CIRIL ನ ಹೊಸ ವರದಿಯ ಪ್ರಕಾರ, ಅಂದರೆ ಸೈಬರ್ ರಿಸರ್ಚ್ ಮತ್ತು ಇಂಟೆಲಿಜೆನ್ಸ್ ಲ್ಯಾಬ್ಸ್, ಗೂಗಲ್ ಪ್ಲೇ ಸ್ಟೋರ್ ನಲ್ಲಿ 20 ಕ್ಕೂ ಹೆಚ್ಚು ಅಪಾಯಕಾರಿ ಕ್ರಿಪ್ಟೋಕರೆನ್ಸಿ ವ್ಯಾಲೆಟ್ ಆಪ್ ಗಳನ್ನು ಗುರುತಿಸಲಾಗಿದೆ. ಈ ಆಪ್ ಗಳು ವ್ಯಾಲೆಟ್ ರಿಕವರಿ ಮುಂತಾದ ಮಾಹಿತಿಯನ್ನು ಕದಿಯುವ ಮೂಲಕ ಬಳಕೆದಾರರ ಸಂಪೂರ್ಣ ಖಾತೆಯನ್ನು ಹ್ಯಾಕ್ ಮಾಡಬಹುದು.ಹಾಗಾಗಿ CIRIL ಈ 20 ಆಪ್ ಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಬಳಕೆದಾರರು ಅವುಗಳನ್ನು ತಕ್ಷಣ ಡಿಲೀಟ್ ಅಥವಾ ಅನ್ಇನ್ಸ್ಟಾಲ್ ಮಾಡಲು ಕೇಳಿಕೊಂಡಿದೆ. ಬಿಡುಗಡೆ ಮಾಡಿರುವ 20 ಅಪ್ಲಿಕೇಶನ್ ಗಳು ಯಾವುವೆಂದರೆ,ಸೂಟ್ ವಾಲೆಟ್,ಶಿಸ್ವಾಪ್ ,ರೇಡಿಯಂ, ಹೈಪರ್ಲಿಕ್ವಿಡ್, ಬುಲ್ಎಕ್ಸ್ ಕ್ರಿಪ್ಟೋ, ಪ್ಯಾನ್ಕೇಕ್ಸ್ವಾಪ್, ಓಪನ್ ಓಷನ್ ಎಕ್ಸ್ಚೇಂಜ್, ಸುಶಿಸ್ವಾಪ್, ಮೀಟೋರಾ ಎಕ್ಸ್ಚೇಂಜ್, ಬುಲ್ಎಕ್ಸ್ ಕ್ರಿಪ್ಟೋ, ಪ್ಯಾನ್ಕೇಕ್ಸ್ವಾಪ್, ಹಾರ್ವೆಸ್ಟ್ ಫೈನಾನ್ಸ್ ಬ್ಲಾಗ್.ಈ ರೀತಿಯ ಅಪ್ಲಿಕೇಶನ್ಗಳು ನಿಮ್ಮ ಮೊಬೈಲ್ ನಲ್ಲಿದ್ದರೆ ತಕ್ಷಣವೇ ಡಿಲೀಟ್ ಮಾಡಿ.

ಈ ಮೇಲಿನ ಅಪ್ಲಿಕೇಶನ್ಗಳನ್ನು ಡಿಲೀಟ್ ಮಾಡಿದ ನಂತರ ನೀವು ಮಾಡಬೇಕಾದ ಕೆಲಸಗಳೆಂದರೆ,
*ಅಪ್ಲಿಕೇಶನ್ಗಳನ್ನು ಅಳಿಸಿದ ನಂತರ, ನಿಮ್ಮ ಫೋನ್ನಲ್ಲಿ ಟು ಸ್ಟೆಪ್ ವೆರಿಫಿಕೇಷನ್ ಆನ್ ಮಾಡಬೇಕು.
*ಯಾವುದೇ ಅಪರಿಚಿತ ಲಿಂಕ್ ಅಥವಾ ಸಂದೇಶದ ಮೂಲಕ ಅಪ್ಲಿಕೇಶನ್ಗಳನ್ನು ಎಂದಿಗೂ ಡೌನ್ಲೋಡ್ ಮಾಡಬೇಡಿ.
*ಅಧಿಕೃತ ವೆಬ್ಸೈಟ್ ಅಥವಾ ಗೂಗಲ್ ಪ್ಲೇ ಸ್ಟೋರ್ನಿಂದ ಮಾತ್ರ ಅಪ್ಲಿಕೇಶನ್ಗಳನ್ನು ಡೌನ್ಲೋಡ್ ಮಾಡಿ.
*ಇದಲ್ಲದೆ, ಕಾಲಕಾಲಕ್ಕೆ ವ್ಯಾಲೆಟ್ ಅನ್ನು ಮೇಲ್ವಿಚಾರಣೆ ಮಾಡುತ್ತಿರಿ.