Vidyanagar Archives - Good News 24x7 https://www.goodnews24x7.com/tag/vidyanagar/ Kannada Fri, 31 Jan 2025 11:55:10 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Vidyanagar Archives - Good News 24x7 https://www.goodnews24x7.com/tag/vidyanagar/ 32 32 ತಪ್ಪಿಸಿಕೊಳ್ಳಲು ಪೊಲೀಸ್ ಮೇಲೆ ಹಲ್ಲೆಗೆ ಮುಂದಾದ ಆರೋಪಿ ಕಾಲಿಗೆ ಗುಂ*ಟು https://www.goodnews24x7.com/%e0%b2%a4%e0%b2%aa%e0%b3%8d%e0%b2%aa%e0%b2%bf%e0%b2%b8%e0%b2%bf%e0%b2%95%e0%b3%8a%e0%b2%b3%e0%b3%8d%e0%b2%b3%e0%b2%b2%e0%b3%81-%e0%b2%aa%e0%b3%8a%e0%b2%b2%e0%b3%80%e0%b2%b8%e0%b3%8d-%e0%b2%ae%e0%b3%87/ Fri, 31 Jan 2025 11:55:10 +0000 https://www.goodnews24x7.com/?p=2031 ಲಾಂಗ್ ನಿಂದ ಖಾಸಗೀ ಬಸ್ ಮುಂಬಾಗದ ಗಾಜನ್ನು ಹೊಡೆದು ಚಾಲಕನ ಮೇಲೆ ಹಲ್ಲೆಗೆ ಯತ್ನಿಸಿದ ಪ್ರಕರಣದಲ್ಲಿ ಆರೋಪಿ ತಪ್ಪಿಸಿಕೊಳ್ಳಲು ಮುಂದಾದಗ ಪೊಲೀಸರು ಆರೋಪಿ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದುಕೊಂಡ ಘಟನೆ ಹಾಸನ ತಾಲೂಕಿನ ಶಾಂತಿಗ್ರಾಮ ಬಳಿ ನಡೆದಿದೆ. ಆರೋಪಿ ಮೂಲತ:…

The post ತಪ್ಪಿಸಿಕೊಳ್ಳಲು ಪೊಲೀಸ್ ಮೇಲೆ ಹಲ್ಲೆಗೆ ಮುಂದಾದ ಆರೋಪಿ ಕಾಲಿಗೆ ಗುಂ*ಟು appeared first on Good News 24x7.

]]>

ಲಾಂಗ್ ನಿಂದ ಖಾಸಗೀ ಬಸ್ ಮುಂಬಾಗದ ಗಾಜನ್ನು ಹೊಡೆದು ಚಾಲಕನ ಮೇಲೆ ಹಲ್ಲೆಗೆ ಯತ್ನಿಸಿದ ಪ್ರಕರಣದಲ್ಲಿ ಆರೋಪಿ ತಪ್ಪಿಸಿಕೊಳ್ಳಲು ಮುಂದಾದಗ ಪೊಲೀಸರು ಆರೋಪಿ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದುಕೊಂಡ ಘಟನೆ ಹಾಸನ ತಾಲೂಕಿನ ಶಾಂತಿಗ್ರಾಮ ಬಳಿ ನಡೆದಿದೆ.


ಆರೋಪಿ ಮೂಲತ: ಹೊಳೆತಿಮ್ಮನಹಳ್ಳಿ ಯವನ್ನಾಗಿದ್ದು, ಹಾಲಿ ಹಾಸನ ವಿದ್ಯಾನಗರ ಗ್ರಾಮದ ವಾಸಿ ಮನೋಜ್ ಜಿ. ಗೌಡ (೨೩) ವರ್ಷ ಮೊನ್ನೆ ಜನವರಿ ೨೮ ರಾತ್ರಿ ೨ ಗಂಟೆ ಸಮಯದಲ್ಲಿ ಗಾಂಜಾ ಮತ್ತಿನಲ್ಲಿ ಬೆಂಗಳೂರು -ಮಂಗಳೂರು ಖಾಸಗಿ ಬಸ್ಸನ್ನು ಓವರ್ ಟೇಕ್ ಮಾಡಿ ಅಡ್ಡಗಟ್ಟಿ ಲಾಂಗ್ ನಿಂದ ಬಸ್ ಚಾಲಕನ ಮೇಲೆ ಹಲ್ಲೆಗೆ ಯತ್ನಿಸಿದ್ದನು. ಈ ದೃಶ್ಯವನ್ನು ಬಸ್ ನಿರ್ವಾಹಕ ವಿಡಿಯೋ ಮಾಡಿಕೊಳ್ಳುತ್ತಿದ್ದುದನ್ನು ಕಂಡು ವಾಪಾಸ್ ಕಾರು ಹತ್ತಿ ವಾಪಸ್ ತೆರಳಿದ್ದನು. ಈ ಸಂಬಂಧ ನೆನ್ನೆ ನಗರ ಠಾಣೆಯಲ್ಲಿ ಅಟೆಂಪ್ಟ್ ಮರ್ಡರ್ ಪ್ರಕರಣ ದಾಖಲು ಮಾಡಲಾಗಿತ್ತು. ಗುರುವಾರ ಆರೋಪಿ ಮನೋಜ್ ಗೌಡ ನನ್ನು ತನಿಖೆಗಾಗಿ ಬೆಂಗಳೂರಿನಿಂದ ಹಿಡಿದು ಕರೆತರುವಾಗ ಆರೋಪಿಯು ಶಾಂತಿಗ್ರಾಮ ಬಳಿ ಮೂತ್ರ ವಿಸರ್ಜನೆ ಮಾಡುವುದಾಗಿ ಪೊಲೀಸ್ ಸಿಬಂದಿಗೆ ತಿಳಿಸಿ ಜೀಪ್ ನಿಂದ ಕೆಳಗೆ ಇಳಿದಿದ್ದು, ಈ ವೇಳೆ ಪೊಲೀಸ್ ಕಾನ್ಸ್ಟೇಬಲ್ ಗೆ ಇರಿದು ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆತ್ಮರಕ್ಷಣೆಗಾಗಿ ನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಮೋಹನ್ ಕೃಷ್ಣ ಒಂದು ಸುತ್ತು ಗುಂಡನ್ನು ಗಾಳಿಯಲ್ಲಿ ಹಾರಿಸಿ. ಇನ್ನೊಂದು ಗುಂಡನ್ನು ಅವನ ಎಡಗಾಲಿಗೆ ಹಾರಿಸಲಾಗಿದೆ. ಗಾಯಾಳು ಮನೋಜ್ ಇತನ್ನನು ಪೊಲೀಸ್ ಕಾನ್‌ಸ್ಟೆಬಲ್ ಲೋಕೇಶ್ ಅವರನ್ನು ನಗರದ ಹಿಮ್ಸ್ ಹಾಸ್ಪೆಟಲ್ ಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. .

ಈ ಬಗ್ಗೆ ಹಾಸನದ ಎಸ್ಪಿ ಮೊಹಮ್ಮದ್ ಸುಜಿತಾ ಸ್ಪಷ್ಟನೆ ನೀಡಿದ್ದಾರೆ

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಜ.೨೮ ರಂದು ರಾತ್ರಿ ೧ ಗಂಟೆ ಸುಮಾರಿಗೆ ರೌಡಿ ಶೀಟರ್ ಮನು ಗೌಡ ಎಂಬಾತ ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ಸನ್ನು ತನ್ನ ಕಾರಿಗೆ ಜಾಗ ಬಿಡಲಿಲ್ಲ ಎಂಬ ಕಾರಣಕ್ಕೆ ಅಡ್ಡಗಟ್ಟಿ ಮಾರಕಸ್ತ್ರದಿಂದ ಹಲ್ಲೆ ಮಾಡಿದ್ದಾನೆ. ಬಳಿಕ ಬಸ್ ಡ್ರೈವರ್ ಅರುಣ್ ಕುಮಾರ್ ಎಂಬಾತ ನೀಡಿದ ದೂರನ್ನು ಆಧರಿಸಿ ತನಿಖೆ ನಡೆಸಿ ಬಳಿಕ ಆತನನ್ನು ಡಿ.೩೦ ರ ಸಂಜೆ ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಪತ್ತೆಹಚ್ಚಿ ಬಂಧಿಸಿ ಹಾಸನ್ ತಾಲೂಕಿನ ಶಾಂತಿಗ್ರಾಮ ಬಳಿ ಶೌಚಾಲಯಕ್ಕೆ ತೆರಳುವಾಗ ಪೊಲೀಸ್ ಸಿಬ್ಬಂದಿಗಳಾದ ಲೋಕೇಶ್, ಕುಮಾರ್, ಮೋಹನ್ ಕೃಷ್ಣ ಅವರ ಮೇಲೆ ಹಲ್ಲೆ ಮಾಡಿದ್ದಾನೆ. ಬಳಿಕ ಆತ್ಮ ರಕ್ಷಣೆಗಾಗಿ ಆರೋಪಿ ಕಾಲಿಗೆ ಗುಂಡು ಹಾರಿಸಲಾಗಿದೆ . ಈ ವೇಳೆ ತಮ್ಮ ಸಿಬ್ಬಂದಿಗಳಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಈ ಬಗ್ಗೆ ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದರು.

The post ತಪ್ಪಿಸಿಕೊಳ್ಳಲು ಪೊಲೀಸ್ ಮೇಲೆ ಹಲ್ಲೆಗೆ ಮುಂದಾದ ಆರೋಪಿ ಕಾಲಿಗೆ ಗುಂ*ಟು appeared first on Good News 24x7.

]]>