YellowLine Archives - Good News 24x7 https://www.goodnews24x7.com/tag/yellowline/ Kannada Sun, 17 Aug 2025 12:49:21 +0000 en-US hourly 1 https://wordpress.org/?v=7.1 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg YellowLine Archives - Good News 24x7 https://www.goodnews24x7.com/tag/yellowline/ 32 32 ಹಳದಿ ಮಾರ್ಗದ ಮೆಟ್ರೋ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರುವಾಗಲಿದೆ https://www.goodnews24x7.com/%e0%b2%b9%e0%b2%b3%e0%b2%a6%e0%b2%bf-%e0%b2%ae%e0%b2%be%e0%b2%b0%e0%b3%8d%e0%b2%97%e0%b2%a6-%e0%b2%ae%e0%b3%86%e0%b2%9f%e0%b3%8d%e0%b2%b0%e0%b3%8b-%e0%b2%b8%e0%b3%8b%e0%b2%ae%e0%b2%b5%e0%b2%be/ Sun, 17 Aug 2025 12:48:25 +0000 https://www.goodnews24x7.com/?p=6298 ಸ್ವಾತಂತ್ರ್ಯ ದಿನ ರಜೆ, ವಾರಾಂತ್ಯ ಹಿನ್ನೆಲೆಯಲ್ಲಿ ಊರು, ಪ್ರವಾಸಕ್ಕೆ ತೆರಳಿದ ಜನರು ಸೋಮವಾರ (ಆ.18) ಬೆಳಗ್ಗೆ ಬೆಂಗಳೂರಿಗೆ (Bengaluru) ಮರಳುತ್ತಾರೆ. ಇದರಿಂದ ಸಹಜವಾಗಿ ನಮ್ಮ ಮೆಟ್ರೋದಲ್ಲಿ (Namma Metro) ಪ್ರಯಾಣಿಕರ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ ನಮ್ಮ ಮೆಟ್ರೋ ಹಳದಿ ಮಾರ್ಗದ…

The post ಹಳದಿ ಮಾರ್ಗದ ಮೆಟ್ರೋ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರುವಾಗಲಿದೆ appeared first on Good News 24x7.

]]>

ಸ್ವಾತಂತ್ರ್ಯ ದಿನ ರಜೆ, ವಾರಾಂತ್ಯ ಹಿನ್ನೆಲೆಯಲ್ಲಿ ಊರು, ಪ್ರವಾಸಕ್ಕೆ ತೆರಳಿದ ಜನರು ಸೋಮವಾರ (ಆ.18) ಬೆಳಗ್ಗೆ ಬೆಂಗಳೂರಿಗೆ (Bengaluru) ಮರಳುತ್ತಾರೆ. ಇದರಿಂದ ಸಹಜವಾಗಿ ನಮ್ಮ ಮೆಟ್ರೋದಲ್ಲಿ (Namma Metro) ಪ್ರಯಾಣಿಕರ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ

ನಮ್ಮ ಮೆಟ್ರೋ ಹಳದಿ ಮಾರ್ಗದ ರೈಲುಗಳುಬೆಳಿಗ್ಗೆ 5:00 ಗಂಟೆಗೆ ಆರಂಭವಾಗಲಿವೆ. ಮೊದಲ ಮೆಟ್ರೋ ರೈಲು ಸೇವೆ ಆರ್.ವಿ ರಸ್ತೆಯಿಂದ ಡೆಲ್ಯಾ ಎಲೆಕ್ಟ್ರಾನಿಕ್ಸ್, ಬೊಮ್ಮಸಂದ್ರ ನಿಲ್ದಾಣಗಳಿಂದ ಹೊರಡಲಿದೆ. ಈ ವಿಶೇಷ ವ್ಯವಸ್ಥೆ ಕೇವಲ ಸೋಮವಾರಕ್ಕೆ ಮಾತ್ರ ಅನ್ವಯವಾಗುತ್ತದೆ. ಮರುದಿನ ಮಂಗಳವಾರ (ಆ.19) ದಿಂದ ಹಳದಿ ಮಾರ್ಗದ ಮೆಟ್ರೋ ಸೇವೆಗಳು ಎಂದಿನಂತೆ ಬೆಳಿಗ್ಗೆ 6:30 ರಿಂದ ಪ್ರಾರಂಭವಾಗಲಿವೆ.
ಹಿಸುತ್ತವೆ.

ಹಳದಿ ಮಾರ್ಗ ಎಲ್ಲಿಂದ ಎಲ್ಲಿಯವರೆಗೆ ಸಂಚಾರ
ಆರ್​ ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೂ ಸಂಪರ್ಕ ಕಲಿಸಲಾಗಿದ್ದು, ಒಟ್ಟು 19.15 ಕಿಲೋ ಮೀಟರ್ ಉದ್ದದ ಮಾರ್ಗವಾಗಿದೆ. ಬೆಂಗಳೂರಿನ ಐಟಿ ಹಬ್‌ ಎಲೆಕ್ಟ್ರಾನಿಕ್‌ ಸಿಟಿಯಿಂದ ಬೆಂಗಳೂರಿನ ಕೇಂದ್ರ ಭಾಗದ ನಡುವೆ ಸಂಪರ್ಕ ಕೊಂಡಿಯಾಗಿದೆ.

ಹಳದಿ ಮಾರ್ಗದಲ್ಲಿ ಒಟ್ಟು 16 ನಿಲ್ದಾಣಗಳಿವೆ. ಹಳದಿ ಮಾರ್ಗದ ರೈಲು 3 ಮೆಟ್ರೋ ಲೈನ್‌ಗೆ ಕೂಡುತ್ತದೆ. ಹಳದಿ ಮಾರ್ಗವು ಹಸಿರು ಮಾರ್ಗ, ಗುಲಾಬಿ, ನೀಲಿ ಮಾರ್ಗಕ್ಕೆಕ್ಕೆ ಕೂಡುತ್ತದೆ. ಜಯದೇವ ಆಸ್ಪತ್ರೆ ನಿಲ್ದಾಣವು ಅತಿ ಎತ್ತರ ಹಾಗೂ ದೊಡ್ಡ ಮೆಟ್ರೋ ನಿಲ್ದಾಣ ಎಂಬ ಖ್ಯಾತಿ ಪಡೆದಿದೆ.

ಇದನ್ನೂ ಓದಿ: ನಮ್ಮ ಮೆಟ್ರೋ ಹಳದಿ ಮಾರ್ಗದ ವಿಶೇಷತೆಗಳೇನು? ಇಲ್ಲಿದೆ ವಿವರ, ಫೋಟೋಸ್​ ನೋಡಿ

ನಮ್ಮ ಮೆಟ್ರೋ ಹಳದಿ ಮಾರ್ಗದ ನಿಲ್ದಾಣಗಳು: ಬೊಮ್ಮಸಂದ್ರ, ಹೆಬ್ಬಗೋಡಿ, ಹುಸ್ಕೂರ್ ರಸ್ತೆ, ಇನ್ಫೋಸಿಸ್‌ ಫೌಂಡೇಶನ್ ಕೋನಪ್ಪನ ಅಗ್ರಹಾರ, ಎಲೆಕ್ಟ್ರಾನಿಕ್‌ ಸಿಟಿ, ಬೆರತೇನ ಅಗ್ರಹಾರ, ಹೊಸ ರೋಡ್, ಸಿಂಗಸಂದ್ರ, ಕೂಡ್ಲು ಗೇಟ್, ಹೊಂಗಸಂದ್ರ, ಬೊಮ್ಮನಹಳ್ಳಿ, ಸೆಂಟ್ರಲ್ ಸಿಲ್ಕ್ ಬೋರ್ಡ್, ಬಿಟಿಎಂ ಲೇಔಟ್, ಜಯದೇವ ಆಸ್ಪತ್ರೆ, ರಾಗಿ ಗುಡ್ಡ ದೇವಸ್ಥಾನ, ಆರ್‌.ವಿ (ರಾಷ್ಟ್ರೀಯ ವಿದ್ಯಾಲಯ) ರಸ್ತೆ.

The post ಹಳದಿ ಮಾರ್ಗದ ಮೆಟ್ರೋ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರುವಾಗಲಿದೆ appeared first on Good News 24x7.

]]>
ನಮ್ಮ ಮೆಟ್ರೋ ‘ಹಳದಿ ಮಾರ್ಗ’ವನ್ನು ಲೋಕಾರ್ಪಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ. https://www.goodnews24x7.com/prime-minister-narendra-modi-inaugurated-namma-metro-yellow-line/ Sun, 10 Aug 2025 12:23:33 +0000 https://www.goodnews24x7.com/?p=5705 ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ನಮ್ಮ ಮೆಟ್ರೋ ಹಳದಿ ಮಾರ್ಗವನ್ನು ಆರ್.ವಿ.ರಸ್ತೆ (ರಾಗಿಗುಡ್ಡ) ನಿಲ್ದಾಣದಲ್ಲಿ ಉದ್ಘಾಟಿಸಿದರು. ನಮ್ಮ ಮೆಟ್ರೋ ಹಳದಿ ಮಾರ್ಗ 16 ನಿಲ್ದಾಣಗಳು ಹಾಗು 19 ಕಿ.ಮೀ ಉದ್ದ. ಸಿದ್ದರಾಮಯ್ಯ, ಡಿಕೆಶಿ ಜೊತೆ ಕುಳಿತು ಪ್ರಯಾಣಿಸಿದ ಮೋದಿ:…

The post ನಮ್ಮ ಮೆಟ್ರೋ ‘ಹಳದಿ ಮಾರ್ಗ’ವನ್ನು ಲೋಕಾರ್ಪಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ. appeared first on Good News 24x7.

]]>

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ನಮ್ಮ ಮೆಟ್ರೋ ಹಳದಿ ಮಾರ್ಗವನ್ನು ಆರ್.ವಿ.ರಸ್ತೆ (ರಾಗಿಗುಡ್ಡ) ನಿಲ್ದಾಣದಲ್ಲಿ ಉದ್ಘಾಟಿಸಿದರು. ನಮ್ಮ ಮೆಟ್ರೋ ಹಳದಿ ಮಾರ್ಗ 16 ನಿಲ್ದಾಣಗಳು ಹಾಗು 19 ಕಿ.ಮೀ ಉದ್ದ. ಸಿದ್ದರಾಮಯ್ಯ, ಡಿಕೆಶಿ ಜೊತೆ ಕುಳಿತು ಪ್ರಯಾಣಿಸಿದ ಮೋದಿ: ನಂತರ ಪ್ರಧಾನಿ ರಾಗಿಗುಡ್ಡದಿಂದ ಎಲೆಕ್ಟ್ರಾನಿಕ್ಸ್ ಸಿಟಿವರೆಗೆ ಪ್ರಯಾಣಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಧಾನಿ ಜೊತೆಗಿದ್ದರು. ಪ್ರಯಾಣದ ವೇಳೆ ಪ್ರಧಾನಿ ಮೋದಿ ವಿದ್ಯಾರ್ಥಿಗಳು, ಮೆಟ್ರೋ ಸಿಬ್ಬಂದಿ ಮತ್ತು ಯೋಜನೆಯನ್ನು ನಿರ್ಮಿಸಲು ಸಹಾಯ ಮಾಡಿದ ಕೆಲವು ಕಾರ್ಮಿಕರೊಂದಿಗೆ ಮಾತುಕತೆ ನಡೆಸಿದರು.

ಹಳದಿ ಮಾರ್ಗವು ಲಕ್ಷಾಂತರ ಪ್ರಯಾಣಿಕರ ದೈನಂದಿನ ಪ್ರಯಾಣವನ್ನು ಸುಗಮಗೊಳಿಸುವುದಲ್ಲದೇ, ಪ್ರಮುಖ ವ್ಯಾಪಾರ ಮತ್ತು ತಂತ್ರಜ್ಞಾನ ಕೇಂದ್ರಗಳಿಗೆ ಸಂಪರ್ಕ ಸಾಧಿಸುವ ಮೂಲಕ ನಗರದ ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡುತ್ತದೆ ಎಂದು ಮೋದಿ ಹೇಳಿದರು. ಬೆಂಗಳೂರಿನ ಸಾರ್ವಜನಿಕ ಸಾರಿಗೆಗೆ ಇದು ಒಂದು ಮೈಲಿಗಲ್ಲು ಮತ್ತು ನಗರದ ಸಂಚಾರ ಸಮಸ್ಯೆಗಳನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಹೆಜ್ಜೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

https://youtu.be/6RWsp9y3dQM?si=u3V1YFHJ-DceyjqZತಾಕತ್ತಿದ್ರೆ ಬೆಳಗಿನ ಜಾವ ಸಮಾಧಿ ಒಡಿಬೇಕಿತ್ತು? ದಾದಾನ ಸಮಾಧಿಗೆ 5 ಕುಂಟೆ ಜಾಗ ಕೊಡ್ತೀನಿ!

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ಮೆಟ್ರೋ ಹಳದಿ ಮಾರ್ಗಕ್ಕೆ ರಾಜ್ಯ ಸರ್ಕಾರ ಯೋಜನಾ ವೆಚ್ಚದ ಶೇ.80ರಿಂದ 90ರಷ್ಟು ಭರಿಸಿದೆ. ಕೇಂದ್ರದ ಕೊಡುಗೆ ತುಂಬಾ ಕಡಿಮೆ ಎಂದು ಹೇಳಿದರು. ಹಳದಿ ಮಾರ್ಗವು ರಾಗಿಗುಡ್ಡದಿಂದ ಬೊಮ್ಮಸಂದ್ರಕ್ಕೆ ಸಂಪರ್ಕಿಸುತ್ತದೆ. ಬಿಟಿಎಂ ಲೇಔಟ್, ಜಯದೇವ ಆಸ್ಪತ್ರೆ (ಪಿಂಕ್ ಲೈನ್‌ಗೆ ಇಂಟರ್‌ಚೇಂಜ್‌), ಸೆಂಟ್ರಲ್ ಸಿಲ್ಕ್ ಬೋರ್ಡ್ (ಮುಂಬರುವ ಬ್ಲೂ ಲೈನ್‌ಗೆ ಇಂಟರ್‌ಚೇಂಜ್) ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ಮಾರ್ಗವಾಗಿ ರೈಲು ಸಂಚರಿಸುತ್ತದೆ. ಈ ಕಾರಿಡಾರ್ ಪ್ರಮುಖ ವಸತಿ ಪ್ರದೇಶಗಳು, ಕೈಗಾರಿಕಾ ವಲಯಗಳು ಮತ್ತು ಐಟಿ ಕೇಂದ್ರಗಳನ್ನು ಸಂಪರ್ಕಿಸುತ್ತದೆ.

ನಮ್ಮ ಮೆಟ್ರೋದ 2ನೇ ಹಂತದ ಅಡಿ 7,600 ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾದ ಹಳದಿ ಮಾರ್ಗವು ಪ್ರತಿದಿನ ಸುಮಾರು ಎಂಟು ಲಕ್ಷ ಪ್ರಯಾಣಿಕರಿಗೆ ಸೇವೆ ನೀಡುವ ನಿರೀಕ್ಷೆಯಿದೆ. ಇದು ಹೊಸೂರು ರಸ್ತೆಯಲ್ಲಿ, ವಿಶೇಷವಾಗಿ ಸಿಲ್ಕ್ ಬೋರ್ಡ್ ಜಂಕ್ಷನ್ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿಯ ಸುತ್ತಲೂ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುತ್ತದೆ.

ಹಳದಿ ಮಾರ್ಗ ಉದ್ಘಾಟನೆಯಿಂದ ಬೆಂಗಳೂರಿನ ಮೆಟ್ರೋ ಜಾಲ 96 ಕಿ.ಮೀಗಿಂತ ಹೆಚ್ಚು ವಿಸ್ತರಿಸಿದೆ. ಇದು ದೇಶದ ಎರಡನೇ ಅತಿ ಉದ್ದದ ಮೆಟ್ರೋ ಜಾಲವಾಗಿದೆ. ನಾಳೆಯಿಂದ ಸಾರ್ವಜನಿಕರಿಗೆ ಲಭ್ಯ: ಹಳದಿ ಮಾರ್ಗದ ಸೇವೆಗಳು ನಾಳೆ ಅಂದರೆ ಸೋಮವಾರ ಬೆಳಿಗ್ಗೆಯಿಂದ ಸಾರ್ವಜನಿಕರಿಗೆ ಪ್ರಾರಂಭವಾಗಲಿದ್ದು, ಆರಂಭದಲ್ಲಿ ಪ್ರತಿ 25 ನಿಮಿಷಗಳಿಗೊಮ್ಮೆ ರೈಲುಗಳು ಚಲಿಸುತ್ತವೆ.

ನಮ್ಮ ಮೆಟ್ರೋ 3ನೇ ಹಂತಕ್ಕೆ ಶಂಕುಸ್ಥಾಪನೆ: ಇದೇ ಕಾರ್ಯಕ್ರಮದಲ್ಲೇ ಪ್ರಧಾನಿ ಮೋದಿ ಮೆಟ್ರೋ ಯೋಜನೆಯ 3ನೇ ಹಂತಕ್ಕೆ ಶಂಕುಸ್ಥಾಪನೆ ನೆರವೇರಿಸಿದರು, ಇದು ₹15,600 ಕೋಟಿಗೂ ಹೆಚ್ಚು ವೆಚ್ಚದಲ್ಲಿ 44 ಕಿ.ಮೀಟರ್‌ಗಳಿಗೂ ಹೆಚ್ಚು ಉದ್ದದ ಹೊಸ ಮಾರ್ಗಗಳು ಮತ್ತು 31 ನಿಲ್ದಾಣಗಳನ್ನು ಸೇರಿಸಲಿದೆ. ಈ ವಿಸ್ತರಣೆಯು ನಗರದ ನೈಋತ್ಯ ಮತ್ತು ಪಶ್ಚಿಮ ಭಾಗಗಳಲ್ಲಿನ ಸೇವೆಯಿಲ್ಲದ ಪ್ರದೇಶಗಳನ್ನು ಸಂಪರ್ಕಿಸುವತ್ತ ಗಮನಹರಿಸುತ್ತದೆ.

The post ನಮ್ಮ ಮೆಟ್ರೋ ‘ಹಳದಿ ಮಾರ್ಗ’ವನ್ನು ಲೋಕಾರ್ಪಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ. appeared first on Good News 24x7.

]]>
ಹಳದಿ ಮಾರ್ಗದ ಮೆಟ್ರೋ ಲೋಕಾರ್ಪಣೆ; ಮೋದಿಗಾಗಿ ಈ ಮಾರ್ಗದ ಮೆಟ್ರೋ ಕೂಡ ಬಂದ್. https://www.goodnews24x7.com/ha%e1%b8%b7adi-margada-me%e1%b9%adro-lokarpa%e1%b9%87e-modigagi-i-margada-me%e1%b9%adro-ku%e1%b8%8da-band-be%e1%b9%85ga%e1%b8%b7uru-nagarada-ar-vi-rasteyinda-bommasandrada-na%e1%b8%8duvina-nam/ Sun, 10 Aug 2025 05:49:22 +0000 https://www.goodnews24x7.com/?p=5673 ಬೆಂಗಳೂರು: ನಗರದ ಆರ್.ವಿ ರಸ್ತೆಯಿಂದ ಬೊಮ್ಮಸಂದ್ರದ ನಡುವಿನ ನಮ್ಮ ಮೆಟ್ರೋ ಹಳದಿ ಮಾರ್ಗ (Namma Metro Yellow Line)ಕ್ಕೆ ಪ್ರಧಾನಿ ಮೋದಿ ಅವರು ಇಂದು ಚಾಲನೆ ನೀಡಲಿದ್ದಾರೆ. ಯೆಲ್ಲೋ ಮಾರ್ಗದ ಮೆಟ್ರೋ ಆರಂಭಿಸುತ್ತಿರುವುದರಿಂದ ಹಸಿರು ಮಾರ್ಗದ ಮೆಟ್ರೋವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗುತ್ತಿದೆ.…

The post ಹಳದಿ ಮಾರ್ಗದ ಮೆಟ್ರೋ ಲೋಕಾರ್ಪಣೆ; ಮೋದಿಗಾಗಿ ಈ ಮಾರ್ಗದ ಮೆಟ್ರೋ ಕೂಡ ಬಂದ್. appeared first on Good News 24x7.

]]>

ಬೆಂಗಳೂರು: ನಗರದ ಆರ್.ವಿ ರಸ್ತೆಯಿಂದ ಬೊಮ್ಮಸಂದ್ರದ ನಡುವಿನ ನಮ್ಮ ಮೆಟ್ರೋ ಹಳದಿ ಮಾರ್ಗ (Namma Metro Yellow Line)ಕ್ಕೆ ಪ್ರಧಾನಿ ಮೋದಿ ಅವರು ಇಂದು ಚಾಲನೆ ನೀಡಲಿದ್ದಾರೆ. ಯೆಲ್ಲೋ ಮಾರ್ಗದ ಮೆಟ್ರೋ ಆರಂಭಿಸುತ್ತಿರುವುದರಿಂದ ಹಸಿರು ಮಾರ್ಗದ ಮೆಟ್ರೋವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗುತ್ತಿದೆ.

ಸಿಲಿಕಾನ್ ಸಿಟಿ ಬೆಂಗಳೂರಿಗೆ ಪ್ರಧಾನಿ ಮೋದಿ ಅವರು ಇಂದು ಆಗಮಿಸುತ್ತಿದ್ದಾರೆ. ಕೆಎಸ್ಆರ್ ರೈಲು ನಿಲ್ದಾಣದಿಂದ ಮೂರು ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ. ಇದಾದ ಮೇಲೆ ಹಳದಿ ಮಾರ್ಗದ ಮೆಟ್ರೋವನ್ನು ಉದ್ಘಾಟನೆ ಮಾಡಲಿದ್ದಾರೆ. ಇದೇ ವೇಳೆ ಮೆಟ್ರೋದ 3ನೇ ಹಂತದ ಶಂಕುಸ್ಥಾಪನೆ ಕೂಡ ಇದೇ ವೇಳೆ ನೆರವೇರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರಿಗೆ ಭದ್ರತಾ ದೃಷ್ಟಿಯಿಂದ ಹಸಿರು ಮಾರ್ಗದ ಮೆಟ್ರೋವನ್ನ ತಾತ್ಕಾಲಿಕವಾಗಿ ನಿರ್ಬಂಧಿಸಲಾಗುತ್ತದೆ. ಪ್ರಧಾನಿ ಮೋದಿ ಅವರ ಕಾರ್ಯಕ್ರಮಗಳು ಮುಗಿದ ಬಳಿಕ ಹಸಿರು ಮಾರ್ಗದ ಮೆಟ್ರೋ ಎಂದಿನಂತೆ ಕಾರ್ಯನಿರ್ವಹಿಸುತ್ತದೆ. ಇದಕ್ಕೆ ಪ್ರಯಾಣಿಕರು ಸಹಕರಿಸಬೇಕು ಎಂದು ಕೋರಲಾಗಿದೆ.

ನಗರದ ಬಸವನಗುಡಿ ಪೊಲೀಸರ ಮನವಿ ಹಿನ್ನೆಲೆ ಹಸಿರು ಮಾರ್ಗದಲ್ಲಿ ಬರುವಂತಹ 4 ಮೆಟ್ರೋ ನಿಲ್ದಾಣಗಳನ್ನು ಬಂದ್ ಮಾಡಲಾಗುತ್ತಿದೆ. ಲಾಲ್ ಬಾಗ್, ಸೌತ್ ಎಂಡ್, ಜಯನಗರ, ಆರ್.ವಿ ರಸ್ತೆಯ ಮೆಟ್ರೋ ಸ್ಟೇಷನ್ಗಳನ್ನು ಭದ್ರತೆ ದೃಷ್ಟಿಯಿಂದ ತಾತ್ಕಾಲಿಕವಾಗಿ ಮುಚ್ಚಲಾಗಿರುತ್ತದೆ. ಇಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೂ ಬಂದ್ ಆಗಿರುತ್ತವೆ. 12 ಗಂಟೆ ನಂತರ ಎಂದಿನಂತೆ ಸಂಚಾರ ಆರಂಭ ಮಾಡಲಾಗುತ್ತದೆ.

The post ಹಳದಿ ಮಾರ್ಗದ ಮೆಟ್ರೋ ಲೋಕಾರ್ಪಣೆ; ಮೋದಿಗಾಗಿ ಈ ಮಾರ್ಗದ ಮೆಟ್ರೋ ಕೂಡ ಬಂದ್. appeared first on Good News 24x7.

]]>