ಸಿಎಂ ಸಿದ್ದರಾಮಯ್ಯ ಬೇನಾಮಿ ಆಸ್ತಿ: ಸ್ನೇಹಮಯಿ ಕೃಷ್ಣ ಮತ್ತೆ ಗಂಭೀರ ಆರೋಪ.

ಸಿದ್ದರಾಮಯ್ಯನವರು ಬೇನಾಮಿ ಹೆಸರಿನಲ್ಲಿ ಆಸ್ತಿ ಮಾಡಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಗಂಭೀರ ಆರೋಪ ಮಾಡಿದ್ದಾರೆ. ಕೆಸರೆ ಗ್ರಾಮದ ಜಾಗವನ್ನ ಅರಿಶಿನ ಕುಂಕುಮ ರೂಪದಲ್ಲಿ ಕೊಟ್ಟಿದ್ದಾರೆ ಎಂದಿದ್ರು ಈಗ ಮತ್ತೆ ಮಲ್ಲಿಕಾರ್ಜುನಸ್ವಾಮಿ ಒಂದು ಎಕರೆ ದಾನ ಮಾಡಿದ್ದಾರೆ.. ಯಾಕೆ ಮಲ್ಲಿಕಾರ್ಜುನಸ್ವಾಮಿ ಖರೀದಿ ಮಾಡಿದ ಭೂಮಿಗಳನ್ನೇ ದಾನ ಮಾಡ್ತಿದ್ದಾರೆ.

ಈ ಬಗ್ಗೆ ಸಿದ್ದರಾಮಯ್ಯನವರು ಎಲ್ಲಿಯೂ ಹೇಳಿಲ್ಲ ಯಾಕೆ..? ಮೊದಲು ಪಾರ್ವತಿಯವರ ಕುಟುಂಬದ ಆಸ್ತಿ ಎಷ್ಟು ಎಂಬುದು ಪತ್ತೆ ಮಾಡಿ ಆನಂತರ ಮಲ್ಲಿಕಾರ್ಜುನಸ್ವಾಮಿ ಎಷ್ಟು ಆಸ್ತಿ ಖರೀದಿ ಮಾಡಿದ್ದಾರೆ ಎಂಬುದನ್ನ ತನಿಖೆ ಮಾಡಿ ಎಂದು ತಿಳಿಸಿದ್ದಾರೆ. 1983ರಲ್ಲಿ ಆಲನಹಳ್ಳಿ ಸರ್ವೇ ನಂಬರ್ 113/4ರಲ್ಲಿ 1 ಎಕರೆ ಭೂಮಿ ಖರೀದಿ ಮಾಡಿದ್ದಾರೆ. 1996ರಲ್ಲಿ ಮುಡಾ ಅಂತಿಮ ಅಧಿಸೂಚನೆ ಹೊರಡಿಸಿದ್ರು ಕೂಡ ಡಿನೋಟಿಫೈ ಆಗಿದೆ. ಸಿದ್ದರಾಮಯ್ಯನವರ ಪ್ರಭಾವದಿಂದ ಡಿನೋಟಿಫೈ ಆಗಿದೆ ಎಂದು ಸ್ನೇಹಮಯಿ ಕೃಷ್ಣ ಆರೋಪಸಿದ್ದಾರೆ.
EDಯವರ ಪ್ರೆಸ್ ರಿಲೀಸ್‌ಗೂ ನನಗೂ ಸಂಬಂಧ ಇಲ್ಲ
ಜೊತೆಗೆ ಅದೇ ಭೂಮಿಯನ್ನ 2010 ಅಕ್ಟೊಬರ್‌ನಲ್ಲಿ ಪಾರ್ವತಿಗೆ ದಾನ ಮಾಡಲಾಗಿದೆ ಪಾರ್ವತಿಯವರು ಕೂಡ ಒಂದೇ ತಿಂಗಳಲ್ಲಿ ಮಗನ ಹೆಸರಿಗೆ ದಾನ ಮಾಡಿದ್ದಾರೆ. ತಮ್ಮ ಹೆಸರಿಗೆ ಬಂದ ಭೂಮಿಯನ್ನ ಯತೀಂದ್ರ 4 ತಿಂಗಳಲ್ಲಿ ಮಾರಾಟ ಮಾಡಿದ್ದಾರೆ
ಈ ಎಲ್ಲಾ ವಿಚಾರಗಳನ್ನು ಇಲ್ಲಿವರೆಗೆ ಯಾಕೆ ಸಿದ್ದರಾಮಯ್ಯನವರು ತಿಳಿಸಿಲ್ಲ ಎಂದು ಕಿಡಿ ಕಾರಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ದೂರು ನೀಡಿದ್ದೇನೆ.

ಅಧಿಕಾರಿಗಳು ವಿಳಂಬ ನೀತಿ ತೋರಿಸಿದ್ರೆ ಕಾನೂನು ಹೋರಾಟ ಮುಂದುವರೆಸುತ್ತೇನೆ ಎಂದು ಮೈಸೂರಿನಲ್ಲಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಹೇಳಿಕೆಯನ್ನ ನೀಡಿದ್ದಾರೆ

Related Posts

ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ!

ಕ್ರೀಡೆ ಅಂದಾಗ ಅಲ್ಲಿ ಎದುರಾಳಿಗಳ ವಿರುದ್ಧ ಗೆಲ್ಲಲೇಬೇಕು ಎನ್ನುವ ಹಠ ಇದ್ದೇ ಇರುತ್ತದೆ. ಆದರೆ ಇಲ್ಲೊಂದು ಮ್ಯಾರಾಥಾನ್‌ನಲ್ಲಿ ಸೋಲು-ಗೆಲುವುಗಿಂತಲೂ ಮಾನವೀಯತೆ ಮುಖ್ಯ ಅನ್ನೋದನ್ನು ಇಬ್ಬರು ಯುವ ಕ್ರೀಡಾಪಟುಗಳು ತೋರಿಸಿಕೊಟ್ಟಿದ್ದಾರೆ‌. ತಮ್ಮ ವೈಯಕ್ತಿಕ ದಾಖಲೆಯನ್ನು ಬದಿಗಿಟ್ಟು ಸಂಕಷ್ಟದಲ್ಲಿದ್ದ ಸಹ ಕ್ರೀಡಾಪಟುವಿಗೆ ಸಹಾಯ ಮಾಡುವ…

ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ

ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 25 ರಿಂದ 28 ರೂಪಾಯಿಗಳಷ್ಟು ಹೆಚ್ಚಾಗಲಿದೆ ಎಂಬ ವದಂತಿಗಳು ಹರಡಿವೆ. ಆದರೆ, ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಈ ವರದಿಗಳನ್ನು ಅಧಿಕೃತವಾಗಿ…

You Missed

ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ!

ಗೆಲುವನ್ನು ಲೆಕ್ಕಿಸದೆ ಕುಸಿದು ಬಿದ್ದ ಓಟಗಾರನಿಗೆ ನೆರವಾದ ಸಹ-ಸ್ಪರ್ಧಿಗಳು; ಹೃದಯಸ್ಪರ್ಶಿ ವಿಡಿಯೋ!

ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ

ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕೇಂದ್ರ ಸರ್ಕಾರದ ಸ್ಪಷ್ಟನೆ

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ದಾಖಲೆ ಬರೆದ ವಿದ್ಯಾರ್ಥಿಗಳು, 7 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ!

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ದಾಖಲೆ ಬರೆದ ವಿದ್ಯಾರ್ಥಿಗಳು, 7 ವಿದ್ಯಾರ್ಥಿಗಳಿಗೆ ಪೂರ್ಣ ಅಂಕ!

ಸಿ.ಟಿ. ರವಿ, ಪ್ರಧಾನಿ ಮೋದಿಯವರ ಕುರಿತಾದ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ಕಠಿಣವಾಗಿ ಖಂಡಿಸಿದ್ದಾರೆ.

ಸಿ.ಟಿ. ರವಿ, ಪ್ರಧಾನಿ ಮೋದಿಯವರ ಕುರಿತಾದ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ಕಠಿಣವಾಗಿ ಖಂಡಿಸಿದ್ದಾರೆ.

ಸೂರ್ಯವಂಶಿ, ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಬಾಲ್ಯದಿಂದಲೂ ಎದುರಿಸುತ್ತಾ ಬಂದಿರುವ ಜಾತಿ ತಾರತಮ್ಯ ಮತ್ತು ಬಣ್ಣದ ಅಸಮಾನತೆಯ ಬಗ್ಗೆ ಕಹಿ ಸತ್ಯಗಳನ್ನು ಹಂಚಿಕೊಂಡಿದ್ದಾರೆ.

ಸೂರ್ಯವಂಶಿ, ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಬಾಲ್ಯದಿಂದಲೂ ಎದುರಿಸುತ್ತಾ ಬಂದಿರುವ ಜಾತಿ ತಾರತಮ್ಯ ಮತ್ತು ಬಣ್ಣದ ಅಸಮಾನತೆಯ ಬಗ್ಗೆ ಕಹಿ ಸತ್ಯಗಳನ್ನು ಹಂಚಿಕೊಂಡಿದ್ದಾರೆ.

ನ್ಯಾಯಾಂಗದ ಮೇಲೆ ಭರವಸೆ ಮೂಡಿಸಿದ ಇತ್ತೀಚಿನ ಮಹತ್ವದ ತೀರ್ಪುಗಳು

ನ್ಯಾಯಾಂಗದ ಮೇಲೆ ಭರವಸೆ ಮೂಡಿಸಿದ ಇತ್ತೀಚಿನ ಮಹತ್ವದ ತೀರ್ಪುಗಳು