ತನಿಖೆಯಲ್ಲಿ ಮೌಖಿಕ ಪುರಾವೆಗಿಂತಲು ವೈಜ್ಞಾನಿಕ ಪುರಾವೆಗಳು ಮುಖ್ಯ : ಡಾ.ಬೋರಲಿಂಗಯ್ಯ

ತನಿಖೆಯಲ್ಲಿ ಮೌಖಿಕ ಪುರಾವೆಗಿಂತಲು ವೈಜ್ಞಾನಿಕ ಪುರಾವೆಗಳು ಮುಖ್ಯ : ಡಾ.ಬೋರಲಿಂಗಯ್ಯ

ಯಾವುದೇ ತನಿಖೆಯಲ್ಲಿ ಮೌಖಿಕ ಪುರಾವೆಗಳಿಗಿಂತ ವೈಜ್ಞಾನಿಕ ಪುರಾವೆಗಳು ಮುಖ್ಯವಾಗಿದ್ದು, ಅವುಗಳ ಮೇಲೆ ಹೆಚ್ಚಿನ ಆಸಕ್ತಿ ಮತ್ತು ಅಧ್ಯಯನವನ್ನು ಸಿಬ್ಬಂದಿಗಳು ಕೈಗೊಳ್ಳಬೇಕು ಎಂದು ದಕ್ಷಿಣ ವಲಯ ಡಿಐಜಿಪಿ ಡಾ. ಬೋರಲಿಂಗಯ್ಯ  ಹೇಳಿದರು. ಇಂದು ಕರ್ನಾಟಕ ಪೊಲೀಸ್ ಅಕಾಡೆಮಿಯ ನ್ಯೂ ಆಡಿಟೋರಿಯಂನಲ್ಲಿ ನಡೆದ ದಕ್ಷಿಣ ವಲಯ ಮಟ್ಟದ ಕರ್ತವ್ಯ ಕೂಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಕರ್ತವ್ಯ ಕೂಟದಲ್ಲಿ ಸ್ಪರ್ಧೆ ಮಾಡುವ ಉದ್ದೇಶ ನಮ್ಮ ಇಲಾಖೆಯಲ್ಲಿ ಸ್ಪೋರ್ಟ್ಸ್ ಗೇಮಿಂಗ್ ಆಕ್ಟಿವಿಟೀಸ್ ಮತ್ತು ತನಿಖಾ ವರದಿಗಳನ್ನು ಸಿಬ್ಬಂದಿಗಳು ಮುಖ್ಯವಾಗಿ ಗಮನಹರಿಸಬೇಕು ಎಂದು ಎಂದರು.

ಸ್ಪರ್ಧೆಯ ಉದ್ದೇಶವೆಂದರೆ ಯಾವುದೇ ಒಂದು ಪ್ರಕರಣ ತೆಗೆದುಕೊಂಡಾಗ ನಮ್ಮ ಜವಾಬ್ದಾರಿ ಅದರಲ್ಲಿ ಒಳ್ಳೆಯ ರೀತಿಯ ತನಿಖೆಯನ್ನು ಮಾಡಿ ಚಾರ್ಜ್ ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸುವುದು. ನಂತರ ನಮ್ಮ ಪ್ರಾಸಿಕ್ಯೂಟರ್ ನ್ಯಾಯಾಧೀಶರ ಮುಂದೆ ತನಿಖಾ ವರದಿಯನ್ನು ಮಂಡಿಸಬೇಕು. ತನಿಖೆಯನ್ನು ನ್ಯಾಯಾಲಯದ ಮುಂದೆ ವರದಿಯಲ್ಲಿ ತಿಳಿಸಿ ನ್ಯಾಯಾಧೀಶರ ಮುಂದೆ ಆರೋಪಿಯ ಆರೋಪದ ಬಗ್ಗೆ ಹಾಗೂ ತನಿಖೆ ವರದಿ ತಿಳಿಸಿ ನ್ಯಾಯಾಲಯದಲ್ಲಿ ವಾದ ಮಂಡಿಸಬೇಕು ಎಂದರು.

ಪ್ರಥಮವಾಗಿ ಚಾರ್ಜ್ ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸುವುದು ನಂತರ ಅಂತಿಮವಾಗಿ ನ್ಯಾಯ ಸಿಗುವ ತನಿಖಾ ವರದಿಯನ್ನು ನ್ಯಾಯಾಧೀಶರಿಗೆ ತಿಳಿಸುವುದು ನಮ್ಮ ಜವಾಬ್ದಾರಿ ಆಗಿರುತ್ತದೆ ಎಂದು ಹೇಳಿದರು.
ಯಾವುದೇ ತನಿಖೆಯಾಗಲಿ ಹೆಚ್ಚಿನ ಆಸಕ್ತಿಯಿಂದ ಕಾರ್ಯವನ್ನು ನಿರ್ವಹಿಸಬೇಕು ಅದಕ್ಕಾಗಿ ತನಿಖೆಯಲ್ಲಿ ಡಾಗ್ ಫೋರ್ಸ್ , ಘಟನೆ ನಡೆದ ಜಾಗದಲ್ಲಿ ಪರಿಶೀಲನೆ, ಫೋಟೋಗ್ರಾಫಿ, ಡಿಎನ್ಎ, ಫಿಂಗರ್ ಪ್ರಿಂಟ್ ಎಲ್ಲಾ ವರದಿಗಳನ್ನು ವೈಜ್ಞಾನಿಕ ಪುರಾವೆಗಳಾಗಿ ತೆಗೆದುಕೊಳ್ಳಬೇಕು.
ಇವುಗಳನ್ನು ತನಿಖಾ ಸಿಬ್ಬಂದಿಗಳು ಕಲಿಯಬೇಕು ಎಂಬುದು ಕರ್ತವ್ಯಕೂಟದ ಉದ್ದೇಶ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ ವಿಷ್ಣುವರ್ಧನ್, ಪೊಲೀಸ್ ಅಧಿಕಾರಿಗಳಾದ ಚೆನ್ನಬಸವಣ್ಣ, ನಾಗೇಶ್ ಎಸ್, ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

Related Posts

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಹಣದುಬ್ಬರ ಹಾಗೂ ಬೆಲೆ ಏರಿಕೆಯಿಂದ ತತ್ತರಿಸಿರುವ ಸಾಮಾನ್ಯ ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್ ನೀಡಿವೆ. ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದ ಬಿಸಿ ಇದೀಗ ನೇರವಾಗಿ ಭಾರತೀಯರ ಜೇಬಿಗೆ ತಟ್ಟಿದೆ. ನವದೆಹಲಿ: ಹಣದುಬ್ಬರ ಹಾಗೂ ಬೆಲೆ ಏರಿಕೆಯಿಂದ…

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

(ಕೆಎಂಶಿ)-ಉನ್ನತ ‘ಶಿಕ್ಷಣ ವಲಯದಲ್ಲಿ ಸಾಮಾಜಿಕ ನ್ಯಾಯ ಕಲ್ಪಿ ಸಲು, ರಾಜ್ಯದ ಎಲ್ಲ ಸರ್ಕಾರಿ, ಖಾಸಗಿ ಮತ್ತು ಡೀಮ್ಸ್ ವಿಶ್ವವಿದ್ಯಾಲಯಗಳಲ್ಲಿ ಜಾತಿ ಆಧಾರಿತ ದೌರ್ಜನ್ಯ ತಡೆಯಲು ರೋಹಿತ್ ವೇಮುಲ ಕಾಯಿದೆ ಜಾರಿಗೆ ತರಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ…

You Missed

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

ರಾಧಿಕಾ ಪಂಡಿತ್ ಜೊತೆ ಹೊಸ ಲುಕ್‌ನಲ್ಲಿ ‘ರಾಕಿಂಗ್’ ಸ್ಟಾರ್!

ರಾಧಿಕಾ ಪಂಡಿತ್ ಜೊತೆ ಹೊಸ ಲುಕ್‌ನಲ್ಲಿ ‘ರಾಕಿಂಗ್’ ಸ್ಟಾರ್!

ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ನಿವಾಸ ಮ್ಯೂಸಿಯಂ ಆಗಲಿದೆ

ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ನಿವಾಸ ಮ್ಯೂಸಿಯಂ ಆಗಲಿದೆ

ಸಚಿನ್ ತೆಂಡೂಲ್ಕರ್ ಸೊಸೆ ಎಷ್ಟು ಶ್ರೀಮಂತೆ ಗೊತ್ತಾ?

ಸಚಿನ್ ತೆಂಡೂಲ್ಕರ್ ಸೊಸೆ ಎಷ್ಟು ಶ್ರೀಮಂತೆ ಗೊತ್ತಾ?

ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಮೇಲೆ ಪೊಲೀಸ್ ಕಣ್ಣು!

ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಮೇಲೆ ಪೊಲೀಸ್ ಕಣ್ಣು!