ಯುವಕರ ನೆಚ್ಚಿನ ಹಳ್ಳಿಕಾರ್ ತಳಿ “ಮೈಸೂರು ರಾಣಿ” ಇನ್ನಿಲ್ಲ!

ಮೈಸೂರು: ಮೈಸೂರು ರಾಣಿ ಅಂದ್ರೆ ರೇಸ್ ಗೆ ನಿಂತರೆ ಅದನ್ನಾ ಮೀರಿಸೋರೆ ಇರಲಿಲ್ಲ. ಮೈಸೂರಷ್ಟೇ ಅಲ್ಲ ಮಂಡ್ಯ, ತುಮಕೂರು, ಬೆಂಗಳೂರು, ಚಿಕ್ಕಮಗಳೂರು ಪಂದ್ಯದಲ್ಲೂ ಸೈ ಎನಿಸಿಕೊಂಡಿದ್ದ ಹಂಚ್ಯಾ ಗ್ರಾಮದ ಯುವಕರ ನೆಚ್ಚಿನ ಮೈಸೂರು ರಾಣಿ ಇನ್ನಿಲ್ಲ.

ಮೈಸೂರು ತಾಲ್ಲೂಕಿನ ಹಂಚ್ಯಾಗ್ರಾಮದ ಶ್ರೀಧರ್ ಗೌಡ ಅವರು ಸಾಕಿದ್ದ ರೇಸ್ ಹಸು ತಡರಾತ್ರಿ ಆಕಸ್ಮಿಕವಾಗಿ ಸಾವನಪ್ಪಿದೆ. ಜೋಡೆತ್ತಿನ ಗಾಡಿ ಓಟದಲ್ಲಿ ಇದುವರೆವಿಗೂ ಬರೋಬ್ಬರಿ 70 ಕ್ಕೂ ಹೆಚ್ಚು ರೇಸ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮೈಸೂರು ರಾಣಿ ಖ್ಯಾತಿಯ ಹಸು ಮೈಸೂರಿನ ರೇಸ್ ಹುಡುಗರ ಮನಸ್ಸು ಗೆದ್ದ ರಾಣಿಯಾಗಿತ್ತು. ಜೋಡೆತ್ತಿನ ಗಾಡಿ ಸ್ಪರ್ಧೆ ಎಲ್ಲೇ ನಡೆದಿದ್ದರೂ ಅಲ್ಲಿ ಭಾಗವಹಿಸುತ್ತಿದ್ದ ಮೈಸೂರು ರಾಣಿ ನಿಧನಕ್ಕೆ ಇಡೀ ಗ್ರಾಮದ ಜನತೆ ಶೋಕ ವ್ಯಕ್ತಪಡಿಸಿದೆ.

ಹಳ್ಳಿಕಾರ್ ತಳಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಯುವಪಡೆ ಅದನ್ನು ಚಿಕ್ಕ ಕರುವಿನಿಂದಲೂ ಸಾಕಿ, ತರಬೇತಿ ನೀಡಿದ್ದರು. ಇದರ ಫಲವಾಗಿಯೇ 70 ಕ್ಕೂ ಹೆಚ್ಚು ಸ್ಪರ್ಧೆಗಳಲ್ಲಿ ಭಾಗವಹಿಸತ್ತಲ್ಲದೆ, ಭಾಗವಹಿಸಿದ ಸ್ಪರ್ಧೆಗಳೆಲ್ಲದರಲ್ಲೂ ಪ್ರಥಮ ಅಥವಾ ದ್ವೀತಿಯ ಸ್ಥಾನ ಪಡೆದಿತ್ತು. ಮಾತ್ರವಲ್ಲದೆ 70 ಕ್ಕೂ ಹೆಚ್ಚು ಯುವಕರು ಹಾಗೂ ಹಿರಿಯರ ಪ್ರೀತಿಯ ರಾಣಿಯಾಗಿ ಇನ್ನಿಲ್ಲದಕ್ಕೆ ವಿವಿಧ ಗ್ರಾಮದ ಯುವಕರು ಸಂತಾಪ ವ್ಯಕ್ತಪಡಿಸಿದ್ದಾರೆ.

Related Posts

ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ

ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 25 ರಿಂದ 28 ರೂಪಾಯಿಗಳಷ್ಟು ಹೆಚ್ಚಾಗಲಿದೆ ಎಂಬ ವದಂತಿಗಳು ಹರಡಿವೆ. ಆದರೆ, ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಈ ವರದಿಗಳನ್ನು ಅಧಿಕೃತವಾಗಿ…

ಸೂರ್ಯವಂಶಿ, ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಬಾಲ್ಯದಿಂದಲೂ ಎದುರಿಸುತ್ತಾ ಬಂದಿರುವ ಜಾತಿ ತಾರತಮ್ಯ ಮತ್ತು ಬಣ್ಣದ ಅಸಮಾನತೆಯ ಬಗ್ಗೆ ಕಹಿ ಸತ್ಯಗಳನ್ನು ಹಂಚಿಕೊಂಡಿದ್ದಾರೆ.

ಕರ್ನಾಟಕದ ತಮ್ಮ ಹುಟ್ಟೂರಿನಲ್ಲಿ ಇಂದಿಗೂ ಜಾತಿ ಪದ್ಧತಿ ಜೀವಂತವಾಗಿದ್ದು, ಊರಿನ ದೇವಸ್ಥಾನಕ್ಕೆ ತಮಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ, 12 ವರ್ಷದವರಿದ್ದಾಗ ಹೋಟೆಲೊಂದರಲ್ಲಿ ಊಟ ಮಾಡಿದ ನಂತರ ಹಣ ನೀಡಿದರೂ ಸಹ, ಕೆಳಜಾತಿಯವರೆಂಬ ಕಾರಣಕ್ಕೆ ತಟ್ಟೆಯನ್ನು…

You Missed

ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ!

ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ!

ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ

ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ದಾಖಲೆ ಬರೆದ ವಿದ್ಯಾರ್ಥಿಗಳು, 7 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ!

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ದಾಖಲೆ ಬರೆದ ವಿದ್ಯಾರ್ಥಿಗಳು, 7 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ!

ಸಿ.ಟಿ. ರವಿ, ಪ್ರಧಾನಿ ಮೋದಿಯವರ ಕುರಿತಾದ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ಕಠಿಣವಾಗಿ ಖಂಡಿಸಿದ್ದಾರೆ.

ಸಿ.ಟಿ. ರವಿ, ಪ್ರಧಾನಿ ಮೋದಿಯವರ ಕುರಿತಾದ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ಕಠಿಣವಾಗಿ ಖಂಡಿಸಿದ್ದಾರೆ.

ಸೂರ್ಯವಂಶಿ, ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಬಾಲ್ಯದಿಂದಲೂ ಎದುರಿಸುತ್ತಾ ಬಂದಿರುವ ಜಾತಿ ತಾರತಮ್ಯ ಮತ್ತು ಬಣ್ಣದ ಅಸಮಾನತೆಯ ಬಗ್ಗೆ ಕಹಿ ಸತ್ಯಗಳನ್ನು ಹಂಚಿಕೊಂಡಿದ್ದಾರೆ.

ಸೂರ್ಯವಂಶಿ, ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಬಾಲ್ಯದಿಂದಲೂ ಎದುರಿಸುತ್ತಾ ಬಂದಿರುವ ಜಾತಿ ತಾರತಮ್ಯ ಮತ್ತು ಬಣ್ಣದ ಅಸಮಾನತೆಯ ಬಗ್ಗೆ ಕಹಿ ಸತ್ಯಗಳನ್ನು ಹಂಚಿಕೊಂಡಿದ್ದಾರೆ.

ನ್ಯಾಯಾಂಗದ ಮೇಲೆ ಭರವಸೆ ಮೂಡಿಸಿದ ಇತ್ತೀಚಿನ ಮಹತ್ವದ ತೀರ್ಪುಗಳು

ನ್ಯಾಯಾಂಗದ ಮೇಲೆ ಭರವಸೆ ಮೂಡಿಸಿದ ಇತ್ತೀಚಿನ ಮಹತ್ವದ ತೀರ್ಪುಗಳು