Vijay Deverakonda Archives - Good News 24x7 https://www.goodnews24x7.com/tag/vijay-deverakonda/ Kannada Sun, 22 Feb 2026 04:49:33 +0000 en-US hourly 1 https://wordpress.org/?v=7.0 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Vijay Deverakonda Archives - Good News 24x7 https://www.goodnews24x7.com/tag/vijay-deverakonda/ 32 32 ರಾಜಸ್ಥಾನದ ಉದಯಪುರದಲ್ಲಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ವಿವಾಹ https://www.goodnews24x7.com/rashmika-mandanna-and-vijay-deverakonda-to-get-married-in-udaipur-rajasthan/ Sun, 22 Feb 2026 04:49:33 +0000 https://www.goodnews24x7.com/?p=8443 ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರ ಮದುವೆ ಫೆಬ್ರವರಿ 26ರಂದು ನಡೆಯಲಿದೆ. ಕುಟುಂಬದವರು ಮತ್ತು ಕೆಲವೇ ಕೆಲವು ಆಪ್ತರು ಮಾತ್ರ ಈ ಸೆಲೆಬ್ರಿಟಿ ಮದುವೆಗೆ ಹಾಜರಿ ಹಾಕಲಿದ್ದಾರೆ. ಮದುವೆ ತಯಾರಿಯಲ್ಲಿ ಇರುವ ರಶ್ಮಿಕಾ, ವಿಜಯ್ ಅವರು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ.…

The post ರಾಜಸ್ಥಾನದ ಉದಯಪುರದಲ್ಲಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ವಿವಾಹ appeared first on Good News 24x7.

]]>

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರ ಮದುವೆ ಫೆಬ್ರವರಿ 26ರಂದು ನಡೆಯಲಿದೆ. ಕುಟುಂಬದವರು ಮತ್ತು ಕೆಲವೇ ಕೆಲವು ಆಪ್ತರು ಮಾತ್ರ ಈ ಸೆಲೆಬ್ರಿಟಿ ಮದುವೆಗೆ ಹಾಜರಿ ಹಾಕಲಿದ್ದಾರೆ. ಮದುವೆ ತಯಾರಿಯಲ್ಲಿ ಇರುವ ರಶ್ಮಿಕಾ, ವಿಜಯ್ ಅವರು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆ ವಿಷಯ ಈಗ ಗುಟ್ಟಾಗಿ ಉಳಿದಿಲ್ಲ. ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿರುವ ಅವರು ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ. ಅದಕ್ಕಾಗಿ ಸಕಲ ಸಿದ್ಧತೆ ನಡೆದಿದೆ. ಈಗಾಗಲೇ ಸಿನಿಮಾ ಕೆಲಸಗಳನ್ನು ಬದಿಗಿಟ್ಟು, ಮದುವೆ ತಯಾರಿಯಲ್ಲಿ ಅವರಿಬ್ಬರು ತೊಡಗಿಕೊಂಡಿದ್ದಾರೆ. ಸದ್ಯಕ್ಕಂತೂ ಸಖತ್ ಗಡಿಬಿಡಿ ಮಾಡುತ್ತಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಒಂದು ವಿಡಿಯೋ ವೈರಲ್ ಆಗಿದೆ. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ.

ರಾಜಸ್ಥಾನದ ಉದಯಪುರದಲ್ಲಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರ ವಿವಾಹ ನಡೆಯಲಿ. ಮದುವೆ ಆಮಂತ್ರಣ ಪತ್ರಿಕೆ ವೈರಲ್ ಆಗಿದೆ. ಹಾಗಿದ್ದರೂ ಕೂಡ ಅವರು ಸಾರ್ವಜನಿಕವಾಗಿ ಈ ಬಗ್ಗೆ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. ಕೇವಲ ಕುಟುಂಬದವರು ಮತ್ತು ಆಪ್ತರ ಸಮ್ಮುಖದಲ್ಲಿ ಮದುವೆ ನಡೆಯಲಿದೆ.

ಹಲವು ಸಿನಿಮಾಗಳನ್ನು ಒಪ್ಪಿಕೊಂಡಿರುವ ರಶ್ಮಿಕಾ ಮಂದಣ್ಣ ಅವರು ಈಗ ಬ್ರೇಕ್ ತೆಗೆದುಕೊಂಡಿದ್ದಾರೆ. ವಿಜಯ್ ದೇವರಕೊಂಡ ಕೂಡ ಮದುವೆ ಸಲುವಾಗಿ ಬಿಡುವು ಮಾಡಿಕೊಂಡಿದ್ದಾರೆ. ಅವರಿಬ್ಬರು ಈಗ ಹೈದರಾಬಾದ್​ನಿಂದ ಬೇರೆ ಕಡೆಗೆ ಹಾರಿದ್ದಾರೆ. ವಿಮಾನ ನಿಲ್ದಾಣಕ್ಕೆ ಪ್ರತ್ಯೇಕವಾಗಿ ಬಂದ ಅವರು ಪಾಪಪಾಜಿಗಳ ಕ್ಯಾಮೆರಾದಲ್ಲಿ ಸೆರೆ ಆಗಿದ್ದಾರೆ.

ಸಾಮಾನ್ಯವಾಗಿ ವಿಮಾನ ನಿಲ್ದಾಣದಲ್ಲಿ ಪಾಪರಾಜಿಗಳನ್ನು ನೋಡಿದಾಗ ರಶ್ಮಿಕಾ ಮಂದಣ್ಣ ಅವರು ಪೋಸ್ ನೀಡುತ್ತಾರೆ. ಸಾಧ್ಯವಾದರೆ ಒಂದೆರಡು ಮಾತನಾಡುತ್ತಾರೆ. ವಿಜಯ್ ದೇವರಕೊಂಡ ಕೂಡ ಹಾಗೆಯೇ ಮಾಡುತ್ತಾರೆ. ಆದರೆ ಈ ಬಾರಿ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪಾಪರಾಜಿಗಳ ಕ್ಯಾಮೆರಾಗೆ ಪೋಸ್ ನೀಡಲು ಕೂಡ ಅವರು ಒಂದು ಕ್ಷಣ ನಿಂತಿಲ್ಲ. ಸಖತ್ ಗಡಿಬಿಡಿಯಲ್ಲಿ ಅವರು ಮುಂದೆ ಸಾಗಿದ್ದಾರೆ.

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಇದೆ. ಕನ್ನಡ, ತಮಿಳು, ತೆಲುಗು, ಹಿಂದಿ ಭಾಷೆಯ ಚಿತ್ರರಂಗದಲ್ಲಿ ರಶ್ಮಿಕಾ ಮಂದಣ್ಣ ಕೆಲಸ ಮಾಡಿದ್ದಾರೆ. ವಿಜಯ್ ದೇವರಕೊಂಡ ಕೂಡ ತೆಲುಗು ಮತ್ತು ಬಾಲಿವುಡ್​​ನಲ್ಲಿ ಫೇಮಸ್ ಆಗಿದ್ದಾರೆ. ಈ ಜೋಡಿಯ ಮದುವೆಗೆ ಯಾರೆಲ್ಲ ಬರುತ್ತಾರೆ ಎಂಬುದನ್ನು ನೋಡಲು ಅಭಿಮಾನಿಗಳು ಕಾದಿದ್ದಾರೆ.

The post ರಾಜಸ್ಥಾನದ ಉದಯಪುರದಲ್ಲಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ವಿವಾಹ appeared first on Good News 24x7.

]]>
ಫ್ಯಾಷನ್ ಬ್ರ್ಯಾಂಡ್ ಮಾರಾಟಾದಿಂದ ಬರುವ ಹಣದ ಒಂದು ಭಾಗ ಭಾರತೀಯ ಸೇನೆಗೆ; ವಿಜಯ್ ದೇವರಕೊಂಡ ಘೋಷಣೆ…. https://www.goodnews24x7.com/%e0%b2%ab%e0%b3%8d%e0%b2%af%e0%b2%be%e0%b2%b7%e0%b2%a8%e0%b3%8d-%e0%b2%ac%e0%b3%8d%e0%b2%b0%e0%b3%8d%e0%b2%af%e0%b2%be%e0%b2%82%e0%b2%a1%e0%b3%8d-%e0%b2%ae%e0%b2%be%e0%b2%b0%e0%b2%be%e0%b2%9f/ Sun, 11 May 2025 11:17:22 +0000 https://www.goodnews24x7.com/?p=3831 ಪ್ರಸಿದ್ಧ ನಟ ವಿಜಯ್ ದೇವರಕೊಂಡ ಅವರು ತಮ್ಮ RWDY ಫ್ಯಾಷನ್ ಬ್ರ್ಯಾಂಡ್ನ ಲಾಭದ ಒಂದು ಭಾಗವನ್ನು ಭಾರತೀಯ ಸೇನೆಗೆ ದಾನ ಮಾಡುವುದಾಗಿ ಘೋಷಿಸಿದ್ದಾರೆ. ಇದು ಅವರ ಹುಟ್ಟುಹಬ್ಬದ ವಿಶೇಷ ಘೋಷಣೆಯಾಗಿದ್ದು, ದೇಶಪ್ರೇಮದ ಉದಾಹರಣೆಯಾಗಿದೆ. ಅವರ ಈ ನಿರ್ಧಾರಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ…

The post ಫ್ಯಾಷನ್ ಬ್ರ್ಯಾಂಡ್ ಮಾರಾಟಾದಿಂದ ಬರುವ ಹಣದ ಒಂದು ಭಾಗ ಭಾರತೀಯ ಸೇನೆಗೆ; ವಿಜಯ್ ದೇವರಕೊಂಡ ಘೋಷಣೆ…. appeared first on Good News 24x7.

]]>

ಪ್ರಸಿದ್ಧ ನಟ ವಿಜಯ್ ದೇವರಕೊಂಡ ಅವರು ತಮ್ಮ RWDY ಫ್ಯಾಷನ್ ಬ್ರ್ಯಾಂಡ್ನ ಲಾಭದ ಒಂದು ಭಾಗವನ್ನು ಭಾರತೀಯ ಸೇನೆಗೆ ದಾನ ಮಾಡುವುದಾಗಿ ಘೋಷಿಸಿದ್ದಾರೆ. ಇದು ಅವರ ಹುಟ್ಟುಹಬ್ಬದ ವಿಶೇಷ ಘೋಷಣೆಯಾಗಿದ್ದು, ದೇಶಪ್ರೇಮದ ಉದಾಹರಣೆಯಾಗಿದೆ. ಅವರ ಈ ನಿರ್ಧಾರಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ .ಸಾರ್ವಜನಿಕರು ಹಾಗೂ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತೀಯ ಸೇನೆಯ ಬೆಂಬಲಕ್ಕಾಗಿ ನಟನ ಈ ಕಾರ್ಯ ನಿಜವಾಗಿಯೂ ಪ್ರಶಂಸನೀಯ ವಾದದ್ದು.

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಭಾರತವು ‘ಆಪರೇಷನ್ ಸಿಂಧೂರ್ ಮೂಲಕ ಪಾಕಿಸ್ತಾನಕ್ಕೆ ಸೂಕ್ತ ಪ್ರತ್ಯುತ್ತರ ನೀಡಿದೆ. ಭಾರತೀಯ ಸೇನೆಯು ಪಾಕಿಸ್ತಾನದ ಎಲ್ಲಾ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ನಾಶಪಡಿಸಿತು. ದೇಶದ ಪ್ರತಿಯೊಬ್ಬರೂ ಭಾರತೀಯ ಸೇನೆ ಮತ್ತು ಸರ್ಕಾರವನ್ನು ಹೊಗಳುತ್ತಿರುವುದು ಕಂಡುಬರುತ್ತದೆ. ಕಾಲಕಾಲಕ್ಕೆ ಪೋಸ್ಟ್ಗಳು ಅಥವಾ ವೀಡಿಯೊಗಳ ಮೂಲಕ ‘ಆಪರೇಷನ್ ಸಿಂಧೂರ್’ ಅನ್ನು ಬೆಂಬಲಿಸುತ್ತಿರುವ ಅನೇಕ ಸೆಲೆಬ್ರಿಟಿಗಳು ಸಹ ಇದ್ದಾರೆ. ಈಗ, ಪ್ರಸಿದ್ಧ ನಟ ವಿಜಯ್ ದೇವರಕೊಂಡ ಶ್ಲಾಘನೀಯ ನಿರ್ಧಾರವನ್ನು ತೆಗೆದುಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳನ್ನು ಸಂತೋಷದಿಂದ ವ್ಯಕ್ತಪಡಿಸಿದ್ದಾರೆ.. ಅವರ ನಿರ್ಧಾರಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.

ವಿಜಯ್ ದೇವರಕೊಮಡ ದಕ್ಷಿಣದಲ್ಲಿ ಸಾಕಷ್ಟು ಜನಪ್ರಿಯ ನಟ. ಈ ನಟ ಭಾರತೀಯ ಸೇನೆಯನ್ನು ವಿಭಿನ್ನ ರೀತಿಯಲ್ಲಿ ಗೌರವಿಸಿದ್ದಾರೆ. ಅವರು ಅನೇಕ ಚಿತ್ರಗಳಲ್ಲಿ ತಮ್ಮ ನಟನೆಯಿಂದ ಪ್ರೇಕ್ಷಕರ ಹೃದಯ ಗೆದ್ದಿದ್ದಾರೆ. ವಿಜಯ್ ದೇವರಕೊಂಡ ಅವರು ಮೇ 9 ರಂದು ತಮ್ಮ 36 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ವಿಶೇಷ ಸಂದರ್ಭದಲ್ಲಿ, ಅವರು ತಮ್ಮ ಫ್ಯಾಷನ್ ಬ್ರ್ಯಾಂಡ್ RWDY ನಿಂದ ಬರುವ ಆದಾಯದ ಒಂದು ಭಾಗವನ್ನು ಭಾರತೀಯ ಸೇನೆಗೆ ದಾನ ಮಾಡುವುದಾಗಿ ಘೋಷಿಸಿದ್ದಾರೆ.

 

The post ಫ್ಯಾಷನ್ ಬ್ರ್ಯಾಂಡ್ ಮಾರಾಟಾದಿಂದ ಬರುವ ಹಣದ ಒಂದು ಭಾಗ ಭಾರತೀಯ ಸೇನೆಗೆ; ವಿಜಯ್ ದೇವರಕೊಂಡ ಘೋಷಣೆ…. appeared first on Good News 24x7.

]]>