ಭರ್ಜರಿ ಆಕ್ಷನ್ ಸಿನಿಮಾದಲ್ಲಿ ಜಾನ್ ಸೀನ ಜೊತೆ ಪ್ರಿಯಾಂಕಾ ಚೋಪ್ರಾ….

ಹೌದು ವೀಕ್ಷಕರೇ ಇನ್ನೇನು ಸಿನಿಮಾ ಶೀಘ್ರವೇ ಬಿಡುಗಡೆಯಾಗಲಿದೆ.ನಟಿ ಪ್ರಿಯಾಂಕ ಚೋಪ್ರಾ ಹಾಲಿವುಡ್ ಮತ್ತು ಭಾರತೀಯ ಚಿತ್ರರಂಗ ಎರಡರಲ್ಲೂ ಸಕ್ಕತ್ ಬ್ಯುಸಿಯಾಗಿದ್ದಾರೆ. ಬಹುದೊಡ್ಡ ಹಾಲಿವುಡ್ ಸ್ಟಾರ್ ಗಳೊಂದಿಗೆ ಪ್ರಿಯಾಂಕ ಚೋಪ್ರಾ ನಟಿಸುತ್ತಾ ಇದ್ದಾರೆ. ಇನ್ನು wwe ಲೋಕದ ಸೂಪರ್ ಸ್ಟಾರ್ ಜಾನ್ ಸೀನ ಜೊತೆಗೆ ಪ್ರಿಯಾಂಕಾ ಚೋಪ್ರಾ ನಟಿಸಿರುವ ಹೊಸ ಸಿನಿಮಾ ಒಂದು ರಾ ಟ್ರೈಲರ್ ಬಿಡುಗಡೆಯಾಗಿದ್ದು. ಚಿತ್ರಮಂದಿರಗಳಲ್ಲಿ ಬಿಡುಗಡೆಯ ದಿನಾಂಕವನ್ನ ಘೋಷಣೆ ಮಾಡಿದ್ದಾರೆ ಚಿತ್ರತಂಡ.

ನಟಿ ಪ್ರಿಯಾಂಕಾ ಚೋಪ್ರಾ, ಹಾಲಿವುಡ್ ಮತ್ತು ಭಾರತೀಯ ಚಿತ್ರರಂಗ ಎರಡರಲ್ಲೂ ಬ್ಯುಸಿಯಾಗಿದ್ದಾರೆ. ರಾಜಮೌಳಿ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿರುವ ಪ್ರಿಯಾಂಕಾ ಚೋಪ್ರಾ ಅತ್ತ ಹಾಲಿವುಡ್ನಲ್ಲೂ ದೊಡ್ಡ ಪ್ರೊಡಕ್ಷನ್ ಹೌಸ್ಗಳ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕೆಲ ತಿಂಗಳ ಹಿಂದಷ್ಟೆ ಭರ್ಜರಿ ಆಕ್ಷನ್ ವೆಬ್ ಸರಣಿ ‘ಸಿಟಾಡೆಲ್ ನಲ್ಲಿ ನಟಿಸಿದ್ದ ಪ್ರಿಯಾಂಕಾ ಚೋಪ್ರಾ ಇದೀಗ ಅದಕ್ಕೂ ದೊಡ್ಡ ಆಕ್ಷನ್ ಸಿನಿಮಾನಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾದ ಟ್ರೈಲರ್ ಇದೀಗ ಬಿಡುಗಡೆ ಆಗಿದ್ದು, ಸಿನಿಮಾದ ಬಿಡುಗಡೆ ದಿನಾಂಕ ಸಹ ಘೋಷಣೆಯಾಗಿದೆ.

ಡಬ್ಲುಡಬ್ಲುಇ ಚಾಂಪಿಯನ್ ಆಗಿದ್ದ ಜಾನ್ ಸೀನಾ, ಪ್ರಿಯಾಂಕಾ ಚೋಪ್ರಾ ಹಾಗೂ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪಡೆದಿರುವ ಬ್ರಿಟೀಷ್ ನಟ ಇದ್ರಿಸ್ ಇಲ್ಬಾ ಅವರುಗಳು ಒಟ್ಟಿಗೆ ನಟಿಸಿರುವ ‘ಹೆಡ್ಸ್ ಆಫ್ ಸ್ಟೇಟ್’ ಸಿನಿಮಾ ಶೀಘ್ರವೇ ಬಿಡುಗಡೆ ಆಗಲಿದೆ. ಸಿನಿಮಾನಲ್ಲಿ ಜಾನ್ ಸೀನಾ, ಅಮೆರಿಕದ ಅಧ್ಯಕ್ಷನ ಪಾತ್ರದಲ್ಲಿ, ಇದ್ರಿಸ್ ಇಲ್ಬಾ ಬ್ರಿಟನ್ ಪ್ರಧಾನಿಯ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಿಯಾಂಕಾ ಚೋಪ್ರಾ ಅವರದ್ದು ಈ ಇಬ್ಬರನ್ನೂ ರಕ್ಷಿಸುವ ಎಂಐ6 ಏಜೆಂಟ್ನ ಪಾತ್ರ. ಸಿನಿಮಾದಲ್ಲಿ ಭರ್ಜರಿ ಆಕ್ಷನ್ ಮತ್ತು ಕಾಮಿಡಿ ಇದೆ.

ಸಿನಿಮಾದ ಟ್ರೈಲರ್ನಲ್ಲಿ ತೋರಿಸಿರುವಂತೆ ಜಾನ್ ಸೀನಾ ಹಾಗೂ ಇದ್ರಿಸ್ ಇಲ್ಬಾ ಅವರುಗಳು ರಾಜತಾಂತ್ರಿಕ ಪ್ರವಾಸದಲ್ಲಿ ಒಟ್ಟಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿರುವಾಗ ವಿಮಾನದ ಮೇಲೆ ದಾಳಿಯಾಗುತ್ತದೆ. ಇಬ್ಬರೂ ಸಹ ವಿಮಾನದಿಂದ ಹೇಗೋ ತಪ್ಪಿಸಿಕೊಂಡು ಅರಣ್ಯ ಸೇರಿಕೊಳ್ಳುತ್ತಾರೆ. ಅಲ್ಲಿಂದ ಅವರ ಮೇಲೆ ವೈರಿಗಳ ಸತತ ದಾಳಿ ಶುರುವಾಗುತ್ತದೆ. ನಟಿ ಪ್ರಿಯಾಂಕಾ ಚೋಪ್ರಾ ಈ ಇಬ್ಬರನ್ನೂ ಅಪಾಯದಿಂದ ರಕ್ಷಿಸುತ್ತಾರೆ. ಸಿನಿಮಾದಲ್ಲಿ ಭರ್ಜರಿ ಆಕ್ಷನ್ ಜೊತೆಗೆ ಸಾಕಷ್ಟು ಕಾಮಿಡಿ ದೃಶ್ಯಗಳು ಸಹ ಇವೆ.‘ಹೆಡ್ಸ್ ಆಫ್ ಸ್ಟೇಟ್’ ಸಿನಿಮಾವನ್ನು ರಷಿಯನ್ ಸಿನಿಮಾ ನಿರ್ದೇಶಕ ಇಲ್ಯಾ ನೈಶಲರ್ ನಿರ್ದೇಶನ ಮಾಡಿದ್ದಾರೆ. ದಿ ಸ್ಯಾಫರನ್ ಕಂಪೆನಿ, ಬಿಗ್ ಇಂಡಿ ಪಿಕ್ಚರ್ಸ್ನವರು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ‘ಹೆಡ್ಸ್ ಆಫ್ ಸ್ಟೇಟ್’ ಸಿನಿಮಾವು ಜುಲೈ 02ಕ್ಕೆ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಲಿದೆ.

Related Posts

ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ!

ಕ್ರೀಡೆ ಅಂದಾಗ ಅಲ್ಲಿ ಎದುರಾಳಿಗಳ ವಿರುದ್ಧ ಗೆಲ್ಲಲೇಬೇಕು ಎನ್ನುವ ಹಠ ಇದ್ದೇ ಇರುತ್ತದೆ. ಆದರೆ ಇಲ್ಲೊಂದು ಮ್ಯಾರಾಥಾನ್‌ನಲ್ಲಿ ಸೋಲು-ಗೆಲುವುಗಿಂತಲೂ ಮಾನವೀಯತೆ ಮುಖ್ಯ ಅನ್ನೋದನ್ನು ಇಬ್ಬರು ಯುವ ಕ್ರೀಡಾಪಟುಗಳು ತೋರಿಸಿಕೊಟ್ಟಿದ್ದಾರೆ‌. ತಮ್ಮ ವೈಯಕ್ತಿಕ ದಾಖಲೆಯನ್ನು ಬದಿಗಿಟ್ಟು ಸಂಕಷ್ಟದಲ್ಲಿದ್ದ ಸಹ ಕ್ರೀಡಾಪಟುವಿಗೆ ಸಹಾಯ ಮಾಡುವ…

ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ

ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 25 ರಿಂದ 28 ರೂಪಾಯಿಗಳಷ್ಟು ಹೆಚ್ಚಾಗಲಿದೆ ಎಂಬ ವದಂತಿಗಳು ಹರಡಿವೆ. ಆದರೆ, ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಈ ವರದಿಗಳನ್ನು ಅಧಿಕೃತವಾಗಿ…

You Missed

ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ!

ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ!

ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ

ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ದಾಖಲೆ ಬರೆದ ವಿದ್ಯಾರ್ಥಿಗಳು, 7 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ!

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ದಾಖಲೆ ಬರೆದ ವಿದ್ಯಾರ್ಥಿಗಳು, 7 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ!

ಸಿ.ಟಿ. ರವಿ, ಪ್ರಧಾನಿ ಮೋದಿಯವರ ಕುರಿತಾದ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ಕಠಿಣವಾಗಿ ಖಂಡಿಸಿದ್ದಾರೆ.

ಸಿ.ಟಿ. ರವಿ, ಪ್ರಧಾನಿ ಮೋದಿಯವರ ಕುರಿತಾದ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ಕಠಿಣವಾಗಿ ಖಂಡಿಸಿದ್ದಾರೆ.

ಸೂರ್ಯವಂಶಿ, ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಬಾಲ್ಯದಿಂದಲೂ ಎದುರಿಸುತ್ತಾ ಬಂದಿರುವ ಜಾತಿ ತಾರತಮ್ಯ ಮತ್ತು ಬಣ್ಣದ ಅಸಮಾನತೆಯ ಬಗ್ಗೆ ಕಹಿ ಸತ್ಯಗಳನ್ನು ಹಂಚಿಕೊಂಡಿದ್ದಾರೆ.

ಸೂರ್ಯವಂಶಿ, ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಬಾಲ್ಯದಿಂದಲೂ ಎದುರಿಸುತ್ತಾ ಬಂದಿರುವ ಜಾತಿ ತಾರತಮ್ಯ ಮತ್ತು ಬಣ್ಣದ ಅಸಮಾನತೆಯ ಬಗ್ಗೆ ಕಹಿ ಸತ್ಯಗಳನ್ನು ಹಂಚಿಕೊಂಡಿದ್ದಾರೆ.

ನ್ಯಾಯಾಂಗದ ಮೇಲೆ ಭರವಸೆ ಮೂಡಿಸಿದ ಇತ್ತೀಚಿನ ಮಹತ್ವದ ತೀರ್ಪುಗಳು

ನ್ಯಾಯಾಂಗದ ಮೇಲೆ ಭರವಸೆ ಮೂಡಿಸಿದ ಇತ್ತೀಚಿನ ಮಹತ್ವದ ತೀರ್ಪುಗಳು