ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಹಲವು ತಿಂಗಳ ಕಾಲ ಜೈಲಿನಲ್ಲಿ ಇದ್ದ ದರ್ಶನ್ ಅವರಿಗೆ ತೀವ್ರವಾಗಿ ಬೆನ್ನುನೋವು ಕಾಣಿಸಿಕೊಂಡಿತು. ಈಗ ಹೊರ ಬಂದರೂ ಬೆನ್ನು ನೋವು ಮುಂದುವರಿದಿದೆ. ಅವರು ಇದರಿಂದ ಸಾಕಷ್ಟು ತೊಂದರೆ ಅನುಭವಿಸುತ್ತಾ ಇದ್ದಾರೆ. ದರ್ಶನ್ (Darshan) ಇನ್ನೂ ಸರಿಯಾಗಿ ರಿಕವರಿ ಆಗದ ಕಾರಣ ಶೂಟಿಂಗ್ನಲ್ಲೂ ಭಾಗಿ ಆಗಲು ಸಾಧ್ಯವಾಗುತ್ತಿಲ್ಲ. ಹೀಗಿರುವಾಗಲೇ ಅವರಿಗೆ ಅಭಿಮಾನಿಗಳಿಂದಲೇ ಸಮಸ್ಯೆ ಆಗುತ್ತಿದೆ. ಈ ಬಗ್ಗೆ ಅವರು ಓಪನ್ ಆಗಿ ಅಸಮಾಧಾನ ಹೊರಹಾಕಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ದರ್ಶನ್ ಅವರು ಎಲ್ಲೇ ತೆರಳಿದರೂ ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ಅವರ ಮನೆಯ ಹೊರಗೆ ನಿತ್ಯ ಸಾಕಷ್ಟು ಫ್ಯಾನ್ಸ್ ದರ್ಶನ್ನ ನೋಡಲು ಕಾತುರದಿಂದ ಕಾಯುತ್ತಾ ಇರುತ್ತಾರೆ. ಮೊದಲಾಗಿದ್ದರೆ ದರ್ಶನ್ ಅವರು ತಾಳ್ಮೆಯಿಂದ ಸೆಲ್ಫಿ ನೀಡುತ್ತಿದ್ದರು. ಅಭಿಮಾನಿಗಳನ್ನು ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಆದರೆ, ಈಗ ದರ್ಶನ್ ಅವರಿಗೆ ಬೆನ್ನು ನೋವಿನಿಂದ ಸಾಕಷ್ಟು ಸಮಸ್ಯೆ ಆಗುತ್ತಿದೆ. ಅವರಿಗೆ ಸರಿಯಾಗಿ ನಿಲ್ಲಲೂ ಸಾಧ್ಯವಾಗುತ್ತಿಲ್ಲ. ಆದರೆ ಇದನ್ನು ಫ್ಯಾನ್ಸ್ ಅರ್ಥಮಾಡಿಕೊಳ್ಳುತ್ತಿಲ್ಲ.





