ಕ್ರಿಕೆಟನ್ನು ನಿಧಾನಕ್ಕೆ ಪಕ್ಕಕ್ಕೆ ಸರಿಸಿದೆ ಊರಿನ ಕತೆಯಿದು, ಅಲ್ಲಿ ಕೊಹ್ಲಿ, ರೋಹಿತ್ ಶರ್ಮಾ ” ಆಟಕ್ಕೆ ಮನಸೋತವರು ಇಲ್ಲವೆಂದಲ್ಲ, ಆದರೆ, ಇವರ ಆಟಕ್ಕಿಂತ ಹೆಚ್ಚು ತಮ್ಮೂರಿನ ಖೋ ಖೋ ಆಟಗಾರರಿಗೆ ಶಿಳ್ಳೆ- ಚಪ್ಪಾಳೆ ಹೊಡೆದ ಊಂದು. ಭಾರತ ನಕಾಶೆಯಲ್ಲಿ ಕುರುಬೂರು ಹೊಸ ಆಕರ್ಷಣೆ, ತಿ ನರಸೀಪುರ ತಾಲೂಕು ಕೇಂದ್ರದಿಂದ 7ಕಿ.ಮೀ. ಸಾಗಿದರೆ ಸಿಗುವ ಗ್ರಾಮವಿದು. ಕನಕಪುರದ ದೇಗುಲ ಮಠ ನಡೆಸುತ್ತಿರುವ ಖಾಸಗಿ ವಿದ್ಯಾಸಂಸ್ಥೆ ವಿದ್ಯಾದರ್ಶಿನಿ ಕಾನ್ವೆಂಟ್ ಖೋ ಖೋ ಆಟಗಾರರ ಫ್ಯಾಕ್ಟರಿಯಂತಿದೆ. ರಾಷ್ಟ್ರಮಟ್ಟದ ಮಹಿಳೆಯರ ಖೋ ಖೋದಲ್ಲಿ ಮಿಂಚುತ್ತಿರುವ ಬಹುತೇಕ ಕ್ರೀಡಾಪಟುಗಳು ಈ ಶಾಲೆಯವರು. ರಾಜ್ಯದ ಖೋಖೋ ತಂಡದ ಎಲ್ಲಾ ಆಟಗಾರರೂ ಇಲ್ಲಿಯವರೇ! ಇವತ್ತಿಗೂ ಈ ತಂಡವೇ ರಾಜ್ಯಕ್ಕೆ ನಂಬರ್ಇ ಲ್ಲಿನ ಗಣಿತ ಶಿಕ್ಷಕ ಮಂಜುನಾಥ್ ಎಂಬುವವರಿಗೆ ಚಿಕ್ಕಂದಿನಿಂದಲೂ ಕ್ರೀಡೆಯಲ್ಲಿ ಅಪಾರ ಆಸಕ್ತಿ, ಕ್ರೀಡೆಯಲ್ಲಿ ಏನಾದರೂ ಸಾಧಿಸಬೇಕೆಂಬ ಉತ್ಕಟ ಆಕಾಂಕ್ಷೆ ಆದರೆ, ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ, ಈ ಕ್ರೀಡಾ ತುಡಿತ ಒಂದಲ್ಲಾ ಒಂದು ರೀತಿಯಲ್ಲಿ ವ್ಯಕ್ತವಾಗುತ್ತಿತ್ತು. ಅದೇ ಕಾರಣಕ್ಕೆ ಮಂಜುನಾಥ್ ಕ್ರೀಡೆ ಮುಖೇನವೇ ಮಕ್ಕಳಿಗೆ ಪಾಠ ಹೇಳಲು ಆರಂಭಿಸಿದರು. ಮಕ್ಕಳೂ ಚೆನ್ನಾಗಿ ಕಲಿಯತೊಡಗಿದರು. ಅಲ್ಲದೆ, ಕ್ರೀಡೆಯಲ್ಲಿ ನಿರೀಕ್ಷೆಗೂ ಮೀರಿದ ಪ್ರದರ್ಶನ ಕೊಟ್ಟರು.

ಇದರ ಫಲವಾಗಿ, ಇಲ್ಲಿ ಮನೆಗೊಬ್ಬಖೋ ಖೋ ಪಟು ಹುಟ್ಟಿಕೊಳ್ಳಲು ಸಾಧ್ಯವಾಯಿತು. ಮಂಜುನಾಥ್ ಖೋ ಖೋ ತರಬೇತಿ ನೀಡಲು ಶುರುಮಾಡಿದ್ದು 12 ವರ್ಷಗಳ ಹಿಂದೆ. ಆಗ ಇವರೊಂದಿಗೆ ಇದ್ದಿದ್ದು ಕೇವಲ 6 ಮಕ್ಕಳು. ಈಗ ಊರಿನಲ್ಲಿ ಮನೆಗೊಬ್ಬರು ಖೋ ಖೋ, ಅಶ್ಲೀಟ್ ಗಳನ್ನು ಒಳಗೊಂಡಂತೆ 80ಕ್ಕೂ ಹೆಚ್ಚು ಮಂದಿ ನಿತ್ಯ ಬೋ ಬೋ ಆಡುವ ಪ್ರತಿಭೆಗಳಿದ್ದಾರೆ. ಪ್ರತಿದಿನ ಬೆಳಗ್ಗೆ ಸಂಜೆ ಕಠಿಣ ಅಭ್ಯಾಸ. ಕುರುಬೂರಿನವರೇ 50ಕ್ಕೂ ಹೆಚ್ಚು ರಾಷ್ಟ್ರಮಟ್ಟದ ಸಾಧಕರಿದ್ದು, ನಿತ್ಯವೂ ಹಿರಿಯರು ಕಿರಿಯ ನಾಪಟುಗಳಿಗೆ ಹೇಳಿಕೊಡುತ್ತಾರೆ. ಕುರುಬೂರಿನಲ್ಲಿ ನಿತ್ಯವೂ ಕ್ರೀಡಾ ಜಾತ್ರೆಯ ಕಳೆ.

ಆಟ ತಂದ ಬದಲಾವಣೆ
ಕಡಿಮೆ ಸಮಯದಲ್ಲಿ ಹೆಚ್ಚು ಗ್ರಹಿಸುವ ಸಾಮರ್ಥ್ಯ, ಐಕ್ಯೂ ವೃದ್ಧಿಸಿದೆ.
ಪೋಷಕರು ಕೂಡ ತಮ್ಮ ಮಕ್ಕಳನ್ನು ಕ್ರೀಡೆಗೆ ಸೇರಿಸುತ್ತಿದ್ದಾರೆ.
ವಿಶೇಷವಾಗಿ, ಹೆಣ್ಣು ಮಕ್ಕಳೇ ಹೆಚ್ಚು ಪಾಲ್ಗೊಳ್ಳುತ್ತಿದ್ದಾರೆ.
ಕ್ರೀಡೆಯಿಂದ ಯೋಗ್ಯ ಶಿಕ್ಷಣ, ಉದ್ಯೋಗ ಸಿಗುವ ಅರಿವು ಮೂಡಿದೆ
ಈ ಊರಿನಲ್ಲಿ ಮಕ್ಕಳು ಶಿಕ್ಷಣವನ್ನು ಮೊಟಕುಗೊಳಿಸುವುದು ತಪ್ಪಿದೆ.
ಕ್ರೀಡೆಯಿಂದಲೂ ಶಿಸ್ತು, ಸಂಸ್ಕಾರ ಕಲಿಯಲು ಸಾಧ್ಯವಾಗಿದೆ.
ಮಕ್ಕಳ ಮಾನಸಿಕ, ದೈಹಿಕ ಸಾಮರ್ಥ್ಯ ಹೆಚ್ಚಾಗಿದೆ.
.

ವಿಶ್ವಕಪ್ ಕೀರ್ತಿ ತಂದ ಚೈತ್ರಾ
ಮಧ್ಯಮ ಕೃಷಿಕ ಕುಟುಂಬದಲ್ಲಿ ಜನಿಸಿದ ಚೈತ್ರಾ ಮನೆಯಲ್ಲಿ ಏನೇ ಸಂಕಷ್ಟವಿದ್ದರೂ ಅದೆಲ್ಲವನ್ನೂ ಮೆಟ್ಟಿನಿಂತು ವಿಶ್ವಕಪ್ ಖೋ ಖೋ ಪಂದ್ಯದ ಡ್ರೀಮ್ ರನ್ನರ್ ಆಗಿ ದೇಶಕ್ಕೆ ಕಪ್ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಚೈತ್ರಾ ಅವರನ್ನು ಔಟ್ ಮಾಡಲು ಮುಂದಾದ ಎದುರಾಳಿಗಳಿಗೆ ಮಿಂಚಿನ ಓಟದ ಮೂಲಕ ಆಟವಾಡಿಸಿ ಪಂದ್ಯಕ್ಕೆ ಗೆಲುವು ತಂದುಕೊಟ್ಟರು, ಕುರುಬೂರಿನ ಖೋ ಖೋ ಇತಿಹಾಸವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಅಲ್ಲದೇ ಮುಂದಿನ ದಿನಗಳಲ್ಲಿ ಒಲಿಂಪಿಕ್ನಲ್ಲಿ ಪಾಲ್ಗೊಳ್ಳುವ ಗುರಿ ಹೊಂದಿದ್ದಾರೆ.

ಖೋ ಖೋಗೆ ಖದರ್ ತಂದ ಕುರುಬೂರಿನ ಕಣ್ಮಣಿಗಳು
ವೀಣಾ (ಜಗತ್ ಕಿಲಾಡಿ)
51 ರಾಷ್ಟ್ರಮಟ್ಟದ, 1 ಅಂತಾರಾಷ್ಟ್ರೀಯ ಮಟ್ಟದ ಪಂದ್ಯಗಳಾಡಿದ ಪ್ರತಿಭೆ. ಏಷ್ಯನ್ ಚಾಂಪಿಯನ್ ಷಿಪ್ ಕ್ಯಾಂಪ್ ನಲ್ಲಿ ಭಾಗವಹಿಸಿ ದ್ದಲ್ಲದೆ, ಸೌತ್ ಏಷ್ಯನ್ಸ್ ಗೇಮ್ಸ್ನಲ್ಲಿ ಚಿನ್ನದ ಪದಕ ಪಡೆದವರು. 201700 ಕರ್ನಾಟಕ ಕ್ರೀಡಾ ರತ್ನ, 2019ರಲ್ಲಿ ಝಾನ್ಸಿರಾಣಿ ಲಕ್ಷ್ಮೀಬಾಯಿ ಪ್ರಶಸ್ತಿ ಪಡೆದ ಕುರುಬೂರಿನ ವೀಣಾ 51 ರಾಷ್ಟ್ರಮಟ್ಟದ, 1 ಅಂತಾರಾಷ್ಟ್ರೀಯ ಮಟ್ಟದ ಪಂದ್ಯಗಳಾಡಿದ್ದಾರೆ.
ಕನಸು: ”ಕ್ರೀಡೆಯನ್ನು ಕೇವಲವಾಗಿ ನೋಡುತ್ತಿದ್ದವರಿಗೆ ಜೀವನ ರೂಪಿಸಿಕೊಳ್ಳುವ ಭರವಸೆ ಮೂಡಿದೆ. ಮುಂದಿನ ದಿನ ಈ ಕ್ರೀಡೆ ಒಲಿಂಪಿಕ್ಗೆ ಸೇರುತ್ತದೆ. ನಮ್ಮೂರಿನ ಪ್ರತಿಭೆಗಳಿಗೆ ಇನ್ನಷ್ಟು ಅವಕಾಶದ ಬಾಗಿಲು ತೆರೆಯಲಿದೆ”
.
ಕೆ.ಎಸ್. ಮೇಧಾ (ಬರಿಗಾಲಿನಿಂದಲೇ ಬೆರಗಿನಾಟ)
ಕುರುಬೂರು ವಿದ್ಯೋದಯ ಕಾನ್ವೆಂಟ್ ನಲ್ಲಿ ಆಡಿ ಬೆಳೆದು 30ಕ್ಕೂ ಹೆಚ್ಚು ರಾಷ್ಟ್ರಮಟ್ಟದ ಪಂದ್ಯ ಜಯಿಸಿದಾಕೆ. ಕ್ರೀಡಾ ಕೋಟಾದಡಿ ಅಂಚೆ ಇಲಾಖೆಯಲ್ಲಿ ಕೆಲಸ ಪಡೆದ ಬಡ ಕುಟುಂಬದ ಕುಡಿ. ಆರಂಭದಲ್ಲಿ ಕೆಲ ಕ್ರೀಡೆಗಳಲ್ಲಿ ಶೂ ಇಲ್ಲದೇ ಆಡಿದ್ದ ವೀಣಾ, ಅಥ್ಲೆಟಿಕ್ಸ್ನಲ್ಲೂ ಬರಿಗಾಲಿನಲ್ಲಿ ಓಡಿದವರು. ಈಗ ಕ್ರೀಡೆಯಿಂದ ಕೆಲಸ ಪಡೆದು ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ.
ರಿಕ್ವೆಸ್ಟ್: ‘ನಮ್ಮೂರಿಗೆ ಒಂದು ಕ್ರೀಡಾಂಗಣ ವ್ಯವಸ್ಥೆ ಮಾಡಿಕೊಡಿ. ನಮ್ಮೂರಿನವರು ಇನ್ನೂ ಎತ್ತರದ ಸಾಧನೆ ಮಾಡುತ್ತಾರೆ.””.
ಮೋನಿಕಾ (ಗೆಲುವಿನ ರೈಲನ್ನೇರಿದಾಕೆ)
ರಾಜ್ಯ, ರಾಷ್ಟ್ರಮಟ್ಟದ ಕ್ರೀಡೆಗಳಲ್ಲಿ ಉತ್ತಮ ಸಾಧನೆಗೈದ ಹಿರಿಯ ಕ್ರೀಡಾಪಟು. ಕ್ರೀಡಾ ಕೋಟಾದಡಿ ರೈಲ್ವೆ ಇಲಾಖೆಯಲ್ಲಿ ಕೆಲಸ ಪಡೆಯಲು ಆಯ್ಕೆಯಾಗಿದ್ದಾರೆ.
ಥ್ಯಾಂಕ್ಯೂ: “ನಮ್ಮೂರಿನವರ ಸಾಧನೆಗೆ ಇಲ್ಲಿನ ಪೋಷಕರು, ಕೋಚ್ ಮಂಜುನಾಥ್ ಅವರೇ ಪ್ರೇರಣೆ.”
ಅಮೂಲ್ಯ(ವಿಶ್ವಕಪ್ ತೀರ್ಪುಗಾರ್ತಿ)
ಖೋ ಖೋ ಚೊಚ್ಚಲ ವಿಶ್ವಕಪ್ ನಲ್ಲಿ ತೀರ್ಪುಗಾರರಾಗಿ ಕೆಲಸ ಮಾಡಿದವರು ಅಮೂಲ್ಯ. ಕಿರಿಯರಿಗೆ ಮಾರ್ಗದರ್ಶನ ಮಾಡುತ್ತಾ, ಉದಯೋನ್ಮುಖ ಆಟಗಾರ್ತಿಯರನ್ನು ರೂಪಿಸುತ್ತಿದ್ದಾರೆ.
ಟೆಕ್ನಿಕ್: “”ಹೆಚ್ಚುವರಿ ತರಬೇತಿಗಾಗಿ ನಮ್ಮೂರಿನವರು ಮೊಬೈಲ್, ಯೂಟ್ಯೂಬ್ ನಂಥ ಜಾಲತಾಣಗಳನ್ನು ನೋಡಿ ಕಲಿಯುತ್ತಿದ್ದಾರೆ. ಸರಕಾರ ಇಲ್ಲಿನ ಪ್ರತಿಭೆಗಳಿಗೆ ಅಗತ್ಯ ಪ್ರೋತ್ಸಾಹ ನೀಡಿ ಬೆನ್ನು ತಟ್ಟಬೇಕು”.





