ಕೇಂದ್ರ ಸರ್ಕಾರ ಹೊಸ ಆಧಾರ್ ಆ್ಯಪ್ ಬಿಡುಗಡೆ; ಇನ್ಮುಂದೆ ಭೌತಿಕ ಕಾರ್ಡ್ ಬೇಕಿಲ್ಲ

ನವದೆಹಲಿ: ಕೇಂದ್ರ ಸರ್ಕಾರ ಹೊಸ ಆಧಾರ್ ಆ್ಯಪ್ ಬಿಡುಗಡೆ ಮಾಡಿದೆ. ಇಲ್ಲಿ ಬಳಕೆದಾರರು ತಮ್ಮ ಆಧಾರ್ ಮಾಹಿತಿಯನ್ನು ಯಾವುದೇ ಭೌತಿಕ ಗುರುತಿನ ಚೀಟಿಯ ಅಗತ್ಯವಿಲ್ಲದೆ, ಡಿಜಿಟಲ್ ರೂಪದಲ್ಲಿ ಪರಿಶೀಲಿಸಲು ಅವಕಾಶವಿದೆ.
ಈ ಹೊಸ ಅಪ್ಲಿಕೇಶನ್ ಕುರಿತು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿಪೂರ್ಣ ವೀಡಿಯೋ ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ಫೇಸ್ ಐಡಿ ದೃಢೀಕರಣ, ಲಾಗಿನ್ ಮಾಡಲು ಕ್ಯೂ ಆರ್ ಕೋಡ್ ಸ್ಕ್ಯಾನ್ ಮತ್ತು ಬಳಕೆದಾರರ ಐಡಿ ಹಂಚಿಕೊಳ್ಳುವಂತಹ ವೈಶಿಷ್ಟ್ಯಗಳನ್ನು ನೋಡಬಹುದು.
ಸದ್ಯ ಆ್ಯಪ್ ಬೀಟಾ ಹಂತದಲ್ಲಿದೆ. ಈ ಆ್ಯಪ್ ಆಧಾರ್ ಪರಿಶೀಲನೆಯನ್ನು ಸರಳಗೊಳಿಸಲಿದೆ. ದುರುಪಯೋಗ ತಡೆಯುತ್ತದೆ. ಮತ್ತು ಬಳಕೆದಾರರ ಗೌಪ್ಯತೆಯನ್ನು ಕಾಪಾಡುತ್ತದೆ. ಮತ್ತೊಂದು ವಿಶೇಷವೆಂದರೆ, ಅಪ್ಲಿಕೇಶನ್ ಬಳಕೆದಾರಸ್ನೇಹಿಯಾಗಿದ್ದು, ಫೇಸ್ ಗುರುತಿನಂತಹ ವೈಶಿಷ್ಟ್ಯ ಹೊಂದಿದೆ. ಇದರಿಂದ ಯಾವುದೇ ಭೌತಿಕ ಪ್ರತಿಯ ಅಗತ್ಯವಿಲ್ಲದೆ ಬಳಕೆದಾರರು ತಮ್ಮ ಆಧಾರ್ ವಿವರಗಳನ್ನು ಸುರಕ್ಷಿತವಾಗಿ ಹಂಚಿಕೊಳ್ಳಬಹುದು. ಇದರಿಂದ ಆಧಾರ್ ಕಾರ್ಡ್ ಅನ್ನು ಎಲ್ಲೆಡೆ ಒಯ್ಯುವುದು ತಪ್ಪುತ್ತದೆ.

ಹೊಸ ಆ್ಯಪ್ ನ ವೈಶಿಷ್ಟ್ಯಗಳು
• ಬಳಕೆದಾರರು ತಮ್ಮ ಒಪ್ಪಿಗೆಯೊಂದಿಗೆ ಅಗತ್ಯ ಡೇಟಾವನ್ನು ಸುರಕ್ಷಿತವಾಗಿ ಹಂಚಿಕೊಳ್ಳಬಹುದು. ಇದು ವೈಯಕ್ತಿಕ ಮಾಹಿತಿಯ ಗೌಪ್ಯತೆಯನ್ನು ಖಚಿತಪಡಿಸುತ್ತದೆ.
• ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಆಧಾರ್ ಪರಿಶೀಲನೆ ಮಾಡಬಹುದು.
• ಮುದ್ರಿತ ಆಧಾರ್ ಪ್ರತಿಗಳನ್ನು ಎಲ್ಲೆಡೆ ಕೊಂಡೊಯ್ಯುವ ಅವಶ್ಯಕತೆ ಇರುವುದಿಲ್ಲ.
• ಭದ್ರತೆ ಖಚಿತತೆಗೆ ಫೇಸ್ ಐಡಿ ದೃಢೀಕರಣ
• ಬಳಕೆದಾರರು ತಮ್ಮ ಭೌತಿಕ ಆಧಾರ್ ಪ್ರತಿಗಳನ್ನು ಸಲ್ಲಿಸುವ ಅಗತ್ಯವಿಲ್ಲದೆ ಡಿಜಿಟಲ್ ಮೂಲಕ ಪರಿಶೀಲಿಸಬಹುದು.
• ಫೇಸ್ ಐಡಿ ದೃಢೀಕರಣವು ಶೇ 100ರಷ್ಟು ಡಿಜಿಟಲ್ ಸುರಕ್ಷತೆಯನ್ನು ಖಚಿತಪಡಿಸುತ್ತದೆ.
• ಡೇಟಾ ಸೋರಿಕೆ ಮತ್ತು ದುರುಪಯೋಗ ಆಗದಂತೆ, ನಕಲಾಗದಂತೆ ತಡೆಯುತ್ತದೆ.
• ತ್ವರಿತ ಮತ್ತು ಸುಲಭವಾದ ಪರಿಶೀಲನಾ ಪ್ರಕ್ರಿಯೆಯನ್ನು ಸಕ್ರಿಯಗೊಳಿಸುತ್ತದೆ.
ಸದ್ಯ ಆಯ್ದ ಗುಂಪುಗಳ ಬಳಕೆದಾರರಿಗೆ ಆ್ಯಪ್ ಲಭ್ಯವಾಗುವಂತೆ ಮಾಡಲಾಗಿದೆ. ಇದರಲ್ಲಿ ಆಧಾರ್ ಸಂವಾದ್ ಕಾರ್ಯಕ್ರಮದ ಎಲ್ಲಾ ನೋಂದಾಯಿತರು ಸೇರಿದ್ದಾರೆ. ಯುಐಡಿಎಐ ಪ್ರಕಾರ, ಬೀಟಾ ಆವೃತ್ತಿಯು ಅಪ್ಲಿಕೇಶನ್ನ ಅಂತಿಮ ಬಿಡುಗಡೆಯ ಫೀಡ್ಬ್ಯಾಕ್ ಸಂಗ್ರಹಿಸಿ, ಅದನ್ನು ಮತ್ತಷ್ಟು ಉತ್ತಮಗೊಳಿಸಲಿದೆ.

Related Posts

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ರಾಜ್ಯದಲ್ಲಿ ಸೆಪ್ಟೆಂಬರ್ 21ರಿಂದ ಮೂರು ದಿನಗಳ ಕಾಲ ವಿಶೇಷ ವಿಧಾನಮಂಡಲ ಅಧಿವೇಶನ ನಡೆಸಲು ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಸೆ. 21ರಿಂದ ಸೆ.…

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಗುಂಡ್ಲುಪೇಟೆ ಪಟ್ಟಣದ ಇಂದಿರಾ ಕ್ಯಾಂಟೀನ್‌ಗೆ ಸೋಮವಾರ ಬೆಳಿಗ್ಗೆ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ ಆಹಾರದ ಶುಚಿತ್ವ, ಗುಣಮಟ್ಟ ಹಾಗೂ ಕುಡಿಯುವ ನೀರಿನ ಪೂರೈಕೆಯನ್ನು ಕೂಲಂಕಷವಾಗಿ ಪರಿಶೀಲಿಸಿತು. ಬಡವರು ಮತ್ತು ಶ್ರಮಿಕರಿಗೆ ಪೌಷ್ಟಿಕ ಹಾಗೂ ಶುಚಿ-ರುಚಿಯಾದ ಆಹಾರ ದೊರೆಯಬೇಕು ಎಂಬ ಶಾಸಕರ…

You Missed

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!