
ಆನೆಗಳು ನಿಜವಾಗಿಯೂ ಸಾಧು ಪ್ರಾಣಿಗಳು, ಸುಖಾ ಸುಮ್ಮನೆ ಯಾರ ತಂಟೆಗೂ ಹೋಗುವುದಿಲ್ಲ. ಒಂದು ವೇಳೆ ಸಿಟ್ಟು ಬಂದರೆ, ಮದವೇರಿದರೆ ಅದನ್ನು ನಿಯಂತ್ರಿಸುವುದೇ ಕಷ್ಟ. ಮನುಷ್ಯರನ್ನಷ್ಟೇ ಅಲ್ಲ, ಸಿಕ್ಕ ಸಿಕ್ಕ ವಸ್ತುಗಳನ್ನು ಎಸೆದು ರಂಪಾಟ ಮಾಡುವುದಿದೆ. ಆದರೆ ಇದೀಗ ಆನೆಯೊಂದು ಸೂಪರ್ ಮಾರ್ಕೆಟ್‌ಗೆ ನುಗ್ಗಿ ಶಾಪಿಂಗ್ ಮಾಡಿದೆ. ಹೌದು ಥೈಲ್ಯಾಂಡ್ ನ ಸೂಪರ್ ಮಾರ್ಕೆಟ್ ನಲ್ಲಿ ಇಂತಹದೊಂದು ಅಪರೂಪದ ದೃಶ್ಯ ಕಂಡು ಬಂದಿದ್ದು, ತನಗೆ ಏನು ಬೇಕು ಅದನ್ನೆಲ್ಲಾ ತಿಂದು ಅಲ್ಲಿಂದ ಹೊರಟು ಹೋಗಿದೆ. ಇಂಡಿಪೆಂಡೆಂಟ್ ವರದಿಯ ಪ್ರಕಾರವಾಗಿ, ಈ ಆನೆಯು ಕಾವೋ ಯಾಯ್ ರಾಷ್ಟ್ರೀಯ ಉದ್ಯಾನವನದ ನಿವಾಸಿಯಾಗಿದ್ದು, ಪ್ಲಾಯ್ ಬಿಯಾಂಗ್ ಲೆಕ್ ಎಂದು ಗುರುತಿಸಲಾಗಿದೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಈ ದೃಶ್ಯವು ನೆಟ್ಟಿಗರ ಹೃದಯ ಗೆದ್ದುಕೊಂಡಿದೆ.





