ಕೈ MLA ಪುಟ್ಟರಂಗ ಶೆಟ್ಟಿಗೆ ಸಂಕಷ್ಟ , ವಿಧಾನದ 25 ಲಕ್ಷ ಕಿಕ್ ಬ್ಯಾಕ್ ಪ್ರಕರಣ; ಹೆಚ್ಚುವರಿ ತನಿಖೆಗೆ ಹೈ ಕೋರ್ಟ್ ಆದೇಶ.

ಆರು ವರ್ಷಗಳ ಹಿಂದೆ ಸಚಿವರಿಗೆ ತಲುಪಬೇಕಿದ್ದ 25.76 ಲಕ್ಷ ರೂ.ಗಳು ವಿಧಾನಸೌಧದಲ್ಲಿಯೇ ಜಪ್ತಿಯಾದ ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುವಂತೆ ಲೋಕಾಯುಕ್ತ ಲೋಕಾಯುಕ್ತ ಪೊಲೀಸರಿಗೆ ನ್ಯಾಯಾಲಯ ಆದೇಶಿಸಿದೆ.
ಇದರ ಬೆನ್ನಲ್ಲೇ ಪ್ರಕರಣಕ್ಕೆ ಮರುಜೀವ ನೀಡಲು ಪ್ರತ್ಯೇಕ ತನಿಖಾ ತಂಡ ನೇಮಿಸುವ ಕುರಿತು ಲೋಕಾಯುಕ್ತ ಉನ್ನತ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಮರುತನಿಖೆ ಹಿನ್ನೆಲೆಯಲ್ಲಿ ಹಾಲಿ ಶಾಸಕ ಪುಟ್ಟರಂಗಶೆಟ್ಟಿ ಹಾಗೂ ಅನಂತಶಂಕರ್, ಶ್ರೀನಿಧಿ ಸೇರಿದಂತೆ ಐವರು ಮಧ್ಯವರ್ತಿಗಳು, ಹಲವು ಗುತ್ತಿಗೆದಾರರಿಗೆ ಪುನಃ ಲೋಕಾಯುಕ್ತ ವಿಚಾರಣೆಯ ಬಿಸಿತಟ್ಟುವ ಸಾಧ್ಯತೆ ನಿಚ್ಚಳವಾಗಿವೆ. ಅಂದಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಪುಟ್ಟರಂಗಶೆಟ್ಟಿ ಅವರ ಕಚೇರಿ ಸಿಬ್ಬಂದಿಗೆ ಗುತ್ತಿಗೆದಾರರ ಪರವಾಗಿ ಲಂಚ ಕೊಟ್ಟಿದ್ದ ಮಧ್ಯವರ್ತಿಗಳಿಗೆ ‘ಕ್ಲೀನ್ ಚಿಟ್’ ಹಾಗೂ ಭ್ರಷ್ಟಾಚಾರದ ಕುರಿತ ಆಳ ತನಿಖೆಯನ್ನೇ ಕೈಗೊಳ್ಳದ ‘ಲೋಕಾ’ ಕಾರ್ಯವೈಖರಿ ಕುರಿತು ಹಲವು ಪ್ರಶ್ನೆಗಳು ಎದ್ದಿದ್ದವು. ಈ ಅಂಶಗಳನ್ನು ಪುಷ್ಟಿಕರಿಸುವಂತೆ ಇಡೀ ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಆದೇಶಿಸಿದೆ.

ಶೇ.6ರಷ್ಟು ಕಮಿಷನ್ ನಡೆಯುತ್ತಿತ್ತು!:
ಆರೋಪಿ ಮೋಹನ್‌ಕುಮಾರ್, “2019ರ ಜ.3 ಹಾಗೂ 4ರಂದು ಗುತ್ತಿಗೆದಾರರ ಪರವಾಗಿ ಅನಂತಶಂಕರ್, ಶ್ರೀನಿಧಿ, ನಂದನ್, ಎ.ವಿ. ಮಂಜುನಾಥ, ಕೃಷ್ಣಮೂರ್ತಿ ಅವರಿಂದ ಪ್ರತ್ಯೇಕವಾಗಿ 25.76 ಲಕ್ಷ ರೂ. ಸಂಗ್ರಹಿಸಿ ಸಚಿವರ ಕೊಠಡಿಯಲ್ಲಿಯೇ ಇರಿಸಿದ್ದ. ಜ.4 ರಂದು ಹಣವನ್ನು ಬ್ಯಾಗ್‌ನಲ್ಲಿ ತುಂಬಿಕೊಂಡು ಸಚಿವರಿಗೆ ಲಂಚವಾಗಿ ನೀಡಲು ತೆರಳುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದೆ. ಎಂದು ತಪ್ರೊಪ್ಪಿಗೆ ಹೇಳಿಕೆ ನೀಡಿದ್ದರು.

ಅಷ್ಟೇ ಅಲ್ಲದೆ, “ಸಚಿವ ಪುಟ್ಟರಂಗಶೆಟ್ಟಿ ಅವರು ಹಿಂದುಳಿದ ವರ್ಗಗಳ ಇಲಾಖೆ ವತಿಯಿಂದ ನಡೆಯುವ ಕಾಮಗಾರಿಗಳಿಗೆ ಶೇ.6ರಷ್ಟು ಕಮಿಷನ್ ಪಡೆಯುತ್ತಾರೆ,” ಎಂಬ ಸಂಗತಿಯನ್ನು ಮೋಹನ್‌ಕುಮಾರ್, ಗುತ್ತಿಗೆದಾರರಿಗೆ ತಿಳಿಸಿದ್ದರು. ಜತೆಗೆ, ಮೋಹನ್ ಕುಮಾರ್. ಬಳಿ ದೊರೆತ ಹಣ ಯಾವ್ಯಾವ ಕ್ಷೇತ್ರದ ಕಾಮಗಾರಿಗೆ ಯಾವ ಗುತ್ತಿಗೆದಾರರು ಮಧ್ಯವರ್ತಿಗಳ ಬಳಿ ಕೊಟ್ಟುಕಳಿಸಿದ್ದ ಕಮಿಷನ್ ಎಂಬುದೂ ತನಿಖೆಯಲ್ಲಿ ಗೊತ್ತಾಗಿತ್ತು. ಪೂರಕ ಸಾಕ್ಷ್ಯಾಧಾರಗಳು ದೊರೆತರೂ ಸರಕಾರಿ ವ್ಯವಸ್ಥೆಯಲ್ಲಿ ಆಳವಾಗಿ ಹುದುಗಿರುವ ಭ್ರಷ್ಟಾಚಾರದ ಕುರಿತು ಲೋಕಾಯುಕ್ತ ಆಳವಾಗಿ ತನಿಖೆ ನಡೆಸಿಲ್ಲ. ಜತೆಗೆ, ಸಹ ಆರೋಪಿಗಳಿಗೆ ಕ್ಲೀನ್ ಚಿಟ್ ನೀಡಿ ಕೈ ತೊಳೆದುಕೊಂಡಿದ್ದಾರೆ. ಹೀಗಾಗಿ, ಪ್ರಕರಣ ಹೆಚ್ಚುವರಿ ತನಿಖೆ ನಡೆಯಬೇಕಿದೆ ಎಂದು ಮೂಲಗಳು ತಿಳಿಸಿವೆ.
ಕ್ಲೀನ್ ಚಿಟ್ ನೀಡಿತ್ತು ಲೋಕಾಯುಕ್ತ
2019ರ ಜ.4ರಂದು ಅಂದಿನ ಸಚಿವ ಪುಟ್ಟರಂಗಶೆಟ್ಟಿ ಅವರ ಕಚೇರಿಯ ಟೈಪಿಸ್ಟ್‌ಎಸ್.ಜೆ. ಮೋಹನ್ ಕುಮಾರ್ ಬಳಿ 25.76 ಲಕ್ಷರೂ. ನಗದು ಇದ್ದ ಬ್ಯಾಗನ್ನು ವಿಧಾನಸೌಧ ಗೇಟ್‌ನಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದರು. ಅನಧಿ ಕೃತವಾಗಿ ದೊರೆತಿದ್ದ ಹಣ ರಾಜಕೀಯ ಕೋಲಾಹಲಕ್ಕೂ ಕಾರಣವಾಗಿತ್ತು. ಈ ಪ್ರಕರಣದ ತನಿಖೆ ನಡೆಸಿದ್ದ ಅಂದಿನ ಎಸಿಬಿ ಅಧಿಕಾರಿಗಳು, ಮೋಹನ್ ಕುಮಾರ್, ಶ್ರೀನಿಧಿ, ಆನಂತಶಂಕರ್, ನಂದನ, ಮಂಜುನಾಥ್, ಕೃಷ್ಣಮೂರ್ತಿ ಅವರನ್ನು ಆರೋಪಿಗಳನ್ನಾಗಿ ಪರಿಗಣಿಸಿ ಭ್ರಷ್ಟಾಚಾರ ನಿಗ್ರಹ ಕಾಯಿದೆ ಅನ್ವಯ ತನಿಖೆ ನಡೆಸುತ್ತಿದ್ದರು. ಈ ಪ್ರಕರಣ 2023ರಲ್ಲಿ ಲೋಕಾಯುಕ್ತಕ್ಕೆ ಹಸ್ತಾಂತರವಾಗಿದ್ದು, ತನಿಖಾಧಿಕಾರಿಯು ಮೋಹನ್‌ಕುಮಾರ್ ಅವರನ್ನು ಮಾತ್ರ ಆರೋಪಿಯನ್ನಾಗಿ ಪರಿಗಣಿಸಿ ಚಾರ್ಜ್‌ಶೀಟ್ ಸಲ್ಲಿಸಿದ್ದರು.

Related Posts

3 ದಶಕಗಳ ಬಳಿಕ ನಟಿ ಬಿಂದ್ಯಾ ಕ್ಷಮೆ ಕೇಳಿದ್ದೇಕೆ?

ಕನ್ನಡ ಚಿತ್ರರಂಗದ ಕ್ಲಾಸಿಕ್ ಸಿನಿಮಾ ಎಂಬ ಖ್ಯಾತಿ ‘ಹಳ್ಳಿ ಮೇಷ್ಟ್ರು’ ಚಿತ್ರಕ್ಕಿದೆ. ಈ ಸಿನಿಮಾ ಬಿಡುಗಡೆಯಾಗಿ 3 ದಶಕಗಳೇ ಕಳೆದಿವೆ. ಈ ಚಿತ್ರದ ಶೂಟಿಂಗ್ ಸಮಯದಲ್ಲಿ ನಡೆದಿದ್ದ ಒಂದು ವಿವಾದ ಮಾತ್ರ ನಟಿ ಬಿಂದಿಯಾ ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್ ನಡುವೆ ದೊಡ್ಡ…

ಭೀಮಾ ನದಿ ತೀರದಲ್ಲಿ ಒಂದೇ ಕುಟುಂಬದ ಐವರು ಸೇರಿ 6 ಜನರ ಭೀಕರ ಕೊ*ಲೆ!

ವಿಜಯಪುರ ಜಿಲ್ಲೆಯ ಭೀಮಾ ನದಿ ತೀರದಲ್ಲಿ ಮತ್ತೆ ನೆತ್ತರ ಹರಿದಿದ್ದು, ಭೀಕರ ಸಾಮೂಹಿಕ ಹತ್ಯಾಕಾಂಡ ಇಡೀ ಜಿಲ್ಲೆಯನ್ನು ತಲ್ಲಣಗೊಳಿಸಿದೆ. ಜಮೀನು ವ್ಯಾಜ್ಯದ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ಐವರು ಹಾಗೂ ಅವರ ಸ್ನೇಹಿತ ಸೇರಿದಂತೆ ಒಟ್ಟು ಆರು ಜನರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ, ಗುಂಡು…

You Missed

ಮತದಾರರ ಪಟ್ಟಿ ಪರಿಷ್ಕರಣೆ (SIR): ಅಧಿಕಾರಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ

ಮತದಾರರ ಪಟ್ಟಿ ಪರಿಷ್ಕರಣೆ (SIR): ಅಧಿಕಾರಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ

3 ದಶಕಗಳ ಬಳಿಕ ನಟಿ ಬಿಂದ್ಯಾ ಕ್ಷಮೆ ಕೇಳಿದ್ದೇಕೆ?

3 ದಶಕಗಳ ಬಳಿಕ  ನಟಿ ಬಿಂದ್ಯಾ  ಕ್ಷಮೆ ಕೇಳಿದ್ದೇಕೆ?

ಭೀಮಾ ನದಿ ತೀರದಲ್ಲಿ ಒಂದೇ ಕುಟುಂಬದ ಐವರು ಸೇರಿ 6 ಜನರ ಭೀಕರ ಕೊ*ಲೆ!

ಭೀಮಾ ನದಿ ತೀರದಲ್ಲಿ  ಒಂದೇ ಕುಟುಂಬದ ಐವರು ಸೇರಿ 6 ಜನರ ಭೀಕರ ಕೊ*ಲೆ!

ಕರ್ನಾಟಕ ನೂತನ ಸಿಎಂ ಆಯ್ಕೆ: ಇಂದು ಸಂಜೆ ವಿಧಾನಸೌಧದಲ್ಲಿ ಮಹತ್ವದ ಸಿಎಲ್‌ಪಿ ಸಭೆ

ಕರ್ನಾಟಕ ನೂತನ ಸಿಎಂ ಆಯ್ಕೆ: ಇಂದು ಸಂಜೆ ವಿಧಾನಸೌಧದಲ್ಲಿ ಮಹತ್ವದ ಸಿಎಲ್‌ಪಿ ಸಭೆ

ಆತ್ಮನಿರ್ಭರ ಭಾರತಕ್ಕೆ ದೊಡ್ಡ ಬಲ: ಅತ್ಯಂತ ಬಲಿಷ್ಠ ‘ವೆಲ್ಡೆಡ್ ಪೈಪ್’ ಉತ್ಪಾದಿಸಿ ದಾಖಲೆ ಬರೆದ AM/NS ಇಂಡಿಯಾ!

ಆತ್ಮನಿರ್ಭರ ಭಾರತಕ್ಕೆ ದೊಡ್ಡ ಬಲ: ಅತ್ಯಂತ ಬಲಿಷ್ಠ ‘ವೆಲ್ಡೆಡ್ ಪೈಪ್’ ಉತ್ಪಾದಿಸಿ ದಾಖಲೆ ಬರೆದ AM/NS ಇಂಡಿಯಾ!

ಕರ್ನಾಟಕ ರಾಜಕೀಯದಲ್ಲಿ ಹೈಡ್ರಾಮಾ: ಸಿದ್ದರಾಮಯ್ಯ ರಾಜೀನಾಮೆಗೆ ಹೈಕಮಾಂಡ್ ಗಡುವು!

ಕರ್ನಾಟಕ ರಾಜಕೀಯದಲ್ಲಿ ಹೈಡ್ರಾಮಾ: ಸಿದ್ದರಾಮಯ್ಯ ರಾಜೀನಾಮೆಗೆ ಹೈಕಮಾಂಡ್ ಗಡುವು!