ರಾಮಾಯಣ’ ಟ್ರೇಲರ್ ಉದ್ದಕ್ಕೂ ರಾವಣನದ್ದೇ ಅಬ್ಬರ !

ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ ‘ರಾಮಾಯಣ’ ಟ್ರೇಲರ್ ಭಾರಿ ಧೂಳೆಬ್ಬಿಸುತ್ತಿದೆ. ರಾವಣನಾಗಿ ರಾಕಿಂಗ್ ಸ್ಟಾರ್ ಯಶ್ ಅವರ ರೌದ್ರಾವತಾರದ ಎಂಟ್ರಿಗೆ ಪ್ರೇಕ್ಷಕರು ಥಿಯೇಟರ್‌ನಲ್ಲಿ ಹುಚ್ಚೆದ್ದು ಕುಣಿದಿದ್ದು, ಇಡೀ ಟ್ರೇಲರ್ ಯಶ್ ಅವರ ಅಪ್ರತಿಮ ಡಾಮಿನೇಷನ್‌ನಿಂದ ಕೂಡಿದೆ ಎಂದು ಫ್ಯಾನ್ಸ್ ಕೊಂಡಾಡುತ್ತಿದ್ದಾರೆ.
‘ರಾಮಾಯಣ’ ಟ್ರೇಲರ್ ಉದ್ದಕ್ಕೂ ರಾವಣನದ್ದೇ ಅಬ್ಬರ; ಯಶ್ ರೌದ್ರಾವತಾರ

ಕಿರುತೆರೆ ಮೂಲಕ ಜರ್ನಿ ಆರಂಭಿಸಿ, ನಂತರ ಸಿನಿಮಾ ರಂಗಕ್ಕೆ ಕಾಲಿಟ್ಟರು. ಏನಾದರೂ ಮಾಡಿಯೇ ಮಾಡುತ್ತೇನೆ ಎಂದು ಅವರು ಬಲವಾಗಿ ಅಂದುಕೊಂಡಿದ್ದರು. ‘ಕೆಜಿಎಫ್’ ಚಿತ್ರದ ಮೂಲ ಅದನ್ನು ಸಾಧಿಸಿದರು. ಅಲ್ಲಿಗೆ ಅವರು ನಿಲ್ಲಿಸಲಿಲ್ಲ. ‘ಕೆಜಿಎಫ್ 2’ ಮಾಡಿದರು. ಈಗ ‘ಟಾಕ್ಸಿಕ್’ ರಿಲೀಸ್​​ಗೆ ರೆಡಿ ಆಗುತ್ತಿದ್ದಾರೆ. ಇದರ ಜೊತೆಗೆ ‘ರಾಮಾಯಣ’ ಟ್ರೇಲರ್ ಮೂಲಕ ಧೂಳೆಬ್ಬಿಸಿದ್ದಾರೆ.

‘ರಾಮಾಯಣ’ ಸಿನಿಮಾದ ಟ್ರೇಲರ್ ಇಂದು ರಿಲೀಸ್ ಆಗಿದೆ. ಈ ಟ್ರೇಲರ್ ಹಾಲಿವುಡ್‌ನ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಚಿತ್ರದ ಜೊತೆಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಟ್ರೇಲರ್ ನೋಡಿದವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಭರ್ಜರಿ ಪ್ರತಿಕ್ರಿಯೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇಡೀ ಟ್ರೇಲರ್‌ನಲ್ಲಿ ಲಂಕೇಶ್ವರ ರಾವಣನಾಗಿ ನಟಿಸಿರುವ ರಾಕಿಂಗ್ ಸ್ಟಾರ್ ಯಶ್ ಅವರದ್ದೇ ಸಂಪೂರ್ಣ ಅಧಿಪತ್ಯ ಎದ್ದು ಕಾಣುತ್ತಿದೆ ಎಂದು ಅನೇಕರು ಬಣ್ಣಿಸುತ್ತಿದ್ದಾರೆ.

ಟ್ರೇಲರ್ ವೀಕ್ಷಿಸಿದ ಪ್ರೇಕ್ಷಕರು ಯಶ್ ಅವರ ನಟನೆಗೆ ಫುಲ್ ಫಿದಾ ಆಗಿದ್ದಾರೆ. ‘ಇಡೀ ರಾಮಾಯಣ ಟ್ರೇಲರ್‌ನಲ್ಲಿ ಅತ್ಯಂತ ರೋಮಾಂಚನ ನೀಡಿದ ಕ್ಷಣ ಎಂದರೆ ಅದು ಯಶ್ ಅವರ ರಾವಣನ ಅವತಾರ. ಅವರ ಕಣ್ಣುಗಳಲ್ಲಿನ ತೀವ್ರತೆ, ಗಾಂಭೀರ್ಯದ ವ್ಯಕ್ತಿತ್ವ ಮತ್ತು ಪರದೆಯ ಮೇಲಿನ ಅವರ ಅಪ್ರತಿಮ ಕ್ರೌರ್ಯದ ನಟನೆ ಎಂದಿಗೂ ಮರೆಯಲಾಗದ ಮೊದಲ ಆಕರ್ಷಣೆ’ ಎಂದು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ.

ಚಿತ್ರಮಂದಿರಗಳಲ್ಲಿ ಟ್ರೇಲರ್ ಪ್ರದರ್ಶನವಾಗುವಾಗ ರಾವಣನ ಎಂಟ್ರಿ ದೃಶ್ಯಕ್ಕೆ ಪ್ರೇಕ್ಷಕರಿಂದ ಹುಚ್ಚೆದ್ದು ಕೂಗಿದ್ದಾರೆ. ‘ಯಶ್ ಅವರು ಇಡೀ ಟ್ರೇಲರ್ ಅನ್ನು ಅತ್ಯಂತ ಸುಲಭವಾಗಿ ಡಾಮಿನೇಟ್ ಮಾಡಿದ್ದಾರೆ’ ಎಂದು ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ. ಈ ಭವ್ಯ ವಿಶ್ಯುಯಲ್ ವೈಭವ ಹಾಗೂ ಯಶ್ ಅವರ ರೌದ್ರಾವತಾರವನ್ನು ನೋಡುತ್ತಿದ್ದರೆ, ‘ರಾಮಾಯಣ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿ, ಸುನಾಮಿ ಎಬ್ಬಿಸುವುದು ಖಚಿತ ಎಂದು ಸಿನಿವಿಶ್ಲೇಷಕರು ಹಾಗೂ ಪ್ರೇಕ್ಷಕರು ಜಂಟಿಯಾಗಿ ಭವಿಷ್ಯ ನುಡಿಯುತ್ತಿದ್ದಾರೆ.

Related Posts

ಸೆಪ್ಟೆಂಬರ್ 11ರ ಚಿನ್ನದ ದರ: 10 ಗ್ರಾಂ ಚಿನ್ನದ ಬೆಲೆಯಲ್ಲಿ 2,400 ರೂ ಇಳಿಕೆ

ಗುರುವಾರ ಏರಿಕೆಯಾಗಿದ್ದ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಶುಕ್ರವಾರ (ಸೆಪ್ಟೆಂಬರ್ 11) ಕಡಿಮೆಯಾಗಿವೆ. ಪ್ರತಿ ಗ್ರಾಂ ಚಿನ್ನದ ಬೆಲೆಯಲ್ಲಿ 240 ರೂ (10 ಗ್ರಾಂಗೆ 2,400 ರೂ) ಹಾಗೂ ಬೆಳ್ಳಿ ಬೆಲೆಯಲ್ಲಿ ಗ್ರಾಂಗೆ 10 ರೂ ಇಳಿಕೆಯಾಗಿದೆ. ಈ ಬೆಲೆ ಪರಿಷ್ಕರಣೆಯ…

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ರಾಜ್ಯದಲ್ಲಿ ಸೆಪ್ಟೆಂಬರ್ 21ರಿಂದ ಮೂರು ದಿನಗಳ ಕಾಲ ವಿಶೇಷ ವಿಧಾನಮಂಡಲ ಅಧಿವೇಶನ ನಡೆಸಲು ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಸೆ. 21ರಿಂದ ಸೆ.…

You Missed

ಸೆಪ್ಟೆಂಬರ್ 11ರ ಚಿನ್ನದ ದರ: 10 ಗ್ರಾಂ ಚಿನ್ನದ ಬೆಲೆಯಲ್ಲಿ 2,400 ರೂ ಇಳಿಕೆ

ಸೆಪ್ಟೆಂಬರ್ 11ರ ಚಿನ್ನದ ದರ: 10 ಗ್ರಾಂ ಚಿನ್ನದ ಬೆಲೆಯಲ್ಲಿ 2,400 ರೂ ಇಳಿಕೆ

lja5nqb73ba7bxod16

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!