
ಪ್ರೀತಿಯಲ್ಲಿ ಬಿದ್ದ ಪ್ರಾರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇರುತ್ತದೆ. ಆದರೆ ಈ ವೇಳೆಯಲ್ಲಿ ತನ್ನ ಪ್ರೇಮಿಯ ಬಳಿ ದುಡ್ಡು ಖರ್ಚು ಮಾಡಿಸುತ್ತಾರೆ. ತನ್ನ ಹುಡುಗಿಗಾಗಿ ಹುಡುಗರು ಗಿಫ್ಟ್ ಸೇರಿದಂತೆ ಕೇಳಿದನ್ನೆಲ್ಲಾ ಕೊಡಿಸುತ್ತಾರೆ. ಆದರೆ ಕೆಲ ಹುಡುಗಿಯರು ಹುಡುಗರನ್ನು ಚೆನ್ನಾಗಿ ಬೋಳಿಸಿ ಕೈ ಕೊಡುವುದನ್ನು ನೋಡಬಹುದು. ಹೀಗಿರುವಾಗ ಕೆಲವು ಹುಡುಗರು ಕೂಡ ಹುಡುಗಿಗೆ ಸರಿಯಾಗಿ ಬುದ್ಧಿ ಕಲಿಸುತ್ತಾರೆ. ಆದರೆ ಇಲ್ಲೊಬ್ಬ ಪ್ರಿಯಕರನು ತನ್ನ ಕೈ ಕೊಟ್ಟ ಹುಡುಗಿಗೆ ಶಾಕ್ ನೀಡಿದ್ದಾನೆ. ತಾನು ನಿನಗಾಗಿ ಏನೆಲ್ಲಾ ತಿಂಡಿ ತಿನಿಸುಗಳನ್ನು ಕೊಡಿಸಿದ್ದೆ ಅದರ ಹಣವನ್ನು ತನಗೆ ಪಾವತಿಸುವೆ ಎಂದು ಹೇಳಿದ್ದಾನೆ. ತನ್ನ ಪ್ರಿಯಕರ ತನ್ನ ಜೊತೆಗೆ ಸಂಭಾಷಣೆ ನಡೆಸಿದ ವಾಟ್ಸಪ್ಪ್ ಸ್ಕ್ರೀನ್ ಶಾರ್ಟ್ ಯುವತಿಯೂ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಂತೆ ಇದು ಸಿಕ್ಕಾಪಟ್ಟೆ ವೈರಲ್ ಆಗಿದೆ.





