variousdepartment Archives - Good News 24x7 https://www.goodnews24x7.com/tag/variousdepartment/ Kannada Thu, 12 Jun 2025 10:53:44 +0000 en-US hourly 1 https://wordpress.org/?v=6.9.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg variousdepartment Archives - Good News 24x7 https://www.goodnews24x7.com/tag/variousdepartment/ 32 32 2000 ಇರುವವರಿಗೆ ಮಾತ್ರ ಆಷಾಢ ಶುಕ್ರವಾರದ ವಿಶೇಷ ದರ್ಶನದ ಪ್ಯಾಕೇಜ್! ಉಳಿದವರ ಗತಿ ಏನು? https://www.goodnews24x7.com/special-darshan-package-for-ashada-friday-only-for-those-who-have-2000-what-will-happen-to-the-rest/ Thu, 12 Jun 2025 10:51:33 +0000 https://www.goodnews24x7.com/?p=4358 ಮೈಸೂರು :- ಈ ಬಾರಿ ಆಷಾಢ ಮಾಸದ ಶುಕ್ರವಾರದ ದರ್ಶನದ ಹಿನ್ನೆಲೆಯಲ್ಲಿ ವಾರಾಂತ್ಯದ ಶುಕ್ರವಾರ, ಶನಿವಾರ ಮತ್ತು ಭಾನುವಾರಗಳಂದು ಚಾಮುಂಡಿಬೆಟ್ಟಕ್ಕೆ ಖಾಸಗಿ ವಾಹನ ಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಚಾಮುಂಡಿಬೆಟ್ಟದ ಶ್ರೀ ಚಾಮುಂ ಡೇಶ್ವರಿ ದೇಗುಲದಲ್ಲಿ ಜೂ.27, ಜು.4, 11 ಮತ್ತು 15ರಂದು…

The post 2000 ಇರುವವರಿಗೆ ಮಾತ್ರ ಆಷಾಢ ಶುಕ್ರವಾರದ ವಿಶೇಷ ದರ್ಶನದ ಪ್ಯಾಕೇಜ್! ಉಳಿದವರ ಗತಿ ಏನು? appeared first on Good News 24x7.

]]>

ಮೈಸೂರು :- ಈ ಬಾರಿ ಆಷಾಢ ಮಾಸದ ಶುಕ್ರವಾರದ ದರ್ಶನದ ಹಿನ್ನೆಲೆಯಲ್ಲಿ ವಾರಾಂತ್ಯದ ಶುಕ್ರವಾರ, ಶನಿವಾರ ಮತ್ತು ಭಾನುವಾರಗಳಂದು ಚಾಮುಂಡಿಬೆಟ್ಟಕ್ಕೆ ಖಾಸಗಿ ವಾಹನ ಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಚಾಮುಂಡಿಬೆಟ್ಟದ ಶ್ರೀ ಚಾಮುಂ ಡೇಶ್ವರಿ ದೇಗುಲದಲ್ಲಿ ಜೂ.27, ಜು.4, 11 ಮತ್ತು 15ರಂದು ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಜ.17ರಂದು ಶ್ರೀ ಚಾಮುಂಡೇಶ್ವರಿ ಅಾನವರ ವರ್ಧಂತ್ಯುತ್ಸವ ನಡೆಯಲಿದ್ದು, ಚಾಮುಂಡೇಶ್ವರಿ ಕ್ಷೇತ್ರಾಭಿವೃದ್ಧಿ ಪ್ರಾಧಿ ಕಾರ, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಹಯೋಗದಲ್ಲಿ ದೇವರ ದರ್ಶನಕ್ಕೆ ಸರ್ವ ಸಿದ್ಧತೆ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.

ಮೈಸೂರಿನ ಜಿಲ್ಲಾ ಪಂಚಾಯ್ತಿ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಆಷಾಢ ಶುಕ್ರವಾರ ಸಂಬಂಧ ಪೂರ್ವಭಾವಿ ಸಭೆ ನಡೆಸಿದ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಚಾಮುಂಡಿಬೆಟ್ಟದಲ್ಲಿ ಜೂನ್ 27ರಿಂದ ಜುಲೈ 18ರವರೆಗೆ ನಾಲ್ಕು ಶುಕ್ರವಾರಗಳಂದು ಆಷಾಢ ಮಾಸಾಚರಣೆ ಇರುವುದರಿಂದ ಲಕ್ಷಾಂತರ ಭಕ್ತರು ಅಧಿದೇವತೆ ತಾಯಿ ಶ್ರೀ ಚಾಮುಂಡೇಶ್ವರಿ ಅಮ್ಮನವರ ದರ್ಶನ ಪಡೆಯಲು ಬರುವುದರಿಂದ ಸರ್ವ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ.

ನೂಕು-ನುಗ್ಗಲನ್ನು ತಡೆಯುವ ಸಲು ವಾಗಿ ವಾರಾಂತ್ಯದ ಶುಕ್ರವಾರ, ಶನಿವಾರ ಮತ್ತು ಭಾನುವಾರಗಳಂದು ಚಾಮುಂಡಿ ಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶ ನಿರ್ಬಂಧಿಸಲಾಗಿದ್ದು, ಲಲಿತಮಹಲ್ ಹೆಲಿಪ್ಯಾಡ್ ನಿಂದ 2,000 ರೂ. ವಿಶೇಷ ಗಾಗಿ ಪ್ರತ್ಯೇಕ ಎಸಿ ಬಸ್ಗಳನ್ನು ವ್ಯವಸ್ಥೆ. ಈ ಪ್ಯಾಕೇಜ್ ನಲ್ಲಿ ತೆರಳುವ ದರ್ಶನದ ಟಿಕೆಟ್ ಪಡೆಯುವ ಭಕ್ತರಿಗೆ ಪ್ರತ್ಯೇಕ ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಮಾಡಬಹುದಾಗಿದ್ದು, ಅಂತಹ ಭಕ್ತರಿಗೆ ಲಾಡು ಪ್ರಸಾದ, ಗಂಡ ಭೇರುಂಡ ವಿಗ್ರಹ, ಕುಂಕುಮ, ಕೈ ದಾರ ವುಳ್ಳ ಕಿಟ್ ಅನ್ನು ನೀಡಲಾಗುವುದು. ಆದೇ ರೀತಿ 300 ರೂ.ಗಳ ಟಿಕೆಟ್ ದರ್ಶನದ ಸರತಿ ಸಾಲಿನ ವ್ಯವಸ್ಥೆಯೂ ಇರುತ್ತದೆ . 2000 ರೂ. ವಿಶೇಷ 6ನೇ ಪುಟಕ್ಕೆ ಸರತಿ ಸಾಲು ಹಾಗೂ ಉಚಿತ ದರ್ಶನದ
ದರ್ಶನದ ಟಿಕೆಟ್ ಪಡೆದು ಬರುವ ಭಕ್ತರನ್ನು ಸಿಬ್ಬಂದಿ ಕರೆದೊಯ್ದು ದೇವರ ದರ್ಶನ ಮಾಡಿಸಿ ಸುರಕ್ಷಿತವಾಗಿ ಕರೆತರು ವರಲ್ಲದೆ, ಅವರ ವಾಹನಗಳಿಗೂ ಪ್ರತ್ಯೇಕ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ.

ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ಭಕ್ತರಿಗಾಗಿ ಚಾಮುಂಡಿಬೆಟ್ಟದಲ್ಲಿ ಕುಡಿಯುವ ನೀರು, ಶೌಚಾಲಯ, ಪ್ರಸಾದ, ಸ್ವಚ್ಛತೆ ವ್ಯವಸ್ಥೆ ಯನ್ನು ಮಾಡಲಾಗಿದ್ದು, ವಿವಿಧ ಇಲಾಖೆ ಗಳ ಅಧಿಕಾರಿಗಳು ಸಮನ್ವಯ ಸಾಧಿಸಿ ಯಾವುದೇ ತೊಂದರೆ, ಗೊಂದಲ ಉಂಟಾಗದಂತೆ ಸರ್ವ ರೀತಿಯಲ್ಲಿ ಸೌಲಭ್ಯ ಕಲ್ಪಿಸಬೇಕೆಂದು ಅಧಿಕಾರಿಗಳಿಗೆ ನಿರ್ದೆಶನ ನೀಡಲಾಗಿದ್ದು, ಭದ್ರತೆಗಾಗಿ ನಗರ ಪೊಲೀಸ್ ಘಟಕದ ವತಿಯಿಂದ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿ ಭಕ್ತರ ಸುರಕ್ಷತೆಗೆ ಆಧ್ಯತೆ ನೀಡ ಲಾಗುವುದು ಎಂದು ಡಾ. ಹೆಚ್.ಸಿ. ಮಹದೇವಪ್ಪ ಇದೇ ವೇಳೆ ತಿಳಿಸಿದರು.

ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಅಭಿವೃದ್ಧಿ ಪ್ರಾಧಿಕಾರ, ಮೈಸೂರು ಮಹಾನಗರಪಾಲಿಕೆ, ನಿರ್ಮಿತಿ ಕೇಂದ್ರ, ಆರೋಗ್ಯ ಇಲಾಖೆ, ಅಗ್ನಿಶಾಮಕ ದಳ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ, ಕೆಎಸ್ಆರ್ಟಿಸಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ನಾಲ್ಕೂ ಆಷಾಢ ಶುಕ್ರವಾರಗಳಂದು ಹಾಜರಿದ್ದು, ಭಕ್ತರಿಗೆ ಸಕಲ ಸೌಲಭ್ಯ ಗಳನ್ನು ಒದಗಿಸುವಂತೆ ನಿರ್ದೇಶನ ನೀಡಲಾಗಿದ್ದು, ಬೆಟ್ಟಕ್ಕೆ ಆಗಮಿಸುವ ಭಕ್ತಾದಿಗಳ ಅನುಕೂಲಕ್ಕಾಗಿ ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಲ್ಲಿರುವ ಲಲಿತ ಮಹಲ್ ಹೆಲಿಪ್ಯಾಡ್ ಮೈದಾನದಿಂದ ಕೆಎಸ್ಆರ್ಟಿಸಿ ಬಸ್ಸುಗಳಲ್ಲಿ ಉಚಿತ ವಾಗಿ ತೆರಳಲು ವ್ಯವಸ್ಥೆ ಮಾಡಲಾಗಿದೆ ಎಂದರು. ಈ ಸಂಬಂಧ ಈಗಾಗಲೇ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಗಳನ್ನು ನಡೆಸಿ ಪೂರ್ವ ಸಿದ್ಧತೆ ಮಾಡಿಕೊಂಡಿ ದ್ದಾರೆ. ಭಕ್ತರು ಯಾವುದೇ ಗೊಂದಲ ಇಲ್ಲದಂತೆ ಶಾಂತಿಯಿಂದ ತಾಯಿ ಚಾಮುಂಡೇಶ್ವರಿ ದೇವಿಯ ದರ್ಶನ ಮಾಡುವಂತೆಯೂ ಅವರು ಇದೇ ಸಂದರ್ಭ ತಿಳಿಸಿದರು.


ಶಾಸಕ ಜಿ.ಟಿ.ದೇವೇಗೌಡ, ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದ ರಾಮಯ್ಯ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀ ಕಾಂತ ರೆಡ್ಡಿ, ನಗರಪಾಲಿಕೆ ಆಯುಕ್ತ ಶೇಕ್ ತನ್ನೀರ್ ಆಸಿಫ್, ನಗರ ಪೊಲೀಸ್ ಕಮಿಷ್ಕರ್ ಸೀಮಾ ಲಾಟ್ಕರ್, ಎಸ್ಪಿ ಎನ್.ವಿಷ್ಣುವರ್ಧನ, ಎಂಡಿಎ ಆಯುಕ್ತ ಕೆ.ಆರ್.ರಕ್ಷಿತ್, ಕಬಿನಿ ವೃತ್ತದ ಸೂಪರಿಂ ಟೆಂಡಿಂಗ್ ಇಂಜಿನಿಯರ್ ಕೆ.ಮಹೇಶ್, ಮೈಸೂರು ವೃತ್ತದ ಅರಣ್ಯ ಸಂರಕ್ಷಣಾ ಧಿಕಾರಿ (ಸಿಎಫ್) ಡಾ. ಮಾಲತಿಪ್ರಿಯ, ಎಐಎಡಿಬಿ ವಿಶೇಷ ಭೂ ಸ್ವಾಧೀನಾಧಿ ಕಾರಿ ಡಾ. ಎನ್.ಸಿ.ವೆಂಕಟರಾಜು, ಸೆಸ್ಕ್ ಸೂಪರಿಂಟೆಂಡಿಂಗ್ ಇಂಜಿನಿಯರ್ ಸುನಿಲ್, ತಹಸೀಲ್ದಾರ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿ ಗಳು ಸಭೆಯಲ್ಲಿ ಉಪಸ್ಥಿತರಿದ್ದರು.

The post 2000 ಇರುವವರಿಗೆ ಮಾತ್ರ ಆಷಾಢ ಶುಕ್ರವಾರದ ವಿಶೇಷ ದರ್ಶನದ ಪ್ಯಾಕೇಜ್! ಉಳಿದವರ ಗತಿ ಏನು? appeared first on Good News 24x7.

]]>
ಆಷಾಢ ಮಾಸಾದಲ್ಲಿ ಚಾಮುಂಡಿಬೆಟ್ಟಕ್ಕೆ ವಾರಾಂತ್ಯ ಖಾಸಗಿ ವಾಹನ ನಿರ್ಬಂಧ! https://www.goodnews24x7.com/private-vehicle-ban-on-chamundi-hill-during-ashada-masa/ Thu, 12 Jun 2025 07:05:02 +0000 https://www.goodnews24x7.com/?p=4339 ಮೈಸೂರು : ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇಗುಲದಲ್ಲಿ ಜೂ. 27 ರಂದು ಮೊದಲ ಜು. 4 ರಂದು 2ನೇ, ಜು. 11ರಂದು 3ನೇ, ಜು. 18ರಂದು 4ನೇ ಆಷಾಢ ಶುಕ್ರವಾರ ಆಚರಣೆ ನಡೆಯುತ್ತದೆ. ಈ ಹಿನ್ನಲೆಯಲ್ಲಿ ವಾರಾಂತ್ಯದ ಮೂರು ದಿನ(ಆಷಾಢ ಶುಕ್ರವಾರ, ಶನಿವಾರ,…

The post ಆಷಾಢ ಮಾಸಾದಲ್ಲಿ ಚಾಮುಂಡಿಬೆಟ್ಟಕ್ಕೆ ವಾರಾಂತ್ಯ ಖಾಸಗಿ ವಾಹನ ನಿರ್ಬಂಧ! appeared first on Good News 24x7.

]]>

ಮೈಸೂರು : ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇಗುಲದಲ್ಲಿ ಜೂ. 27 ರಂದು ಮೊದಲ ಜು. 4 ರಂದು 2ನೇ, ಜು. 11ರಂದು 3ನೇ, ಜು. 18ರಂದು 4ನೇ ಆಷಾಢ ಶುಕ್ರವಾರ ಆಚರಣೆ ನಡೆಯುತ್ತದೆ. ಈ ಹಿನ್ನಲೆಯಲ್ಲಿ ವಾರಾಂತ್ಯದ ಮೂರು ದಿನ(ಆಷಾಢ ಶುಕ್ರವಾರ, ಶನಿವಾರ, ಭಾನುವಾರ) ಖಾಸಗಿ ವಾಹನಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.

ಈ ನಿಟ್ಟಿನಲ್ಲಿ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ, ಜಿಲ್ಲಾಡಳಿತ ಹಾಗೂ ಇನ್ನಿತರ ಸಂಬಂಧಪಟ್ಟ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.

”ಜೂ. 27 ರಿಂದ ನಾಲ್ಕು ಶುಕ್ರವಾರಗಳಂದು ಲಕ್ಷಾಂತರ ಭಕ್ತರು ದೇವಿಯ ದರ್ಶನ ಪಡೆಯುತ್ತಾರೆ. ಶನಿವಾರ, ಭಾನುವಾರವೂ ಇದೇ ರಶ್ ಮುಂದುವರಿಯುತ್ತದೆ. ಹಾಗಾಗಿ ಇದೇ ಮೊದಲ ಬಾರಿಗೆ ಶುಕ್ರವಾರದೊಂದಿಗೆ ಶನಿವಾರ, ಭಾನುವಾರವೂ ಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ,” ಎಂದು ಮಾಹಿತಿ ನೀಡಿದರು.

 

ವಿಶೇಷ ದರ್ಶನಕ್ಕೆ ಎಸಿ ಬಸ್:

ವಿಶೇಷ ದರ್ಶನಕ್ಕಾಗಿ 2000 ರೂ. ಟಿಕೆಟ್ ಪಡೆದು ಬರುವ ಭಕ್ತಾದಿಗಳಿಗಾಗಿ ಇದೇ ಮೊದಲ ಬಾರಿಗೆ ಎಸಿ ಬಸ್ ವ್ಯವಸ್ಥೆ ಮಾಡಲಾಗಿದೆ. ಇವರು ತಮ್ಮ ವಾಹನಗಳನ್ನು ಹೆಲಿಪ್ಯಾಡ್ನಲ್ಲಿ ನಿಲುಗಡೆ ಮಾಡಿ ಎಸಿ ಬಸ್ನಲ್ಲಿ ತೆರಳಿ, 2000 ರೂ.ನ ವಿಶೇಷ ಕ್ಯೂನಲ್ಲಿ ದೇವಿಯ ದರ್ಶನ ಪಡೆಯಬಹುದು. ಸಾಮಾನ್ಯ(ಉಚಿತ)ಸರತಿ ಸಾಲು, 300 ರೂ. ಟಿಕೆಟ್ ಸಾಲು ಕೂಡ ಇರುತ್ತವೆ. ಹಣಕೊಟ್ಟು ತೆರಳುವ ಸಾಲಿನವರಿಗೆ ಒಂದು ಲಾಡು ಪ್ರಸಾದ ಉಚಿತವಾಗಿ ನೀಡಲಾಗುವುದು. ದರ್ಶನಕ್ಕೆ ಯಾವುದೇ ತೊಂದರೆ ಆಗದಂತೆ ಕ್ರಮವಹಿಸಲು ಸಂಬಂಧಿಸಿದ ಎಲ್ಲಾ ಇಲಾಖೆಗಳಿಗೂ ಸೂಚನೆ ನೀಡಲಾಗಿದೆ,” ಎಂದರು.

6000 ಹೆಕ್ಟೇರ್ ಡೀಮ್ಡ್ ಫಾರೆಸ್ಟ್ ಸರ್ವೆ:


”ಕೆಲವೆಡೆ ಗೈಡ್ಲೈನ್ ಇಲ್ಲದಿದ್ದರೂ ಡೀಮ್ಡ್ ಫಾರೆಸ್ಟ್ ಎಂದು ಘೋಷಣೆ ಮಾಡಲಾಗಿದೆ. ಈ ರೀತಿಯ ಸುಮಾರು 6 ಸಾವಿರ ಹೆಕ್ಟೇರ್ ಪ್ರದೇಶವನ್ನು ಗುರುತಿಸಲಾಗಿದೆ. ರೆವಿನ್ಯೂ ಹಾಗೂ ಅರಣ್ಯ ಇಲಾಖೆ ಸರ್ವೆ ಮಾಡಿ ಇದನ್ನು ಪನರ್ ಪರಿಶೀಲಿಸಲು ಸೂಚನೆ ನೀಡಲಾಗಿದೆ. ಪರಿಶೀಲನೆ ವೇಳೆ ಗೈಡ್ಲೈನ್ ವ್ಯಾಪ್ತಿಗೆ ಬಾರದ ಜಮೀನನ್ನು ರೈತರಿಗೆ ಮರಳಿಸಲು ತಿಳಿಸಲಾಗಿದೆ,” ಎಂದರು.

ಅನುಕಂಪದ ಆಧಾರದಲ್ಲಿ ಪರಿಹಾರ:
”ಚಿತ್ರನಗರಿ ನಿರ್ಮಾಣ ಯೋಜನೆ ಹಾಗೂ ಕೋಚನಹಳ್ಳಿ ಕೈಗಾರಿಕೆ ಪ್ರದೇಶದ ಭೂಮಿಯನ್ನು ಅಧಿಕೃತವಾಗಿ ಸರಕಾರ ಪಡೆದುಕೊಂಡಿದ್ದರೂ ಕೆಲವರು ತಮ್ಮ ಬಳಿ ಯಾವುದೇ ದಾಖಲೆಗಳಿಲ್ಲದಿದ್ದರೂ ತಮಗೆ ಸೇರಿದ್ದೆಂದು ಹೇಳುತ್ತಿದ್ದಾರೆ. ಕೆಲವರಿಗೆ ಅನುಕಂಪದ ಆಧಾರದ ಮೇಲೆ ಪರಿಹಾರಕ್ಕೆ ಕ್ರಮವಹಿಸಲಾಗುವುದು. ಒಂದು ವೇಳೆ ಸುಳ್ಳು ಹೇಳಿಕೊಂಡು ವಿನಾಕಾರಣ ತೊಂದರೆ ಕೊಡುತ್ತಿದ್ದರೆ ಅಂತವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು,” ಎಂದು ಎಚ್ಚರಿಸಿದರು.

ರನ್ವೇ ವಿಸ್ತರಣೆ ಪ್ರಗತಿ :
”ವಿಮಾನ ನಿಲ್ದಾಣ ವಿಸ್ತರಣೆಗೆ ಬೇಕಾದ 240 ಎಕರೆ ಭೂಮಿ ಸ್ವಾಧೀನ ಪ್ರಕ್ರಿಯೆ ಇನ್ನೆರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಸಿಎಂ ಅವರೇ ಕೇಂದ್ರಕ್ಕೆ ರನ್ವೇ ವಿಸ್ತರಣೆ ಜಾಗದಲ್ಲಿ ಬರುವ ಕೆಇಬಿ ಲೈನ್ ಸ್ಥಳಾಂತರ, ಮೂರು ಕಾಲುವೆಗಳಿರುವಲ್ಲಿ ಬಾಕ್ಸ್ ಬ್ರಿಡ್ಜ್ ಮಾಡಲು ಅನುದಾನ ನೀಡುವಂತೆ ಮನವಿ ಮಾಡಿದ್ದಾರೆ. ಆದರೆ, ಕೇಂದ್ರ ಅದಕ್ಕೆ ಒಪ್ಪಲಿಲ್ಲ. ಹೀಗಾಗಿ ರಾಜ್ಯ ಸರಕಾರ 100 ಕೋಟಿ ರೂ. ವೆಚ್ಚವನ್ನು ಭರಿಸಲು ಕ್ಯಾಬಿನೆಟ್ನಲ್ಲಿ ನಿರ್ಧರಿಸಿದೆ. ಮೈಸೂರು-ನಂಜನಗೂಡು ಹೆದ್ದಾರಿ ಸ್ಥಳಾಂತರಕ್ಕೆ 60 ಎಕರೆ ಜಮೀನು ಪಡೆಯಲು ರಾಷ್ಟ್ರೀಯ ಹೆದ್ದಾರಿ ಪ್ರಾಕಾರಕ್ಕೆ ಮನವಿ ಮಾಡಲಾಗಿದೆ,” ಎಂದರು.

ಕಬಿನಿಯಲ್ಲಿ ಜಲಕ್ರೀಡೆಗೆ ಅನುಮತಿ :

”ಕಬಿನಿ ಹಿನ್ನೀರಿನಲ್ಲಿ ಜಲಕ್ರೀಡೆಗಳ ಆಯೋಜನೆಗೆ ಜೆಎಲ್ಆರ್ಗೆ ಅನುಮತಿ ನೀಡಲಾಗಿದೆ. ‘ಮೈಸೂರು ಅಭಿವೃದ್ಧಿ ಪ್ರಾಧಿಕಾರದಿಂದ (ಎಂಡಿಎ)57 ಸಿಎ ನಿವೇಶನ ಹಾಗೂ 200 ನಿವೇಶನಗಳನ್ನು ಆನ್ಲೈನ್ನಲ್ಲಿ ಹರಾಜು ಮಾಡಲಾಗುವುದು,” ಎಂದು ಮಹದೇವಪ್ಪ ತಿಳಿಸಿದರು.

ಶಾಸಕ ಜಿ.ಟಿ.ದೇವೇಗೌಡ, ಜಿಲ್ಲಾಕಾರಿ ಲಕ್ಷ್ಮೇಕಾಂತರೆಡ್ಡಿ, ಜಿ.ಪಂ ಸಿಇಒ ಯುಕೇಶ್ ಕುಮಾರ್, ಜಿಲ್ಲಾಎಸ್ಪಿ ವಿಷ್ಣುವರ್ಧನ್, ಎಂಡಿಎ ಆಯುಕ್ತ ರಕ್ಷಿತ್ ಹಾಗೂ ನಾನಾ ಇಲಾಖೆ ಅಧಿಕಾರಿಗಳು ಇದ್ದರು.

The post ಆಷಾಢ ಮಾಸಾದಲ್ಲಿ ಚಾಮುಂಡಿಬೆಟ್ಟಕ್ಕೆ ವಾರಾಂತ್ಯ ಖಾಸಗಿ ವಾಹನ ನಿರ್ಬಂಧ! appeared first on Good News 24x7.

]]>