VIP Archives - Good News 24x7 https://www.goodnews24x7.com/tag/vip/ Kannada Wed, 27 Aug 2025 11:30:12 +0000 en-US hourly 1 https://wordpress.org/?v=6.9.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg VIP Archives - Good News 24x7 https://www.goodnews24x7.com/tag/vip/ 32 32 ಹಾಸನಾಂಬ ದೇವಿ ದರ್ಶನಕ್ಕೆ ವಿಐಪಿ ವಿವಿಐಪಿ ಪಾಸ್ ಗಳು ರದ್ದು…..! https://www.goodnews24x7.com/from-now-on-vip-vvip-passes-for-hasanamba-devi-darshan-will-be-cancelled/ Wed, 27 Aug 2025 11:04:47 +0000 https://www.goodnews24x7.com/?p=6808 ಹಾಸನಾಂಬಾ ದೇವಿ ದರ್ಶನ 2025 ಅಕ್ಟೋಬರ್ 10 ರಿಂದ 22 ರ ವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ಈ ಬಾರಿ ವಿಐಪಿ, ವಿವಿಐಪಿ ಪಾಸ್‌ಗಳು ಸಂಪೂರ್ಣ ರದ್ದು ಹೊಸದಾಗಿ ಗೋಲ್ಡ್ ಪಾಸ್ ವಿತರಣೆ ಗೋಲ್ಡ್ ಕಾರ್ಡ್ ಪಡೆದರೆ ಮುಂಜಾನೆ 5 ರಿಂದ…

The post ಹಾಸನಾಂಬ ದೇವಿ ದರ್ಶನಕ್ಕೆ ವಿಐಪಿ ವಿವಿಐಪಿ ಪಾಸ್ ಗಳು ರದ್ದು…..! appeared first on Good News 24x7.

]]>

ಹಾಸನಾಂಬಾ ದೇವಿ ದರ್ಶನ 2025
ಅಕ್ಟೋಬರ್ 10 ರಿಂದ 22 ರ ವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ಈ ಬಾರಿ ವಿಐಪಿ, ವಿವಿಐಪಿ ಪಾಸ್‌ಗಳು ಸಂಪೂರ್ಣ ರದ್ದು ಹೊಸದಾಗಿ ಗೋಲ್ಡ್ ಪಾಸ್ ವಿತರಣೆ ಗೋಲ್ಡ್ ಕಾರ್ಡ್ ಪಡೆದರೆ ಮುಂಜಾನೆ 5 ರಿಂದ 11 ಗಂಟೆಯವರೆಗೆ ದರ್ಶನ ಗೋಲ್ಡ್ ಪಾಸ್ ನಲ್ಲಿ ಒಬ್ಬರಿಗೆ ಮಾತ್ರ ಅವಕಾಶ. ಹಾಸನಾಂಬೆ ಉತ್ಸವದಲ್ಲಿ ವಿಐಪಿ ಹಾಗೂ ವಿವಿಐಪಿ ಭಕ್ತರಿಂದ ಸಾಮಾನ್ಯ ಭಕ್ತರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಲು ದರ್ಶನಕ್ಕೆ ಸಮಯ ನಿಗದಿಪಡಿಸುವಂತೆ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ ಸಲಹೆ ನೀಡಿದರು. “ಗೋಲ್ಡ್ ಕಾರ್ಡ್ ಭಕ್ತರಿಗೆ ಎರಡು ಗಂಟೆ, ಶಿಷ್ಟಾಚಾರ ಭಕ್ತರಿಗೆ ಎರಡು ಗಂಟೆ ಮಾತ್ರ ಅವಕಾಶ ನೀಡಿದರೆ ಸಾಮಾನ್ಯ ಜನರಿಗೆ ದರ್ಶನ ಸುಗಮವಾಗುತ್ತದೆ’ ಎಂದು ಅವರು ತಿಳಿಸಿದರು. ಹಾಸನದ ಜಿ.ಪಂ. ಸಭಾಂಗಣದಲ್ಲಿ ನಡೆದ ಉತ್ಸವದ ತಯಾರಿ ಸಭೆಯಲ್ಲಿ ಮಾತನಾಡಿದ ಸಚಿವರು, “ಹಾಸನಾಂಬೆ ಉತ್ಸವದ ವೇಳೆ ಒಂದೂವರೆ ತಿಂಗಳು ಇಲಾಖೆಯ ಬೇರೆ ಯಾವುದೇ ಕೆಲಸಗಳು ಆಗದೆ ನಿಂತುಹೋಗುತ್ತವೆ. ಕಳೆದ ವರ್ಷವೂ ಇದೇ ಪರಿಸ್ಥಿತಿ ಕಂಡಿದ್ದೆ. ಉತ್ಸವದ ಸಿದ್ಧತೆಯ ಜೊತೆಗೆ ಜನರ ಕೆಲಸವನ್ನೂ ನಿರ್ಲಕ್ಷಿಸಬಾರದು” ಎಂದು ಅಧಿಕಾರಿಗಳಿಗೆ ಸೂಚಿಸಿದರು.

ರಾಜ್ಯದ ಎಲ್ಲೆಡೆಗಳಿಂದ ಭಕ್ತರು ಹಾಸನಾಂಬೆ ದರ್ಶನಕ್ಕೆ ಬರುತ್ತಾರೆ. ಆದ್ದರಿಂದ ವಿಶೇಷ ಭಕ್ತರ ಸಂಸ್ಕೃತಿ ಸಾಮಾನ್ಯ ಜನರಿಗೆ ತೊಂದರೆ ತರಬಾರದು ಎಂದು ಸಚಿವರು ಮನವಿ ಮಾಡಿದರು. ಜನರ ಅನುಕೂಲಕ್ಕಾಗಿ ಬೇಕಾದ ಬದಲಾವಣೆಗಳನ್ನು ಅಳವಡಿಸಿಕೊಳ್ಳಲು ಸಭೆಯಲ್ಲಿ ಇಲಾಖೆಯ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು

The post ಹಾಸನಾಂಬ ದೇವಿ ದರ್ಶನಕ್ಕೆ ವಿಐಪಿ ವಿವಿಐಪಿ ಪಾಸ್ ಗಳು ರದ್ದು…..! appeared first on Good News 24x7.

]]>
ದರ್ಶನ್ ಜಾಮೀನಿನ ಜೊತೆಗೆ VIP ಟ್ರೀಟ್‌ಮೆಂಟ್ ಗೂ ಬಿತ್ತು ಬ್ರೇಕ್ ! ಸುಪ್ರೀಂ ಎಚ್ಚರಿಕೆ ! https://www.goodnews24x7.com/along-with-darshans-bail-vip-treatment-also-got-a-break-supreme-court-warns/ Thu, 14 Aug 2025 06:02:30 +0000 https://www.goodnews24x7.com/?p=6089 ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಎಲ್ಲಾ ಆರೋಪಿಗಳ ಜಾಮೀನನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ. ಈ ಹಿನ್ನೆಲೆ ಆರೋಪಿಗಳಿಗೆ ಜೈಲಿನಲ್ಲಿ ವಿಐಪಿ ಟ್ರೀಟ್‌ಮೆಂಟ್ ಕೊಟ್ಟರೆ ಹುಷಾರ್ ಎಂದು ಜೈಲಾಧಿಕಾರಿಗಳಿಗೆ ಸುಪ್ರೀಂ ಎಚ್ಚರಿಕೆ ಕೊಟ್ಟಿದೆ. ಆರೋಪಿಗಳಿಗೆ 5 ಸ್ಟಾರ್ ಟ್ರೀಟ್‌ಮೆಂಟ್ ನೀಡಲಾಗುತ್ತಿದೆ…

The post ದರ್ಶನ್ ಜಾಮೀನಿನ ಜೊತೆಗೆ VIP ಟ್ರೀಟ್‌ಮೆಂಟ್ ಗೂ ಬಿತ್ತು ಬ್ರೇಕ್ ! ಸುಪ್ರೀಂ ಎಚ್ಚರಿಕೆ ! appeared first on Good News 24x7.

]]>

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಎಲ್ಲಾ ಆರೋಪಿಗಳ ಜಾಮೀನನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ. ಈ ಹಿನ್ನೆಲೆ ಆರೋಪಿಗಳಿಗೆ ಜೈಲಿನಲ್ಲಿ ವಿಐಪಿ ಟ್ರೀಟ್‌ಮೆಂಟ್ ಕೊಟ್ಟರೆ ಹುಷಾರ್ ಎಂದು ಜೈಲಾಧಿಕಾರಿಗಳಿಗೆ ಸುಪ್ರೀಂ ಎಚ್ಚರಿಕೆ ಕೊಟ್ಟಿದೆ.

ಆರೋಪಿಗಳಿಗೆ 5 ಸ್ಟಾರ್ ಟ್ರೀಟ್‌ಮೆಂಟ್ ನೀಡಲಾಗುತ್ತಿದೆ ಎಂದು ನಮಗೆ ತಿಳಿದ ದಿನ, ಮೊದಲ ಹೆಜ್ಜೆಯೇ ಸೂಪರಿಂಟೆಂಡೆಂಟ್ ಮತ್ತು ಇತರ ಎಲ್ಲ ಅಧಿಕಾರಿಗಳನ್ನು ಅಮಾನತುಗೊಳಿಸುವುದು. ರಾಜ್ಯ ಸರ್ಕಾರ ಯಾರಿಗಾದರೂ ವಿಐಪಿ ಟ್ರೀಟ್‌ಮೆಂಟ್ ನೀಡುತ್ತಿರುವ ಛಾಯಾಚಿತ್ರಗಳು ಅಥವಾ ಯಾವುದೇ ವೀಡಿಯೊವನ್ನು ನಾವು ನೋಡಿದರೆ ಮೊದಲು ನಿಮ್ಮನ್ನು ಸಸ್ಪೆಂಡ್ ಮಾಡಲಾಗುತ್ತದೆ ಎಂದು ಕೋರ್ಟ್ ಖಡಕ್ ವಾರ್ನಿಂಗ್ ನೀಡಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್, ಪವಿತ್ರಾಗೌಡ ಸೇರಿದಂತೆ ಎಲ್ಲಾ ಆರೋಪಿಗಳ ಜಾಮೀನು ರದ್ದುಗೊಳಿಸಿ ಸುಪ್ರೀಂ ಆದೇಶಿಸಿದ್ದು, ಕೂಡಲೇ ಎಲ್ಲಾ ಆರೋಪಿಗಳು ಶರಣಾಗಬೇಕು ಎಂದು ಸೂಚಿಸಿದೆ. ಶರಣಾಗದಿದ್ದರೇ ಕೂಡಲೇ ವಶಕ್ಕೆ ಪಡೆಯುವಂತೆ ಪೊಲೀಸರಿಗೆ ಕೋರ್ಟ್ ಸೂಚಿಸಿದೆ. ಈ ತೀರ್ಪಿನ ಪ್ರತಿಯನ್ನು ಎಲ್ಲಾ ಹೈಕೋರ್ಟ್ಗಳು ಮತ್ತು ರಾಜ್ಯ ಸರ್ಕಾರಗಳಿಗೆ ನೀಡುವಂತೆ  ರಿಜಿಸ್ಟ್ರಿಗೆ ನಿರ್ದೇಶಿಸಲಾಗಿದೆ.

The post ದರ್ಶನ್ ಜಾಮೀನಿನ ಜೊತೆಗೆ VIP ಟ್ರೀಟ್‌ಮೆಂಟ್ ಗೂ ಬಿತ್ತು ಬ್ರೇಕ್ ! ಸುಪ್ರೀಂ ಎಚ್ಚರಿಕೆ ! appeared first on Good News 24x7.

]]>