ಮಾದಪ್ಪನ ಸನ್ನಿಧಿಯಲ್ಲಿ ನಡೀತು ಮಹಾ ಪವಾಡ! ಕಣ್ಮರೆಯಾದ ಇಬ್ಬರು ಮಕ್ಕಳು ಪ್ರತ್ಯಕ್ಷ.

ಬೆಂಗಳೂರು: ಜೇನುಮಲೆ.. ಬುತ್ತಿಮಲೆ, ಪಚ್ಚೆಮಲೆ, ಪಾಣಿಮಲೆ, ಎಪ್ಪತೇಳುಮಲೆಯ ಒಡೆಯ ಮಾದಪ್ಪನಿಗೆ ಶರಣು ಶರಣೆನ್ನದವರೇ ಇಲ್ಲ. ಚಲ್ಲಾಟಗಾರನೂ ಇವನೇ ಮಾಯಗಾರನೂ ಇವನೇ. ಏಳು ಮಲೆ ಮೇಲೆ ಕೂತಿರೋ ಮಾದಪ್ಪನನ್ನ ಎಷ್ಟು ಕೊಂಡಾಡಿದ್ರೂ ಸಾಲಲ್ಲ ಬಿಡಿ. ಮಾದಪ್ಪನ ಸನ್ನಿಧಿ ಅಂದ್ರೆ ಸಾಕು ಮನದಲ್ಲೊಂದು ಭಕ್ತಿಭಾವ ಮೂಡುತ್ತೆ. ನಮಗರಿವಿಲ್ಲದೆಯೇ ಭಗವಂತನ ನಾಮಸ್ಮರಣೆ ಶುರುವಾಗುತ್ತೆ. ಇಂತಾ ಮಾಯ್ಕಾರನ ಸನ್ನಿಧಿಯಲ್ಲಿ ಮಹಾ ಪವಾಡವೊಂದು ನಡೆದಿದೆ.

ಕರುಳ ಕುಡಿಗಳನ್ನ ಕಳ್ಕೊಂಡು, ಮಾದಪ್ಪನ ಸನ್ನಿಧಿಗೆ ಬಂದ ಹೆತ್ತವರೇ ಶಾಕ್ ಆಗಿ ಹೋಗಿದ್ದಾರೆ. ಭಗವಂತ ಉರುಳು ಸೇವೆ ಮಾಡೋ ಹೊತ್ತಲ್ಲೇ, ನಾಪತ್ತೆಯಾದ ಇಬ್ಬರು ಮಕ್ಕಳು ಪ್ರತ್ಯಕ್ಷರಾಗಿದ್ದಾರೆ.

ಮಾದಪ್ಪನ ಲೀಲೆಯನ್ನ ಬಲ್ಲವೇ ಬಲ್ಲರು ಬಿಡಿ. ವಿಜ್ಞಆನ ಎಷ್ಟೇ ಮುಂದುವರಿದಿದೆ ಅಂದ್ರೂ ಜನ್ರ ನಂಬಿಕೆ ಕಮ್ಮಿ ಆಗ್ತಿಲ್ಲ. ವಿಜ್ಞಾನಿಗಳು ಕೂಡಾ ಗ್ರಹಗತಿಗಳನ್ನ ನೋಡೋದನ್ನ ನಿಲ್ಲಿಸ್ತಿಲ್ಲ. ಇದಕ್ಕೆ ತಾಜಾ ಉದಾಹರಣೆಯೇ ಈ ಸ್ಟೋರಿ. ಈ ಇಬ್ಬರು ಬಾಲಕರು ಪಕ್ಕಾ ಚೆಡ್ಡಿ ದೋಸ್ತ್ಗಳು. ಇವ್ನ ಹೆಸ್ರು ರವಿ, ಮತ್ತೊಬ್ಬ ಪ್ರವೀಣ. ರವಿ 9ನೇ ಕ್ಲಾಸ್ ಓದ್ತಿದ್ರೆ, ಪ್ರವೀಣ್ 7ನೇ ಕ್ಲಾಸ್. ಇಬ್ರೂ ಬೇರೆ ಬೇರೆ ಸ್ಕೂಲ್ ಆದ್ರೂ ಅಕ್ಕ ಪಕ್ಕದ ಮನೆಯವ್ರು. ಹೀಗಾಗಿ ಸಣ್ಣೋರಿದ್ದಾಗಿಂದ್ಲೂ ಕುಚಿಕುಗಳಂತಿದ್ದಾರೆ. ಆದರೆ, ಕಳೆದ ಆರು ದಿನಗಳ ಹಿಂದೆ ಸಂಜೆ ಹೊತ್ತಲ್ಲಿ ಹೊರಗೆ ಹೋದವರು, ಎಲ್ಲೋದ್ರು ಏನಾದ್ರು ಅನ್ನೋ ಸಣ್ಣ ಸುಳಿವೂ ಇರ್ಲಿಲ್ಲ. ಹುಡುಕಿ ಹುಡುಕಿ ಸುಸ್ತಾಗಿ ಹೋಗಿದ್ದ ಪೋಷಕರು ಬೆಂಗಳೂರಿನ ತಿಲಕನಗರ ಪೊಲೀಸ್ ಠಾಣೆ ಮೆಟ್ಟಿಲೇರಿದ್ರು.ಕಳೆದ ಶನಿವಾರ ಪ್ರವೀಣ್ಗೆ ಹುಷಾರಿಲ್ಲ ಅಂತಾ ಮನೆಯಲ್ಲೇದ್ದ. ಶಾಲೆಗೆ ಹೋಗಿದ್ದ ರವಿ ಗೆಳೆಯನಿಗೆ ಹುಷಾರಿಲ್ಲ ಅಂತಾ ಬೇಗನೇ ಬಂದಿದ್ದ. ಸೀದಾ ಸ್ನೇಹಿತನ ಮನೆಗೋಗಿ ಪ್ರಾಜೆಕ್ಟ್ ವರ್ಕ್ಗೆ ಒಂದಿಷ್ಟು ಐಟಂಸ್ ತಗೊಂಡು ಬರ್ಬೇಕು ಬಾ ಅಂತಾ ಕರ್ಕೊಂಡು ಹೋಗಿದ್ದಾನೆ. ಹೀಗೆ ಹೊರ ಹೋದವ್ರು ಜಯನಗರ ಬಸ್ ನಿಲ್ದಾಣದಲ್ಲಿ ಬಸ್ ಹತ್ತಿದ್ದೇ ಕೊನೆ. ಆಮೇಲೆ ಎಲ್ಲೋದ್ರು ಅನ್ನೋ ಯಾವ ಕುರುಹೂ ಸಿಕ್ಕಿರ್ಲಿಲ್ಲ. ಪೊಲೀಸ್ರು ಕೂಡಾ ಮೂಲೆ ಮೂಲೆ ಜಾಲಾಡಿದ್ರು. ಆದ್ರೆ, ಇಬ್ಬರು ಬಾಲಕರು ಮಾತ್ರ ಸಿಕ್ಕಿರ್ಲಿಲ್ಲ. ಹೀಗಾಗಿ ಪ್ರವೀಣ್ ಪೋಷಕರು ಮಲೆ ಮಹದೇಶ್ವರನ ಮೊರೆ ಹೋಗಿದ್ದಾರೆ. ಆಗ್ಲೇ ನೋಡಿ ಪವಾಡ ನಡೆದಿದ್ದು.

ದಿಕ್ಕು ಕಾಣದಂತಾದ ಪ್ರವೀಣ್ ಹೆತ್ತವ್ರು, ಮಾದಪ್ಪನ ಸನ್ನಿಧಿಗೆ ಹೋಗಿ ಭಕ್ತಿಯಿಂದ ಬೇಡಿಕೊಂಡಿತ್ತು. ಉರುಳುಸೇವೆ ಮಾಡೋ ಮೂಲಕ ಮಕ್ಕಳ ಪತ್ತೆಗಾಗಿ ಕಣ್ಣೀರ ಬೇಡಿಕೆ ಒಪ್ಪಿಸ್ತಿದ್ರು. ಇದೇ ಹೊತ್ತಲ್ಲಿ ಅದೆಲ್ಲಿಂದ ಬಂದ್ರೋ ಗೊತ್ತಿಲ್ಲ. ಹೆತ್ತವರು ಉರುಳು ಸೇವೆ ಮಾಡುವಾಗ್ಲೇ ಇಬ್ಬರು ಮಕ್ಕಳು ಪ್ರತ್ಯಕ್ಷರಾಗಿದ್ದಾರೆ.
ಎಂಥಾ ವಿಚಿತ್ರ ನೋಡಿ, ಮಕ್ಕಳಿಬ್ಬರು ಸಿಕ್ತಿದ್ದಂತೆ ನೀವಿಲ್ಲಿ ಹೇಗೆ ಬಂದ್ರಿ ಅಂತಾ ಹೆತ್ತವರು ವಿಚಾರಿಸೋದಕ್ಕೆ ಶುರು ಮಾಡಿದ್ದಾರೆ. ಆಗಲೇ ನೋಡಿ ಸತ್ಯ ಬಿಚ್ಚಿಕೊಳ್ಳೋದಕ್ಕೆ ಶುರು ಮಾಡಿದ್ದು. ಸ್ನೇಹಿತ ಪ್ರವೀಣ್ಗೆ ಹುಷಾರಿಲ್ಲದೇ ಇದ್ದಿದ್ರಿಂದ ರವಿ ತುಂಬಾನೇ ಬೇಸರಗಿಂಡಿದ್ದನಂತೆ. ಹೀಗಾಗಿ ನಿಮ್ಮ ಮನೆದೇವ್ರಾದ ಮಲೆ ಮಹದೇಶ್ವರಕ್ಕೆ ಹೋಗೋಣ ಅಂತಾ ರವಿಯೇ ಹೇಳಿದ್ದಾನೆ. ಅಷ್ಟೇ ಅಲ್ಲ ಮನೆ ದೇವರ ದರ್ಶನ ಮಾಡಿದ್ರೆ ಬೇಗ ಹುಷಾರಾಗ್ತೀಯ ಅಂತಾ ಕರ್ಕೊಂಡ್ ಹೋಗಿದ್ನಂತೆ. ಒಟ್ನಲ್ಲಿ ಕಳೆದೊಂದು ವಾರದಿಂದ ಕಣ್ಮರೆಯಾಗಿದ್ದ ಮಕ್ಕಳೀಗ ಪತ್ತೆಯಾಗಿದ್ದು, ಹೆತ್ತವರು ನಿಟ್ಟುಸಿರು ಬಿಟ್ಟಿದ್ದಾರೆ.

Related Posts

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಹಣದುಬ್ಬರ ಹಾಗೂ ಬೆಲೆ ಏರಿಕೆಯಿಂದ ತತ್ತರಿಸಿರುವ ಸಾಮಾನ್ಯ ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್ ನೀಡಿವೆ. ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದ ಬಿಸಿ ಇದೀಗ ನೇರವಾಗಿ ಭಾರತೀಯರ ಜೇಬಿಗೆ ತಟ್ಟಿದೆ. ನವದೆಹಲಿ: ಹಣದುಬ್ಬರ ಹಾಗೂ ಬೆಲೆ ಏರಿಕೆಯಿಂದ…

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

(ಕೆಎಂಶಿ)-ಉನ್ನತ ‘ಶಿಕ್ಷಣ ವಲಯದಲ್ಲಿ ಸಾಮಾಜಿಕ ನ್ಯಾಯ ಕಲ್ಪಿ ಸಲು, ರಾಜ್ಯದ ಎಲ್ಲ ಸರ್ಕಾರಿ, ಖಾಸಗಿ ಮತ್ತು ಡೀಮ್ಸ್ ವಿಶ್ವವಿದ್ಯಾಲಯಗಳಲ್ಲಿ ಜಾತಿ ಆಧಾರಿತ ದೌರ್ಜನ್ಯ ತಡೆಯಲು ರೋಹಿತ್ ವೇಮುಲ ಕಾಯಿದೆ ಜಾರಿಗೆ ತರಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ…

You Missed

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

ರಾಧಿಕಾ ಪಂಡಿತ್ ಜೊತೆ ಹೊಸ ಲುಕ್‌ನಲ್ಲಿ ‘ರಾಕಿಂಗ್’ ಸ್ಟಾರ್!

ರಾಧಿಕಾ ಪಂಡಿತ್ ಜೊತೆ ಹೊಸ ಲುಕ್‌ನಲ್ಲಿ ‘ರಾಕಿಂಗ್’ ಸ್ಟಾರ್!

ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ನಿವಾಸ ಮ್ಯೂಸಿಯಂ ಆಗಲಿದೆ

ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ನಿವಾಸ ಮ್ಯೂಸಿಯಂ ಆಗಲಿದೆ

ಸಚಿನ್ ತೆಂಡೂಲ್ಕರ್ ಸೊಸೆ ಎಷ್ಟು ಶ್ರೀಮಂತೆ ಗೊತ್ತಾ?

ಸಚಿನ್ ತೆಂಡೂಲ್ಕರ್ ಸೊಸೆ ಎಷ್ಟು ಶ್ರೀಮಂತೆ ಗೊತ್ತಾ?

ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಮೇಲೆ ಪೊಲೀಸ್ ಕಣ್ಣು!

ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಮೇಲೆ ಪೊಲೀಸ್ ಕಣ್ಣು!