ಕರ್ನಾಟಕದ ಸಾಕಮ್ಮ ಹಿಮಾಚಲದಲ್ಲಿ ಪತ್ತೆ: 20 ವರ್ಷಗಳ ಬಳಿಕ ರಾಜ್ಯಕ್ಕೆ ಕರೆತರುತ್ತಿದೆ ಅಧಿಕಾರಿಗಳ ತಂಡ .

ಹಿಮಾಚಲ ಪ್ರದೇಶ: 20 ವರ್ಷಗಳ ನಂತರ ಕರ್ನಾಟಕದ ಮಹಿಳೆ ಹಿಮಾಚಲ ರಾಜ್ಯದಲ್ಲಿ ಪತ್ತೆಯಾಗಿದ್ದಾರೆ. ಇದು ಸಿನಿಮಾ ಕಥೆಯಲ್ಲ. ಹಿಮಾಚಲ ಸರ್ಕಾರದ ಅಧಿಕಾರಿಯೊಬ್ಬರ ಸತತ ಪ್ರಯತ್ನ ಇಂದು ಆ ವೃದ್ಧೆಯನ್ನು ತನ್ನ ಕೊನೆಗಾಲದಲ್ಲಿ ಕುಟುಂಬವನ್ನು ಸೇರುವಂತೆ ಮಾಡಿದೆ. ಮಹಿಳೆಯ ಪುಣ್ಯವೋ, ಆಕೆಯ ಮಕ್ಕಳ ಭಾಗ್ಯವೋ ಸದ್ಯ ನಿನ್ನೆ ಕರ್ನಾಟಕದ ತನ್ನ ಮನೆಗೆ ಮಹಿಳೆ ಸುರಕ್ಷಿತವಾಗಿ ಸೇರಿಕೊಂಡಿದ್ದಾರೆ.
ಈ ಮಹಿಳೆಯ ಹೆಸರು ಸಾಕಮ್ಮ. ಮೊದಲೇ ಹೇಳಿದಂತೆ 20 ವರ್ಷಗಳ ಹಿಂದೆ ತನ್ನ ಮನೆ, ಪತಿ, ಮಕ್ಕಳಿಂದ ದೂರವಾಗಿದ್ದರು. ಇಷ್ಟು ದೀರ್ಘ ಸಮಯದ ನಂತರ ಮಹಿಳೆ ಪತ್ತೆಯಾಗಿದ್ದರೂ ಹೇಗೆ? ಇಲ್ಲಿದೆ ಇಂಟ್ರೆಸ್ಟಿಂಗ್ ಸ್ಟೋರಿ.
ಡಿಸೆಂಬರ್ 18 ರಂದು ಮಂಡಿಯ ಎಡಿಸಿ ರೋಹಿತ್ ರಾಥೋಡ್ ಅವರು ಜಿಲ್ಲೆಯ ವೃದ್ಧಾಶ್ರಮವಾದ ಭಂಗ್ರೋಟುಗೆ ತಪಾಸಣೆಗೆ ಎಂದು ಬಂದಿದ್ದರು. ಅಲ್ಲಿ ವೃದ್ಧಾಶ್ರಮದ ದಾಖಲೆಗಳಲ್ಲಿ ಸಾಕಮ್ಮ ಎಂಬ ಒಬ್ಬ ವೃದ್ಧಯನ್ನು ಕಂಡಿದ್ದಾರೆ.

ಈ ವೇಳೆ ಮಹಿಳೆ ಮೂಲತಃ ಕರ್ನಾಟಕದವರಾಗಿದ್ದು, ಹಿಂದಿ ಮಾತನಾಡುವುದಿಲ್ಲ ಎಂದು ತಿಳಿದು ಬಂದಿದೆ. ತಕ್ಷಣ ಅಧಿಕಾರಿ ಜಿಲ್ಲೆಯ ಇತರ ಅಧಿಕಾರಿಗಳೊಂದಿಗೆ ಮಾತನಾಡಿ ಸಾಕಮ್ಮನನ್ನು ಆಕೆಯ ಮನೆಗೆ ಕಳುಹಿಸಲು ಕಾರ್ಯಾಚರಣೆ ನಡೆಸಿದ್ದಾರೆ. ಮೊದಲು ಹಿಮಾಚಲದಲ್ಲಿನ ಕರ್ನಾಟಕದ ಅಧಿಕಾರಿಗಳ ಸಹಾಯ ಪಡೆದು ಸಾಕಮ್ಮನ ಜೊತೆ ಮಾತನಾಡುವಂತೆ ಮಾಡಿದ್ದಾರೆ.
ಕರ್ನಾಟಕದ ನಿವಾಸಿಯಾದ ಹಿಮಾಚಲದ ಕಂಗ್ರಾ ಜಿಲ್ಲೆಯ ಪಾಲಂಪೂರ್ನ ಎಸ್ಡಿಎಂ ನೇತ್ರಾ ಮೈತಿ ಸಾಕಮ್ಮನೊಂದಿಗೆ ದೂರವಾಣಿ ಮೂಲಕ ಕನ್ನಡದಲ್ಲಿ ಮಾತನಾಡಿ, ಆಕೆಯ ಮನೆಯ ಮಾಹಿತಿ ಸಂಗ್ರಹಿಸಿದ್ದಾರೆ. ನಂತರ ಮಂಡಿ ಜಿಲ್ಲೆಯಲ್ಲಿ ನಿಯೋಜನೆಗೊಂಡಿದ್ದ ಐಪಿಎಸ್ ಪ್ರೊಬೇಷನರ್ ಅಧಿಕಾರಿ ರವಿ ನಂದನ್ ಅವರನ್ನು ವೃದ್ಧಾಶ್ರಮಕ್ಕೆ ಕಳುಹಿಸುವ ಮೂಲಕ ಮತ್ತೊಮ್ಮೆ ಸಾಕಮ್ಮ ಅವರನ್ನು ಮಾತನಾಡಿಸಿದ್ದಾರೆ. ಈ ಮಹಿಳೆಯ ವಿಡಿಯೋವನ್ನು ಮಾಡಿ ಕರ್ನಾಟಕದ ಅಧಿಕಾರಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಬಳಿಕ ಹಿಮಾಚಲ ಪ್ರದೇಶ ಮತ್ತು ಕರ್ನಾಟಕದ ಅಧಿಕಾರಿಗಳ ಪ್ರಯತ್ನದಿಂದ ಸಾಕಮ್ಮನ ಕುಟುಂಬ ಪತ್ತೆಯಾಗಿದೆ. ಸಾಕಮ್ಮ ಕರ್ನಾಟಕದ ವಿಜಯನಗರ ಜಿಲ್ಲೆಯ ಡಣಾಯಕನಕೆರೆ ಗ್ರಾಮದ ನಿವಾಸಿಯೆಂದು ತಿಳಿದು ಬಂತು. ನಿಖರ ಮಾಹಿತಿ ಬಳಿಕ ಕರ್ನಾಟಕದ ಅಧಿಕಾರಿಗಳ ತಂಡವು ಸಾಕಮ್ಮನನ್ನು ಅವರ ಮನೆಗೆ ಕರೆದೊಯ್ಯಲು ಹಿಮಾಚಲಕ್ಕೆ ಆಗಮಿಸಿತು.
ಮಂಡಿ ಜಿಲ್ಲಾಧಿಕಾರಿ ಅಪೂರ್ವ ದೇವಗನ್ ಮಾತನಾಡಿ, “ವೃದ್ಧಾಶ್ರಮ, ಅನಾಥಾಶ್ರಮಗಳನ್ನು ಕಾಲಕಾಲಕ್ಕೆ ತಪಾಸಣೆ ಮಾಡಲಾಗುತ್ತಿದ್ದು, ಇತ್ತೀಚೆಗೆ ಹೆಚ್ಚುವರಿ ಜಿಲ್ಲಾಧಿಕಾರಿ ಅವರಿಂದ ಭಂಗ್ರೋಟು ಅನಾಥಾಶ್ರಮವನ್ನು ಪರಿಶೀಲನೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಅವರು ಕರ್ನಾಟಕದ ಮಹಿಳೆಯೊಂದಿಗೆ ಮಾತನಾಡಿದ್ದಾರೆ. ಆದರೆ ಅವರ ವಿಳಾಸ ಗೊತ್ತಾಗಿರಲಿಲ್ಲ . ನಂತರ ಜಿಲ್ಲಾಡಳಿತ ಕರ್ನಾಟಕದ ಅಧಿಕಾರಿಗಳ ಜೊತೆ ಸೇರಿ ವೃದ್ಧೆಯನ್ನ ಮನೆಗೆ ಕಳುಹಿಸಲು ಪ್ರಯತ್ನ ಮಾಡಿದೆವು, ಅದು ಕೊನೆಗೆ ಯಶಸ್ವಿಯಾಗಿದೆ” ಎಂದು ತಿಳಿಸಿದ್ದಾರೆ.

Related Posts

3 ದಶಕಗಳ ಬಳಿಕ ನಟಿ ಬಿಂದ್ಯಾ ಕ್ಷಮೆ ಕೇಳಿದ್ದೇಕೆ?

ಕನ್ನಡ ಚಿತ್ರರಂಗದ ಕ್ಲಾಸಿಕ್ ಸಿನಿಮಾ ಎಂಬ ಖ್ಯಾತಿ ‘ಹಳ್ಳಿ ಮೇಷ್ಟ್ರು’ ಚಿತ್ರಕ್ಕಿದೆ. ಈ ಸಿನಿಮಾ ಬಿಡುಗಡೆಯಾಗಿ 3 ದಶಕಗಳೇ ಕಳೆದಿವೆ. ಈ ಚಿತ್ರದ ಶೂಟಿಂಗ್ ಸಮಯದಲ್ಲಿ ನಡೆದಿದ್ದ ಒಂದು ವಿವಾದ ಮಾತ್ರ ನಟಿ ಬಿಂದಿಯಾ ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್ ನಡುವೆ ದೊಡ್ಡ…

ಭೀಮಾ ನದಿ ತೀರದಲ್ಲಿ ಒಂದೇ ಕುಟುಂಬದ ಐವರು ಸೇರಿ 6 ಜನರ ಭೀಕರ ಕೊ*ಲೆ!

ವಿಜಯಪುರ ಜಿಲ್ಲೆಯ ಭೀಮಾ ನದಿ ತೀರದಲ್ಲಿ ಮತ್ತೆ ನೆತ್ತರ ಹರಿದಿದ್ದು, ಭೀಕರ ಸಾಮೂಹಿಕ ಹತ್ಯಾಕಾಂಡ ಇಡೀ ಜಿಲ್ಲೆಯನ್ನು ತಲ್ಲಣಗೊಳಿಸಿದೆ. ಜಮೀನು ವ್ಯಾಜ್ಯದ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ಐವರು ಹಾಗೂ ಅವರ ಸ್ನೇಹಿತ ಸೇರಿದಂತೆ ಒಟ್ಟು ಆರು ಜನರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ, ಗುಂಡು…

You Missed

ಮತದಾರರ ಪಟ್ಟಿ ಪರಿಷ್ಕರಣೆ (SIR): ಅಧಿಕಾರಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ

ಮತದಾರರ ಪಟ್ಟಿ ಪರಿಷ್ಕರಣೆ (SIR): ಅಧಿಕಾರಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ

3 ದಶಕಗಳ ಬಳಿಕ ನಟಿ ಬಿಂದ್ಯಾ ಕ್ಷಮೆ ಕೇಳಿದ್ದೇಕೆ?

3 ದಶಕಗಳ ಬಳಿಕ  ನಟಿ ಬಿಂದ್ಯಾ  ಕ್ಷಮೆ ಕೇಳಿದ್ದೇಕೆ?

ಭೀಮಾ ನದಿ ತೀರದಲ್ಲಿ ಒಂದೇ ಕುಟುಂಬದ ಐವರು ಸೇರಿ 6 ಜನರ ಭೀಕರ ಕೊ*ಲೆ!

ಭೀಮಾ ನದಿ ತೀರದಲ್ಲಿ  ಒಂದೇ ಕುಟುಂಬದ ಐವರು ಸೇರಿ 6 ಜನರ ಭೀಕರ ಕೊ*ಲೆ!

ಕರ್ನಾಟಕ ನೂತನ ಸಿಎಂ ಆಯ್ಕೆ: ಇಂದು ಸಂಜೆ ವಿಧಾನಸೌಧದಲ್ಲಿ ಮಹತ್ವದ ಸಿಎಲ್‌ಪಿ ಸಭೆ

ಕರ್ನಾಟಕ ನೂತನ ಸಿಎಂ ಆಯ್ಕೆ: ಇಂದು ಸಂಜೆ ವಿಧಾನಸೌಧದಲ್ಲಿ ಮಹತ್ವದ ಸಿಎಲ್‌ಪಿ ಸಭೆ

ಆತ್ಮನಿರ್ಭರ ಭಾರತಕ್ಕೆ ದೊಡ್ಡ ಬಲ: ಅತ್ಯಂತ ಬಲಿಷ್ಠ ‘ವೆಲ್ಡೆಡ್ ಪೈಪ್’ ಉತ್ಪಾದಿಸಿ ದಾಖಲೆ ಬರೆದ AM/NS ಇಂಡಿಯಾ!

ಆತ್ಮನಿರ್ಭರ ಭಾರತಕ್ಕೆ ದೊಡ್ಡ ಬಲ: ಅತ್ಯಂತ ಬಲಿಷ್ಠ ‘ವೆಲ್ಡೆಡ್ ಪೈಪ್’ ಉತ್ಪಾದಿಸಿ ದಾಖಲೆ ಬರೆದ AM/NS ಇಂಡಿಯಾ!

ಕರ್ನಾಟಕ ರಾಜಕೀಯದಲ್ಲಿ ಹೈಡ್ರಾಮಾ: ಸಿದ್ದರಾಮಯ್ಯ ರಾಜೀನಾಮೆಗೆ ಹೈಕಮಾಂಡ್ ಗಡುವು!

ಕರ್ನಾಟಕ ರಾಜಕೀಯದಲ್ಲಿ ಹೈಡ್ರಾಮಾ: ಸಿದ್ದರಾಮಯ್ಯ ರಾಜೀನಾಮೆಗೆ ಹೈಕಮಾಂಡ್ ಗಡುವು!