಡ ಪಾವತಿ. appeared first on Good News 24x7.

]]>
ಶಬರಿಮಲೆ: ದಟ್ಟಣೆ ನಿಯಂತ್ರಣಕ್ಕೆ ಎಐ ಕ್ಯಾಮೆರಾ, ಡ್ರೋನ್ ಬಳಕೆಗೆ ಕೆಎಸ್‌ಆರ್‌ಟಿಸಿ ಚಿಂತನೆ. https://www.goodnews24x7.com/sabarimala-ksrtc-considering-using-ai-cameras-drones-to-control-traffic/ Sun, 24 Aug 2025 06:09:29 +0000 https://www.goodnews24x7.com/?p=6620 “ಶಬರಿಮಲೆ ಯಾತ್ರೆ ಪರಿಸರ ಸುಸ್ಥಿತಿಯಲ್ಲಿ ನಡೆಯಲೆಂದು, ತಾಂತ್ರಿಕ ಸಾಧನಗಳ ನೆರವಿನಿಂದ ಭಕ್ತರ ದಟ್ಟಣೆಯನ್ನು ನಿಖರವಾಗಿ ನಿಯಂತ್ರಿಸುವ ನಿಟ್ಟಿನಲ್ಲಿ KSRTC ಸಕ್ರೀಯವಾಗಿದೆ. ವೈಜ್ಞಾನಿಕ ಅಧ್ಯಯನ, ಸರತಿ ಸಾಲು ವ್ಯವಸ್ಥೆ, ಮತ್ತು ನವೀಕರಿಸಿದ ಸಂಚಾರ ವ್ಯವಸ್ಥೆ ಮೂಲಕ ಭಕ್ತರ ಅನುಭವವನ್ನು ಸುಗಮಗೊಳಿಸುವ ಪ್ರಯತ್ನ ನಡೆಯುತ್ತಿದೆ.”…

The post ಶಬರಿಮಲೆ: ದಟ್ಟಣೆ ನಿಯಂತ್ರಣಕ್ಕೆ ಎಐ ಕ್ಯಾಮೆರಾ, ಡ್ರೋನ್ ಬಳಕೆಗೆ ಕೆಎಸ್‌ಆರ್‌ಟಿಸಿ ಚಿಂತನೆ. appeared first on Good News 24x7.

]]>

“ಶಬರಿಮಲೆ ಯಾತ್ರೆ ಪರಿಸರ ಸುಸ್ಥಿತಿಯಲ್ಲಿ ನಡೆಯಲೆಂದು, ತಾಂತ್ರಿಕ ಸಾಧನಗಳ ನೆರವಿನಿಂದ ಭಕ್ತರ ದಟ್ಟಣೆಯನ್ನು ನಿಖರವಾಗಿ ನಿಯಂತ್ರಿಸುವ ನಿಟ್ಟಿನಲ್ಲಿ KSRTC ಸಕ್ರೀಯವಾಗಿದೆ. ವೈಜ್ಞಾನಿಕ ಅಧ್ಯಯನ, ಸರತಿ ಸಾಲು ವ್ಯವಸ್ಥೆ, ಮತ್ತು ನವೀಕರಿಸಿದ ಸಂಚಾರ ವ್ಯವಸ್ಥೆ ಮೂಲಕ ಭಕ್ತರ ಅನುಭವವನ್ನು ಸುಗಮಗೊಳಿಸುವ ಪ್ರಯತ್ನ ನಡೆಯುತ್ತಿದೆ.”

ಶಬರಿಮಲೆ: ಶಬರಿಮಲೆ ಅಯ್ಯಪ್ಪನ ದರ್ಶನಕ್ಕಾಗಿ ಪಂಪಾ ಪ್ರದೇಶಕ್ಕೆ ಆಗಮಿಸುವ ಮತ್ತು ಅಲ್ಲಿಂದ ನಿರ್ಗಮಿಸುವ ಭಕ್ತರ ದಟ್ಟಣೆಯನ್ನು ನಿಯಂತ್ರಿಸಲು, ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಮುಂದಾಗಿದೆ. ಭಕ್ತರ ಓಡಾಟದ ವೈಜ್ಞಾನಿಕ ಅಧ್ಯಯನಕ್ಕಾಗಿ ಎಐ ಆಧಾರಿತ ಕ್ಯಾಮೆರಾಗಳು ಮತ್ತು ಡ್ರೋನ್‌ಗಳ ನೆರವು ಪಡೆದು ಮೇಲ್ವಿಚಾರಣಾ ವ್ಯವಸ್ಥೆ ಸ್ಥಾಪಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ.

ಇದು ಶಬರಿಮಲೆ ದಟ್ಟಣೆ ನಿಯಂತ್ರಣಕ್ಕೆ ಮಾಸ್ಟರ್‌ ಪ್ಲಾನ್ ರೂಪಿಸಲು ಕರೆಯಲಾದ ಉನ್ನತಾಧಿಕಾರ ಸಮಿತಿಯ ಸಭೆಯಲ್ಲಿ ಚರ್ಚಿಸಲ್ಪಟ್ಟ ಮಹತ್ವದ ವಿಷಯವಾಗಿದೆ.

ವೈಜ್ಞಾನಿಕ ಅಧ್ಯಯನಕ್ಕೆ ಎಐ ಮತ್ತು ಡ್ರೋನ್‌ಗಳ ಬಳಕೆ

KSRTC ಪ್ರಸ್ತಾಪಿಸಿದ ಯೋಜನೆಯಂತೆ:

  • ಭಕ್ತರ ದಟ್ಟಣೆಯ ನಿಖರ ಮಾಹಿತಿಗಾಗಿ ಡ್ರೋನ್‌ಗಳ ಮೂಲಕ ಮೇಲ್ವಿಚಾರಣೆ.
  • ಪ್ರತ್ಯೇಕ ಸ್ಥಳಗಳಲ್ಲಿ ಯಾತ್ರಿಕರ ಸಂಖ್ಯೆಯನ್ನು ಎಐ ಕ್ಯಾಮೆರಾಗಳ ಮೂಲಕ ಗಮನಿಸಿ ಕ್ರಮ ರೂಪಿಸುವ ಉದ್ದೇಶ.
  • ತಿರುವನಂತಪುರಂ ಎಂಜಿನಿಯರಿಂಗ್ ಕಾಲೇಜು ಈ ಅಧ್ಯಯನಕ್ಕೆ ತಾಂತ್ರಿಕ ಸಲಹೆ ನೀಡಿದೆ.

ವಿಶೇಷ ಪಾಸ್ ಹಾಗೂ ಸರತಿ ಸಾಲು ವ್ಯವಸ್ಥೆ

  • ಪುಲ್ಲುಮೇಡ್ ಮಾರ್ಗದಿಂದ ಆಗಮಿಸುವ ಯಾತ್ರಿಕರಿಗೆ ವಿಶೇಷ ಸರತಿ ಸಾಲು ವ್ಯವಸ್ಥೆ ಅಗತ್ಯವಿದೆ.
  • ಕರಿಮಲೆ ಮೂಲಕ ಕಾಲ್ನಡಿಗೆಯಲ್ಲಿ ಬರುವ ಭಕ್ತರಿಗೆ ವಿಶೇಷ ಪಾಸ್ ಅಗತ್ಯವಿಲ್ಲ, ಆದರೆ ಇನ್ನಿತರ ಮಾರ್ಗಗಳಲ್ಲಿ ಪಾಸ್ ವ್ಯವಸ್ಥೆಯಿಂದ ಗೊಂದಲ ಉಂಟಾಗಿದೆ.
  • ಎರುಮೇಲಿ ಮೂಲಕ ಬರುವ ಮತ್ತು ವಾಹನಗಳಲ್ಲಿ ಮುಕ್ಕುಳಿಗೆ ಬಂದು ಅಲ್ಲಿಂದ ಕಾಲ್ನಡಿಗೆಯಲ್ಲಿ ಪ್ರಯಾಣ ಮಾಡುವ ಭಕ್ತರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ – ಇದು ದಟ್ಟಣೆಗೆ ಕಾರಣವಾಗಿದೆ.

ಮುಖ್ಯ ಸಮಸ್ಯೆಗಳು ಮತ್ತು ಸಲಹೆಗಳು

  • 18 ಮೆಟ್ಟಿಲು, ಮಹಾಕಾಣಿಕೆ, ಅಗ್ನಿಕುಂಡ ಹಾಗೂ ವಾವರ್ ಮೆಟ್ಟಿಲು ಪ್ರದೇಶಗಳಲ್ಲಿ ದಟ್ಟಣೆ ಹೆಚ್ಚಾಗುತ್ತಿದೆ.
    ಸರತಿ ಸಾಲಿನಲ್ಲಿ ಕಾಯದೇ ಬರುವ ಭಕ್ತರಿಂದ ನೂಕುನುಗ್ಗಲು ಉಂಟಾಗುತ್ತಿದೆ.
  • ಪಂಪಾ – ನೀಲಕ್ಕಲ್ ಬಸ್‌ ಸರ್ವೀಸ್‌ ಪ್ರದೇಶದಲ್ಲಿಯೂ ದಟ್ಟಣೆ ಹೆಚ್ಚಾಗಿದ್ದು, ಇಲ್ಲಿ ಹೆಚ್ಚುವರಿ ವ್ಯವಸ್ಥೆ ಅಗತ್ಯವಾಗಿದೆ.
  • ವಾಹನ ಪಾರ್ಕಿಂಗ್ ಮತ್ತು ಭಕ್ತರ ಬಿಗಿಬಿಡು ಸಾಗಣೆಗೆ ಪಂಪಾದಲ್ಲಿ ಹೊಸ ಮಾರ್ಗಗಳ ಅಗತ್ಯ ಇದೆ.
  • ಪಂಪಾ ಮಣಪ್ಪುರಂ, ಗಣಪತಿ ದೇಗುಲ, ಮರಕ್ಕೂಟ್ಟಂ – ಸನ್ನಿಧಾನ ನಡುವಿನ ಪ್ರದೇಶಗಳಲ್ಲಿ ಭಕ್ತರ ನಿಭಾಯಣೆಗೆ ಶ್ರೇಯಸ್ಕರ ಕ್ರಮ ಕೈಗೊಳ್ಳಬೇಕು.

ಅಧಿಕಾರಿಗಳ ಅಭಿಪ್ರಾಯ

ಶಬರಿಮಲೆ ಪ್ರಧಾನ ಸಂಯೋಜಕ ಎಡಿಜಿಪಿ ಎಸ್. ಶ್ರೀಜಿತ್ ಹೇಳಿದ್ದಾರೆ:

“ಹಿಂದಿನ ದೋಷಗಳನ್ನು ಪರಿಗಣಿಸಿ, ಈ ಬಾರಿ ಶಬರಿಮಲೆ ಯಾತ್ರೆಗೆ ಸಮಗ್ರ ದಟ್ಟಣೆ ನಿಯಂತ್ರಣ ಯೋಜನೆ ಅತ್ಯಗತ್ಯ.”

ಈ ಸಭೆಗೆ ನಿವೃತ್ತ ನ್ಯಾಯಮೂರ್ತಿ ಎಸ್. ಸಿರಿಜಗನ್ ಅಧ್ಯಕ್ಷತೆ ವಹಿಸಿದ್ದರು. ಟಿಡಿಬಿ ಸದಸ್ಯ ಎ.ಅಜಿಕುಮಾರ್ ಹಾಗೂ ಮುಖ್ಯ ಎಂಜಿನಿಯರ್ (ಜನರಲ್) ರಂಜಿತ್ ಶೇಖರ್ ಉಪಸ್ಥಿತರಿದ್ದರು.

 

The post ಶಬರಿಮಲೆ: ದಟ್ಟಣೆ ನಿಯಂತ್ರಣಕ್ಕೆ ಎಐ ಕ್ಯಾಮೆರಾ, ಡ್ರೋನ್ ಬಳಕೆಗೆ ಕೆಎಸ್‌ಆರ್‌ಟಿಸಿ ಚಿಂತನೆ. appeared first on Good News 24x7.

]]>
ಹೆಬ್ಬಾಳ ಮೇಲ್ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ. https://www.goodnews24x7.com/cm-siddaramaiah-inaugurated-hebbal-flyover/ Mon, 18 Aug 2025 07:05:36 +0000 https://www.goodnews24x7.com/?p=6325 ಬೆಂಗಳೂರು : ಸುಮಾರು 80 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಿರುವ ಬೆಂಗಳೂರಿನ ಹೆಬ್ಬಾಳ ಹೊಸ ಮೇಲ್ಸೇತುವೆಯನ್ನು ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟಿಸಿದ್ದಾರೆ. ಉದ್ಘಾಟನೆಗೆ ಮೊದಲು 2 ದಿನಗಳ ಟ್ರಯಲ್ ರನ್ ನಡೆಸಲಾಗಿದೆ. ನಾಗವಾರದಿಂದ ಬರುವ ವಾಹನಗಳು ಸಿಗ್ನಲ್ ತಪ್ಪಿಸಿ ರ್ಯಾಂಪ್ ಮೂಲಕ ಸುಲಭವಾಗಿ…

The post ಹೆಬ್ಬಾಳ ಮೇಲ್ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ. appeared first on Good News 24x7.

]]>

ಬೆಂಗಳೂರು : ಸುಮಾರು 80 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಿರುವ ಬೆಂಗಳೂರಿನ ಹೆಬ್ಬಾಳ ಹೊಸ ಮೇಲ್ಸೇತುವೆಯನ್ನು ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟಿಸಿದ್ದಾರೆ. ಉದ್ಘಾಟನೆಗೆ ಮೊದಲು 2 ದಿನಗಳ ಟ್ರಯಲ್ ರನ್ ನಡೆಸಲಾಗಿದೆ. ನಾಗವಾರದಿಂದ ಬರುವ ವಾಹನಗಳು ಸಿಗ್ನಲ್ ತಪ್ಪಿಸಿ ರ್ಯಾಂಪ್ ಮೂಲಕ ಸುಲಭವಾಗಿ ಹೋಗಲು ಈ ರ್ಯಾಂಪ್ ಸಹಾಯ ಮಾಡುತ್ತದೆ. ಆದರೆ, ಇದರಿಂದ ಮೆಖ್ರಿ ಸರ್ಕಲ್‌ನಲ್ಲಿ ಟ್ರಾಫಿಕ್ ಜಾಮ್ ಹೆಚ್ಚಾಗಬಹುದು ಎಂದು ಟ್ರಯಲ್ ರನ್‌ನಲ್ಲಿ ತಿಳಿದುಬಂದಿದೆ.

700 ಮೀಟರ್ ಉದ್ದದ ಹೆಬ್ಬಾಳ ಪ್ಲೈ ಓವರ್ ಸುಮಾರು 80 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದೆ. ಈ ಫ್ಲೈಓವರ್ ಕೆ.ಆರ್ ಪುರಂ ಕಡೆಯಿಂದ ಮೇಖ್ರಿ ಸರ್ಕಲ್‌ ವರೆಗೆ ನಿರ್ಮಾಣ ಮಾಡಲಾಗಿದೆ. ಇದರ ಕಾಮಗಾರಿಯು 2023ರಲ್ಲಿ ಆರಂಭ ಆಗಿದ್ದು, ಒಂದೂವರೆ ವರ್ಷಗಳ ಬಳಿಕ ಫ್ಲೈಓವರ್ ಕಾರ್ಯ ಪೂರ್ಣಗೊಂಡಿದೆ.

ಮೇಖ್ರಿ ಸರ್ಕಲ್ ರಸ್ತೆಯನ್ನು ವಿಸ್ತರಿಸಲು ಬಿಬಿಎಂಪಿ ಈಗಾಗಲೇ ರಕ್ಷಣಾ ಇಲಾಖೆಗೆ ಸೇರಿದ ಜಾಗವನ್ನು ಗುರುತಿಸಿದೆ. ರಸ್ತೆ ವಿಸ್ತರಣೆಯಾದರೆ, ಆರ್.ಟಿ.ನಗರ, ಜಯಮಹಲ್ ಮತ್ತು ವಸಂತ ನಗರದ ಕಡೆಗೆ ಹೋಗುವ ವಾಹನಗಳು ಮೇಖ್ರಿ ಸರ್ಕಲ್‌ನಲ್ಲಿ ಫ್ರೀ ಲೆಫ್ಟ್ ತೆಗೆದುಕೊಳ್ಳಬಹುದು. ಇದರಿಂದ ಟ್ರಾಫಿಕ್ ಕಡಿಮೆಯಾಗುತ್ತದೆ. ಏರ್‌ಪೋರ್ಟ್, ನಾಗವಾರ (ಹೊಸ ರಾಂಪ್ ಮೂಲಕ) ಮತ್ತು ಭೂಪಸಂದ್ರದಿಂದ ಬರುವ ಟ್ರಾಫಿಕ್ ಬ್ಯಾಪ್ಟಿಸ್ಟ್ ಆಸ್ಪತ್ರೆ ಬಳಿ ಸೇರುವುದರಿಂದ ಅಲ್ಲಿಯೂ ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹೆಬ್ಬಾಳ ಜಂಕ್ಷನ್‌ನಲ್ಲಿ ರಾಂಪ್ ನಿರ್ಮಾಣದಿಂದ ಟ್ರಾಫಿಕ್ ಕಡಿಮೆಯಾಗಲಿದೆ. ಆದರೆ, ಮೆಖ್ರಿ ಸರ್ಕಲ್‌ನಲ್ಲಿ ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆಯಿದೆ ಎಂದು ಸಂಚಾರ ಪೊಲೀಸರು ಹೇಳಿದ್ದಾರೆ. “ರಾಂಪ್ ತೆರೆಯುವುದರಿಂದ ವಾಹನಗಳು ಹೆಬ್ಬಾಳ ಜಂಕ್ಷನ್ ಅನ್ನು ಸುಲಭವಾಗಿ ದಾಟಲು ಸಹಾಯವಾಗುತ್ತದೆ. ಆದರೆ, ಟ್ರಯಲ್ ರನ್ ಸಮಯದಲ್ಲಿ, ಮೇಖ್ರಿ ಸರ್ಕಲ್ ಅಂಡರ್‌ಪಾಸ್ ಬಳಿ ಟ್ರಾಫಿಕ್ ಜಾಮ್ ಉಂಟಾಗುವುದನ್ನು ನಾವು ಗಮನಿಸಿದ್ದೇವೆ. ಇದು ಇತರ ರಸ್ತೆಗಳ ಮೇಲೆ ಪರಿಣಾಮ ಬೀರೀತು” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

The post ಹೆಬ್ಬಾಳ ಮೇಲ್ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ. appeared first on Good News 24x7.

]]>
ನಾಳೆ ಹಳದಿ ಲೈನ್ ಮೆಟ್ರೋಗೆ ಹಸಿರು ನಿಶಾನೆ ತೋರಲಿರುವ ಪ್ರಧಾನಿ. ನಾಳಿನ ವೇಳಾಪಟ್ಟಿ ಹೀಗಿದೆ ? https://www.goodnews24x7.com/the-prime-minister-will-flag-off-the-yellow-line-metro-tomorrow-what-is-the-schedule-for-tomorrow/ Sat, 09 Aug 2025 11:06:37 +0000 https://www.goodnews24x7.com/?p=5652 ಹಲವು ವರ್ಷಗಳ ಬಳಿಕ ನನಸಾಗಿರೋ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಸಂಚಾರ ಆರಂಭಕ್ಕೆ ಕೌಂಟ್​ ಡೌನ್ ಆರಂಭವಾಗಿದೆ. ನಾಳೆ ಹಳದಿ ಮಾರ್ಗಕ್ಕೆ ದೇಶದ ಪ್ರಧಾನಿ ಹಸಿರು ನಿಶಾನೆ ತೋರಲಿದ್ದಾರೆ. ರಾಜ್ಯರಾಜಧಾನಿಯಲ್ಲಿ ಸಂಚಾರಕ್ಕೆ ಸಿದ್ದಗೊಂಡಿರೋ ಹಳದಿ ಲೈನ್ ಮೆಟ್ರೋಗೆ ಹಸಿರು ನಿಶಾನೆ ತೋರಲು…

The post ನಾಳೆ ಹಳದಿ ಲೈನ್ ಮೆಟ್ರೋಗೆ ಹಸಿರು ನಿಶಾನೆ ತೋರಲಿರುವ ಪ್ರಧಾನಿ. ನಾಳಿನ ವೇಳಾಪಟ್ಟಿ ಹೀಗಿದೆ ? appeared first on Good News 24x7.

]]>

ಹಲವು ವರ್ಷಗಳ ಬಳಿಕ ನನಸಾಗಿರೋ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಸಂಚಾರ ಆರಂಭಕ್ಕೆ ಕೌಂಟ್​ ಡೌನ್ ಆರಂಭವಾಗಿದೆ. ನಾಳೆ ಹಳದಿ ಮಾರ್ಗಕ್ಕೆ ದೇಶದ ಪ್ರಧಾನಿ ಹಸಿರು ನಿಶಾನೆ ತೋರಲಿದ್ದಾರೆ. ರಾಜ್ಯರಾಜಧಾನಿಯಲ್ಲಿ ಸಂಚಾರಕ್ಕೆ ಸಿದ್ದಗೊಂಡಿರೋ ಹಳದಿ ಲೈನ್ ಮೆಟ್ರೋಗೆ ಹಸಿರು ನಿಶಾನೆ ತೋರಲು ಪ್ರಧಾನಿ ಮೋದಿ ಆಗಸ್ಟ್​ 10ರಂದು (ನಾಳೆ) ಬೆಂಗಳೂರಿಗೆ ಆಗಮಿಸಲಿದ್ದಾರೆ. ಅಲ್ಲದೇ ಮೂರು ವಂದೇ ಭಾರತ್ ರೈಲುಗಳಿಗೂ ಮೋದಿ ಅಂದು ಚಾಲನೆ ನೀಡಲಿದ್ದಾರೆ. ಬೆಂಗಳೂರು-ಬೆಳಗಾವಿ, ಅಮೃತಸರ-ಮಾತಾ ವೈಷ್ಣೋದೇವಿ, ನಾಗಪುರ-ಪುಣೆ ಮಾರ್ಗದ ವಂದೇ ಭಾರತ್ ರೈಲುಗಳನ್ನ ಮೋದಿ ಉದ್ಘಾಟಿಲಿದ್ದಾರೆ.. ಇದೇ ವೇಳೆ ನಮ್ಮ ಮೆಟ್ರೋದ 3ನೇ ಹಂತದ 2 ಕಾರಿಡಾರ್‌ಗಳಿಗೂ ಮೋದಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ರಾಜಧಾನಿಗೆ ನಮೋ! ನಾಳೆ ಪ್ರಧಾನಿ ವೇಳಾಪಟ್ಟಿ ಏನು ?

    • ನಾಳೆ ಬೆಳಗ್ಗೆ 7.50ಕ್ಕೆ ದೆಹಲಿಯಿಂದ ಹೊರಡಲಿರುವ ಮೋದಿ
    • ಬೆ.10.30ಕ್ಕೆ ಬೆಂಗಳೂರು HAL ವಿಮಾನ ನಿಲ್ದಾಣಕ್ಕೆ ಮೋದಿ ಆಗಮನ
    • ಬೆ.10.50ಕ್ಕೆ ಹೆಲಿಕಾಪ್ಟರ್‌ನಲ್ಲಿ ಹೆಚ್‌ಕ್ಯೂಟಿಸಿ ಹೆಲಿಪ್ಯಾಡ್‌ಗೆ ಆಗಮನ
    • ಬೆ.11ಕ್ಕೆ ರಸ್ತೆ ಮೂಲಕ ಸಂಗೊಳ್ಳಿ ರಾಯಣ್ಣ ಸಿಟಿ ರೈಲ್ವೆ ನಿಲ್ದಾಣಕ್ಕೆ ಎಂಟ್ರಿ
    • ಬೆ.11.15ಕ್ಕೆ ರೈಲ್ವೆ ನಿಲ್ದಾಣದಲ್ಲಿ 3 ವಂದೇ ಭಾರತ್‌ ರೈಲಿಗೆ ಹಸಿರು ನಿಶಾನೆ
    • ಬೆ.11.45ಕ್ಕೆ ರಸ್ತೆ ಮಾರ್ಗವಾಗಿ ರಾಗಿಗುಡ್ಡದ ಮೆಟ್ರೋ ನಿಲ್ದಾಣಕ್ಕೆ ಆಗಮನ
    • ಬೆ.11.50 ರಿಂದ ಮ.12.50ವರೆಗೂ ಮೆಟ್ರೋ ಹಳದಿ ಮಾರ್ಗಕ್ಕೆ ಚಾಲನೆ
    • ಮೆಟ್ರೋ ರೈಲಿನಲ್ಲಿಯೇ ಎಲೆಕ್ಟ್ರಾನಿಕ್‌ ಸಿಟಿ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣ
    • ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ನಮ್ಮ ಮೆಟ್ರೋದ 3ನೇ ಹಂತಕ್ಕೆ ಶಂಕುಸ್ಥಾಪನೆ
    • ಮ.1 ರಿಂದ 2 ಗಂಟೆವರೆಗೂ IIIT ಆಡಿಟೋರಿಯಂನಲ್ಲಿ ಕಾರ್ಯಕ್ರಮ
    • ಮ.2.05ಕ್ಕೆ ಹೆಲಿಕಾಪ್ಟರ್‌ನಲ್ಲಿ HAL ವಿಮಾನ ನಿಲ್ದಾಣಕ್ಕೆ ನಮೋ ವಾಪಸ್
    • ಮ.2.40ಕ್ಕೆ HAL ವಿಮಾನ ನಿಲ್ದಾಣದಿಂದ ದೆಹಲಿಗೆ ಮೋದಿಯ ಪ್ರಯಾಣ

The post ನಾಳೆ ಹಳದಿ ಲೈನ್ ಮೆಟ್ರೋಗೆ ಹಸಿರು ನಿಶಾನೆ ತೋರಲಿರುವ ಪ್ರಧಾನಿ. ನಾಳಿನ ವೇಳಾಪಟ್ಟಿ ಹೀಗಿದೆ ? appeared first on Good News 24x7.

]]>
ಬೆಂಗಳೂರಿನ ಈ ಮಾರ್ಗದಲ್ಲಿಇಂದಿನಿಂದ ಆ.11ರವರೆಗೆ ವಾಹನ ಸಂಚಾರ ನಿರ್ಬಂಧ. ಪರ್ಯಾಯ ಮಾರ್ಗ ಏನು ? https://www.goodnews24x7.com/traffic-restrictions-on-this-route-in-bengaluru-from-today-to-august-11-what-is-the-alternative-route/ Wed, 06 Aug 2025 05:13:41 +0000 https://www.goodnews24x7.com/?p=5390 ಬೆಂಗಳೂರು ಸಂಚಾರ ಸಲಹೆ: ಬೆಂಗಳೂರಿನ ಬಳಗೆರೆ ಟಿ ಜಂಕ್ಷನ್‌ನಿಂದ ಪಣತ್ತೂರು ರೈಲ್ವೆ ಬ್ರಿಡ್ಜ್​​ವರೆಗೆ ಬಿಬಿಎಂಪಿ ವೈಟ್ ಟಾಪಿಂಗ್ ಕಾಮಗಾರಿ ಹಿನ್ನಲೆ ಆಗಸ್ಟ್ 6 ರಿಂದ 10 ರವರೆಗೆ ಸಂಚಾರ ನಿರ್ಬಂಧಿಸಲಾಗಿದೆ. ಈ ಬಗ್ಗೆ ಬೆಂಗಳೂರು ಸಂಚಾರ ಪೊಲೀಸ್​ ಟ್ವೀಟ್​ ಮಾಡಿದೆ. ಹಾಗಾದರೆ…

The post ಬೆಂಗಳೂರಿನ ಈ ಮಾರ್ಗದಲ್ಲಿಇಂದಿನಿಂದ ಆ.11ರವರೆಗೆ ವಾಹನ ಸಂಚಾರ ನಿರ್ಬಂಧ. ಪರ್ಯಾಯ ಮಾರ್ಗ ಏನು ? appeared first on Good News 24x7.

]]>

ಬೆಂಗಳೂರು ಸಂಚಾರ ಸಲಹೆ: ಬೆಂಗಳೂರಿನ ಬಳಗೆರೆ ಟಿ ಜಂಕ್ಷನ್‌ನಿಂದ ಪಣತ್ತೂರು ರೈಲ್ವೆ ಬ್ರಿಡ್ಜ್​​ವರೆಗೆ ಬಿಬಿಎಂಪಿ ವೈಟ್ ಟಾಪಿಂಗ್ ಕಾಮಗಾರಿ ಹಿನ್ನಲೆ ಆಗಸ್ಟ್ 6 ರಿಂದ 10 ರವರೆಗೆ ಸಂಚಾರ ನಿರ್ಬಂಧಿಸಲಾಗಿದೆ. ಈ ಬಗ್ಗೆ ಬೆಂಗಳೂರು ಸಂಚಾರ ಪೊಲೀಸ್​ ಟ್ವೀಟ್​ ಮಾಡಿದೆ. ಹಾಗಾದರೆ ಪರ್ಯಾಯ ಮಾರ್ಗಗಳು ಯಾವವು ಎಂಬ ಮಾಹಿತಿ ಇಲ್ಲಿದೆ.

ಬೆಂಗಳೂರು, ಆಗಸ್ಟ್ 06: ವೈಟ್​ಫೀಲ್ಡ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಬಳಗೆರೆ ಟಿ ಜಂಕ್ಷನ್‌ನಿಂದ ಪಣತ್ತೂರು ರೈಲ್ವೆ ಬ್ರಿಡ್ಜ್ ಜಂಕ್ಟನ್‌ವರೆಗೆ ಬಿಬಿಎಂಪಿ (BBMP) ವತಿಯಿಂದ ವೈಟ್ ಟಾಪಿಂಗ್ ಕಾಮಗಾರಿ ಕೈಗೊಳ್ಳಗಿದೆ. ಹೀಗಾಗಿ ಇಂದಿನಿಂದ ಆಗಸ್ಟ್​ 10 ರವರೆಗೆ ರಾತ್ರಿ 11 ಗಂಟೆಯಿಂದ ಭಾನುವಾರ ರಾತ್ರಿ 11 ಗಂಟೆಗೆಯವರೆಗೆ ವಾಹನ ಸಂಚಾರ (Traffic restrictions) ನಿರ್ಬಂಧಿಸಲಾಗಿದೆ. ವಾಹನ ಸವಾರರ ಹಿತದೃಷ್ಟಿಯಿಂದ ಈ ಕೆಳಗಿನಂತೆ ಸಂಚಾರ ಮಾರ್ಪಾಡು ಮಾಡಲಾಗಿದೆ. ಬೆಂಗಳೂರು ಸಂಚಾರ ಪೊಲೀಸ್​ ಸಾರ್ವಜನಿಕರು ಸಹಕರಿಸುವಂತೆ ಕೋರಿದೆ.

ವಾಹನ ಸಂಚಾರ ನಿರ್ಬಂಧಿಸಿರುವ ರಸ್ತೆಗಳು
ಪಣತ್ತೂರು ರೈಲ್ವೆ ಬ್ರಿಡ್ಜ್ ರಸ್ತೆಯಿಂದ ಬಳಗೆರೆ ಟಿ ಜಂಕ್ಷನ್​ವರೆಗೆ.
ಬೆಂಗಳೂರು ಸಂಚಾರ ಪೊಲೀಸ್ ಟ್ವೀಟ್​

ಪರ್ಯಾಯ ಮಾರ್ಗಗಳು ಹೀಗಿವೆ :
ಪಣತ್ತೂರು ಕಡೆಯಿಂದ ಬಳಗೆರೆ ಕಡೆಗೆ ಹೋಗುವ ವಾಹನ ಸವಾರರು ಪಣತ್ತೂರು ದಿಣ್ಣೆ ರಸ್ತೆಯಲ್ಲಿ ಚಲಿಸಿ ಪಣತ್ತೂರು ದಿಣ್ಣೆ ಬಳಿ ಎಡ ತಿರುವು ಪಡೆದು ಸಿಲ್ವರ್ ಓಕ್ ರಸ್ತೆಯಿಂದ ಬಳಗೆರೆ, ವಿಬ್‌ಗಯಾ‌ರ್ ರಸ್ತೆ ಮತ್ತು ವರ್ತೂರು ಕಡೆಗೆ ಸಂಚರಿಸಬಹುದಾಗಿದೆ.
ಇದನ್ನೂ ಓದಿ: ಪ್ರಯಾಣಿಕರ ಗಮನಕ್ಕೆ: ಸ್ವಾತಂತ್ರ್ಯ ದಿನಾಚರಣೆ, ಗಣೇಶ ಚತುರ್ಥಿ ನಿಮಿತ್ತ ಬೆಂಗಳೂರಿನಿಂದ ವಿವಿಧ ಜಿಲ್ಲೆಗಳಿಗೆ ವಿಶೇಷ ರೈಲು

ಬಳಗೆರೆ ಟಿ ಜಂಕ್ಷನ್ ಕಡೆಯಿಂದ ಪಣತ್ತೂರು ಕಡೆಗೆ ಹೋಗುವ ವಾಹನ ಸವಾರರು ಪಣತ್ತೂರು ದಿಣ್ಣೆ ರಸ್ತೆ, ವಿಬ್‌ಗಯಾರ್ ರಸ್ತೆ ಹಾಗೂ ಮೂಲಕ ಮಾರತ್ತಹಳ್ಳಿ ಬ್ರಿಡ್ಜ್ ಪಣತ್ತೂರು ಕಡೆಗೆ ಸಂಚರಿಸಬಹುದಾಗಿದೆ.
ಕೆಟ್ಟು ನಿಂತ ವಾಹನಗಳು
ಸೋನಿ ವರ್ಲ್ಡ್ ಜಂಕ್ಷನ್ ಬಳಿ ವಾಹನ ಕೆಟ್ಟು ನಿಂತಿರುವುದರಿಂದ ಶ್ರೀನಿವಾಗಿಲು ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ. ವಾಹನ ಕೆಟ್ಟು ನಿಂತಿರುವುದರಿಂದ ಮಾರುಕಟ್ಟೆ ವೃತ್ತದ ಕಡೆಯಿಂದ ಮೈಸೂರು ರಸ್ತೆ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ. ಅದೇ ರೀತಿಯಾಗಿ ಸಿ.ಎಂ.ಟಿ.ಐ ಜುಂಕ್ಷನ್ ಕಡೆಯಿಂದ ನಗರದ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ ಎಂದು ಬೆಂಗಳೂರು ಸಂಚಾರ ಪೊಲೀಸ್​ ಸಂಚಾರ ಸಲಹೆ ನೀಡಿದ್ದಾರೆ.

The post ಬೆಂಗಳೂರಿನ ಈ ಮಾರ್ಗದಲ್ಲಿಇಂದಿನಿಂದ ಆ.11ರವರೆಗೆ ವಾಹನ ಸಂಚಾರ ನಿರ್ಬಂಧ. ಪರ್ಯಾಯ ಮಾರ್ಗ ಏನು ? appeared first on Good News 24x7.

]]>
ಮಂಗಳೂರು ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸುವ ಭೀತಿ: ತಡೆಗೋಡೆಯಲ್ಲಿ ಭಾರೀ ಬಿರುಕು.! https://www.goodnews24x7.com/landslide-on-mangaluru-madikeri-national-highway-huge-crack-in-barrier/ Fri, 01 Aug 2025 05:04:24 +0000 https://www.goodnews24x7.com/?p=5204 ಮಡಿಕೇರಿ : ಮಡಿಕೇರಿ ಮಂಗಳೂರು ಮಧ್ಯೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 275 ರಲ್ಲಿ 2018ರ ವೇಳೆ ಭಾರೀ ಭೂಕುಸಿತ ಸಂಭವಿಸಿ ಸಂಚಾರವೇ ಬಂದ್ ಆಗಿತ್ತು. ಅದಾದ ಬಳಿಕ ನಾಲ್ಕೈದು ವರ್ಷ ಕಾಮಗಾರಿ ಮಾಡಿ ಮೂರು ಕೋಟಿ ರೂ. ವೆಚ್ಚದಲ್ಲಿ ಬೃಹತ್…

The post ಮಂಗಳೂರು ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸುವ ಭೀತಿ: ತಡೆಗೋಡೆಯಲ್ಲಿ ಭಾರೀ ಬಿರುಕು.! appeared first on Good News 24x7.

]]>

ಮಡಿಕೇರಿ : ಮಡಿಕೇರಿ ಮಂಗಳೂರು ಮಧ್ಯೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 275 ರಲ್ಲಿ 2018ರ ವೇಳೆ ಭಾರೀ ಭೂಕುಸಿತ ಸಂಭವಿಸಿ ಸಂಚಾರವೇ ಬಂದ್ ಆಗಿತ್ತು. ಅದಾದ ಬಳಿಕ ನಾಲ್ಕೈದು ವರ್ಷ ಕಾಮಗಾರಿ ಮಾಡಿ ಮೂರು ಕೋಟಿ ರೂ. ವೆಚ್ಚದಲ್ಲಿ ಬೃಹತ್ ತಡೆಗೋಡೆ ನಿರ್ಮಾಣ ಮಾಡಲಾಗಿತ್ತು.

ಆದರೆ, ಈ ತಡೆಗೋಡೆ ನಿರ್ಮಾಣವಾಗಿ ಒಂದು ಮಳೆಗಾಲ ಕಳೆಯುವುದರ ಒಳಗೆಯೇ ಬಿರುಕು ಬಿಟ್ಟು ಯಾವುದೇ ಕ್ಷಣದಲ್ಲಿ ಕುಸಿಯುವ ಭೀತಿ ಎದುರಾಗಿದೆ. ಮಡಿಕೇರಿ ನಗರದಿಂದ ಕೇವಲ ಅರ್ಧ ಕಿಲೋಮೀಟರ್ ದೂರದಲ್ಲಿ ಈ ಹೆದ್ದಾರಿ ತಡೆಗೋಡೆ ಬಾಯ್ಬಿಟ್ಟು ಕುಳಿತಿದೆ. ಸುಮಾರು ನಾಲ್ಕು ಹಂತಗಳಲ್ಲಿ 80 ಮೀಟರ್ ಎತ್ತರದಲ್ಲಿ ಈ ತಡೆಗೋಡೆಯನ್ನು ಬಲಿಷ್ಠವಾಗಿ ಕಟ್ಟಲಾಗಿದೆ. ಆದರೆ, ನೀರು ಮತ್ತು ಮಣ್ಣಿನ ವಿಪರೀತ ಒತ್ತಡದಿಂದ ಈ ತಡೆಗೋಡೆ ಬಿರುಕು ಬಿಟ್ಟಿದೆ. ಸದ್ಯಕ್ಕೆ ಹೆದ್ದಾರಿಗೆ ಯಾವುದೇ ಅಪಾಯ ಇಲ್ಲ ಅಂತ ಜಿಲ್ಲಾಧಿಕಾರಿ ಹೇಳಿದ್ದಾರೆ.

https://www.youtube.com/live/piuKXId_P5I?si=NEkWIYd3geJR59Xq  🔴LIVE | ಟ್ರೇಡಿಂಗ್ ಹೆಸರಲ್ಲಿ ರಾಜಕುಮಾರನನ್ನು ಬಲೆಗೆ ಕೆಡವಿದ ಸುಂದರಿ,ಲಾವಣ್ಯ ಎಂಬಾಕೆಯಿಂದ ಮೋಸ ಮಾಡಿರುವ ಆರೋಪ

ಸ್ಥಳೀಯ ನಿವಾಸಿಗಳ ಸ್ಥಳಾಂತರಕ್ಕೆ ಸೂಚನೆ


ತಡೆಗೋಡೆಯ ಕೆಳಗೆ ಹಲವು ಮನೆಗಳಿದ್ದು ಎಲ್ಲಾ ಮನೆಗಳೂ ಅಪಾಯಕ್ಕೆ ಸಿಲುಕಿವೆ. ತಡೆಗೋಡೆ ಕುಸಿದು ಹೋದರೆ ಮನೆಗಳು ಮತ್ತು ಅವುಗಳಲ್ಲಿರುವ ನಿವಾಸಿಗಳೂ ಅಪಾಯಕ್ಕೆ ಸಿಲುಕಲಿದ್ದಾರೆ. ಹಾಗಾಗಿ ಈ ನಿವಾಸಿಗಳ ಸ್ಥಳಾಂತರ ಮಾಡುವಂತೆ ಸೂಚನೆ ನೀಡಲಾಗಿದೆ. ತಡೆಗೋಡೆ ಬಿರುಕು ಬಿಟ್ಟ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಎಂಜಿನಿಯರ್ಗಳು ಸ್ಥಳ ಪರಿಶೀಲನೆ ಮಾಡಿ ಹಿರಿಯ ಅಧಿಕಾರಿಗಳಿಗೆ ವರದಿ ನೀಡಿದ್ದಾರೆ. ಸದ್ಯ ಹೆದ್ದಾರಿಯಲ್ಲಿ ಬ್ಯಾರಿಕೇಡ್ ಹಾಕಿ ಸಂಚಾರ ನಿಯಂತ್ರಣ ಮಾಡಿದ್ದಾರೆ. ಇದರಿಂದ ಸಂಚಾರಕ್ಕೆ ಅಡಚಣೆ ಯಾಗಿದೆ.

The post ಮಂಗಳೂರು ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸುವ ಭೀತಿ: ತಡೆಗೋಡೆಯಲ್ಲಿ ಭಾರೀ ಬಿರುಕು.! appeared first on Good News 24x7.

]]>
ಸುಗಮ ಸಂಚಾರಕ್ಕೆ, ಬೆಂಗಳೂರಿನ ಕೇಂದ್ರ ಭಾಗದಲ್ಲಿ ಕೆಲ ಬದಲಾವಣೆ. https://www.goodnews24x7.com/some-changes-in-the-central-part-of-bengaluru-for-smooth-traffic/ Sun, 22 Jun 2025 11:23:55 +0000 https://www.goodnews24x7.com/?p=4607 ಬೆಂಗಳೂರು : ನಗರದ ಕೇಂದ್ರ ಭಾಗದಲ್ಲಿ ವಾಹನಗಳ ದಟ್ಟಣೆ ತಗ್ಗಿಸುವ ಹಾಗೂ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವ ಸಲುವಾಗಿ ಹೈಗ್ರೌಂಡ್ಸ್, ಶೇಷಾದ್ರಿಪುರಂ ವ್ಯಾಪ್ತಿಯ ಕೆಲ ರಸ್ತೆಗಳಲ್ಲಿ ಪಾರ್ಕಿಂಗ್, ಏಕಮುಖ ಸಂಚಾರ ಸೇರಿದಂತೆ ಕೆಲ ಮಾರ್ಪಾಡುಗಳನ್ನು ಮಾಡಿ ನಗರ ಪೊಲೀಸ್ ಆಯುಕ್ತ ಸೀಮಂತ್…

The post ಸುಗಮ ಸಂಚಾರಕ್ಕೆ, ಬೆಂಗಳೂರಿನ ಕೇಂದ್ರ ಭಾಗದಲ್ಲಿ ಕೆಲ ಬದಲಾವಣೆ. appeared first on Good News 24x7.

]]>

ಬೆಂಗಳೂರು : ನಗರದ ಕೇಂದ್ರ ಭಾಗದಲ್ಲಿ ವಾಹನಗಳ ದಟ್ಟಣೆ ತಗ್ಗಿಸುವ ಹಾಗೂ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವ ಸಲುವಾಗಿ ಹೈಗ್ರೌಂಡ್ಸ್, ಶೇಷಾದ್ರಿಪುರಂ ವ್ಯಾಪ್ತಿಯ ಕೆಲ ರಸ್ತೆಗಳಲ್ಲಿ ಪಾರ್ಕಿಂಗ್, ಏಕಮುಖ ಸಂಚಾರ ಸೇರಿದಂತೆ ಕೆಲ ಮಾರ್ಪಾಡುಗಳನ್ನು ಮಾಡಿ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಆದೇಶ ಹೊರಡಿಸಿದ್ದಾರೆ.

ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ, ಶೇಷಾದ್ರಿಪುರಂ ರಸ್ತೆಯ ಸುತ್ತಮುತ್ತಲ ಪ್ರದೇಶಗಳಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ತೊಡಕುಂಟಾಗುತ್ತಿದ್ದುದರಿಂದ ಅಧ್ಯಯನ ನಡೆಸಿ ಕೆಲ ಮಾರ್ಪಾಡುಗಳನ್ನು ಮಾಡಲಾಗಿದ್ದು, ಸಾರ್ವಜನಿಕರು ಸಹಕರಿಸುವಂತೆ ಆಯುಕ್ತರು ತಿಳಿಸಿದ್ದಾರೆ.

ಏಕಮುಖ ಸಂಚಾರ : ಶೇಷಾದ್ರಿಪುರಂ ವ್ಯಾಪ್ತಿಯ ನೆಹರು ಸರ್ಕಲ್ನಿಂದ ಎನ್. ಎಸ್. ಅಯ್ಯಂಗಾರ್ ಸ್ಟ್ರೀಟ್ (ದಕ್ಷಿಣದಿಂದ ಉತ್ತರ ಮಾರ್ಗ) ಹಾಗೂ ಎನ್. ಎಸ್ ಅಯ್ಯಂಗಾರ್ ಸ್ಟ್ರೀಟ್ನಿಂದ ನಾಗಪ್ಪ ಸ್ಟ್ರೀಟ್ ಹಾಗೂ 3ನೇ ಕ್ರಾಸ್ವರೆಗೆ (ಉತ್ತರದಿಂದ ದಕ್ಷಿಣ ಮಾರ್ಗ), ಸಂಪಿಗೆ ರಸ್ತೆಯಿಂದ ಶಿರೂರು ಪಾರ್ಕ್ ರಸ್ತೆಯ ಪಶ್ಚಿಮದಿಂದ ಪೂರ್ವ ವಿಭಾಗದ ಮಾರ್ಗದಲ್ಲಿ ಏಕಮುಖ ಸಂಚಾರಕ್ಕೆ ಮಾತ್ರವೇ ಅವಕಾಶ ನೀಡಲಾಗಿದೆ.

ವಾಹನ ನಿಲುಗಡೆಗೆ ನಿರ್ಬಂಧವಿರುವ ರಸ್ತೆಗಳು : ಆರ್.ಪಿ. ರಸ್ತೆ ಮತ್ತು ಹರೇಕೃಷ್ಣ ರಸ್ತೆ, ರೈಲ್ವೆ ಕೆಳಸೇತುವೆಯಿಂದ ಆರ್. ಪಿ. ರಸ್ತೆ ಮತ್ತು ಬಿಡಿಎ ಕಚೇರಿವರೆಗಿನ ಪಶ್ಚಿಮ ದಿಕ್ಕಿನ ರಸ್ತೆಯಲ್ಲಿ ಎಲ್ಲಾ ಮಾದರಿಯ ವಾಹನಗಳ ನಿಲುಗಡೆಗೆ ನಿರ್ಬಂಧಿಸಲಾಗಿದೆ.

ಹೈಗ್ರೌಂಡ್ಸ್ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ನಿಲುಗಡೆ : ಹೈಗ್ರೌಂಡ್ಸ್ ವ್ಯಾಪ್ತಿಯಲ್ಲಿನ ರೈಲ್ವೆ ಪ್ಯಾರಲಲ್ ರಸ್ತೆ (ಆರ್.ಪಿ ರಸ್ತೆ) ಮತ್ತು ಹರೇಕೃಷ್ಣ ರಸ್ತೆಯಲ್ಲಿ ರೈಲ್ವೆ ಕೆಳಸೇತುವೆಯಿಂದ ಕುಮಾರಪಾರ್ಕ್ ವೆಸ್ಟ್ 6ನೇ ಕ್ರಾಸ್ನ ಪೂರ್ವ ದಿಕ್ಕಿನವರೆಗೆ ದ್ವಿಚಕ್ರ ವಾಹನ ನಿಲುಗಡೆಗೆ ಅನುಮತಿ ನೀಡಲಾಗಿದೆ. ಕಾರು ಸೇರಿದಂತೆ ನಾಲ್ಕು ಚಕ್ರಗಳ ವಾಹನಗಳ ನಿಲುಗಡೆಗೆ ಆರ್.ಪಿ. ರಸ್ತೆ ಮತ್ತು ಕೆ. ಪಿ ವೆಸ್ಟ್ 6ನೇ ಕ್ರಾಸ್ ರಸ್ತೆಯಿಂದ ಆರ್. ಪಿ. ರಸ್ತೆ ಮತ್ತು ಬಿಡಿಎ ಕಚೇರಿವರೆಗೆ ಅವಕಾಶ ಕಲ್ಪಿಸಲಾಗಿದೆ.

ಶಿರೂರು ಪಾರ್ಕ್ ರಸ್ತೆ ಹಾಗೂ ಸೌತ್ ಎಂಡ್ ರಸ್ತೆ ಜಂಕ್ಷನ್ನಿಂದ ಎಸ್. ಪಿ. ರಸ್ತೆಯ ನಟರಾಜ ಚಿತ್ರಮಂದಿರವರೆಗಿನ ಪಶ್ಚಿಮ ದಿಕ್ಕಿನ ರಸ್ತೆ, ಸಂಪಿಗೆ ರಸ್ತೆಯ ಬಿಬಿಎಂಪಿ ಕಚೇರಿಯಿಂದ ಶಿರೂರು ಪಾರ್ಕ್ ರಸ್ತೆಯ ಉತ್ತರ ದಿಕ್ಕಿನ ರಸ್ತೆಗಳಲ್ಲಿ ದ್ವಿಚಕ್ರ ವಾಹನ ನಿಲುಗಡೆಯನ್ನ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಮತ್ತು ಶಿರೂರು ಪಾರ್ಕ್ ರಸ್ತೆ ಮತ್ತು ಸೌತ್ ಎಂಡ್ ರಸ್ತೆ ಜಂಕ್ಷನ್ನಿಂದ ಎಸ್. ಸಿ. ರಸ್ತೆ, ಸಂಪಿಗೆ ರಸ್ತೆವರೆಗೆ ಪೂರ್ವ ಹಾಗೂ ದಕ್ಷಿಣ ದಿಕ್ಕಿನ ಕಡೆಗಿನ ರಸ್ತೆಗಳಲ್ಲಿ ಎಲ್ಲಾ ಮಾದರಿಯ ವಾಹನಗಳ ನಿಲುಗಡೆಯನ್ನು ನಿರ್ಬಂಧಿಸಿ ಆದೇಶಿಸಲಾಗಿದೆ.

The post ಸುಗಮ ಸಂಚಾರಕ್ಕೆ, ಬೆಂಗಳೂರಿನ ಕೇಂದ್ರ ಭಾಗದಲ್ಲಿ ಕೆಲ ಬದಲಾವಣೆ. appeared first on Good News 24x7.

]]>
ಆ.15 ರಿಂದ ಫಾಸ್ಟ್ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ಆರಂಭ: ಸುಗಮ ಸಂಚಾರಕ್ಕೆ ಇದು ಸಹಕಾರಿ! https://www.goodnews24x7.com/fastag-based-annual-pass-to-start-from-august-15-this-will-help-in-smooth-traffic/ Thu, 19 Jun 2025 11:26:18 +0000 https://www.goodnews24x7.com/?p=4492 ನವದೆಹಲಿ: ಕೇಂದ್ರ ಸರ್ಕಾರವು ಆಗಸ್ಟ್ 15 ರಿಂದ ಸುಗಮ ಹಾಗೂ ಸರಾಗವಾದ ಹೆದ್ದಾರಿ ಪ್ರಯಾಣಕ್ಕೆ 3,000 ರೂ ಮೌಲ್ಯದ ಫಾಸ್ಟ್ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ಪರಿಚಯಿಸಲು ಸಿದ್ಧವಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಬುಧವಾರ…

The post ಆ.15 ರಿಂದ ಫಾಸ್ಟ್ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ಆರಂಭ: ಸುಗಮ ಸಂಚಾರಕ್ಕೆ ಇದು ಸಹಕಾರಿ! appeared first on Good News 24x7.

]]>

ನವದೆಹಲಿ: ಕೇಂದ್ರ ಸರ್ಕಾರವು ಆಗಸ್ಟ್ 15 ರಿಂದ ಸುಗಮ ಹಾಗೂ ಸರಾಗವಾದ ಹೆದ್ದಾರಿ ಪ್ರಯಾಣಕ್ಕೆ 3,000 ರೂ ಮೌಲ್ಯದ ಫಾಸ್ಟ್ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ಪರಿಚಯಿಸಲು ಸಿದ್ಧವಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಬುಧವಾರ ತಿಳಿಸಿದ್ದಾರೆ.
X ಹ್ಯಾಂಡಲ್ ಪೋಸ್ಟ್ ವೊಂದನ್ನು ಮಾಡಿರುವ ಅವರು, ಪಾಸ್ ಸಕ್ರಿಯಗೊಳಿಸಿದ ದಿನಾಂಕದಿಂದ ಒಂದು ವರ್ಷ ಅಥವಾ 200 ಟ್ರಿಪ್ಗಳವರೆಗೆ ಯಾವುದು ಮೊದಲು ಬರುತ್ತದೆಯೋ ಅದು ಮಾನ್ಯವಾಗಿರುವಂತೆ ಪಾಸ್ ರೂಪಿಸಲಾಗಿದೆ ಎಂದು ಗಡ್ಕರಿ ಅವರು ಹೇಳಿದ್ದಾರೆ. ಕಾರುಗಳು, ಜೀಪ್ಗಳು ಮತ್ತು ವ್ಯಾನ್ಗಳಂತಹ ವಾಣಿಜ್ಯೇತರ ಖಾಸಗಿ ವಾಹನಗಳಿಗೆ ಮಾತ್ರ ಈ ಪಾಸ್ ವಿನ್ಯಾಸಗೊಳಿಸಲಾಗಿದೆ ಎಂದು ತಮ್ಮ ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

ಈ ಹೊಸ ಆ್ಯಪ್ ಎಲ್ಲಿ ಲಭ್ಯ?

 

 

 

 

 

ಸಕ್ರಿಯಗೊಳಿಸುವಿಕೆ ಮತ್ತು ನವೀಕರಣಕ್ಕಾಗಿ ಮೀಸಲಾದ ಲಿಂಕ್ ಶೀಘ್ರದಲ್ಲೇ ರಾಜ್ಮಾರ್ಗ್ ಯಾತ್ರಾ ಅಪ್ಲಿಕೇಶನ್ನಲ್ಲಿ ಹಾಗೂ NHAI ಮತ್ತು MoRTH ನ ಅಧಿಕೃತ ವೆಬ್ಸೈಟ್ಗಳಲ್ಲಿ ಲಭ್ಯವಿರುತ್ತದೆ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.  60 ಕಿ.ಮೀ ವ್ಯಾಪ್ತಿಯೊಳಗೆ ಇರುವ ಟೋಲ್ ಪ್ಲಾಜಾಗಳಿಗೆ ಸಂಬಂಧಿಸಿದ ದೀರ್ಘಕಾಲದ ಕಳವಳಗಳನ್ನು ಈ ನೀತಿ ಪರಿಹರಿಸುತ್ತದೆ ಮತ್ತು ಒಂದೇ ಕೈಗೆಟುಕುವ ವಹಿವಾಟಿನ ಮೂಲಕ ಟೋಲ್ ಪಾವತಿಗಳನ್ನು ಸರಳಗೊಳಿಸುತ್ತದೆ ಎಂದು ಕೇಂದ್ರದ ಭೂಸಾರಿಗೆ ಹಾಗೂ ಹೆದ್ದಾರಿ ಸಚಿವರು ಸ್ಪಷ್ಟಪಡಿಸಿದ್ದಾರೆ.
“ಕಾಯುವ ಸಮಯ ಹಾಗೂ ದಟ್ಟಣೆಯನ್ನು ಕಡಿಮೆ ಮಾಡುವುದು ಮತ್ತು ಟೋಲ್ ಪ್ಲಾಜಾಗಳಲ್ಲಿ ವಿವಾದಗಳನ್ನು ಕಡಿಮೆ ಮಾಡುವ ಮೂಲಕ, ವಾರ್ಷಿಕ ಪಾಸ್ ಲಕ್ಷಾಂತರ ಖಾಸಗಿ ವಾಹನ ಮಾಲೀಕರಿಗೆ ವೇಗವಾದ ಮತ್ತು ಸುಗಮ ಪ್ರಯಾಣದ ಅನುಭವವನ್ನು ನೀಡುವ ಗುರಿಯನ್ನು ಹೊಂದಿದೆ ಎಂದು ಸಚಿವರು ಹೇಳಿದ್ದಾರೆ.

ಈ ಪಾಸ್ ನಿಂದ ಆಗುವ ಲಾಭವೇನು?  ವಾರ್ಷಿಕ ಪಾಸ್ ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುಗಮ ಮತ್ತುಸರಾಗ ಹಾಗೂ ಕಡಿಮೆ ವೆಚ್ಚದ ಪರಿಣಾಮಕಾರಿ ಪ್ರಯಾಣವನ್ನು ಸಕ್ರಿಯಗೊಳಿಸುತ್ತದೆ ಎಂದು ನಿತಿನ್ ಗಡ್ಕರಿ ತಿಳಿಸಿದ್ದಾರೆ.

The post ಆ.15 ರಿಂದ ಫಾಸ್ಟ್ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ಆರಂಭ: ಸುಗಮ ಸಂಚಾರಕ್ಕೆ ಇದು ಸಹಕಾರಿ! appeared first on Good News 24x7.

]]>