ಕಲ್ಲಿನಿಂದ ನ್ಯಾಚುರಲ್ ಮೆಹಂದಿ ರೆಡಿ ಮಾಡಿದ ಯುವತಿ ; ವೈರಲ್ ಆಯ್ತು ವಿಡಿಯೋ….

ಸಾಮಾನ್ಯವಾಗಿ ಗೋರಂಟಿ ಎಲೆಗಳಿಂದ ಮೆಹಂದಿಯನ್ನು ತಯಾರು ಮಾಡುತ್ತಾರೆ ಅಲ್ವಾ. ಅದು ಕೈಗೆ ಹಾಕಿದಾಗ ಗಾಢ ಬಣ್ಣ ಬರಲಿ ಎಂದು ಅದಕ್ಕೆ ಒಂದಷ್ಟು ಕೆಮಿಕಲ್ ಉತ್ಪನ್ನಗಳನ್ನು ಕೂಡಾ ಹಾಕ್ತಾರೆ. ಆದ್ರೆ ಇಲ್ಲೊಬ್ಬಳು ಯುವತಿ ಕಲ್ಲಿನಿಂದ ನ್ಯಾಚುರಲ್ ಆಗಿರುವಂತಹ ಮೆಹಂದಿಯನ್ನು ತಯಾರಿಸಿದ್ದಾಳೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗಿತ್ತಿದ್ದು, ಅರೇ ಕಲ್ಲಿನಿಂದ ಇದು ಹೇಗಪ್ಪಾ ಮೆಹಂದಿ ರೆಡಿ ಮಾಡೋಕೆ ಸಾಧ್ಯ ಎಂದು ನೆಟ್ಟಿಗರು ತಲೆ ಕೆಡಿಸಿಕೊಂಡಿದ್ದಾರೆ. ಕೈಗಳಿಗೆ ಮೆಹಂದಿ ಹಚ್ಚುವುದೆಂದರೆ ಹೆಂಗಳೆಯರಿಗೆ ಪಂಚಪ್ರಾಣ. ಮೆಹಂದಿಯನ್ನು ಮಂಗಳಕರ ಎಂದು ಪರಿಗಣಿಸಿರುವ ಕಾರಣ ಹೆಚ್ಚಿನ ಮಹಿಳೆಯರು ಶುಭ ಕಾರ್ಯಗಳ ಸಂದರ್ಭದಲ್ಲಿ ಕೈತುಂಬಾ ಮೆಹಂದಿ ಹಾಕಿಸಿಕೊಳ್ಳುತ್ತಾರೆ. ಸಾಮಾನ್ಯವಾಗಿ ಈ ಮೆಹಂದಿಗಳನ್ನು ಗೋರಂಟಿ ಎಲೆಗಳಿಂದ ರೆಡಿ ಮಾಡ್ತಾರೆ. ಜೊತೆಗೆ ಕೈಗೆ ಹಾಕಿದ ಬಳಿಕ ಗೋರಂಟಿ ಬಣ್ಣ ಗಾಢವಾಗಿ ಮೂಡಲಿ ಎಂದು ಒಂದಷ್ಟು ಕೆಮಿಕಲ್ಗಳನ್ನು ಕೂಡಾ ಸೇರಿಸ್ತಾರೆ. ಹೀಗಿರುವಾಗ ಇಲ್ಲೊಬ್ಬಳು ರೂಬಿ ಠಾಕೂರ್ ಎಂಬಾಕೆ ಕೆಮಿಕಲ್ ಫ್ರೀ ಮೆಹಂದಿಯ ಬಗ್ಗೆ ತಿಳಿಸಿಕೊಟ್ಟಿದ್ದಾಳೆ. ಹೌದು ಹಿಮಾಚಲ ಪ್ರದೇಶದ ಆಕೆ ಅಲ್ಲಿನ ಪಹಾಡಿ ಸಂಪ್ರದಾಯದಂತೆ ಕಲ್ಲುಗಳಲ್ಲಿ ಅಂಟಿರುವ ಪಾಚಿಯಂತಹ ವಸ್ತುವಿನಿಂದ ನೈಸರ್ಗಿಕ ಮೆಹಂದಿಯನ್ನು ತಯಾರಿಸಿದ್ದು, ಈ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ.

ಕಲ್ಲಿನಿಂದ ನ್ಯಾಚುರಲ್ ಮೆಹಂದಿ ರೆಡಿ ಮಾಡಿದ ಯುವತಿ: ಮೆಹಂದಿಯನ್ನು ಗೋರಂಟಿ ಎಲೆಗಳಿಂದ ತಯಾರು ಮಾಡ್ತಾರೆ ಅನ್ನೋ ವಿಚಾರ ಬಹುತೇಕ ನಮಗೆಲ್ಲರಿಗೂ ಗೊತ್ತೇ ಇದೆ. ಹೀಗಿರುವಾಗ ಇಲ್ಲೊಬ್ಬಳು ಹಿಮಾಚಲ ಪ್ರದೇಶದ ಯುವತಿ ಕಲ್ಲಿನಿಂದ ನ್ಯಾಚುರಲ್ ಮೆಹಂದಿ ತೆಗೆಯುವುದು ಹೇಗೆಂಬುದನ್ನು ಹೇಳಿ ಕೊಟ್ಟಿದ್ದಾಳೆ. ಆಕೆ ಬಂಡೆ ಕಲ್ಲಿನಲ್ಲಿ ಅಂಟಿರುವಂತಹ ಪಾಚಿಯಂತಹ ವಸ್ತುವನ್ನು ತೆಗೆದು ಅದಕ್ಕೆ ಸ್ವಲ್ಪ ನೀರು ಹಾಕಿ ಚೆನ್ನಾಗಿ ಅರೆದು ಮೆಹಂದಿ ರೆಡಿ ಮಾಡಿ ಅದನ್ನು ಕೈಗೆ ಹಚ್ಚಿದ್ದಾಳೆ. ನಾಲ್ಕು ದಿನಗಳ ಹಿಂದೆ ಶೇರ್ ಮಾಡಲಾದ ಈ ವಿಡಿಯೋ 7.8 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದು ತುಂಬಾನೇ ಅದ್ಭುತವಾಗಿದೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಕಲ್ಲಿನಿಂದಲೂ ಮೆಹಂದಿ ತಯಾರಿಸಬಹುದೆಂದು ಇವತ್ತೇ ಗೊತ್ತಾಗಿದ್ದುʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಬಾಲ್ಯದಲ್ಲಿ ನಾವು ಕೂಡಾ ಈ ಮೆಹಂದಿಯನ್ನು ಹಾಕಿದ್ದೇವೆʼ ಎಂದು ಹೇಳಿದ್ದಾರೆ. ಇನ್ನೋ ಅನೇಕರು ಇದು ಹೊಸ ವಿಷಯವೆಂದು ಆಶ್ಚರ್ಯಪಟ್ಟಿದ್ದಾರೆ.

Related Posts

ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ!

ಕ್ರೀಡೆ ಅಂದಾಗ ಅಲ್ಲಿ ಎದುರಾಳಿಗಳ ವಿರುದ್ಧ ಗೆಲ್ಲಲೇಬೇಕು ಎನ್ನುವ ಹಠ ಇದ್ದೇ ಇರುತ್ತದೆ. ಆದರೆ ಇಲ್ಲೊಂದು ಮ್ಯಾರಾಥಾನ್‌ನಲ್ಲಿ ಸೋಲು-ಗೆಲುವುಗಿಂತಲೂ ಮಾನವೀಯತೆ ಮುಖ್ಯ ಅನ್ನೋದನ್ನು ಇಬ್ಬರು ಯುವ ಕ್ರೀಡಾಪಟುಗಳು ತೋರಿಸಿಕೊಟ್ಟಿದ್ದಾರೆ‌. ತಮ್ಮ ವೈಯಕ್ತಿಕ ದಾಖಲೆಯನ್ನು ಬದಿಗಿಟ್ಟು ಸಂಕಷ್ಟದಲ್ಲಿದ್ದ ಸಹ ಕ್ರೀಡಾಪಟುವಿಗೆ ಸಹಾಯ ಮಾಡುವ…

ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ

ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 25 ರಿಂದ 28 ರೂಪಾಯಿಗಳಷ್ಟು ಹೆಚ್ಚಾಗಲಿದೆ ಎಂಬ ವದಂತಿಗಳು ಹರಡಿವೆ. ಆದರೆ, ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಈ ವರದಿಗಳನ್ನು ಅಧಿಕೃತವಾಗಿ…

You Missed

ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ!

ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ!

ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ

ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ದಾಖಲೆ ಬರೆದ ವಿದ್ಯಾರ್ಥಿಗಳು, 7 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ!

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ದಾಖಲೆ ಬರೆದ ವಿದ್ಯಾರ್ಥಿಗಳು, 7 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ!

ಸಿ.ಟಿ. ರವಿ, ಪ್ರಧಾನಿ ಮೋದಿಯವರ ಕುರಿತಾದ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ಕಠಿಣವಾಗಿ ಖಂಡಿಸಿದ್ದಾರೆ.

ಸಿ.ಟಿ. ರವಿ, ಪ್ರಧಾನಿ ಮೋದಿಯವರ ಕುರಿತಾದ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ಕಠಿಣವಾಗಿ ಖಂಡಿಸಿದ್ದಾರೆ.

ಸೂರ್ಯವಂಶಿ, ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಬಾಲ್ಯದಿಂದಲೂ ಎದುರಿಸುತ್ತಾ ಬಂದಿರುವ ಜಾತಿ ತಾರತಮ್ಯ ಮತ್ತು ಬಣ್ಣದ ಅಸಮಾನತೆಯ ಬಗ್ಗೆ ಕಹಿ ಸತ್ಯಗಳನ್ನು ಹಂಚಿಕೊಂಡಿದ್ದಾರೆ.

ಸೂರ್ಯವಂಶಿ, ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಬಾಲ್ಯದಿಂದಲೂ ಎದುರಿಸುತ್ತಾ ಬಂದಿರುವ ಜಾತಿ ತಾರತಮ್ಯ ಮತ್ತು ಬಣ್ಣದ ಅಸಮಾನತೆಯ ಬಗ್ಗೆ ಕಹಿ ಸತ್ಯಗಳನ್ನು ಹಂಚಿಕೊಂಡಿದ್ದಾರೆ.

ನ್ಯಾಯಾಂಗದ ಮೇಲೆ ಭರವಸೆ ಮೂಡಿಸಿದ ಇತ್ತೀಚಿನ ಮಹತ್ವದ ತೀರ್ಪುಗಳು

ನ್ಯಾಯಾಂಗದ ಮೇಲೆ ಭರವಸೆ ಮೂಡಿಸಿದ ಇತ್ತೀಚಿನ ಮಹತ್ವದ ತೀರ್ಪುಗಳು