ಅರಮನೆ ನಗರಿಯಲ್ಲಿ ರಸ್ತೆ ಅಗಲೀಕರಣಕ್ಕಾಗಿ ಮರಗಳ ಮಾರಣಹೋಮ.

ಮೈಸೂರು :-  ರಸ್ತೆ ಅಗಲೀಕರಣಕ್ಕಾಗಿ ಮೈಸೂರಿನ ಹೈದರಾಲಿ ರಸ್ತೆಯ ಕಾಳಿಕಾಂಬ ದೇವ ಸ್ಥಾನದಿಂದ ಎಸ್ ಪಿ ಕಚೇರಿ ವೃತ್ತದವರೆಗೆ ಹಸಿರಿನಿಂದ ಕಂಗೊಳಿಸುತ್ತಿದ್ದ 40 ಮರ ಗಳನ್ನು ಧರಾಶಾಹಿಗೊಳಿಸಲಾಗಿದೆ. ಮರ ಬೆಳೆಸಿ ಪರಿಸರ ಉಳಿಸಿ ಎಂಬ ಸಂದೇಶ ಸಾರುವ ಅರಣ್ಯ ಇಲಾಖೆಯೇ ಮರಗಳ ಹನನಕ್ಕೆ ಒಪ್ಪಿಗೆ ಮುದ್ರೆ ಒತ್ತಿದೆ. ನಗರದ ಮಹದೇವಪುರ ರಸ್ತೆಯನ್ನು ಹೈದರಾಲಿ ರಸ್ತೆಯ ಕಾಳಿಕಾಂಬ ದೇವ ಸ್ಥಾನವರೆಗೆ ಈಗಾಗಲೇ ಜೋಡಿ ರಸ್ತೆ ಯಾಗಿ ನಿರ್ಮಾಣ ಮಾಡಲಾಗಿದೆ.
ಆದರೆ ಈಗ ಕಾಳಿಕಾಂಬ ದೇವಸ್ಥಾನ ದಿಂದ ಎಸ್‌ಪಿ ಕಚೇರಿ ವೃತ್ತದವರೆಗೆ 100 ಆಡಿಯ ಜೋಡಿ ರಸ್ತೆ ನಿರ್ಮಿಸಲು ಮೈಸೂರು ನಗರ ಪಾಲಿಕೆ ಯೋಜನೆ ರೂಪಿಸಿದೆ. ಈ ಹಿನ್ನೆಲೆ ಕಾಳಿಕಾಂಬ ದೇವಸ್ಥಾನ ದಿಂದ ಎಸ್‌ಪಿ ಕಚೇರಿ ವೃತ್ತದವರೆಗೆ ಇರುವ ಪೆಲ್ಲೋಪೋರಮ್ ಎಂಬ 40 ಮರ ಗಳನ್ನು ಇಂದು ಮುಂಜಾನೆ ಉರುಳಿಸ ಲಾಗಿದೆ. ಮರಗಳನ್ನು ಕತ್ತರಿಸಿದ ನಂತರ ಅವುಗಳನ್ನು ತೆರವುಗೊಳಿಸಿ ಮಾರಾಟ ಮಾಡಿಕೊಳ್ಳಲು ಅರಣ್ಯ ಇಲಾಖೆ ಸೈಯದ್ ಮೊಹಮ್ಮದ್ ಎಂಬಾತನಿಗೆ ಗುತ್ತಿಗೆ ನೀಡಿದೆ.

ರಸ್ತೆ ಅಗಲೀಕರಣ ಮಾಡಲು ಇದೇನು ಬ್ಲ್ಯಾಕ್‌ ಸ್ಪಾಟ್ ಅಲ್ಲ
ಅರಣ್ಯ ಇಲಾಖೆಗೆ 2.90 ಲಕ್ಷ ರೂಪಾಯಿ ಪಾವತಿ ಮಾಡಿರುವ ಸೈಯದ್ ಮೊಹ ಮ್ಮದ್ ಇಂದು ಮುಂಜಾನೆ ವೇಳೆಗೆ 40 ಮರಗಳ ಬುಡಕ್ಕೆ ಕೊಡಲಿ ಪೆಟ್ಟು ನೀಡಿದ್ದಾನೆ. ಮರ ಕತ್ತರಿಸುವ ಯಂತ್ರ ದಿಂದ ಕೇವಲ ಅರ್ಧ ಗಂಟೆಯಲ್ಲಿ ಎಲ್ಲಾ ಮರಗಳನ್ನು ಉರುಳಿಸಿದ್ದಾನೆ. ಮರ ಕತ್ತರಿಸುವಾಗ ಪರಿಸರವಾದಿ ಗಳು ಬಂದು ಅಡ್ಡಿ ಪಡಿಸುತ್ತಾರೆ ಎಂಬ ಮುಂದಾಲೋಚನೆಯಿಂದ ಮುಂಜಾನೆಯೇ ಎಲ್ಲಾ ಮರಗಳ ಬುಡಕ್ಕೆ ಕೊಡಲಿ ಪೆಟ್ಟು ನೀಡಲಾಗಿದೆ. ತರುವಾಯ ಕೆಳಗೆ ಬಿದ್ದ ಮರಗಳ ರೆಂಬೆ ಕೊಂಬೆಗಳನ್ನು ಹಂತ ಹಂತವಾಗಿ ಕತ್ತರಿಸಲಾಗಿದೆ.
ಸುಮಾರು 50 ವರ್ಷಗಳ ಇತಿಹಾಸ ವಿರುವ ಈ ಮರಗಳನ್ನು ಇಂದು ಕ್ಷಣ ಮಾತ್ರದಲ್ಲಿ ಕತ್ತರಿಸಲಾಗಿದೆ. ಒಂದು ಮರ ಬೆಳೆಯಲು ಹತ್ತಾರು ವರ್ಷಗಳು ಬೇಕು. ಆದರೆ ಇಂದು ಮರ ಕತ್ತರಿಸುವ ಯಂತ್ರ ದಿಂದ ಕ್ಷಣ ಮಾತ್ರದಲ್ಲಿ 40 ವಕ್ಷಗಳನ್ನು ಹೊಡೆದು ಉರುಳಿಸಲಾಯಿತು. ಮತ್ತೆ 5 ಮರಗಳನ್ನು ಕತ್ತರಿಸಲು ಅರಣ್ಯ ಇಲಾಖೆ ಸೂಚನೆ ನೀಡಿದೆ. ಆದರೆ 5 ಮರಗಳು ಎಲ್ಲಿವೆ ಎಂಬ ಬಗ್ಗೆ ಇನ್ನು ಮಾಹಿತಿ ನೀಡಿಲ್ಲ ಎಂದು ಸೈಯದ್ ಮೊಹ ಮ್ಮದ್ ‘ಮೈಸೂರು ಮಿತ್ರ’ಗೆ ತಿಳಿಸಿದರು.

ಬೇಸಿಗೆ ಬಿಸಿಲಿನಲ್ಲಿ ಸುಸ್ತಾದಾಗ ಈ ಮರಗಳ ಕೆಳಗೆ ನಿಲ್ಲುತ್ತಿದ್ದ ಜನರು ದಣಿ ವಾರಿಸಿಕೊಳ್ಳುತ್ತಿದ್ದರು. ಈ ಮರಗಳ ತಂಪಾದ ವಾತಾವರಣ ಜನರ ಮನಸಿಗೆ ಮುದ ನೀಡುತ್ತಿತ್ತು. ಆದರೆ ಈಗ ರಸ್ತೆಗೆ ಹಸಿರು ಹೊದಿಕೆ ಹೊದಿಸಿದ್ದ ಮರಗಳ ಮಾರಣ ಹೋಮ ನಡೆದಿದೆ. ಮರಗಳಿ ಲ್ಲದೆ ಈಗ ಇಡೀ ರಸ್ತೆ ಬೋಳು ಬೋಳಾಗಿದೆ. ಒಂದು ಮರ ಕತ್ತರಿಸಿದರೆ 10 ಸಸಿ ನೆಡಬೇಕು. ಅಲ್ಲದೆ ಮರ ಕತ್ತರಿಸಿದವರೆ ಆ ಸಸಿಯನ್ನು 5 ವರ್ಷ ನಿರ್ವಹಣೆ ಮಾಡಬೇಕು. ಇದಕ್ಕಾಗಿ ಠೇವಣಿ ಹಣ ಇಡಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಪೀಠ ಹೇಳಿದೆ. ಅದರಂತೆ ನಗರ ಪಾಲಿಕೆ ಈಗ ಠೇವಣಿ ಹಣ ಇಟ್ಟು ಗಿಡ ನೆಡಲು ಮುಂದಾಗಿದೆ.
ಮೈಸೂರಿನಲ್ಲಿ ಈಗಾಗಲೇ ಸಾವಿರಾರು ಮರಗಳನ್ನು ಕಡಿದಿದ್ದಾರೆ. ರಾಷ್ಟ್ರೀಯ ಹಸಿರು ನ್ಯಾಯಪೀಠದ ಆದೇಶ ಪಾಲಿಸಿದ್ದರೆ ಇಂದು ಲಕ್ಷಾಂತರ ಮರಗಳು ಬೆಳೆಯಬೇಕಿತ್ತು. ಆದರೆ ಮರ ಕಡಿದರೆ ಸಸಿ ನೆಡಬೇಕೆಂಬ ಕಾನೂನು ನಿಯಮವನ್ನು ಅರಣ್ಯ ಇಲಾಖೆ ಈ ತನಕ ಪಾಲಿಸಿರುವ ನಿದರ್ಶನವಿಲ್ಲ.

Related Posts

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ರಾಜ್ಯದಲ್ಲಿ ಸೆಪ್ಟೆಂಬರ್ 21ರಿಂದ ಮೂರು ದಿನಗಳ ಕಾಲ ವಿಶೇಷ ವಿಧಾನಮಂಡಲ ಅಧಿವೇಶನ ನಡೆಸಲು ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಸೆ. 21ರಿಂದ ಸೆ.…

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಗುಂಡ್ಲುಪೇಟೆ ಪಟ್ಟಣದ ಇಂದಿರಾ ಕ್ಯಾಂಟೀನ್‌ಗೆ ಸೋಮವಾರ ಬೆಳಿಗ್ಗೆ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ ಆಹಾರದ ಶುಚಿತ್ವ, ಗುಣಮಟ್ಟ ಹಾಗೂ ಕುಡಿಯುವ ನೀರಿನ ಪೂರೈಕೆಯನ್ನು ಕೂಲಂಕಷವಾಗಿ ಪರಿಶೀಲಿಸಿತು. ಬಡವರು ಮತ್ತು ಶ್ರಮಿಕರಿಗೆ ಪೌಷ್ಟಿಕ ಹಾಗೂ ಶುಚಿ-ರುಚಿಯಾದ ಆಹಾರ ದೊರೆಯಬೇಕು ಎಂಬ ಶಾಸಕರ…

You Missed

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!