ನಿಮಗೆ ಗೊತ್ತೇ? ಕರ್ನಲ್ ಸೋಫಿಯಾ ಖುರೇಷಿಯವರ ಮುತ್ತಜ್ಜಿ ರಾಣಿ ಲಕ್ಷ್ಮಿ ಬಾಯಿ ಜೊತೆ ಕೆಲಸ ಮಾಡಿದ್ದಾರಂತೆ….!?

ಕರ್ನಲ್ ಸೋಫಿಯಾ ಖುರೇಷಿ ಅವರ ಮುತ್ತಜ್ಜಿ ರಾಣಿ ಲಕ್ಷ್ಮಿ ಬಾಯಿ ಅವರೊಂದಿಗೆ ಕೆಲಸ ಮಾಡಿದ ಯೋಧರಾಗಿದ್ದರು ಎಂದು ಸ್ವತಹ ಕರ್ನಲ್ ಸೋಫಿಯಾ ಖುರೇಶಿ ಅವರೇ ಬಹಿರಂಗಪಡಿಸಿದ್ದಾರೆ.ಸೋಫಿಯಾ ಖುರೇಷಿಗೂ ಒಬ್ಬ ಸಹೋದರಿ ಇದ್ದಾರೆ , ಮತ್ತು ಆಕೆಯ ತಾಯಿ ಇಬ್ಬರು ಸಹೋದರಿಯರಲ್ಲಿ ಯಾರಾದರೂ ಒಬ್ಬರು ಸೈನ್ಯಕ್ಕೆ ಸೇರಬೇಕೆಂದು ಬಯಸಿದ್ದರು ಎಂದು ಹೇಳಿದ್ದಾರೆ. ಹಾಗೂ ಸೈನ್ಯದಲ್ಲಿ ಅವರ ಮನೆತನದವರ ಇತಿಹಾಸವನ್ನು ಸಹ ಹಂಚಿಕೊಂಡಿದ್ದಾರೆ.

ಸೋಫಿಯಾ ಅವರ ಅಜ್ಜ ಕೂಡ ಸೈನ್ಯದಲ್ಲಿದ್ದರು, ಆದ್ದರಿಂದ ಅವರು ಮೂಲತಃ ಫೌಜಿ ಮಗುವಾಗಿದ್ದರು …ಹಾಗಿದ್ರೆ ಫೌಜಿ ಮಗು ,ಇದರ ಅರ್ಥ ಏನು ಗೊತ್ತಾ? “ಸೈನ್ಯದ ಮಗು” ಎಂದು ಹೇಳಲಾಗುತ್ತದೆ, ಇದು ಸಾಮಾನ್ಯವಾಗಿ ಭಾರತೀಯ ಸೇನೆಯಲ್ಲಿರುವ ಮಿಲಿಟರಿ ಸಿಬ್ಬಂದಿಯ ಮಕ್ಕಳನ್ನು ಉಲ್ಲೇಖಿಸುತ್ತದೆ. ಈ ಪದವು ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪೋಷಕರೊಂದಿಗೆ ಬೆಳೆದ ವ್ಯಕ್ತಿಗಳನ್ನು ವಿವರಿಸುತ್ತದೆ, ಇಂತಹ ಶಕ್ತಿಶಾಲಿ, ಸೈನ್ಯದ ಕುಟುಂಬದೊಂದಿಗೆ ಬೆಳೆದು ಬಂದ ಪ್ರೌಢಿಮೆ ಸೋಫಿಯಾ ಅವರಿಗೆ ಸಲ್ಲುತ್ತದೆ. ಅಲ್ಲದೆ ಆಪರೇಷನ್ ಸಿಂಧೂರ ದಲ್ಲಿ ತೆಗೆದುಕೊಂಡಿರುವ ನಿರ್ಧಾರ ಹಾಗೂ ಆದೇಶಗಳನ್ನು ಹೊರಡಿಸಿದ ವೈಖರಿ ಎಲ್ಲವನ್ನು ಗಮನಿಸಿದ ಪ್ರತಿಯೊಬ್ಬ ಭಾರತೀಯರು ಇವರನ್ನು ಆದರ್ಶವಾಗಿ ತೆಗೆದುಕೊಳ್ಳಲು ಯಾವುದೇ ಅನುಮಾನವಿಲ್ಲ.

“ವಯಂ ರಾಷ್ಟ್ರೇ ಜಾಗ್ರಯಂ” ಎಂದು ಅವರ ಅಜ್ಜ ಹೇಳುತ್ತಿದ್ದರಂತೆ. ಇದರ ಅರ್ಥ: ಪ್ರತಿಯೊಬ್ಬ ನಾಗರಿಕನು ಜಾಗರೂಕರಾಗಿರಬೇಕು ಮತ್ತು ತನ್ನ ದೇಶಕ್ಕಾಗಿ ನಿಲ್ಲಬೇಕು ಮತ್ತು ರಾಷ್ಟ್ರವನ್ನು ರಕ್ಷಿಸಬೇಕು ಎಂಬುವುದಾಗಿತ್ತು.

ಕರ್ನಲ್ ಸೋಫಿಯಾ ಖುರೇಶಿ ಅವರ ಈ ಮಾತುಗಳನ್ನು ಕೇಳಿಸಿಕೊಂಡ ಪ್ರತಿಯೊಬ್ಬರೂ ಇವರ ಯಶಸ್ಸು ಹಾಗೂ ದೇಶಭಕ್ತಿ ಅವರ ರಕ್ತ ಸಂಬಂಧದಲ್ಲೇ ಹರಿಯುತ್ತಿದೆ ಎಂದು ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

Related Posts

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

  ಹೃದಯವೇದ್ರಾವಕ ಘಟನೆಯೊಂದು ಹುಣಸೂರಿನಲ್ಲಿ ನಡೆದಿದೆ ಪತ್ನಿ ಮಕ್ಕಳನ್ನು ಹತ್ಯೆಗೈದು ಪತಿ ನೇಣಿಗೆ ಶರಣಾಗಿರುವ ಪ್ರಕರಣ ಹುಣಸೂರು ನಗರದ ನ್ಯೂ ಮಾರುತಿ ಬಡಾವಣೆಯಲ್ಲಿ ಘಟನೆ ನ್ಯೂ ಮಾರುತಿ ಬಡಾವಣೆಯ ಹರೀಶ್ 49, ಪತ್ನಿ ನಿಶ್ಚಿತ 36 ಮಕ್ಕಳಾದ ನೆಕ್ಸಾ 13 ರಕ್ಷಾ…

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

  ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ ! ಆದಿಚುಂಚನಗಿರಿ ಮಠದ ಶಿಕ್ಷಣ ಟ್ರಸ್ಟ್‌ಗೆ ಸೇರಿದ 100 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆರು ಎಕರೆ ಭೂಮಿ ಕಬಳಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆರೋಪದ…

You Missed

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!