ನಾನು ನೀನು ಅಣ್ಣ ತಂಗಿಯಂತೆ ಇರೋಣ ಪ್ಲೀಸ್ ಎಂದ ವಧು, ಶಾಕ್ ಆದ ವರ….

ಹೌದು ವೀಕ್ಷಕರೇ,ಕಲಿಯುಗದಲ್ಲಿ ಏನು ಬೇಕಾದರೂ ನಡೆಯಬಹುದು ಎಂಬುದಕ್ಕೆ ನಿದರ್ಶನದಂತಿದೆ ಈ ಸುದ್ದಿ. ಕ್ಷುಲ್ಲಕ ಕಾರಣಗಳಿಂದ ಮದುವೆಗಳು ಮುರಿದು ಬಿದ್ದಿರುವ ಸುದ್ದಿಗಳನ್ನು ನೀವು ನೋಡಿರುತ್ತೀರಿ. ಆದರೆ ಇಲ್ಲೊಂದು ಅಂತಹದ್ದೇ ಪ್ರಕರಣ ಬೆಳಕಿಗೆ ಬಂದಿದ್ದು, ಮದುವೆಯೇನೋ ನಡೆದಿದೆ. ಆದರೆ, ಕಾರು ಹತ್ತಿದ ವಧುವು ತನ್ನ ವರಸೆ ಬದಲಾಯಿಸಿದ್ದಾಳೆ. ತನ್ನ ಪತಿಯ ಮುಂದೆ ನಾನು ನೀನು ಅಣ್ಣ ತಂಗಿಯಂತೆ ಇರೋಣ ಎಂದಿದ್ದು, ಈ ಮಾತು ಕೇಳುತ್ತಿದ್ದಂತೆ ವರನು ಶಾಕ್ ಆಗಿದ್ದಾನೆ. ಏನಿದು ಘಟನೆ? ವಧು ಈ ನಿರ್ಧಾರಕ್ಕೆ ಬಂದಿದ್ದು ಯಾಕೆ? ಎನ್ನುವ ಕುರಿತಾದ ಮಾಹಿತಿ ಇಲ್ಲಿದೆ ನೋಡಿ.

ಹೌದು, ಬೋಪಾಲ್ ರಸ್ತೆಯಲ್ಲಿ ರೆಸಾರ್ಟ್ ವೊಂದರಲ್ಲಿ ಸಾಗರ ಜಿಲ್ಲೆಯ ಯುವಕ ಹಾಗೂ ಲಲಿತಾಪುರದ ಯುವತಿಯ ಮದುವೆಯೂ ಅದ್ದೂರಿಯಾಗಿ ನಡೆದಿದೆ. ಮದುವೆಯೂ ಸಡಗರದಿಂದ ನಡೆದು ವಧುವು ತನ್ನ ಗಂಡನ ಮನೆಗೆ ತೆರಳಲು ಕಾರು ಹತ್ತಿದ್ದಾಳೆ. ಸ್ವಲ್ಪ ದೂರ ಹೋಗುತ್ತಿದ್ದಂತೆ ವಧುವು ಅಸಲಿ ವಿಚಾರ ತಿಳಿಸಿದ್ದು ಇದುವೇ ಈ ಮದುವೆ ಮುರಿಯಲು ಮುಖ್ಯ ಕಾರಣವಾಗಿದೆ. ನನಗೆ ಈ ಮದುವೆ ಇಷ್ಟವಿಲ್ಲ, ನಾನು ಒಬ್ಬನ್ನನ್ನು ಪ್ರೀತಿಸುತ್ತಿದ್ದೇನೆ. ನಿನ್ನನ್ನು ಮದುವೆಯಾಗಿದ್ದೇನೊ ನಿಜ, ಆದರೆ ಪತ್ನಿಯಾಗಿ ಸಂಸಾರ ಮಾಡಲು ಸಾಧ್ಯವಿಲ್ಲ.. ನಾವಿಬ್ಬರೂ ಅಣ್ಣ ತಂಗಿಯಂತೆ ಇದ್ದು ಬಿಡೋಣ ಎಂದಿದ್ದಾಳೆ.

ಈ ಆಘಾತದಿಂದ ಸುಧಾರಿಸಿಕೊಳ್ಳಲು ಆಗದ ವರನು ತನ್ನ ನಿರ್ಧಾರವನ್ನು ಬದಲಾಯಿಸಿದ್ದಾನೆ. ಮಧಮಗನು ಈ ವಿಚಾರವನ್ನು ತನ್ನ ಕುಟುಂಬಕ್ಕೆ ತಿಳಿಸಿ, ಆ ಕ್ಷಣವೇ ಈ ಮದುವೆಯನ್ನು ಮುರಿಯಲು ಮತ್ತೆ ಮದುವೆ ಮಂಟಪದ ಕಡೆಗೆ ಬಂದಿದ್ದಾನೆ. ಹೌದು, ಮದುವೆ ಮಂಟಪದಲ್ಲಿದ್ದ ವಧುವಿನ ಕಡೆಯವರಿಗೆ ಈ ವಿಷಯ ತಿಳಿಸಿ, ವಧುವನ್ನು ಅಲ್ಲೇ ಬಿಟ್ಟು ಮರುಮಾತಾನಾಡದೇ ಅಲ್ಲಿಂದ ವರನು ಹೊರಟು ಹೋಗಿದ್ದಾನೆ. ಆದರೆ ಈ ವಧುವು ಮದುವೆಯಾಗುವವರೆಗೂ ಈ ವಿಚಾರ ಮುಚ್ಚಿಟ್ಟಿದರಿಂದ ವರನ ಆಸೆ ಕನಸುಗಳೆಲ್ಲವೂ ನುಚ್ಚು ನೂರು ಆಗುವಂತಾಗಿದೆ ಎನ್ನುವುದು ನಿಜಕ್ಕೂ ವಿಪರ್ಯಾಸ.

Related Posts

3 ದಶಕಗಳ ಬಳಿಕ ನಟಿ ಬಿಂದ್ಯಾ ಕ್ಷಮೆ ಕೇಳಿದ್ದೇಕೆ?

ಕನ್ನಡ ಚಿತ್ರರಂಗದ ಕ್ಲಾಸಿಕ್ ಸಿನಿಮಾ ಎಂಬ ಖ್ಯಾತಿ ‘ಹಳ್ಳಿ ಮೇಷ್ಟ್ರು’ ಚಿತ್ರಕ್ಕಿದೆ. ಈ ಸಿನಿಮಾ ಬಿಡುಗಡೆಯಾಗಿ 3 ದಶಕಗಳೇ ಕಳೆದಿವೆ. ಈ ಚಿತ್ರದ ಶೂಟಿಂಗ್ ಸಮಯದಲ್ಲಿ ನಡೆದಿದ್ದ ಒಂದು ವಿವಾದ ಮಾತ್ರ ನಟಿ ಬಿಂದಿಯಾ ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್ ನಡುವೆ ದೊಡ್ಡ…

ಭೀಮಾ ನದಿ ತೀರದಲ್ಲಿ ಒಂದೇ ಕುಟುಂಬದ ಐವರು ಸೇರಿ 6 ಜನರ ಭೀಕರ ಕೊ*ಲೆ!

ವಿಜಯಪುರ ಜಿಲ್ಲೆಯ ಭೀಮಾ ನದಿ ತೀರದಲ್ಲಿ ಮತ್ತೆ ನೆತ್ತರ ಹರಿದಿದ್ದು, ಭೀಕರ ಸಾಮೂಹಿಕ ಹತ್ಯಾಕಾಂಡ ಇಡೀ ಜಿಲ್ಲೆಯನ್ನು ತಲ್ಲಣಗೊಳಿಸಿದೆ. ಜಮೀನು ವ್ಯಾಜ್ಯದ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ಐವರು ಹಾಗೂ ಅವರ ಸ್ನೇಹಿತ ಸೇರಿದಂತೆ ಒಟ್ಟು ಆರು ಜನರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ, ಗುಂಡು…

You Missed

ಮತದಾರರ ಪಟ್ಟಿ ಪರಿಷ್ಕರಣೆ (SIR): ಅಧಿಕಾರಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ

ಮತದಾರರ ಪಟ್ಟಿ ಪರಿಷ್ಕರಣೆ (SIR): ಅಧಿಕಾರಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ

3 ದಶಕಗಳ ಬಳಿಕ ನಟಿ ಬಿಂದ್ಯಾ ಕ್ಷಮೆ ಕೇಳಿದ್ದೇಕೆ?

3 ದಶಕಗಳ ಬಳಿಕ  ನಟಿ ಬಿಂದ್ಯಾ  ಕ್ಷಮೆ ಕೇಳಿದ್ದೇಕೆ?

ಭೀಮಾ ನದಿ ತೀರದಲ್ಲಿ ಒಂದೇ ಕುಟುಂಬದ ಐವರು ಸೇರಿ 6 ಜನರ ಭೀಕರ ಕೊ*ಲೆ!

ಭೀಮಾ ನದಿ ತೀರದಲ್ಲಿ  ಒಂದೇ ಕುಟುಂಬದ ಐವರು ಸೇರಿ 6 ಜನರ ಭೀಕರ ಕೊ*ಲೆ!

ಕರ್ನಾಟಕ ನೂತನ ಸಿಎಂ ಆಯ್ಕೆ: ಇಂದು ಸಂಜೆ ವಿಧಾನಸೌಧದಲ್ಲಿ ಮಹತ್ವದ ಸಿಎಲ್‌ಪಿ ಸಭೆ

ಕರ್ನಾಟಕ ನೂತನ ಸಿಎಂ ಆಯ್ಕೆ: ಇಂದು ಸಂಜೆ ವಿಧಾನಸೌಧದಲ್ಲಿ ಮಹತ್ವದ ಸಿಎಲ್‌ಪಿ ಸಭೆ

ಆತ್ಮನಿರ್ಭರ ಭಾರತಕ್ಕೆ ದೊಡ್ಡ ಬಲ: ಅತ್ಯಂತ ಬಲಿಷ್ಠ ‘ವೆಲ್ಡೆಡ್ ಪೈಪ್’ ಉತ್ಪಾದಿಸಿ ದಾಖಲೆ ಬರೆದ AM/NS ಇಂಡಿಯಾ!

ಆತ್ಮನಿರ್ಭರ ಭಾರತಕ್ಕೆ ದೊಡ್ಡ ಬಲ: ಅತ್ಯಂತ ಬಲಿಷ್ಠ ‘ವೆಲ್ಡೆಡ್ ಪೈಪ್’ ಉತ್ಪಾದಿಸಿ ದಾಖಲೆ ಬರೆದ AM/NS ಇಂಡಿಯಾ!

ಕರ್ನಾಟಕ ರಾಜಕೀಯದಲ್ಲಿ ಹೈಡ್ರಾಮಾ: ಸಿದ್ದರಾಮಯ್ಯ ರಾಜೀನಾಮೆಗೆ ಹೈಕಮಾಂಡ್ ಗಡುವು!

ಕರ್ನಾಟಕ ರಾಜಕೀಯದಲ್ಲಿ ಹೈಡ್ರಾಮಾ: ಸಿದ್ದರಾಮಯ್ಯ ರಾಜೀನಾಮೆಗೆ ಹೈಕಮಾಂಡ್ ಗಡುವು!