ನೂತನ ವರ್ಷಕ್ಕೆ ಯೋಗನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಎರಡು ಲಕ್ಷ ತಿರುಪತಿ ಮಾದರಿಯ ಲಡ್ಡು ವಿತರಣೆ.

ನೂತನ ಕ್ರೈಸ್ತ ವರ್ಷಾರಂಭದ ಅಂಗವಾಗಿ ಜನವರಿ 01ರಂದು ಬೆಳಗ್ಗೆ 04.00 ಗಂಟೆಯಿಂದ ಪ್ರಾರಂಭಿಸಿ ಯೋಗಾನರಸಿಂಹಸ್ವಾಮಿಯವರಿಗೆ ವಿಶೇಷ ಅಲಂಕಾರ ಮತ್ತು “ಶ್ರೀರಂಗಂಕ್ಷೇತ್ರ” “ಮಧುರೈ ಕ್ಷೇತ್ರಗಳಿಂದ ತರಿಸಿರುವ ವಿಶೇಷ “ತೋಮಾಲೆ” ಮತ್ತು “ಸ್ವರ್ಣಪುಷ್ಪದಿಂದ ಶ್ರೀಸ್ವಾಮಿಗೆ “ಸಹಸ್ರನಾಮರ್ಚನೆ” ಮತ್ತು ದೇವಾಲಯದ ಉತ್ಸವ ಮೂರ್ತಿಯಾದ ಶ್ರೀಮಲಯಪ್ಪನ್ ಸ್ವಾಮಿ, ಪದ್ಮಾವತಿ ಮತ್ತು ಮಹಾಲಕ್ಷ್ಮಿ ದೇವರಿಗೆ ದೇವಾಲಯದ ಆವರಣದಲ್ಲಿ “ಏಕಾದಶ ಪ್ರಾಕಾರೋತ್ಸವ” ಹಾಗೂ ಇಪ್ಪತ್ತು ಕ್ವಿಂಟಾಲ್ ಪುಳಿಯೋಗರೆ ನಿವೇದನೆ” ಮತ್ತು ದೇವಾಲಯಕ್ಕೆ ಆಗಮಿಸುವ ಎಲ್ಲಾ ಭಕ್ತಾದಿಗಳಿಗೆ “ ಎರಡು ಲಕ್ಷ ತಿರುಪತಿ ಮಾದರಿಯ ಲಡ್ಡು ವಿತರಣಾ” ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ನಾಡೋಜ. ಪ್ರೊ. ಭಾಷ್ಯಂ ಸ್ವಾಮೀಜಿಯವರು ತಿಳಿಸಿದರು

ವಿಜಯನಗರದ ಯೋಗ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಪ್ರಾರಂಭದಲ್ಲಿ 1994ನೇ ಇಸವಿಯಲ್ಲಿ ಅಂದಾಜು ಒಂದು ಸಾವಿರ ಲಡ್ಡು ವಿತರಣೆಯಿಂದ ಪ್ರಾರಂಭಿಸಿ ಕಳೆದ ಹಲವಾರು ವರ್ಷಗಳಿಂದ ಪ್ರತಿ ವರ್ಷ ಒಂದು ಲಕ್ಷ ಮತ್ತು ಎರಡು ಲಕ್ಷ ಲಡ್ಡುಪ್ರಸಾದವನ್ನು ಭಕ್ತಾದಿಗಳಿಗೆ ವಿತರಣೆ ಮಾಡಲಾಗುತ್ತಿದೆ. ಈ ವರ್ಷವೂ ಸಹ ಇನ್ನೂ ಹೆಚ್ಚು ಅಂದರೆ ಎರಡು ಲಕ್ಷ ಲಡ್ಡುವನ್ನು ವಿತರಣೆ ಮಾಡಲು ದೇವಸ್ಥಾನದ ವತಿಯಿಂದ ತಯಾರಿ ನಡೆಯುತ್ತಿದೆ. ಈ ವರ್ಷ ಅಂದಾಜು (2,000)ಗ್ರಾಂ ತೂಕದ (15,000) ಲಡ್ಡುಗಳು ಹಾಗೂ (150)ಗ್ರಾಂ ತೂಕದ (2 ಲಕ್ಷ) ಲಡ್ಡುಗಳನ್ನು ದೇವಾಲಯಕ್ಕೆ ಬರುವ ಎಲ್ಲಾ ಭಕ್ತಾದಿಗಳಿಗೆ ಯಾವುದೇ ಜಾತಿ, ಮತ ಮತ್ತು ಭೇದವಿಲ್ಲದೆ ಉಚಿತವಾಗಿ ವಿತರಿಸಲಾಗುವುದು.
ಲಡ್ಡು ಪ್ರಸಾದವನ್ನು ವಿಶೇಷವಾಗಿ 60 ಮಂದಿ ನುರಿತ ಬಾಣಸಿಗರಿಂದ ತಯಾರಿಸಲಾಗಿದೆ,
ಡಾ.ರಾಜ್ ಕುಮಾರ್ ಪುತ್ರಿ ಲಕ್ಷ್ಮಿ , ಅಳಿಯ ಗೋವಿಂದರಾಜು ಅವರು ಸುದ್ದಿಗೋಷ್ಟಿಯಲ್ಲಿ ಪಾಲ್ಗೊಂಡು ಡಾ ‌ರಾಜ್ ಕುಮಾರ್ ಮತ್ತು ಪಾರ್ವತಮ್ಮ ರಾಜ್‍ಕುಮಾರ್ ಅವರಿಗೂ ಈ ದೇವಸ್ಥಾನಕ್ಕೂ ಬಾಂಧವ್ಯ ಹೇಗಿತ್ತು ಎನ್ನುವುದನ್ನು ಮೆಲುಕು ಹಾಕಿದರು
ನಂತರ ದೇವಾಲಯದ ಎನ್ ಶ್ರೀನಿವಾಸನ್‌ಅವರು ಮಾತನಾಡಿ
ಲೋಕ ಕಲ್ಯಾಣಾರ್ಥವಾಗಿ ಯಾವುದೇ ಜಾತಿ, ಮತಗಳ ಭೇದವಿಲ್ಲದೆ ಪ್ರಪಂಚದ ಎಲ್ಲೆಡೆ ಆಚರಿಸುವ ಕ್ರೈಸ್ತ ವರ್ಷಾರಂಭದ ಹಿನ್ನೆಲೆಯಲ್ಲಿ ವಿಶ್ವಶಾಂತಿ, ಭ್ರಾತೃತ್ವ ಮತ್ತು ಸರ್ವಧರ್ಮ ಸಮನ್ವಯತೆಗಾಗಿ ಮತ್ತು ನಾಡಿನ ಎಲ್ಲಾ ಜನರ ಒಳಿತಿಗಾಗಿ ಪ್ರಾರ್ಥಿಸಿ ಈ ಲಡ್ಡು ಪ್ರಸಾದ ನಿವೇದನೆ ಮತ್ತು ಭಕ್ತಾದಿಗಳಿಗೆ ವಿನಿಯೋಗ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಲೋಕಕಲ್ಯಾಣಾರ್ಥಕ್ಕೋಸ್ಕರ ಮತ್ತು ದೇಶದ ಎಲ್ಲಾ ಜನರ ಒಳಿತಿಗಾಗಿ, ಸಮಸ್ತ ಜನರಿಗೆ ಸುಖ ಶಾಂತಿ ನೆಮ್ಮದಿ ದೊರೆಯಲಿ ಎಂದು ಪ್ರಾರ್ಥಿಸುವ ಮತ್ತು ಎಲ್ಲಾ ಭಕ್ತಾದಿಗಳು ಒಂದೇ ಎಂದು ಸಾರುವ ಏಕೈಕ ದೃಷ್ಠಿಯಿಂದ ಈ ಎಲ್ಲಾ ಕಾರ್ಯಕ್ರಮಗಳು “ಪರಮ ಪೂಜ್ಯ ಪ್ರೊ. ಭಾಷ್ಯಂಸ್ವಾಮೀಜಿಯವರ” ದಿವ್ಯನೇತೃತ್ವದಲ್ಲಿ ವಿಶೇಷ ಪ್ರಾರ್ಥನೆಯಿಂದ ನೆರವೇರಲಿದೆ.
ಆಸ್ಥಿಕ ಭಕ್ತಾದಿಗಳು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಭಗವಂತನ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕು ಎಂದರು,

Related Posts

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

(ಕೆಎಂಶಿ)-ಉನ್ನತ ‘ಶಿಕ್ಷಣ ವಲಯದಲ್ಲಿ ಸಾಮಾಜಿಕ ನ್ಯಾಯ ಕಲ್ಪಿ ಸಲು, ರಾಜ್ಯದ ಎಲ್ಲ ಸರ್ಕಾರಿ, ಖಾಸಗಿ ಮತ್ತು ಡೀಮ್ಸ್ ವಿಶ್ವವಿದ್ಯಾಲಯಗಳಲ್ಲಿ ಜಾತಿ ಆಧಾರಿತ ದೌರ್ಜನ್ಯ ತಡೆಯಲು ರೋಹಿತ್ ವೇಮುಲ ಕಾಯಿದೆ ಜಾರಿಗೆ ತರಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ…

ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ನಿವಾಸ ಮ್ಯೂಸಿಯಂ ಆಗಲಿದೆ

ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್‌ ಅವರ ಮೈಸೂರು ಜಿಲ್ಲೆಯ ಕಣಗಾಲ್‌ ಗ್ರಾಮದಲ್ಲಿರುವ ನಿವಾಸವನ್ನು ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ಮನೆಯನ್ನು ಮ್ಯೂಸಿಯಂ ಆಗಿ ಪರಿವರ್ತಿಸುತ್ತಿರುವುದು ಇದೇ ಮೊದಲು. ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್‌ ಅವರ…

You Missed

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

ರಾಧಿಕಾ ಪಂಡಿತ್ ಜೊತೆ ಹೊಸ ಲುಕ್‌ನಲ್ಲಿ ‘ರಾಕಿಂಗ್’ ಸ್ಟಾರ್!

ರಾಧಿಕಾ ಪಂಡಿತ್ ಜೊತೆ ಹೊಸ ಲುಕ್‌ನಲ್ಲಿ ‘ರಾಕಿಂಗ್’ ಸ್ಟಾರ್!

ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ನಿವಾಸ ಮ್ಯೂಸಿಯಂ ಆಗಲಿದೆ

ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ನಿವಾಸ ಮ್ಯೂಸಿಯಂ ಆಗಲಿದೆ

ಸಚಿನ್ ತೆಂಡೂಲ್ಕರ್ ಸೊಸೆ ಎಷ್ಟು ಶ್ರೀಮಂತೆ ಗೊತ್ತಾ?

ಸಚಿನ್ ತೆಂಡೂಲ್ಕರ್ ಸೊಸೆ ಎಷ್ಟು ಶ್ರೀಮಂತೆ ಗೊತ್ತಾ?

ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಮೇಲೆ ಪೊಲೀಸ್ ಕಣ್ಣು!

ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಮೇಲೆ ಪೊಲೀಸ್ ಕಣ್ಣು!