ವಿಶ್ವದ ದುಬಾರಿ ಮಾವಿನ ಹಣ್ಣಿನ ಬೆಲೆ ಕೇಳಿದ್ರೆ ನೀವು ಖಂಡಿತ ಶಾಕ್ ಆಗ್ತೀರಾ!!!

ಹಣ್ಣುಗಳ ರಾಜ ಮಾವಿನ ಹಣ್ಣಿನ ಸೀಸನ್ ಆರಂಭವಾಗಿದೆ. ಮಾರುಕಟ್ಟೆಯ ತುಂಬೆಲ್ಲಾ ಬಗೆಬಗೆಯ ಕಣ್ಮನ ಸೆಳೆಯುವ ಮಾವುಗಳದ್ದೇ ರಾಶಿ. ಈ ಮಾವಿನ ಹಣ್ಣುಗಳನ್ನು ನೋಡಿದರೇನೇ ಬಾಯಲ್ಲಿ ನೀರೂರುತ್ತದೆ. ಆದರೆ ವಿಶ್ವದ ದುಬಾರಿ ಮಾವಿನ ಹಣ್ಣಿನ ಬಗ್ಗೆ ನಿಮಗೆ ತಿಳಿದಿದೆಯೇ. ವಜ್ರಕ್ಕಿಂತ ಬೆಲೆಬಾಳುವ ಆ ದುಬಾರಿ ಮಾವಿನ ಹಣ್ಣು ಯಾವುದು? ಏನಿದರ ವಿಶೇಷತೆ ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಮಾರ್ಚ್ ಏಪ್ರಿಲ್ ತಿಂಗಳಲ್ಲಿ ಮಾರುಕಟ್ಟೆಯ ತುಂಬೆಲ್ಲಾ ಮಾವಿನ ಹಣ್ಣಿನದ್ದೆ ದರ್ಬಾರ್. ಸಹಜವಾಗಿ ಎಲ್ಲರೂ ಕೂಡ ಇಷ್ಟ ಪಟ್ಟು ಸವಿಯುವ ಹಣ್ಣಾದ ಇದರ ರುಚಿ ಎಲ್ಲರೂ ಕೂಡ ಸವಿದೇ ಇರುತ್ತಾರೆ. ಆದರೆ ಮಾವಿನ ಕಾಯಿಯಿಂದ ಹಿಡಿದು ಹಣ್ಣಿನವರೆಗೂ ಎಲ್ಲವನ್ನು ವಿವಿಧ ರೀತಿಯಲ್ಲಿ ಬಳಸಲಾಗುತ್ತದೆ. ವಿವಿಧ ತಳಿಗಳಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಮಾವಿನ ಹಣ್ಣು ರುಚಿಯಲ್ಲಿ ಮಾತ್ರ ಒಂದಕ್ಕಿಂತ ಇನ್ನೊಂದನ್ನು ಮೀರಿಸುತ್ತದೆ. ನಮ್ಮ ಭಾರತದಲ್ಲಿ ಬೈಂಗನಪಲ್ಲಿ, ದುಸ್ಸೆಹ್ರಿ, ಅಲ್ಫೊನ್ಸೊ, ಲಾಂಗ್ಡಾ ಸೇರಿ ಅನೇಕ ವಿವಿಧ ತಳಿಯ ಮಾವನ್ನು ಬೆಳೆಯಲಾಗುತ್ತದೆ.

ಆದರೆ ಈ ಮಾವಿನ ಹಣ್ಣು ಮಾತ್ರ ಬಲುದುಬಾರಿಯಂತೆ. ರುಚಿ ಹಾಗೂ ಇದರ ಬಣ್ಣ ದಿಂದಲೇ ಎಲ್ಲರ ಗಮನ ಸೆಳೆಯುತ್ತದೆ. ಬೆಲೆಯಲ್ಲಿ ದುಬಾರಿಯಾದ ಕಾರಣ ಮಧ್ಯಮವರ್ಗದ ಜನರಿಗೆ ಇದನ್ನು ಖರೀದಿಸಿ ರುಚಿ ಸವಿಯುವುದು ಕಷ್ಟ. ವಿಶ್ವದಲ್ಲೇ ಅತಂತ್ಯ ದುಬಾರಿ ಮಾವು ಎಂದು ಕರೆಸಿಕೊಂಡಿರುವ ಮಾವುಗಳಲ್ಲಿ ಮಿಯಾಝಾಕಿ ಮಾವು. ನೀವೆಲ್ಲಾ ಮಾವಿನ ಹಣ್ಣನ್ನು ಹೊರಗೆ ಹಸಿರು ಇಲ್ಲದಿದ್ದರೆ ಹಳದಿ ಬಣ್ಣದಿರುವುದರಲ್ಲೂ ಆದರೆ ಈ ದುಬಾರಿ ಮಾವಿನ ಬಣ್ಣ ನೇರಳೆ ಬಣ್ಣದಾಗಿದ್ದು ಹಣ್ಣಾದ ಮೇಲೆ ಕಡುಗೆಂಪು ಬಣ್ಣದಲ್ಲಿರುತ್ತದೆ. ಜಪಾನ್ನ ಮಿಯಾಝಾಕಿ ಎಂಬ ನಗರದಲ್ಲಿ ಇದನ್ನು ಬೆಳೆಯಲಾಗುತ್ತದೆಯಂತೆ. ಈ ಮಾವನ್ನು ಎಗ್ ಆಫ್ ದಿ ಸನ್ (ಸೂರ್ಯನ ಮೊಟ್ಟೆ) ಎಂದು ಕರೆಯಲಾಗುತ್ತಿದೆ. ಈ ಮಾವು ವಿಶ್ವದ ದುಬಾರಿ ಮಾವುಗಳಲ್ಲಿ ಮೊದಲ ಸ್ಥಾನದಲ್ಲಿದ್ದು, ಕೆಂಪು ಬಣ್ಣದ ಈ ಮಾವಿನ ಬೆಲೆ ಬರೋಬ್ಬರಿ 2.7 ಲಕ್ಷ ರೂಪಾಯಿಯಂತೆ. ಹೀಗಾಗಿ ಈ ಮಾವಿನ ಬೆಲೆ ವಜ್ರಕ್ಕಿಂತಲೂ ದುಬಾರಿ ಎನ್ನಲಾಗಿದೆ.

Related Posts

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಹಣದುಬ್ಬರ ಹಾಗೂ ಬೆಲೆ ಏರಿಕೆಯಿಂದ ತತ್ತರಿಸಿರುವ ಸಾಮಾನ್ಯ ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್ ನೀಡಿವೆ. ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದ ಬಿಸಿ ಇದೀಗ ನೇರವಾಗಿ ಭಾರತೀಯರ ಜೇಬಿಗೆ ತಟ್ಟಿದೆ. ನವದೆಹಲಿ: ಹಣದುಬ್ಬರ ಹಾಗೂ ಬೆಲೆ ಏರಿಕೆಯಿಂದ…

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

(ಕೆಎಂಶಿ)-ಉನ್ನತ ‘ಶಿಕ್ಷಣ ವಲಯದಲ್ಲಿ ಸಾಮಾಜಿಕ ನ್ಯಾಯ ಕಲ್ಪಿ ಸಲು, ರಾಜ್ಯದ ಎಲ್ಲ ಸರ್ಕಾರಿ, ಖಾಸಗಿ ಮತ್ತು ಡೀಮ್ಸ್ ವಿಶ್ವವಿದ್ಯಾಲಯಗಳಲ್ಲಿ ಜಾತಿ ಆಧಾರಿತ ದೌರ್ಜನ್ಯ ತಡೆಯಲು ರೋಹಿತ್ ವೇಮುಲ ಕಾಯಿದೆ ಜಾರಿಗೆ ತರಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ…

You Missed

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

ರಾಧಿಕಾ ಪಂಡಿತ್ ಜೊತೆ ಹೊಸ ಲುಕ್‌ನಲ್ಲಿ ‘ರಾಕಿಂಗ್’ ಸ್ಟಾರ್!

ರಾಧಿಕಾ ಪಂಡಿತ್ ಜೊತೆ ಹೊಸ ಲುಕ್‌ನಲ್ಲಿ ‘ರಾಕಿಂಗ್’ ಸ್ಟಾರ್!

ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ನಿವಾಸ ಮ್ಯೂಸಿಯಂ ಆಗಲಿದೆ

ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ನಿವಾಸ ಮ್ಯೂಸಿಯಂ ಆಗಲಿದೆ

ಸಚಿನ್ ತೆಂಡೂಲ್ಕರ್ ಸೊಸೆ ಎಷ್ಟು ಶ್ರೀಮಂತೆ ಗೊತ್ತಾ?

ಸಚಿನ್ ತೆಂಡೂಲ್ಕರ್ ಸೊಸೆ ಎಷ್ಟು ಶ್ರೀಮಂತೆ ಗೊತ್ತಾ?

ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಮೇಲೆ ಪೊಲೀಸ್ ಕಣ್ಣು!

ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಮೇಲೆ ಪೊಲೀಸ್ ಕಣ್ಣು!