ಮಹಾಕುಂಭಮೇಳದಲ್ಲಿ ವೈರಲ್ ಆದ ಮೊನಾಲಿಸಾಗೆ ಬಾಲಿವುಡ್ ನಿಂದ ಬಂತು ಬಂಪರ್ ಆಫರ್.

ಉತ್ತರಪ್ರದೇಶದ ಪ್ರಯಾಗ್ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ಸುಂದರ ಯುವತಿಯ ಚಿತ್ರ ಇತ್ತೀಚೆಗೆ ವೈರಲ್ ಆಗಿತ್ತು. ಆ ಯುವತಿಯನ್ನು ಮೊನಾಲಿಸಾಗೆ ಹೋಲಿಸಲಾಗಿತ್ತು. ಭಾರತದ ಮೊನಾಲಿಸಾ ಎಂದೇ ಆ ಯುವತಿ ಫೇಮಸ್ ಆಗಿದ್ದರು. ಇದೀಗ ಆ ಯುವತಿಗೆ ಬಾಲಿವುಡ್ ಸಿನಿಮಾದಲ್ಲಿ ನಟಿಸುವ ಅವಕಾಶ ದೊರೆತಿದೆ.ಈ ಸೋಷಿಯಲ್ ಮೀಡಿಯಾ ಕಾಲದಲ್ಲಿ ಎಲ್ಲೋ ಇದ್ದವರು ರಾತ್ರಿ ಕಳೆದು ಬೆಳಗಾಗುವದರೊಳಗೆ ಸ್ಟಾರ್ ಆಗಿಬಿಡುತ್ತಾರೆ. ಹಲವರ ಜೀವನವೇ ಬದಲಾಗಿ ಬಿಡುತ್ತದೆ. ಟೀ ಮಾರುವ ಹುಡುಗ ಮಾಡೆಲ್ ಆಗಿದ್ದು, ಭಿಕ್ಷುಕ ಮಾಡೆಲ್ ಆಗಿದ್ದು, ಮೀನು ಮಾರುವ ಹುಡುಗಿ ಫ್ಯಾಷನ್ ಶೋ ಮಾಡಿದ್ದು, ಒಂದು ಕಣ್ಸನ್ನೆಯಿಂದ ಪ್ರಿಯಾ ವಾರಿಯಸ್ ಸ್ಟಾರ್ ಆಗಿದ್ದು ಎಲ್ಲವೂ ಸಾಧ್ಯವಾಗಿದ್ದು ಇದೇ ಸೋಷಿಯಲ್ ಮೀಡಿಯಾದಿಂದ. ಇದೀಗ ಮಹಾಕುಂಭದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ಹುಡುಗಿಗೆ ಇದೇ ಸಾಮಾಜಿಕ ಜಾಲತಾಣದಿಂದ ಅದೃಷ್ಟ ಖುಲಾಯಿಸಿದೆ.
ವೈರಲ್ ಹುಡುಗಿ ಮೊನಾಲಿಸಾಗೆ ಬಾಲಿವುಡ್ನಿಂದ ಆಫರ್ ಬಂದಿದೆ. ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ಯುವತಿಯೊಬ್ಬಾಕೆಯ ಚಿತ್ರವೊಂದು ಸಖತ್ ವೈರಲ್ ಆಗಿತ್ತು. ಆಕೆಯ ಸೌಂದರ್ಯಕ್ಕೆ ವಿಶೇಷವಾಗಿ ಆಕೆಯ ಸೆಳೆಯುವ ಕಣ್ಣುಗಳಿಗೆ ಜನ ಮಾರು ಹೋಗಿದ್ದರು. ಆ ಯುವತಿಯನ್ನು ಮೊನಾಲಿಸಾಗೆ ಹೋಲಿಸಲಾಗಿತ್ತು. ಭಾರತದ ಮೊನಾಲಿಸಾ ಎಂದೇ ಸಾಮಾಜಿಕ ಜಾಲತಾಣದಲ್ಲಿ ಆ ಚೆಲುವೆ ಫೇಮಸ್ ಆಗಿದ್ದರು. ಇದೀಗ ಬಾಲಿವುಡ್ ಕಣ್ಣು ಯುವತಿ ಮೊನಾಲಿಸಾ ಮೇಲೆ ಬಿದ್ದಿದೆ. ಮೊನಾಲಿಸಾಗೆ ಬಾಲಿವುಡ್ನಿಂದ ಆಫರ್ ಬಂದಿದೆ.ಬಾಲಿವುಡ್ ನಿರ್ದೇಶಕ ಸನೋಜ್ ಮಿಶ್ರ, ಆ ವೈರಲ್ ಯುವತಿಗೆ ತಮ್ಮ ಸಿನಿಮಾದಲ್ಲಿ ಅವಕಾಶ ನೀಡಿದ್ದಾರೆ.

ಸನೋಜ್ ಮಿಶ್ರ ‘ಡೈರಿ ಆಫ್ ಮಣಿಪುರ್’ ಹೆಸರಿನ ಸಿನಿಮಾ ಅನ್ನು ನಿರ್ದೇಶನ ಮಾಡುತ್ತಿದ್ದು, ಆ ಸಿನಿಮಾದಲ್ಲಿ ವೈರಲ್ ಹುಡುಗಿಯೇ ನಾಯಕಿ. ಇದಕ್ಕಾಗಿ ಮೊನಾಲಿಸಾ ಲುಕ್ ಟೆಸ್ಟ್ ಸಹ ನಡೆಸಲಾಗಿದೆ. ವೈರಲ್ ಯುವತಿಗೆ ಮೇಕೋವರ್ ಮಾಡಲಾಗಿದ್ದು, ಮೇಕೊವರ್ ವಿಡಿಯೋ ಇದೀಗ ವೈರಲ್ ಆಗಿದೆ. ಇದು ಮಾತ್ರವೇ ಅಲ್ಲದೆ ಮಹಾಕುಂಭದ ಮೊನಾಲಿಸಾಗೆ ನಟನಾ ತರಬೇತಿಯನ್ನು ಸಹ ಕೊಡಿಸಲಾಗುತ್ತಿದೆ.ಹೀಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದವರಿಗೆ ಸಿನಿಮಾ ಅವಕಾಶಗಳು ಇದು ಮೊದಲೇನೂ ಅಲ್ಲ.
ಈ ಹಿಂದೆ ಬೀದಿಯಲ್ಲಿ ಹಾಡು ಹಾಡುತ್ತಿದ್ದ ರಾನು ಮಂಡಲ್ಗೆ ಬಾಲಿವುಡ್ ಸಿನಿಮಾ ಹಾಡು ಹಾಡುವ ಅವಕಾಶ ನೀಡಲಾಗಿತ್ತು. ಇದರಿಂದಾಗಿ ರಾನು ಮಂಡಲ್ ರಾತ್ರೋರಾತ್ರಿ ಸೆಲೆಬ್ರಿಟಿ ಆಗಿಬಿಟ್ಟಿದ್ದರು. ಕೇರಳದಲ್ಲಿ ಮೀನು ಮಾರುತ್ತಿದ್ದ ಯುವತಿಗೆ ಫ್ಯಾಷನ್ ಶೋನಲ್ಲಿ ಶೋ ಸ್ಟಾಪರ್ ಮಾಡಲಾಗಿತ್ತು. ಮಲಯಾಳಿ ನಟಿ ಪ್ರಿಯಾ ವಾರಿಯರ್ ಸಹ ಸ್ಟಾರ್ ಆಗಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ಅವರ ಒಂದು ಸಣ್ಣ ಕ್ಲಿಪ್ನಿಂದಲೇ. ಇದೀಗ ಮಹಾಕುಂಭದ ಮೊನಾಲಿಸಾಳ ಸರದಿ. ಈ ಅವಕಾಶವನ್ನು ಯುವತಿ ಸದುಪಯೋಗ ಪಡಿಸಿಕೊಳ್ಳುತ್ತಾರಾ ಕಾದು ನೋಡಬೇಕಿದೆ. ಸದುಪಯೋಗಪಡಿಸಿಕೊಳ್ಳಲಿ ಎಂಬುದು ಎಲ್ಲ ನೆಟ್ಟಿಗರ ಆಸೆಯಾಗಿದೆ. ಮತ್ತು ಕೆಲವರು , ದೇವರು ಬಡವರಿಗೆ ಐಶ್ವರ್ಯವನ್ನು ಕೊಡುವುದರಲ್ಲಿ ಕಡಿಮೆ ಮಾಡಿದರು ಸೌಂದರ್ಯದ ಕೊರತೆ ಮಾಡಿಲ್ಲ ಎಂದು ಕಾಮೆಂಟ್ ಗಳ ಮೂಲಕ ತಮ್ಮ ಅಭಿಪ್ರಾಯವನ್ನು ತಿಳಿಸುತ್ತಿದ್ದಾರೆ.

Related Posts

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ರಾಜ್ಯದಲ್ಲಿ ಸೆಪ್ಟೆಂಬರ್ 21ರಿಂದ ಮೂರು ದಿನಗಳ ಕಾಲ ವಿಶೇಷ ವಿಧಾನಮಂಡಲ ಅಧಿವೇಶನ ನಡೆಸಲು ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಸೆ. 21ರಿಂದ ಸೆ.…

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಗುಂಡ್ಲುಪೇಟೆ ಪಟ್ಟಣದ ಇಂದಿರಾ ಕ್ಯಾಂಟೀನ್‌ಗೆ ಸೋಮವಾರ ಬೆಳಿಗ್ಗೆ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ ಆಹಾರದ ಶುಚಿತ್ವ, ಗುಣಮಟ್ಟ ಹಾಗೂ ಕುಡಿಯುವ ನೀರಿನ ಪೂರೈಕೆಯನ್ನು ಕೂಲಂಕಷವಾಗಿ ಪರಿಶೀಲಿಸಿತು. ಬಡವರು ಮತ್ತು ಶ್ರಮಿಕರಿಗೆ ಪೌಷ್ಟಿಕ ಹಾಗೂ ಶುಚಿ-ರುಚಿಯಾದ ಆಹಾರ ದೊರೆಯಬೇಕು ಎಂಬ ಶಾಸಕರ…

You Missed

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!