wife Archives - Good News 24x7 https://www.goodnews24x7.com/tag/wife/ Kannada Tue, 21 Jul 2026 09:20:45 +0000 en-US hourly 1 https://wordpress.org/?v=7.0.2 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg wife Archives - Good News 24x7 https://www.goodnews24x7.com/tag/wife/ 32 32 ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು ! https://www.goodnews24x7.com/wife-kills-children-husband-hangs-himself/ Tue, 21 Jul 2026 09:20:09 +0000 https://www.goodnews24x7.com/?p=9866   ಹೃದಯವೇದ್ರಾವಕ ಘಟನೆಯೊಂದು ಹುಣಸೂರಿನಲ್ಲಿ ನಡೆದಿದೆ ಪತ್ನಿ ಮಕ್ಕಳನ್ನು ಹತ್ಯೆಗೈದು ಪತಿ ನೇಣಿಗೆ ಶರಣಾಗಿರುವ ಪ್ರಕರಣ ಹುಣಸೂರು ನಗರದ ನ್ಯೂ ಮಾರುತಿ ಬಡಾವಣೆಯಲ್ಲಿ ಘಟನೆ ನ್ಯೂ ಮಾರುತಿ ಬಡಾವಣೆಯ ಹರೀಶ್ 49, ಪತ್ನಿ ನಿಶ್ಚಿತ 36 ಮಕ್ಕಳಾದ ನೆಕ್ಸಾ 13 ರಕ್ಷಾ…

The post ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು ! appeared first on Good News 24x7.

]]>

 

ಹೃದಯವೇದ್ರಾವಕ ಘಟನೆಯೊಂದು ಹುಣಸೂರಿನಲ್ಲಿ ನಡೆದಿದೆ

ಪತ್ನಿ ಮಕ್ಕಳನ್ನು ಹತ್ಯೆಗೈದು ಪತಿ ನೇಣಿಗೆ ಶರಣಾಗಿರುವ ಪ್ರಕರಣ ಹುಣಸೂರು ನಗರದ ನ್ಯೂ ಮಾರುತಿ ಬಡಾವಣೆಯಲ್ಲಿ ಘಟನೆ

ನ್ಯೂ ಮಾರುತಿ ಬಡಾವಣೆಯ ಹರೀಶ್ 49, ಪತ್ನಿ ನಿಶ್ಚಿತ 36 ಮಕ್ಕಳಾದ ನೆಕ್ಸಾ 13 ರಕ್ಷಾ 6 ಸಾವು

ಹೆಂಡತಿ ಮಕ್ಕಳ ಬಾಯಿಗೆ ಪ್ಲಾಸ್ಟರ್ ಅಂಟಿಸಿ ಉಸಿರು ಕಟ್ಟಿಸಿ ಕೊಲೆ
ನಂತರ ಮನೆ‌ ಮೊದಲ ಮಹಡಿಯ ಕೊಠಡಿಗೆ ತೆರಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ಹುಣಸೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ

The post ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು ! appeared first on Good News 24x7.

]]>
ಪತಿ ಕೊಂ*ದು ಕಥೆ ಕಟ್ಟಿದ್ದ ಪತ್ನಿ https://www.goodnews24x7.com/wife-who-fabricated-story-of-husbands-murder/ Mon, 29 Jun 2026 10:54:31 +0000 https://www.goodnews24x7.com/?p=9702 29 ಜೂನ್ 2026 , ಮೈಸೂರು: ಮೈಸೂರಿನ ಕುವೆಂಪುನಗರದಲ್ಲಿ ನಡೆದಿದ್ದ ನಿತ್ಯಾನಂದ ಅವರ ಅನುಮಾನಾಸ್ಪದ ಸಾ*ವಿನ ಪ್ರಕರಣ ಕೊ*ಲೆ ಪ್ರಕರಣವಾಗಿ ತಿರುಗಿದ್ದು, ಪತ್ನಿ ಸುಶೀಲ ಅವರೇ ಗಂಡನನ್ನು ಹ*ತ್ಯೆ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.…

The post ಪತಿ ಕೊಂ*ದು ಕಥೆ ಕಟ್ಟಿದ್ದ ಪತ್ನಿ appeared first on Good News 24x7.

]]>

29 ಜೂನ್ 2026 , ಮೈಸೂರು: ಮೈಸೂರಿನ ಕುವೆಂಪುನಗರದಲ್ಲಿ ನಡೆದಿದ್ದ ನಿತ್ಯಾನಂದ ಅವರ ಅನುಮಾನಾಸ್ಪದ ಸಾ*ವಿನ ಪ್ರಕರಣ ಕೊ*ಲೆ ಪ್ರಕರಣವಾಗಿ ತಿರುಗಿದ್ದು, ಪತ್ನಿ ಸುಶೀಲ ಅವರೇ ಗಂಡನನ್ನು ಹ*ತ್ಯೆ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ದಂಪತಿಗೆ ಮಕ್ಕಳಿರಲಿಲ್ಲ ಸಾಂಸಾರಿಕ ಕಲಹ, ಹಣಕಾಸು ಮತ್ತು ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು 50 ವರ್ಷದ ನಿತ್ಯಾನಂದ ಅವರು ಖಾಸಗಿ ಮಹೀಂದ್ರಾ ಶೋ ರೂಂನಲ್ಲಿ ಕೆಲಸ ಮಾಡುತ್ತಿದ್ದರು. ಪತ್ನಿ ಸುಶೀಲ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದರು. ಎನ್ನಲಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ನಿತ್ಯಾನಂದ ಪ್ರತಿನಿತ್ಯ ಮದ್ಯಪಾನ ಮಾಡುತ್ತಿದ್ದರು. ಶನಿವಾರ ರಾತ್ರಿ ಕೂಡ ಸ್ನೇಹಿತರೊಂದಿಗೆ ಮದ್ಯಪಾನ ಮಾಡಿ ಮನೆಗೆ ತೆರಳಿದ್ದರು. ಬಳಿಕ ಮದ್ಯದ ಅಮಲಿನಲ್ಲಿ ಮಲಗಿದ್ದ ವೇಳೆ ಪತ್ನಿ ಸುಶೀಲ ಕುತ್ತಿಗೆಗೆ ಹಗ್ಗ ಬಿಗಿದು ಹ*ತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಕೊ*ಲೆ ಬಳಿಕ ಘಟನೆಗೆ ಹೃದಯಾಘಾತದ ಬಣ್ಣ ನೀಡಲು ಸುಶೀಲ ಯತ್ನಿಸಿದ್ದಾಳೆ ಎನ್ನಲಾಗಿದೆ. ಭಾನುವಾರ ಬೆಳಿಗ್ಗೆ ಬಹಳ ಹೊತ್ತಾದರೂ ಮನೆ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ನಿತ್ಯಾನಂದ ಅವರ ಸ್ನೇಹಿತ ದರ್ಶನ್ ಹಲವು ಬಾರಿ ಕರೆ ಮಾಡಿದ್ದರು. ಕರೆಗಳಿಗೆ ಸಮರ್ಪಕ ಉತ್ತರ ಸಿಗದ ಕಾರಣ ಅವರು ಮನೆ ಬಳಿ ಬಂದು ಬಾಗಿಲು ತಟ್ಟಿದರೂ ಸುಶೀಲ ಬಾಗಿಲು ತೆರೆಯಲಿಲ್ಲ ಎಂದು ತಿಳಿದುಬಂದಿದೆ.

ಬಳಿಕ ಸುಶೀಲ ಅವರು ನಿತ್ಯಾನಂದ ಅವರ ಅಣ್ಣನಿಗೆ ಕರೆ ಮಾಡಿ, “ನಿಮ್ಮ ತಮ್ಮನಿಗೆ ಹೃದಯಾಘಾತವಾಗಿದೆ” ಎಂದು ಮಾಹಿತಿ ನೀಡಿದ್ದಾರೆ. ತಕ್ಷಣ ಮನೆಗೆ ಆಗಮಿಸಿದ ನಿತ್ಯಾನಂದ ಅವರ ಅಣ್ಣ ಮೃ*ತದೇಹವನ್ನು ಪರಿಶೀಲಿಸಿದಾಗ ಕುತ್ತಿಗೆ ಭಾಗದಲ್ಲಿ ಗಾಯದ ಗುರುತುಗಳು ಕಂಡುಬಂದಿವೆ.

ಇದರಿಂದ ಅನುಮಾನಗೊಂಡ ಅವರು ಕುವೆಂಪುನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಸುಶೀಲ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಪ್ರಾಥಮಿಕ ವಿಚಾರಣೆಯಲ್ಲೇ ಕೊ*ಲೆ ಮಾಡಿರುವ ವಿಚಾರವನ್ನು ಸುಶೀಲ ಒಪ್ಪಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಹೆಚ್ಚಿನ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ. ಮ*ರಣೋತ್ತರ ಪರೀಕ್ಷೆಯ ವರದಿ ಹಾಗೂ ಮುಂದಿನ ತನಿಖೆಯ ಬಳಿಕ ಪ್ರಕರಣದ ಕುರಿತು ಇನ್ನಷ್ಟು ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.

The post ಪತಿ ಕೊಂ*ದು ಕಥೆ ಕಟ್ಟಿದ್ದ ಪತ್ನಿ appeared first on Good News 24x7.

]]>
ಹಣದ ಆಸೆಗಾಗಿ ಪತಿಯನ್ನೇ ಕೊಂ* ಖತರ್ನಾಕ್ ಹೆಂಡತಿ https://www.goodnews24x7.com/a-wife-who-killed-her-husband-for-the-sake-of-money/ Fri, 12 Sep 2025 05:42:38 +0000 https://www.goodnews24x7.com/?p=7472 ಮೈಸೂರು: ಹೊಟ್ಟೆಪಾಡಿಗಾಗಿ ಮಂಡ್ಯ ಜಿಲ್ಲೆ ಹಲಗೂರು ಹೋಬಳಿ ಕದಂಪುರ ಗ್ರಾಮದಿಂದ ಬಂದು, ಹುಣಸೂರು ತಾಲೂಕು ಚಿಕ್ಕ ಹೆದ್ದೂರು ಗ್ರಾಮದ ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ಬಡ ದಂಪತಿ ವೆಂಕಟಸ್ವಾಮಿ(45) ಮತ್ತು ಸಲ್ಲಾಪುರಿ. ಈ ಅಡಿಕೆ ತೋಟ ಬೆಂಗಳೂರಿನ ಸಿವಿಲ್ ಎಂಜಿನಿಯ‌ರ್ ಗಳಾದ…

The post ಹಣದ ಆಸೆಗಾಗಿ ಪತಿಯನ್ನೇ ಕೊಂ* ಖತರ್ನಾಕ್ ಹೆಂಡತಿ appeared first on Good News 24x7.

]]>

ಮೈಸೂರು: ಹೊಟ್ಟೆಪಾಡಿಗಾಗಿ ಮಂಡ್ಯ ಜಿಲ್ಲೆ ಹಲಗೂರು ಹೋಬಳಿ ಕದಂಪುರ ಗ್ರಾಮದಿಂದ ಬಂದು, ಹುಣಸೂರು ತಾಲೂಕು ಚಿಕ್ಕ ಹೆದ್ದೂರು ಗ್ರಾಮದ ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ಬಡ ದಂಪತಿ ವೆಂಕಟಸ್ವಾಮಿ(45) ಮತ್ತು ಸಲ್ಲಾಪುರಿ.
ಈ ಅಡಿಕೆ ತೋಟ ಬೆಂಗಳೂರಿನ ಸಿವಿಲ್ ಎಂಜಿನಿಯ‌ರ್ ಗಳಾದ ರವಿಕುಮಾರ್ ಮತ್ತು ಅರುಣ್‌ ಕುಮಾ‌ರ್ ಅವರ ಮಾಲೀಕತ್ವದ್ದು. ಇಲ್ಲಿ ಕೆಲಸ ಮಾಡಿಕೊಂಡು. ಇಲ್ಲಿಯೇ ವಾಸವಿದ್ದ ಈ ದಂಪತಿ ಪೈಕಿ ಕಳೆದ ಸೋಮವಾರ ಮಧ್ಯರಾತ್ರಿ ಹುಲಿ ಘರ್ಜನೆ ಕೇಳಿ ಮನೆಯಿಂದ ಹೊರಬಂದ ಪತಿ ವೆಂಕಟಸ್ವಾಮಿ ನಾಪತ್ತೆ. ತೀವ್ರ ಆತಂಕಗೊಂಡ ಪತ್ನಿ ಸಲ್ಲಾ ಪುರಿ, ಮಂಗಳವಾರ ಸಂಜೆ ಹುಣಸೂರು ಗ್ರಾಮಾಂತರ ಠಾಣೆಗೆ ತೆರಳಿ ತನ್ನ ಪತಿ ನಾಪತ್ತೆಯಾಗಿದ್ದಾನೆ ಎಂದು ಇನ್ಸ್ಪೆಕ್ಟರ್ ಮುನಿಯಪ್ಪ ಅವರಿಗೆ ದೂರು ಸಲ್ಲಿಸಿ ದ್ದಾಳೆ. ಆಕೆ ತನ್ನ ದೂರಿನಲ್ಲಿ, ಸೋಮವಾರ ಮಧ್ಯರಾತ್ರಿ ಮನೆಯ ಹೊರಗೆ ಹುಲಿ ಘರ್ಜನೆ ಕೇಳಿಸಿತು. ಆಗ ಪತಿ ವೆಂಕಟ ಸ್ವಾಮಿ ಎದ್ದು, ಮನೆ ಬಾಗಿಲು ಹಾಕಿಕೋ ಎಂದು ತಿಳಿಸಿ, ಹೊರ ಹೋದರು.ಅವರು ಇದುವರೆಗೂ ವಾಪಸ್ ಬಂದಿಲ್ಲ. ಅವರನ್ನು ಹುಲಿ ಹೊತ್ತೊಯ್ದಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದಳು.

ದಿನವಿಡೀ ಕೂಂಬಿಂಗ್: ವೆಂಕಟಸ್ವಾಮಿಯನ್ನು ಹುಲಿ ಹೊತ್ತೊಯ್ದಿರಬಹುದು ಎಂದಾಗ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದ ಇನ್ಸ್‌ಪೆಕ್ಟರ್ ಮುನಿಯಪ್ಪ ತಕ್ಷಣವೇ ಆರಣ್ಯ ಇಲಾಖೆಗೆ ಮಾಹಿತಿ
ವೆಂಕಟಸ್ವಾಮಿ ನೀಡಿದರು. ಮಂಗಳವಾರ ರಾತ್ರಿಯಿಂದಲೇ ಹುಲಿ ಹಾಗೂ ವೆಂಕಟಸ್ವಾಮಿಗಾಗಿ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಲಾಯಿತು. ಬುಧವಾರ ಸಂಜೆವರೆವಿಗೂ ಅಡಿಕೆ ತೋಟ ಹಾಗೂ ಸುಮಾರು 3 ಕಿ.ಮೀ. ಸುತ್ತಳತೆ ಯಲ್ಲಿ ಅರಣ್ಯ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಕೂಂಬಿಂಗ್ ನಡೆಸಿದರೂ ಯಾವುದೇ ಕುರುಹು ದೊರೆಯಲಿಲ್ಲ. ಹುಲಿ ಇರಲಿ, ನಾಪತ್ತೆಯಾದ ವೆಂಕಟ ಸ್ವಾಮಿ ಮೃತದೇಹವಿರಲಿ, ಅಡಿಕೆ ತೋಟಕ್ಕೆ ಯಾವುದೇ ವನ್ಯಜೀವಿ ಬಂದು ಹೋಗಿರು ವುದರ ಕುರುಹು ಸಿಗಲಿಲ್ಲ. ಸೋಮವಾರ ಮಳೆ ಬಿದ್ದಿದ್ದರಿಂದ ಯಾವುದೇ ವನ್ಯಜೀವಿ ಅಡಿಕೆ ತೋಟಕ್ಕೆ ಬಂದಿದ್ದರೂ, ಅದರ ಹೆಜ್ಜೆ ಗುರುತು ಇರಲೇಬೇಕಿತ್ತು. ಅಂತಹ ಯಾವುದೇ ಗುರುತು ಪತ್ತೆಯಾಗಲಿಲ್ಲ.ಆದರೆ ಇದ್ದಕ್ಕಿದ್ದಂತೆ ಸಲ್ಲಾಪುರಿ ಆನೆ ಹೆಜ್ಜೆ ಗುರುತನ್ನು ತೋರಿಸಿ ಆನೆ ಬಂದಿರ ಬಹುದು ಎಂದು ಹೇಳಿದ್ದಾಳೆ. ಆದರೆ ಅಷ್ಟರ ಲ್ಲಾಗಲೇ ತೋಟಕ್ಕೆ ಬಂದಿದ್ದ ಅದರ ಮಾಲೀಕರು, ನಮ್ಮ ತೋಟಕ್ಕೆ ಸುಮಾರು ಎರಡು ತಿಂಗಳ ಹಿಂದೆ ಆನೆ ಬಂದಿತ್ತು ನಂತರ ಯಾವುದೇ ಆನೆ ಬಂದಿಲ್ಲ ಎಂದರು. ಅದೇ ವೇಳೆ ಅರಣ್ಯ ಇಲಾಖೆ ಸಿಬ್ಬಂದಿಯೂ ಈ ಆನೆ ಹೆಜ್ಜೆ ಗುರುತು ಬಹಳ ಹಳೆಯದು ಎಂಬುದನ್ನು ಖಚಿತಪಡಿಸಿದರು.

ಮನೆಯಿಂದ ತಿಪ್ಪೇಗುಂಡಿವರೆಗೆ ಏನೋ ಎಳೆದೊಯ್ದ ಗುರುತು: ಮಂಗಳವಾರ ರಾತ್ರಿ ಯಿಂದ ಬುಧವಾರ ಸಂಜೆವರೆಗೆ ಅಡಿಕೆ ತೋಟಕ್ಕೆ ಹೊಂದಿಕೊಂಡಿರುವ ಕಾಡಿನಲ್ಲಿ ಅಲೆದು ಸುಸ್ತಾಗಿದ್ದ ಅರಣ್ಯ ಹಾಗೂ ಪೊಲೀಸ್ ಸಿಬ್ಬಂದಿ ತೋಟದ ಮನೆ ಬಳಿ ಬಂದಾಗ ಮನೆಯಿಂದ ತಿಪ್ಪೆಗುಂಡಿವರೆಗೆ ಏನೋ ಎಳೆದೊಯ್ದಿದ್ದ ಗುರುತು ಕಣ್ಣಿಗೆ ಬಿತ್ತು. ಆದರೆ ಮನುಷ್ಯನನ್ನು ಯಾವುದೇ ಪ್ರಾಣಿ ಎಳೆದೊಯ್ದರೆ ಉಂಟಾಗುವ ಗುರುತಂತೂ ಇದಾಗಿರಲಿಲ್ಲ. ಹಾಗಾಗಿ ಸಂಶಯ ಗೊಂಡ ಅರಣ್ಯ ಹಾಗೂ ಪೊಲೀಸ್ ಅಧಿಕಾರಿಗಳು ಆ ಗುರುತಿನ ಬಗ್ಗೆ ಸಲ್ಲಾಪುರಿ ಪ್ರಶ್ನಿಸಲಾರಂಭಿ ಸಿದರು. ಆದರೆ ಆಕೆ ಗಳಿಗೆಗೊಂದು ಉತ್ತರ ಹೇಳುತ್ತಿದ್ದಾಗ ಅವಳ ಮೇಲೆ ಸಂಶಯ ಹೆಚ್ಚಾಗತೊಡಗಿತು.

ವೆಂಕಟಸ್ವಾಮಿ ಎಳೆದೊಯ್ದದ್ದು ಹುಲಿಯಲ್ಲ,ಪತ್ನಿ: ಹುಲಿ ಘರ್ಜನೆ ಕೇಳಿ ಮನೆಯಿಂದ ಹೊರ ಹೋದ ವೆಂಕಟಸ್ವಾಮಿಯನ್ನು ಹುಲಿ ಎಳೆದೊಯ್ದಿರಬಹುದು ಎಂದು ಪೊಲೀಸರಿಗೆ ಹೇಳಿದ್ದ ಪತ್ನಿ ಸಲ್ಲಾಪುರಿಯೇ ತನ್ನ ಪತಿಯ ಮೃತದೇಹವನ್ನು ಮನೆಯಿಂದ ತಿಪ್ಪೆಗುಂಡಿ ವರೆಗೆ ಎಳೆದೊಯ್ದಿದ್ದಳು. ಅದರ ಗುರುತೇ ಇದು ಎಂಬುದು ತೀವ್ರ ವಿಚಾರಣೆ ವೇಳೆ ತಿಳಿದು ಬಂದಿದೆ. ತಿಪ್ಪೇಗುಂಡಿಯನ್ನು ಅಗೆದಾಗ ಸುಮಾರು 2 ಅಡಿ ಆಳದಲ್ಲಿ ವೆಂಕಟಸ್ವಾಮಿಯ ಕೈ ಗೋಚರಿಸಿದೆ. ಈ ಹಿನ್ನೆಲೆಯಲ್ಲಿ ಇಂದು ಪೊಲೀಸರು ಹುಣ ಸೂರು ಉಪ ವಿಭಾಗಾಧಿಕಾರಿ ವಿಜಯಕುಮಾರ್ ಸಮ್ಮುಖದಲ್ಲಿ ವೆಂಕಟಸ್ವಾಮಿ ದೇಹವನ್ನು ಹೊರ ತೆಗೆದು ಸರ್ಕಾರಿ ವೈದ್ಯರನ್ನು ಸ್ಥಳಕ್ಕೇ ಕರೆಸಿ ಮರಣೋತ್ತರ ಪರೀಕ್ಷೆ ಮಾಡಿಸಿದ್ದಾರೆ.

ಪರಿಹಾರದ ಹಣದಾಸೆಗಾಗಿ ಪತಿಯನ್ನೇ ಮುಗಿಸಿದಳು: ನಂತರ ಪೊಲೀಸರು ಸಲ್ಲಾಪುರಿ ಯನ್ನು ತೀವ್ರ ವಿಚಾರಣೆಗೊಳಪಡಿಸಿದ ವೇಳೆ ತನ್ನ ಪತಿ ವೆಂಕಟಸ್ವಾಮಿಯನ್ನು ಹುಲಿ ಕೊಂದು ಹಾಕಿದೆ ಎಂದು ಹೇಳಿದರೆ ಆರಣ್ಯ ಇಲಾಖೆ ಯಿಂದ 15 ಲಕ್ಷ ರೂ. ಪರಿಹಾರ ದೊರೆಯು ತ್ತದೆ ಎಂದು ಪರಿಹಾರದ ಆಸೆಗಾಗಿ ಪತಿಯನ್ನ ಕೊಂದು ಹುಲಿ ಎಳೆದೊಯ್ದಿರಬಹುದು ಎಂದು ಕತೆ ಕಟ್ಟಿರುವುದು ಬೆಳಕಿಗೆ ಬಂದಿದೆ.

ಪರಿಹಾರದ ಬಗ್ಗೆ ಗ್ರಾಮ ಪಂಚಾಯ್ತಿಯಿಂದ ಮಾಹಿತಿ ಪಡೆದಿದ್ದಳು: ಕಳೆದ 11 ತಿಂಗಳಿಂದ ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ಈಕೆ, ವನ್ಯಮೃಗಗಳಿಗೆ ಮನುಷ್ಯರು ಬಲಿಯಾದರೆ, ಲಕ್ಷಾಂತರ ರೂ. ಪರಿಹಾರ ಸಿಗುತ್ತದೆ ಎಂಬುದನ್ನು ಸಮೀಪದ ಗ್ರಾಮ ಪಂಚಾಯ್ತಿಯಿಂದ ತಿಳಿದು ಕೊಂಡಿದ್ದಳು ಎಂಬುದು ವಿಚಾರಣೆಯಿಂದ ಗೊತ್ತಾಗಿದೆ.

ಊಟಕ್ಕೆ ವಿಷ: ಪತಿ ವೆಂಕಟಸ್ವಾಮಿಯನ್ನು ಕೊಂದು ತಿಪ್ಪೆಗುಂಡಿಯಲ್ಲಿ ಹೂತು ಹಾಕಲು ನಿರ್ಧಾರ ಮಾಡಿಕೊಂಡಿದ್ದ ಸಲ್ಲಾಪುರಿ, ಸೋಮವಾರ ರಾತ್ರಿ ಊಟದಲ್ಲಿ ಪತಿ ವೆಂಕಟಸ್ವಾಮಿಗೆ ವಿಷ ಹಾಕಿ ಕೊಟ್ಟಿದ್ದಳು. ಆತ ಪ್ರಜ್ಞೆ ತಪ್ಪಿದಾಗ ಆತನ ಖಾಸಗಿ ಅಂಗಾಂಗಕ್ಕೆ ಒದ್ದು, ದಿಂಬಿನಿಂದ ಉಸಿರುಗಟ್ಟಿಸಿ ಕೊಂದು ಹಾಕಿದ್ದಾಳೆ. ನಂತರ ತಾನೇ ಮನೆಯಿಂದ ಪತಿಯ ಮೃತದೇಹವನ್ನು ತಿಪ್ಪೆಗುಂಡಿಯ ವರೆಗೆ ಎಳೆದೊಯ್ದು, ಮೂರಾಲ್ಕು ಅಡಿ ಹಳ್ಳ ತೆಗೆದು ಅದರಲ್ಲಿ ದೇಹವನ್ನು ಹೂತುಹಾಕಿದ್ದಳು.

 

ಪೊಲೀಸರ ಮುಂದೆ ಕಟ್ಟುಕತೆ: ಸೋಮವಾರ ರಾತ್ರಿಯೇ ಗಂಡನನ್ನು ತಿಪ್ಪೆಗುಂಡಿಯಲ್ಲಿ ಸಮಾಧಿ ಮಾಡಿದ ಸಲ್ಲಾಪುರಿ, ಪತಿಯನ್ನು ಹುಲಿ ಕೊಂದು ಹಾಕಿದೆ ಎಂಬುದರ ಬಗ್ಗೆ ಕಟ್ಟುಕತೆ ರೂಪಿಸಲು ಒಬ್ಬಳೇ ಕುಳಿತು ಮಂಗಳ ವಾರ ಸಂಜೆವರೆಗೂ ಯೋಜನೆ ರೂಪಿಸಿ ನಂತರ ಹುಣಸೂರು ಗ್ರಾಮಾಂತರ ಠಾಣೆಗೆ ತೆರಳಿ ಪತಿ ನಾಪತ್ತೆ ದೂರು ನೀಡಿದ್ದಲ್ಲದೇ, ಹೆಚ್ಚುವರಿಯಾಗಿ ಆತನನ್ನು ಹುಲಿ ಹೊತ್ತೊಯ್ದಿರಬಹುದು ಎಂದು ಕತೆ ಕಟ್ಟಿದ್ದಾಳೆ.ಆದರೆ ಇವಳ ಕತೆಯನ್ನು ಆರಂಭದಲ್ಲಿ ನಂಬಿದ ಪೊಲೀಸ್ ಹಾಗೂ ಅರಣ್ಯ ಸಿಬ್ಬಂದಿ ದಿನವಿಡೀ ಕೂಂಬಿಂಗ್ ನಡೆಸಿ, ಬಸವಳಿದಿದ್ದೇ ಆಯ್ತು. ಆದರೆ, ಅವರಿಗೆ ಅಡಿಕೆ ತೋಟಕ್ಕೆ ಯಾವುದೇ ವನ್ಯಮೃಗ ಬಂದಿದ್ದಕ್ಕೆ ಹೆಜ್ಜೆ ಗುರುತು ಗಳು ಸಿಗಲಿಲ್ಲವಾದರೂ, ಈಕೆಯೇ ಗಂಡನ ಶವವನ್ನು ಎಳೆದೊಯ್ದಿದ್ದ ಗುರುತಂತೂ ದೊರೆತು ಸಲ್ಲಾ ಪುರಿಯನ್ನು ಜೈಲಿಗೆ ಕಳುಹಿಸುವಂತಾಯಿತು.
ವಿಷಯ ಬಯಲಾಗುತ್ತಿದ್ದಂತೆಯೇ ಹುಣಸೂರು ಗ್ರಾಮಾಂತರ ಠಾಣೆ ಪೊಲೀಸ ರು ಸಲ್ಲಾಪುರಿಯನ್ನು ಬಂಧಿಸಿದ್ದಾರೆ. ಜಿಲ್ಲಾ ಎಸ್ಪಿ ವಿಷ್ಣುವರ್ಧನ ನಿರ್ದೇಶನದಂತೆ ಅಡಿಷನಲ್ ಎಸ್ಪಿ ಸಿ.ಮಲ್ಲಿಕ್, ಹುಣಸೂರು ಉಪ ವಿಭಾಗದ ಡಿವೈಎಸ್‌ಪಿ ಗೋಪಾಲ ಕೃಷ್ಣ, ಹುಣಸೂರು ಗ್ರಾಮಾಂತರ ಠಾಣೆಯ ಸಬ್ ಇನ್ಸ್‌ಪೆಕ್ಟರ್ ರಾಧಾ, ಜಿಲ್ಲಾ ಬೆರಳಚ್ಚು ಘಟಕದ ಇನ್ಸ್‌ಪೆಕ್ಟರ್ ಎಂ.ಆರ್.ಬಾಲಸುಬ್ರಹ್ಮಣ್ಯ, ಸಹಾಯಕ ಸಬ್ ಇನ್ಸ್‌ಪೆಕ್ಟರ್ ಹೆಚ್.ಆರ್. ಹರೀಶ್, ಹೆಡ್ ಕಾನ್ಸ್ ಟೇಬಲ್ ಹೆಚ್.ಮಧು ಚಂದ್ರ, ಸೀನ್ ಆಫ್ ಕ್ರೈಮ್ ಅಧಿಕಾರಿಗಳಾದ ಆದರ್ಶ ಮತ್ತು ಮೋಹಿತ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

 

The post ಹಣದ ಆಸೆಗಾಗಿ ಪತಿಯನ್ನೇ ಕೊಂ* ಖತರ್ನಾಕ್ ಹೆಂಡತಿ appeared first on Good News 24x7.

]]>
15 ಲಕ್ಷಕ್ಕೆ ಸುಪಾರಿ ಕೊಟ್ಟು ಗರ್ಭಿಣಿ ಪತ್ನಿಯನ್ನೇ ಮುಗಿಸಿದ; ಸೀನಿಯರ್ ಮೇಲೆ ಮೋಹ.. ಪತ್ನಿಗೆ ಚಟ್ಟ! https://www.goodnews24x7.com/he-killed-his-pregnant-wife-by-giving-her-a-betel-nut-for-15-lakhs-infatuation-with-a-senior-wife-was-shocked/ Wed, 10 Sep 2025 06:31:10 +0000 https://www.goodnews24x7.com/?p=7449 ಎರಡು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿ ಆರು ತಿಂಗಳ ಗರ್ಭಿಣಿಯನ್ನಾಗಿ ಮಾಡಿ ಇದೀಗ ಇನ್ನೊಬ್ಬಳ ಮೇಲಿನ ವ್ಯಾಮೋಹಕ್ಕೆ ಬಿದ್ದು 15 ಲಕ್ಷ ರೂಪಾಯಿಗೆ ಸುಪಾರಿ ಕೊಟ್ಟು ಹೆಂಡತಿಯನ್ನೇ ಮುಗಿಸಿದ ಘಟನೆ ಕಾಗವಾಡ ತಾಲೂಕಿನ ಬಿ.ಕೆ.ಉಗಾರದಲ್ಲಿ ನಡೆದಿದೆ. ಬೆಳಗಾವಿ: ಎರಡು ವರ್ಷಗಳ ಹಿಂದೆ…

The post 15 ಲಕ್ಷಕ್ಕೆ ಸುಪಾರಿ ಕೊಟ್ಟು ಗರ್ಭಿಣಿ ಪತ್ನಿಯನ್ನೇ ಮುಗಿಸಿದ; ಸೀನಿಯರ್ ಮೇಲೆ ಮೋಹ.. ಪತ್ನಿಗೆ ಚಟ್ಟ! appeared first on Good News 24x7.

]]>

ಎರಡು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿ ಆರು ತಿಂಗಳ ಗರ್ಭಿಣಿಯನ್ನಾಗಿ ಮಾಡಿ ಇದೀಗ ಇನ್ನೊಬ್ಬಳ ಮೇಲಿನ ವ್ಯಾಮೋಹಕ್ಕೆ ಬಿದ್ದು 15 ಲಕ್ಷ ರೂಪಾಯಿಗೆ ಸುಪಾರಿ ಕೊಟ್ಟು ಹೆಂಡತಿಯನ್ನೇ ಮುಗಿಸಿದ ಘಟನೆ ಕಾಗವಾಡ ತಾಲೂಕಿನ ಬಿ.ಕೆ.ಉಗಾರದಲ್ಲಿ ನಡೆದಿದೆ.

ಬೆಳಗಾವಿ: ಎರಡು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿ ಆರು ತಿಂಗಳ ಗರ್ಭಿಣಿಯನ್ನಾಗಿ ಮಾಡಿ ಇದೀಗ ಇನ್ನೊಬ್ಬಳ ಮೇಲಿನ ವ್ಯಾಮೋಹಕ್ಕೆ ಬಿದ್ದು 15 ಲಕ್ಷ ರೂಪಾಯಿಗೆ ಸುಪಾರಿ ಕೊಟ್ಟು ಹೆಂಡತಿಯನ್ನೇ ಮುಗಿಸಿದ ಘಟನೆ ಕಾಗವಾಡ ತಾಲೂಕಿನ ಬಿ.ಕೆ.ಉಗಾರದಲ್ಲಿ ನಡೆದಿದೆ. ಚೈತಾಲಿ ಗಂಡನ ಸುಪಾರಿಗೆ ಬಲಿಯಾದ ಮಹಿಳೆ. ಪ್ರದೀಪ್ ಪ್ರಮುಖ ಆರೋಪಿ. ಪ್ರಕರಣ ಸಂಬಂಧ ಪ್ರದೀಪ್ ಸೇರಿ, ಸಾಥ್ ನೀಡಿದ್ದ ಇನ್ನಿಬ್ಬರು ಆರೋಪಿಗಳನ್ನು ಕಾಗವಾಡ ಪೊಲೀಸರು ಬಂಧಿಸಿ ವಿಚಾರಣೆ ನಡೆಸ್ತಿದ್ದಾರೆ. ಪತಿ ಪ್ರದೀಪ್ ಹಾಗೂ ಮೃತ ಚೈತಾಲಿ ಉಗಾರ್ ಬಿ.ಕೆ.ಗ್ರಾಮದವರು. ಒಂದೇ ಗ್ರಾಮದವರಾದ ಇವರು ಪ್ರೀತಿಸಿ ಎರಡು ವರ್ಷಗಳ ಹಿಂದಷ್ಟೇ ಮದುವೆ ಆಗಿದ್ದರು. ಸಾಕ್ಷಿಯಾಗಿ ಆರು ತಿಂಗಳ ಗರ್ಭಿಣಿ ಕೂಡ ಆಗಿದ್ದಳು ಎಂದು ತಿಳಿದುಬಂದಿದೆ.

ಆಗಿದ್ದೇನು..? ಕಾನೂನು ಪದವಿ ಪಡೆದಿದ್ದ ಪ್ರದೀಪ್ ಕಿರಣಗಿ, ಕಾಗವಾಡ ಕೋರ್ಟ್‌ನಲ್ಲಿ ವಕೀಲ ವೃತ್ತಿಯಲ್ಲಿದ್ದ. ಪ್ರೇಮ-ವಿವಾಹದ ಬಳಿಕವೂ ಕಾಲೇಜಿನ ಸೀನಿಯರ್ ಜೊತೆಗೆ ಪ್ರದೀಪ್​​ಗೆ ಲವ್ ಶುರುವಾಗಿತ್ತಂತೆ. ಸೀನಿಯರ್ ಲೇಡಿಯನ್ನ ಬುಟ್ಟಿಗೆ ಹಾಕಿಕೊಳ್ಳಲು ತನಗೆ ಮದುವೆಯೇ ಆಗಿಲ್ಲ ಎಂದು ನಾಟಕವಾಡಿದ್ದಾನೆ ಎನ್ನಲಾಗಿದೆ. ಜೂನಿಯರ್ ಪ್ರದೀಪ್ ಮಾತು ನಂಬಿದ್ದ ಸೀನಿಯರ್​, ಪ್ರೀತಿಯ ಬಲೆಗೆ ಬಿದ್ದಿದ್ದಳು. ಯಾವಾಗ ಸೀನಿಯರ್ ಮೇಲೆ ಮೋಹ ಹೆಚ್ಚಾಯಿತೋ ಆಗಲೇ ಪತ್ನಿಯನ್ನು ಮುಗಿಸಲು ಪ್ಲಾನ್ ಮಾಡಿದ್ದಾನೆ ಅನ್ನೋದು ತನಿಖೆಯಿಂದ ತಿಳಿದುಬಂದಿದೆ.

ಮಾಡಿದ್ದೇನು..? ಪ್ರದೀಪ್ ತನ್ನ ಹೆಂಡತಿಯನ್ನ ಮುಗಿಸಲು ಸ್ನೇಹಿತನ ಸಹಾಯ ಪಡೆದಿದ್ದಾನೆ. ಸ್ನೇಹಿತ ರಾಜೇಂದ್ರ ಜೊತೆ ಮಾತುಕತೆ ನಡೆಸಿ 15 ಲಕ್ಷ ರೂಪಾಯಿಗೆ ಸೂಪಾರಿ ಕೊಟ್ಟಿದ್ದ ಎನ್ನಲಾಗಿದೆ. ಅಂತೆಯೇ ಚೈತಾಲಿಯನ್ನ ಮುಗಿಸಲು ಎರಡು ಬಾರಿ ಪ್ರಯತ್ನಿಸಿದ್ದಾರೆ. ಆದರೆ ಅದು ಫೇಲ್ ಆಗಿತ್ತು. ಮೂರನೇ ಬಾರಿಗೆ ಯಶಸ್ವಿಯಾಗಿದ್ದಾರೆ. ಭಾರವಾದ ವಸ್ತುವಿನಿಂದ ತಲೆಗೆ ಹೊಡೆದು ಆರು ತಿಂಗಳ ಗರ್ಭಿಣಿಯ ಜೀವ ತೆಗೆದಿದ್ದರು.

ಮುಂದೆ ಏನಾಯ್ತು..? ಆರೋಪಿಗಳಿಬ್ಬರು ಹಾಗೂ ಪ್ರದೀಪ್ ಸೇರಿ ಪ್ಲಾನ್ ಮಾಡಿದ್ದಾರೆ. ಪ್ಲಾನ್ ಪ್ರಕಾರವೇ ಆಕೆಯನ್ನು ಮುಗಿಸಿ, ಮೃತದೇಹವನ್ನು ಕೆಲ ಹೊತ್ತು ರಸ್ತೆಗೆ ತಂದು ಕಾಲ ಕಳೆದಿದ್ದಾರೆ. ಅದಾದ ನಂತರ ಆರೋಪಿ ಪ್ರದೀಪ್ ಪೊಲೀಸರಿಗೆ ಖುದ್ದು ಕರೆ ಮಾಡಿದ್ದಾನೆ. ಸೆಪ್ಟೆಂಬರ್ 7 ರಂದು ರಾತ್ರಿ 9.30ಕ್ಕೆ ಕರೆ ಮಾಡಿದ ಆತ, ಸರ್​ ರಸ್ತೆಯಲ್ಲಿ ಹೋಗುವಾಗ ಅಪಘಾತ ಆಗಿದೆ. ನನ್ನದೇ ಕಾರಿನಲ್ಲಿ ಹೋಗುವಾಗ ಅಪಘಾತ ಆಗಿದೆ. ಹೆಂಡತಿಗೆ ಗಂಭೀರ ಪೆಟ್ಟು ಬಿದ್ದಿದೆ. ನನಗೂ ಗಾಯವಾಗಿದೆ. ಪತ್ನಿ ಚೈತಾಲಿಯನ್ನು ಕಾಗವಾಡ ತಾಲೂಕು ಆಸ್ಪತ್ರೆಗೆ ದಾಖಲಿಸುತ್ತಿರೋದಾಗಿ ಹೇಳಿದ್ದಾನೆ. ವಿಷಯ ತಿಳಿದ ಪೊಲೀಸರು ತಕ್ಷಣವೇ ಕಾಗವಾಡ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಸಿಕ್ಕಿಬಿದ್ದಿದ್ದು ಹೇಗೆ..? ಪೊಲೀಸರು ಆಸ್ಪತ್ರೆಗೆ ಹೋದಾಗ ಚೈತ್ರಾಲಿ ಅನ್ನೋರು ಯಾರೂ ಇರಲಿಲ್ಲ. ಕೂಡಲೇ ಪೊಲೀಸರು ಪ್ರದೀಪ್​ಗೆ ಕರೆ ಮಾಡಿದ್ದಾರೆ. ಆಗ ಕಾಗವಾಡ ಬದಲು ಮಹಾರಾಷ್ಟ್ರದ ಮೀರಜ್‌‌ ಆಸ್ಪತ್ರೆಗೆ ಚೈತ್ರಾಣಿ ‌ಕರೆತಂದಿರುವುದಾಗಿ ಪೊಲೀಸರಿಗೆ ಪ್ರದೀಪ್ ಮಾಹಿತಿ ನೀಡಿದ್ದಾನೆ. ತಕ್ಷಣವೇ ‌ಪ್ರದೀಪ್ ನಿವಾಸಕ್ಕೆ ಕಾಗವಾಡ ಪೊಲೀಸರು ಭೇಟಿ ನೀಡಿದ್ದಾರೆ. ಆಗ ಪ್ರದೀಪ್ ನಿವಾಸದ ಎದುರು ಕಾರು ನಿಂತಿತ್ತು. ಇದರಿಂದ ಪ್ರದೀಪ್ ನಡೆ ಮೇಲೆ ಪೊಲೀಸರಿಗೆ ಅನುಮಾನ ಬಂದಿದೆ. ಇದರ ನಡುವೆ ಪ್ರದೀಪ್ ಮೀರಜ್ ಪೊಲೀಸರನ್ನ ಭೇಟಿಯಾಗಿ, ಪತ್ನಿ ಅಪಘಾತದಿಂದ ಮೃತರಾಗಿದ್ದು ದೂರು ದಾಖಲಿಸಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾನೆ. ಆಗ ಮೀರಜ್ ಪೊಲೀಸರು ‌ಕಾಗವಾಡ ಠಾಣೆಯ ‌ಪೊಲೀಸರನ್ನ ಸಂಪರ್ಕಿಸುತ್ತಾರೆ. ಆಗ ನಾವು ಮೀರಜ್‌ಗೆ ಬರ್ತಿದ್ದೇವೆ, ಯಾವುದೇ ‌ದೂರು ದಾಖಲಿಸಿಕೊಳ್ಳದಂತೆ ಮನವಿ ಮಾಡುತ್ತಾರೆ.

ಮೀರಜ್‌ಗೆ ಬರುತ್ತಿದ್ದಂತೆಯೇ ಪೊಲೀಸರು ಪ್ರದೀಪ್​ನ ವಿಚಾರಣೆಗೆ ಒಳಪಡಿಸುತ್ತಾರೆ. ಆಗ ಪ್ರದೀಪ್​​ಗೆ ಅಪಘಾತದಿಂದ ಯಾವುದೇ ಗಾಯ ಆಗದಿರೋದು ಗೊತ್ತಾಗಿದೆ. ಚೈತಾಲಿ ‌ಮೃತದೇಹ ನೋಡಿದ ಪೊಲೀಸರು ಇದು ಅಪಘಾತವಲ್ಲ, ಕೊ*ಲೆ ಎಂಬುದನ್ನ ಮೇಲ್ನೋಟಕ್ಕೆ ಪತ್ತೆಹಚ್ಚಿಕೊಳ್ತಾರೆ. ತಕ್ಷಣವೇ ಪ್ರದೀಪ್​ನನ್ನ ‌ತೀವ್ರ ವಿಚಾರಣೆ ಮಾಡಿದಾಗ ಕೊ*ಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಮಾತ್ರವಲ್ಲ, ಸ್ಥಳ ಮಹಜರು ವೇಳೆ ಪ್ರಕರಣಕ್ಕೆ ಸಾಥ್ ನೀಡಿದವರ ಹೆಸರನ್ನೂ ಹೇಳಿದ್ದಾನೆ. ಪ್ರಕರಣದಲ್ಲಿ ಐವರು ಆರೋಪಿಗಳು ಬಾಗಿಯಾಗಿರುವ ಶಂಕೆಯಿದ್ದ, ಮೂವರ ಬಂಧನವಾಗಿದೆ. ಮತ್ತಿಬ್ಬರ ಬಂಧನಕ್ಕೆ ಬಲೆ ಬೀಸಿದ್ದಾರೆ.

The post 15 ಲಕ್ಷಕ್ಕೆ ಸುಪಾರಿ ಕೊಟ್ಟು ಗರ್ಭಿಣಿ ಪತ್ನಿಯನ್ನೇ ಮುಗಿಸಿದ; ಸೀನಿಯರ್ ಮೇಲೆ ಮೋಹ.. ಪತ್ನಿಗೆ ಚಟ್ಟ! appeared first on Good News 24x7.

]]>
ಕರೆಂಟ್ ಟವರ್ ಏರಿ ಹೈಡ್ರಾಮಾ: ಪತ್ನಿಯ ತಂಗಿ ಜೊತೆ ಮದುವೆ ಮಾಡಲು ಒತ್ತಾಯಿಸಿದ ವ್ಯಕ್ತಿ. https://www.goodnews24x7.com/current-tower-climber-man-forced-to-marry-wifes-sister/ Sat, 30 Aug 2025 07:54:00 +0000 https://www.goodnews24x7.com/?p=7009 ಕನೌಜ್:ವಿಚಿತ್ರ ಘಟನೆ ಕನೌಜ್‌ನಿಂದ ವರದಿಯಾಗಿದೆ, ರಾಜ್ ಸಕ್ಸೇನಾ ಎಂಬ ವ್ಯಕ್ತಿ ಕರೆಂಟ್ ಟವರ್ ಏರಿ ಆತ್ಮಹತ್ಯೆಗೆ ಬೆದರಿಕೆ ಹಾಕಿದ್ದಾನೆ. ಕಾರಣ – ಪತ್ನಿಯ ಇನ್ನೊಬ್ಬ ತಂಗಿಯನ್ನು ಮದುವೆ ಮಾಡಿಕೊಳ್ಳಬೇಕು ಎಂಬ ಅವನ ಬೇಡಿಕೆ. ಘಟನೆ ಹೀಗಿದೆ: 2021ರಲ್ಲಿ ರಾಜ್ ಸಕ್ಸೇನಾ ತನ್ನ…

The post ಕರೆಂಟ್ ಟವರ್ ಏರಿ ಹೈಡ್ರಾಮಾ: ಪತ್ನಿಯ ತಂಗಿ ಜೊತೆ ಮದುವೆ ಮಾಡಲು ಒತ್ತಾಯಿಸಿದ ವ್ಯಕ್ತಿ. appeared first on Good News 24x7.

]]>

ಕನೌಜ್:ವಿಚಿತ್ರ ಘಟನೆ ಕನೌಜ್‌ನಿಂದ ವರದಿಯಾಗಿದೆ, ರಾಜ್ ಸಕ್ಸೇನಾ ಎಂಬ ವ್ಯಕ್ತಿ ಕರೆಂಟ್ ಟವರ್ ಏರಿ ಆತ್ಮಹತ್ಯೆಗೆ ಬೆದರಿಕೆ ಹಾಕಿದ್ದಾನೆ. ಕಾರಣ – ಪತ್ನಿಯ ಇನ್ನೊಬ್ಬ ತಂಗಿಯನ್ನು ಮದುವೆ ಮಾಡಿಕೊಳ್ಳಬೇಕು ಎಂಬ ಅವನ ಬೇಡಿಕೆ.

ಘಟನೆ ಹೀಗಿದೆ: 2021ರಲ್ಲಿ ರಾಜ್ ಸಕ್ಸೇನಾ ತನ್ನ ಮೊದಲ ಪತ್ನಿಯನ್ನು ಮದುವೆಯಾಗಿದ್ದ. ಆದರೆ ಮದುವೆಯಾಗಿ ಒಂದು ವರ್ಷವಲ್ಲದೆ ಆಕೆ ಅನಾರೋಗ್ಯದಿಂದ ಸಾವನ್ನಪ್ಪಿದಳು. ಪತ್ನಿಯ ನಿಧನದ ನಂತರ, ಅವನು ಆಕೆಯ ತಂಗಿಯ ಜೊತೆ ಮದುವೆಯಾಗಿದನು. ಈ ದಂಪತಿಗೆ ಈಗ ಎರಡು ವರ್ಷ.

ಆದರೆ ಇತ್ತೀಚೆಗೆ ರಾಜ್ ತನ್ನ ಮುದ್ದಾದ ಪತ್ನಿಯ ಮತ್ತೊಬ್ಬ ತಂಗಿಯನ್ನು ಮದುವೆಯಾಗಬೇಕು ಎಂದು ಹೇಳಿದ್ದು, ಮನೆಯವರ ವಿರೋಧ ಎದುರಾಗಿದೆ. ಈ ಬೇಡಿಕೆಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ರಾಜ್ ಗುರುವಾರ ಬೆಳಿಗ್ಗೆ ಒಂದು ಕರೆಂಟ್ ಟವರ್ ಏರಿ ಆತ್ಮಹತ್ಯೆಗೆ ಧಮಕಿ ನೀಡಿದ್ದಾನೆ.

‘ನಾದಿನಿಯನ್ನು ಮದುವೆ ಮಾಡಿಸುತ್ತೀರಾ ಇಲ್ಲವೇ ನಾನು ಜಂಪ್ ಮಾಡ್ತೀನಿ’ ಎಂದು ಬೆದರಿಕೆ:

ಬಾಲಿವುಡ್ ಶೋಲೆ ಸಿನಿಮಾ ಶೈಲಿಯಲ್ಲಿ ರಾಜ್ ಟವರ್ ಮೇಲಿಂದಲೇ ಬೊಬ್ಬೆ ಹಾಕುತ್ತಾ “ನಾದಿನಿಯನ್ನು ನನ್ನಿಗೆ ಮದುವೆ ಮಾಡಿಸಿ” ಎಂದು ಕೂಗಿದ್ದಾನೆ. ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸತತ 7 ಗಂಟೆಗಳ ಸಾಹಸ ನಂತರ ಅವನನ್ನು ಟವರ್‌ನಿಂದ ಕೆಳಗೆ ಇಳಿಸಲು ಯಶಸ್ವಿಯಾದರು. ಕೊನೆಗೆ ನಾದಿನಿಯೊಂದಿಗೆ ಮದುವೆ ಮಾಡಿಸುತ್ತೇವೆ ಎಂಬ ಭರವಸೆ ನೀಡಿದ ನಂತರ ಮಾತ್ರ ಆತ ಕೆಳಗಿಳಿದ.

ಪ್ರೀತಿಯ ನಾಟಕವೇ ಪಕ್ಕಾ ಸಾಂಡಲ್‌ವುಡ್ ಸೀನ್!

ಟವರ್ ಮೇಲಿನ ಈ ಹೈಡ್ರಾಮಾ ಸ್ಥಳೀಯ ಜನರ ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿಯಲ್ಪಟ್ಟಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ರಾಜ್ ಸಕ್ಸೇನಾ ತನ್ನ ಮೇಲಿಂದಲೇ ನಾದಿನಿಯೂ ಅವನನ್ನು ಪ್ರೀತಿಸುತ್ತಿದ್ದಾಳೆ ಎಂದು ಹೇಳಿದ್ದಾನೆ.

The post ಕರೆಂಟ್ ಟವರ್ ಏರಿ ಹೈಡ್ರಾಮಾ: ಪತ್ನಿಯ ತಂಗಿ ಜೊತೆ ಮದುವೆ ಮಾಡಲು ಒತ್ತಾಯಿಸಿದ ವ್ಯಕ್ತಿ. appeared first on Good News 24x7.

]]>