Veena George Archives - Good News 24x7 https://www.goodnews24x7.com/tag/veena-george/ Kannada Wed, 05 Feb 2025 09:32:04 +0000 en-US hourly 1 https://wordpress.org/?v=7.0.2 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Veena George Archives - Good News 24x7 https://www.goodnews24x7.com/tag/veena-george/ 32 32 ಉಪ್ಪಿಟ್ಟು ಬೇಡ, ಅಂಗನವಾಡಿಯಲ್ಲಿ ಬಿರಿಯಾನಿ ಮತ್ತು ಚಿಕನ್ ಫ್ರೈ ಕೊಡ್ಬೇಕು ಪುಟ್ಟ ಪೋರನ ಮನವಿ..! https://www.goodnews24x7.com/%e0%b2%89%e0%b2%aa%e0%b3%8d%e0%b2%aa%e0%b2%bf%e0%b2%9f%e0%b3%8d%e0%b2%9f%e0%b3%81-%e0%b2%ac%e0%b3%87%e0%b2%a1-%e0%b2%85%e0%b2%82%e0%b2%97%e0%b2%a8%e0%b2%b5%e0%b2%be%e0%b2%a1%e0%b2%bf%e0%b2%af/ Wed, 05 Feb 2025 09:32:04 +0000 https://www.goodnews24x7.com/?p=2247 ಕೆಲ ಮಂತ್ರಿಗಳು, ರಾಜಕಾರಣಿಗಳು ವರ್ಷಗಳಾದ್ರೂ ಜನರ ಸಮಸ್ಯೆಯನ್ನು ಪರಿಹರಿಸಲು, ಜನರ ಬೇಡಿಕೆಗಳನ್ನು ಈಡೇರಿಸಲು ಹಿಂದೆ ಮುಂದೆ ನೋಡುತ್ತಾರೆ. ಅಂತಹವರ ಮಧ್ಯೆ ಇಲ್ಲೊಬ್ರು ಸಚಿವೆ ಪುಟ್ಟ ಪೋರನೊಬ್ಬನ ಪುಟಾಣಿ ಆಸೆಯನ್ನು ನೆರವೇರಿಸುವ ಭರವಸೆಯನ್ನು ನೀಡಿದ್ದಾರೆ. ಹೌದು ಕೇರಳ ಮೂಲದ ಬಾಲಕನೊಬ್ಬ ಉಪ್ಪಿಟ್ಟು ಬೇಡ,…

The post ಉಪ್ಪಿಟ್ಟು ಬೇಡ, ಅಂಗನವಾಡಿಯಲ್ಲಿ ಬಿರಿಯಾನಿ ಮತ್ತು ಚಿಕನ್ ಫ್ರೈ ಕೊಡ್ಬೇಕು ಪುಟ್ಟ ಪೋರನ ಮನವಿ..! appeared first on Good News 24x7.

]]>

ಕೆಲ ಮಂತ್ರಿಗಳು, ರಾಜಕಾರಣಿಗಳು ವರ್ಷಗಳಾದ್ರೂ ಜನರ ಸಮಸ್ಯೆಯನ್ನು ಪರಿಹರಿಸಲು, ಜನರ ಬೇಡಿಕೆಗಳನ್ನು ಈಡೇರಿಸಲು ಹಿಂದೆ ಮುಂದೆ ನೋಡುತ್ತಾರೆ. ಅಂತಹವರ ಮಧ್ಯೆ ಇಲ್ಲೊಬ್ರು ಸಚಿವೆ ಪುಟ್ಟ ಪೋರನೊಬ್ಬನ ಪುಟಾಣಿ ಆಸೆಯನ್ನು ನೆರವೇರಿಸುವ ಭರವಸೆಯನ್ನು ನೀಡಿದ್ದಾರೆ. ಹೌದು ಕೇರಳ ಮೂಲದ ಬಾಲಕನೊಬ್ಬ ಉಪ್ಪಿಟ್ಟು ಬೇಡ, ಅಂಗನವಾಡಿಯಲ್ಲಿ ನಮ್ಗೆ ಚಿಕನ್ ಫ್ರೈ ಮತ್ತು ಬಿರಿಯಾನಿಯೇ ಕೊಡ್ಬೇಕೆಂದು ಕೇಳಿಕೊಂಡಿದ್ದಾನೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಕೇರಳದ ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ವೀಣಾ ಜಾರ್ಜ್ ಪುಟ್ಟ ಪೋರನಿಗಾಗಿ ಅಂಗನವಾಡಿಯ ಮೆನುವನ್ನು ಮಾರ್ಪಾಡು ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.

ಕೇರಳದ ಶಂಕು (ರಿಜುಲ್ ಎಸ್. ಸುಂದರ್) ಎಂಬ ಪುಟ್ಟ ಪೋರ ಉಪ್ಪಿಟ್ಟು ಬೇಡ ಅಂಗನವಾಡಿಯಲ್ಲಿ ಬಿರಿಯಾನಿ ಮತ್ತು ಚಿಕನ್ ಫ್ರೈ ಕೊಡ್ಬೇಕು ಎಂದು ತಾಯಿಯ ಬಳಿ ಹೇಳಿದ್ದಾನೆ. ಈತನ ಮುದ್ದಾದ ಬೇಡಿಕೆಯ ವಿಡಿಯೋವನ್ನು ಆತನ ತಾಯಿ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಇದಕ್ಕೆ ಪ್ರತಿಕ್ರಿಯಿಸಿದ ಕೇರಳದ ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ವೀಣಾ ಜಾರ್ಜ್ ಪುಟ್ಟ ಬಾಲಕನ ಬೇಡಿಕೆಯನ್ನು ಪರಿಗಣನೆಗೆ ತೆಗೆದುಕೊಂಡು, ಶಂಕುವಿಗಾಗಿ ಅಂಗನವಾಡಿಯ ಮೆನುವನ್ನು ಮಾರ್ಪಾಡು ಮಾಡಲಾಗುವುದು ಎಂದು ಭರವಸೆಯನ್ನು ನೀಡಿದ್ದಾರೆ.
ಈ ಕುರಿತ ವಿಡಿಯೋವನ್ನು ವೀಣಾ ಜಾರ್ಜ್ (Veena George) ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಶುಂಕುವಿನ ಮನವಿಯನ್ನು ಪರಿಗಣಿಸಿ, ಅಂಗನವಾಡಿ ಮೆನು ಮಾರ್ಪಾಡು ಕುರಿತು ಚರ್ಚಿಸಲಾಗುವುದು” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಕೇರಳ ಸರ್ಕಾರವು ಅಂಗನವಾಡಿಗಳ ಮೂಲಕ ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಉಪ್ಪಿಟ್ಟು ಜೊತೆಗೆ ಮಕ್ಕಳಿಗೆ ಸರಿಯಾದ ಪೌಷ್ಠಿಕಾಂಶ ದೊರೆಯುವುದನ್ನು ಖಚಿತಪಡಿಸಿಕೊಳ್ಳಲು ವಿವಿಧ ಊಟದ ಆಯ್ಕೆಗಳನ್ನು ನೀಡಲಾಗುತ್ತಿದೆ. ಪ್ರಸ್ತುತ ಮೊಟ್ಟೆ ಮತ್ತು ಹಾಲು ಒದಗಿಸುವ ಯೋಜನೆ ಯಶಸ್ವಿಯಾಗಿದೆ. ಇನ್ನೂ ಶಂಕುವಿನ ಮನವಿಯನ್ನು ಗಂಭೀರವಾಗಿ ಪರಿಗಣಿಸಿ, ಅಂಗನವಾಡಿಯ ಮೆನುವನ್ನು ಮಾರ್ಪಾಡು ಮಾಡುವ ಬಗ್ಗೆ ಚರ್ಚಿಸಲಾಗುವುದು ಎಂದು ವೀಣಾ ಜಾರ್ಜ್ ಹೇಳಿರುವ ದೃಶ್ಯವನ್ನು ಕಾಣಬಹುದು.ರಾಹುಲ್ ದ್ರಾವಿಡ್ – ಗೂಡ್ಸ್ ಆಟೋ ಚಾಲಕನ ನಡುವೆ ವಾಗ್ವಾದ
ಒಂದು ದಿನದ ಹಿಂದೆ ಶೇರ್ ಮಾಡಲಾದ ಈ ವಿಡಿಯೋ 4.7 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಮುಗ್ಧ ಮಗುವಿನ ಬೇಡಿಕೆಯನ್ನು ಪರಿಗಣಿಸಿದ ನಿಮಗೆ ಧನ್ಯವಾದಗಳುʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼನಾವು ಅಂಗನವಾಡಿಯಲ್ಲಿದ್ದಾಗ ಈ ಸಚಿವೆ ಇರಬೇಕಿತ್ತುʼ ಎಂಬ ತಮಾಷೆಯ ಕಾಮೆಂಟ್ ಬರೆದುಕೊಂಡಿದ್ದಾರೆ.

The post ಉಪ್ಪಿಟ್ಟು ಬೇಡ, ಅಂಗನವಾಡಿಯಲ್ಲಿ ಬಿರಿಯಾನಿ ಮತ್ತು ಚಿಕನ್ ಫ್ರೈ ಕೊಡ್ಬೇಕು ಪುಟ್ಟ ಪೋರನ ಮನವಿ..! appeared first on Good News 24x7.

]]>