verdict Archives - Good News 24x7 https://www.goodnews24x7.com/tag/verdict/ Kannada Thu, 24 Sep 2026 11:51:24 +0000 en-US hourly 1 https://wordpress.org/?v=7.1.2 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg verdict Archives - Good News 24x7 https://www.goodnews24x7.com/tag/verdict/ 32 32 ರೇಣುಕಾಸ್ವಾಮಿ ಕೊ* ಪ್ರಕರಣ: ನಟ ದರ್ಶನ್‌ಗೆ ಮತ್ತಷ್ಟು ಸಂಕಷ್ಟ, https://www.goodnews24x7.com/renukaswamy-murder-case-fresh-trouble-for-actor-darshan-court-orders-recording-of-pradoshs-approver-testimony-on-sept-28/ Thu, 24 Sep 2026 10:55:44 +0000 https://www.goodnews24x7.com/?p=10088 ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ಪ್ರದೋಷ್‌ ಅವರ ಮಾಫಿ ಸಾಕ್ಷಿ (ಅಪ್ರೂವರ್) ಹೇಳಿಕೆಯನ್ನು ದಾಖಲಿಸಿಕೊಳ್ಳಲು 59ನೇ ಸೆಷನ್ಸ್ ಕೋರ್ಟ್‌ ಸೆಪ್ಟೆಂಬರ್ 28ಕ್ಕೆ ದಿನಾಂಕ ನಿಗದಿಪಡಿಸಿದೆ. ಪ್ರದೋಷ್ ಮಾಫಿ ಸಾಕ್ಷಿಯಾಗುವುದನ್ನು ತಡೆಯಲು ನಟ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು…

The post ರೇಣುಕಾಸ್ವಾಮಿ ಕೊ* ಪ್ರಕರಣ: ನಟ ದರ್ಶನ್‌ಗೆ ಮತ್ತಷ್ಟು ಸಂಕಷ್ಟ, appeared first on Good News 24x7.

]]>

ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ಪ್ರದೋಷ್‌ ಅವರ ಮಾಫಿ ಸಾಕ್ಷಿ (ಅಪ್ರೂವರ್) ಹೇಳಿಕೆಯನ್ನು ದಾಖಲಿಸಿಕೊಳ್ಳಲು 59ನೇ ಸೆಷನ್ಸ್ ಕೋರ್ಟ್‌ ಸೆಪ್ಟೆಂಬರ್ 28ಕ್ಕೆ ದಿನಾಂಕ ನಿಗದಿಪಡಿಸಿದೆ. ಪ್ರದೋಷ್ ಮಾಫಿ ಸಾಕ್ಷಿಯಾಗುವುದನ್ನು ತಡೆಯಲು ನಟ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಇತ್ತೀಚೆಗಷ್ಟೇ ಹೈಕೋರ್ಟ್ ವಜಾಗೊಳಿಸಿತ್ತು. ಹೈಕೋರ್ಟ್‌ನ ಈ ತೀರ್ಪಿನ ಬೆನ್ನಲ್ಲೇ ವಿಚಾರಣಾ ನ್ಯಾಯಾಲಯವು ಸಾಕ್ಷಿ ದಾಖಲಾತಿಗೆ ಮುಹೂರ್ತ ನಿಗದಿಪಡಿಸಿದ್ದು, ದರ್ಶನ್ ಬಳಗಕ್ಕೆ ದೊಡ್ಡ ಹಿನ್ನಡೆಯಾಗಿದೆ.

ಇನ್ನೊಂದೆಡೆ, ಹೈಕೋರ್ಟ್‌ ನೀಡಿದ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ದರ್ಶನ್ ಪರ ವಕೀಲರು ನಿರ್ಧರಿಸಿದ್ದಾರೆ. ಸುಪ್ರೀಂ ಕೋರ್ಟ್‌ ಮೆಟ್ಟಿಲೇರುತ್ತಿರುವ ಕಾರಣ ಮಾಫಿ ಸಾಕ್ಷಿ ಹೇಳಿಕೆ ದಾಖಲಿಸುವ ಪ್ರಕ್ರಿಯೆಯನ್ನು ಮುಂದೂಡಬೇಕೆಂದು ದರ್ಶನ್ ಪರ ವಕೀಲರು ಕೋರ್ಟ್‌ಗೆ ಮನವಿ ಮಾಡಿದ್ದರು. ಆದರೆ ಈ ಮನವಿಯನ್ನು ನಿರಾಕರಿಸಿದ ನ್ಯಾಯಾಲಯ, “ಈ ಪ್ರಕರಣದ ವಿಚಾರಣೆಗೆ ಸುಪ್ರೀಂ ಕೋರ್ಟ್ ಈಗಾಗಲೇ ಸಮಯದ ಮಿತಿ (ಟೈಮ್ ಬಾಂಡ್) ವಿಧಿಸಿದೆ, ಹೀಗಾಗಿ ದಿನಾಂಕವನ್ನು ಮುಂದೂಡಲು ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿ ಅರ್ಜಿ ತಳ್ಳಿಹಾಕಿದೆ.

The post ರೇಣುಕಾಸ್ವಾಮಿ ಕೊ* ಪ್ರಕರಣ: ನಟ ದರ್ಶನ್‌ಗೆ ಮತ್ತಷ್ಟು ಸಂಕಷ್ಟ, appeared first on Good News 24x7.

]]>
ಮೈಸೂರು ದಸರಾ ಕುಸ್ತಿಗೂ ‘ಥರ್ಡ್‌ ಅಂಪೈರ್‌’ ಸ್ಪರ್ಶ: ಜಟ್ಟಿಗಳ ತೀರ್ಪಿನ ಗೊಂದಲಕ್ಕೆ ವಿಡಿಯೋ ತಂತ್ರಜ್ಞಾನದ ಬ್ರೇಕ್‌! https://www.goodnews24x7.com/third-umpire-touch-for-mysuru-dasara-wrestling-video-technology-to-resolve-disputes-over-referees-decisions/ Thu, 24 Sep 2026 09:04:47 +0000 https://www.goodnews24x7.com/?p=10079 ನಾಡಹಬ್ಬ ಮೈಸೂರು ದಸರಾ ಕುಸ್ತಿ ಅಖಾಡದಲ್ಲಿ ಪ್ರತಿವರ್ಷ ಎದುರಾಗುವ ಸೋಲು-ಗೆಲುವಿನ ವಾಗ್ವಾದಗಳು ಹಾಗೂ ಅಂಪೈರ್‌ಗಳ ತೀರ್ಪಿನ ಮೇಲಿನ ಆಕ್ಷೇಪಗಳಿಗೆ ಬ್ರೇಕ್ ಹಾಕಲು ದಸರಾ ಕುಸ್ತಿ ಉಪಸಮಿತಿ ಮಹತ್ವದ ಹೆಜ್ಜೆ ಇಟ್ಟಿದೆ. ಕ್ರಿಕೆಟ್‌ನಲ್ಲಿರುವ ‘ಥರ್ಡ್ ಅಂಪೈರ್’ ಅಥವಾ ಡಿಆರ್‌ಎಸ್ (DRS) ಮಾದರಿಯಲ್ಲಿ, ಈ…

The post ಮೈಸೂರು ದಸರಾ ಕುಸ್ತಿಗೂ ‘ಥರ್ಡ್‌ ಅಂಪೈರ್‌’ ಸ್ಪರ್ಶ: ಜಟ್ಟಿಗಳ ತೀರ್ಪಿನ ಗೊಂದಲಕ್ಕೆ ವಿಡಿಯೋ ತಂತ್ರಜ್ಞಾನದ ಬ್ರೇಕ್‌! appeared first on Good News 24x7.

]]>

ನಾಡಹಬ್ಬ ಮೈಸೂರು ದಸರಾ ಕುಸ್ತಿ ಅಖಾಡದಲ್ಲಿ ಪ್ರತಿವರ್ಷ ಎದುರಾಗುವ ಸೋಲು-ಗೆಲುವಿನ ವಾಗ್ವಾದಗಳು ಹಾಗೂ ಅಂಪೈರ್‌ಗಳ ತೀರ್ಪಿನ ಮೇಲಿನ ಆಕ್ಷೇಪಗಳಿಗೆ ಬ್ರೇಕ್ ಹಾಕಲು ದಸರಾ ಕುಸ್ತಿ ಉಪಸಮಿತಿ ಮಹತ್ವದ ಹೆಜ್ಜೆ ಇಟ್ಟಿದೆ. ಕ್ರಿಕೆಟ್‌ನಲ್ಲಿರುವ ‘ಥರ್ಡ್ ಅಂಪೈರ್’ ಅಥವಾ ಡಿಆರ್‌ಎಸ್ (DRS) ಮಾದರಿಯಲ್ಲಿ, ಈ ಬಾರಿ ಕುಸ್ತಿ ಪಂದ್ಯಾವಳಿಯಲ್ಲೂ ‘ವಿಡಿಯೋ ಅನಾಲಿಸಿಸ್’ ತಂತ್ರಜ್ಞಾನವನ್ನು ಅಳವಡಿಸಲು ಸಿದ್ಧತೆ ನಡೆಸಲಾಗಿದೆ. ರಾಜ್ಯದ ನಾನಾ ಭಾಗಗಳಿಂದ ಆಗಮಿಸುವ ನೂರಾರು ಕುಸ್ತಿಪಟುಗಳಿಗೆ ಪಾರದರ್ಶಕ ವಾತಾವರಣ ಕಲ್ಪಿಸುವುದು ಮತ್ತು ಕಳೆದ ಬಾರಿಯಂತೆ ಅಖಾಡದಲ್ಲಿ ಎದುರಾಗಿದ್ದ ಗದ್ದಲ-ಅಸಮಾಧಾನಗಳನ್ನು ತಡೆಯುವುದು ಈ ನೂತನ ವ್ಯವಸ್ಥೆಯ ಮುಖ್ಯ ಉದ್ದೇಶವಾಗಿದೆ.

ಈ ಹೊಸ ತಂತ್ರಜ್ಞಾನದಡಿ ಪಂದ್ಯದ ಪ್ರತಿಯೊಂದು ನಿರ್ಣಾಯಕ ಕ್ಷಣಗಳನ್ನು ಕ್ಯಾಮೆರಾಗಳಲ್ಲಿ ಸೆರೆಹಿಡಿಯಲಾಗುತ್ತದೆ. ಅಂಪೈರ್‌ಗಳ ತೀರ್ಪಿನಲ್ಲಿ ಸಣ್ಣ ಅನುಮಾನ ಅಥವಾ ಆಕ್ಷೇಪಣೆಗಳು ಮೂಡಿದ ತಕ್ಷಣ, ಪ್ರತ್ಯೇಕವಾಗಿ ಕುಳಿತಿರುವ ತಜ್ಞರ ತಂಡವು ವಿಡಿಯೋ ದೃಶ್ಯಗಳನ್ನು ಮರುಪರಿಶೀಲಿಸಿ (Replay) ಕರಾರುವಕ್ಕಾದ ನಿರ್ಧಾರವನ್ನು ಪ್ರಕಟಿಸಲಿದೆ. ಸಮಯದ ನಿರ್ವಹಣೆಗಾಗಿ ಕಳೆದ ಬಾರಿ ಡಿಜಿಟಲ್ ಟೈಮ್ ಬೋರ್ಡ್ ಅಳವಡಿಸಿ ಯಶಸ್ವಿಯಾಗಿದ್ದ ಸಮಿತಿ, ಈ ಬಾರಿ ‘ವಿಡಿಯೋ ಅನಾಲಿಸಿಸ್’ ಮೂಲಕ ತೀರ್ಪಿನ ವ್ಯವಸ್ಥೆಯನ್ನು ಸಂಪೂರ್ಣ ದಾಖಲಾತಿ ಆಧಾರಿತವಾಗಿಸಿ ಪಂದ್ಯಾವಳಿಗೆ ಹೊಸ ಮೆರುಗು ನೀಡಲು ಮುಂದಾಗಿದೆ.

The post ಮೈಸೂರು ದಸರಾ ಕುಸ್ತಿಗೂ ‘ಥರ್ಡ್‌ ಅಂಪೈರ್‌’ ಸ್ಪರ್ಶ: ಜಟ್ಟಿಗಳ ತೀರ್ಪಿನ ಗೊಂದಲಕ್ಕೆ ವಿಡಿಯೋ ತಂತ್ರಜ್ಞಾನದ ಬ್ರೇಕ್‌! appeared first on Good News 24x7.

]]>