victory Archives - Good News 24x7 https://www.goodnews24x7.com/tag/victory/ Kannada Tue, 05 May 2026 10:04:00 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg victory Archives - Good News 24x7 https://www.goodnews24x7.com/tag/victory/ 32 32 ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಕ್ರಾಂತಿ: ಮನೆಕೆಲಸದಾಕೆಯಿಂದ ಶಾಸಕಿಯವರೆಗೆ ಕಲಿತಾ ಮಾಝಿ ಸಾಧನೆ https://www.goodnews24x7.com/political-revolution-in-west-bengal-from-housemaid-to-mla-kalita-majhis-achievement%e0%b2%aa%e0%b2%b6%e0%b3%8d%e0%b2%9a%e0%b2%bf%e0%b2%ae-%e0%b2%ac%e0%b2%82%e0%b2%97%e0%b2%be%e0%b2%b3%e0%b2%a6/ Tue, 05 May 2026 10:04:00 +0000 https://www.goodnews24x7.com/?p=9491 ಪಶ್ಚಿಮ ಬಂಗಾಳದ 2026ರ ವಿಧಾನಸಭಾ ಚುನಾವಣೆಯು ಭಾರತೀಯ ರಾಜಕೀಯ ಇತಿಹಾಸದಲ್ಲೇ ಒಂದು ಸುವರ್ಣ ಅಧ್ಯಾಯ ಬರೆದಿದೆ. 15 ವರ್ಷಗಳ ತೃಣಮೂಲ ಕಾಂಗ್ರೆಸ್ (TMC) ಆಳ್ವಿಕೆಯನ್ನು ಅಂತ್ಯಗೊಳಿಸಿ, 294 ಕ್ಷೇತ್ರಗಳ ಪೈಕಿ 206 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಐತಿಹಾಸಿಕ ಬಹುಮತ ಸಾಧಿಸಿದೆ.…

The post ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಕ್ರಾಂತಿ: ಮನೆಕೆಲಸದಾಕೆಯಿಂದ ಶಾಸಕಿಯವರೆಗೆ ಕಲಿತಾ ಮಾಝಿ ಸಾಧನೆ appeared first on Good News 24x7.

]]>

ಪಶ್ಚಿಮ ಬಂಗಾಳದ 2026ರ ವಿಧಾನಸಭಾ ಚುನಾವಣೆಯು ಭಾರತೀಯ ರಾಜಕೀಯ ಇತಿಹಾಸದಲ್ಲೇ ಒಂದು ಸುವರ್ಣ ಅಧ್ಯಾಯ ಬರೆದಿದೆ. 15 ವರ್ಷಗಳ ತೃಣಮೂಲ ಕಾಂಗ್ರೆಸ್ (TMC) ಆಳ್ವಿಕೆಯನ್ನು ಅಂತ್ಯಗೊಳಿಸಿ, 294 ಕ್ಷೇತ್ರಗಳ ಪೈಕಿ 206 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಐತಿಹಾಸಿಕ ಬಹುಮತ ಸಾಧಿಸಿದೆ. ಈ ಬೃಹತ್ ಗೆಲುವಿನ ನಡುವೆ ಎಲ್ಲರ ಗಮನ ಸೆಳೆದಿರುವುದು ಆಸ್ಗ್ರಾಮ್ ಕ್ಷೇತ್ರದ ನೂತನ ಶಾಸಕಿ ಕಲಿತಾ ಮಾಝಿ. ಕೇವಲ ₹2,500 ಮಾಸಿಕ ವೇತನಕ್ಕೆ ನಾಲ್ಕು ಮನೆಗಳಲ್ಲಿ ಪಾತ್ರೆ ತೊಳೆದು ಜೀವನ ಸಾಗಿಸುತ್ತಿದ್ದ ಇವರು, ಇಂದು ಜನಪ್ರತಿನಿಧಿಯಾಗಿ ವಿಧಾನಸಭೆ ಪ್ರವೇಶಿಸುತ್ತಿದ್ದಾರೆ.

ಕಳೆದ 2021ರ ಚುನಾವಣೆಯಲ್ಲಿ ಅಲ್ಪ ಅಂತರದಿಂದ ಸೋತಿದ್ದರೂ ಎದೆಗುಂದದ ಕಲಿತಾ ಮಾಝಿ ಅವರಿಗೆ ಬಿಜೆಪಿ ಹೈಕಮಾಂಡ್ ಮತ್ತೊಮ್ಮೆ ಮಣೆ ಹಾಕಿತ್ತು. ಸಾಮಾನ್ಯ ಕಾರ್ಯಕರ್ತರಿಗೆ ಮನ್ನಣೆ ನೀಡುವ ಪಕ್ಷದ ತಂತ್ರಗಾರಿಕೆಗೆ ಸಾಕ್ಷಿಯಾಗಿ, ಮಾಝಿ ಅವರು ತಮ್ಮ ಪ್ರತಿಸ್ಪರ್ಧಿ ಶ್ಯಾಮ ಪ್ರಸನ್ನ ಲೋಹರ್ ಅವರನ್ನು 12,535 ಮತಗಳ ಭರ್ಜರಿ ಅಂತರದಿಂದ ಮಣ್ಣು ಮುಕ್ಕಿಸಿದ್ದಾರೆ. 1972ರ ನಂತರ ಮೊದಲ ಬಾರಿಗೆ ಬಂಗಾಳದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿರುವ ಬಿಜೆಪಿ ಪಾಳಯದಲ್ಲಿ ಮಾಝಿ ಅವರ ಗೆಲುವು “ಸಾಮಾನ್ಯ ಜನರ ಗೆಲುವು” ಎಂದು ಬಣ್ಣಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು “ಬಂಗಾಳದಲ್ಲಿ ಕಮಲ ಅರಳಿದೆ” ಎಂದು ಹೇಳುವ ಮೂಲಕ ಈ ಬದಲಾವಣೆಯನ್ನು ಸ್ವಾಗತಿಸಿದ್ದು, ಇದು ಕೇವಲ ಅಧಿಕಾರ ಬದಲಾವಣೆಯಲ್ಲ, ರಾಜ್ಯದ ರಾಜಕೀಯ ದಿಕ್ಕನ್ನೇ ಬದಲಿಸಿದ ಮಹತ್ವದ ತಿರುವು ಎನ್ನಲಾಗಿದೆ.

The post ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಕ್ರಾಂತಿ: ಮನೆಕೆಲಸದಾಕೆಯಿಂದ ಶಾಸಕಿಯವರೆಗೆ ಕಲಿತಾ ಮಾಝಿ ಸಾಧನೆ appeared first on Good News 24x7.

]]>
ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ವಿಶ್ವದಾಖಲೆ: ಈ ಸಾಧನೆ ಮಾಡಿದ ಏಕೈಕ ಕ್ರಿಕೆಟಿಗ! https://www.goodnews24x7.com/virat-kohli-sets-world-record-in-ipl-the-only-cricketer-to-achieve-this-feat%e0%b2%90%e0%b2%aa%e0%b2%bf%e0%b2%8e%e0%b2%b2%e0%b3%8d%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%b5%e0%b2%bf/ Tue, 28 Apr 2026 13:02:02 +0000 https://www.goodnews24x7.com/?p=9472 ನಿನ್ನೆ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ದೆಹಲಿ ತಂಡವನ್ನು ಮಣಿಸಿದ ಆರ್‌ಸಿಬಿ ಭರ್ಜರಿ ಜಯ ದಾಖಲಿಸಿದೆ. ಇದರ ಜೊತೆಗೆ ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲೇ ಯಾರೂ ಮಾಡದ ಅತಿದೊಡ್ಡ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಐಪಿಎಲ್ ಇತಿಹಾಸದಲ್ಲಿ…

The post ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ವಿಶ್ವದಾಖಲೆ: ಈ ಸಾಧನೆ ಮಾಡಿದ ಏಕೈಕ ಕ್ರಿಕೆಟಿಗ! appeared first on Good News 24x7.

]]>

ನಿನ್ನೆ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ದೆಹಲಿ ತಂಡವನ್ನು ಮಣಿಸಿದ ಆರ್‌ಸಿಬಿ ಭರ್ಜರಿ ಜಯ ದಾಖಲಿಸಿದೆ. ಇದರ ಜೊತೆಗೆ ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲೇ ಯಾರೂ ಮಾಡದ ಅತಿದೊಡ್ಡ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 9000 ರನ್‌ಗಳ ಗಡಿ ದಾಟಿದ ಮೊದಲ ಬ್ಯಾಟರ್ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ. ವಿಶೇಷವೆಂದರೆ, ತಮ್ಮ ತವರಿನ ಮೈದಾನದಲ್ಲೇ ಈ ಅಮೋಘ ಮೈಲಿಗಲ್ಲು ತಲುಪುವ ಮೂಲಕ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ.

9 ವಿಕೆಟ್‌ಗಳ ಭರ್ಜರಿ ಜಯ:
ಕೇವಲ 76 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ಪರ ವಿರಾಟ್ ಕೊಹ್ಲಿ ಅಬ್ಬರಿಸಿದರು. ತಮ್ಮ 275ನೇ ಐಪಿಎಲ್ ಪಂದ್ಯದಲ್ಲಿ ಈ ದಾಖಲೆ ಬರೆದ ಕೊಹ್ಲಿ, ಮೈಲಿಗಲ್ಲು ತಲುಪಿದ ಬೆನ್ನಲ್ಲೇ ಸತತ ಸಿಕ್ಸರ್‌ಗಳನ್ನು ಸಿಡಿಸಿ ತಂಡಕ್ಕೆ 9 ವಿಕೆಟ್‌ಗಳ ಸುಲಭ ಜಯ ತಂದುಕೊಟ್ಟರು. ಈ ಮೂಲಕ ಐಪಿಎಲ್‌ನ ‘ರನ್ ಮಷೀನ್’ ಎಂಬ ತಮ್ಮ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡರು.

ದಾಖಲೆಗಳ ಸರದಾರ:
ಪ್ರಸ್ತುತ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿರುವ ರೋಹಿತ್ ಶರ್ಮಾಗಿಂತ ಕೊಹ್ಲಿ ಸುಮಾರು 2000 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿರುವುದು ಅವರ ಸ್ಥಿರತೆಗೆ ಸಾಕ್ಷಿ.

ವಿರಾಟ್ ಕೊಹ್ಲಿ ಐಪಿಎಲ್ ಅಂಕಿಅಂಶ:
ಒಟ್ಟು ರನ್: 9000+

ಸರಾಸರಿ: 40ಕ್ಕೂ ಹೆಚ್ಚು

ಸ್ಟ್ರೈಕ್ ರೇಟ್: 130ಕ್ಕೂ ಅಧಿಕ

ಸಾಧನೆ: ಹಲವು ಶತಕ ಹಾಗೂ ಅರ್ಧಶತಕಗಳ ಅಧಿಪತಿ

ವಿಶ್ವದ ಅತ್ಯಂತ ಕಠಿಣ ಟಿ20 ಲೀಗ್‌ನಲ್ಲಿ ಸತತವಾಗಿ ಶ್ರೇಷ್ಠ ಪ್ರದರ್ಶನ ನೀಡುತ್ತಿರುವ ಕೊಹ್ಲಿ, ಕ್ರಿಕೆಟ್ ಜಗತ್ತಿನ ಅಪ್ರತಿಮ ಆಟಗಾರ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

The post ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ವಿಶ್ವದಾಖಲೆ: ಈ ಸಾಧನೆ ಮಾಡಿದ ಏಕೈಕ ಕ್ರಿಕೆಟಿಗ! appeared first on Good News 24x7.

]]>
ಗೆಲುವಿಗಾಗಿ ‘ದಳಪತಿ’ ಪ್ರಾರ್ಥನೆ: ತಿರುಚೆಂಡೂರು ಮುರುಗನ್ ದೇವಸ್ಥಾನಕ್ಕೆ ನಟ ವಿಜಯ್ ಭೇಟಿ. https://www.goodnews24x7.com/dalapati-prayer-for-victory-actor-vijay-visits-tiruchendur-murugan-temple/ Tue, 28 Apr 2026 09:51:40 +0000 https://www.goodnews24x7.com/?p=9458 ಟುಟಿಕೋರಿನ್‌: ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಅಧ್ಯಕ್ಷ ಹಾಗೂ ಖ್ಯಾತ ನಟ ಜೋಸೆಫ್ ವಿಜಯ್‌ ಅವರು ಇಂದು ಪ್ರಸಿದ್ಧ ತಿರುಚೆಂಡೂರು ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ…

The post ಗೆಲುವಿಗಾಗಿ ‘ದಳಪತಿ’ ಪ್ರಾರ್ಥನೆ: ತಿರುಚೆಂಡೂರು ಮುರುಗನ್ ದೇವಸ್ಥಾನಕ್ಕೆ ನಟ ವಿಜಯ್ ಭೇಟಿ. appeared first on Good News 24x7.

]]>

ಟುಟಿಕೋರಿನ್‌: ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಅಧ್ಯಕ್ಷ ಹಾಗೂ ಖ್ಯಾತ ನಟ ಜೋಸೆಫ್ ವಿಜಯ್‌ ಅವರು ಇಂದು ಪ್ರಸಿದ್ಧ ತಿರುಚೆಂಡೂರು ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಪೂರ್ಣಕುಂಭ ಸ್ವಾಗತ ಮತ್ತು ದರ್ಶನ:
ಚೆನ್ನೈನಿಂದ ಆಗಮಿಸಿದ ವಿಜಯ್ ಅವರಿಗೆ ದೇವಾಲಯದ ವತಿಯಿಂದ ಪೂರ್ಣಕುಂಭ ಗೌರವಗಳೊಂದಿಗೆ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ದೇವರ ಶಕ್ತಿಯ ಸಂಕೇತವಾದ ‘ವೇಲ್’ (ಈಟಿ) ಮತ್ತು ಶಾಲನ್ನು ನೀಡಿ ಅವರನ್ನು ಗೌರವಿಸಲಾಯಿತು. ಮುಂಜಾನೆಯೇ ದೇವಸ್ಥಾನಕ್ಕೆ ಭೇಟಿ ನೀಡಿದರೂ, ತಮ್ಮ ನೆಚ್ಚಿನ ನಟನನ್ನು ನೋಡಲು ಸಾವಿರಾರು ಅಭಿಮಾನಿಗಳು ದೇವಾಲಯದ ಆವರಣದಲ್ಲಿ ಜಮಾಯಿಸಿದ್ದರು.

ವಿಶ್ವ ರೂಪ ದರ್ಶನ ಮತ್ತು ಗೆಲುವಿನ ಹಾರೈಕೆ:
ಪವಿತ್ರ ‘ವಿಶ್ವರೂಪ ದರ್ಶನ’ದಲ್ಲಿ ಪಾಲ್ಗೊಂಡ ವಿಜಯ್ ಅವರು ಸುಮಾರು ಹೊತ್ತು ಪ್ರಾರ್ಥನೆ ಸಲ್ಲಿಸಿದರು. ಏಪ್ರಿಲ್ 23 ರಂದು ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವು ಭರ್ಜರಿ ಗೆಲುವು ಸಾಧಿಸಲಿ ಎಂಬ ಉದ್ದೇಶದಿಂದ ವಿಜಯ್ ಅವರು ಈ ಪವಿತ್ರ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ವಿಜಯ್ ಅವರೊಂದಿಗೆ ಟಿವಿಕೆ ಪ್ರಧಾನ ಕಾರ್ಯದರ್ಶಿ ಬಸ್ಸಿ ಆನಂದ್ ಹಾಗೂ ಇತರ ಪ್ರಮುಖ ನಾಯಕರು ಉಪಸ್ಥಿತರಿದ್ದರು.

ಮೇ 4ಕ್ಕೆ ಅಗ್ನಿಪರೀಕ್ಷೆ:
ಸಿನೆಮಾ ರಂಗದ ಅಧಿಪತಿಯಾಗಿ ಮಿಂಚಿದ್ದ ವಿಜಯ್, ಈಗ ರಾಜಕೀಯ ಅಖಾಡದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ರಾಜ್ಯದ ಜನರ ತೀರ್ಪು ಇವರ ಪರವಾಗಿದೆಯೇ ಎಂಬ ಕುತೂಹಲಕ್ಕೆ ಮೇ 4 ರಂದು ನಡೆಯಲಿರುವ ಮತ ಎಣಿಕೆಯ ದಿನ ಉತ್ತರ ಸಿಗಲಿದೆ.

The post ಗೆಲುವಿಗಾಗಿ ‘ದಳಪತಿ’ ಪ್ರಾರ್ಥನೆ: ತಿರುಚೆಂಡೂರು ಮುರುಗನ್ ದೇವಸ್ಥಾನಕ್ಕೆ ನಟ ವಿಜಯ್ ಭೇಟಿ. appeared first on Good News 24x7.

]]>
ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ! https://www.goodnews24x7.com/fellow-competitors-helped-a-collapsed-runner-regardless-of-victory-heartwarming-video/ Thu, 23 Apr 2026 10:36:09 +0000 https://www.goodnews24x7.com/?p=9390 ಕ್ರೀಡೆ ಅಂದಾಗ ಅಲ್ಲಿ ಎದುರಾಳಿಗಳ ವಿರುದ್ಧ ಗೆಲ್ಲಲೇಬೇಕು ಎನ್ನುವ ಹಠ ಇದ್ದೇ ಇರುತ್ತದೆ. ಆದರೆ ಇಲ್ಲೊಂದು ಮ್ಯಾರಾಥಾನ್‌ನಲ್ಲಿ ಸೋಲು-ಗೆಲುವುಗಿಂತಲೂ ಮಾನವೀಯತೆ ಮುಖ್ಯ ಅನ್ನೋದನ್ನು ಇಬ್ಬರು ಯುವ ಕ್ರೀಡಾಪಟುಗಳು ತೋರಿಸಿಕೊಟ್ಟಿದ್ದಾರೆ‌. ತಮ್ಮ ವೈಯಕ್ತಿಕ ದಾಖಲೆಯನ್ನು ಬದಿಗಿಟ್ಟು ಸಂಕಷ್ಟದಲ್ಲಿದ್ದ ಸಹ ಕ್ರೀಡಾಪಟುವಿಗೆ ಸಹಾಯ ಮಾಡುವ…

The post ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ! appeared first on Good News 24x7.

]]>

ಕ್ರೀಡೆ ಅಂದಾಗ ಅಲ್ಲಿ ಎದುರಾಳಿಗಳ ವಿರುದ್ಧ ಗೆಲ್ಲಲೇಬೇಕು ಎನ್ನುವ ಹಠ ಇದ್ದೇ ಇರುತ್ತದೆ. ಆದರೆ ಇಲ್ಲೊಂದು ಮ್ಯಾರಾಥಾನ್‌ನಲ್ಲಿ ಸೋಲು-ಗೆಲುವುಗಿಂತಲೂ ಮಾನವೀಯತೆ ಮುಖ್ಯ ಅನ್ನೋದನ್ನು ಇಬ್ಬರು ಯುವ ಕ್ರೀಡಾಪಟುಗಳು ತೋರಿಸಿಕೊಟ್ಟಿದ್ದಾರೆ‌. ತಮ್ಮ ವೈಯಕ್ತಿಕ ದಾಖಲೆಯನ್ನು ಬದಿಗಿಟ್ಟು ಸಂಕಷ್ಟದಲ್ಲಿದ್ದ ಸಹ ಕ್ರೀಡಾಪಟುವಿಗೆ ಸಹಾಯ ಮಾಡುವ ಮೂಲಕ ಕ್ರೀಡಾ ಮನೋಭಾವ ಮೆರೆದಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಘಟನೆಯ ವಿವರ:
ಬೋಸ್ಟನ್ ಮ್ಯಾರಾಥಾನ್‌ನಲ್ಲಿ ಸುಮಾರು ಮೂರು ಗಂಟೆಗಳ ನಿರಂತರ ಓಟದ ನಂತರ, ಓಟಗಾರ ಅಜಯ್ ಹರಿದಾಸ್ಸೆ ತೀವ್ರ ಆಯಾಸದಿಂದಾಗಿ 26ನೇ ಮೈಲಿ ಗಡಿಯ ಹತ್ತಿರ ಕುಸಿದು ಬಿದ್ದರು. ಪದೇ ಪದೇ ಎದ್ದು ನಿಲ್ಲಲು ಪ್ರಯತ್ನಿಸಿದರೂ ದೇಹ ಸಹಕರಿಸದೆ ಅವರು ವಿಫಲರಾಗುತ್ತಿದ್ದರು. ಇದನ್ನು ಕಂಡು ಪ್ರೇಕ್ಷಕರು ಆತಂಕಕ್ಕೊಳಗಾಗಿದ್ದ ಸಮಯದಲ್ಲಿ, ಇಬ್ಬರು ಸಹ ಆಟಗಾರರು ದೇವದೂತರಂತೆ ಸಹಾಯಕ್ಕೆ ಧಾವಿಸಿದ್ದಾರೆ.

ಆರನ್ ಬೆಗ್ಸ್: ಉತ್ತರ ಐರ್ಲೆಂಡ್‌ನ ಈ ಓಟಗಾರ ಅಜಯ್ ಅವರ ಸ್ಥಿತಿಯನ್ನು ಕಂಡು ಕೂಡಲೇ ತಮ್ಮ ಓಟವನ್ನು ನಿಲ್ಲಿಸಿ ಸಹಾಯ ಮಾಡಲು ಬಂದರು.

ರಾಬ್ಸನ್ ಡಿ ಒಲಿವೇರಾ: ಬ್ರೆಜಿಲ್‌ನ ಈ ಓಟಗಾರ ಕೂಡ ಅಜಯ್ ಅವರನ್ನು ಎತ್ತಲು ಕೈಜೋಡಿಸಿದರು. ವಿಶೇಷವೆಂದರೆ, ರಾಬ್ಸನ್ ಅವರು ಆ ಸಮಯದಲ್ಲಿ ತಮ್ಮ ವೈಯಕ್ತಿಕ ದಾಖಲೆ ನಿರ್ಮಿಸುವ ಹಾದಿಯಲ್ಲಿದ್ದರು. ಆದರೂ ದಾಖಲೆಗಿಂತ ಮಾನವೀಯತೆಯೇ ಮುಖ್ಯ ಎಂದು ಅಜಯ್ ಅವರನ್ನು ತಮ್ಮ ಹೆಗಲ ಮೇಲೆ ಹೊತ್ತು ಅಂತಿಮ ಗೆರೆ ತಲುಪಲು ನೆರವಾದರು.

ಹರ್ಷೋದ್ಗಾರ:
ಈ ಮೂವರು ಕ್ರೀಡಾಪಟುಗಳು ಒಟ್ಟಾಗಿ ಅಂತಿಮ ಗೆರೆಯನ್ನು ದಾಟುತ್ತಿದ್ದಂತೆ ಪ್ರೇಕ್ಷಕರಿಂದ ಜೋರಾದ ಹರ್ಷೋದ್ಗಾರ ಕೇಳಿಬಂದಿತು. ಸ್ಪರ್ಧಾತ್ಮಕ ಕ್ರೀಡೆಯಲ್ಲಿ ಕಂಡುಬಂದ ಈ ಅಪರೂಪದ ಏಕತೆಯ ಕ್ಷಣವನ್ನು ನೆರೆದಿದ್ದವರು ಶ್ಲಾಘಿಸಿದರು. “ಇವರೇ ನಿಜವಾದ ಕ್ರೀಡಾಪಟುಗಳು” ಎಂದು ನೆಟ್ಟಿಗರು ಕೊಂಡಾಡುತ್ತಿದ್ದು, ಈ ಭಾವನಾತ್ಮಕ ವಿಡಿಯೋ ಆನ್‌ಲೈನ್‌ನಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದೆ.

The post ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ! appeared first on Good News 24x7.

]]>
ಹೊರ್ಮುಜ್ ಜಲಸಂಧಿ ಮುಕ್ತ: ಭಾರತದ ಇಂಧನ ಭದ್ರತೆಗೆ ಸಿಕ್ಕ ಜಯ. https://www.goodnews24x7.com/strait-of-hormuz-open-a-victory-for-indias-energy-security/ Sat, 18 Apr 2026 08:59:41 +0000 https://www.goodnews24x7.com/?p=9302 ಟೆಹ್ರಾನ್ : ಪಶ್ಚಿಮ ಏಷ್ಯಾದ ಸಂಘರ್ಷದಿಂದಾಗಿ ಮುಚ್ಚಲ್ಪಟ್ಟಿದ್ದ ವಿಶ್ವದ ಪ್ರಮುಖ ವ್ಯಾಪಾರ ಮಾರ್ಗ ಹೊರ್ಮುಜ್ ಜಲಸಂಧಿಯನ್ನು ಪುನಃ ತೆರೆಯಲು ಇರಾನ್ ನಿರ್ಧರಿಸಿದ್ದು, ಇದು ಭಾರತಕ್ಕೆ ದೊಡ್ಡ ಸಮಾಧಾನ ತಂದಿದೆ. ಭಾರತವು ತನ್ನ ಒಟ್ಟು ತೈಲ ಆಮದಿನ ಸುಮಾರು 50% ರಷ್ಟು ಭಾಗಕ್ಕೆ…

The post ಹೊರ್ಮುಜ್ ಜಲಸಂಧಿ ಮುಕ್ತ: ಭಾರತದ ಇಂಧನ ಭದ್ರತೆಗೆ ಸಿಕ್ಕ ಜಯ. appeared first on Good News 24x7.

]]>

ಟೆಹ್ರಾನ್ : ಪಶ್ಚಿಮ ಏಷ್ಯಾದ ಸಂಘರ್ಷದಿಂದಾಗಿ ಮುಚ್ಚಲ್ಪಟ್ಟಿದ್ದ ವಿಶ್ವದ ಪ್ರಮುಖ ವ್ಯಾಪಾರ ಮಾರ್ಗ ಹೊರ್ಮುಜ್ ಜಲಸಂಧಿಯನ್ನು ಪುನಃ ತೆರೆಯಲು ಇರಾನ್ ನಿರ್ಧರಿಸಿದ್ದು, ಇದು ಭಾರತಕ್ಕೆ ದೊಡ್ಡ ಸಮಾಧಾನ ತಂದಿದೆ. ಭಾರತವು ತನ್ನ ಒಟ್ಟು ತೈಲ ಆಮದಿನ ಸುಮಾರು 50% ರಷ್ಟು ಭಾಗಕ್ಕೆ ಈ ಜಲಮಾರ್ಗವನ್ನೇ ಅವಲಂಬಿಸಿದೆ. ಇರಾನ್ ವಿದೇಶಾಂಗ ಸಚಿವ ಸೈಯದ್ ಅಬ್ಬಾಸ್ ಅರಾಘಚಿ ಅವರ ಈ ನಿರ್ಧಾರದಿಂದಾಗಿ, ಜಲಸಂಧಿಯ ಪಶ್ಚಿಮ ಭಾಗದಲ್ಲಿ ಸಿಲುಕಿಕೊಂಡಿದ್ದ ಸುಮಾರು 15 ಭಾರತೀಯ ವ್ಯಾಪಾರಿ ಹಡಗುಗಳು ಸುರಕ್ಷಿತವಾಗಿ ದೇಶಕ್ಕೆ ಮರಳಲು ಹಾದಿ ಸುಗಮವಾಗಿದೆ.

ಕಳೆದ ಫೆಬ್ರವರಿ 28ರಿಂದ ಆರಂಭವಾಗಿದ್ದ 50 ದಿನಗಳ ಸಂಘರ್ಷವನ್ನು ಕೊನೆಗೊಳಿಸಲು ಇರಾನ್ ಮತ್ತು ಅಮೆರಿಕಾ ನಡುವೆ ನಡೆಯುತ್ತಿರುವ ರಾಜತಾಂತ್ರಿಕ ಒಪ್ಪಂದದ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಜಾಗತಿಕ ಇಂಧನ ಪೂರೈಕೆ ಮತ್ತು ಸುರಕ್ಷಿತ ವ್ಯಾಪಾರದ ದೃಷ್ಟಿಯಿಂದ ಈ ಮಾರ್ಗವನ್ನು ತೆರೆಯುವ ಅಗತ್ಯವನ್ನು ಭಾರತವು ಅಂತರಾಷ್ಟ್ರೀಯ ಮಟ್ಟದಲ್ಲಿ ಒತ್ತಿಹೇಳಿತ್ತು. ಈ ಬೆಳವಣಿಗೆಯ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯೂ ಇಳಿಕೆಯಾಗಿದ್ದು, ಬ್ಯಾರೆಲ್‌ಗೆ 119 ಡಾಲರ್ ತಲುಪಿದ್ದ ಬ್ರೆಂಟ್ ಕಚ್ಚಾ ತೈಲದ ಬೆಲೆ ಈಗ 90 ಡಾಲರ್ಗಿಂತ ಕೆಳಕ್ಕೆ ಕುಸಿದಿದೆ. ಇದು ಭಾರತದ ಆರ್ಥಿಕತೆಗೆ ಅತ್ಯಂತ ಸ್ವಾಗತಾರ್ಹ ಸಂಗತಿಯಾಗಿದೆ.

The post ಹೊರ್ಮುಜ್ ಜಲಸಂಧಿ ಮುಕ್ತ: ಭಾರತದ ಇಂಧನ ಭದ್ರತೆಗೆ ಸಿಕ್ಕ ಜಯ. appeared first on Good News 24x7.

]]>
ಸೂರ್ಯಕುಮಾರ್ ಸೇನೆಗೆ ಮತ್ತೊಂದು ವಿಜಯಮಾಲೆ. ಏಷ್ಯಾಕಪ್ ಫೈನಲ್ ಗೇರಿದ ಟೀಮ್ ಇಂಡಿಯಾ https://www.goodnews24x7.com/another-victory-for-suryakumar-sena-team-india-reaches-asia-cup-final/ Thu, 25 Sep 2025 07:54:41 +0000 https://www.goodnews24x7.com/?p=7611 ಬಾಂಗ್ಲಾದೇಶದ ವಿರುದ್ಧ ನಡೆದ ಏಷ್ಯಾಕಪ್ನ ಸೂಪರ್-4 ಪಂದ್ಯದಲ್ಲಿ ಸೂರ್ಯಕುಮಾರ್ ನೇತೃತ್ವದ ಟೀಮ್ ಇಂಡಿಯಾ 41 ರನ್ಗಳಿಂದ ಭರ್ಜರಿ ಗೆಲುವು ದಾಖಲು ಮಾಡಿದೆ. ಈ ಮೂಲಕ ಏಷ್ಯಾಕಪ್ನಲ್ಲಿ ಸತತ ಐದು ಮ್ಯಾಚ್ಗಳಲ್ಲಿ ವಿಜಯಮಾಲೆ ಧರಿಸಿದೆ. ದುಬೈನ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ…

The post ಸೂರ್ಯಕುಮಾರ್ ಸೇನೆಗೆ ಮತ್ತೊಂದು ವಿಜಯಮಾಲೆ. ಏಷ್ಯಾಕಪ್ ಫೈನಲ್ ಗೇರಿದ ಟೀಮ್ ಇಂಡಿಯಾ appeared first on Good News 24x7.

]]>

ಬಾಂಗ್ಲಾದೇಶದ ವಿರುದ್ಧ ನಡೆದ ಏಷ್ಯಾಕಪ್ನ ಸೂಪರ್-4 ಪಂದ್ಯದಲ್ಲಿ ಸೂರ್ಯಕುಮಾರ್ ನೇತೃತ್ವದ ಟೀಮ್ ಇಂಡಿಯಾ 41 ರನ್ಗಳಿಂದ ಭರ್ಜರಿ ಗೆಲುವು ದಾಖಲು ಮಾಡಿದೆ. ಈ ಮೂಲಕ ಏಷ್ಯಾಕಪ್ನಲ್ಲಿ ಸತತ ಐದು ಮ್ಯಾಚ್ಗಳಲ್ಲಿ ವಿಜಯಮಾಲೆ ಧರಿಸಿದೆ.

ದುಬೈನ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿ ಟೀಮ್ ಇಂಡಿಯಾವನ್ನು ಮೊದಲ ಬ್ಯಾಟಿಂಗ್ಗೆ ಆಹ್ವಾನ ಮಾಡಿತು. ಅದರಂತೆ ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಅಭಿಷೇಕ್ ಶರ್ಮಾ ಅವರ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 169 ರನ್ಗಳ ಟಾರ್ಗೆಟ್ ಅನ್ನು ನೀಡಿತ್ತು.

ಇದಾದ ಮೇಲೆ ಗುರಿ ಬೆನ್ನತ್ತಿದ್ದ ಬಾಂಗ್ಲಾದೇಶ ಆರಂಭದಲ್ಲೇ ದೊಡ್ಡ ಆಘಾತಕ್ಕೆ ಒಳಗಾಯಿತು. ಓಪನರ್ ತಾಂಜಿದ್ ಹಸನ್ ತಮೀಮ್ ಕೇವಲ 1 ರನ್ಗೆ ಔಟ್ ಆದರು. ಇವರ ನಂತರ ಬಂದ ಪರ್ವೇಜ್ ಹೊಸೇನ್ ಎಮನ್, ಓಪನರ್ ಸೈಫ್ ಹಸನ್ಗೆ ಉತ್ತಮ ಸಾಥ್ ಕೊಟ್ಟು 21 ರನ್ ಗಳಿಸಿ ಔಟ್ ಆದರು. ಇನ್ನೊಂದೆಡೆ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ್ದ ಸೈಫ್ ಹಸನ್ ಅರ್ಧಶತಕ ಬಾರಿಸಿ ಪಂದ್ಯದ ಕೊನೆವರೆಗೂ ಹೋರಾಟ ನಡೆಸಿದ್ದನು.

ಸೈಫ್ ಹಸನ್ ಕೊನೆವರೆಗೆ ಹೋರಾಟ ನಡೆಸಿ 51 ಎಸೆತಗಳಲ್ಲಿ 3 ಬೌಂಡರಿ ಹಾಗೂ 5 ಸಿಕ್ಸರ್ಗಳಿಂದ 69 ರನ್ ಗಳಿಸಿದರು. ತೋಹಿದ್ ಹೃದಯ್ 7, ಕ್ಯಾಪ್ಟನ್ ಜಾಕೀರ್ ಅಲಿ 4 ರನ್ ಬಿಟ್ಟರೇ ಉಳಿದ ಯಾವ ಬ್ಯಾಟರ್ ಕೂಡ 7 ರನ್ಗಳ ಗಡಿ ದಾಟಲಿಲ್ಲ. ಹೀಗಾಗಿ 19.3 ಓವರ್ಗಳಲ್ಲಿ ಕೇವಲ 127 ರನ್ಗೆ ಬಾಂಗ್ಲಾ ಆಟಗಾರರು ಆಲೌಟ್ ಆದರು. ಟೀಮ್ ಇಂಡಿಯಾ ವಿರುದ್ಧ ಬಾಂಗ್ಲಾದೇಶ ಸೋಲುಂಡಿತು. ಈ ವಿಜಯಮಾಲೆಯೊಂದಿಗೆ ಟೀಮ್ ಇಂಡಿಯಾ ಏಷ್ಯಾಕಪ್ ಫೈನಲ್ಗೆ ಎಂಟ್ರಿಕೊಟ್ಟಿದೆ.

The post ಸೂರ್ಯಕುಮಾರ್ ಸೇನೆಗೆ ಮತ್ತೊಂದು ವಿಜಯಮಾಲೆ. ಏಷ್ಯಾಕಪ್ ಫೈನಲ್ ಗೇರಿದ ಟೀಮ್ ಇಂಡಿಯಾ appeared first on Good News 24x7.

]]>
“ಟೀಕೆಗಳು ಬರುತ್ತವೆ ಎಂಬುದು ಹಾರ್ದಿಕ್‌ಗೆ ಗೊತ್ತಿತ್ತು” – ಹಾರ್ದಿಕ್ ಪಾಂಡ್ಯರನ್ನು ಪ್ರಶಂಸಿಸಿದ ರಾಜೀವ್ ಶುಕ್ಲಾ. https://www.goodnews24x7.com/hardik-knew-there-would-be-criticism-rajeev-shukla-praises-hardik-pandya/ Sun, 24 Aug 2025 07:34:58 +0000 https://www.goodnews24x7.com/?p=6643 ಮುಂಬೈ: ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ಬದಲಾವಣೆ ಐಪಿಎಲ್ 2024ರಲ್ಲಿ ದೊಡ್ಡ ಚರ್ಚೆಗೆ ಕಾರಣವಾಯಿತು. ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಬಿಡಿಸಿ, ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನನ್ನಾಗಿ ಮಾಡಿರುವ ನಿರ್ಧಾರ ಅಭಿಮಾನಿಗಳಲ್ಲಿ ಅಸಮಾಧಾನ ಹುಟ್ಟಿಸಿತ್ತು. ಆದರೆ, ಈ ತೀವ್ರ ಒತ್ತಡದ ನಡುವೆಯೂ…

The post “ಟೀಕೆಗಳು ಬರುತ್ತವೆ ಎಂಬುದು ಹಾರ್ದಿಕ್‌ಗೆ ಗೊತ್ತಿತ್ತು” – ಹಾರ್ದಿಕ್ ಪಾಂಡ್ಯರನ್ನು ಪ್ರಶಂಸಿಸಿದ ರಾಜೀವ್ ಶುಕ್ಲಾ. appeared first on Good News 24x7.

]]>

ಮುಂಬೈ: ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ಬದಲಾವಣೆ ಐಪಿಎಲ್ 2024ರಲ್ಲಿ ದೊಡ್ಡ ಚರ್ಚೆಗೆ ಕಾರಣವಾಯಿತು. ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಬಿಡಿಸಿ, ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನನ್ನಾಗಿ ಮಾಡಿರುವ ನಿರ್ಧಾರ ಅಭಿಮಾನಿಗಳಲ್ಲಿ ಅಸಮಾಧಾನ ಹುಟ್ಟಿಸಿತ್ತು. ಆದರೆ, ಈ ತೀವ್ರ ಒತ್ತಡದ ನಡುವೆಯೂ ಹಾರ್ದಿಕ್ ಜವಾಬ್ದಾರಿಯಿಂದ ವರ್ತಿಸಿದ್ದಾರೆಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಹೇಳಿದರು.

“ಹಾರ್ದಿಕ್‌ಗಳಿಗೆ ಟೀಕೆಗೊಳಗಾಗುತ್ತೇನೆ ಎಂಬುದು ಮೊದಲೇ ಗೊತ್ತಿತ್ತು” ಯುಪಿ ಟಿ20 ಲೀಗ್ ಸಂದರ್ಭದಲ್ಲಿ ನಡೆದ ಟಾಕ್‌ ಶೋವೊಂದರಲ್ಲಿ ಮಾತನಾಡಿದ ರಾಜೀವ್ ಶುಕ್ಲಾ, “ಹಾರ್ದಿಕ್ ಗುಜರಾತ್ ಟೈಟನ್ಸ್‌ನಿಂದ ಮುಂಬೈ ಇಂಡಿಯನ್ಸ್‌ಗೆ ಬಂದ ನಂತರ ನಾಯಕತ್ವದ ಹೊಣೆ ಹೊತ್ತರು. ರೋಹಿತ್ ಶರ್ಮಾ ಅವರಿಂದ ನಾಯಕತ್ವ ಕಳೆದುಕೊಂಡ ಘಟನೆ ಅಭಿಮಾನಿಗಳಿಗೆ ಅಸ್ವೀಕೃತವಾಗಿತ್ತು. ಹಾರ್ದಿಕ್ ಅವರ ಮೇಲೆ ಟೀಕೆಗಳ ಮಳೆಯಾಯ್ತು. ಆದರೆ ಅವರು ಅತ್ಯಂತ ಪ್ರಬುದ್ಧವಾಗಿ ವರ್ತಿಸಿದರು. ಅವರ ಸ್ಥೈರ್ಯ ಶ್ಲಾಘನೀಯ,” ಎಂದರು. ಬಿಸಿಸಿಐ ಆಟಗಾರರೊಂದಿಗೆ ಮಾತುಕತೆ ಮಾಡುತ್ತದೆ. ನಾಯಕತ್ವ ಬದಲಾವಣೆ ನಡೆದಾಗ ಬಿಸಿಸಿಐ ಆಟಗಾರರಿಗೆ ಮನೋಬಲ ನೀಡುತ್ತದೆ ಎಂದು ಶುಕ್ಲಾ ತಿಳಿಸಿದರು. “ಆಗ್ಯೂನಟೆಡ್ ತೀರ್ಮಾನ ತೆಗೆದುಕೊಳ್ಳುವಾಗ, ಬಿಸಿಸಿಐ ಆಟಗಾರರೊಂದಿಗೆ ಚರ್ಚೆ ನಡೆಸುತ್ತದೆ. ಅವರಿಗೆ ಧೈರ್ಯ ತುಂಬುವುದು ನಮ್ಮ ಕರ್ತವ್ಯ. ಹಾರ್ದಿಕ್ ಅವರ ಮನಸ್ಥಿತಿ ದೃಢವಾಗಿತ್ತು. ಅಭಿಮಾನಿಗಳ ಟೀಕೆಗಳ ನಡುವೆಯೂ ಅವರು ತಾಳ್ಮೆಯಿಂದ ನಡಿದರು,” ಎಂದು ಹೇಳಿದರು.

 

ಪ್ರದರ್ಶನವಲ್ಲದ ಸಮಯ, ಬಳಿಕದ ಪಲಟು. ಐಪಿಎಲ್ 2024ರಲ್ಲಿ ಹಾರ್ದಿಕ್ ಪಾಂಡ್ಯ ಪ್ರತಿಷ್ಠಿತ ನಾಯಕರಾಗಿದ್ದರೂ, ಮುಂಬೈ ಇಂಡಿಯನ್ಸ್ ತಂಡ ಕೊನೆಯ ಸ್ಥಾನದಲ್ಲಿ ಮುಕ್ತಾಯಗೊಳಿಸಿತು. ಹಾರ್ದಿಕ್ ಅವರ ವೈಯಕ್ತಿಕ ಪ್ರದರ್ಶನವೂ ಗಮನಸೆಳೆಯಲಿಲ್ಲ. ಆದರೆ ನಂತರ ನಡೆದ ಟಿ20 ವಿಶ್ವಕಪ್‌ನಲ್ಲಿ ಅವರು ಭಾರತ ತಂಡದ ಗೆಲುವಿಗೆ ಬಲ ನೀಡಿದರು. ದಕ್ಷಿಣ ಆಫ್ರಿಕಾವನ್ನು ಎದುರಿಸಿದ ಫೈನಲ್ ಪಂದ್ಯದಲ್ಲಿ ಹಾರ್ದಿಕ್ ಕೊನೆಯ ಓವರ್‌ನಲ್ಲಿ ಡೇವಿಡ್ ಮಿಲ್ಲರ್‌ನ ವಿಕೆಟ್ ಪಡೆದು ಭಾರತಕ್ಕೆ ಜಯ ತಂದರು. ಆ ಕ್ಷಣದಲ್ಲಿ ಹಾರ್ದಿಕ್ ಕಣ್ಣೀರಿಟ್ಟರು – ಅಭಿಮಾನಿಗಳ ಹೃದಯವೂ ಗೆದ್ದರು.“ಮುಂದಿನ ಐಪಿಎಲ್‌ನಲ್ಲಿ ಮತ್ತೆ ಬೆಂಬಲ ಸಿಗಲಿದೆ” ಈ ಸಂದರ್ಭವನ್ನೆಲ್ಲಾ ವಿವರಿಸಿದ ರಾಜೀವ್ ಶುಕ್ಲಾ, “ಅಭಿಮಾನಿಗಳು ಕೂಡಾ ಅವರ ಧೈರ್ಯ ಮತ್ತು ಸಮರ್ಪಣೆಯನ್ನೊಬ್ಬಿಸಿ, ಮುಂದೆ ಹಾರ್ದಿಕ್‌ಗೆ ಮತ್ತೆ ಬೆಂಬಲ ನೀಡುವ ನಿರೀಕ್ಷೆ ಇದೆ,” ಎಂದು ಅಭಿಪ್ರಾಯಪಟ್ಟರು.

The post “ಟೀಕೆಗಳು ಬರುತ್ತವೆ ಎಂಬುದು ಹಾರ್ದಿಕ್‌ಗೆ ಗೊತ್ತಿತ್ತು” – ಹಾರ್ದಿಕ್ ಪಾಂಡ್ಯರನ್ನು ಪ್ರಶಂಸಿಸಿದ ರಾಜೀವ್ ಶುಕ್ಲಾ. appeared first on Good News 24x7.

]]>