Varanasi. Archives - Good News 24x7 https://www.goodnews24x7.com/tag/varanasi/ Kannada Sun, 24 Aug 2025 06:27:02 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Varanasi. Archives - Good News 24x7 https://www.goodnews24x7.com/tag/varanasi/ 32 32 ಅಮೆರಿಕನ್ ಡೈಮಂಡ್​ನಿಂದ ತಯಾರಾದ ವಿಶೇಷ ಗಣಪ.. ಇದರ ಬೆಲೆ ಎಷ್ಟು ಗೊತ್ತಾ? https://www.goodnews24x7.com/special-ganesha-idol-made-from-american-diamond-do-you-know-how-much-it-costs/ Sun, 24 Aug 2025 06:26:21 +0000 https://www.goodnews24x7.com/?p=6629 ‘‘ಗಣಪತಿ ಬಪ್ಪ ಮೋರೆಯಾ ಮಂಗಳ ಮೂರ್ತಿ ಮೋರೆಯಾ’’ ಇನ್ನೇನೂ ಗೌರಿ ಗಣೇಶ ಹಬ್ಬ ಬಂದೇಬಿಡ್ತು. ಎಲ್ಲೆಲ್ಲೂ ಶುರು ವಿನಾಯಕನ ಸಂಭ್ರಮ. ಹಬ್ಬಕ್ಕೆ ಇನ್ನು ಒಂದು ವಾರ ಇರುವಾಗಲೇ ಸಿಲಿಕಾನ್​ ಸಿಟಿಗೆ ಮುಂಬೈನಿಂದ ಗಣಪ ಬಂದಿದ್ದಾನೆ.ಮುಂಬೈ ಹಾಗೂ ಸೊಲ್ಲಾಪುರ ಕುಶಲಕರ್ಮಿಗಳಿಂದ 30 ದಿನಗಳಿಂದ…

The post ಅಮೆರಿಕನ್ ಡೈಮಂಡ್​ನಿಂದ ತಯಾರಾದ ವಿಶೇಷ ಗಣಪ.. ಇದರ ಬೆಲೆ ಎಷ್ಟು ಗೊತ್ತಾ? appeared first on Good News 24x7.

]]>

‘‘ಗಣಪತಿ ಬಪ್ಪ ಮೋರೆಯಾ ಮಂಗಳ ಮೂರ್ತಿ ಮೋರೆಯಾ’’ ಇನ್ನೇನೂ ಗೌರಿ ಗಣೇಶ ಹಬ್ಬ ಬಂದೇಬಿಡ್ತು. ಎಲ್ಲೆಲ್ಲೂ ಶುರು ವಿನಾಯಕನ ಸಂಭ್ರಮ. ಹಬ್ಬಕ್ಕೆ ಇನ್ನು ಒಂದು ವಾರ ಇರುವಾಗಲೇ ಸಿಲಿಕಾನ್​ ಸಿಟಿಗೆ ಮುಂಬೈನಿಂದ ಗಣಪ ಬಂದಿದ್ದಾನೆ.ಮುಂಬೈ ಹಾಗೂ ಸೊಲ್ಲಾಪುರ ಕುಶಲಕರ್ಮಿಗಳಿಂದ 30 ದಿನಗಳಿಂದ ಸಿದ್ಧಗೊಂಡ ಚಾಮರ ಕರ್ಣನ ರೂಪ ಎಷ್ಟು ಅದ್ಭುತವಾಗಿದೆ ಅಲ್ವಾ. ಬರೋಬ್ಬರಿ 12 ಲಕ್ಷ ಖರ್ಚು ಮಾಡಿ ಅಮೆರಿಕನ್ ಡೈಮಂಡ್​ನಿಂದ ಈ ಗಣಪತಿಯನ್ನ ತಯಾರಿಸಲಾಗಿದೆ. ಆರು ಅಡಿ ಎತ್ತರದ ಬಹಳ ವಿಶೇಷವಾದ ಗಣಪ ಮೂರ್ತಿ ಇದಾಗಿದ್ದು, ಮಿಲ್ಕ್ ಕಾಲೋನಿಯ ಸ್ವಸ್ತಿಕ್ ಯುವಕರ ಸಂಘದಿಂದ 40ನೇ ವರ್ಷದ ಗಣಪತಿ ಉತ್ಸವಕ್ಕೆ ಇದನ್ನ ಸಿದ್ಧಪಡಿಸಲಾಗಿದೆ.

ಲಂಬೋದರನ ಮೂರ್ತಿಯಷ್ಟೇ ವಿಶೇಷವಾಗಿಲ್ಲ. ಈತ ಕೂರುವ ಮಂಟಪ ಕೂಡ ಅಷ್ಟೇ ವೈಶಿಷ್ಟ್ಯತೆಯಿಂದ ಕೂಡಿದೆ. ಬರೀ ಮಂಟಪಕ್ಕೇನೇ 30 ಲಕ್ಷ ವೆಚ್ಚ ಮಾಡಲಾಗಿದೆ. ಕಳೆದ ವರ್ಷ ‘ಕೈಲಾಸನಾಥ ದೇವಸ್ಥಾನ’ ಹೋಲುವ ಮಂಟಪ ನಿರ್ಮಾಣ ಮಾಡಿದ್ರು. ಈ ಬಾರಿ ವಾರಣಾಸಿಯ ‘ಕಾಶಿವಿಶ್ವನಾಥ ದೇವಾಲಯ’ ಹೋಲುವ ಮಂಟಪ ಸಿದ್ಧಪಡಿಸಲಾಗ್ತಾಯಿದೆ.
ಆಗಸ್ಟ್ 27ನೇ ತಾರೀಖಿನಿಂದ ಸೆಪ್ಟೆಂಬರ್ 5ನೇ ತಾರೀಖಿನವರೆಗೂ ಗಣೇಶನ ಹಬ್ಬ ಆಚರಣೆಗೆ ಸ್ವಸ್ತಿಕ್ ಯುವಕರ ಸಂಘ ಸಜ್ಜಾಗಿದೆ. ಅದೇನೇ ಹೇಳಿ ನಗರದಲ್ಲಿ ವೆರೈಟಿ ವೆರೈಟಿ ಗಣಾಧ್ಯಕ್ಷನ ದರ್ಶನ ಆಗೋದಂತು ಪಕ್ಕ. ಸುಮುಖನ ಸಂಭ್ರಮಕ್ಕೆ ಕೌಂಟ್​ಡೌನ್​ ಶುರು.g

The post ಅಮೆರಿಕನ್ ಡೈಮಂಡ್​ನಿಂದ ತಯಾರಾದ ವಿಶೇಷ ಗಣಪ.. ಇದರ ಬೆಲೆ ಎಷ್ಟು ಗೊತ್ತಾ? appeared first on Good News 24x7.

]]>
8ರ ಬಾಲೆ ಅ*ಚಾರ ವಿರೋಧಿಸಿದ್ದಕ್ಕೆ ಕೊ* ಮಾಡಿದ್ದ ಆರೋಪಿಗೆ ಗುಂಡೇಟು. https://www.goodnews24x7.com/8%e0%b2%b0-%e0%b2%ac%e0%b2%be%e0%b2%b2%e0%b3%86-%e0%b2%85%e0%b2%9a%e0%b2%be%e0%b2%b0-%e0%b2%b5%e0%b2%bf%e0%b2%b0%e0%b3%8b%e0%b2%a7%e0%b2%bf%e0%b2%b8%e0%b2%bf%e0%b2%a6%e0%b3%8d%e0%b2%a6%e0%b2%95/ Wed, 01 Jan 2025 12:19:59 +0000 https://www.goodnews24x7.com/?p=1454 ವಾರಾಣಸಿ:- ವಾರಾಣಸಿಯ ಶಾಲೆಯೊಂದರ ಬಳಿಕ ಗೋಣಿಚೀಲದಲ್ಲಿ 8 ವರ್ಷದ ಬಾಲಕಿಯ ಅರೆಬೆತ್ತಲೆ ಶವ ಪತ್ತೆಯಾಗಿತ್ತು. ಅತ್ಯಾಚಾರವನ್ನು ವಿರೋಧಿಸಿದ್ದಕ್ಕೆ ಆರೋಪಿ ಬಾಲಕಿಯನ್ನು ಕೊಂದು, ಗೋಣಿಚೀಲದಲ್ಲಿ ತುಂಬಿ ಎಸೆದು ಪರಾರಿಯಾಗಿದ್ದ. ಆರೋಪಿ ಇರ್ಷಾದ್ಗೆ ಗುಂಡು ಹಾರಿಸಿ ಪೊಲೀಸರು ಆತನನ್ನು ಬಂಧಿಸಿದ್ದಾರೆ. ವಾರಾಣಸಿಯ ಸುಜಾಬಾದ್ ಪ್ರದೇಶದಲ್ಲಿ…

The post 8ರ ಬಾಲೆ ಅ*ಚಾರ ವಿರೋಧಿಸಿದ್ದಕ್ಕೆ ಕೊ* ಮಾಡಿದ್ದ ಆರೋಪಿಗೆ ಗುಂಡೇಟು. appeared first on Good News 24x7.

]]>

ವಾರಾಣಸಿ:- ವಾರಾಣಸಿಯ ಶಾಲೆಯೊಂದರ ಬಳಿಕ ಗೋಣಿಚೀಲದಲ್ಲಿ 8 ವರ್ಷದ ಬಾಲಕಿಯ ಅರೆಬೆತ್ತಲೆ ಶವ ಪತ್ತೆಯಾಗಿತ್ತು. ಅತ್ಯಾಚಾರವನ್ನು ವಿರೋಧಿಸಿದ್ದಕ್ಕೆ ಆರೋಪಿ ಬಾಲಕಿಯನ್ನು ಕೊಂದು, ಗೋಣಿಚೀಲದಲ್ಲಿ ತುಂಬಿ ಎಸೆದು ಪರಾರಿಯಾಗಿದ್ದ. ಆರೋಪಿ ಇರ್ಷಾದ್ಗೆ ಗುಂಡು ಹಾರಿಸಿ ಪೊಲೀಸರು ಆತನನ್ನು ಬಂಧಿಸಿದ್ದಾರೆ. ವಾರಾಣಸಿಯ ಸುಜಾಬಾದ್ ಪ್ರದೇಶದಲ್ಲಿ ನಡೆದಿದೆ. ಅಪ್ರಾಪ್ತ ಬಾಲಕಿಯ ಶವ ಬಹದ್ದೂರ್ ಪ್ರಾಥಮಿಕ ಶಾಲೆಯ ಗೋಡೆಯ ಬಳಿ ಪತ್ತೆಯಾಗಿದೆ. ದೇಹದಾದ್ಯಂತ ರಕ್ತದ ಕಲೆಗಳು, ಮೂಗೇಟಿನ ಗುರುತುಗಳಿವೆ.
ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ. ಇರ್ಷಾದ್ ಬಾಲಕಿಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಸ್ವಲ್ಪ ಸಮಯದ ನಂತರ ಗೋಣಿಚೀಲದಲ್ಲಿ ಶವದೊಂದಿಗೆ ಹೊರಗೆ ಬರುತ್ತಿರುವುದು ಕಂಡುಬಂದಿದೆ. ಬಾಲಕಿಯ ಮೇಲೆ ಅತ್ಯಾಚಾರ ಎಸಗುವ ಯತ್ನವನ್ನು ವಿರೋಧಿಸಿದ ಇರ್ಷಾದ್ ಬಾಲಕಿಯನ್ನು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಮೀಪದ ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿದಾಗ, ಪಕ್ಕದ ಮನೆಯ ಇರ್ಷಾದ್ ಎಂಬಾತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಿರುವುದು ದೃಢಪಟ್ಟಿದೆ. ಆಕೆ ತಡೆದ ಕಾರಣ ಕಲ್ಲಿನಿಂದ ಆಕೆಯನ್ನು ಕೊಂದು ಹಾಕಿದ್ದಾನೆ. ಶವವನ್ನು ಗೋಣಿಚೀಲದಲ್ಲಿ ಹಾಕಿ ಶಾಲೆಯ ಮುಂದೆ ಎಸೆದಿದ್ದಾನೆ ಎಂದು ವಾರಾಣಸಿ ಕಾಶಿ ವಲಯದ ಡಿಸಿಪಿ ಗೌರವ್ ಬನ್ಸ್ವಾಲ್ ಇಂಡಿಯಾ ಟುಡೇಗೆ ತಿಳಿಸಿದ್ದಾರೆ.

ಬಾಲಕಿಯ ತಂದೆ ದಿವ್ಯಾಂಗರಾಗಿದ್ದು, ಆಟೋ ಚಾಲನೆ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಬಾಲಕಿ ಸಂಜೆ 6.30ರ ಸುಮಾರಿಗೆ ಸಮೀಪದ ಅಂಗಡಿಗೆ ಸೊಳ್ಳೆಬತ್ತಿಯನ್ನು ತರಲು ಹೋಗಿದ್ದಳು. ಆಕೆ ಮನೆಗೆ ಬಾರದೇ ಇದ್ದಾಗ ಕುಟುಂಬಸ್ಥರು ಹುಡುಕಾಟ ಆರಂಭಿಸಿದ್ದರು. ಎಷ್ಟೇ ಹುಡುಕಿದರೂ ಸಿಗದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.
ಹತ್ತಿರದ ಸಿಸಿಟಿವಿ ಕ್ಯಾಮೆರಾಗಳನ್ನು ಸ್ಕ್ಯಾನ್ ಮಾಡಿದ ನಂತರ, ಪೊಲೀಸರು ಶಂಕಿತ ಇರ್ಷಾದ್ನನ್ನು ಪತ್ತೆ ಮಾಡಿದ್ದಾರೆ. ಆತನನ್ನು ಬಂಧಿಸುವ ಕಾರ್ಯಾಚರಣೆ ವೇಳೆ ಇರ್ಷಾದ್ ಪೊಲೀಸ್ ತಂಡದತ್ತ ಗುಂಡು ಹಾರಿಸಿದ್ದಾನೆ. ಪ್ರತಿಯಾಗಿ ಪೊಲೀಸರೂ ಗುಂಡು ಹಾರಿಸಿದ್ದು, ಈ ವೇಳೆ ಇರ್ಷಾದ್ ಕಾಲಿಗೆ ಗುಂಡು ತಗುಲಿದೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

The post 8ರ ಬಾಲೆ ಅ*ಚಾರ ವಿರೋಧಿಸಿದ್ದಕ್ಕೆ ಕೊ* ಮಾಡಿದ್ದ ಆರೋಪಿಗೆ ಗುಂಡೇಟು. appeared first on Good News 24x7.

]]>
150ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಭಸ್ಮ : ವಾರಣಾಸಿ ರೈಲು ನಿಲ್ದಾಣದಲ್ಲಿ ಅಗ್ನಿ ಅವಘಡ https://www.goodnews24x7.com/150%e0%b2%95%e0%b3%8d%e0%b2%95%e0%b3%82-%e0%b2%b9%e0%b3%86%e0%b2%9a%e0%b3%8d%e0%b2%9a%e0%b3%81-%e0%b2%a6%e0%b3%8d%e0%b2%b5%e0%b2%bf%e0%b2%9a%e0%b2%95%e0%b3%8d%e0%b2%b0-%e0%b2%b5%e0%b2%be%e0%b2%b9/ Sat, 30 Nov 2024 09:20:43 +0000 https://www.goodnews24x7.com/?p=1043 150ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಭಸ್ಮ :ವಾರಣಾಸಿ ರೈಲು ನಿಲ್ದಾಣದಲ್ಲಿ ಅಗ್ನಿ ಅವಘಡ ರೈಲು ನಿಲ್ದಾಣದ ವಾಹನ ನಿಲ್ದಾಣದ ಪ್ರದೇಶದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, 150ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಸುಟ್ಟು ಭಸ್ಮವಾಗಿವೆ ಎಂದು ವಾರಣಾಸಿ ರೈಲ್ವೆ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.…

The post 150ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಭಸ್ಮ : ವಾರಣಾಸಿ ರೈಲು ನಿಲ್ದಾಣದಲ್ಲಿ ಅಗ್ನಿ ಅವಘಡ appeared first on Good News 24x7.

]]>

150ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಭಸ್ಮ :ವಾರಣಾಸಿ ರೈಲು ನಿಲ್ದಾಣದಲ್ಲಿ ಅಗ್ನಿ ಅವಘಡ

ರೈಲು ನಿಲ್ದಾಣದ ವಾಹನ ನಿಲ್ದಾಣದ ಪ್ರದೇಶದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, 150ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಸುಟ್ಟು ಭಸ್ಮವಾಗಿವೆ ಎಂದು ವಾರಣಾಸಿ ರೈಲ್ವೆ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ಪಡೆದು ಘಟನಾ ಸ್ಥಳಕ್ಕೆ ಧಾವಿಸಿದ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್‌), ಸರ್ಕಾರಿ ರೈಲ್ವೆ ಪೊಲೀಸ್‌ (ಜಿಆರ್‌ಪಿ) ತಂಡ ಹಾಗೂ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನೆಯ ಬಗ್ಗೆ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಲಾಲ್ಟಿ ಚೌಧರಿ ವಿಷಾದ ವ್ಯಕ್ತಪಡಿಸಿದ್ದಾರೆ. ರೈಲ್ವೆ ನೌಕರರಿಗಾಗಿ ಪಾರ್ಕಿಂಗ್ ಸ್ಟ್ಯಾಂಡ್ (ವಾಹನ ನಿಲುಗಡೆ) ನಿರ್ಮಿಸಲಾಗಿತ್ತು. ಅಗ್ನಿ ಅವಘಡದಿಂದ ಸಾಕಷ್ಟು ಹಾನಿಯಾಗಿದೆ ಎಂದು ಹೇಳಿದ್ದಾರೆ.

ಈ ದುರ್ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಈ ಬಗ್ಗೆ ತನಿಖೆ ನಡೆಸಲು ಸಮಿತಿಯನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ.

The post 150ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಭಸ್ಮ : ವಾರಣಾಸಿ ರೈಲು ನಿಲ್ದಾಣದಲ್ಲಿ ಅಗ್ನಿ ಅವಘಡ appeared first on Good News 24x7.

]]>