ವಿಧವೆಯರು ವರಮಹಾಲಕ್ಷ್ಮಿ ವ್ರತಾಚರಣೆಯನ್ನು ಮಾಡಬಹುದೇ? ಈ ಬಗ್ಗೆ ಪುರಾಣಗಳು ಏನು ಹೇಳ್ತಾವೆ ಗೊತ್ತಾ.?

ಪ್ರತಿ ವರ್ಷ ಶ್ರಾವಣದಲ್ಲಿ ವರಮಹಾಲಕ್ಷ್ಮಿ ಹಬ್ವವನ್ನು ಆಚರಿಸುತ್ತೇವೆ. ಈ ಬಾರಿ ಆಗಸ್ಟ್ 8 ಶುಕ್ರವಾರದಂದು ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸುತ್ತಿದ್ದೇವೆ. ಲಕ್ಷ್ಮಿದೇವಿಯ ಅಲಂಕಾರ, ಪೂಜೆ, ಮುತ್ತೈದೆಯರಿಗೆ ಅರಿಶಿನ ಕುಂಕುಮ ಪ್ರಸಾದ ನೀಡುವುದು ಹೀಗೆ ಸುಮಂಗಲಿಯರು ವ್ರತದ ಸಕಲ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ. ಪ್ರತಿ ವರ್ಷ ಶ್ರಾವಣ ಮಾಸದ ಶುಕ್ರವಾರ ಆಚರಿಸಲಾಗುವ ವರಮಹಾಲಕ್ಷ್ಮಿ ಹಬ್ಬವನ್ನು, ಈ ಬಾರಿ ಆಗಸ್ಟ್ 8 ರಂದು ಆಚರಿಸಲಾಗುತ್ತಿದೆ.

ಆದರೆ ವಿಧವೆಯರು ವ್ರತಾಚರಣೆ ಮಾಡಬಹುದೇ ಇಂತಹ ಪ್ರಶ್ನೆಯೊಂದು ಎಲ್ಲರ ಮನಸ್ಸಿನಲ್ಲಿ ಇದೆ. ಕೆಲವರು ವಿಧವಾ ಸ್ತೀಯರು ವ್ರತಾಚರಣೆ ಮಾಡುವುದು ತಪ್ಪು ಎಂದರೆ, ಇನ್ನು ಕೆಲವರು ದೇವರನ್ನು ಪೂಜಿಸುವುದರಲ್ಲಿ ತಪ್ಪಿಲ್ಲ ಎನ್ನುತ್ತಾರೆ. ಆದರೆ ಪತಿಯನ್ನು ಕಳೆದುಕೊಂಡ ಸ್ತ್ರಿಯರು ವರಮಹಾಲಕ್ಷ್ಮಿ ವ್ರತಾಚರಣೆ ಮಾಡಬಹುದೇ? ಎನ್ನುವ ಬಗ್ಗೆ ಮಾಹಿತಿ.

https://www.goodnews24x7.com/operation-sindoor-in-a-saree/ಸೀರೆಯಲ್ಲಿ ಅರಳಿದ ಆಪರೇಶನ್ ಸಿಂಧೂರ.

ಹಿಂದಿನ ಕಾಲದ ಆಚಾರ ವಿಚಾರವನ್ನು ಇವತ್ತಿಗೂ ಪಾಲಿಸಿಕೊಂಡು ಹೋಗುವ ಮನಸ್ಥಿತಿ ಯಾರಿಗೂ ಇಲ್ಲ. ಅಭಿವೃದ್ಧಿಯಾಗುತ್ತಿದ್ದಂತೆ ತಾವು ಪಾಲಿಸಿಕೊಂಡು ಬರುವ ಆಚಾರ ವಿಚಾರಗಳಲ್ಲಿ ತಕ್ಕ ಮಟ್ಟಿಗೆ ಬದಲಾವಣೆ ಮಾಡಿಕೊಳ್ಳುತ್ತಿದ್ದೇವೆ. ಈಗಾಗಲೇ ಅದೆಷ್ಟೋ ಬದಲಾವಣೆಗಳು ಆಗಿವೆ, ಅದು ಸ್ವೀಕಾರಾರ್ಹ. ಹೀಗಾಗಿ ವಿಧವಾ ಸ್ತ್ರೀಯರು ದೈವತಾ ಕಾರ್ಯಗಳಲ್ಲಿ ತೊಡಗಬಾರದು ಎನ್ನುವುದು ಎಲ್ಲಿಯೂ ಇಲ್ಲ. ಒಂದು ಕಾಲಘಟ್ಟದಲ್ಲಿ ವಿಧವೆಯರನ್ನು ಎಲ್ಲದರಿಂದಲೂ ದೂರವಿಡುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ವಿಧವೆಯವರನ್ನು ಕೆಳಮಟ್ಟದಲ್ಲಿ ಕಾಣುವ ಮನಸ್ಥಿತಿಗಳು ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಹೀಗಾಗಿ ವಿಧವಾ ಸ್ತ್ರಿಯರು ವರಮಹಾಲಕ್ಷ್ಮಿ ಪೂಜೆಯಲ್ಲಿ ಪಾಲ್ಗೊಳ್ಳುವುದು ತಪ್ಪಲ್ಲ .

ಶ್ರಾವಣ ಮಾಸದ ಕೊನೆಯ ಶುಕ್ರವಾರದ ದಿನ ವರಮಹಾಲಕ್ಷ್ಮಿ ಪೂಜೆ ಮಾಡುವ ಬಗ್ಗೆ ಶಾಸ್ತ್ರದಲ್ಲಿ ಉಲ್ಲೇಖವಿದೆ. ಲಕ್ಷ್ಮಿ ಪೂಜೆ ಮಾಡುವವರಿಗೆ ಅಷ್ಟ ಐಶ್ವರ್ಯವನ್ನು ಲಕ್ಷ್ಮಿ ಅನುಗ್ರಹಿಸುತ್ತಾಳೆ. ಹೀಗಾಗಿ ಹುಡುಗಿಯರು, ಮಕ್ಕಳು, ಸುಮಂಗಲಿಯರು ಹಾಗೂ ವಿಧವಾ ಸ್ತ್ರೀಯರು ಈ ಪೂಜೆಯನ್ನು ಮಾಡಬಹುದು. ಇನ್ನು ಪ್ರತಿಯೊಬ್ಬ ಸ್ತ್ರೀಯರು ಹುಟ್ಟಿದಾಗಿನಿಂದ ಅರಶಿನ, ಕುಂಕುಮ, ಹೂವಿನ ಅಧಿಕಾರವನ್ನು ಪಡೆದುಕೊಂಡಿದ್ದಾಳೆ. ಹೀಗಾಗಿ ವಿಧವೆಯರು ಈ ವ್ರತದಲ್ಲಿ ಭಾಗಿಯಾಗುವುದು, ಅರಶಿನ ಕುಂಕುಮ ಸ್ವೀಕರಿಸುವುದು ತಪ್ಪಲ್ಲ. ಪ್ರತಿಯೊಬ್ಬ ಪೂಜೆಯ ಹಿಂದೆ ಇರುವುದು ಶ್ರದ್ಧಾ ಭಕ್ತಿ ಮಾತ್ರ.

Related Posts

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಹಣದುಬ್ಬರ ಹಾಗೂ ಬೆಲೆ ಏರಿಕೆಯಿಂದ ತತ್ತರಿಸಿರುವ ಸಾಮಾನ್ಯ ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್ ನೀಡಿವೆ. ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದ ಬಿಸಿ ಇದೀಗ ನೇರವಾಗಿ ಭಾರತೀಯರ ಜೇಬಿಗೆ ತಟ್ಟಿದೆ. ನವದೆಹಲಿ: ಹಣದುಬ್ಬರ ಹಾಗೂ ಬೆಲೆ ಏರಿಕೆಯಿಂದ…

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

(ಕೆಎಂಶಿ)-ಉನ್ನತ ‘ಶಿಕ್ಷಣ ವಲಯದಲ್ಲಿ ಸಾಮಾಜಿಕ ನ್ಯಾಯ ಕಲ್ಪಿ ಸಲು, ರಾಜ್ಯದ ಎಲ್ಲ ಸರ್ಕಾರಿ, ಖಾಸಗಿ ಮತ್ತು ಡೀಮ್ಸ್ ವಿಶ್ವವಿದ್ಯಾಲಯಗಳಲ್ಲಿ ಜಾತಿ ಆಧಾರಿತ ದೌರ್ಜನ್ಯ ತಡೆಯಲು ರೋಹಿತ್ ವೇಮುಲ ಕಾಯಿದೆ ಜಾರಿಗೆ ತರಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ…

You Missed

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

ರಾಧಿಕಾ ಪಂಡಿತ್ ಜೊತೆ ಹೊಸ ಲುಕ್‌ನಲ್ಲಿ ‘ರಾಕಿಂಗ್’ ಸ್ಟಾರ್!

ರಾಧಿಕಾ ಪಂಡಿತ್ ಜೊತೆ ಹೊಸ ಲುಕ್‌ನಲ್ಲಿ ‘ರಾಕಿಂಗ್’ ಸ್ಟಾರ್!

ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ನಿವಾಸ ಮ್ಯೂಸಿಯಂ ಆಗಲಿದೆ

ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ನಿವಾಸ ಮ್ಯೂಸಿಯಂ ಆಗಲಿದೆ

ಸಚಿನ್ ತೆಂಡೂಲ್ಕರ್ ಸೊಸೆ ಎಷ್ಟು ಶ್ರೀಮಂತೆ ಗೊತ್ತಾ?

ಸಚಿನ್ ತೆಂಡೂಲ್ಕರ್ ಸೊಸೆ ಎಷ್ಟು ಶ್ರೀಮಂತೆ ಗೊತ್ತಾ?

ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಮೇಲೆ ಪೊಲೀಸ್ ಕಣ್ಣು!

ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಮೇಲೆ ಪೊಲೀಸ್ ಕಣ್ಣು!