ಆಪಲ್ ಕಂಪನಿ ಮಾಲೀಕ ಸ್ಟೀವ್ ಜಾಬ್, ಪತ್ನಿ ಲಾರೆನ್, ಮಹಾಮೇಳದಲ್ಲಿ ಭಾಗಿ.

ಪ್ರಯಾಗ್‌ರಾಜ್, ಜ.12- ಉತ್ತರ ಪ್ರದೇಶದ ಧಾರ್ಮಿಕ ನಗರವಾದ ಪ್ರಯಾಗ ರಾಜ್‌ನಲ್ಲಿ ನಡೆಯಲಿರುವ ಮಹಾಕುಂಭ ಮೇಳಕ್ಕೆ ಕೌಂಟ್‌ಡೌನ್ ಶುರುವಾಗಿದೆ.

ಪ್ರಯಾಗ್‌ರಾಜ್ ನಲ್ಲಿ ಲಕ್ಷಾಂತರ ಜನರ ಸಮ್ಮುಖದಲ್ಲಿ . ಮಹಾ ಕುಂಭಮೇಳ ನಡೆಯಲಿದೆ. ಇದೀಗ ಮಹಾ ಕುಂಭಮೇಳದಲ್ಲಿ ವಿಶೇಷ ಸಂಗತಿ ಎಂದರೆ, ಜಗತ್ಪಸಿದ್ದ ಆಪಲ್ ಕಂಪನಿ ಮಾಲೀಕ ಸ್ಟೀವ್ ಜಾಬ್ ಅವರ ಪತ್ನಿ ‘ಲಾರೆನ್ ಮಹಾ ಕುಂಭಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ. ಅವರು ಕಲ್ಪವಾಸ ವ್ರತ ಮಾಡಲಿದ್ದಾರೆ. ಕುಂಭಮೇಳದ ಜಾಗಕ್ಕೆ ತಲುಪುವ ಮೊದಲೇ ಕೇಸರಿ ಬಣ್ಣದ ಬಟ್ಟೆಗಳನ್ನು ಧರಿಸಿದ ಲಾರೆನ್ ಅವರು ತನ್ನ ಹೆಸರನ್ನು ಸಹ ಬದಲಾಯಿಸಿಕೊಂಡಿದ್ದು, ಗುರು ನಿರಂಜನಿ ಪೀಠಾಧೀಶ್ವರ ಮಹಂತ್ ಕೈಲಾಶಾನಂದ ಗಿರಿ ಅವರಿಗೆ ತಮ್ಮ ಗೋತ್ರವನ್ನು ನೀಡಿದ ಬಳಿಕ ಲಾರೆನ್‌ಗೆ ಅವರು ಕಮಲಾ ಎಂದು ಹೆಸರಿಟ್ಟರು. ನಂತರ ಆಪಲ್ ಕಂಪನಿ ಮಾಲೀಕ ಸ್ಟೀವ್ ಜಾಬ್ ಅವರ ಪತ್ನಿ ಲಾರೆನ್ ಪಾಶ್ಚಿಮಾತ್ಯ ಉಡುಗೆಯ ಬದಲು ಸನ್ಯಾಸಿ ನಿಲುವಂಗಿಯನ್ನು ಧರಿಸಿರುವುದು ಅಚ್ಚರಿ ಮೂಡಿಸಿದೆ.
ಪ್ರಯಾಗರಾಜ್‌ನಲ್ಲಿ ನಡೆಯುವ ಮಹಾಕುಂಭಮೇಳದಲ್ಲಿ ಲಾರೆನ್ ಅವರು ತಮ್ಮ ಹೆಸರನ್ನು ಕಮಲಾ ಎಂದು ಬದಲಾಯಿಸಿಕೊಳ್ಳುವ ಮೂಲಕ ಸನಾತನ ಧರ್ಮದ ಆಚರಣೆಗಳನ್ನು ಅರ್ಥೈಸಿಕೊಳ್ಳಲು ಮುಂದಾಗಿದ್ದಾರೆ. ಅವರು ಮಹಾಕುಂಭಮೇಳದ ಸಮಯ ದಲ್ಲಿ ಅಲ್ಲಿ ನಡೆಯುವ ಕಥೆಗಳು ಮತ್ತು ಪ್ರವಚನಗಳಲ್ಲಿ ಭಾಗವಹಿಸುತ್ತಾರೆ ಎಂದು ತಿಳಿದು ಬಂದಿದೆ.

ಸ್ವಾಮಿ ಕೈಲಾಶಾ ನಂದ ಗಿರಿ ಅವರ ಪ್ರಕಾರ ಲಾರೆನ್ ಜಾಬ್ ಸನಾತನ ಧರ್ಮದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ ಅವರು ಕೈಲಾಶಾನಂದ ಗಿರಿ ಅವರನ್ನು ತನ್ನ ತಂದೆ ಎಂದು ಪರಿಗಣಿಸಿದ್ದಾರಂತೆ. ಸ್ವಾಮಿ ಕೈಲಾಶಾನಂದ ಗಿರಿ ಅವರಿಗೆ ತಮ್ಮ ಗೋತ್ರವನ್ನು ನೀಡಿದ ಲಾರೆನ್ ಅವರು ಪ್ರಸ್ತುತ ತಮ್ಮ ತಂಡದೊಂದಿಗೆ ವಾರಣಾಸಿಯಲ್ಲಿ ನೆಲೆಸಿದ್ದಾರೆ. ಲಾರೆನ್ ಪೊವೆಲ್ ಜ.13 ರಂದು ಕಾಶಿಯಿಂದ ಪ್ರಯಾಗರಾಜ್‌ಗೆ ತೆರಳಲಿದ್ದಾರೆ. ಮಹಾಕುಂಭದಲ್ಲಿ ಶ್ರೀ ನಿರಂಜನಿ ಅಖಾರದ ಆಚಾರ್ಯ ಮಹಾಮಂಡಲೇಶ್ವರರು ಸ್ವಾಮಿ ಕೈಲಾಶಾನಂದ ಗಿರಿಯ ಶಿಬಿರದಲ್ಲಿ ತಂಗಲಿದ್ದಾರೆ. 10 ದಿನಗಳ ಕಾಲ ಕಲ್ಪವಾಸ ವ್ರತವನ್ನು ಆಚರಿಸುತ್ತಾರೆ. ಋಷಿಮುನಿಗಳ ಸಹವಾಸದಲ್ಲಿ ಇದ್ದುಕೊಂಡು ಸನಾತನ, ಆಧ್ಯಾತ್ಮಿಕತೆ ಮತ್ತು ಭಾರತೀಯ ಸಂಸ್ಕೃತಿಯನ್ನು ಲಾರೆನ್ ಕಲಿಯಲಿದ್ದಾರೆ ಎಂದು ತಿಳಿದು ಬಂದಿದೆ.
ಲಾರೆನ್ ಅವರ ಭೇಟಿಯ ಬಗ್ಗೆ ಆಧ್ಯಾತ್ಮಿಕ ಗುರು ಸ್ವಾಮಿ ಕೈಲಾಶಾನಂದ ಗಿರಿ ಮಹಾರಾಜ್ ಅವರು, ಕಾಶಿ ತಲುಪಿದ ನಂತರ ಲಾರೆನ್ ಜಾಬ್, ಬಾಬಾ ವಿಶ್ವನಾಥರನ್ನು ಭೇಟಿ ಮಾಡಲು ಹೋದರು. ಈ ಸಮಯದಲ್ಲಿ ಅವರು ಬಾಬಾನನ್ನು ನೋಡುತ್ತಲೇ ಇದ್ದರು. ನಂತರ ಅವರಿಗೆ ಬಾಬಾ ವಿಶ್ವನಾಥ್ ಇರುವ ಸ್ಥಳದ ಬಗ್ಗೆ ಮಾಹಿತಿ ನೀಡಲಾಯಿತು. ಲಾರೆನ್ ಗರ್ಭಗುಡಿಯ ಹೊರಗಿನಿಂದ ಬಾಬಾರ ಆಶೀರ್ವಾದ ಪಡೆದರು. ಸನಾತನ ಧರ್ಮದಲ್ಲಿ ಹಿಂದೂಯೇತರರು ಶಿವಲಿಂಗವನ್ನು ಮುಟ್ಟುವುದಿಲ್ಲ. ಎಂಬುದನ್ನು ಗಮನದಲ್ಲಿಟ್ಟುಕೊಂಡು ಹೊರಗಿನಿಂದ ದರ್ಶನ ಪಡೆದರು ಎಂದು ಹೇಳಿದರು. ಸ್ಟೀವ್ ಜಾಬ್ ಪ್ರಸಿದ್ದ ಆಪಲ್ ಕಂಪನಿಯ ಸಹ-ಸಂಸ್ಥಾಪಕರಾಗಿದ್ದಾರೆ. ಅವರು ಆಧ್ಯಾತ್ಮಿಕತೆಯಲ್ಲಿ ಆಳವಾದ ಆಸಕ್ತಿಯನ್ನು ಹೊಂದಿದ್ದರು. ಪತ್ನಿ ಲಾರೆನ್ ಕೂಡ ತನ್ನ ದಿವಂಗತ ಪತಿಯಂತೆ ಆಧ್ಯಾತ್ಮಿಕತೆಯನ್ನು ನಂಬುತ್ತಾರೆ. ಹೀಗಾಗಿ, ಅವರು ಸನಾತನ ಧರ್ಮವನ್ನು ಅರ್ಥಮಾಡಿಕೊಳ್ಳಲು ಮಹಾಕುಂಭಕ್ಕೆ ಬಂದಿದ್ದಾರೆ.

Related Posts

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ರಾಜ್ಯದಲ್ಲಿ ಸೆಪ್ಟೆಂಬರ್ 21ರಿಂದ ಮೂರು ದಿನಗಳ ಕಾಲ ವಿಶೇಷ ವಿಧಾನಮಂಡಲ ಅಧಿವೇಶನ ನಡೆಸಲು ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಸೆ. 21ರಿಂದ ಸೆ.…

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಗುಂಡ್ಲುಪೇಟೆ ಪಟ್ಟಣದ ಇಂದಿರಾ ಕ್ಯಾಂಟೀನ್‌ಗೆ ಸೋಮವಾರ ಬೆಳಿಗ್ಗೆ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ ಆಹಾರದ ಶುಚಿತ್ವ, ಗುಣಮಟ್ಟ ಹಾಗೂ ಕುಡಿಯುವ ನೀರಿನ ಪೂರೈಕೆಯನ್ನು ಕೂಲಂಕಷವಾಗಿ ಪರಿಶೀಲಿಸಿತು. ಬಡವರು ಮತ್ತು ಶ್ರಮಿಕರಿಗೆ ಪೌಷ್ಟಿಕ ಹಾಗೂ ಶುಚಿ-ರುಚಿಯಾದ ಆಹಾರ ದೊರೆಯಬೇಕು ಎಂಬ ಶಾಸಕರ…

You Missed

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!