USPresident Archives - Good News 24x7 https://www.goodnews24x7.com/tag/uspresident/ Kannada Sat, 30 Aug 2025 07:44:06 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg USPresident Archives - Good News 24x7 https://www.goodnews24x7.com/tag/uspresident/ 32 32 ಟ್ರಂಪ್‌ ಸುಂಕ ನಿರ್ಧಾರಕ್ಕೆ ಯುಎಸ್‌ ಕೋರ್ಟ್‌ ಛೀಮಾರಿ ! https://www.goodnews24x7.com/us-court-rebukes-trumps-tariff-decision/ Sat, 30 Aug 2025 07:44:06 +0000 https://www.goodnews24x7.com/?p=7006 ಭಾರತ ಸೇರಿ ಹಲವು ದೇಶಗಳ ಮೇಲೆ ಮಿತಿ ಮೀರಿದ ಟ್ಯಾರಿಫ್ ಹೇರಿರುವ ಟ್ರಂಪ್ . ಆಮದು ಸುಂಕ ಕಾನೂನು ಬಾಹಿರ ಎಂದು ಯುಎಸ್‌ ಕೋರ್ಟ್‌ ಹೇಳಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನಿರ್ಧಾರಕ್ಕೆ ಕೋರ್ಟ್‌ ಛೀಮಾರಿ ಹಾಕಿದೆ. ಟ್ರಂಪ್‌ ನಿರ್ಧಾರಕ್ಕೆ ವಾಷಿಂಗ್ಟನ್‌ನ…

The post ಟ್ರಂಪ್‌ ಸುಂಕ ನಿರ್ಧಾರಕ್ಕೆ ಯುಎಸ್‌ ಕೋರ್ಟ್‌ ಛೀಮಾರಿ ! appeared first on Good News 24x7.

]]>

ಭಾರತ ಸೇರಿ ಹಲವು ದೇಶಗಳ ಮೇಲೆ ಮಿತಿ ಮೀರಿದ ಟ್ಯಾರಿಫ್ ಹೇರಿರುವ ಟ್ರಂಪ್ . ಆಮದು ಸುಂಕ ಕಾನೂನು ಬಾಹಿರ ಎಂದು ಯುಎಸ್‌ ಕೋರ್ಟ್‌ ಹೇಳಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನಿರ್ಧಾರಕ್ಕೆ ಕೋರ್ಟ್‌ ಛೀಮಾರಿ ಹಾಕಿದೆ.

ಟ್ರಂಪ್‌ ನಿರ್ಧಾರಕ್ಕೆ ವಾಷಿಂಗ್ಟನ್‌ನ ಫೆಡರಲ್ ಮೇಲ್ಮನವಿ ನ್ಯಾಯಾಲಯ ಆಕ್ಷೇಪ ವ್ಯಕ್ತಪಡಿಸಿದೆ. ಕೆಳ ನ್ಯಾಯಾಲಯದ ತೀರ್ಪನ್ನು ನ್ಯಾಯಾಲಯವು ಅನುಮೋದಿಸಿದ್ದು, ಟ್ರಂಪ್ ವಿಧಿಸಿರುವ ಹೆಚ್ಚಿನ ಆಮದು ಸುಂಕಗಳು ಕಾನೂನುಬಾಹಿರ ಎಂದು ಹೇಳಿದೆ. ಈ ಸಂದರ್ಭದಲ್ಲಿ ಈ ಅಧಿಕಾರವನ್ನು ಬಳಸಲು ಅಧ್ಯಕ್ಷರ ಅಧಿಕಾರವನ್ನು ನ್ಯಾಯಾಲಯವು ಪ್ರಶ್ನಿಸಿದೆ.

ಫೆಡರಲ್ ಮೇಲ್ಮನವಿ ನ್ಯಾಯಾಲಯವು ಅಮೆರಿಕ ಅಧ್ಯಕ್ಷರು ತುರ್ತು ಅಧಿಕಾರಗಳ ದುರುಪಯೋಗದ ಬಗ್ಗೆ ಮಾತನಾಡಿದೆ. 11 ನ್ಯಾಯಾಧೀಶರ ಪೀಠದಲ್ಲಿ, 7 ನ್ಯಾಯಾಧೀಶರು ಟ್ರಂಪ್ ಅವರ ಸುಂಕ ವಿಧಿಸುವ ನಿರ್ಧಾರವನ್ನು ಕಾನೂನುಬಾಹಿರವೆಂದು ಘೋಷಿಸಿದರೆ, 4 ನ್ಯಾಯಾಧೀಶರು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಆದೇಶ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಶ್ವೇತ ಭವನ ನಿರ್ಧರಿಸಿದೆ.

ಇತರೆ ದೇಶಗಳ ಮೇಲೆ ವಿಧಿಸಿರುವ ಎಲ್ಲಾ ಸುಂಕಗಳು ಜಾರಿಯಲ್ಲಿರುತ್ತವೆ. ಒಂದು ವೇಳೆ ಟ್ಯಾರಿಫ್‌ ತೆಗೆದುಹಾಕಿದರೆ, ದೇಶಕ್ಕೆ ಹಾನಿಕಾರಕ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪುನರುಚ್ಚರಿಸಿದ್ದಾರೆ. ‌ಟ್ರಂಪ್ ಅವರ ಹಲವು ಸುಂಕಗಳು ಕಾನೂನುಬಾಹಿರ ಎಂದು ಯುಎಸ್ ನ್ಯಾಯಾಲಯ ತೀರ್ಪು ನೀಡಿದ ಬೆನ್ನಲ್ಲೇ ಟ್ರಂಪ್‌ ಪ್ರತಿಕ್ರಿಯಿಸಿದ್ದಾರೆ.

ಎಲ್ಲಾ ಸುಂಕಗಳು ಇನ್ನೂ ಜಾರಿಯಲ್ಲಿವೆ. ಇಂದು ಅತ್ಯಂತ ಪಕ್ಷಪಾತದ ಮೇಲ್ಮನವಿಗೆ ನ್ಯಾಯಾಲಯವು ನಮ್ಮ ಸುಂಕಗಳನ್ನು ತೆಗೆದುಹಾಕಬೇಕು ಎಂದು ತಪ್ಪಾಗಿ ಹೇಳಿದೆ. ಆದರೆ, ಕೊನೆಯಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ ಗೆಲ್ಲುತ್ತದೆ ಎಂದು ಅವರಿಗೆ ತಿಳಿದಿದೆ. ಈ ಸುಂಕಗಳು ಎಂದಾದರೂ ರದ್ದಾದರೆ, ಅದು ದೇಶಕ್ಕೆ ವಿಪತ್ತು. ಅದು ನಮ್ಮನ್ನು ಆರ್ಥಿಕವಾಗಿ ದುರ್ಬಲಗೊಳಿಸುತ್ತದೆ. ನಾವು ಬಲಿಪಶು ಆಗಬೇಕಾಗುತ್ತದೆ ಎಂದು ಟ್ರಂಪ್ ಟ್ರುತ್ ಸೋಶಿಯಲ್‌ನಲ್ಲಿ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ನಮ್ಮ ತಯಾರಕರು, ರೈತರು ಮತ್ತು ಎಲ್ಲರನ್ನೂ ದುರ್ಬಲಗೊಳಿಸುವ ಅನ್ಯಾಯದ ಸುಂಕಗಳನ್ನು ನಾವು ಒಪ್ಪಲ್ಲ. ಇತರ ದೇಶಗಳು, ಅವರು ಮಿತ್ರರಾಗಿರಲಿ ಅಥವಾ ವೈರಿಯಾಗಿರಲಿ ವಿಧಿಸುವ ಸುಂಕೇತರ ವ್ಯಾಪಾರ ಅಡೆತಡೆಗಳನ್ನು ಅಮೆರಿಕ ಇನ್ಮುಂದೆ ಸಹಿಸುವುದಿಲ್ಲ. ಒಂದು ವೇಳೆ ಈ ನಿರ್ಧಾರವನ್ನು (ಟ್ಯಾರಿಫ್) ತಡೆಯಲು ಮುಂದಾದರೆ, ಅಕ್ಷರಶಃ ಅಮೆರಿಕ ಸಂಯುಕ್ತ ಸಂಸ್ಥಾನವನ್ನು ನಾಶಪಡಿಸಿದಂತೆ ಎಂದು ಟ್ರಂಪ್‌ ಹೇಳಿದ್ದಾರೆ.

ಸುಂಕಗಳು ಕಾರ್ಮಿಕರಿಗೆ ಸಹಾಯ ಮಾಡಲು ಮತ್ತು ‘ಮೇಡ್ ಇನ್ ಅಮೆರಿಕ’ ಉತ್ಪನ್ನಗಳನ್ನು ಉತ್ಪಾದಿಸುವ ಕಂಪನಿಗಳನ್ನು ಬೆಂಬಲಿಸಲು ಅತ್ಯುತ್ತಮ ಸಾಧನವಾಗಿದೆ ಎಂದು ಟ್ರಂಪ್‌ ನಿಲುವು.

ಹಲವು ವರ್ಷಗಳಿಂದ ಕಾಳಜಿಯಿಲ್ಲದ ಮತ್ತು ಅವಿವೇಕದ ರಾಜಕಾರಣಿಗಳು ಸುಂಕಗಳನ್ನು ನಮ್ಮ ವಿರುದ್ಧವೇ ಬಳಸಲು ಅನುಮತಿಸಿದ್ದರು. ಈಗ ಯುನೈಟೆಡ್ ಸ್ಟೇಟ್ಸ್ ಸುಪ್ರೀಂ ಕೋರ್ಟ್ ಸಹಾಯದಿಂದ, ಅವುಗಳನ್ನು ನಮ್ಮ ರಾಷ್ಟ್ರದ ಪ್ರಯೋಜನಕ್ಕಾಗಿ ಬಳಸುತ್ತೇವೆ. ಅಮೆರಿಕವನ್ನು ಮತ್ತೆ ಶ್ರೀಮಂತ, ಬಲಿಷ್ಠ ಮತ್ತು ಶಕ್ತಿಶಾಲಿಯನ್ನಾಗಿ ಮಾಡುತ್ತೇವೆ ಎಂದು ಟ್ರಂಪ್‌ ಪ್ರತಿಜ್ಞೆ ಮಾಡಿದ್ದಾರೆ.

The post ಟ್ರಂಪ್‌ ಸುಂಕ ನಿರ್ಧಾರಕ್ಕೆ ಯುಎಸ್‌ ಕೋರ್ಟ್‌ ಛೀಮಾರಿ ! appeared first on Good News 24x7.

]]>
ಭಾರತದ ಎಲ್ಲ ಆಮದುಗಳ ಮೇಲೆ 24 ಗಂಟೆಗಳಲ್ಲಿ ಸುಂಕ ಗಣನೀಯ ಏರಿಕೆ – ಟ್ರಂಪ್‌ ಬೆದರಿಕೆ! https://www.goodnews24x7.com/tariffs-on-all-indian-imports-to-rise-significantly-in-24-hours-trump-threatens/ Wed, 06 Aug 2025 05:31:05 +0000 https://www.goodnews24x7.com/?p=5394 ಭಾರತ ಯುದ್ಧದ ಯಂತ್ರಕ್ಕೆ ಇಂಧನ ತುಂಬುತ್ತಿದೆ ಎಂದ ಯುಎಸ್‌ ಅಧ್ಯಕ್ಷ ವಾಷಿಂಗ್ಟನ್: ರಷ್ಯಾದಿಂದ (Russia) ಕಚ್ಚಾ ತೈಲ ಖರೀದಿ ವಿಚಾರದಲ್ಲಿ ಭಾರತ ಮತ್ತು ಅಮೆರಿಕ ನಡುವಿನ ವಾಕ್ಸಮರ ತೀವ್ರ ಜೋರಾಗುತ್ತಿದೆ. ಈ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump)…

The post ಭಾರತದ ಎಲ್ಲ ಆಮದುಗಳ ಮೇಲೆ 24 ಗಂಟೆಗಳಲ್ಲಿ ಸುಂಕ ಗಣನೀಯ ಏರಿಕೆ – ಟ್ರಂಪ್‌ ಬೆದರಿಕೆ! appeared first on Good News 24x7.

]]>

ಭಾರತ ಯುದ್ಧದ ಯಂತ್ರಕ್ಕೆ ಇಂಧನ ತುಂಬುತ್ತಿದೆ ಎಂದ ಯುಎಸ್‌ ಅಧ್ಯಕ್ಷ
ವಾಷಿಂಗ್ಟನ್: ರಷ್ಯಾದಿಂದ (Russia) ಕಚ್ಚಾ ತೈಲ ಖರೀದಿ ವಿಚಾರದಲ್ಲಿ ಭಾರತ ಮತ್ತು ಅಮೆರಿಕ ನಡುವಿನ ವಾಕ್ಸಮರ ತೀವ್ರ ಜೋರಾಗುತ್ತಿದೆ. ಈ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಮತ್ತೊಮ್ಮೆ ಭಾರತದ ಆಮದುಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಇದು ಕಳೆದ 2 ದಿನಗಳಲ್ಲಿ 2ನೇ ಬಾರಿಗೆ ಟ್ರಂಪ್‌ ನೀಡಿದ ಬೆದರಿಕೆಯಾಗಿದೆ.

ಭಾರತ ಉತ್ತಮ ಪಾಲುದಾರನಲ್ಲ
ಹೌದು. ಭಾರತವು ನಮ್ಮ ಉತ್ತಮ ವ್ಯಾಪಾರ ಪಾಲುದಾರನಲ್ಲ. ಏಕೆಂದರೆ ಭಾರತ ನಮ್ಮೊಂದಿಗೆ ಬಹಳಷ್ಟು ವ್ಯವಹಾರ ಮಾಡುತ್ತಾರೆ. ಆದ್ರೆ ನಾವು ಅವರೊಂದಿಗೆ ವ್ಯಾಪಾರ ಮಾಡಲ್ಲ. ಆದ್ದರಿಂದ ನಾವು 25 ಪ್ರತಿಶತದಷ್ಟು ಇತ್ಯರ್ಥಪಡಿಸಿಕೊಂಡಿದ್ದೇವೆ. ಆದ್ರೆ ನಾವು ಹೇಳಿದ ಮೇಲೂ ರಷ್ಯಾದಿಂದ ನಿರಂತರವಾಗಿ ತೈಲ ಖರೀದಿ ಮಾಡಲಾಗುತ್ತಿದೆ. ಈ ಮೂಲಕ ಭಾರತ ಯುದ್ಧದ ಯಂತ್ರಕ್ಕೆ ಇಂಧನ ತುಂಬುತ್ತಿದೆ. ಹಾಗಾಗಿ ಮುಂದಿನ 24 ಗಂಟೆಗಳಲ್ಲಿ ಆಮದುಗಳ ಮೇಲೆ ಸುಂಕವನ್ನು (Tariff Threat) ಗಣನೀಯವಾಗಿ ಏರಿಕೆ ಮಾಡುವುದಾಗಿ ಟ್ರಂಪ್‌ ಬೆದರಿಕೆಯೊಡ್ಡಿದ್ದಾರೆ.

ಭಾರತ ಲಾಭ ಮಾಡಿಕೊಳ್ಳುತ್ತಿದೆ
ಒಂದು ದಿನದ ಹಿಂದಷ್ಟೇ ಸುಂಕ ಗಣನೀಯ ಏರಿಕೆ ಕುರಿತು ಟ್ರಂಪ್‌ ಮಾತನಾಡಿದ್ದರು, ಭಾರತ ರಷ್ಯಾದಿಂದ (India-Russia) ದೊಡ್ಡ ಪ್ರಮಾಣದಲ್ಲಿ ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಿದೆ. ಈ ಮೂಲಕ ದೊಡ್ಡ ಪ್ರಮಾಣದಲ್ಲಿ ಲಾಭ ಮಾಡಿಕೊಳ್ಳುತ್ತಿದೆ. ಭಾರತವು ದೊಡ್ಡ ಪ್ರಮಾಣದಲ್ಲಿ ರಷ್ಯಾದ ತೈಲ (Russian Oil) ಮಾತ್ರ ಖರೀದಿಸುತ್ತಿಲ್ಲ, ಖರೀದಿಸಿದ ತೈಲವನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ, ದೊಡ್ಡ ಪ್ರಮಾಣದ ಲಾಭ ಮಾಡಿಕೊಳ್ಳುತ್ತಿದೆ. ರಷ್ಯಾದ ಯುದ್ಧ ಟ್ಯಾಂಕರ್‌ಗಳಿಂದ ಉಕ್ರೇನ್‌ನಲ್ಲಿ ಹಲವು ಜನ ಸಾಯುತ್ತಿದ್ದರೂ ಅವರು ಹೆದರುತ್ತಿಲ್ಲ. ಈ ಕಾರಣದಿಂದಲೇ, ಭಾರತದಿಂದ ಖರೀದಿಸುವ ಎಲ್ಲ ಸರಕುಗಳಿಗೂ ಸುಂಕವನ್ನ ಗಣನೀಯವಾಗಿ ಏರಿಕೆ ಮಾಡಲಾಗುವುದು ಎಂದು ಟ್ರಂಪ್‌ ಎಚ್ಚರಿಕೆ ನೀಡಿದ್ದರು.

ಭಾರತಕ್ಕಿಂತ ಪಾಕ್‌ಗೆ ಕಡಿಮೆ ಸುಂಕ
ಈಗಾಗಲೇ ಆಗಸ್ಟ್‌ 7ರಿಂದ ಅನ್ವಯವಾಗುವಂತೆ `ಭಾರತದಿಂದ ಆಮದು ಮಾಡಿಕೊಳ್ಳುವ ಎಲ್ಲ ಸರಕುಗಳಿಗೂ ಶೇ.25ರಷ್ಟು ಸುಂಕ ವಿಧಿಸುವ ಆದೇಶಕ್ಕೆ ಟ್ರಂಪ್‌ ಸಹಿ ಹಾಕಿದ್ದಾರೆ. ಆದ್ರೆ ಪಾಕಿಸ್ತಾನಕ್ಕೆ 19% ಸುಂಕ ವಿಧಿಸಿದ್ದಾರೆ. ಬೃಹತ್‌ ಪ್ರಮಾಣದಲ್ಲಿ ರಷ್ಯಾದ ಸೇನಾ ಉಪಕರಣಗಳು, ಕಚ್ಚಾ ತೈಲ ಖರೀದಿಸುತ್ತಿರುವ ಭಾರತದ ಮೇಲೆ ದಂಡ ವಿಧಿಸಲಾಗುವುದು ಎಂದು ಹೇಳಿದ್ದರು. ಆದ್ರೆ, ಯಾವ ದಿನಾಂಕದಿಂದ ಈ ನಿರ್ಧಾರ ಜಾರಿಗೆ ಬರಲಿದೆ ಎಂದು ತಿಳಿಸಿರಲಿಲ್ಲ.

2ನೇ ಅತೀ ದೊಡ್ಡ ಖರೀದಿದಾರ
ಭಾರತವು ರಷ್ಯಾದಿಂದ ದೇಶದ ಅಗತ್ಯವಿರುವ ಕಚ್ಚಾತೈಲದ ಪೈಕಿ ಶೇ.35ರಿಂದ 40ರಷ್ಟು ಖರೀದಿಸುತ್ತಿದೆ. ಉಕ್ರೇನ್ ಜೊತೆಗಿನ ಯುದ್ಧ ಆರಂಭಕ್ಕೂ ಮುನ್ನ ಹೋಲಿಸಿದ್ರೆ, ಆಮದು ಪ್ರಮಾಣವು ಶೇ.0.2ರಷ್ಟು ಏರಿಕೆಯಾಗಿದೆ. ರಷ್ಯಾದಿಂದ ಗರಿಷ್ಠ ಪ್ರಮಾಣದ ಕಚ್ಚಾತೈಲ ಖರೀದಿಯಲ್ಲಿ ಚೀನಾ ಮೊದಲ ಸ್ಥಾನದಲ್ಲಿದ್ದರೆ, ಭಾರತವು ನಂತರದ ಸ್ಥಾನದಲ್ಲಿದೆ ಎಂದು ವರದಿಗಳು ತಿಳಿಸಿವೆ.

The post ಭಾರತದ ಎಲ್ಲ ಆಮದುಗಳ ಮೇಲೆ 24 ಗಂಟೆಗಳಲ್ಲಿ ಸುಂಕ ಗಣನೀಯ ಏರಿಕೆ – ಟ್ರಂಪ್‌ ಬೆದರಿಕೆ! appeared first on Good News 24x7.

]]>