ಇರಾನ್-ಇಸ್ರೇಲ್ ಯುದ್ಧದ ಬಿಸಿ ಇದೀಗ ನೇರವಾಗಿ ಸಿಲಿಕಾನ್ ಸಿಟಿ ಬೆಂಗಳೂರಿನ ಜನಜೀವನದ ಮೇಲೆ ಬೀರುತ್ತಿದೆ!

ಮಧ್ಯಪ್ರಾಚ್ಯದ ಇರಾನ್ ಮತ್ತು ಇಸ್ರೇಲ್ ನಡುವಿನ ಸಮರದಿಂದಾಗಿ ಬೆಂಗಳೂರಿನ ಹೋಟೆಲ್ ಮತ್ತು ರೆಸ್ಟೊರೆಂಟ್​ಗಳಿಗೆ ಮಾತ್ರವಲ್ಲದೇ ಲಕ್ಷಾಂತರ ಜನ ವಾಸವಿರೋ ಪಿಜಿಗಳಿಗೂ ಸಂಕಷ್ಟ ಎದುರಾಗಿದೆ.

ಬೆಂಗಳೂರಿನ ಹೋಟೆಲ್ ಮಾತ್ರವಲ್ಲ.. ಪಿಜಿಗಳಿಗೂ ಸಂಕಷ್ಟ
ಆಹಾರ ಪೂರೈಕೆ ಸ್ಥಗಿತದ ಭೀತಿ.. ಆತಂಕದಲ್ಲಿ 10 ಲಕ್ಷ ಮಂದಿ
ಕೆಲ ಪಿಜಿಗಳಲ್ಲಿ ಆಹಾರ ಪೂರೈಕೆ ಸ್ಥಗಿತಗೊಳ್ಳುವ ಮುನ್ಸೂಚನೆ
ಈಗಾಗಲೇ ಕೆಲವು ಪಿಜಿಗಳಲ್ಲಿ ಬಗೆ ಬಗೆಯ ಅಡುಗೆಗೆ ಬ್ರೇಕ್​

ಬೆಂಗಳೂರು : ಇರಾನ್-ಇಸ್ರೇಲ್ ಯುದ್ಧದ ಬಿಸಿ ಇದೀಗ ನೇರವಾಗಿ ಸಿಲಿಕಾನ್ ಸಿಟಿ ಬೆಂಗಳೂರಿನ ಜನಜೀವನದ ಮೇಲೆ ಬೀರುತ್ತಿದೆ. ಗ್ಯಾಸ್ ಸರಬರಾಜಿನಲ್ಲಿ ಉಂಟಾಗಿರುವ ಅಡಚಣೆ ಮತ್ತು ಬೆಲೆ ಏರಿಕೆಯು ನಗರದ ಹೋಟೆಲ್‌ಗಳನ್ನು ಮಾತ್ರವಲ್ಲದೆ, ಲಕ್ಷಾಂತರ ಮಂದಿ ವಾಸವಿರುವ ಪಿಜಿಗಳನ್ನೂ ಬೆಂಬಿಡದೆ ಕಾಡುತ್ತಿದೆ.

ಬೆಂಗಳೂರಿನಲ್ಲಿ ಉದ್ಯೋಗಿಗಳ ಮತ್ತು ವಿದ್ಯಾರ್ಥಿಗಳ ಹಬ್ ಆಗಿರುವುದರಿಂದ ಇಲ್ಲಿನ ಪಿಜಿಗಳ ಮೇಲೆ ಸಾಕಷ್ಟು ಜನ ಅವಲಂಬಿತರಾಗಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ಒಟ್ಟು 15,000 ಪಿಜಿಗಳಿದ್ದು, ಅದರಲ್ಲಿ ಸುಮಾರು 10,00,000 ಜನ ವಾಸವಾಗಿದ್ದಾರೆ. ಸಾಮಾನ್ಯವಾಗಿ ಪಿಜಿಗಳಲ್ಲಿ ದಿನಕ್ಕೆ ಮೂರು ಬಾರಿ ಊಟದ ವ್ಯವಸ್ಥೆ ಮಾಡಲಾಗುತ್ತದೆ. ಆದರೆ ಈಗ ಉಂಟಾಗಿರುವ ಗ್ಯಾಸ್ ಅಲಭ್ಯತೆಯಿಂದಾಗಿ ಮಾಲೀಕರು ಅಡುಗೆ ಮಾಡಲು ಹಿಂದೆ ಮುಂದೆ ನೋಡುತ್ತಿದ್ದಾರೆ.

ಮೆನುವಿನಲ್ಲಿ ಕಡಿತಗೊಂಡ ಅಡುಗೆ ರೆಸಿಪಿಗಳು
ಈಗಾಗಲೇ ಹಲವು ಪಿಜಿಗಳಲ್ಲಿ ಸಿಲಿಂಡರ್ ಉಳಿಸುವ ಉದ್ದೇಶದಿಂದಾಗಿ ಬಗೆ ಬಗೆಯ ಅಡುಗೆಗಳಿಗೆ ಬ್ರೇಕ್ ಹಾಕಲಾಗಿದೆ. ಕೇವಲ ಅಗತ್ಯವಾದ ಸೀಮಿತ ಪ್ರಮಾಣದ ಆಹಾರವನ್ನು ಮಾತ್ರ ನೀಡಲಾಗುತ್ತಿದೆ. ಇದರಿಂದಾಗಿ ಪಿಜಿಯಲ್ಲಿನ ಜನ ಹೋಟೆಲ್​ನತ್ತ ಮುಖ ಮಾಡೋದು ಸರ್ವೇ ಸಾಮಾನ್ಯ, ಆದರೆ ಆದರೆ ಹೋಟೆಲ್‌ಗಳಲ್ಲೂ ಕಮರ್ಷಿಯಲ್ ಗ್ಯಾಸ್ ಕೊರತೆ ಇರುವುದರಿಂದ ಅಲ್ಲಿಯೂ ಊಟ ಸಿಗುವುದು ಕಷ್ಟವಾಗಲಿದೆ.ಒಂದು ವೇಳೆ ಮುಂದಿನ ಒಂದು ವಾರದೊಳಗೆ ಈ ಸಮಸ್ಯೆ ಬಗೆಹರಿಯದಿದ್ದರೆ, ಬಹುತೇಕ ಪಿಜಿಗಳಲ್ಲಿ ಆಹಾರದ ಪೂರೈಕೆ ಸಂಪೂರ್ಣವಾಗಿ ಬಂದ್​ ಮಾಡುವ ಮುನ್ಸೂಚನೆ ಇದೆ.

ದರಗಳ ವ್ಯತ್ಯಾಸ ಹೀಗಿದೆ
ಗೃಹ ಬಳಕೆ ಸಿಲಿಂಡರ್ ಹಳೆ ದರ: ರೂ. 855.50 – ಹೊಸ ದರ: ರೂ. 915.50
ಕಮರ್ಷಿಯಲ್ ಸಿಲಿಂಡರ್ಹಳೆ ದರ: ರೂ. 1,814 – ಹೊಸ ದರ: ರೂ. 1,929

ಸದ್ಯಕ್ಕೆ ಸಂಕಷ್ಟದಲ್ಲಿರುವವರು ಯಾರು?
ನಗರಕ್ಕೆ ಉದ್ಯೋಗ ಅರಸಿ ಬಂದ ಐಟಿ ಉದ್ಯೋಗಿಗಳು, ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಈ ಬಿಕ್ಕಟ್ಟಿನಿಂದ ನೇರವಾಗಿ ತತ್ತರಿಸಿದ್ದಾರೆ. ಅತ್ತ ಪಿಜಿ ಬಾಡಿಗೆ ಏರಿಸುವ ಆತಂಕ, ಇತ್ತ ಊಟ ಸಿಗದ ಆತಂಕ ಎರಡೂ ಜನರನ್ನು ಕಾಡುತ್ತಿರುವ ಸಮಸ್ಯೆಗಳಾಗಿವೆ.
ಒಟ್ಟಾರೆಯಾಗಿ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ಬೆಂಗಳೂರಿನಂತಹ ಮಹಾನಗರದ ಸಾಮಾನ್ಯ ಜನರ ಹೊಟ್ಟೆ ಮೆಲೆ ಪರಿಣಾಮ ಬೀರುತ್ತಿರುವುದು ಜಾಗತಿಕ ಅವಲಂಬನೆಯ ಕಟು ಸತ್ಯವನ್ನು ತೋರಿಸುತ್ತಿದೆ.

Related Posts

100 ಪರ್ಸೆಂಟ್ ಶುದ್ಧ ಪೆಟ್ರೋಲ್‌ಗೆ ಆಗ್ರಹಿಸಿ ಆಗಸ್ಟ್ 4ಕ್ಕೆ ಸಂಸತ್ ಚಲೋ !

  E20 ಜನತಾ ಪಕ್ಷವು ಶೇ.20 ಎಥೆನಾಲ್ ಮಿಶ್ರಿತ ಪೆಟ್ರೋಲ್ ಬದಲಿಗೆ ಶೇ. 100 ಶುದ್ಧ ಪೆಟ್ರೋಲ್ ನೀಡಲು ಆಗ್ರಹಿಸುತ್ತಿದೆ. E20 ಇಂಧನದಿಂದ ವಾಹನಗಳ ಮೈಲೇಜ್ ಕಡಿಮೆಯಾಗಿ, ಎಂಜಿನ್ ಸಮಸ್ಯೆಗಳು ಹೆಚ್ಚುತ್ತಿವೆ ಎಂಬುದು ಅವರ ಆರೋಪ. ಸಚಿವ ನಿತಿನ್ ಗಡ್ಕರಿ ರಾಜೀನಾಮೆಗೆ…

ನೀಟ್ ಪತ್ರಿಕೆ ಸೋರಿಕೆ : ದೇಶ ಮತ್ತು ವಿದ್ಯಾರ್ಥಿಗಳ ಹಿತಾಸಕ್ತಿಯೇ ನಮಗೆ ಮುಖ್ಯ ಎಂದ ಅಮಿತ್ ಶಾ !

  ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ವಿದ್ಯಾರ್ಥಿಗಳ ಹಿತಾಸಕ್ತಿ ಮುಖ್ಯ ಎಂದ ಅಮಿತ್ ಶಾ, ಭವಿಷ್ಯದಲ್ಲಿ ಪರೀಕ್ಷಾ ಅಕ್ರಮ ತಡೆಯಲು ಕಠಿಣ ಸುಧಾರಣೆ ತರುವ ಭರವಸೆ ನೀಡಿದ್ದಾರೆ. ಸರ್ಕಾರದ ಈ…

You Missed

100 ಪರ್ಸೆಂಟ್ ಶುದ್ಧ ಪೆಟ್ರೋಲ್‌ಗೆ ಆಗ್ರಹಿಸಿ ಆಗಸ್ಟ್ 4ಕ್ಕೆ ಸಂಸತ್ ಚಲೋ !

100 ಪರ್ಸೆಂಟ್ ಶುದ್ಧ ಪೆಟ್ರೋಲ್‌ಗೆ ಆಗ್ರಹಿಸಿ ಆಗಸ್ಟ್ 4ಕ್ಕೆ ಸಂಸತ್ ಚಲೋ !

ನೀಟ್ ಪತ್ರಿಕೆ ಸೋರಿಕೆ : ದೇಶ ಮತ್ತು ವಿದ್ಯಾರ್ಥಿಗಳ ಹಿತಾಸಕ್ತಿಯೇ ನಮಗೆ ಮುಖ್ಯ ಎಂದ ಅಮಿತ್ ಶಾ !

ನೀಟ್ ಪತ್ರಿಕೆ ಸೋರಿಕೆ : ದೇಶ ಮತ್ತು ವಿದ್ಯಾರ್ಥಿಗಳ ಹಿತಾಸಕ್ತಿಯೇ ನಮಗೆ ಮುಖ್ಯ ಎಂದ ಅಮಿತ್ ಶಾ !

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !