transport Archives - Good News 24x7 https://www.goodnews24x7.com/tag/transport/ Kannada Sun, 16 Aug 2026 11:08:49 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg transport Archives - Good News 24x7 https://www.goodnews24x7.com/tag/transport/ 32 32 ವಾಹನ ಸವಾರರಿಗೆ ಬಿತ್ತು ಬೆಲೆ ಏರಿಕೆ ಬಿಸಿ: ಕರ್ನಾಟಕದಲ್ಲಿ PUC ಮಾಲಿನ್ಯ ತಪಾಸಣೆ ದರ ಹೆಚ್ಚಳ! https://www.goodnews24x7.com/puc-pollution-inspection-fee-hike-in-karnataka/ Sun, 16 Aug 2026 11:08:49 +0000 https://www.goodnews24x7.com/?p=9899 ಅಗತ್ಯ ವಸ್ತುಗಳು ಹಾಗೂ ಇಂಧನ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಕರ್ನಾಟಕದ ವಾಹನ ಸವಾರರಿಗೆ ರಾಜ್ಯ ಸರ್ಕಾರ ಮತ್ತೊಂದು ಆರ್ಥಿಕ ಹೊರೆ ನೀಡಿದೆ. ವಾಹನಗಳ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (PUCC) ಪಡೆಯಲು ಪಾವತಿಸಬೇಕಾದ ಶುಲ್ಕವನ್ನು ಸಾರಿಗೆ ಇಲಾಖೆಯು ಪರಿಷ್ಕರಿಸಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ…

The post ವಾಹನ ಸವಾರರಿಗೆ ಬಿತ್ತು ಬೆಲೆ ಏರಿಕೆ ಬಿಸಿ: ಕರ್ನಾಟಕದಲ್ಲಿ PUC ಮಾಲಿನ್ಯ ತಪಾಸಣೆ ದರ ಹೆಚ್ಚಳ! appeared first on Good News 24x7.

]]>

ಅಗತ್ಯ ವಸ್ತುಗಳು ಹಾಗೂ ಇಂಧನ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಕರ್ನಾಟಕದ ವಾಹನ ಸವಾರರಿಗೆ ರಾಜ್ಯ ಸರ್ಕಾರ ಮತ್ತೊಂದು ಆರ್ಥಿಕ ಹೊರೆ ನೀಡಿದೆ. ವಾಹನಗಳ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (PUCC) ಪಡೆಯಲು ಪಾವತಿಸಬೇಕಾದ ಶುಲ್ಕವನ್ನು ಸಾರಿಗೆ ಇಲಾಖೆಯು ಪರಿಷ್ಕರಿಸಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ದರ ಏರಿಕೆ ಮಾಡಿ ಅಧಿಕೃತ ಆದೇಶ ಹೊರಡಿಸಿದೆ.ಮಾಲಿನ್ಯ ತಪಾಸಣಾ ಕೇಂದ್ರಗಳ ನಿರ್ವಹಣಾ ವೆಚ್ಚ—ವಿದ್ಯುತ್ ಬಿಲ್, ಇಂಟರ್ನೆಟ್, ಸಿಬ್ಬಂದಿ ವೇತನ ಹಾಗೂ ಉಪಕರಣಗಳ ಕಚ್ಚಾ ವಸ್ತುಗಳ ಬೆಲೆ ಹೆಚ್ಚಿರುವುದನ್ನು ಉಲ್ಲೇಖಿಸಿ ಮಾಲೀಕರ ಸಂಘ ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ.📊 ಪರಿಷ್ಕೃತ PUC ದರಗಳ ಪಟ್ಟಿ (ಹಳೆಯ ದರ vs ಹೊಸ ದರ)ವಾಹನದ ಮಾದರಿಹಳೆಯ ದರನೂತನ ದರದ್ವಿಚಕ್ರ ವಾಹನಗಳು (Two Wheelers)₹65₹80ತ್ರಿಚಕ್ರ ವಾಹನಗಳು (Three Wheelers)₹75₹80ಪೆಟ್ರೋಲ್ / LPG / CNG ಕಾರುಗಳು₹115₹150ಎಲ್ಲಾ ಮಾದರಿಯ ಡೀಸೆಲ್ ವಾಹನಗಳು₹160₹200🚨 ತಪಾಸಣಾ ಕೇಂದ್ರಗಳಿಗೆ ಸಾರಿಗೆ ಇಲಾಖೆ ಕಟ್ಟುನಿಟ್ಟಿನ ಸೂಚನೆಸಾರ್ವಜನಿಕರಿಗೆ ಸರಿಯಾದ ಸೇವೆ ಒದಗಿಸಲು ಹಾಗೂ ಅಕ್ರಮ ತಡೆಯಲು ಸಾರಿಗೆ ಇಲಾಖೆ ಹೊಸ ನಿಯಮಗಳನ್ನು ಜಾರಿಗೆ ತಂದಿದೆ:ಗಣಕೀಕೃತ ಪ್ರಮಾಣಪತ್ರ ಕಡ್ಡಾಯ: PUCC ಪ್ರಮಾಣಪತ್ರದಲ್ಲಿ ಕೈಯಿಂದ ಬರೆಯುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಗಣಕೀಕೃತ (Computerised) ಪತ್ರ ಮಾತ್ರ ಮಾನ್ಯ.ಕ್ಯಾಲಿಬ್ರೇಷನ್ ಪ್ರದರ್ಶನ: ಗ್ಯಾಸ್ ಅನಾಲೈಸರ್ ಉಪಕರಣಗಳ ಕೊನೆಯ ಮರುಮಾಪನ (Calibration) ದಿನಾಂಕವನ್ನು ಗ್ರಾಹಕರಿಗೆ ಕಾಣುವಂತೆ ಪ್ರದರ್ಶಿಸಬೇಕು.ಮಾನ್ಯತೆ ಅವಧಿ: ನಿಯಮಿತ ಹೊರಸೂಸುವಿಕೆ ಹೊಂದಿರುವ BS-IV ಮತ್ತು BS-VI ವಾಹನಗಳ ಪ್ರಮಾಣಪತ್ರವು 12 ತಿಂಗಳವರೆಗೆ (1 ವರ್ಷ) ಮಾನ್ಯವಾಗಿರುತ್ತದೆ.ಲೈಸೆನ್ಸ್ ಪ್ರದರ್ಶನ: ತಪಾಸಣಾ ಕೇಂದ್ರದ ಪರವಾನಗಿ ಪತ್ರವನ್ನು ಸಾರ್ವಜನಿಕರ ಕಣ್ಣಿಗೆ ಕಾಣಿಸುವ ಸ್ಥಳದಲ್ಲೇ ಹಾಕಿರಬೇಕು.

The post ವಾಹನ ಸವಾರರಿಗೆ ಬಿತ್ತು ಬೆಲೆ ಏರಿಕೆ ಬಿಸಿ: ಕರ್ನಾಟಕದಲ್ಲಿ PUC ಮಾಲಿನ್ಯ ತಪಾಸಣೆ ದರ ಹೆಚ್ಚಳ! appeared first on Good News 24x7.

]]>
ಏ. 8ರಂದು ಬಸ್ ಸಂಚಾರ ಡೌಟ್!. https://www.goodnews24x7.com/bus-service-on-april-8th-in-doubt/ Tue, 07 Apr 2026 11:10:29 +0000 https://www.goodnews24x7.com/?p=9148 38 ತಿಂಗಳ ವೇತನ ಹಿಂಬಾಕಿ ‌ಮತ್ತು ಹೊಸ ವೇತನ (Salary Arrears) ಪರಿಷ್ಕರಣೆಗಾಗಿ ಆಗ್ರಹಿಸಿ ಈಗಾಗಲೇ ಸಾರಿಗೆ ನೌಕರರು ಹೋರಾಟಕ್ಕೆ ಮುಂದಾಗಿದ್ದರು. ಆದರೆ ‌ಸರ್ಕಾರ 26 ತಿಂಗಳ ವೇತನ ಹಿಂಬಾಕಿ 2025 ಏಪ್ರಿಲ್​ನಿಂದ ವೇತನ ಪರಿಷ್ಕರಣೆಗೆ ಒಪ್ಪಿಗೆ ನೀಡಿತ್ತು. ಸದ್ಯ ಇದಕ್ಕೆ…

The post ಏ. 8ರಂದು ಬಸ್ ಸಂಚಾರ ಡೌಟ್!. appeared first on Good News 24x7.

]]>

38 ತಿಂಗಳ ವೇತನ ಹಿಂಬಾಕಿ ‌ಮತ್ತು ಹೊಸ ವೇತನ (Salary Arrears) ಪರಿಷ್ಕರಣೆಗಾಗಿ ಆಗ್ರಹಿಸಿ ಈಗಾಗಲೇ ಸಾರಿಗೆ ನೌಕರರು ಹೋರಾಟಕ್ಕೆ ಮುಂದಾಗಿದ್ದರು. ಆದರೆ ‌ಸರ್ಕಾರ 26 ತಿಂಗಳ ವೇತನ ಹಿಂಬಾಕಿ 2025 ಏಪ್ರಿಲ್​ನಿಂದ ವೇತನ ಪರಿಷ್ಕರಣೆಗೆ ಒಪ್ಪಿಗೆ ನೀಡಿತ್ತು. ಸದ್ಯ ಇದಕ್ಕೆ ಒಪ್ಪದ ಸಾರಿಗೆ ನೌಕರರ ಕೂಟ ಮತ್ತೆ ಹೋರಾಟಕ್ಕೆ ಮುಂದಾಗಿದೆ.

ಚಿತ್ರದುರ್ಗದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್​ವರೆಗೆ ಪಾದಯಾತ್ರೆ
ರಾಜ್ಯ ಸರ್ಕಾರ ಸಾರಿಗೆ ನೌಕರರಿಗೆ ನೀಡಬೇಕಿದ್ದ 38 ವೇತನ ಹಿಂಬಾಕಿ 2024ರಿಂದ ಆಗಬೇಕಿದ್ದ, ಹೊಸ ವೇತನ ಒಪ್ಪಂದಕ್ಕಾಗಿ ಆಗ್ರಹಿಸಿ ಹೋರಾಟಕ್ಕೆ ಮುಂದಾಗಿದ್ದರು. ಆದರೆ ‌ರಾಜ್ಯ ಸರ್ಕಾರ 38 ತಿಂಗಳು ವೇತನ ಹಿಂಬಾಕಿ ಬದಲಿಗೆ 26 ತಿಂಗಳು ವೇತನ ಹಿಂಬಾಕಿ, 2024 ಜನವರಿ ಬದಲಿಗೆ 2025ರ ಏಪ್ರಿಲ್​ನಿಂದ ಹೊಸ ವೇತನ ಒಪ್ಪಂದ ಮಾಡುವುದಾಗಿ ಈಗಾಗಲೇ ಆದೇಶ ಮಾಡಿದೆ. ಆದರೆ ಇದಕ್ಕೆ ಒಪ್ಪದ ಸಾರಿಗೆ ನೌಕರರ ಒಕ್ಕೂಟ ಇಂದು ಸುದ್ದಿಗೋಷ್ಠಿ ನಡೆಸಿ ಯಾವುದೇ ‌ಕಾರಣಕ್ಕೂ ಸರ್ಕಾರದ ಆದೇಶವನ್ನು ನಾವು ಒಪ್ಪುವುದಿಲ್ಲ. ಏಪ್ರಿಲ್​ 8ರಿಂದ ಚಿತ್ರದುರ್ಗದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್​ವರೆಗೆ ಪಾದಯಾತ್ರೆ ಮಾಡುತ್ತೇವೆ ಎಂದು ಸಾರಿಗೆ ನೌಕರರ ಒಕ್ಕೂಟ ಅಧ್ಯಕ್ಷ ಚಂದ್ರಶೇಖರ್ ಹೇಳಿದ್ದಾರೆ.
ಇದನ್ನೂ ಓದಿ: ವೇತನ ಹಿಂಬಾಕಿಗೆ ಡಿಮ್ಯಾಂಡ್​​: ಜ.29ರಂದು ಸಾರಿಗೆ ನೌಕರರ ಪ್ರತಿಭಟನೆ

ಇನ್ನು ಸಾರಿಗೆ ನೌಕರರ ಒಕ್ಕೂಟ 38 ತಿಂಗಳ ವೇತನ ಹಿಂಬಾಕಿ ಮತ್ತು 2024 ಜನವರಿಯಿಂದಲೇ ವೇತನ ಹೆಚ್ಚಳ ಮಾಡಬೇಕೆಂದು ಪಟ್ಟುಹಿಡಿದಿದ್ದಾರೆ. ಈಗಾಗಲೇ ರಾಜ್ಯ ಸರ್ಕಾರ 38 ತಿಂಗಳ ವೇತನ ಹಿಂಬಾಕಿಯಲ್ಲಿ 26 ತಿಂಗಳ ವೇತನ ಹಿ‌ಂಬಾಕಿ 1272 ಕೋಟಿ ರೂ ನೀಡುತ್ತಿದೆ. 2024 ಜನವರಿಯಿಂದ ಆಗಬೇಕಿದ್ದ ಹೊಸ ವೇತನ ಒಪ್ಪಂದವನ್ನು 2025 ಏಪ್ರಿಲ್​ನಿಂದ ಮಾಡಲು ಮುಂದಾಗಿದೆ.

1970 ಕೋಟಿ ರೂ ಹಿಂಬಾಕಿ ಬಿಡುಗಡೆಗೆ ಪಟ್ಟು
ಸರ್ಕಾರದ ಈ ನಿರ್ಧಾರಕ್ಕೆ ಒಪ್ಪದ ಕೆಎಸ್ಆರ್​ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮದ ನೌಕರರು 38 ತಿಂಗಳ ವೇತನ ಹಿಂಬಾಕಿ 1970 ಕೋಟಿ ರೂ ಬಿಡುಗಡೆ ಮಾಡಲೇಬೇಕು ಮತ್ತು 2024 ಜನವರಿಯಿಂದಲೇ ಹೊಸ ವೇತನ ಒಪ್ಪಂದ ಮಾಡಬೇಕೆಂದು ಪಟ್ಟುಹಿಡಿದಿದ್ದಾರೆ. ಈ ನಿಟ್ಟಿನಲ್ಲಿ ಫ್ರೀಡಂ ಪಾರ್ಕ್​ಗೆ ಬಂದು, ಅಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಂತರ ಮುಷ್ಕರಕ್ಕೆ ಹೋಗಬೇಕೆಂದು ಸಾರಿಗೆ ನೌಕರರ ಮುಖಂಡರು ಸಿದ್ಧತೆ ಮಾಡಿಕೊಂಡಿದ್ದಾರೆ. ಅಂದು ಬಸ್​​ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಪ್ರಯಾಣಿಕರು ತಮ್ಮ ಪ್ರಯಾಣವನ್ನು ಮುಂದೂಡುವುದು ಉತ್ತಮ.

ಒಟ್ಟಿನಲ್ಲಿ ರಾಜ್ಯ ಸರ್ಕಾರ ನೀಡಬೇಕಿದ್ದ 38 ತಿಂಗಳ ಬದಲಿಗೆ 26 ತಿಂಗಳಿನ ವೇತನ ಮತ್ತು 2024 ಜನವರಿ ಬದಲಿಗೆ ‌25 ಏಪ್ರಿಲ್​ನಿಂದ ಹೊಸ ವೇತನ ಪರಿಷ್ಕರಣೆ ಮಾಡುತ್ತೇವೆ ಅಂತಿದ್ದಾರೆ. ಆದರೆ ಇದಕ್ಕೆ ಸಾರಿಗೆ ನೌಕರರು ಒಪ್ಪದೆ ಮತ್ತೆ ಹೋರಾಟಕ್ಕೆ ಮುಂದಾಗಿದ್ದು, ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂದು ‌ಕಾದು ನೋಡಬೇಕಿದೆ.

The post ಏ. 8ರಂದು ಬಸ್ ಸಂಚಾರ ಡೌಟ್!. appeared first on Good News 24x7.

]]>
ಮೊಮ್ಮಗನಿಗೆ ಶಾಲೆಗೆ ತೆಗೆದುಕೊಂಡು ಹೋಗಲು ಭಾರತದಲ್ಲಿ ಮೊದಲ ಟೆಸ್ಲಾ ಕಾರು ಖರೀದಿಸಿದ ಸಾರಿಗೆ ಸಚಿವ! https://www.goodnews24x7.com/transport-minister-buys-indias-first-tesla-car-to-take-grandson-to-school/ Fri, 05 Sep 2025 14:07:09 +0000 https://www.goodnews24x7.com/?p=7393 ಭಾರತದ ಸಾರಿಗೆ ಸಚಿವರು ದೇಶದ ಮೊದಲ ಟೆಸ್ಲಾ ಕಾರು ಖರೀದಿಸಿ ಮತ್ತೆ ಬಾರಿ ಸುದ್ದಿಗೆ ಎಳೆಯಾಗಿದ್ದಾರೆ. ಈ ವಿದ್ಯಮಾನವೇ ಇಲ್ಲಿಯವರೆಗೆ ಯಾರೂ ನಿರೀಕ್ಷಿಸದ ರೀತಿಯಲ್ಲಿ ದಿಗ್ಗಜ ತಂತ್ರಜ್ಞಾನ ಬ್ರ್ಯಾಂಡ್‌ ‘ಟೆಸ್ಲಾ’ಗೆ ಭಾರತದಲ್ಲಿ ಅಡಿಗಾಲಿಟ್ಟ ಮೊದಲ ಘಟ್ಟವಾಗಿದೆ. “ನನ್ನ ಮೊಮ್ಮಗ ಈ ಕಾರಿನಲ್ಲಿ…

The post ಮೊಮ್ಮಗನಿಗೆ ಶಾಲೆಗೆ ತೆಗೆದುಕೊಂಡು ಹೋಗಲು ಭಾರತದಲ್ಲಿ ಮೊದಲ ಟೆಸ್ಲಾ ಕಾರು ಖರೀದಿಸಿದ ಸಾರಿಗೆ ಸಚಿವ! appeared first on Good News 24x7.

]]>

ಭಾರತದ ಸಾರಿಗೆ ಸಚಿವರು ದೇಶದ ಮೊದಲ ಟೆಸ್ಲಾ ಕಾರು ಖರೀದಿಸಿ ಮತ್ತೆ ಬಾರಿ ಸುದ್ದಿಗೆ ಎಳೆಯಾಗಿದ್ದಾರೆ. ಈ ವಿದ್ಯಮಾನವೇ ಇಲ್ಲಿಯವರೆಗೆ ಯಾರೂ ನಿರೀಕ್ಷಿಸದ ರೀತಿಯಲ್ಲಿ ದಿಗ್ಗಜ ತಂತ್ರಜ್ಞಾನ ಬ್ರ್ಯಾಂಡ್‌ ‘ಟೆಸ್ಲಾ’ಗೆ ಭಾರತದಲ್ಲಿ ಅಡಿಗಾಲಿಟ್ಟ ಮೊದಲ ಘಟ್ಟವಾಗಿದೆ.

“ನನ್ನ ಮೊಮ್ಮಗ ಈ ಕಾರಿನಲ್ಲಿ ಶಾಲೆಗೆ ಹೋಗುತ್ತಾನೆ. ಈ ಕಾರು ತಾನು ಸುಲಭವಾಗಿ ಲಭಿಸದ ಪರಿಸರ ಸ್ನೇಹಿ ತಂತ್ರಜ್ಞಾನವನ್ನೂ ಮತ್ತು ಮುಂಬರುವ ತಲೆಮಾರಿಗೆ ಉತ್ಸಾಹವನ್ನೂ ಪ್ರತಿನಿಧಿಸುತ್ತದೆ,” ಎಂದು ಸಚಿವರು ತಮ್ಮ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

‘ಭಾರತದ ಮೊದಲ ಟೆಸ್ಲಾ’ ಖರೀದಿಸಿದ ಹೆಮ್ಮೆ:

ಸಾರ್ವಜನಿಕವಾಗಿ ಅವರು ಹಂಚಿಕೊಂಡ ಸಂದೇಶದಲ್ಲಿ,
“ಈ ಕಾರು ನನಗೆಲ್ಲ ಅಲ್ಲ – ನನ್ನ ಮೊಮ್ಮಗನಿಗೆ. ನಾನು ಇದನ್ನು ಸಂಪೂರ್ಣ ಹಣ ಪಾವತಿಸಿ, ಯಾವುದೇ ರಿಯಾಯಿತಿ ಇಲ್ಲದೇ ಖರೀದಿಸಿದ್ದೇನೆ. ನನಗೆ ಭಾರತದಲ್ಲಿ ಮೊದಲ ಟೆಸ್ಲಾ ಖರೀದಿಸಬೇಕೆಂಬ ಕನಸು ಇತ್ತು. ಈಗ ಅದು ನನಸಾಗಿದೆ,” ಎಂದು ತಿಳಿಸಿದ್ದಾರೆ.

ಈ ಹಿಂದೆ ಅವರು ‘ದೇಶದ ಮೊದಲ ಟೆಸ್ಲಾ ಖರೀದಿಸುತ್ತೇನೆ’ ಎಂದು ಘೋಷಿಸಿದ್ದರಿಂದ, ಈಗ ಅವರು ತಮ್ಮ ಮಾತಿಗೆ ಕಟ್ಟಿ ನಿಂತಿದ್ದಾರೆ.

ಟೆಸ್ಲಾ ಮಾಡೆಲ್ Y: ವೈಶಿಷ್ಟ್ಯಗಳು ಮತ್ತು ಸಾಮರ್ಥ್ಯ

ಭಾರತಕ್ಕೆ ಆಮದು ಮಾಡಲಾದ ಮೊದಲ ಟೆಸ್ಲಾ ಕಾರು Model Y, ವಿಶ್ವದ ಅತ್ಯಾಧುನಿಕ ಎಲೆಕ್ಟ್ರಿಕ್ ಕಾರುಗಳಲ್ಲಿ ಒಂದಾಗಿ ಪರಿಗಣಿಸಲಾಗಿದೆ. ಈ ಕಾರು ಹೆಚ್ಚು ಸೇಫ್ಟಿ, ಸುಧಾರಿತ ತಂತ್ರಜ್ಞಾನ ಮತ್ತು ಶೂನ್ಯ ಕಾರ್ಬನ್ ಉತ್ಪತ್ತಿಯೊಂದಿಗೆ comes with a powerful punch.

  • Tesla Model 3 RWD: 0-100 kmph ವೇಗ ಕೇವಲ 5.6 ಸೆಕೆಂಡುಗಳಲ್ಲಿ
  • Tesla Model 3 LR RWD: ಒಮ್ಮೆ ಚಾರ್ಜ್‌ನಲ್ಲಿ 622 ಕಿಮೀ ತಲುಪುವ ಶಕ್ತಿ
  • Tesla Standard RWD: ಒಮ್ಮೆ ಚಾರ್ಜ್‌ನಲ್ಲಿ 500 ಕಿಮೀ

Model Y – ಒಳಹೊರಗಿನ ಹೊಸ ವಿನ್ಯಾಸ:

  • ಹಿಂಭಾಗದ ಸೀಟಿಗೆ ಹೊಸ ಟಚ್‌ಸ್ಕ್ರೀನ್
  • ಎಲೆಕ್ಟ್ರಿಕ್ ಅಡ್ಜಸ್ಟ್‌ಮೆಂಟ್ ಸೌಲಭ್ಯ
  • ಮೃದುವಾದ ಆಂತರಿಕ ವಿನ್ಯಾಸ
  • ಹೆಚ್ಚು ರುಚಿಕರವಾದ ಬಾಹ್ಯ ವಿನ್ಯಾಸ

Model Y ಈಗಾಗಲೇ ಟೆಸ್ಲಾದ ಅತ್ಯಧಿಕ ಮಾರಾಟವಾದ ಕಾರು ಆಗಿದ್ದು, ವಿಶ್ವದ ಟಾಪ್ ಮಾರ್ಕೆಟ್‌ಗಳಲ್ಲಿ ಒಂದಾಗಿದೆ. ಇದು ಭಾರತಕ್ಕೆ CBU (Completely Built Unit) ರೂಪದಲ್ಲಿ ಆಮದು ಆಗುತ್ತಿದೆ, ಇದರಿಂದಾಗಿ ಅದರ ಬೆಲೆ ಇತರ ಕಾರುಗಳಿಗಿಂತ ಸ್ವಲ್ಪ ಹೆಚ್ಚು.

ಹಂಗು ಹಾಕುವ ಬಣ್ಣಗಳು – ಹೆಚ್ಚುವರಿ ಶುಲ್ಕ ಸಹಿತ:

ಖರೀದಿದಾರರು ತಮ್ಮ ಇಷ್ಟದ ಬಣ್ಣವನ್ನು ಆಯ್ಕೆಮಾಡಬಹುದು, ಆದರೆ ಅದಕ್ಕೆ ಹೆಚ್ಚುವರಿ ಶುಲ್ಕವಿದೆ:

  • ಪರ್ಲ್ ವೈಟ್ ಮಲ್ಟಿ-ಕೋಟ್ – ₹95,000
  • ಡೈಮಂಡ್ ಬ್ಲಾಕ್ – ₹95,000
  • ಗ್ಲೇಸಿಯರ್ ಬ್ಲೂ – ₹1,25,000
  • ಕ್ವಿಕ್ ಸಿಲ್ವರ್ – ₹1,85,000
  • ಅಲ್ಟ್ರಾ ರೆಡ್ – ₹1,85,000
  • ಯಾರಿಗೆ ಗುರಿ – ಯಾರಿಗೆ ಸಂದೇಶ?

ಈ ನಡೆ ಸರಳವಾಗಿ ಕಾರು ಖರೀದಿಸುವ ವಿಚಾರವಲ್ಲ. ಇದು ಒಂದು ಪರಿಸರ ಪ್ರಜ್ಞೆ, ಮುಂದಿನ ತಲೆಮಾರಿಗೆ ಮಾದರಿ ಮತ್ತು ಟೆಕ್ನಾಲಜಿಯ ಪ್ರಗತಿಗೆ ಒತ್ತಾಯ.

ಸಚಿವರ ಮೊಮ್ಮಗನಿಗೆ ಇದು ಮೌಲ್ಯಯುತ ಉಡುಗೊರೆ ಮಾತ್ರವಲ್ಲ — ಭವಿಷ್ಯದ ಓದುಗರಿಗೆ ನವೋತ್ಪಾದನೆಗೆ ಸಂಬಂಧಿಸಿದ ಪ್ರತೀಕವೂ ಹೌದು

The post ಮೊಮ್ಮಗನಿಗೆ ಶಾಲೆಗೆ ತೆಗೆದುಕೊಂಡು ಹೋಗಲು ಭಾರತದಲ್ಲಿ ಮೊದಲ ಟೆಸ್ಲಾ ಕಾರು ಖರೀದಿಸಿದ ಸಾರಿಗೆ ಸಚಿವ! appeared first on Good News 24x7.

]]>
ಲಾರಿ ಚಲಿಸುತ್ತಿದ್ದಾಗಲೇ ಹಠಾತ್ತನೆ ಕುಸಿದ ಸೇತುವೆ. https://www.goodnews24x7.com/bridge-collapses-while-lorry-is-moving/ Wed, 06 Aug 2025 08:41:50 +0000 https://www.goodnews24x7.com/?p=5453 ಲಾರಿ ಚಲಿಸುತ್ತಿದ್ದಾಗಲೇ ಹಠಾತ್ತನೆ ಕುಸಿದ ಸೇತುವೆ ಮೈಸೂರು: ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಲಾರಿ (Lorry) ಚಲಿಸುತ್ತಿದ್ದಾಗಲೇ ಸೇತುವೆ ಕುಸಿದುಬಿದ್ದ ಘಟನೆ ಮೈಸೂರು (Mysuru) ಜಿಲ್ಲೆ ಸರಗೂರು ತಾಲೂಕಿನ ಇಟ್ನಾ ಸಮೀಪದ ಕಬಿನಿ ಬಲದಂಡೆ ನಾಲೆ ಬಳಿ ನಡೆದಿದೆ. https://www.youtube.com/live/aRP0ojXcaz4?si=eTNzSBsaaULCGU8u ನ್ಯಾಷನಲ್…

The post ಲಾರಿ ಚಲಿಸುತ್ತಿದ್ದಾಗಲೇ ಹಠಾತ್ತನೆ ಕುಸಿದ ಸೇತುವೆ. appeared first on Good News 24x7.

]]>

ಲಾರಿ ಚಲಿಸುತ್ತಿದ್ದಾಗಲೇ ಹಠಾತ್ತನೆ ಕುಸಿದ ಸೇತುವೆ

ಮೈಸೂರು: ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಲಾರಿ (Lorry) ಚಲಿಸುತ್ತಿದ್ದಾಗಲೇ ಸೇತುವೆ ಕುಸಿದುಬಿದ್ದ ಘಟನೆ ಮೈಸೂರು (Mysuru) ಜಿಲ್ಲೆ ಸರಗೂರು ತಾಲೂಕಿನ ಇಟ್ನಾ ಸಮೀಪದ ಕಬಿನಿ ಬಲದಂಡೆ ನಾಲೆ ಬಳಿ ನಡೆದಿದೆ.

https://www.youtube.com/live/aRP0ojXcaz4?si=eTNzSBsaaULCGU8u ನ್ಯಾಷನಲ್ ಥ್ರೋ ಬಾಲ್ ಚಾಂಪಿಯನ್ ಷಿಪ್ ಆಯ್ಕೆಯಾದ ಪೃತ್ವಿ ಪಿ ಶೆಟ್ಟಿ…

ಪುರದಕಟ್ಟೆ ಮಾರ್ಗವಾಗಿ ನಂಜನಗೂಡಿಗೆ ಭತ್ತ (Paddy) ಹೊತ್ತೊಯ್ಯುತ್ತಿದ್ದ ಲಾರಿ ಸೇತುವೆ ಮೇಲೆ ಸಾಗುತ್ತಿದ್ದಾಗಲೇ ಹಠಾತ್ ಆಗಿ ಸೇತುವೆ ಕುಸಿದಿದೆ.

ಲಾರಿಯಲ್ಲಿದ್ದ ಲೋಡರ್ಸ್ ಹಾಗೂ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಬಿನಿ ಬಲದಂಡೆ ನಿರ್ಮಾಣವಾದಾಗ ಕಟ್ಟಿದ್ದ ಸೇತುವೆ ಇದ್ದಾಗಿದ್ದು ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದಾಗಿ ಶಿಥಿಲಗೊಂಡಿತ್ತು.

‌ಲಾರಿಯನ್ನು ಮೇಲೆತ್ತುವುದರ ಜೊತೆಗೆ ಮತ್ತೊಂದು ಲಾರಿ ಮೂಲಕ ಭತ್ತದ ಮೂಟೆಗಳನ್ನ ಕೊಂಡೊಯ್ಯಲು ಸ್ಥಳೀಯರು ನೆರವು ನೀಡಿದರು.

The post ಲಾರಿ ಚಲಿಸುತ್ತಿದ್ದಾಗಲೇ ಹಠಾತ್ತನೆ ಕುಸಿದ ಸೇತುವೆ. appeared first on Good News 24x7.

]]>
ಸಾರಿಗೆ ಮುಷ್ಕರಕ್ಕೆ ಮತ್ತೆ 2 ದಿನ ಬ್ರೇಕ್: ಹೈಕೋರ್ಟ್ ಆದೇಶ, ಎಚ್ಚರಿಕೆ. https://www.goodnews24x7.com/transport-strike-to-continue-for-another-2-days-high-court-orders-warns-highcourt-transport-orders-state-challenging-lawyers-committee-employees-bengaluru-the-high-court-has-taken-a-dig-at-the-l/ Tue, 05 Aug 2025 11:46:13 +0000 https://www.goodnews24x7.com/?p=5386 ಬೆಂಗಳೂರು : ಸಾರಿಗೆ ನೌಕರರ ಮುಷ್ಕರ ಪ್ರಶ್ನಿಸಿ ಸಲ್ಲಿಸಲಾಗಿದ್ದ ಪಿಐಎಲ್ ವಿಚಾರಣೆ ವೇಳೆ ಹೈಕೋರ್ಟ್ ಸಾರಿಗೆ ಸಂಘಟನೆ ಪರ ವಕೀಲರಿಗೆ ತರಾಟೆ ತೆಗೆದುಕೊಂಡಿದೆ. ರಾಜ್ಯದಲ್ಲಿ ಸಾರಿಗೆ ನೌಕರರು ಮುಷ್ಕರ ಹೂಡಿರುವುದನ್ನ ಪ್ರಶ್ನಿಸಿ ಸಲ್ಲಿಸಿಲಾಗಿರುವ ಪಿಐಎಲ್ ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ವಿಭು…

The post ಸಾರಿಗೆ ಮುಷ್ಕರಕ್ಕೆ ಮತ್ತೆ 2 ದಿನ ಬ್ರೇಕ್: ಹೈಕೋರ್ಟ್ ಆದೇಶ, ಎಚ್ಚರಿಕೆ. appeared first on Good News 24x7.

]]>

ಬೆಂಗಳೂರು : ಸಾರಿಗೆ ನೌಕರರ ಮುಷ್ಕರ ಪ್ರಶ್ನಿಸಿ ಸಲ್ಲಿಸಲಾಗಿದ್ದ ಪಿಐಎಲ್ ವಿಚಾರಣೆ ವೇಳೆ ಹೈಕೋರ್ಟ್ ಸಾರಿಗೆ ಸಂಘಟನೆ ಪರ ವಕೀಲರಿಗೆ ತರಾಟೆ ತೆಗೆದುಕೊಂಡಿದೆ.

ರಾಜ್ಯದಲ್ಲಿ ಸಾರಿಗೆ ನೌಕರರು ಮುಷ್ಕರ ಹೂಡಿರುವುದನ್ನ ಪ್ರಶ್ನಿಸಿ ಸಲ್ಲಿಸಿಲಾಗಿರುವ ಪಿಐಎಲ್ ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ವಿಭು ಭಕ್ರು ಅವರಿದ್ದ ಪೀಠ, ಹೈಕೋರ್ಟ್ ಆದೇಶವಿದ್ದರೂ ಮುಷ್ಕರ ನಡೆಸಲಾಗಿದೆ.

ಮುಷ್ಕರ ನಿಂತಿರುವ ಬಗ್ಗೆ ನಾಳೆ ಮಾಹಿತಿ ನೀಡಬೇಕು ಇಲ್ಲವಾದರೇ ನಾಳೇ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಲಾಗುವುದು ಸಾರಿಗೆ ಸಂಘಟನೆ ಪದಾಧಿಕಾರಿಗಳ ಬಂಧನಕ್ಕೆ ಆದೇಶಿಸಲಾಗುವುದು ನಿಮ್ಮ ಸಮಸ್ಯೆ ಇದ್ದರೆ ಸರ್ಕಾರದೊಂದಿಗೆ ಚರ್ಚಿಸಿ ಬಗೆಹರಿಸಿಕೊಳ್ಳಿ ಜನಸಾಮಾನ್ಯರನ್ನ ಒತ್ತಯಾಗಿಸುವುದನ್ನ ಸಹಿಸಲ್ಲ ಎಂದು ಜಂಟಿ ಕ್ರಿಯಾ ಸಮಿತಿ ಪರ ವಕೀಲರಿಗೆ ಎಚ್ಚರಿಕೆ ನೀಡಿತು.

ನ್ಯಾಯಪೀಠದ ತರಾಟೆಗೆಕ್ರಿಯಾ ಸಮಿತಿ ಪರ ವಕೀಲರು ತಬ್ಬಿಬ್ಬಾಗಿ ನಾಳೆ ಮುಷ್ಕರ ನಡೆಸುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

4 ಸಾರಿಗೆ ನಿಗಮಗಳ ನೌಕರರ ಸಂಘಕ್ಕೆ ನೋಟಿಸ್ ನೀಡಿದ ನ್ಯಾಯಪೀಠವು ಮುಷ್ಕರಕ್ಕೆ ನೀಡಿದ್ದ ತಡೆಯಾಜ್ಞೆಯನ್ನ ಎರಡು ದಿನ ವಿಸ್ತರಣೆ ಮಾಡಿದ್ದು ಮುಷ್ಕರ ಮುಂದುವರೆಸಿದರೆ ಎಸ್ಮಾ ಕಾಯ್ದೆಯಡಿ ಸರ್ಕಾರ ಕ್ರಮ ಕೈಗೊಳ್ಳಬಹುದು ಎಂದು ತಿಳಿಸಿದೆ. ನಂತರ ವಿಚಾರಣೆಯನ್ನ ಆಗಸ್ಟ್ 7ಕ್ಕೆ ಮುಂದೂಡಿಕೆ ಮಾಡಿದೆ.

The post ಸಾರಿಗೆ ಮುಷ್ಕರಕ್ಕೆ ಮತ್ತೆ 2 ದಿನ ಬ್ರೇಕ್: ಹೈಕೋರ್ಟ್ ಆದೇಶ, ಎಚ್ಚರಿಕೆ. appeared first on Good News 24x7.

]]>
ಬಸ್‌ ಮುಷ್ಕರದ ಹಿನ್ನೆಲೆ ಬರೋಬ್ಬರಿ ₹12 ಸಾವಿರಕ್ಕೆ ಟ್ಯಾಕ್ಸಿ ಬುಕ್​ ಮಾಡಿದ ವ್ಯಕ್ತಿ.! https://www.goodnews24x7.com/a-man-booked-a-taxi-for-exactly-%e2%82%b912000/ Tue, 05 Aug 2025 08:29:40 +0000 https://www.goodnews24x7.com/?p=5351 ಬೆಂಗಳೂರು :- ಬಸ್‌ ಸಂಚಾರ ಬಹುತೇಕ ಸ್ತಬ್ಧವಾಗಿದೆ. ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಹಮ್ಮಿಕೊಂಡಿರುವ ಮುಷ್ಕರದ ಹಿನ್ನೆಲೆಯಲ್ಲಿ ಸಾರಿಗೆ ಬಸ್ ಗಳ ಓಡಾಟ ಬಹುತೇಕ ಸ್ತಬ್ಧಗೊಂಡಿದೆ. ಹೀಗಾಗಿ ಪ್ರಯಾಣಿಕರು ತಮ್ಮ ತಮ್ಮ ಊರುಗಳಿಗೆ ತೆರಳಲು…

The post ಬಸ್‌ ಮುಷ್ಕರದ ಹಿನ್ನೆಲೆ ಬರೋಬ್ಬರಿ ₹12 ಸಾವಿರಕ್ಕೆ ಟ್ಯಾಕ್ಸಿ ಬುಕ್​ ಮಾಡಿದ ವ್ಯಕ್ತಿ.! appeared first on Good News 24x7.

]]>

ಬೆಂಗಳೂರು :- ಬಸ್‌ ಸಂಚಾರ ಬಹುತೇಕ ಸ್ತಬ್ಧವಾಗಿದೆ. ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಹಮ್ಮಿಕೊಂಡಿರುವ ಮುಷ್ಕರದ ಹಿನ್ನೆಲೆಯಲ್ಲಿ ಸಾರಿಗೆ ಬಸ್ ಗಳ ಓಡಾಟ ಬಹುತೇಕ ಸ್ತಬ್ಧಗೊಂಡಿದೆ.

ಹೀಗಾಗಿ ಪ್ರಯಾಣಿಕರು ತಮ್ಮ ತಮ್ಮ ಊರುಗಳಿಗೆ ತೆರಳಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಆದ್ರೆ, ಇಲ್ಲೊಬ್ಬ ವ್ಯಕ್ತಿ ಬೆಂಗಳೂರಿನಿಂದ ಮಂಗಳೂರಿಗೆ ಹೋಗುವುದಕ್ಕೆ ಬರೋಬ್ಬರಿ ₹12 ಸಾವಿರ ಕೊಟ್ಟು ಟ್ಯಾಕ್ಸಿ ಬುಕ್​ ಮಾಡಿದ್ದಾನೆ. ​​ಇಂದು ಸಾರಿಗೆ ನೌಕರರ ಮುಷ್ಕರದ ಹಿನ್ನೆಯಲ್ಲಿ ಯಾವುದೇ ಬಸ್​ಗಳು ರಸ್ತೆಗೆ ಇಳಿದಿಲ್ಲ.

https://youtu.be/S-u-vqsfrpQ?si=hlca96xKfHRg33T0 ನಾನು ದರ್ಶನ್ ಸರ್ ಗೆ ಸಪೋರ್ಟ್ ಮಾಡೋದು!

ಅಲ್ಲದೇ ಮಂಗಳೂರಿಗೆ ಹೋಗಲು ಬಸ್ ಇಲ್ಲದ ಕಾರಣ ವ್ಯಕ್ತಿಯೊಬ್ಬ ರಾತ್ರಿ ತನಕ ಕಾಯೋದಕ್ಕೆ ಆಗಲ್ಲ. ರಾತ್ರಿ ಬಸ್ ಇರುತ್ತೆ ಅನ್ನೋದು ಕನ್ಫರ್ಮ್ ಇಲ್ಲ ಅಂತ 12 ಸಾವಿರ ಕೊಟ್ಟು ಟ್ಯಾಕ್ಸಿ ಬುಕ್ ಮಾಡಿದ್ದಾನೆ. ಈತ ಮೂರು ದಿನ ರಜೆಯ ಕಾರಣಕ್ಕೆ ದುಬೈನಿಂದ ಬೆಂಗಳೂರಿಗೆ ಬಂದಿದ್ದ. ಏರ್ಪೋರ್ಟ್​ನಿಂದ ಬಸ್ ವ್ಯವಸ್ಥೆ ಇದ್ದ ಕಾರಣ ಮೆಜೆಸ್ಟಿಕ್​​ಗೆ ಬಂದಿದ್ದಾನೆ. ಆದ್ರೆ, ಮೆಜೆಸ್ಟಿಕ್​ನಿಂದ ಊರಿಗೆ ಹೋಗಲು ಬಸ್ ಇಲ್ಲದೆ ವ್ಯಕ್ತಿ ಕಂಗಾಲಾಗಿದ್ದ ಪರಿಣಾಮ 12 ಸಾವಿರಕ್ಕೆ ಟ್ಯಾಕ್ಸಿ ಮಾಡಿ ಮಂಗಳೂರಿಗೆ ಹೊರಟಿದ್ದಾನೆ.

The post ಬಸ್‌ ಮುಷ್ಕರದ ಹಿನ್ನೆಲೆ ಬರೋಬ್ಬರಿ ₹12 ಸಾವಿರಕ್ಕೆ ಟ್ಯಾಕ್ಸಿ ಬುಕ್​ ಮಾಡಿದ ವ್ಯಕ್ತಿ.! appeared first on Good News 24x7.

]]>
ನಾಳೆ ರಾಜ್ಯಾದ್ಯಾಂತ ಸಾರಿಗೆ ಬಸ್ಗಳ ಮುಷ್ಕರ. https://www.goodnews24x7.com/state-wide-transport-bus-strike-tomorrow/ Mon, 04 Aug 2025 13:50:17 +0000 https://www.goodnews24x7.com/?p=5330 ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಎರಡು ಗಂಟೆಗಳ ಕಾಲ ಸಭೆ ನಡೆದಿದೆ. 38 ತಿಂಗಳ ವೇತನದ ಬಗ್ಗೆ ಚರ್ಚೆ ಆಗಿದೆ. ಈ ಹಿಂದಿನ ಸಭೆಯಲ್ಲಿ ನಾವು ಅರಿಯರ್ಸ್​ ಕೊಡಬೇಕು ಎಂದು ಇಲ್ಲ ಎಂದಿದ್ದರು. 4 ವರ್ಷ ಕಾಯುವಂತೆ ಹೇಳಿದ್ದರು. ನಾಳೆ ಸಾರಿಗೆ ಮುಷ್ಕರವನ್ನು…

The post ನಾಳೆ ರಾಜ್ಯಾದ್ಯಾಂತ ಸಾರಿಗೆ ಬಸ್ಗಳ ಮುಷ್ಕರ. appeared first on Good News 24x7.

]]>

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಎರಡು ಗಂಟೆಗಳ ಕಾಲ ಸಭೆ ನಡೆದಿದೆ. 38 ತಿಂಗಳ ವೇತನದ ಬಗ್ಗೆ ಚರ್ಚೆ ಆಗಿದೆ. ಈ ಹಿಂದಿನ ಸಭೆಯಲ್ಲಿ ನಾವು ಅರಿಯರ್ಸ್​ ಕೊಡಬೇಕು ಎಂದು ಇಲ್ಲ ಎಂದಿದ್ದರು. 4 ವರ್ಷ ಕಾಯುವಂತೆ ಹೇಳಿದ್ದರು. ನಾಳೆ ಸಾರಿಗೆ ಮುಷ್ಕರವನ್ನು ಯಾವುದೇ ಕಾರಣಕ್ಕೂ ಮುಂದೂಡಿಕೆ ಮಾಡೋಕೆ ಆಗಲ್ಲ ಎಂದು ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಅನಂತ್ ಸುಬ್ಬರಾವ್ ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಎರಡು ಗಂಟೆಗಳ ಕಾಲ ಸಭೆ ನಡೆದಿದೆ. 38 ತಿಂಗಳ ವೇತನದ ಬಗ್ಗೆ ಚರ್ಚೆ ಆಗಿದೆ. ಈ ಹಿಂದಿನ ಸಭೆಯಲ್ಲಿ ನಾವು ಅರಿಯರ್ಸ್​ ಕೊಡಬೇಕು ಎಂದು ಇಲ್ಲ ಎಂದಿದ್ದರು. 4 ವರ್ಷ ಕಾಯುವಂತೆ ಹೇಳಿದ್ದರು. ಶ್ರೀನಿವಾಸ ಮೂರ್ತಿ ಸಮಿತಿ 14 ತಿಂಗಳ ಅರಿಯರ್ಸ್​ ಕೊಡಲು ಹೇಳಿದೆ. ಅದು 700 ಕೋಟಿ ರೂಪಾಯಿ ಆಗಬಹುದು. ಅದನ್ನು ನಾವು ಕೊಡುತ್ತೇವೆ. ಈಗ ಮುಷ್ಕರವನ್ನು ವಾಪಸ್ ತಗೊಳ್ಳಿ ಅಂತ ಸಿಎಂ ಎಂದಿದ್ದಾರೆ ಎಂದು ಅನಂತ್ ಸುಬ್ಬರಾವ್ ಹೇಳಿದ್ದಾರೆ.

1- 1- 2024ರ ವೇತನ ಹೆಚ್ಚಳ ಏನಿದೆಯೋ ಅದನ್ನು ನಂತರ ಮಾತನಾಡೋಣ ಎಂದರು. ಇದಕ್ಕೆ ನಾವು ಒಪ್ಪಲಿಲ್ಲ. ಈಗ 700 ಕೋಟಿ ಹಣ ಕೊಡುತ್ತೀರಾ, ಇನ್ನು 24 ತಿಂಗಳ ಬಾಕಿ ಹಣ ಕೊಡಬೇಕು. ಅದು ಸಾವಿರ ಕೋಟಿ ಹಣ ಆಗಬಹುದು. ಇದನ್ನ ಇನ್​ಸ್ಟಾಲ್​ಮೆಂಟ್​ನಲ್ಲಿ ಕೊಡಿ ಎಂದು ಹೇಳಿದ್ದೇವು. ಇದಕ್ಕೆ ಸರ್ಕಾರ ಒಪ್ಪಲಿಲ್ಲ. ಸಷೆನ್ಸ್​ ಆದ ಮೇಲೆ ಮಾತನಾಡೋಣ ಎಂದು ನಮ್ಮನ್ನ ಸಮಧಾನ ಮಾಡಲು ಬಂದ್ರು. ಈ ಹಿಂದೆ ಎರಡು ಬಾರಿ ಮುಷ್ಕರ ಮುಂದಕ್ಕೆ ಹಾಕಿದ್ದೇವು. ಹಾಗಾಗಿ ಇಂದು ಸಂಧಾನ ಸಭೆ ಇಂದು ವಿಫಲ ಆಯಿತು. ನಾಳೆ ಬೆಳಗ್ಗೆ 6 ಗಂಟೆಯಿಂದಲೇ ರಾಜ್ಯಾದ್ಯಾಂತ ಮುಷ್ಕರ ಇರುತ್ತದೆ ಎಂದು ಹೇಳಿದ್ದಾರೆ.

The post ನಾಳೆ ರಾಜ್ಯಾದ್ಯಾಂತ ಸಾರಿಗೆ ಬಸ್ಗಳ ಮುಷ್ಕರ. appeared first on Good News 24x7.

]]>
ಆ.15 ರಿಂದ ಫಾಸ್ಟ್ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ಆರಂಭ: ಸುಗಮ ಸಂಚಾರಕ್ಕೆ ಇದು ಸಹಕಾರಿ! https://www.goodnews24x7.com/fastag-based-annual-pass-to-start-from-august-15-this-will-help-in-smooth-traffic/ Thu, 19 Jun 2025 11:26:18 +0000 https://www.goodnews24x7.com/?p=4492 ನವದೆಹಲಿ: ಕೇಂದ್ರ ಸರ್ಕಾರವು ಆಗಸ್ಟ್ 15 ರಿಂದ ಸುಗಮ ಹಾಗೂ ಸರಾಗವಾದ ಹೆದ್ದಾರಿ ಪ್ರಯಾಣಕ್ಕೆ 3,000 ರೂ ಮೌಲ್ಯದ ಫಾಸ್ಟ್ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ಪರಿಚಯಿಸಲು ಸಿದ್ಧವಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಬುಧವಾರ…

The post ಆ.15 ರಿಂದ ಫಾಸ್ಟ್ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ಆರಂಭ: ಸುಗಮ ಸಂಚಾರಕ್ಕೆ ಇದು ಸಹಕಾರಿ! appeared first on Good News 24x7.

]]>

ನವದೆಹಲಿ: ಕೇಂದ್ರ ಸರ್ಕಾರವು ಆಗಸ್ಟ್ 15 ರಿಂದ ಸುಗಮ ಹಾಗೂ ಸರಾಗವಾದ ಹೆದ್ದಾರಿ ಪ್ರಯಾಣಕ್ಕೆ 3,000 ರೂ ಮೌಲ್ಯದ ಫಾಸ್ಟ್ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ಪರಿಚಯಿಸಲು ಸಿದ್ಧವಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಬುಧವಾರ ತಿಳಿಸಿದ್ದಾರೆ.
X ಹ್ಯಾಂಡಲ್ ಪೋಸ್ಟ್ ವೊಂದನ್ನು ಮಾಡಿರುವ ಅವರು, ಪಾಸ್ ಸಕ್ರಿಯಗೊಳಿಸಿದ ದಿನಾಂಕದಿಂದ ಒಂದು ವರ್ಷ ಅಥವಾ 200 ಟ್ರಿಪ್ಗಳವರೆಗೆ ಯಾವುದು ಮೊದಲು ಬರುತ್ತದೆಯೋ ಅದು ಮಾನ್ಯವಾಗಿರುವಂತೆ ಪಾಸ್ ರೂಪಿಸಲಾಗಿದೆ ಎಂದು ಗಡ್ಕರಿ ಅವರು ಹೇಳಿದ್ದಾರೆ. ಕಾರುಗಳು, ಜೀಪ್ಗಳು ಮತ್ತು ವ್ಯಾನ್ಗಳಂತಹ ವಾಣಿಜ್ಯೇತರ ಖಾಸಗಿ ವಾಹನಗಳಿಗೆ ಮಾತ್ರ ಈ ಪಾಸ್ ವಿನ್ಯಾಸಗೊಳಿಸಲಾಗಿದೆ ಎಂದು ತಮ್ಮ ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

ಈ ಹೊಸ ಆ್ಯಪ್ ಎಲ್ಲಿ ಲಭ್ಯ?

 

 

 

 

 

ಸಕ್ರಿಯಗೊಳಿಸುವಿಕೆ ಮತ್ತು ನವೀಕರಣಕ್ಕಾಗಿ ಮೀಸಲಾದ ಲಿಂಕ್ ಶೀಘ್ರದಲ್ಲೇ ರಾಜ್ಮಾರ್ಗ್ ಯಾತ್ರಾ ಅಪ್ಲಿಕೇಶನ್ನಲ್ಲಿ ಹಾಗೂ NHAI ಮತ್ತು MoRTH ನ ಅಧಿಕೃತ ವೆಬ್ಸೈಟ್ಗಳಲ್ಲಿ ಲಭ್ಯವಿರುತ್ತದೆ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.  60 ಕಿ.ಮೀ ವ್ಯಾಪ್ತಿಯೊಳಗೆ ಇರುವ ಟೋಲ್ ಪ್ಲಾಜಾಗಳಿಗೆ ಸಂಬಂಧಿಸಿದ ದೀರ್ಘಕಾಲದ ಕಳವಳಗಳನ್ನು ಈ ನೀತಿ ಪರಿಹರಿಸುತ್ತದೆ ಮತ್ತು ಒಂದೇ ಕೈಗೆಟುಕುವ ವಹಿವಾಟಿನ ಮೂಲಕ ಟೋಲ್ ಪಾವತಿಗಳನ್ನು ಸರಳಗೊಳಿಸುತ್ತದೆ ಎಂದು ಕೇಂದ್ರದ ಭೂಸಾರಿಗೆ ಹಾಗೂ ಹೆದ್ದಾರಿ ಸಚಿವರು ಸ್ಪಷ್ಟಪಡಿಸಿದ್ದಾರೆ.
“ಕಾಯುವ ಸಮಯ ಹಾಗೂ ದಟ್ಟಣೆಯನ್ನು ಕಡಿಮೆ ಮಾಡುವುದು ಮತ್ತು ಟೋಲ್ ಪ್ಲಾಜಾಗಳಲ್ಲಿ ವಿವಾದಗಳನ್ನು ಕಡಿಮೆ ಮಾಡುವ ಮೂಲಕ, ವಾರ್ಷಿಕ ಪಾಸ್ ಲಕ್ಷಾಂತರ ಖಾಸಗಿ ವಾಹನ ಮಾಲೀಕರಿಗೆ ವೇಗವಾದ ಮತ್ತು ಸುಗಮ ಪ್ರಯಾಣದ ಅನುಭವವನ್ನು ನೀಡುವ ಗುರಿಯನ್ನು ಹೊಂದಿದೆ ಎಂದು ಸಚಿವರು ಹೇಳಿದ್ದಾರೆ.

ಈ ಪಾಸ್ ನಿಂದ ಆಗುವ ಲಾಭವೇನು?  ವಾರ್ಷಿಕ ಪಾಸ್ ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುಗಮ ಮತ್ತುಸರಾಗ ಹಾಗೂ ಕಡಿಮೆ ವೆಚ್ಚದ ಪರಿಣಾಮಕಾರಿ ಪ್ರಯಾಣವನ್ನು ಸಕ್ರಿಯಗೊಳಿಸುತ್ತದೆ ಎಂದು ನಿತಿನ್ ಗಡ್ಕರಿ ತಿಳಿಸಿದ್ದಾರೆ.

The post ಆ.15 ರಿಂದ ಫಾಸ್ಟ್ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ಆರಂಭ: ಸುಗಮ ಸಂಚಾರಕ್ಕೆ ಇದು ಸಹಕಾರಿ! appeared first on Good News 24x7.

]]>
ಅಖಂಡ ಕರ್ನಾಟಕ ಮಾರ್ಚ್ 22ಕ್ಕೆ ಬಂದ್. https://www.goodnews24x7.com/%e0%b2%85%e0%b2%96%e0%b2%82%e0%b2%a1-%e0%b2%95%e0%b2%b0%e0%b3%8d%e0%b2%a8%e0%b2%be%e0%b2%9f%e0%b2%95-%e0%b2%ae%e0%b2%be%e0%b2%b0%e0%b3%8d%e0%b2%9a%e0%b3%8d-22%e0%b2%95%e0%b3%8d%e0%b2%95%e0%b3%86/ Thu, 20 Mar 2025 11:13:42 +0000 https://www.goodnews24x7.com/?p=2836 ಮಹಾರಾಷ್ಟ್ರದಲ್ಲಿ ಕೆಎಸ್ಆರ್ಟಿಸಿ ಸಿಬ್ಬಂದಿ ಮೇಲಿನ ಹಲ್ಲೆಯನ್ನು ಖಂಡಿಸಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಮಾರ್ಚ್ 22ರಂದು ಅಖಂಡ ಕರ್ನಾಟಕ ಬಂದ್ಗೆ  ಕರೆ ನೀಡಲಾಗಿದೆ. ಈಗಾಗಲೇ ಈ ಬಂದ್ಗೆ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ನೌಕರರ ಸಂಘ ಸೇರಿದಂತೆ ಓಲಾ, ಉಬರ್, ಆಟೋ…

The post ಅಖಂಡ ಕರ್ನಾಟಕ ಮಾರ್ಚ್ 22ಕ್ಕೆ ಬಂದ್. appeared first on Good News 24x7.

]]>

ಮಹಾರಾಷ್ಟ್ರದಲ್ಲಿ ಕೆಎಸ್ಆರ್ಟಿಸಿ ಸಿಬ್ಬಂದಿ ಮೇಲಿನ ಹಲ್ಲೆಯನ್ನು ಖಂಡಿಸಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಮಾರ್ಚ್ 22ರಂದು ಅಖಂಡ ಕರ್ನಾಟಕ ಬಂದ್ಗೆ  ಕರೆ ನೀಡಲಾಗಿದೆ. ಈಗಾಗಲೇ ಈ ಬಂದ್ಗೆ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ನೌಕರರ ಸಂಘ ಸೇರಿದಂತೆ ಓಲಾ, ಉಬರ್, ಆಟೋ ಸಂಘಗಳು ಕೂಡ ಬಂದ್ಗೆ ಸಂಪೂರ್ಣವಾಗಿ ಬೆಂಬಲ ಸೂಚಿಸಿವೆ. ಹಾಗಾದ್ರೆ ನೀವೇನಾದ್ರು ಈ ಕೆಲ ಕೆಲಸಗಳನ್ನು ಶನಿವಾರಕ್ಕೆ ಮುಂದೂಡಿದ್ದರೆ ಇಂದು ನಾಳೆಯೊಳಗೆ ಕೆಲಸ ಮುಗಿಸಿಕೊಳ್ಳುವುದು ಒಳ್ಳೆಯದು.

ಸಾರಿಗೆ ವ್ಯವಸ್ಥೆ ಇರುವುದಿಲ್ಲ


ಮಾರ್ಚ್ 22 ರ ಶನಿವಾರದಂದು ಓಲಾ, ಉಬರ್, ಆಟೋ, ಸಾರಿಗೆ ವ್ಯವಸ್ಥೆಯನ್ನು ನಂಬಿ ರಸ್ತೆಗಿಳಿಯುವ ಮುನ್ನ ಜನರು ಯೋಚಿಸಬೇಕು. ಓಲಾ ಉಬರ್ ಚಾಲಕರು ಮತ್ತು ಮಾಲೀಕರ ಸಂಘದೊಂದಿಗೆ ಕ್ಯಾಬ್ ಚಾಲಕರು ಬಂದ್ಗೆ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ. ಹೀಗಾಗಿ ಯಾವುದಾದರೂ ಕೆಲಸಕ್ಕಾಗಿ ಅಥವಾ ದೈನಂದಿನ ಪ್ರಯಾಣಕ್ಕಾಗಿ ಓಲಾ, ಉಬರ್, ಆಟೋಗಳನ್ನು ಅವಲಂಬಿಸಿಕೊಂಡಿದ್ದರೆ ಸ್ವಂತ ವಾಹನದಲ್ಲಿ ತೆರಳುವುದು ಒಳ್ಳೆಯದು. ಸಾರಿಗೆ ಬಸ್ ಸಂಚಾರ ಇಲ್ಲದ ಕಾರಣ ಇದರಿಂದ ದೂರದ ಊರುಗಳಿಗೆ ತೆರಳುವವರಿಗೆ ಇದರಿಂದ ಸಮಸ್ಯೆಯಾಗಬಹುದು. ಹೀಗಾಗಿ ಬೇರೆ ಜಿಲ್ಲೆಗಳಿಗೆ ತೆರಳುವವರು ಶುಕ್ರವಾರ ಸಂಜೆಯೇ ತೆರಳುವುದು ಉತ್ತಮ.

ಬ್ಯಾಂಕ್ ಗಳು ತೆರೆದಿರುವುದಿಲ್ಲ


ಕರ್ನಾಟಕ ಬಂದ್ ಬಿಸಿ ಬ್ಯಾಂಕ್ ಗಳಿಗೆ ತಟ್ಟುವುದಿಲ್ಲವಾದರೂ ಕೂಡ ಮಾರ್ಚ್ 22 ನಾಲ್ಕನೇ ಶನಿವಾರವಾರ ಕಾರಣ ಬ್ಯಾಂಕ್ ಗಳು ತೆರೆದಿರುವುದಿಲ್ಲ. ಹೀಗಾಗಿ ಜನರು ತಮ್ಮ ಬ್ಯಾಂಕ್ ಕೆಲಸಗಳೇನಾದರೂ ಇದ್ದರೆ ಶುಕ್ರವಾರದೊಳಗೆ ಮಾಡಿ ಮುಗಿಸಿ.

ನ್ಯಾಯ ಬೆಲೆ ಅಂಗಡಿಗಳು ತೆರೆದಿರುತ್ತಾ?


ಪಡಿತರ ಚೀಟಿದಾರರು ಮಾರ್ಚ್ 22 ರಂದು ರೇಷನ್ ಅಕ್ಕಿ ತರಲು ಯೋಚಿಸಿಕೊಂಡಿದ್ದರೆ ಈ ಕೆಲಸವನ್ನು ಇಂದು ನಾಳೆಯೊಳಗೆ ಮುಗಿಸಿಕೊಳ್ಳುವುದು ಒಳ್ಳೆಯದು. ಇದೇ ಶನಿವಾರ ಕರ್ನಾಟಕ ಬಂದ್ ಇರುವ ಕಾರಣ ಈ ಬಂದ್ ಬಿಸಿ ನ್ಯಾಯ ಬೆಲೆ ಅಂಗಡಿಗಳ ಮೇಲೂ ತಟ್ಟಲಿದೆ.

The post ಅಖಂಡ ಕರ್ನಾಟಕ ಮಾರ್ಚ್ 22ಕ್ಕೆ ಬಂದ್. appeared first on Good News 24x7.

]]>