
ದೊಡ್ಡ ದೊಡ್ಡ ನಗರಗಳಲ್ಲಿ ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಮನೆಕೆಲಸ ಹಾಗೂ ಆಫೀಸಿನ ಕೆಲಸ ನಿಭಾಯಿಸಿಕೊಂಡು ಹೋಗುವುದು ಕಷ್ಟ. ಹೀಗಾಗಿ. ಮಹಿಳೆಯರ ಅರ್ಧಕರ್ಧ ಕೆಲಸವನ್ನು ರೋಬೋಟ್ಗಳು ಮಾಡುತ್ತಿದೆ. ಬೆಂಗಳೂರಿನಂತಹ ನಗರಗಳಲ್ಲಿ ಹೆಚ್ಚಿನವರು ಮನೆಕೆಲಸಕ್ಕಾಗಿ ರೋಬೋಟ್ಗಳನ್ನು ಖರೀದಿಸುತ್ತಿರುವುದನ್ನು ನೋಡಿರಬಹುದು. ಇದೀಗ ದೋಸೆ ಮಾಡುವ ಸಮಯವನ್ನು ಉಳಿಸಲು ರೋಬೋಟ್ ಬಂದಿದೆ. ಬೆಂಗಳೂರಿನ ಇಂಜಿನಿಯರ್ ಒಬ್ಬರು ದೋಸೆ ಮಾಡುವ ರೋಬೋಟನ್ನು ಅಭಿವೃದ್ಧಿ ಪಡಿಸುವ ಮೂಲಕ ಸುದ್ದಿಯಾಗಿದ್ದಾರೆ. ಥಿಂಡಿ ಎಂಬ ಹೆಸರಿನ ಈ ರೋಬೋಟ್, ಸ್ವಯಂಚಾಲಿತವಾಗಿ ದೋಸೆಗಳನ್ನು ತಯಾರಿಸಿ, ಕೆಲಸವನ್ನು ಸುಲಭವಾಗಿಸಲಿದೆ.

r/ Bengaluru ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಬೆಂಗಳೂರಿನ ಇಂಜಿನಿಯರ್ ಒಬ್ಬರು ಈ ಬಗ್ಗೆ ಬರೆದುಕೊಂಡಿದ್ದಾರೆ. ಎಲ್ಲರಿಗೂ ನಮಸ್ಕಾರ, ನಾನು ಕಳೆದ ಕೆಲವು ತಿಂಗಳುಗಳಿಂದ ಬೆಂಗಳೂರಿನಲ್ಲಿ ಒಂದು ವೈಯಕ್ತಿಕ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಈ ಥಿಂಡಿ ಎಂಬ ರೋಬೋಟ್ ಸ್ವಯಂಚಾಲಿತವಾಗಿ ದೋಸೆಗಳನ್ನು ತಯಾರಿಸಬಲ್ಲದು. ಇದು ಹಿಟ್ಟನ್ನು ಇದು ಹಿಟ್ಟನ್ನು ಸುರಿದು ಪ್ಯಾನ್ ಮೇಲೆ ಹರಡುತ್ತದೆ. ನನ್ನ ಕುಟುಂಬದ ಸದಸ್ಯರು ಅಡುಗೆ ಮಾಡುವುದನ್ನು ನೋಡಿದ ಬಳಿಕ ನಾನು ಈ ಬಗ್ಗೆ ಯೋಚಿಸಿದೆ. ಆ ಸಮಯದಲ್ಲಿ ನನಗೆ ಈ ಐಡಿಯಾ ಬಂದಿತು ಎಂದು ಹೇಳಿದ್ದಾರೆ.





