
ಈ ಬಗ್ಗೆ ಸಿದ್ದರಾಮಯ್ಯನವರು ಎಲ್ಲಿಯೂ ಹೇಳಿಲ್ಲ ಯಾಕೆ..? ಮೊದಲು ಪಾರ್ವತಿಯವರ ಕುಟುಂಬದ ಆಸ್ತಿ ಎಷ್ಟು ಎಂಬುದು ಪತ್ತೆ ಮಾಡಿ ಆನಂತರ ಮಲ್ಲಿಕಾರ್ಜುನಸ್ವಾಮಿ ಎಷ್ಟು ಆಸ್ತಿ ಖರೀದಿ ಮಾಡಿದ್ದಾರೆ ಎಂಬುದನ್ನ ತನಿಖೆ ಮಾಡಿ ಎಂದು ತಿಳಿಸಿದ್ದಾರೆ. 1983ರಲ್ಲಿ ಆಲನಹಳ್ಳಿ ಸರ್ವೇ ನಂಬರ್ 113/4ರಲ್ಲಿ 1 ಎಕರೆ ಭೂಮಿ ಖರೀದಿ ಮಾಡಿದ್ದಾರೆ. 1996ರಲ್ಲಿ ಮುಡಾ ಅಂತಿಮ ಅಧಿಸೂಚನೆ ಹೊರಡಿಸಿದ್ರು ಕೂಡ ಡಿನೋಟಿಫೈ ಆಗಿದೆ. ಸಿದ್ದರಾಮಯ್ಯನವರ ಪ್ರಭಾವದಿಂದ ಡಿನೋಟಿಫೈ ಆಗಿದೆ ಎಂದು ಸ್ನೇಹಮಯಿ ಕೃಷ್ಣ ಆರೋಪಸಿದ್ದಾರೆ.
EDಯವರ ಪ್ರೆಸ್ ರಿಲೀಸ್ಗೂ ನನಗೂ ಸಂಬಂಧ ಇಲ್ಲ
ಜೊತೆಗೆ ಅದೇ ಭೂಮಿಯನ್ನ 2010 ಅಕ್ಟೊಬರ್ನಲ್ಲಿ ಪಾರ್ವತಿಗೆ ದಾನ ಮಾಡಲಾಗಿದೆ ಪಾರ್ವತಿಯವರು ಕೂಡ ಒಂದೇ ತಿಂಗಳಲ್ಲಿ ಮಗನ ಹೆಸರಿಗೆ ದಾನ ಮಾಡಿದ್ದಾರೆ. ತಮ್ಮ ಹೆಸರಿಗೆ ಬಂದ ಭೂಮಿಯನ್ನ ಯತೀಂದ್ರ 4 ತಿಂಗಳಲ್ಲಿ ಮಾರಾಟ ಮಾಡಿದ್ದಾರೆ
ಈ ಎಲ್ಲಾ ವಿಚಾರಗಳನ್ನು ಇಲ್ಲಿವರೆಗೆ ಯಾಕೆ ಸಿದ್ದರಾಮಯ್ಯನವರು ತಿಳಿಸಿಲ್ಲ ಎಂದು ಕಿಡಿ ಕಾರಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ದೂರು ನೀಡಿದ್ದೇನೆ.
ಅಧಿಕಾರಿಗಳು ವಿಳಂಬ ನೀತಿ ತೋರಿಸಿದ್ರೆ ಕಾನೂನು ಹೋರಾಟ ಮುಂದುವರೆಸುತ್ತೇನೆ ಎಂದು ಮೈಸೂರಿನಲ್ಲಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಹೇಳಿಕೆಯನ್ನ ನೀಡಿದ್ದಾರೆ





