Vijay Archives - Good News 24x7 https://www.goodnews24x7.com/tag/vijay/ Kannada Thu, 02 Jul 2026 06:00:06 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Vijay Archives - Good News 24x7 https://www.goodnews24x7.com/tag/vijay/ 32 32 ಜನ ನಾಯಗನ್’ ಚಿತ್ರಕ್ಕೆ ಕೊನೆಗೂ ಸಿಕ್ತು ಸೆನ್ಸಾರ್ ಪತ್ರ? https://www.goodnews24x7.com/has-the-film-jana-nayagan-finally-received-a-censor-certificate/ Thu, 02 Jul 2026 06:00:06 +0000 https://www.goodnews24x7.com/?p=9732 ದಳಪತಿ ವಿಜಯ್ ಅಭಿನಯದ ಕೊನೆಯ ಚಿತ್ರ ‘ಜನ ನಾಯಕನ್’ ಬಿಡುಗಡೆ ವಿಳಂಬವಾಗುತ್ತಿರುವುದು ಅಭಿಮಾನಿಗಳಿಗೆ ಭಾರಿ ಬೇಸರ ಮೂಡಿಸಿದೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ‘A’ ಪ್ರಮಾಣಪತ್ರ ಸಿಕ್ಕಿದೆ ಎಂಬ ವದಂತಿಗಳ ಬೆನ್ನಲ್ಲೇ, ಸಿನಿಮಾ ಜುಲೈ ಮಧ್ಯಭಾಗ ಅಥವಾ ಆಗಸ್ಟ್ 7 ರಂದು ತೆರೆಗೆ…

The post ಜನ ನಾಯಗನ್’ ಚಿತ್ರಕ್ಕೆ ಕೊನೆಗೂ ಸಿಕ್ತು ಸೆನ್ಸಾರ್ ಪತ್ರ? appeared first on Good News 24x7.

]]>

ದಳಪತಿ ವಿಜಯ್ ಅಭಿನಯದ ಕೊನೆಯ ಚಿತ್ರ ‘ಜನ ನಾಯಕನ್’ ಬಿಡುಗಡೆ ವಿಳಂಬವಾಗುತ್ತಿರುವುದು ಅಭಿಮಾನಿಗಳಿಗೆ ಭಾರಿ ಬೇಸರ ಮೂಡಿಸಿದೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ‘A’ ಪ್ರಮಾಣಪತ್ರ ಸಿಕ್ಕಿದೆ ಎಂಬ ವದಂತಿಗಳ ಬೆನ್ನಲ್ಲೇ, ಸಿನಿಮಾ ಜುಲೈ ಮಧ್ಯಭಾಗ ಅಥವಾ ಆಗಸ್ಟ್ 7 ರಂದು ತೆರೆಗೆ ಬರಬಹುದು ಎನ್ನಲಾಗುತ್ತಿದೆ. ಸಂಕ್ರಾಂತಿ ಬಿಡುಗಡೆಯಿಂದ ಮುಂದೂಡಲ್ಪಟ್ಟಿರುವ ಈ ಹೈ-ಬಜೆಟ್ ಚಿತ್ರದ ಗೊಂದಲಗಳಿಗೆ ತೆರೆ ಎಳೆಯಲು ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ಅಧಿಕೃತ ಪ್ರಕಟಣೆ ನೀಡಬೇಕಿದೆ.

‘ಜನ ನಾಯಗನ್’ ಚಿತ್ರಕ್ಕೆ ಕೊನೆಗೂ ಸಿಕ್ತು ಸೆನ್ಸಾರ್ ಪತ್ರ? ರಿಲೀಸ್ ಬಗ್ಗೆ ಹರಿದಾಡ್ತಿದೆ ಹೊಸ ಸುದ್ದಿ

ಸೆನ್ಸಾರ್ ಮಂಡಳಿಯಿಂದ ‘A’ ಪ್ರಮಾಣಪತ್ರ?:
‘ಜನ ನಾಯಗನ್’ ಚಿತ್ರದ ರಿಲೀಸ್ ಕುರಿತು ಹರಿದಾಡುತ್ತಿರುವ ಹೊಸ ಸುದ್ದಿ
ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯ ಅಧಿಕೃತ ಪ್ರಕಟಣೆಗಾಗಿ ಕಾಯುತ್ತಿರುವ ಚಿತ್ರಪ್ರೇಮಿಗಳು
ಅಂದುಕೊಂಡಂತೆ ನಡೆದಿದ್ದರೆ ದಳಪತಿ ವಿಜಯ್ (Thalapathy Vijay) ಅಭಿನಯದ ಕೊನೆಯ ಚಿತ್ರ ‘ಜನ ನಾಯಗನ್’ ಸಿನಿಮಾ ರಿಲೀಸ್ ಆಗಿ ಆರು ತಿಂಗಳು ಕಳೆದಿರಬೇಕಿತ್ತು. ಆರಂಭದಲ್ಲಿ ಈ ಚಿತ್ರವನ್ನು 2026ರ ಸಂಕ್ರಾಂತಿಗೆ ಬಿಡುಗಡೆ ಮಾಡಲು ಯೋಜಿಸಲಾಗಿತ್ತು. ಆದರೆ ಹಲವು ಕಾರಣಗಳಿಂದ ಸಿನಿಮಾ ಮುಂದೂಡಲ್ಪಟ್ಟಿದೆ. ಚಿತ್ರತಂಡ ಇದುವರೆಗೆ ಯಾವುದೇ ಅಧಿಕೃತ ಬಿಡುಗಡೆ ದಿನಾಂಕವನ್ನು ಪ್ರಕಟಿಸಿಲ್ಲ. ಈಗ ಚಿತ್ರಕ್ಕೆ ಸೆನ್ಸಾರ್ ಆಗಿದೆ ಎಂದು ವರದಿ ಆಗಿದೆ.

ಸಿನಿಮಾ ಬಗ್ಗೆ ಅಧಿಕೃತ ಮಾಹಿತಿ ಇಲ್ಲದ ಕಾರಣ ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ಹೊಸ ವದಂತಿಗಳು ಹರಿದಾಡುತ್ತಿವೆ. ಈಗಾಗಲೇ ಸಿನಿಮಾ ಬಗ್ಗೆ ಹಲವು ಸುದ್ದಿಗಳು ಓಡಾಡಿವೆಹಹ. ಈ ಮೊದಲು ವಿಜಯ್ ಜನ್ಮದಿನದ ಅಂಗವಾಗಿ ಜೂನ್​ ಅಲ್ಲಿ ಸಿನಿಮಾ ತೆರೆಗೆ ಬರಲಿದೆ ಎಂದು ಹೇಳಲಾಗಿತ್ತು. ಆದರೆ, ಆ ರೀತಿ ಆಗಿಲ್ಲ. ಈಗ ಕೇಳಿ ಬರುತ್ತಿರುವ ಲೇಟೆಸ್ಟ್ ಮಾಹಿತಿ ಪ್ರಕಾರ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ‘A’ ಪ್ರಮಾಣಪತ್ರ ಸಿಕ್ಕಿದೆಯಂತೆ. ಹೀಗಾಗಿ ಸಿನಿಮಾ ಜುಲೈ ಮಧ್ಯಭಾಗದಲ್ಲಿ ತೆರೆಗೆ ಬರಬಹುದು ಎಂದು ಅಂದಾಜಿಸಲಾಗಿದೆ.

ಕೆಲವು ವರದಿಗಳ ಪ್ರಕಾರ ಆಗಸ್ಟ್ 7ರಂದು ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಕೂಡ ಹೇಳಲಾಗುತ್ತಿದೆ. ಈಗಾಗಲೇ ಚಿತ್ರ ಲೀಕ್ ಆಗಿ ಸಿನಿಮಾ ಮೇಲಿನ ಆಸಕ್ತಿಯೇ ಜನರಿಗೆ ಹೋಗಿದೆ. ಹೀಗಾಗಿ, ಒಂದರಿಂದ ಎರಡು ವಾರ ಮಾತ್ರ ಸಿನಿಮಾ ಪ್ರದರ್ಶನ ಕಂಡರೆ ಸಾಕು ಎಂಬುದು ತಂಡದ ಆಲೋಚನೆ ಎನ್ನಲಾಗುತ್ತಿದೆ. ಹೀಗಾಗಿ, ‘ಟಾಕ್ಸಿಕ್’ ರಿಲೀಸ್​​ಗೂ 20 ದಿನ ಮೊದಲು ಈ ಚಿತ್ರ ತೆರೆಗೆ ತರುವ ಆಲೋಚನೆ ತಂಡದ್ದಿರಬಹುದು.

ಅಧಿಕೃತ ಪ್ರಕಟಣೆಗೆ ಕಾಯುತ್ತಿರುವ ಅಭಿಮಾನಿಗಳು
ಚಿತ್ರತಂಡದಿಂದ ಈ ವರದಿಗಳಿಗೆ ಯಾವುದೇ ಅಧಿಕೃತ ಮುದ್ರೆ ಸಿಕ್ಕಿಲ್ಲ. ಈ ಹಿಂದೆ ಜೂನ್‌ನಲ್ಲಿ ಸಿನಿಮಾ ರಿಲೀಸ್ ಆಗಲಿದೆ ಎಂಬ ಸುದ್ದಿಗಳು ಕೂಡ ಸುಳ್ಳಾಗಿದ್ದವು. ಗೊಂದಲಗಳಿಗೆ ತೆರೆ ಎಳೆಯಲು ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ಶೀಘ್ರದಲ್ಲೇ ಅಧಿಕೃತ ದಿನಾಂಕ ಪ್ರಕಟಿಸಬೇಕಿದೆ.

 

ಎಚ್. ವಿನೋದ್ ನಿರ್ದೇಶನದ ಈ ಚಿತ್ರದಲ್ಲಿ ಪೂಜಾ ಹೆಗ್ಡೆ, ಬಾಬಿ ಡಿಯೋಲ್, ಮಮಿತಾ ಬೈಜು ಮತ್ತು ಪ್ರಕಾಶ್ ರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅನಿರುದ್ಧ್ ರವಿಚಂದರ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

The post ಜನ ನಾಯಗನ್’ ಚಿತ್ರಕ್ಕೆ ಕೊನೆಗೂ ಸಿಕ್ತು ಸೆನ್ಸಾರ್ ಪತ್ರ? appeared first on Good News 24x7.

]]>
ಗೆಲುವಿಗಾಗಿ ‘ದಳಪತಿ’ ಪ್ರಾರ್ಥನೆ: ತಿರುಚೆಂಡೂರು ಮುರುಗನ್ ದೇವಸ್ಥಾನಕ್ಕೆ ನಟ ವಿಜಯ್ ಭೇಟಿ. https://www.goodnews24x7.com/dalapati-prayer-for-victory-actor-vijay-visits-tiruchendur-murugan-temple/ Tue, 28 Apr 2026 09:51:40 +0000 https://www.goodnews24x7.com/?p=9458 ಟುಟಿಕೋರಿನ್‌: ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಅಧ್ಯಕ್ಷ ಹಾಗೂ ಖ್ಯಾತ ನಟ ಜೋಸೆಫ್ ವಿಜಯ್‌ ಅವರು ಇಂದು ಪ್ರಸಿದ್ಧ ತಿರುಚೆಂಡೂರು ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ…

The post ಗೆಲುವಿಗಾಗಿ ‘ದಳಪತಿ’ ಪ್ರಾರ್ಥನೆ: ತಿರುಚೆಂಡೂರು ಮುರುಗನ್ ದೇವಸ್ಥಾನಕ್ಕೆ ನಟ ವಿಜಯ್ ಭೇಟಿ. appeared first on Good News 24x7.

]]>

ಟುಟಿಕೋರಿನ್‌: ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಅಧ್ಯಕ್ಷ ಹಾಗೂ ಖ್ಯಾತ ನಟ ಜೋಸೆಫ್ ವಿಜಯ್‌ ಅವರು ಇಂದು ಪ್ರಸಿದ್ಧ ತಿರುಚೆಂಡೂರು ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಪೂರ್ಣಕುಂಭ ಸ್ವಾಗತ ಮತ್ತು ದರ್ಶನ:
ಚೆನ್ನೈನಿಂದ ಆಗಮಿಸಿದ ವಿಜಯ್ ಅವರಿಗೆ ದೇವಾಲಯದ ವತಿಯಿಂದ ಪೂರ್ಣಕುಂಭ ಗೌರವಗಳೊಂದಿಗೆ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ದೇವರ ಶಕ್ತಿಯ ಸಂಕೇತವಾದ ‘ವೇಲ್’ (ಈಟಿ) ಮತ್ತು ಶಾಲನ್ನು ನೀಡಿ ಅವರನ್ನು ಗೌರವಿಸಲಾಯಿತು. ಮುಂಜಾನೆಯೇ ದೇವಸ್ಥಾನಕ್ಕೆ ಭೇಟಿ ನೀಡಿದರೂ, ತಮ್ಮ ನೆಚ್ಚಿನ ನಟನನ್ನು ನೋಡಲು ಸಾವಿರಾರು ಅಭಿಮಾನಿಗಳು ದೇವಾಲಯದ ಆವರಣದಲ್ಲಿ ಜಮಾಯಿಸಿದ್ದರು.

ವಿಶ್ವ ರೂಪ ದರ್ಶನ ಮತ್ತು ಗೆಲುವಿನ ಹಾರೈಕೆ:
ಪವಿತ್ರ ‘ವಿಶ್ವರೂಪ ದರ್ಶನ’ದಲ್ಲಿ ಪಾಲ್ಗೊಂಡ ವಿಜಯ್ ಅವರು ಸುಮಾರು ಹೊತ್ತು ಪ್ರಾರ್ಥನೆ ಸಲ್ಲಿಸಿದರು. ಏಪ್ರಿಲ್ 23 ರಂದು ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವು ಭರ್ಜರಿ ಗೆಲುವು ಸಾಧಿಸಲಿ ಎಂಬ ಉದ್ದೇಶದಿಂದ ವಿಜಯ್ ಅವರು ಈ ಪವಿತ್ರ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ವಿಜಯ್ ಅವರೊಂದಿಗೆ ಟಿವಿಕೆ ಪ್ರಧಾನ ಕಾರ್ಯದರ್ಶಿ ಬಸ್ಸಿ ಆನಂದ್ ಹಾಗೂ ಇತರ ಪ್ರಮುಖ ನಾಯಕರು ಉಪಸ್ಥಿತರಿದ್ದರು.

ಮೇ 4ಕ್ಕೆ ಅಗ್ನಿಪರೀಕ್ಷೆ:
ಸಿನೆಮಾ ರಂಗದ ಅಧಿಪತಿಯಾಗಿ ಮಿಂಚಿದ್ದ ವಿಜಯ್, ಈಗ ರಾಜಕೀಯ ಅಖಾಡದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ರಾಜ್ಯದ ಜನರ ತೀರ್ಪು ಇವರ ಪರವಾಗಿದೆಯೇ ಎಂಬ ಕುತೂಹಲಕ್ಕೆ ಮೇ 4 ರಂದು ನಡೆಯಲಿರುವ ಮತ ಎಣಿಕೆಯ ದಿನ ಉತ್ತರ ಸಿಗಲಿದೆ.

The post ಗೆಲುವಿಗಾಗಿ ‘ದಳಪತಿ’ ಪ್ರಾರ್ಥನೆ: ತಿರುಚೆಂಡೂರು ಮುರುಗನ್ ದೇವಸ್ಥಾನಕ್ಕೆ ನಟ ವಿಜಯ್ ಭೇಟಿ. appeared first on Good News 24x7.

]]>
ಅಭಿಮಾನಿಗಳಿಗೆ ಉತ್ತರ ಕೊಟ್ಟ ನಟ ವಿಜಯ್ – ಡಿವೋರ್ಸ್ ವಿವಾದದ ಬಗ್ಗೆ ಮೊದಲು ಮಾತು. https://www.goodnews24x7.com/actor-vijay-responds-to-fans-first-talk-about-divorce-controversy/ Mon, 09 Mar 2026 12:10:08 +0000 https://www.goodnews24x7.com/?p=8810 ಕಾಲಿವುಡ್ ಸ್ಟಾರ್ ನಟ ಹಾಗೂ ತಮಿಳಗ ವೆಟ್ರಿ ಕಳಗಂ ಪಕ್ಷದ ಸಂಸ್ಥಾಪಕ ವಿಜಯ್ ಅವರು, ಪತ್ನಿ ಸಂಗೀತಾ ಸೋರ್ನಲಿಂಗಂ ಜೊತೆಗಿನ ವಿಚ್ಛೇದನ ಪ್ರಕರಣದ ಸುದ್ದಿಗಳು ಬಹಿರಂಗವಾದ ಬಳಿಕ ಇದೇ ಮೊದಲ ಬಾರಿಗೆ ತಮ್ಮ ವೈಯಕ್ತಿಕ ಜೀವನದ ವಿವಾದದ ಬಗ್ಗೆ ಮೌನ ಮುರಿದಿದ್ದಾರೆ.…

The post ಅಭಿಮಾನಿಗಳಿಗೆ ಉತ್ತರ ಕೊಟ್ಟ ನಟ ವಿಜಯ್ – ಡಿವೋರ್ಸ್ ವಿವಾದದ ಬಗ್ಗೆ ಮೊದಲು ಮಾತು. appeared first on Good News 24x7.

]]>

ಕಾಲಿವುಡ್ ಸ್ಟಾರ್ ನಟ ಹಾಗೂ ತಮಿಳಗ ವೆಟ್ರಿ ಕಳಗಂ ಪಕ್ಷದ ಸಂಸ್ಥಾಪಕ ವಿಜಯ್ ಅವರು, ಪತ್ನಿ ಸಂಗೀತಾ ಸೋರ್ನಲಿಂಗಂ ಜೊತೆಗಿನ ವಿಚ್ಛೇದನ ಪ್ರಕರಣದ ಸುದ್ದಿಗಳು ಬಹಿರಂಗವಾದ ಬಳಿಕ ಇದೇ ಮೊದಲ ಬಾರಿಗೆ ತಮ್ಮ ವೈಯಕ್ತಿಕ ಜೀವನದ ವಿವಾದದ ಬಗ್ಗೆ ಮೌನ ಮುರಿದಿದ್ದಾರೆ.

ತಮ್ಮ ಪಕ್ಷದ ವತಿಯಿಂದ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ವಿಜಯ್, ತಮ್ಮ ಬೆಂಬಲಿಗರಿಗೆ ಇಂತಹ ಆರೋಪಗಳಿಂದ ವಿಚಲಿತರಾಗಬೇಡಿ, ಬದಲಾಗಿ ಜನರ ಸಮಸ್ಯೆಗಳ ಬಗ್ಗೆ ಗಮನಹರಿಸಿ ಎಂದು ಕಿವಿಮಾತು ಹೇಳಿದ್ದಾರೆ.

ವಿಜಯ್ ಹೇಳಿದ್ದೇನು?
ಶನಿವಾರ ಮಹಿಳಾ ಕಾರ್ಯಕರ್ತರಿಂದ ತುಂಬಿದ್ದ ಸಭಾಂಗಣವನ್ನು ಉದ್ದೇಶಿಸಿ ಮಾತನಾಡಿದ ವಿಜಯ್, ‘ಇತ್ತೀಚೆಗೆ ಕೆಲವು ವಿಚಾರಗಳು ಓಡಾಡುತ್ತಿವೆ, ಅಲ್ಲವೇ?’ ಎಂದು ಪರೋಕ್ಷವಾಗಿ ತಮ್ಮ ಡಿವೋರ್ಸ್ ಬಗ್ಗೆ ಪ್ರಸ್ತಾಪಿಸಿದರು.

‘ನೀವೆಲ್ಲರೂ ಆ ಆರೋಪಗಳ ವಿರುದ್ಧ ಹೋರಾಡುತ್ತಾ, ನೋವು ಅನುಭವಿಸುತ್ತಿರುವುದನ್ನು ನಾನು ನೋಡುತ್ತಿದ್ದೇನೆ. ನಿಮಗೆ ನೋವಾಗುವುದನ್ನು ಕಂಡು ನನಗೂ ಬೇಸರವಾಗುತ್ತಿದೆ. ಅದನ್ನೆಲ್ಲಾ ನಾನು ನೋಡಿಕೊಳ್ಳುತ್ತೇನೆ. ನಾವು ಜನರ ಸಮಸ್ಯೆಗಳತ್ತ ಗಮನ ಹರಿಸೋಣ. ಆ ವಿಚಾರದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಅದು ತಲೆಕೆಡಿಸಿಕೊಳ್ಳುವಂತಹ ವಿಷಯವಲ್ಲ. ಧೈರ್ಯವಾಗಿರಿ, ಎಲ್ಲವೂ ಒಳ್ಳೆಯದೇ ಆಗುತ್ತದೆ ಎಂದು ವಿಜಯ್ ಹೇಳಿದ್ದಾರೆ. ಇದು ತಮ್ಮ ವೈಯಕ್ತಿಕ ಜೀವನದ ವದಂತಿಗಳಿಗೆ ನೀಡಿದ ಸ್ಪಷ್ಟನೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ವಿಜಯ್ ಮನೆಯಲ್ಲೇ ಉಳಿಯಲು ಪತ್ನಿ ಸಂಗೀತಾ ಪಟ್ಟು!
ವಿಜಯ್ ಈ ಹೇಳಿಕೆ ನೀಡಿದ ದಿನವೇ, ಅವರ ಪತ್ನಿ ಸಂಗೀತಾ ಚೆಂಗಲ್ಪಟ್ಟು ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯ ವಿವರಗಳು ಹೊರಬಿದ್ದಿವೆ. ವಿಚ್ಛೇದನ ಪ್ರಕ್ರಿಯೆ ಮುಗಿಯುವವರೆಗೆ ಚೆನ್ನೈನ ಈಸ್ಟ್ ಕೋಸ್ಟ್ ರೋಡ್‌ನಲ್ಲಿರುವ (ECR) ವಿಜಯ್ ಅವರ ಮನೆಯಲ್ಲೇ (Matrimonial home) ತಮಗೆ ವಾಸಿಸಲು ಅನುಮತಿ ನೀಡಬೇಕು ಎಂದು ಕೋರಿ ಸಂಗೀತಾ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ.

ತಾವು ಬ್ರಿಟಿಷ್ ಪ್ರಜೆಯಾಗಿದ್ದು, ಚೆನ್ನೈನಲ್ಲಿ ತಮಗೆ ಬೇರೆ ಯಾವುದೇ ವಸತಿ ಸೌಕರ್ಯಗಳಿಲ್ಲ. ಹೀಗಾಗಿ ಕೇಸ್ ಇತ್ಯರ್ಥವಾಗುವವರೆಗೆ ಅಥವಾ ವಿಜಯ್ ಅವರು ಇದೇ ದರ್ಜೆಯ ಮತ್ತೊಂದು ಮನೆಯನ್ನು ವ್ಯವಸ್ಥೆ ಮಾಡುವವರೆಗೆ ಪ್ರಸ್ತುತ ಇರುವ ಮನೆಯಲ್ಲೇ ಉಳಿಯಲು ಅವಕಾಶ ನೀಡುವಂತೆ ಅವರು ನ್ಯಾಯಾಲಯವನ್ನು ಕೋರಿದ್ದಾರೆ.

ವಿಜಯ್ ಅವರ ರಾಜಕೀಯ ಮತ್ತು ವೃತ್ತಿಜೀವನವನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಹಿಂದೆ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಪಡೆಯಲು ಪ್ರಯತ್ನಿಸಲಾಗಿತ್ತು. ಆದರೆ ಆ ಮಾತುಕತೆ ವಿಫಲವಾಯಿತು. ಒಂದು ವೇಳೆ ಕಾನೂನು ಹೋರಾಟಕ್ಕೆ ಮುಂದಾದರೆ ಮನೆಯಿಂದ ಹೊರಹಾಕುವುದಾಗಿ ಪ್ರತಿವಾದಿಯ (ವಿಜಯ್) ವಕೀಲರು ಬೆದರಿಕೆ ಹಾಕಿದ್ದರು ಎಂದು ಸಂಗೀತಾ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ನಟಿಯ ಜೊತೆ ಅಕ್ರಮ ಸಂಬಂಧ ಆರೋಪ
ಸಂಗೀತಾ ಅವರು ಶಾಶ್ವತ ಜೀವನಾಂಶ ಹಾಗೂ ಮನೆಯಲ್ಲಿ ವಾಸಿಸುವ ಹಕ್ಕು ಕೋರಿ ಚೆಂಗಲ್ಪಟ್ಟು ನ್ಯಾಯಾಲಯದಲ್ಲಿ ವಿಚ್ಛೇದನ ಅರ್ಜಿ ಸಲ್ಲಿಸಿದ್ದರು. ಏಪ್ರಿಲ್ 20 ರಂದು ನ್ಯಾಯಾಲಯ ಈ ಪ್ರಕರಣದ ವಿಚಾರಣೆ ನಡೆಸುವ ನಿರೀಕ್ಷೆಯಿದೆ. ಅರ್ಜಿಯಲ್ಲಿ ವಿಜಯ್ ವಿರುದ್ಧ ಗಂಭೀರ ಆರೋಪ ಮಾಡಿರುವ ಸಂಗೀತಾ, ವಿಜಯ್ ಅವರು ನಟಿಯೊಬ್ಬಳ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ. ತನಗೆ ನಿರಂತರವಾಗಿ ಮಾನಸಿಕ ಹಿಂಸೆ ನೀಡಿ, ನಿರ್ಲಕ್ಷಿಸಿದ್ದಾರೆ ಎಂದು ದೂರಿದ್ದಾರೆ.

ತ್ರಿಷಾ ಜೊತೆ ಕಾಣಿಸಿಕೊಂಡಿದ್ದ ವಿಜಯ್:
ಈ ಎಲ್ಲಾ ವಿಚ್ಛೇದನ ವಿವಾದಗಳ ನಡುವೆಯೇ ಇತ್ತೀಚೆಗೆ ಚೆನ್ನೈನಲ್ಲಿ ನಡೆದ ವಿವಾಹ ಆರತಕ್ಷತೆಯೊಂದರಲ್ಲಿ ನಟ ವಿಜಯ್ ಮತ್ತು ನಟಿ ತ್ರಿಷಾ ಕೃಷ್ಣನ್ ಒಟ್ಟಾಗಿ ಕಾಣಿಸಿಕೊಂಡಿದ್ದರು. ಇವರಿಬ್ಬರ ಫೋಟೋಗಳು ಮತ್ತು ವಿಡಿಯೋಗಳು ಆನ್‌ಲೈನ್‌ನಲ್ಲಿ ಭಾರಿ ವೈರಲ್ ಆಗಿದ್ದು, ಇಬ್ಬರ ನಡುವೆ ರಿಲೇಶನ್‌ಶಿಪ್ ಇದೆ ಎಂಬ ಅಭಿಮಾನಿಗಳ ಹಳೆಯ ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿದಂತಾಗಿದೆ.

The post ಅಭಿಮಾನಿಗಳಿಗೆ ಉತ್ತರ ಕೊಟ್ಟ ನಟ ವಿಜಯ್ – ಡಿವೋರ್ಸ್ ವಿವಾದದ ಬಗ್ಗೆ ಮೊದಲು ಮಾತು. appeared first on Good News 24x7.

]]>
ದಳಪತಿ ವಿಜಯ್‌ ಕೊನೇ ಚಿತ್ರಕ್ಕೆ ಆಯ್ಕೆಯಾದ ಕರಾವಳಿ ಬೆಡಗಿ ಪೂಜಾ ಹೆಗ್ಡೆ https://www.goodnews24x7.com/%e0%b2%a6%e0%b2%b3%e0%b2%aa%e0%b2%a4%e0%b2%bf-%e0%b2%b5%e0%b2%bf%e0%b2%9c%e0%b2%af%e0%b3%8d-%e0%b2%95%e0%b3%8a%e0%b2%a8%e0%b3%87-%e0%b2%9a%e0%b2%bf%e0%b2%a4%e0%b3%8d%e0%b2%b0%e0%b2%95/ Wed, 02 Oct 2024 13:27:03 +0000 https://www.goodnews24x7.com/?p=710 ಕನ್ನಡದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ‘ಕೆವಿಎನ್​’ ನಿರ್ಮಿಸುತ್ತಿರುವ, ತಮಿಳು ಸೂಪರ್‌ ಸ್ಟಾರ್ ದಳಪತಿ ವಿಜಯ್ ಅಭಿನಯದ ಮುಂದಿನ ಬಹುನಿರೀಕ್ಷಿತ ಚಿತ್ರ ”ದಳಪತಿ 69”. ಈ ಚಿತ್ರದಲ್ಲಿ ಕರಾವಳಿ ಬೆಡಗಿ ಪೂಜಾ ಹೆಗ್ಡೆ ಪ್ರಮುಖ ಪಾತ್ರ ವಹಿಸಲಿದ್ದಾರೆ.   ತಮಿಳು ಸೂಪರ್‌…

The post ದಳಪತಿ ವಿಜಯ್‌ ಕೊನೇ ಚಿತ್ರಕ್ಕೆ ಆಯ್ಕೆಯಾದ ಕರಾವಳಿ ಬೆಡಗಿ ಪೂಜಾ ಹೆಗ್ಡೆ appeared first on Good News 24x7.

]]>

ಕನ್ನಡದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ‘ಕೆವಿಎನ್​’ ನಿರ್ಮಿಸುತ್ತಿರುವ, ತಮಿಳು ಸೂಪರ್‌ ಸ್ಟಾರ್ ದಳಪತಿ ವಿಜಯ್ ಅಭಿನಯದ ಮುಂದಿನ ಬಹುನಿರೀಕ್ಷಿತ ಚಿತ್ರ ”ದಳಪತಿ 69”. ಈ ಚಿತ್ರದಲ್ಲಿ ಕರಾವಳಿ ಬೆಡಗಿ ಪೂಜಾ ಹೆಗ್ಡೆ ಪ್ರಮುಖ ಪಾತ್ರ ವಹಿಸಲಿದ್ದಾರೆ.

 

ತಮಿಳು ಸೂಪರ್‌ ಸ್ಟಾರ್ ದಳಪತಿ ವಿಜಯ್ ಅಭಿನಯದ ಮುಂದಿನ ಬಹುನಿರೀಕ್ಷಿತ ಚಿತ್ರ ”ದಳಪತಿ 69”. ತಾತ್ಕಾಲಿಕ ಶೀರ್ಷಿಕೆಯ ಈ ಸಿನಿಮಾ ನಟನ ಕೊನೆ ಚಿತ್ರ. ಅಲ್ಲದೇ, ಕನ್ನಡದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ನಿರ್ಮಿಸುತ್ತಿರುವ ಹಿನ್ನೆಲೆ ಸಾಕಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ. ಈ ಚಿತ್ರಕ್ಕೀಗ ಕರುನಾಡಿನ ಕರಾವಳಿ ಬೆಡಗಿ ಪೂಜಾ ಹೆಗ್ಡೆ ಎಂಟ್ರಿಯಾಗಿದೆ.

 

ಚಿತ್ರ ನಿರ್ಮಾಪಕರು ಇಂದು ತಮ್ಮ ತಂಡಕ್ಕೆ ಪೂಜಾ ಹೆಗ್ಡೆ ಅವರ ಸೇರ್ಪಡೆಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಬಹುನಿರೀಕ್ಷಿತ ಚಿತ್ರದ ಹಿಂದಿರುವ ಕನ್ನಡದ ಪ್ರಸಿದ್ಧ ಚಲನಚಿತ್ರ ನಿರ್ಮಾಣ ಸಂಸ್ಥೆಯಾದ ”ಕೆವಿಎನ್ ಪ್ರೊಡಕ್ಷನ್ಸ್‌” ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್​ನಲ್ಲಿ ಪೋಸ್ಟ್​ವೊಂದನ್ನು ಶೇರ್ ಮಾಡುವ ಮೂಲಕ ಕರಾವಳಿ ಬೆಡಗಿಯ ಎಂಟ್ರಿ ಘೋಷಿಸಿದ್ದಾರೆ.

 

The post ದಳಪತಿ ವಿಜಯ್‌ ಕೊನೇ ಚಿತ್ರಕ್ಕೆ ಆಯ್ಕೆಯಾದ ಕರಾವಳಿ ಬೆಡಗಿ ಪೂಜಾ ಹೆಗ್ಡೆ appeared first on Good News 24x7.

]]>