ಸಪ್ತಪದಿ ತುಳಿದು ತಾಳಿ ಕಟ್ಟಿದ್ದ ಗಂಡನೇ ಮಡದಿಯನ್ನ ಹ* ಮಾಡಿದ್ದಾನೆ

ಹಾಸನ: ಆಕೆಗೆ ಎಂಟು ವರ್ಷದ ಕೆಳಗೆ ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು. ಮದುವೆಯಾಗಿ ಮೂರು ವರ್ಷ ಚೆನ್ನಾಗಿ ಸಂಸಾರ ಮಾಡಿದ ಗಂಡ ಆಸ್ತಿಗಾಗಿ ಅಪ್ಪ ಅಮ್ಮನ ಮಾತು ಕೇಳಿ ಯಮ ಗಂಡನಾಗಿದ್ದ. ಗಂಡನ ಮನೆಯವರ ಕಿರುಕುಳದ ಜೊತೆಗೆ ಕುಡುಕ ಗಂಡನ ಜೊತೆ ಬಾಳೋದಕ್ಕಿಂತ ಒಂಟಿಯಾಗಿ ಇರೋದೇ ಮೇಲು ಎಂದು ಡೈವೋರ್ಸ್ ಗೆ ಅಪ್ಲೈ ಮಾಡಿಕೊಂಡಿದ್ದವಳನ್ನ ಚೆನ್ನಾಗಿರೋನ ಬಾ ಎಂದು ಪುಸಲಾಯಿಸಿ ಕರೆದುಕೊಂಡು ಬಂದವನು ಚಾಕುವಿನಿಂದ ಕುತ್ತಿಗೆ ಸೀಳಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ತನುಜಾ ಜೀವಕ್ಕೆ ಜೀವ ಆಗಿರ್ತಿನಿ.. ಕಣ್ಣಲ್ಲಿ ಕಣ್ಣಾಗಿ ನೋಡ್ಕೊಳ್ತಿನಿ ಅಂತಾ ಸಪ್ತಪದಿ ತುಳಿದು ತಾಳಿ ಕಟ್ಟಿದ್ದ ಗಂಡನೇ ಈಕೆಯನ್ನ ಕೊಂದು ಕೆಡವಿದ್ದಾನೆ. ರಣರಾಕ್ಷಸನಂತೆ ತಾನೇ ತಾಳಿ ಕಟ್ಟಿದ ಕುತ್ತಿಗೆಯನ್ನ ಚಾಕುವಿನಿಂದ ಸೀಳಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಹೌದು ಕಳೆದ 8 ವರ್ಷಗಳ ಕೆಳಗೆ ಹಾಸನ ಜಿಲ್ಲೆಯ ಗುಡ್ಡೇನಹಳ್ಳಿಯ ತನುಜಳನ್ನ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಹಿರೇಕಾನವಂಗಲ ಗ್ರಾಮದ ರಮೇಶ್ ಜೊತೆ ಮದುವೆ ಮಾಡಿಕೊಡಲಾಗಿತ್ತು. ಮದುವೆಯಾದ ಹೊಸತರಲ್ಲಿ ನೀನೆ ನನ್ನ ಜೀವ.. ನೀನೆ ನನ್ನುಸಿರು ಅಂತಾ ಅಂತಾ ಹೆಂಡತಿಯನ್ನ ಮುದ್ದು ಮಾಡ್ತಿದ್ದವನು. ಒಂದು ಗಂಡು ಮಗು ಆಗಿ ಹೆಂಡತಿ ತವರು ಮನೆಗೆ ಹೋದಾಗ್ಲಿಂದ ತನ್ನ ತಂದೆ, ತಾಯಿ, ಅಕ್ಕಂದಿರ ಮಾತು ಕೇಳಿ ಹೆಂಡತಿಗೆ ಕೊಡಬಾರದ ಚಿತ್ರ ಹಿಂಸೆ ಕೊಡ್ತಿದ್ನಂತೆ. ತನ್ನ ಮಗುವಿನ ನಾಮಕರಣಕ್ಕೂ ಹೋಗಿರ್ಲಿಲ್ವಂತೆ. ಹೆಂಡತಿ ಬಾಣಂತನ ಮುಗಿಸಿಕೊಂಡು ಗಂಡನ ಮನೆಗೆ ಬರ್ತಿದ್ದಂತೆ ಮನೆ ಮಂದಿ ಎಲ್ಲ ಸೇರಿ ಕಾಟ ಕೊಟ್ಟಿದ್ದಾರೆ. ಸಾಲದು ಅಂತಾ ಮನೆಯಿಂದ ಹೊರಗೆ ಹಾಕಿದ್ರಂತೆ. ಮೊದಲೇ ಗಂಡ ಕುಡುಕ ಅಪ್ಪ, ಅಮ್ಮ, ಅಕ್ಕಂದಿರ ಮಾತು ನಂಬಿ ಹೊಡೆದು ಬಡಿದು ಮಾಡ್ತಿದ್ನಂತೆ. ಇಲ್ಲೇ ಇದ್ರೆ ಸರಿಯಾಗಲ್ಲ ಅಂತಾ ತನುಜಾ ತನ್ನ ಗಂಡನ ಕರೆದುಕೊಂಡು ಬಂದು ಬೇರೆ ಸಂಸಾರ ಮಾಡ್ತಿದ್ದಳಂತೆ. ಮನೆ ಬಿಟ್ಟು ಬೇರೆ ಮನೆಗೆ ಬಂದ್ರೂ ಕೂಡಾ ಗಂಡ ರಮೇಶ ಕುಡಿಯೋದನ್ನ‌ ಬಿಟ್ಟಿಲ್ಲ ಇದರಿಂದ ಬೇಸತ್ತ ತನುಜಾ ಮೂರು ವರ್ಷಗಳ ಕೆಳಗೆ ಡಿವೋರ್ಸ್‌ಗೆ ಅಪ್ಲೆ ಮಾಡಿಕೊಂಡಿದ್ದಾಳೆ.. ಕೆಲ ದಿನಗಳ ಹಿಂದೆ ಮಗನ ಸ್ಕೂಲ್‌ಗೆ ರಜೆ ಅಂತಾ ತವರು ಮನೆಗೆ ಹೋಗಿದ್ದ ತನುಜಾಳಿಗೆ ಕಾಲ್ ಮಾಡಿದ್ದ ರಮೇಶ ಕೋರ್ಟ್‌ಗೆ ಹೋಗಬೇಕು.. ಲಾಯರ್ ಕಾಲ್ ಮಾಡಿದ್ರು.. ಇನ್ಮೇಲೆ ಚೆನ್ನಾಗಿರೋಣ ಬಾ ಅಂತ ಕರೆದಿದ್ದಾನೆ. ಸೋಮವಾರವಷ್ಟೇ ಗುಡ್ಡೇನಹಳ್ಳಿಯಿಂದ ತನುಜಾಳನ್ನ ಕರೆದುಕೊಂಡು ಬಂದಿದ್ದಾನೆ.. ಆದ್ರೆ ನಿನ್ನೆ ಸಂಜೆ ಗಂಡ ಹೆಂಡತಿ ನಡುವೆ ಅದೇನು ನಡೆಯಿತೋ ಗೊತ್ತಿಲ್ಲ ಚಾಕುವಿನಿಂದ ತನಜಾಳ ಕುತ್ತಿಗೆ ಸೀಳಿದ್ದಾನೆ.

ನಿನ್ನೆ ಸಂಜೆ ತನುಜಾ ಮತ್ತು ರಮೇಶನ ನಡುವೆ ಯಾವ ಜಗಳ ನಡೆದಿತ್ತೋ ಗೊತ್ತಿಲ್ಲ. ಕಂಠಪೂರ್ತಿ ಕುಡಿದು ಬಂದಿದ್ದ ರಮೇಶನಿಗೆ ಎಣ್ಣೆಯ ನಶೆಯ ಜೊತೆಗೆ ಪಿತ್ತ ನೆತ್ತಿಗೆ ಹತ್ತುತ್ತಿದ್ದಂತೆ ಮನೆಯಲ್ಲಿದ್ದ ಚಾಕುವನ್ನ ಕೈಗೆತ್ತಿಕೊಂಡು ಸಿಕ್ಕ ಸಿಕ್ಕಲ್ಲಿ ಚುಚ್ಚಿದ್ದಾನೆ.. ಚಾಕುವಿನಿಂದ ಚುಚ್ಚಿದ ತಕ್ಷಣ ಕೆಳಗೆ ಬಿದ್ದ ತನುಜಾಳ ಎದೆಯ ಮೇಲೆ ಹತ್ತಿ ಕೂತವ್ನೇ ತಾನೇ ತನ್ನ ಕೈಯ್ಯಾರೆ ತಾಳಿ ಕಟ್ಟಿದ್ದ ಕುತ್ತಿಗೆಯನ್ನ ರಣ ರಾಕ್ಷಸನಂತೆ ಸೀಳಿ ಕೊಂದಿದ್ದಾನೆ.. ಯಾವಗ ತನ್ನ ಹೆಂಡತಿ ತನುಜಾ ಸಾವನ್ನಪ್ಪಿದ್ದಾಳೆ ಅನ್ನೋದು ಕನ್ಫರ್ಮ್ ಆಯ್ತೋ ಆಗ ಅದೇ ಚಾಕುವಿನಿಂದ ತಾನೂ ಕೂಡಾ ಕೈ ಕೊಯ್ದುಕೊಂಡು ನನ್ನ ಹೆಂಡತಿ ನನಗೆ ಹೊಡೆದಿದ್ದಾಳೆ ಅಂತಾ ಆಸ್ಪತ್ರೆಗೆ ಹೋಗಿ ಅಡ್ಮೆಂಟ್ ಆಗಿದ್ದಾನೆ.. ಆಸತ್ರೆಯಿಂದ ಬಂದ ಮಾಹಿತಿ ಆಧರಿಸಿ ಹಿರೇಕಾನವಂಗಲ ಗ್ರಾಮದ ರಮೇಶನ ಮನೆಗೆ ಹೋದ ಅಜ್ಜಂಪುರ ಠಾಣೆಯ ಇನ್ಸ್ಪೆಕ್ಟರ್ ವೀರೇಂದ್ರ ಮತ್ತು ಪಿಎಸ್‌ಐ ಗಜೇಂದ್ರ ಇಬ್ಬರೂ ಒಂದು ಕ್ಷಣ ಶಾಕ್ ಆಗಿಹೋಗಿದ್ದಾನೆ. ಯಾಕಂದ್ರೆ ತನ್ನ ಹೆಂಡತಿ ತನಗೆ ಹೊಡೆದ್ದಾಳೆ ಅಂತಾ ಆಸ್ಪತ್ರೆ ಸೇರಿದ್ದ ಗಂಡ ರಮೇಶ ಇಲ್ಲಿ ತನ್ನ ಹೆಂಡತಿಯನ್ನ ಕತ್ತು ಸೀಳಿ ಕೊಂದು ಮಲಗಿಸಿ ಹೋಗಿದ್ದ. ಕೂಡಲೇ ಆಸ್ಪತ್ರೆಗೆ ಹೋಗಿ ಅಡ್ಮೆಂಟ್ ಆಗಿದ್ದ ರಮೇಶನನ್ನ ವಿಚಾರಿಸ್ತಿದ್ದಂತೆ ತಾನೇ ತನ್ನ ಹೆಂಡತಿಯನ್ನ ಕೊಂದಿದ್ದು ಅಂತ ಸತ್ಯ ಬಾಯಿಬಿಟ್ಟಿದ್ದಾನೆ. ಇನ್ನೂ ರಮೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು. ಕೊಲೆಗೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ರಮೇಶನ ತಂದೆ ಪುಟ್ಟಪ್ಪ ಹಾಗೂ ತಾಯಿ ಲಲಿತಮ್ಮರನ್ನ ಪೊಲೀಸರು ಬಂಧಿಸಿದ್ದಾರೆ.

ಒಟ್ನಲ್ಲಿ ಕುಡಿತದ ಚಟಕ್ಕೆ ದಾಸನಾಗಿದ್ದ ಗಂಡ ಆಸ್ತಿಗಾಗಿ ಅಪ್ಪ, ಅಮ್ಮ, ಅಕ್ಕಂದಿರ ಮಾತು ಕೇಳಿ ತನ್ನನ್ನೇ ನಂಬಿ ಅಗ್ನಿಸಾಕ್ಷಿಯಾಗಿ ಕೈ ಹಿಡಿದು ತನ್ನವರನ್ನೆಲ್ಲ ಬಿಟ್ಟು ಬಂದಿದ್ದ ಹೆಂಡತಿಯನ್ನೇ ಕೊಂದು ಕೆಡವಿದ್ದು. ತಾಯಿ ಸತ್ತು ಸುಟ್ಟು ಬೂಧಿಯಾಗಿ ತಂದೆ ಜೈಲುಪಾಲಾಗಿದ್ದಾನೆ. ಆದ್ರೆ ಏನೂ ಅರಿಯದ 6 ವರ್ಷದ ಕಂದಮ್ಮ ಅನಾಥವಾಗಿದ್ದು ಮಾತ್ರ ದುರಂತ

Related Posts

ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ನಿವಾಸ ಮ್ಯೂಸಿಯಂ ಆಗಲಿದೆ

ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್‌ ಅವರ ಮೈಸೂರು ಜಿಲ್ಲೆಯ ಕಣಗಾಲ್‌ ಗ್ರಾಮದಲ್ಲಿರುವ ನಿವಾಸವನ್ನು ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ಮನೆಯನ್ನು ಮ್ಯೂಸಿಯಂ ಆಗಿ ಪರಿವರ್ತಿಸುತ್ತಿರುವುದು ಇದೇ ಮೊದಲು. ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್‌ ಅವರ…

ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಮೇಲೆ ಪೊಲೀಸ್ ಕಣ್ಣು!

200ಕ್ಕೂ ಹೆಚ್ಚು ವಿದೇಶಿ ಪ್ರಜೆಗಳಿಗೆ ಗೇಟ್​​​ಪಾಸ್ ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳ ವಿರುದ್ಧ ಪೊಲೀಸರು ವಿಸ್ತೃತ ಕಾರ್ಯಾಚರಣೆ ನಡೆಸುತ್ತಿದ್ದಾರೆ. ನಗರ ಆಯುಕ್ತರ ನೇತೃತ್ವದಲ್ಲಿ ನಡೆದ ಈ ತಪಾಸಣೆಯಲ್ಲಿ 200ಕ್ಕೂ ಹೆಚ್ಚು ದಾಖಲೆರಹಿತ ವಿದೇಶಿಗರನ್ನು ಪತ್ತೆಹಚ್ಚಿ ವಶಕ್ಕೆ ಪಡೆಯಲಾಗಿದೆ. ಇವರಲ್ಲಿ ಬಾಂಗ್ಲಾದೇಶ…

You Missed

ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ನಿವಾಸ ಮ್ಯೂಸಿಯಂ ಆಗಲಿದೆ

ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ನಿವಾಸ ಮ್ಯೂಸಿಯಂ ಆಗಲಿದೆ

ಸಚಿನ್ ತೆಂಡೂಲ್ಕರ್ ಸೊಸೆ ಎಷ್ಟು ಶ್ರೀಮಂತೆ ಗೊತ್ತಾ?

ಸಚಿನ್ ತೆಂಡೂಲ್ಕರ್ ಸೊಸೆ ಎಷ್ಟು ಶ್ರೀಮಂತೆ ಗೊತ್ತಾ?

ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಮೇಲೆ ಪೊಲೀಸ್ ಕಣ್ಣು!

ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಮೇಲೆ ಪೊಲೀಸ್ ಕಣ್ಣು!

ರಜತ್ ವಿರುದ್ಧ ಮತ್ತೊಂದು ಕೇಸ್‌ – ಡಾಗ್‌ ಸತೀಶ್‌ಗೆ ಕೊಲೆ ಬೆದರಿಕೆ

ರಜತ್  ವಿರುದ್ಧ ಮತ್ತೊಂದು ಕೇಸ್‌ – ಡಾಗ್‌ ಸತೀಶ್‌ಗೆ ಕೊಲೆ ಬೆದರಿಕೆ

ಬೆಂಗಳೂರಿನಲ್ಲಿ ವಿದೇಶಿ ಪ್ರಜೆಗಳ ವಿರುದ್ಧ ಪೊಲೀಸರು ವ್ಯಾಪಕ ಕಾರ್ಯಾಚರಣೆ

ಬೆಂಗಳೂರಿನಲ್ಲಿ ವಿದೇಶಿ ಪ್ರಜೆಗಳ ವಿರುದ್ಧ ಪೊಲೀಸರು ವ್ಯಾಪಕ ಕಾರ್ಯಾಚರಣೆ

UPSC ಪರೀಕ್ಷೆಯಲ್ಲಿ ಅನುಜ್‌ ಅಗ್ನಿಹೋತ್ರಿ ಫಸ್ಟ್ ರ‍್ಯಾಂಕ್

UPSC ಪರೀಕ್ಷೆಯಲ್ಲಿ ಅನುಜ್‌ ಅಗ್ನಿಹೋತ್ರಿ ಫಸ್ಟ್ ರ‍್ಯಾಂಕ್