ಸಮೀರ್ ಎಂಡಿ ಅವರು ಮಾಡಿದ್ದ ವಿಡಿಯೋ ಕರ್ನಾಟಕದಲ್ಲಿಡೆ ಸಂಚಲನ ಸೃಷ್ಟಿಸಿದ ಕೂಡಲೇ ,ಬಳ್ಳಾರಿಯಿಂದ ಪೊಲೀಸರು ಆಗಮಿಸಿ ಬಂಧನಕ್ಕೆ ಮುಂದಾಗಿದ್ದರು. ಆದ್ರೆ ವಿಚಾರಣೆಗೆ ಸಹಕರಿಸೋದಾಗಿ ಭರವಸೆ ನೀಡಿದ್ಮೇಲೆ ನೋಟಿಸ್ ನೀಡಿ ಹಿಂದಿರುಗಿದ್ದಾರೆ ಎಂದು ಫೇಸ್‌ಬುಕ್ ಲೈವ್‌ನಲ್ಲಿ ಸಮೀರ್ ಹೇಳಿದ್ದಾರೆ. ಈ ವಿಡಿಯೋಗೆ ಒಂದು ಮಿಲಿಯನ್ ವ್ಯೂವ್ ಪಡೆದುಕೊಳ್ಳುತ್ತಲೇ ನನಗೆ ಭಯ ಶುರುವಾಯ್ತು. ಕೆಲವರು ನನ್ನ ವೈಯಕ್ತಿಕ ಮಾಹಿತಿ ಮತ್ತು ನನ್ನ ವಿಳಾಸವನ್ನು ಸಾಮಾಜಿಕ ಜಾಲತಾಣದಲ್ಲಿ ಲೀಕ್ ಮಾಡಲಾಯ್ತು. ನಂತರ ನನಗೆ ಹಲವು ಜೀವಬೆದರಿಕೆ ಕರೆಗಳು ಬರಲು ಆರಂಭಿಸಿದವು. ಪೊಲೀಸರ ಬಳಿ ಹೋದ್ರೆ ರಕ್ಷಣೆ ಸಿಗುತ್ತೆ ಎಂಬ ನಂಬಿಕೆಯೂ ನನಗಿರಲಿಲ್ಲ. ನಂತರ ನಾನು ಕೂಡಲೇ ಸೌಜನ್ಯ ಪ್ರಕರಣದ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ತಂಡದ ಸದಸ್ಯರನ್ನು ಸಂಪರ್ಕಿಸಿದೆ. ನಂತರ ಅವರೇ ವಕೀಲರ ಸಹಾಯವನ್ನು ನೀಡಿದ್ದಾರೆ ಎಂದು ಸಮೀರ್ ವಿಡಿಯೋವೊಂದರಲ್ಲಿ ಹೇಳಿಕೊಂಡಿದ್ದಾರೆ.

ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಮತ್ತು ಯೂಟ್ಯೂಬ್ ನಲ್ಲಿ ಇನ್ನು ಒಂದು ವಾರ ಸಹ ಪೂರೈಸಿಲ್ಲ ಆಗಲೇ ಸಮೀರ್ ಅವರಿಗೆ ಜೀವ ಬೆದರಿಕೆಯನ್ನು ಇಡುತ್ತಿದ್ದಾರೆ. ಹಾಗಾಗಿ ಅವರು ,ನನಗೆ ಜೀವ ಬೆದರಿಕೆ ಬರುತ್ತಿರುವ ಹಿನ್ನೆಲೆ ಸೌಜನ್ಯ ಪ್ರಕರಣದ ಮತ್ತೋರ್ವ ಹೋರಾಟಗಾರ ಗಿರಿಶ್ ಮಟ್ಟನವರ್ ಅವರನ್ನು ಮನೆಗೆ ಬರುವಂತೆ ಹೇಳುವಂತೆ ಮನವಿ ಮಾಡಿಕೊಂಡೆ. ಗಿರೀಶ್ ಮಟ್ಟನವರ್ ಮನೆಗೆ ಬಂದ ಸಂದರ್ಧದಲ್ಲಿಯೇ ಪೊಲೀಸರು ನಮ್ಮ ಮನೆಗೆ ಬಂದರು ಎಂದು ಸಮೀರ್ ಎಂ.ಡಿ ಹೇಳಿದ್ದಾರೆ. ಸೌಜನ್ಯ ವಿಡಿಯೋ ಮಾಡುವ ಮುನ್ನ ಗಿರೀಶ್ ಅಥವಾ ಮಹೇಶ್ ಶೆಟ್ಟಿಯಯವರಿಗೂ ನಮಗೂ ಪರಿಚಯವೇ ಇರಲಿಲ್ಲ. ಇವರು ಯಾರು ನನಗೆ ವಿಡಿಯೋ ಮಾಡುವಂತೆ ಹೇಳಿಲ್ಲ ಎಂದು ರಂಜಾನ್ ತಿಂಗಳಿನಲ್ಲಿ ಅಲ್ಲಾಹುವಿನ ಮೇಲೆ ಆಣೆ ಮಾಡುತ್ತೇನೆ. ವಿಡಿಯೋ ಬಿಡುಗಡೆಯಾದ ನಂತರ ನನಗೆ ಇವರ ಪರಿಚಯವಾಗಿದೆ ಎಂದು ಸಮೀರ್ ತಮ್ಮ ವಿರುದ್ಧ ಕೇಳಿ ಬಂದ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಒಟ್ಟಾರೆಯಾಗಿ ಅವರ ವಿರುದ್ಧವಾಗಿ ಬಂದಿರುವ ಎಲ್ಲಾ ಅವಹೇಳನಕಾರಿ ಟಿಕೆ- ಟಿಪ್ಪಣಿಗಳಿಗೆ ಸ್ಪಷ್ಟ ಉತ್ತರವನ್ನು ನೀಡಿದ್ದಾರೆ.
ಇನ್ನು ಸೌಜನ್ಯ ಪ್ರಕರಣದಲ್ಲಿ ಹಲವಾರು ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಡುತ್ತಿರುವ ಗಿರೀಶ್ ಮುಟ್ಟಣ್ಣನವರ್ ಫೇಸ್‌ಬುಕ್ ಲೈವ್‌ನಲ್ಲಿ ಮಾತನಾಡಿ, ಸಮೀರ್ ತಮ್ಮ ವಿಡಿಯೋದಲ್ಲಿ ಯಾರ ಹೆಸರನ್ನು ಬಳಸಿಲ್ಲ. ಇನ್ನು ದೇವಸ್ಥಾನದ ಕುರಿತು ಯಾವುದೇ ಆಕ್ಷೇಪಾರ್ಹ ಹೇಳಿಕೆಯನ್ನು ನೀಡಿಲ್ಲ. ಸುಪ್ರೀಂಕೋರ್ಟ್‌ಗೆ ಅವರೇ ಬರೆದುಕೊಟ್ಟಂತಹ ಹೇಳಿಕೆಯನ್ನು ಸಮೀರ್ ತಮ್ಮ ವಿಡಿಯೋದಲ್ಲಿ ಉಲ್ಲೇಖಿಸಿದ್ದಾರೆ. ಇಲ್ಲಿ ಯಾವುದೇ ಅವಹೇಳನಕಾರಿ ಹೇಳಿಕೆಯಾಗಲಿ, ಅಥವಾ ಸಂಸ್ಕೃತಿಗೆ ಧಕ್ಕೆ ತರುವಂತಹ ವಿಚಾರಗಳನ್ನಾಗಲಿ ಅವರು ಹೇಳಿಲ್ಲ. ಹೊರತಾಗಿ ಸೌಜನ್ಯಳ ಪ್ರಕರಣದ ಕುರಿತು ಸಂಪೂರ್ಣ ಅಧ್ಯಯನ ನಡೆಸಿ ಸತ್ಯವನ್ನು ಹೇಳಿದ್ದಾರೆ. ಸೌಜನ್ಯಳನ್ನು ನಿಮ್ಮ ಮನೆ ಮಗಳು ಎಂದು ತಿಳಿದುಕೊಳ್ಳಿ ಎಂದು ಮನವಿ ಮಾಡಿಕೊಡರು.
ಸಮೀರ್ ಅವರನ್ನು ಬಂಧಿಸಬೇಕು ಎಂಬ ಉದ್ದೇಶದಿಂದಲೇ ಪೊಲೀಸರು ಬಳ್ಳಾರಿಯಿಂದ ಆಗಮಿಸಿದ್ದರು. ಬಳ್ಳಾರಿ ಕೌಲ್ ಬಜಾರ್ ಠಾಣೆಯ ಅಧಿಕಾರಿಗಳು, ಬಳ್ಳಾರಿ ಎಸ್‌ಪಿ, ಬೆಂಗಳೂರು ಗ್ರಾಮಾಂತರ ಎಸ್‌ಪಿ ಮತ್ತು ಇಲ್ಲಿಯ ಸ್ಥಳೀಯ ಆವಲಹಳ್ಳಿಯ ಪೊಲೀಸರೊಂದಿಗೂ ನಾವು ಮಾತನಾಡಿದ್ದೇವೆ. ತನಿಖೆಗೆ ಸಹಕರಿಸೋದಾಗಿ ಹೇಳಿದ್ಮೇಲೆ ನೋಟಿಸ್ ನೀಡಿ ಹಿಂದಿರುಗಿದ್ದಾರೆ. ತನಿಖೆಯಿಂದ ತಪ್ಪಿಸಿಕೊಳ್ಳುವ ಮಾತೇ ಇಲ್ಲ. ತನಿಖೆಗೆ ಸಮೀರ್ ಬರುತ್ತಾನೆ ಎಂದು ಹೇಳಿದ್ದೇವೆ. ನಮ್ಮ ಮಾತನ್ನು ಒಪ್ಪಿಕೊಂಡಿರೋದಕ್ಕೆ ಪೊಲೀಸರಿಗೆ ಧನ್ಯವಾದ ಹೇಳುತ್ತೇವೆ ಎಂದರು.
ಈ ಸೌಜನ್ಯ ಪ್ರಕರಣದಲ್ಲಿ ಎಲ್ಲಾ ಧರ್ಮದವರನ್ನು ಸೇರಿಸುತ್ತಿದ್ದೇವೆ. ಇಲ್ಲಿ ಧರ್ಮದ ವಿಷಯವೇ ಇಲ್ಲ. ಸೌಜನ್ಯಾಳೇ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಪರಿಚಯಿಸಿದ್ದು. ಆಕೆಯಿಂದಲೇ ನನಗೆ ಮಹೇಶ್ ಅವರ ಪರಿಚಯವಾಯ್ತು. ಇದೀಗ ಸಮೀರ್ ಜೊತೆಯಲ್ಲಿ ನಾವೆಲ್ಲಾ ಇದ್ದೇವೆ. ನಮ್ಮೆಲ್ಲರನ್ನು ಪರಿಚಯಿಸಿ ಒಂದೆಡೆ ಸೇರಿಸುತ್ತಿರೋದು ಸೌಜನ್ಯ. ದೇವಸ್ಥಾನದ ಕುರಿತು ಹೇಳಿಕೆಯು ದಾಖಲೆಯಲ್ಲಿವೆ. ಧರ್ಮಸ್ಥಳದ ಮಂಜುನಾಥ ಸ್ವಾಮಿ ಅಥವಾ ಹಿಂದೂ ದೇಗುಲಕ್ಕೆ ಅವಮಾನ ಮಾಡಲಾಗ್ತಿದೆ ಎಂದು ಪ್ರಕರಣವನ್ನು ತಿರುಚಲಾಗುತ್ತಿದೆ. ವಿಡಿಯೋದಲ್ಲಿ ಹೇಳಿರುವ ವಿಷಯವೇ ಬೇರೆ, ಅಲ್ಲದೆ ಒಂದು ಹೆಣ್ಣು ಮಗಳಿಗೆ ನ್ಯಾಯ ಕೊಡಿಸುವುದಕ್ಕಾಗಿ ಮಾಡಿದ ವಿಡಿಯೋವನ್ನು ಬೇರೆಯವರು ಸದುಪಯೋಗಪಡಿಸಿಕೊಂಡು ಧರ್ಮದ ಹೆಸರಿಗೆ ತಿರುಚಿ ಅಂಟಿಸುತ್ತಿದ್ದಾರೆ. ಇದು ಕೊಂಚ ಬೇಸರದ ಸಂಗತಿಯಾದರೂ , ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಡೆಯುತ್ತದೆ ಎಂದು ಗಿರೀಶ್ ರವರು ಹೇಳಿದ್ದಾರೆ.
ನ್ಯಾಯ-ಅನ್ಯಾಯಗಳು ಆದಷ್ಟು ಬೇಗ ಎಲ್ಲರಿಗೂ ತಿಳಿಯುತ್ತದೆ. ಮಂಜುನಾಥ ಸ್ವಾಮಿ ಕಣ್ಣು ಬಿಟ್ಟಿದ್ದರಿಂದಲೇ, ನಿಜವಾದ ಆರೋಪಿಗಳು ಯಾರು ಅನ್ನೋದು ಸಮಾಜದ ಮುಂದೆ ಬರಲಿದೆ. ಆ ಮಂಜುನಾಥ ಸ್ವಾಮಿ ಕೃಪೆಯಿಂದಲೇ ನಾವು ಇಲ್ಲಿ ಸೇರುವಂತಾಗಿದೆ ಎಂದು ಸಮೀರ್ ಎಂ.ಡಿ. ಹೇಳಿದ್ದಾರೆ. ಇನ್ನು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಸಮೀರ್ ಅವರು ಮಾಡಿರುವ ವಿಡಿಯೋದ ಕುರಿತ ತನಿಖೆ ಎಲ್ಲಿಯವರೆಗೆ ಹೋಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.





