#virat #celebration #RCB #emotion #victory Archives - Good News 24x7 https://www.goodnews24x7.com/tag/virat-celebration-rcb-emotion-victory/ Kannada Wed, 03 Sep 2025 09:10:27 +0000 en-US hourly 1 https://wordpress.org/?v=7.0 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg #virat #celebration #RCB #emotion #victory Archives - Good News 24x7 https://www.goodnews24x7.com/tag/virat-celebration-rcb-emotion-victory/ 32 32 ಮೌನ ಮುರಿದ ವಿರಾಟ್ ಕೊಹ್ಲಿRCB ವಿಜಯೋತ್ಸವ ದುರಂತ ಆಯಿತು….! https://www.goodnews24x7.com/virat-kohli-breaks-silence-rcb-victory-turned-into-tragedy/ Wed, 03 Sep 2025 09:10:27 +0000 https://www.goodnews24x7.com/?p=7290 18 ವರ್ಷದ ಬಳಿಕ ಟ್ರೋಫಿ ಮುಡಿಗೇರಿಸಿಕೊಂಡಿದ್ದ ಆರ್​ಸಿಬಿ ವಿಜಯೋತ್ಸವದಲ್ಲಿ ವಿರಾಟ್ ಕೊಹ್ಲಿ, ಕ್ಯಾಪ್ಟನ್ ರಜತ್ ಪಾಟಿದಾರ್ ಸೇರಿದಂತೆ ತಂಡದ ಎಲ್ಲ ಆಟಗಾರರು ಭಾಗಿಯಾಗಿದ್ದರು. ಈ ಆಟಗಾರರನ್ನೆಲ್ಲ ಕಣ್ತುಂಬಿಕೊಳ್ಳಬೇಕು ಎಂದು ಲಕ್ಷಾಂತರ ಜನರು ಸ್ಟೇಡಿಯಂ ಬಳಿ ಒಂದೇ ಬಾರಿ ನುಗ್ಗಿದ್ದರಿಂದ ಕಾಲ್ತುಳಿತ ಸಂಭವಿಸಿತ್ತು.…

The post ಮೌನ ಮುರಿದ ವಿರಾಟ್ ಕೊಹ್ಲಿRCB ವಿಜಯೋತ್ಸವ ದುರಂತ ಆಯಿತು….! appeared first on Good News 24x7.

]]>

18 ವರ್ಷದ ಬಳಿಕ ಟ್ರೋಫಿ ಮುಡಿಗೇರಿಸಿಕೊಂಡಿದ್ದ ಆರ್​ಸಿಬಿ ವಿಜಯೋತ್ಸವದಲ್ಲಿ ವಿರಾಟ್ ಕೊಹ್ಲಿ, ಕ್ಯಾಪ್ಟನ್ ರಜತ್ ಪಾಟಿದಾರ್ ಸೇರಿದಂತೆ ತಂಡದ ಎಲ್ಲ ಆಟಗಾರರು ಭಾಗಿಯಾಗಿದ್ದರು. ಈ ಆಟಗಾರರನ್ನೆಲ್ಲ ಕಣ್ತುಂಬಿಕೊಳ್ಳಬೇಕು ಎಂದು ಲಕ್ಷಾಂತರ ಜನರು ಸ್ಟೇಡಿಯಂ ಬಳಿ ಒಂದೇ ಬಾರಿ ನುಗ್ಗಿದ್ದರಿಂದ ಕಾಲ್ತುಳಿತ ಸಂಭವಿಸಿತ್ತು. ಈ ದುರ್ಘಟನೆಯಲ್ಲಿ 11 ಜನರು ಉಸಿರು ಚೆಲ್ಲಿದ್ರೆ, ಹಲವಾರು ಜನರು ಗಂಭೀರವಾಗಿ ಗಾಯಗೊಂಡಿದ್ದರು. ಸದ್ಯ ಈ ಸಂಬಂಧ ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ.

ಜೂನ್ 4 ರಂದು ನಡೆದಂತಹ ದುರ್ಘಟನೆಯಿಂದ ನಿಮ್ಮನ್ನು ಮತ್ತೆ ಸಿದ್ಧಪಡಿಸಲು ಆಗುವುದಿಲ್ಲ. ಆರ್​ಸಿಬಿ ಫ್ರಾಂಚೈಸಿಯ ಐತಿಹಾಸಿಕ ಸಂತೋಷದ ಕ್ಷಣ ಏನಾಗಬೇಕಿತ್ತು ಎಂದುಕೊಂಡಿತ್ತೋ ಅದು ಆಗಲಿಲ್ಲ. ಬದಲಿಗೆ ಅದು ದೊಡ್ಡ ದುರಂತವಾಗಿ ಬದಲಾಯಿತು. ಇದು ತುಂಬಾ ದುಃಖಕರ ಸಂಗತಿ. ಘಟನೆಯಲ್ಲಿ ಉಸಿರು ಚೆಲ್ಲಿರುವಂತಹ ಅವರ ಕುಟುಂಬದ ಬಗ್ಗೆ ದೇವರಲ್ಲಿ ಪ್ರಾರ್ಥಿಸಿದ್ದೇನೆ. ಗಾಯಗೊಂಡವರು ಬೇಗ ರಿಕವರಿ ಆಗಲೆಂದು ಕೇಳಿಕೊಂಡಿದ್ದೇನೆ. ನಿಮ್ಮನ್ನು ಕಳೆದುಕೊಂಡಿರುವುದು ನಮ್ಮಲ್ಲಿ ಭಾಗವಾಗಿದೆ. ಇನ್ಮುಂದೆ ಕಾಳಜಿ, ಗೌರವ ಮತ್ತು ಜವಾಬ್ದಾರಿಯಿಂದ ನಾವು ಮುಂದೆ ಸಾಗುತ್ತೇವೆ ಎಂದು ವಿರಾಟ್ ಕೊಹ್ಲಿ ಅವರು ಭಾವುಕವಾಗಿ ಹೇಳಿದ್ದಾರೆ.

 

ಘಟನೆಯ ಬಳಿಕ ಸುದೀರ್ಘ ಮೌನಕ್ಕೆ ಜಾರಿದ್ದ ಆರ್​​​ಸಿಬಿ ಅಗಸ್ಟ್​​ 28ರಂದು ಫ್ಯಾನ್ಸ್​ಗೆ ಭಾವನಾತ್ಮಕ ಪತ್ರ ಬರೆದಿತ್ತು. ಮೌನ ಮುರಿದು ಆರ್​​ಸಿಬಿ ಕೇರ್ಸ್​ ಅನ್ನೋ ಯೋಜನೆಯನ್ನ ರೂಪಿಸಿರೋದಾಗಿ ತಿಳಿಸಿತ್ತು. ಎರಡು ದಿನಗಳ ಹಿಂದೆ ಕಾಲ್ತುಳಿತ ದುರಂತದಲ್ಲಿ ಅಸುನೀಗಿದ ಕುಟುಂಬದವರಿಗೆ 10 ಲಕ್ಷದ ಬದಲಾಗಿ 25 ಲಕ್ಷ ಪರಿಹಾರ ನೀಡೋದಾಗಿ ಘೋಷಿಸಿತ್ತು.

The post ಮೌನ ಮುರಿದ ವಿರಾಟ್ ಕೊಹ್ಲಿRCB ವಿಜಯೋತ್ಸವ ದುರಂತ ಆಯಿತು….! appeared first on Good News 24x7.

]]>