website Archives - Good News 24x7 https://www.goodnews24x7.com/tag/website/ Kannada Sat, 30 Aug 2025 13:42:04 +0000 en-US hourly 1 https://wordpress.org/?v=7.0.2 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg website Archives - Good News 24x7 https://www.goodnews24x7.com/tag/website/ 32 32 ವಿಶ್ವ ವಿಖ್ಯಾತಿ ಮೈಸೂರು ದಸರಾ ಕೇವಲ ಮೈಸೂರಿಗೆ ಮಾತ್ರ ಸೀಮಿತವಾಯ್ತಾ ,,,! https://www.goodnews24x7.com/is-the-world-famous-mysore-dasara-limited-to-mysore-only/ Sat, 30 Aug 2025 13:42:04 +0000 https://www.goodnews24x7.com/?p=7078 ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ದಸರಾ ಉನ್ನತಮಟ್ಟದ ಸಭೆ ನಡೆದು ತಿಂಗಳಾಗಿದೆ. ಉದ್ಘಾಟಕರಾಗಿ ಸಾಹಿತಿ, ಬೂಕರ್‌ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್‌ ಹೆಸರು ಘೋಷಣೆಯಾಗಿದೆ. ಈ ಸಂಗತಿಗಳನ್ನು ಹೊರತು ಪಡಿಸಿ ದಸರಾ-೨೦೨೫ ರ ಯಾವುದೇ ಕಾರ್ಯಕ್ರಮಗಳ ವಿವರ ಲಭ್ಯವಿಲ್ಲ. ಮೈಸೂರು ದಸರಾ ಮಹೋತ್ಸವದ…

The post ವಿಶ್ವ ವಿಖ್ಯಾತಿ ಮೈಸೂರು ದಸರಾ ಕೇವಲ ಮೈಸೂರಿಗೆ ಮಾತ್ರ ಸೀಮಿತವಾಯ್ತಾ ,,,! appeared first on Good News 24x7.

]]>

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ದಸರಾ ಉನ್ನತಮಟ್ಟದ ಸಭೆ ನಡೆದು ತಿಂಗಳಾಗಿದೆ. ಉದ್ಘಾಟಕರಾಗಿ ಸಾಹಿತಿ, ಬೂಕರ್‌ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್‌ ಹೆಸರು ಘೋಷಣೆಯಾಗಿದೆ. ಈ ಸಂಗತಿಗಳನ್ನು ಹೊರತು ಪಡಿಸಿ ದಸರಾ-೨೦೨೫ ರ ಯಾವುದೇ ಕಾರ್ಯಕ್ರಮಗಳ ವಿವರ ಲಭ್ಯವಿಲ್ಲ.

ಮೈಸೂರು ದಸರಾ ಮಹೋತ್ಸವದ ಇಂಚಿಂಚು ಮಾಹಿತಿಯನ್ನು ಒದಗಿಸಬೇಕಾಗಿದ್ದ ದಸರಾ ವೆಬ್‌ ಸೈಟ್‌ ಈತನಕ ಸಿದ್ಧಗೊಂಡಿಲ್ಲ. ಯಾರಾದರು ಕುತೂಹಲದಿಂದ ಈ ಸೈಟ್‌ ಗೆ ಭೇಟಿ ನೀಡಿದರೆ ನಿರಾಸೆ ಖಂಡಿತ.

ಕಾರಣ ಈ ವೆಬ್‌ ಸೈಟ್‌ ನಲ್ಲಿ ಯಾವುದೇ ಮಾಹಿತಿ ಇಲ್ಲ. ಅಸಲಿಗೆ ಈ ಸೈಟ್‌ ಒಪನ್‌ ಆಗೋದೇ ಇಲ್ಲ. ಅದು ಯೂಸರ್‌ ನೇಮ್‌ ,ಪಾಸವರ್ಡ್‌ ಕೇಳುತ್ತದೆ. ದಸರಾ ಮಹೋತ್ಸವ ವೀಕ್ಷಿಸಲು ಪ್ಲಾನ್‌ ಮಾಡುವ ಉದ್ದೇಶ ಹೊಂದಿರುವ ವಿದೇಶಿಗರಿಗೆ ಇದರಿಂದ ತೀವ್ರ ನಿರಾಸೆಯಾಗಿದೆ. ಟಿಕೆಟ್‌ ಅದರಲ್ಲೂ “ ಗೋಲ್ಡ್‌ ಕಾರ್ಡ್‌ “ ಪಡೆದು ಕಾರ್ಯಕ್ರಮ ವೀಕ್ಷಿಸುವ ಬಯಕೆ ಹೊಂದಿರುವವರು ವೆಬ್‌ ಸೈಟ್‌ ಸಿದ್ಧವಾಗದ್ದನ್ನು ಕಂಡು ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ.

ಈ ಸಾಲಿನ ದಸರಾ ಮಹೋತ್ಸವದ ಕಾರ್ಯಕ್ರಮಗಳೇನು, ಯಾವಯಾವ ಕಲಾವಿದರು ಬರುತ್ತಾರೆ. ಕಾರ್ಯಕ್ರಮಗಳು ಎಲ್ಲಿ ನಡೆಯುತ್ತವೆ. ಅದರ ಸಮಯ ಏನು..? ಈ ಯಾವ ಮಾಹಿತಿಯು ಈ ತನಕ ಲಭ್ಯವಿಲ್ಲ.

ಯುವ ದಸರಾ ಎಲ್ಲಿ..?:

ದಸರಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎಂಬಂತೆ ಕಳೆದ ವರ್ಷ ಮಹಾರಾಜ ಕಾಲೇಜು ಮೈದಾನದ ಬದಲಿಗೆ ಮೈಸೂರಿನ ಹೊರ ವಲಯದಲ್ಲಿ ಯುವ ದಸರಾ ನಡೆಸಲಾಗಿತ್ತು. ಇಳಯರಾಜ, ರೆಹಮಾನ್ ರಂಥ ಚಲನಚಿತ್ರರಂಗದ ಘಟಾನುಘಟಿ ಕಲಾವಿದರನ್ನು ಆಹ್ವಾನಿಸಿದ್ದರಿಂದ ನಗರ ಪ್ರದೇಶದಲ್ಲಿ ಜನದಟ್ಟನೆ ನಿಯಂತ್ರಿಸಲು ಈ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಈ ವರ್ಷ ಎಲ್ಲಿ ಯುವ ದಸರಾ ನಡೆಸುತ್ತಾರೆ ಎಂಬುದು ಇನ್ನು ತೀರ್ಮಾನವಾಗಿಲ್ಲ. ಕಲಾವಿದರ ಡೇಟ್ಸ್‌ ಪೈನಲ್‌ ಆದ ಬಳಿಕ ಕಾರ್ಯಕ್ರಮ ಸ್ಥಳ ನಿಗಧಿಪಡಿಸುವ ಉದ್ದೇಶ ಹೊಂದಲಾಗಿದೆ.

ದಸರಾ ಮಹೋತ್ಸವದ ಅಧಿಕೃತ ವೆಬ್‌ಸೈಟ್ ಸಿದ್ಧವಾಗದಿರುವುದರಿಂದ ಪ್ರವಾಸಿಗರಿಗೆ ಮಾಹಿತಿ ಪಡೆಯಲು ತೊಂದರೆಯಾಗಿದೆ. ಇದು ಸಂಘಟನೆ ಕೊರತೆ ಸೂಚಿಸುತ್ತದೆ.

ಮೈಸೂರು ದಸರಾದ ವಿಶ್ವವಿಖ್ಯಾತ ಸ್ಥಾನಕ್ಕೆ ಇದರ ಐತಿಹಾಸಿಕ, ಸಾಂಸ್ಕೃತಿಕ, ಮತ್ತು ದೃಶ್ಯಾತ್ಮಕ ವೈಭವವೇ ಕಾರಣ. ಆದ್ದರಿಂದ 2025ರ ಆಚರಣೆಯ ಸಿದ್ಧತೆಯ ಕೊರತೆಯನ್ನು ಸರಿಪಡಿಸಲು ರಾಜ್ಯ ಸರಕಾರ ಶೀಘ್ರ ಕ್ರಮ ಕೈಗೊಂಡು , ಈ ವರ್ಷದ ದಸರಾವೂ ಯಶಸ್ವಿಯಾಗಿ ಜಗತ್ತಿನ ಗಮನ ಸೆಳೆಯುವಂತಾಗಲಿ.

 

The post ವಿಶ್ವ ವಿಖ್ಯಾತಿ ಮೈಸೂರು ದಸರಾ ಕೇವಲ ಮೈಸೂರಿಗೆ ಮಾತ್ರ ಸೀಮಿತವಾಯ್ತಾ ,,,! appeared first on Good News 24x7.

]]>