Vidhana Soudha Archives - Good News 24x7 https://www.goodnews24x7.com/tag/vidhana-soudha/ Kannada Mon, 11 Aug 2025 09:43:33 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Vidhana Soudha Archives - Good News 24x7 https://www.goodnews24x7.com/tag/vidhana-soudha/ 32 32 ಆರ್‌ಸಿಬಿ, ಕೆಎಸ್‌ಸಿಎಗೆ ಮತ್ತೊಂದು ಬಿಗ್ ಶಾಕ್ !!..ಹೈಕೋರ್ಟ್ ಮೆಟ್ಟಿಲೇರಿದ ಕಬ್ಬನ್ ಪಾರ್ಕ್ ಅಸೋಸಿಯೇಷನ್…. https://www.goodnews24x7.com/%e0%b2%86%e0%b2%b0%e0%b3%8d%e0%b2%b8%e0%b2%bf%e0%b2%ac%e0%b2%bf-%e0%b2%95%e0%b3%86%e0%b2%8e%e0%b2%b8%e0%b3%8d%e0%b2%b8%e0%b2%bf%e0%b2%8e%e0%b2%97%e0%b3%86-%e0%b2%ae%e0%b2%a4/ Mon, 11 Aug 2025 09:43:33 +0000 https://www.goodnews24x7.com/?p=5811 ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಟ್ರೋಫಿ ಗೆದ್ದ ಸಂಭ್ರಮಾಚರಣೆ ವಿಧಾನಸೌಧದ ಗ್ರಾಂಡ್ ಸ್ಪೆಪ್ಸ್ ಮೇಲೆ ನೆರವೇರಿತ್ತು. ಆರ್‌ಸಿಬಿ ಆಟಗಾರರನ್ನು ವಿಧಾನಸೌಧದ ಗ್ರಾಂಡ್ ಸ್ಟೆಪ್ಸ್ನಲ್ಲಿ ಸರ್ಕಾರ ಸನ್ಮಾನಿಸಿತ್ತು. ಆರ್‌ಸಿಬಿ ಆಟಗಾರರನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರು. ಅಭಿಮಾನಿಗಳು ವಿಧಾನಸೌಧದ…

The post ಆರ್‌ಸಿಬಿ, ಕೆಎಸ್‌ಸಿಎಗೆ ಮತ್ತೊಂದು ಬಿಗ್ ಶಾಕ್ !!..ಹೈಕೋರ್ಟ್ ಮೆಟ್ಟಿಲೇರಿದ ಕಬ್ಬನ್ ಪಾರ್ಕ್ ಅಸೋಸಿಯೇಷನ್…. appeared first on Good News 24x7.

]]>

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಟ್ರೋಫಿ ಗೆದ್ದ ಸಂಭ್ರಮಾಚರಣೆ ವಿಧಾನಸೌಧದ ಗ್ರಾಂಡ್ ಸ್ಪೆಪ್ಸ್ ಮೇಲೆ ನೆರವೇರಿತ್ತು. ಆರ್‌ಸಿಬಿ ಆಟಗಾರರನ್ನು ವಿಧಾನಸೌಧದ ಗ್ರಾಂಡ್ ಸ್ಟೆಪ್ಸ್ನಲ್ಲಿ ಸರ್ಕಾರ ಸನ್ಮಾನಿಸಿತ್ತು. ಆರ್‌ಸಿಬಿ ಆಟಗಾರರನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರು. ಅಭಿಮಾನಿಗಳು ವಿಧಾನಸೌಧದ ಪಕ್ಕದಲ್ಲಿ ಇದ್ದ ಕಬ್ಬನ್‌ ಪಾರ್ಕ್‌ನಲ್ಲಿನ ಮರಗಳ ಮೇಲೆ ಹತ್ತಿ ಆಟ ಗಾರರನ್ನು ನೋಡಲು ಮುಂದಾದರು. ಈ ವೇಳೆ ಅಭಿಮಾನಿಗಳ ಕಾಲ್ತುಳಿತದಿಂದ ಸಾಕಷ್ಟು ಸಸಿಗಳು ಹಾಳಾಗಿವೆ.ಇದರಿಂದ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ ಎಂದು ಕಬ್ಬನ್ ಪಾರ್ಕ್ ಅಸೋಸಿಯೇಷನ್ ಕೋರ್ಟ್ ಮೆಟ್ಟಿಲು ಏರಿದೆ.

ಕಬ್ಬನ್‌ ಪಾರ್ಕ್‌ಲ್ಲಿದ್ದ ಸಸಿಗಳು, ಮರಗಳಿಗೆ ಮತ್ತು ಉದ್ಯಾನವನಕ್ಕೆ ಹಾನಿಯಾಗಿದೆ. ಹಾಗೇ ವಿಧಾನಸೌಧದ ಮುಂಭಾಗದ ಗಾರ್ಡನ್‌ನಲ್ಲೂ ಹಾನಿಯಾಗಿದೆ. ತೋಟ ಗಾರಿಕೆ ಇಲಾಖೆ ಕಬ್ಬನ್‌ ಪಾರ್ಕ್‌ನಲ್ಲಿ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಲಾನ್ ಅಳವಡಿಸಿತ್ತು. ಈ ಲಾನ್‌ಗು ಕೂಡ ಕಾಲ್ತುಳಿತದಲ್ಲಿ ಹಾನಿಯಾಗಿದೆ. ಕಬ್ಬನ್ ಪಾರ್ಕ್‌ಗೆ ಹಾನಿಯಾದರೆ ನೀವೇ ಹೊಣೆಗಾರರು ಅಂತ ಆರ್‌ಸಿಬಿ ಮತ್ತು ಕೆಎಸ್‌ಸಿಎಗೆ ಮೊದಲೇ ಷರತ್ತು ಹಾಕಲಾಗಿತ್ತು.

ಇದೀಗ ಕಾಲ್ತುಳಿತದಲ್ಲಿ ಪಾರ್ಕ್‌ಗೆ ಹಾನಿಯಾಗಿದ್ದು, ಈ ನಷ್ಟವನ್ನು ಆರ್‌ಸಿಬಿ ಹಾಗೂ ಕೆಎಸ್‌ಸಿಎ ಭರಿಸಿಕೊಡ ಬೇಕು ಅಂತ ಕಬ್ಬನ್ ಪಾರ್ಕ್ ಅಸೋಸಿಯೇಷನ್‌ ಹೈಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸಿದೆ.

 

The post ಆರ್‌ಸಿಬಿ, ಕೆಎಸ್‌ಸಿಎಗೆ ಮತ್ತೊಂದು ಬಿಗ್ ಶಾಕ್ !!..ಹೈಕೋರ್ಟ್ ಮೆಟ್ಟಿಲೇರಿದ ಕಬ್ಬನ್ ಪಾರ್ಕ್ ಅಸೋಸಿಯೇಷನ್…. appeared first on Good News 24x7.

]]>
ಕೈ MLA ಪುಟ್ಟರಂಗ ಶೆಟ್ಟಿಗೆ ಸಂಕಷ್ಟ , ವಿಧಾನದ 25 ಲಕ್ಷ ಕಿಕ್ ಬ್ಯಾಕ್ ಪ್ರಕರಣ; ಹೆಚ್ಚುವರಿ ತನಿಖೆಗೆ ಹೈ ಕೋರ್ಟ್ ಆದೇಶ. https://www.goodnews24x7.com/%e0%b2%95%e0%b3%88-mla-%e0%b2%aa%e0%b3%81%e0%b2%9f%e0%b3%8d%e0%b2%9f%e0%b2%b0%e0%b2%82%e0%b2%97-%e0%b2%b6%e0%b3%86%e0%b2%9f%e0%b3%8d%e0%b2%9f%e0%b2%bf%e0%b2%97%e0%b3%86-%e0%b2%b8%e0%b2%82%e0%b2%95/ Tue, 04 Feb 2025 07:04:40 +0000 https://www.goodnews24x7.com/?p=2219 ಆರು ವರ್ಷಗಳ ಹಿಂದೆ ಸಚಿವರಿಗೆ ತಲುಪಬೇಕಿದ್ದ 25.76 ಲಕ್ಷ ರೂ.ಗಳು ವಿಧಾನಸೌಧದಲ್ಲಿಯೇ ಜಪ್ತಿಯಾದ ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುವಂತೆ ಲೋಕಾಯುಕ್ತ ಲೋಕಾಯುಕ್ತ ಪೊಲೀಸರಿಗೆ ನ್ಯಾಯಾಲಯ ಆದೇಶಿಸಿದೆ. ಇದರ ಬೆನ್ನಲ್ಲೇ ಪ್ರಕರಣಕ್ಕೆ ಮರುಜೀವ ನೀಡಲು ಪ್ರತ್ಯೇಕ ತನಿಖಾ ತಂಡ ನೇಮಿಸುವ ಕುರಿತು…

The post ಕೈ MLA ಪುಟ್ಟರಂಗ ಶೆಟ್ಟಿಗೆ ಸಂಕಷ್ಟ , ವಿಧಾನದ 25 ಲಕ್ಷ ಕಿಕ್ ಬ್ಯಾಕ್ ಪ್ರಕರಣ; ಹೆಚ್ಚುವರಿ ತನಿಖೆಗೆ ಹೈ ಕೋರ್ಟ್ ಆದೇಶ. appeared first on Good News 24x7.

]]>

ಆರು ವರ್ಷಗಳ ಹಿಂದೆ ಸಚಿವರಿಗೆ ತಲುಪಬೇಕಿದ್ದ 25.76 ಲಕ್ಷ ರೂ.ಗಳು ವಿಧಾನಸೌಧದಲ್ಲಿಯೇ ಜಪ್ತಿಯಾದ ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುವಂತೆ ಲೋಕಾಯುಕ್ತ ಲೋಕಾಯುಕ್ತ ಪೊಲೀಸರಿಗೆ ನ್ಯಾಯಾಲಯ ಆದೇಶಿಸಿದೆ.
ಇದರ ಬೆನ್ನಲ್ಲೇ ಪ್ರಕರಣಕ್ಕೆ ಮರುಜೀವ ನೀಡಲು ಪ್ರತ್ಯೇಕ ತನಿಖಾ ತಂಡ ನೇಮಿಸುವ ಕುರಿತು ಲೋಕಾಯುಕ್ತ ಉನ್ನತ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಮರುತನಿಖೆ ಹಿನ್ನೆಲೆಯಲ್ಲಿ ಹಾಲಿ ಶಾಸಕ ಪುಟ್ಟರಂಗಶೆಟ್ಟಿ ಹಾಗೂ ಅನಂತಶಂಕರ್, ಶ್ರೀನಿಧಿ ಸೇರಿದಂತೆ ಐವರು ಮಧ್ಯವರ್ತಿಗಳು, ಹಲವು ಗುತ್ತಿಗೆದಾರರಿಗೆ ಪುನಃ ಲೋಕಾಯುಕ್ತ ವಿಚಾರಣೆಯ ಬಿಸಿತಟ್ಟುವ ಸಾಧ್ಯತೆ ನಿಚ್ಚಳವಾಗಿವೆ. ಅಂದಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಪುಟ್ಟರಂಗಶೆಟ್ಟಿ ಅವರ ಕಚೇರಿ ಸಿಬ್ಬಂದಿಗೆ ಗುತ್ತಿಗೆದಾರರ ಪರವಾಗಿ ಲಂಚ ಕೊಟ್ಟಿದ್ದ ಮಧ್ಯವರ್ತಿಗಳಿಗೆ ‘ಕ್ಲೀನ್ ಚಿಟ್’ ಹಾಗೂ ಭ್ರಷ್ಟಾಚಾರದ ಕುರಿತ ಆಳ ತನಿಖೆಯನ್ನೇ ಕೈಗೊಳ್ಳದ ‘ಲೋಕಾ’ ಕಾರ್ಯವೈಖರಿ ಕುರಿತು ಹಲವು ಪ್ರಶ್ನೆಗಳು ಎದ್ದಿದ್ದವು. ಈ ಅಂಶಗಳನ್ನು ಪುಷ್ಟಿಕರಿಸುವಂತೆ ಇಡೀ ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಆದೇಶಿಸಿದೆ.

ಶೇ.6ರಷ್ಟು ಕಮಿಷನ್ ನಡೆಯುತ್ತಿತ್ತು!:
ಆರೋಪಿ ಮೋಹನ್‌ಕುಮಾರ್, “2019ರ ಜ.3 ಹಾಗೂ 4ರಂದು ಗುತ್ತಿಗೆದಾರರ ಪರವಾಗಿ ಅನಂತಶಂಕರ್, ಶ್ರೀನಿಧಿ, ನಂದನ್, ಎ.ವಿ. ಮಂಜುನಾಥ, ಕೃಷ್ಣಮೂರ್ತಿ ಅವರಿಂದ ಪ್ರತ್ಯೇಕವಾಗಿ 25.76 ಲಕ್ಷ ರೂ. ಸಂಗ್ರಹಿಸಿ ಸಚಿವರ ಕೊಠಡಿಯಲ್ಲಿಯೇ ಇರಿಸಿದ್ದ. ಜ.4 ರಂದು ಹಣವನ್ನು ಬ್ಯಾಗ್‌ನಲ್ಲಿ ತುಂಬಿಕೊಂಡು ಸಚಿವರಿಗೆ ಲಂಚವಾಗಿ ನೀಡಲು ತೆರಳುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದೆ. ಎಂದು ತಪ್ರೊಪ್ಪಿಗೆ ಹೇಳಿಕೆ ನೀಡಿದ್ದರು.

ಅಷ್ಟೇ ಅಲ್ಲದೆ, “ಸಚಿವ ಪುಟ್ಟರಂಗಶೆಟ್ಟಿ ಅವರು ಹಿಂದುಳಿದ ವರ್ಗಗಳ ಇಲಾಖೆ ವತಿಯಿಂದ ನಡೆಯುವ ಕಾಮಗಾರಿಗಳಿಗೆ ಶೇ.6ರಷ್ಟು ಕಮಿಷನ್ ಪಡೆಯುತ್ತಾರೆ,” ಎಂಬ ಸಂಗತಿಯನ್ನು ಮೋಹನ್‌ಕುಮಾರ್, ಗುತ್ತಿಗೆದಾರರಿಗೆ ತಿಳಿಸಿದ್ದರು. ಜತೆಗೆ, ಮೋಹನ್ ಕುಮಾರ್. ಬಳಿ ದೊರೆತ ಹಣ ಯಾವ್ಯಾವ ಕ್ಷೇತ್ರದ ಕಾಮಗಾರಿಗೆ ಯಾವ ಗುತ್ತಿಗೆದಾರರು ಮಧ್ಯವರ್ತಿಗಳ ಬಳಿ ಕೊಟ್ಟುಕಳಿಸಿದ್ದ ಕಮಿಷನ್ ಎಂಬುದೂ ತನಿಖೆಯಲ್ಲಿ ಗೊತ್ತಾಗಿತ್ತು. ಪೂರಕ ಸಾಕ್ಷ್ಯಾಧಾರಗಳು ದೊರೆತರೂ ಸರಕಾರಿ ವ್ಯವಸ್ಥೆಯಲ್ಲಿ ಆಳವಾಗಿ ಹುದುಗಿರುವ ಭ್ರಷ್ಟಾಚಾರದ ಕುರಿತು ಲೋಕಾಯುಕ್ತ ಆಳವಾಗಿ ತನಿಖೆ ನಡೆಸಿಲ್ಲ. ಜತೆಗೆ, ಸಹ ಆರೋಪಿಗಳಿಗೆ ಕ್ಲೀನ್ ಚಿಟ್ ನೀಡಿ ಕೈ ತೊಳೆದುಕೊಂಡಿದ್ದಾರೆ. ಹೀಗಾಗಿ, ಪ್ರಕರಣ ಹೆಚ್ಚುವರಿ ತನಿಖೆ ನಡೆಯಬೇಕಿದೆ ಎಂದು ಮೂಲಗಳು ತಿಳಿಸಿವೆ.
ಕ್ಲೀನ್ ಚಿಟ್ ನೀಡಿತ್ತು ಲೋಕಾಯುಕ್ತ
2019ರ ಜ.4ರಂದು ಅಂದಿನ ಸಚಿವ ಪುಟ್ಟರಂಗಶೆಟ್ಟಿ ಅವರ ಕಚೇರಿಯ ಟೈಪಿಸ್ಟ್‌ಎಸ್.ಜೆ. ಮೋಹನ್ ಕುಮಾರ್ ಬಳಿ 25.76 ಲಕ್ಷರೂ. ನಗದು ಇದ್ದ ಬ್ಯಾಗನ್ನು ವಿಧಾನಸೌಧ ಗೇಟ್‌ನಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದರು. ಅನಧಿ ಕೃತವಾಗಿ ದೊರೆತಿದ್ದ ಹಣ ರಾಜಕೀಯ ಕೋಲಾಹಲಕ್ಕೂ ಕಾರಣವಾಗಿತ್ತು. ಈ ಪ್ರಕರಣದ ತನಿಖೆ ನಡೆಸಿದ್ದ ಅಂದಿನ ಎಸಿಬಿ ಅಧಿಕಾರಿಗಳು, ಮೋಹನ್ ಕುಮಾರ್, ಶ್ರೀನಿಧಿ, ಆನಂತಶಂಕರ್, ನಂದನ, ಮಂಜುನಾಥ್, ಕೃಷ್ಣಮೂರ್ತಿ ಅವರನ್ನು ಆರೋಪಿಗಳನ್ನಾಗಿ ಪರಿಗಣಿಸಿ ಭ್ರಷ್ಟಾಚಾರ ನಿಗ್ರಹ ಕಾಯಿದೆ ಅನ್ವಯ ತನಿಖೆ ನಡೆಸುತ್ತಿದ್ದರು. ಈ ಪ್ರಕರಣ 2023ರಲ್ಲಿ ಲೋಕಾಯುಕ್ತಕ್ಕೆ ಹಸ್ತಾಂತರವಾಗಿದ್ದು, ತನಿಖಾಧಿಕಾರಿಯು ಮೋಹನ್‌ಕುಮಾರ್ ಅವರನ್ನು ಮಾತ್ರ ಆರೋಪಿಯನ್ನಾಗಿ ಪರಿಗಣಿಸಿ ಚಾರ್ಜ್‌ಶೀಟ್ ಸಲ್ಲಿಸಿದ್ದರು.

The post ಕೈ MLA ಪುಟ್ಟರಂಗ ಶೆಟ್ಟಿಗೆ ಸಂಕಷ್ಟ , ವಿಧಾನದ 25 ಲಕ್ಷ ಕಿಕ್ ಬ್ಯಾಕ್ ಪ್ರಕರಣ; ಹೆಚ್ಚುವರಿ ತನಿಖೆಗೆ ಹೈ ಕೋರ್ಟ್ ಆದೇಶ. appeared first on Good News 24x7.

]]>