UttarPradesh Archives - Good News 24x7 https://www.goodnews24x7.com/tag/uttarpradesh/ Kannada Tue, 23 Jun 2026 07:32:51 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg UttarPradesh Archives - Good News 24x7 https://www.goodnews24x7.com/tag/uttarpradesh/ 32 32 ‘ಅಪ್ಪಾ, ಹೇಗಾದರೂ ಕಾಪಾಡು…’ ಕೊನೆಯ ಕರೆ https://www.goodnews24x7.com/dad-save-me-somehow-students-life-ends-with-last-call/ Tue, 23 Jun 2026 07:32:51 +0000 https://www.goodnews24x7.com/?p=9636 ಲಕ್ನೋದಲ್ಲಿನ ಕೋಚಿಂಗ್ ಸೆಂಟರ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಮೃ*ತಪಟ್ಟವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಪ್ರಾ*ಣ ಉಳಿಸಿಕೊಳ್ಳಲು ಕಟ್ಟಡದಿಂದ ಜಿಗಿದ ವಿದ್ಯಾರ್ಥಿಗಳಿಗೂ ತೀವ್ರ ಗಾಯಗಳಾಗಿವೆ ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ…

The post ‘ಅಪ್ಪಾ, ಹೇಗಾದರೂ ಕಾಪಾಡು…’ ಕೊನೆಯ ಕರೆ appeared first on Good News 24x7.

]]>

ಲಕ್ನೋದಲ್ಲಿನ ಕೋಚಿಂಗ್ ಸೆಂಟರ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಮೃ*ತಪಟ್ಟವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಪ್ರಾ*ಣ ಉಳಿಸಿಕೊಳ್ಳಲು ಕಟ್ಟಡದಿಂದ ಜಿಗಿದ ವಿದ್ಯಾರ್ಥಿಗಳಿಗೂ ತೀವ್ರ ಗಾಯಗಳಾಗಿವೆ

ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸಂತಾಪ ವ್ಯಕ್ತಪಡಿಸಿದ್ದು, ಮೃ*ತರ ಕುಟುಂಬಗಳಿಗೆ ಪರಿಹಾರ ಘೋಷಿಸಿದ್ದಾರೆ.

ಇದೇ ವೇಳೆ ಅಗ್ನಿ ದುರಂತದಲ್ಲಿ ಮೃ*ತಪಟ್ಟ ವಿದ್ಯಾರ್ಥಿಗಳ ಕರುಣಾಜನಕ ಕಥೆಗಳು ಬೆಳಕಿಗೆ ಬರುತ್ತಿವೆ.

23 ವರ್ಷದ ವಿದ್ಯಾರ್ಥಿ ಸುಖಮಣಿ ಸಿಂಗ್, ಬೆಂಕಿಯ ಕೆನ್ನಾಲಿಗೆಯಲ್ಲಿ ಸಿಲುಕಿದ್ದ ವೇಳೆ ತನ್ನ ತಂದೆ ಪ್ರಭಜೋತ್ ಸಿಂಗ್ ಅವರಿಗೆ ಕರೆ ಮಾಡಿ, “ಅಪ್ಪಾ, ಹೇಗಾದರೂ ಮಾಡಿ ನನ್ನನ್ನು ಕಾಪಾಡಿ. ಸುತ್ತಲೂ ಬೆಂಕಿಯೇ ಕಾಣುತ್ತಿದೆ. ಹೊರಗೆ ಬರಲು ದಾರಿಯೇ ಇಲ್ಲ” ಎಂದು ಅಳುತ್ತಾ ಸಹಾಯ ಕೋರಿದ್ದಾನೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ತಂದೆ ಮಗನಿಗೆ ಧೈರ್ಯ ತುಂಬಲು ಪ್ರಯತ್ನಿಸುತ್ತಿದ್ದಂತೆಯೇ ಸಂಪರ್ಕ ಕಡಿತಗೊಂಡಿದೆ

The post ‘ಅಪ್ಪಾ, ಹೇಗಾದರೂ ಕಾಪಾಡು…’ ಕೊನೆಯ ಕರೆ appeared first on Good News 24x7.

]]>
ಕೋಳಿ ಸಾರು ಮಾಡ್ಲಿಲ್ಲ ಅಂತಾ ಪತ್ನಿ ಹಲ್ಲೆ; ಪತ್ನಿ ಕಳ್ಕೊಂಡು ಜೈಲು ಸೇರಿದ ಪತಿ https://www.goodnews24x7.com/wife-attacked-for-not-making-chicken-soup-husband-goes-to-jail-after-losing-wife/ Sun, 14 Sep 2025 11:04:58 +0000 https://www.goodnews24x7.com/?p=7541 ಇತ್ತೀಚೆಗೆ ಗಂಡ-ಹೆಂಡತಿ ಸಣ್ಣ, ಸಣ್ಣ ವಿಷಯಗಳಿಗೂ ಬೇರ್ಪಟ್ಟು ನೆಕ್ಸ್ಟ್​ ಲೇವೆಲ್​​​ಗೆ ಹೋಗ್ತಾರೆ. ಅಂತೆಯೇ ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಕೋಳಿ ಸಾರು ಮಾಡದಿದ್ದಕ್ಕೆ ಕೋಪಿಸಿಕೊಂಡ ಪತಿ ಆಕೆಯ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ಇದರಿಂದಾಗಿ ಆಕೆ ಜೀವವನ್ನೇ…

The post ಕೋಳಿ ಸಾರು ಮಾಡ್ಲಿಲ್ಲ ಅಂತಾ ಪತ್ನಿ ಹಲ್ಲೆ; ಪತ್ನಿ ಕಳ್ಕೊಂಡು ಜೈಲು ಸೇರಿದ ಪತಿ appeared first on Good News 24x7.

]]>

ಇತ್ತೀಚೆಗೆ ಗಂಡ-ಹೆಂಡತಿ ಸಣ್ಣ, ಸಣ್ಣ ವಿಷಯಗಳಿಗೂ ಬೇರ್ಪಟ್ಟು ನೆಕ್ಸ್ಟ್​ ಲೇವೆಲ್​​​ಗೆ ಹೋಗ್ತಾರೆ. ಅಂತೆಯೇ ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಆಘಾತಕಾರಿ ಘಟನೆ ನಡೆದಿದೆ.

ಕೋಳಿ ಸಾರು ಮಾಡದಿದ್ದಕ್ಕೆ ಕೋಪಿಸಿಕೊಂಡ ಪತಿ ಆಕೆಯ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ಇದರಿಂದಾಗಿ ಆಕೆ ಜೀವವನ್ನೇ ಕಳೆದುಕೊಂಡಿದ್ದಾಳೆ. ಕೊನೆಗೆ ಪ್ರಕರಣವನ್ನು ಮುಚ್ಚಿ ಹಾಕಲು ಆರೋಪಿ ನದಿಗೆ ಎಸೆದು ಬಂದಿದ್ದ. ಕಳೆದ ಆಗಸ್ಟ್​​ನಲ್ಲಿಯೇ ಘಟನೆ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ.

ಆಗಿದ್ದೇನು..?
ರೀನಾ ಎಂಬ 21 ವರ್ಷದ ಹುಡುಗಿ ನಿಗಮ್ ಎಂಬಾತನ ಮದುವೆ ಆಗಿದ್ದಳು. ಕಳೆದ ಆಗಸ್ಟ್ 21 ರಂದು ನಿಗಮ್ ಮನೆಗೆ ಮದ್ಯ ಸೇವಿಸಿ ಬಂದಿದ್ದ. ಬರುವಾಗ ಚಿಕನ್ ತೆಗೆದುಕೊಂಡು ಬಂದಿದ್ದ. ಚಿಕನ್ ತಂದಿದ್ದ ಆತ, ಪತ್ನಿ ಕೋಳಿ ಸಾರು ಮಾಡುತ್ತಾಳೆ ಅಂದುಕೊಂಡಿದ್ದ. ಆದರೆ ಆಕೆ, ಮುಂಚೆಯೇ ಸಾಂಬರ್​​ಗೆ ತಯಾರಿ ಮಾಡಿದ್ದರಿಂದ ತರಕಾರಿ ಸಾರು ಮಾಡಿದ್ದಳು. ಇದರಿಂದ ಕೋಪಿಸಿಕೊಂಡು ಆತ, ರೀನಾ ಮೇಲೆ ಹಲ್ಲೆ ಮಾಡಿದ್ದಾನೆ.
ಗಂಡನ ಹಲ್ಲೆಯಿಂದ ಮನನೊಂದ ರೀನಾ ದುಡುಕಿ ನಿರ್ಧಾರಕ್ಕೆ ಬಂದು ನೇಣು ಬಿಗಿದುಕೊಂಡಿದ್ದಾಳೆ. ಹೆಂಡತಿ ಮೃತಪಟ್ಟಿರೋದು ಗೊತ್ತಾಗುತ್ತಿದ್ದಂತೆಯೇ ನಿಗಮ್ ಭಯಭೀತನಾದ. ನಂತರ ಸಂಬಂಧಿಕರ ಸಹಾಯದಿಂದ ರೀನಾಳ ಮೃತ ದೇಹವನ್ನು ಗಂಗಾ ನದಿಗೆ ಎಸೆದು ಬಂದಿದ್ದ. ನಂತರ ಪೊಲೀಸ್ ಠಾಣೆಗೆ ಹೋಗಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದ.

ತನಿಖೆಯಲ್ಲಿ ಸತ್ಯ ಬಯಲು
ಪೊಲೀಸರು ತನಿಖೆ ನಡೆಸಿದಾಗ ಸತ್ಯ ಹೊರಬಿದ್ದಿದೆ. ಮಿಸ್ಸಿಂಗ್ ಕೇಸ್ ದಾಖಲಾಗುತ್ತಿದ್ದಂತೆಯೇ ರೀನಾಳ ಕುಟುಂಬಸ್ಥರು ನಿಗಮ್ ವಿರುದ್ಧ ವರದಕ್ಷಿಣೆ ಮತ್ತು ಕಿರುಕುಳ ಕೇಸ್ ದಾಖಲಿಸಿದ್ದರು. ನಂತರ ಅಧಿಕಾರಿಗಳು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಅಸಲಿ ವಿಚಾರ ಗೊತ್ತಾಗಿದೆ.

The post ಕೋಳಿ ಸಾರು ಮಾಡ್ಲಿಲ್ಲ ಅಂತಾ ಪತ್ನಿ ಹಲ್ಲೆ; ಪತ್ನಿ ಕಳ್ಕೊಂಡು ಜೈಲು ಸೇರಿದ ಪತಿ appeared first on Good News 24x7.

]]>
ಸೊಸೆಗೆ ಬೆಂಕಿ ಹಚ್ಚಿ ಜೀವ ತೆಗೆದ ಅತ್ತೆ, ಮಾವ, ಗಂಡ.. https://www.goodnews24x7.com/mother-in-law-father-in-law-husband-set-daughter-in-law-on-fire/ Sun, 24 Aug 2025 05:16:56 +0000 https://www.goodnews24x7.com/?p=6601 ಲಕ್ನೋ: ನಿಕ್ಕಿ ಎನ್ನುವ ಮಹಿಳೆ ಜೀವ ಕಳೆದುಕೊಂಡವರು. ಈಕೆಯ ಗಂಡ ವಿಪಿನ್​ ಅನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಘಟನೆಯ ನಂತರ ನಾಪತ್ತೆ ಆಗಿರುವ ಮಾವ, ಅತ್ತೆ ಮತ್ತು ಸೋದರ ಮಾವ ಈ ಮೂವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ವರದಕ್ಷಿಣೆಗಾಗಿ ಅತ್ತೆ, ಮಾವ…

The post ಸೊಸೆಗೆ ಬೆಂಕಿ ಹಚ್ಚಿ ಜೀವ ತೆಗೆದ ಅತ್ತೆ, ಮಾವ, ಗಂಡ.. appeared first on Good News 24x7.

]]>

ಲಕ್ನೋ: ನಿಕ್ಕಿ ಎನ್ನುವ ಮಹಿಳೆ ಜೀವ ಕಳೆದುಕೊಂಡವರು. ಈಕೆಯ ಗಂಡ ವಿಪಿನ್​ ಅನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಘಟನೆಯ ನಂತರ ನಾಪತ್ತೆ ಆಗಿರುವ ಮಾವ, ಅತ್ತೆ ಮತ್ತು ಸೋದರ ಮಾವ ಈ ಮೂವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ವರದಕ್ಷಿಣೆಗಾಗಿ ಅತ್ತೆ, ಮಾವ ಹಾಗೂ ಗಂಡ ಸೇರಿ ಸೊಸೆಗೆ ಮನ ಬಂದಂತೆ ಹೊಡೆದು ಮನೆಯಲ್ಲೇ ಬೆಂಕಿ ಹಚ್ಚಿ ಜೀವ ತೆಗೆದಿರುವ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. ಈಕೆಯ ಗಂಡ ವಿಪಿನ್​ ಅನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಘಟನೆಯ ನಂತರ ನಾಪತ್ತೆ ಆಗಿರುವ ರೋಹಿತ್ (ಮಾವ), ದಯಾ (ಅತ್ತೆ) ಮತ್ತು ಸತ್ವೀರ್​ (ಸೋದರ ಮಾವ) ಈ ಮೂವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಮಹಿಳೆ ನಿಕ್ಕಿ ಹಾಗೂ ಈಕೆಯ ಸಹೋದರಿ ಕಾಂಚಾಣ ಇಬ್ಬರು ಒಂದೇ ಮನೆಗೆ ಸೊಸೆಯಾಗಿದ್ದರು. ನಿಕ್ಕಿ ಹಾಗೂ ವಿಪಿನ್ 2016ರಲ್ಲಿ ಹರಿಯಾಣದ ಸಿರ್ಸಾದಲ್ಲಿ ಮದುವೆಯಾಗಿದ್ದರು. ಆದರೆ ಮದುವೆಯಲ್ಲಿ ವರದಕ್ಷಿಣೆಯಾಗಿ ಎಸ್​ಯುವಿ ಕಾರು, ಬೆಲೆಬಾಳುವ ಚಿನ್ನಾಭರಣಗಳನ್ನು ನೀಡಲಾಗಿತ್ತು. ಆದರೂ ವರದಕ್ಷಿಣೆಗಾಗಿ ಇಬ್ಬರಿಗೂ ಗಂಡನ ಮನೆಯವರು ಹೊಡೆಯುತ್ತಿದ್ದರು.

ತವರಿನಿಂದ ಹಣ ತರುವಂತೆ ಮನೆಯಲ್ಲಿ ನಿರಂತರ ಹಿಂಸೆ ಕೊಡುತ್ತಿದ್ದರು. ಹೀಗಾಗಿಯೇ ಮತ್ತೊಂದು ಕಾರನ್ನು ಕೂಡ ನೀಡಲಾಗಿತ್ತು ಎಂದು ಹೇಳಲಾಗಿದೆ. ಆದರೂ ಗಂಡನ ಮನೆಯವರ ವರದಕ್ಷಿಣೆಯ ಆಸೆ ನಿರಂತರವಾಗಿದ್ದರಿಂದ ಮನೆಯಲ್ಲಿ ಹೆಂಡತಿ ಜೊತೆ ವಿಪಿನ್ ಜಗಳ ತೆಗೆದು ಹೊಡೆದಿದ್ದಾನೆ. ಇದಕ್ಕೆ ಗಂಡನ ಪೋಷಕರು ಸಾಥ್ ಕೊಟ್ಟಿದ್ದಾರೆ. ಅದರಂತೆ ಗಂಡ ಹೊಡೆದು, ಕೋಪದಲ್ಲಿ ಹೆಂಡತಿಗೆ ಬೆಂಕಿ ಹಚ್ಚಿಬಿಟ್ಟಿದ್ದಾನೆ. ರಕ್ಷಣೆಗಾಗಿ ಬೆಂಕಿಯಲ್ಲೇ ಮಹಿಳೆ ಚೀರಾಡಿದ್ದಾಳೆ. ಈ ವೇಳೆ ಈಕೆಯ ಸಹೋದರಿಯನ್ನ ಹೊರಗಾಕಲಾಗಿತ್ತು. ಇದನ್ನು ನೋಡಿ ಸಹೋದರಿ ತೀವ್ರ ಭಯದಿಂದ ಕೂಗಿದ್ದಾಳೆ.

ತಕ್ಷಣ ಸ್ಥಳೀಯರು ಬಂದು ಮನೆ ಒಳಗೆ ತೀವ್ರ ಸುಟ್ಟ ಗಾಯಗಳಿಂದ ಬಿದ್ದಿದ್ದ ಮಹಿಳೆಯನ್ನ ರಕ್ಷಣೆ ಮಾಡಿ, ಗ್ರೇಟರ್ ನೋಯ್ಡಾದ ಫೋರ್ಟಿಸ್ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ ದಾರಿ ಮಧ್ಯೆಯೇ ಮಹಿಳೆ ಜೀವ ಬಿಟ್ಟಿದ್ದಾಳೆ. ಸದ್ಯ ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರ ಮಾಡಲಾಗಿದೆ. ಈ ಬಗ್ಗೆ ಮಾತನಾಡಿರುವ ನಿಕ್ಕಿಯ ಸಹೋದರಿ ಕಾಂಚಾಣ, ನನ್ನ ಸಹೋದರಿಗೆ ಆಕೆಯ ಗಂಡ ಮನಬಂದಂತೆ ಥಳಿಸಿದ್ದರಿಂದ ಪ್ರಜ್ಞೆ ತಪ್ಪಿ ಬಿದ್ದಿದ್ದಾಗ ವಿಪಿನ್ ಬೆಂಕಿ ಹಚ್ಚಿದ್ದಾನೆ. ವರದಕ್ಷಿಣೆಗಾಗಿ ನಮಗೆ ಹಿಂಸಿಸುತ್ತಿದ್ದರು. ಮದುವೆಯಲ್ಲಿ ಬ್ರ್ಯಾಂಡೆಡ್​​ ಎಸ್​ಯುವಿ ಕಾರು ಹಾಗೂ ಬೆಲೆಬಾಳುವ ಚಿನ್ನಾಭರಣಗಳನ್ನ ನೀಡಲಾಗಿದೆ. ಆದರೂ ನಿಕ್ಕಿ ಕಡೆಯವರು ಇನ್ನು ಬೇಕು ಎನ್ನುತ್ತಿದ್ದರು. ಮದುವೆ ನಂತರವೂ 35 ಲಕ್ಷ ರೂಪಾಯಿಗೆ ಡಿಮ್ಯಾಂಡ್ ಮಾಡಿದ್ದರು ಎಂದಿದ್ದಾಳೆ. ಇದರ ಬದಲಿಗೆ ಮತ್ತೊಂದು ಕಾರನ್ನು ಇವರಿಗೆ ನೀಡಲಾಗಿತ್ತು. ಆದರೂ ಅವರ ಕಿರುಕುಳ, ಹಿಂಸೆ ನಿರಂತರವಾಗಿತ್ತು. ನಾನು ಸ್ಥಳದಲ್ಲೇ ಇದ್ದರೂ ಸಹೋದರಿಯನ್ನ ಉಳಿಸಿಕೊಳ್ಳಲು ಆಗಲಿಲ್ಲ. ಇಬ್ಬರು ಒಂದೇ ಬಾರಿ ಮದುವೆ ಆಗಿದ್ದೇವು. ಸ್ಥಳೀಯರ ಸಹಾಯದಿಂದ ನಿಕ್ಕಿಯನ್ನ ಆಸ್ಪತ್ರೆಗೆ ಕರೆದುಕೊಂಡು ಬಂದೇವು ಎಂದು ಕಾಂಚಾಣ ಹೇಳಿದ್ದಾರೆ.

ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ನಿಕ್ಕಿ ಅವರ ಮಗು ಹೇಳಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಪ್ಪನೇ ಮಮ್ಮಿಗೆ ಬೆಂಕಿ ಹಚ್ಚಿ ಜೀವ ತೆಗೆದಿದ್ದಾನೆ ಎಂದು ಮಗು ಹೇಳಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ವಿಪಿನ್ ಹಾಗೂ ಅವರ ಮನೆಯವರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಇನ್ನು ಸ್ಥಳೀಯರು ಕೂಡ ಆ ಕುಟುಂಬದ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ ಎನ್ನಲಾಗಿದೆ.

The post ಸೊಸೆಗೆ ಬೆಂಕಿ ಹಚ್ಚಿ ಜೀವ ತೆಗೆದ ಅತ್ತೆ, ಮಾವ, ಗಂಡ.. appeared first on Good News 24x7.

]]>
ಇದ್ದಕ್ಕಿದ್ದಂತೆ ಬ್ಯಾಂಕ್ ಖಾತೆಗೆ ಕೋಟ್ಯಂತರ ರೂ. ಹಣ ಬಂದರೆ ಏನು ಮಾಡಬೇಕು? https://www.goodnews24x7.com/what-to-do-if-crores-of-rupees-suddenly-come-into-your-bank-account/ Thu, 07 Aug 2025 06:59:47 +0000 https://www.goodnews24x7.com/?p=5496 ನಿಮ್ಮ ಖಾತೆಗೆ ಇದ್ದಕ್ಕಿದ್ದಂತೆ ಕೋಟ್ಯಂತರ ರೂಪಾಯಿ ಬಂದರೆ, ನೀವು ಅದನ್ನು ಖರ್ಚು ಮಾಡಬಾರದು ಅಥವಾ ಎಲ್ಲಿಗೂ ವರ್ಗಾಯಿಸಬಾರದು. ವಾಸ್ತವವಾಗಿ, ಇಂದಿನ ಡಿಜಿಟಲ್ ಯುಗದಲ್ಲಿ, ಪ್ರತಿಯೊಂದು ವಹಿವಾಟನ್ನು ದಾಖಲಿಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಅಪರಿಚಿತ ಮೊತ್ತವನ್ನು ತಿರುಚಿದರೆ, ಬ್ಯಾಂಕ್ ಅಥವಾ ತನಿಖಾ ಸಂಸ್ಥೆಗಳು…

The post ಇದ್ದಕ್ಕಿದ್ದಂತೆ ಬ್ಯಾಂಕ್ ಖಾತೆಗೆ ಕೋಟ್ಯಂತರ ರೂ. ಹಣ ಬಂದರೆ ಏನು ಮಾಡಬೇಕು? appeared first on Good News 24x7.

]]>

ನಿಮ್ಮ ಖಾತೆಗೆ ಇದ್ದಕ್ಕಿದ್ದಂತೆ ಕೋಟ್ಯಂತರ ರೂಪಾಯಿ ಬಂದರೆ, ನೀವು ಅದನ್ನು ಖರ್ಚು ಮಾಡಬಾರದು ಅಥವಾ ಎಲ್ಲಿಗೂ ವರ್ಗಾಯಿಸಬಾರದು. ವಾಸ್ತವವಾಗಿ, ಇಂದಿನ ಡಿಜಿಟಲ್ ಯುಗದಲ್ಲಿ, ಪ್ರತಿಯೊಂದು ವಹಿವಾಟನ್ನು ದಾಖಲಿಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಅಪರಿಚಿತ ಮೊತ್ತವನ್ನು ತಿರುಚಿದರೆ, ಬ್ಯಾಂಕ್ ಅಥವಾ ತನಿಖಾ ಸಂಸ್ಥೆಗಳು ಅದನ್ನು ಸುಲಭವಾಗಿ ಟ್ರ್ಯಾಕ್ ಮಾಡಬಹುದು.

ಮಂಗಳವಾರ, ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ಡಂಕೌರ್‌ನಲ್ಲಿ ಮೃತ ಮಹಿಳೆಯೊಬ್ಬರ ಖಾತೆಗೆ ಕೋಟ್ಯಂತರ ರೂಪಾಯಿಗಳು ಇದ್ದಕ್ಕಿದ್ದಂತೆ ಬಂದಿವೆ ಎಂಬ ಸಂದೇಶವು ಸಂಚಲನ ಮೂಡಿಸಿತು. ಇಂತಹ ಹಲವು ಪ್ರಕರಣಗಳು ಈ ಹಿಂದೆಯೂ ಸುದ್ದಿಯಾಗಿವೆ. ಒಂದು ದಿನ ನೀವು ಎಚ್ಚರಗೊಂಡು ನಿಮ್ಮ ಖಾತೆಯಲ್ಲಿ ಕೋಟ್ಯಂತರ ರೂಪಾಯಿಗಳು ಜಮಾ ಆಗಿವೆ ಎಂದು ಕಂಡುಕೊಂಡರೆ, ನೀವು ಏನು ಮಾಡುತ್ತೀರಿ?. ನೀವು ಎದ್ದು ಶಾಪಿಂಗ್‌ಗೆ ಹೋಗುತ್ತೀರಾ ಅಥವಾ ಹಣವನ್ನು ನಿಮ್ಮ ಬೇರೆ ಯಾವುದಾದರೂ ಖಾತೆಗೆ ವರ್ಗಾಯಿಸುತ್ತೀರಾ? ನೀವು ಈ ರೀತಿಯ ಏನಾದರೂ ಮಾಡಲು ಯೋಚಿಸಿದರೆ, ತಪ್ಪಿಯೂ ಈರೀತಿ ಮಾಡಬಾರದು. ಹೀಗೆ ಮಾಡುವುದರಿಂದ ನೀವು ಕಾನೂನು ತೊಂದರೆಗೆ ಸಿಲುಕಬಹುದು ಮತ್ತು ನೀವು ಜೈಲಿಗೆ ಹೋಗಬೇಕಾಗಬಹುದು.

ನಾವು ನಿಮಗೆ ಮೊದಲೇ ಹೇಳಿದಂತೆ, ನಿಮ್ಮ ಖಾತೆಗೆ ಇದ್ದಕ್ಕಿದ್ದಂತೆ ಕೋಟ್ಯಂತರ ರೂಪಾಯಿ ಬಂದರೆ, ನೀವು ಅದನ್ನು ಖರ್ಚು ಮಾಡಬಾರದು ಅಥವಾ ಎಲ್ಲಿಗೂ ವರ್ಗಾಯಿಸಬಾರದು. ವಾಸ್ತವವಾಗಿ, ಇಂದಿನ ಡಿಜಿಟಲ್ ಯುಗದಲ್ಲಿ, ಪ್ರತಿಯೊಂದು ವಹಿವಾಟನ್ನು ದಾಖಲಿಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಅಪರಿಚಿತ ಮೊತ್ತವನ್ನು ತಿರುಚಿದರೆ, ಬ್ಯಾಂಕ್ ಅಥವಾ ತನಿಖಾ ಸಂಸ್ಥೆಗಳು ಅದನ್ನು ಸುಲಭವಾಗಿ ಟ್ರ್ಯಾಕ್ ಮಾಡಬಹುದು.

ನಿಮ್ಮ ಖಾತೆಗೆ ಅಪರಿಚಿತ ಮೊತ್ತ ಜಮಾ ಆಗಿದ್ದರೆ, ನಿಮ್ಮ ಬ್ಯಾಂಕಿನ ಅಧಿಕೃತ ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್‌ನಲ್ಲಿರುವ “ಸಹಾಯ/ಬೆಂಬಲ” ಅಥವಾ “ವಿವಾದ/ಅನಧಿಕೃತ ವಹಿವಾಟು” ವಿಭಾಗಕ್ಕೆ ಹೋಗಿ ದೂರು ದಾಖಲಿಸಿ. ನಿಮ್ಮ ದೂರಿನಲ್ಲಿ ವಹಿವಾಟು ಐಡಿಯನ್ನು ಹಾಕಲು ಮರೆಯಬೇಡಿ, ಇದರಿಂದ ಬ್ಯಾಂಕ್ ವಹಿವಾಟನ್ನು ತನಿಖೆ ಮಾಡಬಹುದು. ಅಥವಾ ನೀವು ನೇರವಾಗಿ ಬ್ಯಾಂಕ್‌ಗೆ ಹೋಗುವ ಮೂಲಕ ದೂರು ನೀಡಬಹುದು. ಆದಾಗ್ಯೂ, ನಿಮ್ಮ ಸ್ಪಷ್ಟೀಕರಣಕ್ಕಾಗಿ ಬ್ಯಾಂಕ್‌ಗೆ ಅಧಿಕೃತ ಇಮೇಲ್ ಕಳುಹಿಸುವುದು ಉತ್ತಮ.

ಆರ್‌ಬಿಐ ಪೋರ್ಟಲ್‌ನಲ್ಲಿ ದೂರು ದಾಖಲಿಸಿ
ನೀವು ಅಪರಿಚಿತ ಮೊತ್ತದ ತನಿಖೆ ನಡೆಸುವಾಗ ಕಾನೂನು ತೊಂದರೆಗೆ ಸಿಲುಕಲು ಬಯಸದಿದ್ದರೆ, ಆರ್‌ಬಿಐನ ಅಧಿಕೃತ ವೆಬ್‌ಸೈಟ್ https://cms.rbi.org.in ಗೆ ಹೋಗಿ “ದೂರು ಸಲ್ಲಿಸಿ” ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ದೂರನ್ನು ಸಲ್ಲಿಸಿ. ದೂರು ಸಲ್ಲಿಸಿದ ನಂತರ, ನಿಮಗೆ ದೂರು ಉಲ್ಲೇಖ ಸಂಖ್ಯೆ ಸಿಗುತ್ತದೆ, ಅದನ್ನು ನೀವು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು. ನೀವು ಸುರಕ್ಷಿತವಾಗಿರಲು ಅಪರಿಚಿತ ಮೊತ್ತವನ್ನು ತನಿಖೆ ಮಾಡುವ ಏಜೆನ್ಸಿಗೆ ನಿಮ್ಮ ಉದ್ದೇಶವನ್ನು ತೋರಿಸಲು ನೀವು ಭವಿಷ್ಯದಲ್ಲಿ ಇದನ್ನು ಬಳಸಬಹುದು.

ನಿಮ್ಮ ಎಲ್ಲಾ ಬ್ಯಾಂಕಿಂಗ್ ಮತ್ತು UPI ಪಾಸ್‌ವರ್ಡ್‌ಗಳನ್ನು ಬದಲಾಯಿಸಿ
ಹಲವು ಬಾರಿ ನಿಮ್ಮ ಖಾತೆಯು ಹ್ಯಾಕಿಂಗ್ ಅಥವಾ ಆಕಸ್ಮಿಕ ಹಣ ವರ್ಗಾವಣೆಯಂತಹ ಘಟನೆಗಳಿಗೆ ಗುರಿಯಾಗಬಹುದು. ಅಂತಹ ಸಂದರ್ಭದಲ್ಲಿ, ಯಾವುದೇ ಅಪರಿಚಿತ ಮೊತ್ತವು ನಿಮ್ಮ ಖಾತೆಗೆ ಬಂದರೆ, ನಿಮ್ಮ ಎಲ್ಲಾ ಬ್ಯಾಂಕಿಂಗ್ ಅಪ್ಲಿಕೇಶನ್‌ಗಳು, ನೆಟ್ ಬ್ಯಾಂಕಿಂಗ್ ಮತ್ತು UPI ಗಳ ಪಾಸ್‌ವರ್ಡ್‌ಗಳನ್ನು ಬದಲಾಯಿಸಿ. ಇದರ ಹೊರತಾಗಿ, ಈ ಎಲ್ಲಾ ಸೇವೆಗಳಿಗೆ ಎರಡು ಅಂಶಗಳ ದೃಢೀಕರಣವನ್ನು ಆನ್ ಮಾಡುವುದನ್ನು ಖಚಿತಪಡಿಸಿಕೊಳ್ಳಿ. ಹೀಗೆ ಮಾಡುವುದರಿಂದ, ನಿಮ್ಮ ಯಾವುದೇ ಖಾತೆಗಳನ್ನು ಹ್ಯಾಕ್ ಮಾಡುವ ಪ್ರಯತ್ನ ನಡೆದರೆ, ಅದು ವಿಫಲವಾಗುತ್ತದೆ.

ಸೈಬರ್ ಅಪರಾಧ ಪೋರ್ಟಲ್​ನಲ್ಲಿ ವರದಿ ಮಾಡಿ
ನಿಮ್ಮ ಖಾತೆಯು ಸೈಬರ್ ದಾಳಿ ಅಥವಾ ಹ್ಯಾಕಿಂಗ್ ಅಪಾಯದಲ್ಲಿದೆ ಎಂದು ನೀವು ಭಾವಿಸಿದರೆ, ನೀವು ಅದನ್ನು https://cybercrime.gov.in ನಲ್ಲಿ ವರದಿ ಮಾಡಬಹುದು. ಇದಕ್ಕಾಗಿ, ನೀವು ವೆಬ್‌ಸೈಟ್‌ಗೆ ಹೋಗಿ ‘‘ಇತರೆ ಸೈಬರ್ ಅಪರಾಧ ವರದಿ ಮಾಡಿ’’ ವಿಭಾಗದಲ್ಲಿ ನಿಮ್ಮ ಪ್ರಕರಣವನ್ನು ನೋಂದಾಯಿಸಬಹುದು. ಇದು ವಂಚನೆ ಅಥವಾ ನಿಮ್ಮ ಮಾಹಿತಿಯನ್ನು ಕದ್ದಿದೆ ಎಂದು ನೀವು ಭಾವಿಸಿದರೆ, ಆನ್‌ಲೈನ್ ಫಾರ್ಮ್ ಮೂಲಕವೂ FIR ಅಥವಾ NCR ಅನ್ನು ದಾಖಲಿಸಬಹುದು.

ಮೃತ ವ್ಯಕ್ತಿಯ ಖಾತೆಯನ್ನು ಮುಚ್ಚಿ
ಬ್ಯಾಂಕಿಗೆ ಬಂದಿರುವ ಅಪರಿಚಿತ ಮೊತ್ತದ ಇತ್ತೀಚಿನ ಪ್ರಕರಣವು ಮೃತ ಮಹಿಳೆಗೆ ಸಂಬಂಧಿಸಿದೆ. ಅಂತಹ ಪರಿಸ್ಥಿತಿಯಲ್ಲಿ, ವ್ಯಕ್ತಿಯ ಮರಣದ ನಂತರ ಅವರ ಬ್ಯಾಂಕ್ ಖಾತೆ ಮತ್ತು UPI ಅನ್ನು ಮುಚ್ಚುವುದು ಮುಖ್ಯವಾಗಿದೆ. ಇದನ್ನು ಮಾಡದಿದ್ದರೆ, ವಂಚನೆ ಅಥವಾ ಹವಾಲಾದಂತಹ ಗಂಭೀರ ಅಪರಾಧಗಳಿಗೆ ಮೃತ ಖಾತೆಗಳನ್ನು ಬಳಸಬಹುದು. ಭವಿಷ್ಯದಲ್ಲಿ ಕಾನೂನು ಮತ್ತು ಸೈಬರ್ ಭದ್ರತಾ ಬೆದರಿಕೆಗಳನ್ನು ತಪ್ಪಿಸಲು, ಒಬ್ಬ ವ್ಯಕ್ತಿ ಸತ್ತ ತಕ್ಷಣ, ಅವರ ಬ್ಯಾಂಕ್ ಮತ್ತು UPI ಖಾತೆಗಳನ್ನು ಅಧಿಕೃತ ಪ್ರಕ್ರಿಯೆಯ ಪ್ರಕಾರ ಮುಚ್ಚಬೇಕು

The post ಇದ್ದಕ್ಕಿದ್ದಂತೆ ಬ್ಯಾಂಕ್ ಖಾತೆಗೆ ಕೋಟ್ಯಂತರ ರೂ. ಹಣ ಬಂದರೆ ಏನು ಮಾಡಬೇಕು? appeared first on Good News 24x7.

]]>
ಪ್ರಯಾಗರಾಜ್ ನಲ್ಲಿ ಉಕ್ಕಿ ಹರಿದ ಗಂಗಾ, ಯಮುನಾ ನದಿಗಳು, ಉತ್ತರ ಭಾರತದಲ್ಲಿ ವರುಣ ಮೃದಂಗ.. ಜಲ ಪ್ರವಾಹ! https://www.goodnews24x7.com/ganga-yamuna-rivers-overflow-in-prayagraj-varuna-mridangam-in-north-india-floods/ Tue, 05 Aug 2025 10:05:15 +0000 https://www.goodnews24x7.com/?p=5360 ಮಹಾಕುಂಭ ಮೇಳ ನಗರ ಪ್ರಯಾಗರಾಜ್ ಪ್ರವಾಹದಿಂದ ತತ್ತರಿಸಿ ಹೋಗಿದೆ. ತ್ರಿವೇಣಿ ಸಂಗಮ ಪ್ರಯಾಗರಾಜ್ನ ಅರ್ಧ ಭಾಗವೇ ನೀರಿನಲ್ಲಿ ಮುಳುಗಿ ಹೋಗಿದೆ. ಜನರು ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ. ಶಿವಗಾಮಿಯಂತೆ ಅಂಗೈಲಿ ಮಗು ಹಿಡಿದು ಪ್ರವಾಹ ದಾಟಿದ ತಂದೆ! ಮನೆಗೆ ನುಗ್ಗಿದ ಗಂಗೆ! ಪೊಲೀಸ್…

The post ಪ್ರಯಾಗರಾಜ್ ನಲ್ಲಿ ಉಕ್ಕಿ ಹರಿದ ಗಂಗಾ, ಯಮುನಾ ನದಿಗಳು, ಉತ್ತರ ಭಾರತದಲ್ಲಿ ವರುಣ ಮೃದಂಗ.. ಜಲ ಪ್ರವಾಹ! appeared first on Good News 24x7.

]]>

ಮಹಾಕುಂಭ ಮೇಳ ನಗರ ಪ್ರಯಾಗರಾಜ್ ಪ್ರವಾಹದಿಂದ ತತ್ತರಿಸಿ ಹೋಗಿದೆ. ತ್ರಿವೇಣಿ ಸಂಗಮ ಪ್ರಯಾಗರಾಜ್ನ ಅರ್ಧ ಭಾಗವೇ ನೀರಿನಲ್ಲಿ ಮುಳುಗಿ ಹೋಗಿದೆ. ಜನರು ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ.

ಶಿವಗಾಮಿಯಂತೆ ಅಂಗೈಲಿ ಮಗು ಹಿಡಿದು ಪ್ರವಾಹ ದಾಟಿದ ತಂದೆ! ಮನೆಗೆ ನುಗ್ಗಿದ ಗಂಗೆ! ಪೊಲೀಸ್ ಅಧಿಕಾರಿಯಿಂದ ಆರತಿ! ದೇವರಿಗೂ ಜಲ ದಿಗ್ಬಂಧನ! ಪ್ರಯಾಗ್ರಾಜ್ನಲ್ಲಿ ಮಹಾ ಪ್ರವಾಹ! ಉತ್ತರ ಪ್ರದೇಶದ ತ್ರಿವೇಣಿ ಸಂಗಮ ನಗರಿ ಪ್ರಯಾಗರಾಜ್ ನಲ್ಲಿ ಭಾರಿ ಮಳೆಯಿಂದ ಪ್ರವಾಹ ಉಂಟಾಗಿದೆ. ಗಂಗಾ ನದಿ ನೀರು ಮನೆಗಳಿಗೆ ನುಗ್ಗಿದೆ. ಪ್ರಯಾಗರಾಜ್ನ ಅರ್ಧ ಭಾಗವೇ ನೀರಿನಲ್ಲಿ ಮುಳುಗಿ ಹೋಗಿದೆ. ಜನವರಿಯಲ್ಲಿ ಕೋಟ್ಯಾಂತರ ಭಕ್ತರು ತ್ರಿವೇಣಿ ಸಂಗಮದಲ್ಲಿ ಮಿಂದೆದ್ದರು. ಆದರೇ, ಈಗ ಅದೇ ಪ್ರಯಾಗರಾಜ್ ನ ಸ್ಥಳೀಯ ನಿವಾಸಿಗಳು ಗಂಗಾ, ಯಮುನಾ ನದಿಯ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗಂಗಾ, ಯಮುನಾ ನದಿಯಲ್ಲಿ 10 ಲಕ್ಷ ಕ್ಯೂಸೆಕ್ ನೀರು ಏಕಕಾಲಕ್ಕೆ ಹರಿಯುತ್ತಿದ್ದು, ಜನರು ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ.

ಪ್ರಕೃತಿ ಮುಂದೆ ಮನುಷ್ಯ ಯಕಶ್ಚಿತ್ ಅನ್ನೋದು ಪದೇ ಪದೇ ಸಾಬೀತಾಗ್ತಾನೆ ಇದೆ.. ಪ್ರಕೃತಿ ದೇವಿ ಒಮ್ಮೆ ಮುನಿಸಿಕೊಂಡ್ರೆ ಮಾನವನ ಅವಶೇಷವೂ ಸಿಗದೇ ನಾಪತ್ತೆಯಾಗಿಬಿಡ್ತಾನೆ. ಪ್ರಯಾಗ್ರಾಜ್ನಲ್ಲಿ ಮಳೆರಾಯನ ಆರ್ಭಟ ಜನರ ಬದುಕನ್ನೆ ನುಂಗಿ ಹಾಕಿದೆ.. ಜೀವ ಮತ್ತು ಜೀವನ ಉಳಿಸಿಕೊಳ್ಳೋದಕ್ಕೆ ಜನ ಅಕ್ಷರಶಃ ಹರಸಾಹಸವನ್ನೆ ಪಡ್ತಿದ್ದಾರೆ.. ನೆತ್ತಿಗೆ ಆಸರೆಯಾಗಿದ್ದ ಸೂರುಗಳು ಜಲಾವೃತವಾಗಿದ್ದು, ಕಾಳಜಿ ಕೇಂದ್ರವೇ ದಿಕ್ಕಾಗಿದೆ.. ಜಲಾಸುರು ಸೃಷ್ಟಿಸಿರುವ ಅವಾಂತರದ ಒಂದೊಂದು ದೃಶ್ಯಗಳು ನಿಜಕ್ಕೂ ಕರುಣಜಾನಕ.. ಆ ವರುಣ ಮೃದoಗದ ದೃಶ್ಯಗಳು ಭಯಾನಕ.

ಕಳೆದೆರಡು ತಿಂಗಳ ಹಿಂದೆ ಕರ್ನಾಟಕದಲ್ಲಿ ಅಬ್ಬರಿಸಿ ಬೊಬ್ಬಿರಿದ್ದ ಮಳೆರಾಯ ಈಗ ಉತ್ತರ ಭಾರತದಲ್ಲಿ ಆರ್ಭಟಿಸ್ತಿದ್ದಾನೆ. ವರುಣನ ಅಟ್ಟಹಾಸಕ್ಕೆ ಜನ ಸಾಕಪ್ಪ ವರುಣ ನಮ್ಮನ್ನ ಬಿಟ್ಟುಬಿಡು ಅಂತ ಕೈ ಮುಗಿದು ಕೇಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ.. ಕಳೆದ ಮೂರು ದಿನದಿಂದ ಉತ್ತರ ಪ್ರದೇಶದ ಪ್ರಯಾಗ್ ರಾಜ್ನಲ್ಲಿ ವರುಣ ಬಡಪಾಯಿ ಜನರ ಬದುಕಿಗೆ ಕತ್ತಲೆ ಆವರಿಸುವಂತೆ ಮಾಡಿದ್ದಾನೆ. ಬಿಟ್ಟು ಬಿಡದೇ ಸುರಿಯತ್ತಿರುವ ಮಳೆ ಹತ್ತಾರು ಗ್ರಾಮಗಳನ್ನ ಸ್ವಾಹ ಮಾಡಿದೆ. ಮನೆ ಕಳ್ಕೊಂಡು ಕಂಗಾಲಾದವರು ಕಾಳಜಿ ಕೇಂದ್ರ ಸೇರಿ ನೆರವಿಗಾಗಿ ಎದುರು ನೋಡ್ತಿದ್ದಾರೆ. ಪ್ರಯಾಗ್ ಪ್ರವಾಹದ ಒಂದೊಂದು ದೃಶ್ಯವೂ ಭೀಕರ. ರಣ ಭೀಕರ..
ರಾಜಮೌಳಿ ಬಾಹುಬಲಿ ಸಿನಿಮಾದ ಈ ಸೀನ್ ಎಂದಿಗೂ ಮರೆಯೋದಕ್ಕೆ ಸಾಧ್ಯವಿಲ್ಲ ಬಿಡಿ. ಇಂಥದೊಂದು ಕಲ್ಪನೆ ಮೂವಿ ಮಾಂತ್ರಿಕ ರಾಜಮೌಳಿಗೆ ಬಿಟ್ಟು ಬೇರೆ ಯಾರಿಗೂ ಊಹಿಸಿಕೊಳ್ಳೋಕೆ ಸಾಧ್ಯನೇ ಇಲ್ಲ. ಮೈದುಂಬಿ ಹರಿಯುತ್ತಿರುವ ನದಿ, ಕೈಯಲ್ಲಿ ಕಂದ, ಈ ಸೀನ್ ನೋಡುತ್ತಿದ್ದರೇ, ಮೈ ರೋಮಾಂಚನವಾಗಿ ಬಿಡುತ್ತೆ. ಇದು ರೀಲ್ ಸೀನ್, ಸಿನಿಮಾದ ಸೀನ್.

ಇದ್ಯಾವುದೋ ಸಿನಿಮಾ ಸೀನ್ ಅಲ್ಲ. ಅಥವಾ ರೀಲ್ಸ್ಗಾಗಿ ಮಾಡಿದ ವಿಡಿಯೋ ಕೂಡ ಅಲ್ಲ.. ಸಾವು ಬದುಕಿನ ಸಂಘರ್ಷಕ್ಕೆ ಸಾಕ್ಷಿಯಾಗಿರೋವ ಕರುಳು ಹಿಂಡುವ ವಿಡಿಯೋ.. ಗಂಗೆ ಯಮುನೆಯ ಆರ್ಭಟಕ್ಕೆ ಸಾಕ್ಷಿಯಾದ ದೃಶ್ಯವಿದು.. ಆರ್ಭಟಿಸ್ತಿರೋ ಮಳೆರಾಯ ಪ್ರಯಾಗರಾಜ್ನಲ್ಲಿ ಮಹಾ ಪ್ರವಾಹವನ್ನೆ ಸೃಷ್ಟಿಸಿಬಿಟ್ಟಿದ್ದಾನೆ. ಮನೆಗಳಿಗೆ ನೀರು ನುಗ್ಗಿ, ಜೀವ ಉಳಿದ್ರೆ ಸಾಕು ಅಂತ ಜನ ಉಟ್ಟ ಬಟ್ಟೆಯಲ್ಲೇ ತಾವಿದ್ದ ಸ್ಥಳವನ್ನ ತೊರೆಯುತ್ತಿದ್ದಾರೆ.. ಹೀಗೆ ಪ್ರವಾಹದಿಂದ ಬಚಾವ್ ಆಗುವ ಹೊತ್ತಲ್ಲಿ ಕಂಡು ಬಂದ ಮನ ಮಿಡಿಯುವ ಮಿಡಿಯುವ ದೃಶ್ಯವಿದು… ಮುಂದೆ ಅಪ್ಪ ತನ್ನ ಕರುಳ ಬಳ್ಳಿಯನ್ನ ಅಂಗೈಯಲ್ಲಿ ಹಿಡಿದು ಒಂದೊಂದೆ ಹೆಜ್ಜೆ ಇಡ್ತಿದ್ರೆ, ಹಿಂದೆ ಗಂಡ ಹೆಗಲಿಗೆ ಕೈ ಒರಗಿ ಹೆಂಡತಿ ಸಾಗ್ತಿದ್ದಾಳೆ.. ನಿಜಕ್ಕೂ ಈ ದೃಶ್ಯ ನೋಡ್ತಿದ್ರೆ ಕರುಳು ಹಿಂಡಿದ ಅನುಭವವೇ ಆಗುತ್ತೆ.

ನೀವು ಸೂಕ್ಷ್ಮವಾಗಿ ಗಮನಿಸಿದ್ರೆ, ಕಣ್ಣು ಹಾಯಿಸಿದ ಕಡೆಯೆಲ್ಲ ಬರೀ ನೀರೇ ಕಾಣ್ತಿದೆ.. ಆ ನೀರಿನ ಮಧ್ಯೆ ಮೂರು ಜೀವಗಳು ಸಿಲುಕಿವೆ.. ಸುಮಾರು ನೂರು ಮೀಟರ್ ತನಕ ಅರ್ಧದೇಹದ ತನಕ ನೀರು ನಿಂತಿದೆ.. ಸ್ವಲ್ಪ ಎಚ್ಚರ ತಪ್ಪಿದ್ರೂ ಕೈಯಲ್ಲಿದ್ದ ಮಗು ನೀರುಪಾಲಾಗುತ್ತೆ.. ಹೀಗಾಗಿ ಮಗುವಿನ ತಂದೆ.. ಮಗುವಿಗೆ ಒಂದು ಹನಿ ನೀರು ಕೂಡ ತಾಗದಂತೆ ಜೋಪಾನವಾಗಿ ಕಂದನನ್ನ ರಕ್ಷಣೆ ಮಾಡೋ ಸಾಹಸಕ್ಕೆ ಕೈ ಹಾಕಿದ್ದಾನೆ.. ಕೇವಲ ಮಗುವಿನ ಪ್ರಾಣ ಮಾತ್ರವಲ್ಲ.. ಬೆನ್ನ ಹಿಂದೆ ಹೆಜ್ಜೆ ಹಾಕ್ತಿರೋ ಹೆಂಡತಿಯನ್ನ ಆತ ಕಾಪಾಡಬೇಕಿದೆ.

ಉತ್ತರ ಪ್ರದೇಶದ ಪ್ರಯರಾಜ್ನಲ್ಲಿ ವರುಣನ ಆರ್ಭಟಕ್ಕೆ ಮನೆಗಳೆಲ್ಲ ಮುಳುಗಡೆಯಾಗಿ.. ಜನ ಜೀವನ್ಮರಣದ ಹೋರಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲೂ ಕೂಡ ಗಂಗೆ ಯಮನೆಯ ಆರ್ಭಟಕ್ಕ ಈ ದಂಪತಿ ಮನೆ ಜಲಾವೃತವಾಗಿದ್ದು, ಹಸುಗೂಸಿನ ಜೊತೆ ಗಂಡ ಹೆಂಡತಿ ಇಬ್ಬರೂ ಪ್ರವಾಹವನ್ನೆ ದಾಟಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಅಪ್ಪನ ಈ ಹರಸಾಹಸವನ್ನ ಕಂಡು ಜನ ಕೂಡ ಆಶ್ಚರ್ಯಗೊಂಡಿದ್ದಾರೆ.

ಪ್ರಯಾಗ್ರಾಜ್ನಲ್ಲಿ ಸುರಿಯುತ್ತಿರುವ ಮಳೆಯಿಂದ ಗಂಗೆ ಮತ್ತು ಯುಮನಾ ನದಿಗಳು ಅಬ್ಬರಿಸಿ ಬೊಬ್ಬಿರಿಯುತ್ತಿವೆ… ನದಿ ಪಾತ್ರದಲ್ಲಿರೋ ಜನರ ಪಾಡಂತು ನಿಜಕ್ಕೂ ಘೋರಾತಿ ಘೋರವಾಗಿದೆ.. ಶಾಕಿಂಗ್ ಏನಂದ್ರೆ ನದಿ ಪಾತ್ರವನ್ನ ದಾಟಿ ಗಂಗೆ ನಗರಕ್ಕೂ ನುಗ್ಗಿದ್ದಾಳೆ. ಅಷ್ಟರ ಮಟ್ಟಿಗೆ ಮಳೆ ಬಿಟ್ಟು ಬಿಡದೇ ಸುರಿಯುತ್ತಿದೆ.. ಹೀಗಿರುವಾಗ ಇಲ್ಲೊಬ್ಬ ಪೊಲೀಸ್ ಅಧಿಕಾರಿ ಮನೆ ಹೊಸ್ತಿಲ ತನಕವೂ ಗಂಗೆ ನುಗ್ಗಿ ಬಂದಿದ್ದಾಳೆ.. ಆದ್ರೆ ಈ ಪುಣ್ಯಾತ್ಮ ಗಂಗೆ ಮನೆ ಬಾಗಿಲಿಗೆ ಬಂದಿದ್ದಾಳೆ ಅಂತ ಪೂಜೆ ಸಲ್ಲಿಸಿದ್ದಾನೆ.

ಇನ್ನೊಂದೆರಡು ಅಡಿ ನೀರು ಹೆಚ್ಚಾದ್ರು, ಮನೆಯೂ ಉಳಿಯಲ್ಲ, ಮನೆಯಲ್ಲಿದ್ದವು ಉಳಿಯಲ್ಲ.. ಇಂಥಾ ಟೈಮ್ನಲ್ಲಿ ಓದಿರೋ ತಿಳುವಳಿಕೆ ಇರೋ ಇಂಥವರೇ ಮೌಢ್ಯಕ್ಕೆ ಬಿದ್ರೆ ಏನ್ ಹೇಳೋಣ ಹೇಳಿ.. ಮನೆಗೆ ಗಂಗಾ ನದಿ ನುಗ್ಗಿ ಬಂದಿದ್ರೆ, ಈ ಪೊಲೀಸ್ ಅಧಿಕಾರಿಗೆ ಗಂಗೆ ಗುಲಾಬಿ ಹೂವು ಹಾಕಿ, ಆರತಿ ಮಾಡಿ ಪೂಜೆ ಸಲ್ಲಿಸಿದ್ದಾನೆ.ಇದಷ್ಟೆ ಅಲ್ಲ ಮುಳುಗಿರೋ ಮನೆ ಮೇಲಿಂದನೇ ಈ ಆಸಾಮಿ ನೀರಿಗೆ ಹಾರಿ ಸ್ವೀಮ್ಮಿಂಗ್ ಮಾಡಿದ್ದಾನೆ. ಇದನ್ನ ಹುಚ್ಚಾಟ ಅನ್ಬೇಕೋ.. ಮೌಢ್ಯದ ಪರಮಾವಧಿ ಅನ್ಬೇಕೋ ಗೊತ್ತಿಲ್ಲ.

ಕಳೆದ ಮೂರು ನಾಲ್ಕು ದಿನದಿಂದ ಮಳೆ ಬಿಟ್ಟು ಬಿಡದೇ ಸುರಿಯುತ್ತಿರೋದ್ರಿಂದ.. ಜನರ ಬದುಕಿಗೆ ಕತ್ತಲೇ ಆವರಿಸಿದೆ. ಮನೆಗಳೆಲ್ಲ ಜಲಾವೃತವಾಗಿದ್ದು, ಜನರನ್ನ ಕಾಳಜಿ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿದೆ. ಜೊತೆಗೆ ಪ್ರಯಾಗರಾಜ್ ಸೇರಿದಂತೆ 12 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಮಳೆರಾಯನ ಆರ್ಭಟ ಅದೆಷ್ಟಿದೆ ಅಂದ್ರೆ ಎರಡಂತಸ್ತಿನ ಕಟ್ಟಡಗಳು ಕೂಡ ನೀರಲ್ಲಿ ಮುಳುಗಿ ಹೋಗಿವೆ… ಒಂದ್ಕಡೆ ಮಳೆ.. ಇನ್ನೊಂದ್ಕಡೆ ಮನೆ ಮುಂದೆಯೇ ಮೊಣಕಾಲುದ್ದ ನಿಂತಿರೋ ನೀರು.. ಹೀಗೆ ಜೀವಕ್ಕಾಗಿ ಪರದಾಡ್ತಿರೋರ ಪಾಲಿಗೆ ದೇವದೂಂತರಂತೆ ನಿಂತು ಎನ್ಡಿಆರ್ ಎಫ್ ತಂಡ ಕೆಲಸ ಮಾಡ್ತಿದೆ. ಬಹಳಷ್ಟು ಮನೆಗಳ ಅರ್ಧ ಭಾಗ ನೀರಲ್ಲಿ ಮುಳುಗಿ ಹೋಗಿದೆ.. ದಿಕ್ಕೇ ತೋಚದೇ ಕೂತಿದ್ದವರಿಗೆ ದೇವರಂತೆ ಬಂದು ಎನ್ಡಿಆರ್ಎಫ್ ತಂಡ ರಕ್ಷಣೆ ಮಾಡಿದೆ. ಮನೆಯಲ್ಲಿದ್ದವರನ್ನ ಏಣಿ ಮೂಲಕ ಒಬ್ಬೊಬ್ಬರನ್ನೆ ರಕ್ಷಣೆ ಮಾಡಿ ಬೋಟ್ ಮೂಲಕ ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಮಾಡಲಾಗಿದೆ.

ಗಂಗಾ ತೀರದಲ್ಲಿ ಬೋಟಿಂಗ್ ಮಾಡ್ತಿದ್ದ ಬಡಪಾಯಿಗಳ ಒಪ್ಪತ್ತಿನ ಊಟಕ್ಕೂ ಮಳೆರಾಯ ಕಲ್ಲು ಹಾಕಿದ್ದಾನೆ. ಗಂಗೆ ದಡದಲ್ಲಿ ಬೋಟಿಂಗ್ ಇಲ್ಲಿನ ನಿವಾಸಿಗಳಿಗೆ ಮುಖ್ಯ ಆದಾಯ.. ನೂರಾರು ಕುಟಂಬಗಳಿಗೆ ಇವತ್ತು ಇದೇ ಬೋಟಿಂಗ್ ಕೆಲಸವೇ ಆಸರೆಯಾಗಿದೆ.. ಆದ್ರೀಗ ನದಿಯಲ್ಲಿ ನೀರು ಹೆಚ್ಚಾಗಿರೋ ಕಾರಣಕ್ಕೆ ಬೋಟಿಂಗ್ ಕೂಡ ಬಂದ್ ಆಗಿದ್ದು, ಅದನ್ನೆ ನಂಬ್ಕೊಂಡು ಕೆಲಸ ಮಾಡ್ತಿದ್ದವರ ಪರದಾಡುವಂತಾಗಿದೆ. ಎಲ್ಲ ಬಂದ್ ಆಗಿದೆ ನಮ್ಮ ಕಷ್ಟ ಕೇಳೋರು ಯಾರು ಅಂತ ಬೋಟ್ ಓಡಿಸೋ ವ್ಯಕ್ತಿಯೊಬ್ಬ ಅಳಲು ತೋಡಿಕೊಂಡಿದ್ದಾನೆ.


ನಮ್ಮ ದಿನದ ಊಟ ಇದೇ ಆಗಿತ್ತು.. ಅದೇ ಇಲ್ಲ..ಗಂಗಾನದಿ ಉಕ್ಕಿ ಹರಿಯುತ್ತಿರೋದ್ರಿಂದ.. ಘಾಟ್ ಬಳಿ ಜನ ಸ್ನಾನಕ್ಕೆ ಬರ್ತಿದ್ರು. ಈಗ ಎಲ್ಲ ಬಂದ್ ಆಗಿದೆ. ಸ್ನಾನ ಮಾಡೋರಿಗೂ ಜಾಗ ಇಲ್ಲ… ಬೋಟ್ ಮೂಲಕ ಹೋಗ್ತಿದ್ರು.. ಯಾರು ಬರ್ತಿಲ್ಲ. ಒಂದು ಗಂಟೆ ಎರಡು ಗಂಟೆ ಬಳಿಕ ಒಬ್ಬೊಬ್ಬರು ಬರ್ತಾರೆ.. ಪೊಲೀಸರು ಕೂಡ ಬಿಡಲ್ಲ.. ಅಲ್ಲಿ ಶವ ಸಂಸ್ಕಾರ ಮಾಡುವ ಘಾಟ್ ಕೂಡ ಮುಳುಗಿ ಹೋಗಿದೆ. ಹೆಣ ಸುಡೋಕು ಕಷ್ಟ ಆಗ್ತಿದೆ. ಅಸ್ಥಿ ತಂದೆ ಬೋಟ್ ಮೂಲಕ ಗಂಗೆಯಲ್ಲಿ ಬಿಡ್ತಿದ್ರು.. ಈಗ ಯಾರು ಬರ್ತಿಲ್ಲ.ಒಟ್ನಲ್ಲಿ ಮಳೆರಾಯ ಸೃಷ್ಟಿಸಿದ ಅವಾಂತರಕ್ಕೆ ಘಾಟ್ಗಳಲ್ಲಿ ಹೆಣ ಸುಡೋದಕ್ಕೂ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಮಧ್ಯೆ ಹಳ್ಳದ ನಟ್ಟ ನಡುವಲ್ಲಿ ಸಿಲುಕಿಕೊಂದಿದ್ದ ಬೈಕ್ ಸವಾರ ಬದುಕಿ ಬಂದ ದೃಶ್ಯ ನಿಜಕ್ಕೂ ರಣ ರೋಚಕವಾಗಿದೆ.

 

The post ಪ್ರಯಾಗರಾಜ್ ನಲ್ಲಿ ಉಕ್ಕಿ ಹರಿದ ಗಂಗಾ, ಯಮುನಾ ನದಿಗಳು, ಉತ್ತರ ಭಾರತದಲ್ಲಿ ವರುಣ ಮೃದಂಗ.. ಜಲ ಪ್ರವಾಹ! appeared first on Good News 24x7.

]]>