Wildlife Archives - Good News 24x7 https://www.goodnews24x7.com/tag/wildlife/ Kannada Wed, 13 Aug 2025 06:27:31 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg Wildlife Archives - Good News 24x7 https://www.goodnews24x7.com/tag/wildlife/ 32 32 ಮತ್ತೆರಡು ಹುಲಿ ಮರಿಗಳು ಅಸಹಜವಾಗಿ ಸಾವು! ಕಾವೇರಿ ವನ್ಯಜೀವಿಧಾಮದಲ್ಲಿ ಘಟನೆ. https://www.goodnews24x7.com/two-more-tiger-cubs-die-unnaturally-incident-in-cauvery-wildlife-sanctuary/ Wed, 13 Aug 2025 06:27:31 +0000 https://www.goodnews24x7.com/?p=5986 ಚಾಮರಾಜನಗರ ಜಿಲ್ಲೆಯಲ್ಲಿ ಮತ್ತೆರಡು ಹುಲಿ ಮರಿಗಳು ಅಸಹಜವಾಗಿ ಪ್ರಾಣ ಕಳೆದುಕೊಂಡ ಪ್ರಕರಣ ಬೆಳಕಿಗೆ ಬಂದಿದೆ. ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಹನೂರು ವಲಯದ ಶಾಗ್ಯ ಶಾಖೆಯ ಹೊಳೆಮುರಿದಟ್ಟಿ ಗಸ್ತಿನ ಕಿರುಬನಕಲ್ಲು ಎಂಬ ಅರಣ್ಯ ಪ್ರದೇಶದಲ್ಲಿ ಎರಡು ಹುಲಿ ಮರಿಗಳ ಕಳೇಬರ ಪತ್ತೆಯಾಗಿವೆ. ಚಾಮರಾಜನಗರ…

The post ಮತ್ತೆರಡು ಹುಲಿ ಮರಿಗಳು ಅಸಹಜವಾಗಿ ಸಾವು! ಕಾವೇರಿ ವನ್ಯಜೀವಿಧಾಮದಲ್ಲಿ ಘಟನೆ. appeared first on Good News 24x7.

]]>

ಚಾಮರಾಜನಗರ ಜಿಲ್ಲೆಯಲ್ಲಿ ಮತ್ತೆರಡು ಹುಲಿ ಮರಿಗಳು ಅಸಹಜವಾಗಿ ಪ್ರಾಣ ಕಳೆದುಕೊಂಡ ಪ್ರಕರಣ ಬೆಳಕಿಗೆ ಬಂದಿದೆ. ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಹನೂರು ವಲಯದ ಶಾಗ್ಯ ಶಾಖೆಯ ಹೊಳೆಮುರಿದಟ್ಟಿ ಗಸ್ತಿನ ಕಿರುಬನಕಲ್ಲು ಎಂಬ ಅರಣ್ಯ ಪ್ರದೇಶದಲ್ಲಿ ಎರಡು ಹುಲಿ ಮರಿಗಳ ಕಳೇಬರ ಪತ್ತೆಯಾಗಿವೆ. ಚಾಮರಾಜನಗರ ಜಿಲ್ಲೆಯಲ್ಲಿ ಮತ್ತೆರಡು ಹುಲಿ ಮರಿಗಳು ಅಸಹಜವಾಗಿ ಪ್ರಾಣ ಕಳೆದುಕೊಂಡ ಪ್ರಕರಣ ಬೆಳಕಿಗೆ ಬಂದಿದೆ. ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಹನೂರು ವಲಯದ ಶಾಗ್ಯ ಶಾಖೆಯ ಹೊಳೆಮುರಿದಟ್ಟಿ ಗಸ್ತಿನ ಕಿರುಬನಕಲ್ಲು ಎಂಬ ಅರಣ್ಯ ಪ್ರದೇಶದಲ್ಲಿ ಎರಡು ಹುಲಿ ಮರಿಗಳ ಕಳೇಬರ ಪತ್ತೆಯಾಗಿವೆ.

ಅರಣ್ಯ ರಕ್ಷಣಾ ಸಿಬ್ಬಂದಿ ನಿನ್ನೆ ಗಸ್ತು ತಿರುಗುವಾಗ ಒಂದು ಹುಲಿ ಮರಿಯ ಕಳೇಬರ ಪತ್ತೆ ಆಗಿದೆ. ಕೂಡಲೇ ಎಚ್ಚೆತ್ತುಕೊಂಡ ಸಿಬ್ಬಂದಿ ಆ ಪ್ರದೇಶದ ಸುತ್ತಮುತ್ತ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಹುಲಿ ಮರಿಯು ಮೃತಪಟ್ಟ ಸಮೀಪ ಇರುವ ಕಲ್ಲು ಬಂಡೆಯ ಗುಹೆಯೊಳಗೆ ಮತ್ತೊಂದು ಹುಲಿ ಮರಿಯು ಮೃತಪಟ್ಟಿರೋದು ಪತ್ತೆಯಾಗಿದೆ.

NTCA ಸದಸ್ಯರನ್ನೊಳಗೊಂಡ ತಂಡದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಮೃತ ಹುಲಿ ಮರಿಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮರಣೋತ್ತರ ಪರೀಕ್ಷಾ ಪ್ರಕ್ರಿಯೆಯಲ್ಲಿ ಸದರಿ ಎರಡೂ ಹುಲಿ ಮರಿಗಳು ಸುಮಾರು 8 ರಿಂದ 10 ದಿನಗಳ ಮರಿಗಳಾಗಿರೋದು ಗೊತ್ತಾಗಿದೆ.

ತನಿಖೆ ನಡೀತಿದೆ :
ಮೃತ ಹುಲಿ ಮರಿಗಳು ತಾಯಿ ಹುಲಿಯಿಂದ ಬೇರ್ಪಟ್ಟು ಹಸಿವಿನಿಂದ ನಿತ್ರಾಣಗೊಂಡು ಮೃತಪಟ್ಟಿರುತ್ತದೆ ಎಂದು ಪಶು ವೈದ್ಯರು ಸ್ಥಳದಲ್ಲಿಯೇ ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ. ಹಾಗೂ ಮೃತ ಹುಲಿ ಮರಿಗಳ ಸಾವಿನ ನಿಖರ ಮಾಹಿತಿಗಾಗಿ ಮೃತ ಹುಲಿ ಮರಿಗಳ ದೇಹದಿಂದ ಕೆಲವು ಮಾದರಿ ತುಣುಕುಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿರುತ್ತದೆ. ಮರಣೋತ್ತರ ಪರೀಕ್ಷೆಯ ನಂತರ, ಎನ್.ಟಿ.ಸಿ.ಎ ಸದಸ್ಯರನ್ನೊಳಗೊಂಡ ತಂಡದವರ ಸಮ್ಮುಖದಲ್ಲಿ ಹುಲಿ ಮರಿಗಳ ಮೃತ ದೇಹವನ್ನು ಬೆಂಕಿಯಿಂದ ಸುಡಲಾಗಿರುತ್ತದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

The post ಮತ್ತೆರಡು ಹುಲಿ ಮರಿಗಳು ಅಸಹಜವಾಗಿ ಸಾವು! ಕಾವೇರಿ ವನ್ಯಜೀವಿಧಾಮದಲ್ಲಿ ಘಟನೆ. appeared first on Good News 24x7.

]]>
ಮಲೆಮಹದೇಶ್ವರ ವನ್ಯಧಾಮದಲ್ಲಿ ಐದು ಹುಲಿಗಳ ಸಾ*ವಿನ ಹಿಂದಿನ ಕಾರಣ ಅನಾವರಣ ; ಇಬ್ಬರು ಆರೋಪಿಗಳ ಬಂಧಿನ! https://www.goodnews24x7.com/reason-behind-death-of-five-tigers-in-male-mahadeshwar-wildlife-sanctuary-revealed-two-accused-arrested/ Sat, 28 Jun 2025 05:44:54 +0000 https://www.goodnews24x7.com/?p=4739 ಚಾಮರಾಜನಗರ : ‘ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ವಲಯದಲ್ಲಿ ಐದು ಹುಲಿಗಳಅಸಹಜ ಸಾವಿಗೆ ವಿಷಪ್ರಾಶನವೇ ಕಾರಣವೆಂದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ’ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಸ್ಪಷ್ಟಪಡಿಸಿದರು. ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು. ‘ಸಾವಿನ ತನಿಖೆಗೆ…

The post ಮಲೆಮಹದೇಶ್ವರ ವನ್ಯಧಾಮದಲ್ಲಿ ಐದು ಹುಲಿಗಳ ಸಾ*ವಿನ ಹಿಂದಿನ ಕಾರಣ ಅನಾವರಣ ; ಇಬ್ಬರು ಆರೋಪಿಗಳ ಬಂಧಿನ! appeared first on Good News 24x7.

]]>

ಚಾಮರಾಜನಗರ : ‘ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ವಲಯದಲ್ಲಿ ಐದು ಹುಲಿಗಳಅಸಹಜ ಸಾವಿಗೆ ವಿಷಪ್ರಾಶನವೇ ಕಾರಣವೆಂದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ’ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಸ್ಪಷ್ಟಪಡಿಸಿದರು.
ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು. ‘ಸಾವಿನ ತನಿಖೆಗೆ ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ. ವರದಿಯನ್ನು ಆಧರಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿಯ ನಿರ್ಲಕ್ಷ್ಯದ ಬಗ್ಗೆಯೂ ತನಿಖೆಗೆ ಸೂಚಿಸಲಾಗಿದ್ದು. ಅವರ ವಿರುದ್ಧವೂ ಶಿಸ್ತು ಕ್ರಮವನ್ನು ಜರುಗಿಸಲಾಗುವುದು’ ಎಂದರು.   ‘ವಿಷಪೂರಿತ ಜಾನುವಾರು ಕಳೇಬರವನ್ನು ತಿಂದು ಹುಲಿಗಳು ಸತ್ತಿವೆ. ಹುಲಿಗಳ ಹಾಗೂ ಹಸುವಿನ ಅಂಗಾಂಗಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದು ಚಾಮರಾಜನಗರ ವೃತ್ತ CCF ಟಿ.ಹೀರಾಲಾಲ್ ಮಾಹಿತಿ ನೀಡಿದರು.


ರಾಷ್ಟ್ರೀಯ ವನ್ಯಪ್ರಾಣಿ ಹುಲಿಗಳ ಕಗ್ಗೊಲೆ ನಡೆದಿರುವ ಸ್ಥಳ ಚಾಮರಾಜ ನಗರ ಜಿಲ್ಲೆಯಲ್ಲಿದೆ. ನಿರ್ದಿಷ್ಟವಾಗಿ ಹನೂರು ತಾಲ್ಲೂಕು ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಹೂಗ್ರಂ ವಲಯದ ಮೀಣ್ಯಂ ಉಪ ವಲಯದಲ್ಲಿ ನಡೆದಿದೆ
ಕಾಡಿನಲ್ಲಿ ತಮ್ಮ ಪಾಡಿಗೆ ಸಂಚರಿಸುತ್ತಿದ್ದ ತಾಯಿ ಹುಲಿ, ಐದು ಮರಿ ಹುಲಿಗಳ ಸಾವಿಗೆ ಕಾರಣಗಳೇನು. ಎಂಬುದನ್ನು ನಿಖರವಾಗಿ ತಿಳಿಯಲು ಪರಿಸರ ವನ್ಯಜೀವಿ ವಲಯದ ಸಂರಕ್ಷಣೆಗಾಗಿ ಕೆಲಸ ಮಾಡುತ್ತಿರುವ ವ್ಯಕ್ತಿಗಳು ತೊಡಗಿದ್ದಾರೆ. ಮುಖ್ಯವಾಗಿ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ವನ್ಯಜೀವನ ತಜ್ಞರಾದ ಜೋಸೆಫ್ ಹೂವ‌ರ್, ವಿನೋದ್ ಕುಮಾರ್ ಬಿ. ನಾಯಕ್ ತಾವು ಸಂಗ್ರಹಿಸಿದ ಮಾಹಿತಿ ಹಂಚಿ ಕೊಂಡಿದ್ದಾರೆ.

“ಈ ಘಟನೆಯಲ್ಲಿ ಸ್ಥಳೀಯ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿ ಸಹ ತೀವ್ರವಾಗಿದೆ. ಕಾಡಂಚಿನ ಗ್ರಾಮಗಳಲ್ಲಿ ಯಾವುದೇ ರೀತಿಯ ಜನಜಾಗೃತಿ ಕೆಲಸವನ್ನು ಅರಣ್ಯ ಸಿಬ್ಬಂದಿ ಮಾಡಿಲ್ಲ. ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಅರಣ್ಯ- ವನ್ಯಜೀವಿ ಸಂರಕ್ಷಣೆ ಸಾಧ್ಯವೇ ಇಲ್ಲ ವಿಷ ಪ್ರಾಶನದಿಂದ ಮೃತಪಟ್ಟ 5 ಹುಲಿಗಳು ನಮ್ಮ ಅರಣ್ಯ ಇಲಾಖೆಗೆ ಕಾಡಂಚಿನ ಜನರಿಗೆ ಮತ್ತು ನಮ್ಮನ್ನು ಆಳುವ ಜನಪ್ರತಿನಿಧಿಗಳಿಗೆ ಯಾವ ಪಾಠ ಕಳಿಸಿ ಹೋಗಿವೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ’ ಎಂದು ಹೇಳುತ್ತಾರೆ.

ಹುಲಿ ಸಂರಕ್ಷಣೆ ಯೋಜನೆ ಜಾರಿಯಾದ ನಂತರ ಹುಲಿಗಳನ್ನು ಕೊಂದ ದುರ್ಘಟನೆಗಳಿವೆ. ಆದರೆ ಏಕಕಾಲದಲ್ಲಿ ಒಂದು ತಾಯಿ ಹುಲಿ ಮತ್ತು ಐದು ಮರಿ ಹುಲಿಗಳನ್ನು ಕೊಂದ ನಿದರ್ಶನಗಳಿಲ್ಲ. ಇದೇ ಮೊದಲಬಾರಿಗೆ ಇಂಥ ದುರಂತ ನಡೆದಿದೆ. ಹುಲಿಗಳು ಸತ್ತು ಬಿದ್ದಿದ್ದ ಸ್ಥಳದಿಂದ 150 ಅಡಿ ದೂರದಲ್ಲಿ ಜಾನುವಾರು ಕಳೇಬರವಿದೆ. ಇದಕ್ಕೆ ದುಷ್ಕರ್ಮಿಗಳು ವಿಷ ಸಿಂಪಡಿಸಿದ್ದು ಅದರ ಮಾಂಸವನ್ನು ಹುಲಿಗಳು ತಿಂದ ಕಾರಣ ಸಾವನ್ನಪಿರುವ ಶಂಕೆ ಇದೆ. ನಿಯಮಾವಳಿಯಂತೆ ಮರಣೋತ್ತರ ಪರೀಕ್ಷೆ ನಡೆದಿದೆ. ಅದರ ವರದಿ ಬರಬೇಕಾಗಿದೆ. ಮೇಲ್ನೋಟಕ್ಕೆ ವಿಷ ಪ್ರಾಶನದಿಂದಲೇ ಹುಲಿಗಳು ಸತ್ತಿರಬಹುದು ಎಂದು ತಿಳಿಯುತ್ತದೆ.


ಮಲೆಮಹದೇಶ್ವರ ವನ್ಯಧಾಮದಲ್ಲಿ ಐದು ಹುಲಿಗಳ ಸಾವಿಗೆ ವಿಷಪ್ರಾಶನವೇ ಕಾರಣ ಅನ್ನೋದು ಖಚಿತವಾಗಿತ್ತು. ಆದರೆ ವಿಷವಿಟ್ಟವರು ಯಾರು ಅನ್ನೋದು ಗೊತ್ತಾಗಿರಲಿಲ್ಲ. ಇದೀಗ ಅದು ಕೂಡ ಬಯಲಾಗಿದೆ. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮತ್ತು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ. ಮಾದ ಅಲಿಯಾಸ್ ಮಾದುರಾಜು ಹಾಗೂ ನಾಗರಾಜ್ ಬಂಧಿತರು. ಸದ್ಯ ಪೊಲೀಸರು ಮತ್ತು ಅರಣ್ಯ ಸಿಬ್ಬಂದಿಗಳಿಂದ ವಿಚಾರಣೆ ನಡಲಾಗುತ್ತಿದೆ.

The post ಮಲೆಮಹದೇಶ್ವರ ವನ್ಯಧಾಮದಲ್ಲಿ ಐದು ಹುಲಿಗಳ ಸಾ*ವಿನ ಹಿಂದಿನ ಕಾರಣ ಅನಾವರಣ ; ಇಬ್ಬರು ಆರೋಪಿಗಳ ಬಂಧಿನ! appeared first on Good News 24x7.

]]>
253 ಪ್ರಭೇದದ ಪಕ್ಷಿಗಳು, ಮಲೆಮಹದೇಶ್ವರ ವನ್ಯಜೀವಿ ಧಾಮದಲ್ಲಿ ಪತ್ತೆ. https://www.goodnews24x7.com/253-%e0%b2%aa%e0%b3%8d%e0%b2%b0%e0%b2%ad%e0%b3%87%e0%b2%a6%e0%b2%a6-%e0%b2%aa%e0%b2%95%e0%b3%8d%e0%b2%b7%e0%b2%bf%e0%b2%97%e0%b2%b3%e0%b3%81-%e0%b2%ae%e0%b2%b2%e0%b3%86%e0%b2%ae%e0%b2%b9%e0%b2%a6/ Mon, 03 Feb 2025 05:17:54 +0000 https://www.goodnews24x7.com/?p=2167 ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ವ್ಯಾಪ್ತಿಗೊಳಪಡುವ ಮಲೆ ಮಹ ದೇಶ್ವರ ವನ್ಯಜೀವಿ ಧಾಮದಲ್ಲಿ ಎರಡು ದಿನಗಳ ಕಾಲ ನಡೆದ ಪಕ್ಷಿಗಳ ಗಣತಿ ಕಾರ್ಯದಲ್ಲಿ 253 ಪ್ರಭೇದದ ಪಕ್ಷಿಗಳು ಪತ್ತೆಯಾಗಿವೆ. ಹನೂರು ಹಾಗೂ ಕೊಳ್ಳೇಗಾಲ ತಾಲೂಕು ಸೇರಿದಂತೆ ಮಲೆ ಮಹದೇಶ್ವರ ವನ್ಯಜೀವಿ…

The post 253 ಪ್ರಭೇದದ ಪಕ್ಷಿಗಳು, ಮಲೆಮಹದೇಶ್ವರ ವನ್ಯಜೀವಿ ಧಾಮದಲ್ಲಿ ಪತ್ತೆ. appeared first on Good News 24x7.

]]>

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ವ್ಯಾಪ್ತಿಗೊಳಪಡುವ ಮಲೆ ಮಹ ದೇಶ್ವರ ವನ್ಯಜೀವಿ ಧಾಮದಲ್ಲಿ ಎರಡು ದಿನಗಳ ಕಾಲ ನಡೆದ ಪಕ್ಷಿಗಳ ಗಣತಿ ಕಾರ್ಯದಲ್ಲಿ 253 ಪ್ರಭೇದದ ಪಕ್ಷಿಗಳು ಪತ್ತೆಯಾಗಿವೆ.
ಹನೂರು ಹಾಗೂ ಕೊಳ್ಳೇಗಾಲ ತಾಲೂಕು ಸೇರಿದಂತೆ ಮಲೆ ಮಹದೇಶ್ವರ ವನ್ಯಜೀವಿ ಧಾಮದಲ್ಲಿ 7 ಅರಣ್ಯ ವಲಯಗಳಿವೆ ಒಟ್ಟು 949.469 ಚದರ ಕಿ.ಮೀ.ನಷ್ಟು ಅರಣ್ಯ ಪ್ರದೇಶವನ್ನು ಹೊಂದಿದೆ. ಈ ವನ್ಯಧಾಮವು ಬೆಟ್ಟಗುಡ್ಡ ಪ್ರದೇಶದಿಂದ ಕೂಡಿದೆ. ಈ
ವಿಭಾಗದಲ್ಲಿ ಅರೆ ಹರಿದ್ವರ್ಣ, ಶುಷ್ಕ ಅರಣ್ಯ, ಒಣ ಶುಷ್ಕ ಅರಣ್ಯ, ಕುರುಚಲು ಕಾಡುಗಳನ್ನು ಕಾಣಬಹುದಾಗಿದೆ.

ವನ್ಯಧಾಮದಲ್ಲಿ ಪ್ರಮುಖವಾಗಿ ಆನೆ, ಹುಲಿ, ಚಿರತೆ, ಜಿಂಕೆ, ಕಡವೆ, ಕಾಡೆಮ್ಮೆ, ಕಾಡುಹಂದಿ, ಕರಡಿ, ನು, ಸೀಳುನಾಯಿ ಇತ್ಯಾದಿ ವನ್ಯ ಜೀವಿ ಗಳಿಗೆ ಆವಾಸಸ್ಥಾನವಾಗಿದ್ದು, ಪಕ್ಷಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಮೊದಲ ಬಾರಿಗೆ ಪಕ್ಷಿ ಗಣತಿ ನಡೆಸಲಾಯಿತು.
ಮಾಹಿತಿ ಸಂಗ್ರಹ: ಮೊದಲ ಬಾರಿಗೆ ನಡೆದ ಗಣತಿ ಕಾರ್ಯಕ್ಕೆ ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ಹೊರ ರಾಜ್ಯಗಳಿಂದ ಸುಮಾರು 500ಕ್ಕೂ ಹೆಚ್ಚಿ ಮಂದಿ ನೋಂದಣಿ ಮಾಡಿಸಿಕೊಂಡಿದ್ದರು. ಈ ಪೈಕಿ 120 ಮಂದಿ ಪರಿಣತರನ್ನು ಅರಣ್ಯ ಇಲಾಖೆ ಆಯ್ಕೆ ಮಾಡಿ, 4 ತಂಡಗಳಾಗಿ ವಿಂಗಡಿಸಲಾಗಿತ್ತು.

ವೈವಿಧ್ಯಮಯ ಆವಾಸಸ್ಥಾನಗಳನ್ನು ಒಳಗೊಂಡಿರುವ ಅರಣ್ಯದಲ್ಲಿ ಪ್ರತಿ ದಿನ ಒಂದೊಂದು ತಂಡ 3 ರಿಂದ 4 ಕಿಮೀ ಉದ್ದದ 40 ಟ್ರ್ಯಾಕ್ಗಳನ್ನು ಆಯ್ಕೆ ಮಾಡಿ ಕೊಂಡು ಸಮೀಕ್ಷೆ ಕಾರ್ಯ ನಡೆಸಲಾಯಿತು.
ಪ್ರತಿ ತಂಡವು ಒಂದು ಟ್ರ್ಯಾಕ್ನಲ್ಲಿ ಬಲಚಿತ್ರದಲ್ಲಿ ಪಕ್ಷಿ ಗಣತಿ ನಡೆಸಿದ ತಂಡ.
ಈ ಸಲ ಕಪ್​ ನಮ್ದೆ! RCB ಜೆರ್ಸಿಗೆ ಪುಣ್ಯ ಸ್ನಾನ!
ಪಕ್ಷಿ ವೀಕ್ಷಣೆ ನಡೆಸಿತು. ಪ್ರತಿ ಗುಂಪು ರಾತ್ರಿ ಪಕ್ಷಿ ವೀಕ್ಷಣೆಯೊಂದಿಗೆ ದಿನದ ಮೂರು ಪಾಳಯದಲ್ಲಿ ಪಕ್ಷಿ ವೀಕ್ಷಣೆ ನಡೆಸಿತು. ಪಕ್ಷಿ ಸಮೀಕ್ಷೆಯ ಕೊನೆಯಲ್ಲಿ, ಭಾಗವಹಿಸುವವರು ಸುಮಾರು 253 ಜಾತಿಯ ಪಕ್ಷಿಗಳನ್ನು ಗುರುತಿಸಿದರು.
ಬಿಳಿ ನೇಷ್ಮೆ ತುದಿ, ಬಿಳಿ ರಂಪ್ಟ್ ರಣಹದ್ದು, ನೀಲಗಿರಿ ಮರದ ಪಾರಿವಾಳ, ಕ್ರೆಸ್ಟೆಡ್ ಸರ್ಪೆಂಟ್ ಹದ್ದು ಮುಂತಾದ ಅಪರೂಪದ ಪ್ರಭೇದದ ಪಕ್ಷಿಗಳು ಸಮೀಕ್ಷೆಯಲ್ಲಿ ಪತ್ತೆಯಾಯಿತು.

The post 253 ಪ್ರಭೇದದ ಪಕ್ಷಿಗಳು, ಮಲೆಮಹದೇಶ್ವರ ವನ್ಯಜೀವಿ ಧಾಮದಲ್ಲಿ ಪತ್ತೆ. appeared first on Good News 24x7.

]]>