ತಮ್ಮ ಸಂಗಾತಿಗಳಿಗೆ ಬಲು ನಿಷ್ಠೆಯಿಂದಿರುವ ಜೀವಿಗಳಿವು;

ಹೌದು ವೀಕ್ಷಕರೇ, ಮನುಷ್ಯರೇ ಆಗಿರಲಿ ಅಥವಾ ಪ್ರಾಣಿಗಳೇ ಆಗಿರಲಿ ಪ್ರೀತಿಯಲ್ಲಿ ಆಕರ್ಷಣೆ ಕಳೆದುಕೊಂಡಾಗ ಇನ್ನೊರ್ವರತ್ತ ಆಕರ್ಷಿತರಾಗುವುದು ಆಶ್ಚರ್ಯವೇನಲ್ಲ. ಅದರಲ್ಲೂ ಇಂದಿನ ಆಧುನಿಕ ಯುಗದಲ್ಲಿ ಮನುಷ್ಯರಲ್ಲಿ ಪ್ರೀತಿ, ಪ್ರೇಮ, ಸಂಬಂಧಕ್ಕೆ ಬೆಲೆಯೇ ಇಲ್ಲದಂತಾಗಿದೆ. ಡಿವೋರ್ಸ್, ಪ್ರೀತಿಯಲ್ಲಿ ಮೋಸ ಇಂತಹ ಘಟನೆಗಳು ನಡೆಯುತ್ತಲೇ ಇವೆ. ಆದ್ರೆ ಈ ಕೆಲವೊಂದಿಷ್ಟು ಜೀವಿಗಳು ಪ್ರೀತಿಯಲ್ಲಿ ತಮ್ಮ ಸಂಗಾತಿಗೆ ಜೀವನದುದ್ದಕ್ಕೂ ತುಂಬಾನೇ ನಿನಿಷ್ಠೆಯಿಂದ ಇರುತ್ತವಂತೆ. ಒಂದು ವೇಳೆ ತನ್ನ ಸಂಗಾತಿ ಸಾವನ್ನಪ್ಪಿದರೆ ಆ ಜೀವಿ ಒಂಟಿಯಾಗಿಯೇ ಜೀವನಪರ್ಯಂತ ಬದುಕುತ್ತವಂತೆ. ಹಾಗಿದ್ರೆ ತಮ್ಮ ಸಂಗಾತಿಗೆ ತುಂಬಾನೇ ನಿಷ್ಠವಾಗಿರುವ ಜೀವಿಗಳು ಯಾವುದೆಂಬುದನ್ನು ನೋಡೋಣ ಬನ್ನಿ.

ಹಂಸಗಳು: ಹಂಸ ಜೋಡಿಗಳನ್ನು ಪ್ರೀತಿಯ ನಿಜವಾದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಒಂದು ಹಂಸವು ಇನ್ನೊಂದರೊಂದಿಗೆ ಜೋಡಿಯಾದ ನಂತರ, ಅವು ಒಟ್ಟಿಗೆ ಗೂಡುಗಳನ್ನು ನಿರ್ಮಿಸುತ್ತವೆ, ಮಕ್ಕಳನ್ನು ಒಟ್ಟಿಗೆ ಬೆಳೆಸುತ್ತವೆ ಮತ್ತು ಪೋಷಕರ ಕರ್ತವ್ಯಗಳನ್ನು ಹಂಚಿಕೊಳ್ಳುತ್ತವೆ .

ತೋಳಗಳು: ತೋಳಗಳು ಅಪಾಯಕಾರಿಯಾಗಿ ಕಾಣುತ್ತವೆ, ಆದರೆ ಅವುಗಳು ಪ್ರೀತಿಯ ವಿಚಾರದಲ್ಲಿ ತುಂಬಾನೇ ಸೌಮ್ಯವಾಗಿರುತ್ತವೆ. ಅವುಗಳು ತಮ್ಮ ಕುಟುಂಬ ಮತ್ತು ಸಂಗಾತಿಗೆ ಬಹಳ ನಿಷ್ಠವಾಗಿರುತ್ತವೆ.

ಬೋಳು ಹದ್ದು: ಅಮೆರಿಕ ರಾಷ್ಟ್ರೀಯ ಪಕ್ಷಿಯಾದ ಬೋಳು ಹದ್ದುಗಳು ತಮ್ಮ ಸಂಗಾತಿಗೆ ತುಂಬಾನೇ ನಿಷ್ಠವಾಗಿರುತ್ತವೆ. ಒಮ್ಮೆ ಅವು ಸಂಗಾತಿಯನ್ನು ಆರಿಸಿಕೊಂಡರೆ, ಅವು ಜೀವನಪರ್ಯಂತ ಒಂದೇ ಸಂಗಾತಿಯ ಜೊತೆಗೆ ಜೀವಿಸುತ್ತವೆ.

ಪೆಂಗ್ವಿನ್: ಪೆಂಗ್ವಿನ್ಗಳು ತಮ್ಮ ಜೀವನದುದ್ದಕ್ಕೂ ಒಂದೇ ಸಂಗಾತಿಯೊಂದಿಗೆ ಇರುತ್ತವೆ. ಅವುಗಳು ಒಟ್ಟಿಗೆ ಮರಿಗಳನ್ನು ನೋಡಿಕೊಳ್ಳುತ್ತವೆ. ಪೆಂಗ್ವಿನ್ಗಳ ನಡುವಿನ ಪ್ರೀತಿಯ ಭಾವನೆ ತುಂಬಾ ಪ್ರಬಲವಾಗಿರುತ್ತದೆ.

ಬೀವರ್ಗಳು: ಬೀವರ್ಗಳನ್ನು ವಿಶ್ವದ ಅತ್ಯಂತ ಶ್ರಮಶೀಲ ಪ್ರಾಣಿಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ. ಅತ್ಯುತ್ತಮ ಎಂಜಿನಿಯರ್ ಅಂತಲೇ ಹೆಸರುವಾಸಿಯಾಗಿರುವ ಈ ಪುಟ್ಟ ಬೀವರ್ಗಳು ಪ್ರೀತಿ, ಸಂಬಂಧದ ವಿಚಾರದಲ್ಲೂ ತುಂಬಾನೇ ನಿಷ್ಠವಾಗಿರುತ್ತವೆ.

ಗಿಬ್ಬನ್ಸ್: ಮಂಗನ ಜಾತಿಗೆ ಸೇರಿದ ಈ ಪ್ರಾಣಿಗಳು ತಮ್ಮ ಸಂಗಾತಿಗಳೊಂದಿಗೆ ನಿಕಟ ಬಂಧಗಳನ್ನು ಸೃಷ್ಟಿಸುತ್ತವೆ. ಅವು ತಮ್ಮ ಮರಿಗಳನ್ನು ಒಟ್ಟಿಗೆ ಬೆಳೆಸುತ್ತವೆ ಮತ್ತು ಹೆಚ್ಚಿನ ಸಮಯವನ್ನು ತಮ್ಮ ಸಂಗಾತಿಯೊಂದಿಗೆ ಕಳೆಯುತ್ತವೆ. ತಮ್ಮ ಸಂಗಾತಿ ಸತ್ತರೆ ಒಂಟಿಯಾಗಿ ವಾಸಿಸುತ್ತವೆ.

Related Posts

3 ದಶಕಗಳ ಬಳಿಕ ನಟಿ ಬಿಂದ್ಯಾ ಕ್ಷಮೆ ಕೇಳಿದ್ದೇಕೆ?

ಕನ್ನಡ ಚಿತ್ರರಂಗದ ಕ್ಲಾಸಿಕ್ ಸಿನಿಮಾ ಎಂಬ ಖ್ಯಾತಿ ‘ಹಳ್ಳಿ ಮೇಷ್ಟ್ರು’ ಚಿತ್ರಕ್ಕಿದೆ. ಈ ಸಿನಿಮಾ ಬಿಡುಗಡೆಯಾಗಿ 3 ದಶಕಗಳೇ ಕಳೆದಿವೆ. ಈ ಚಿತ್ರದ ಶೂಟಿಂಗ್ ಸಮಯದಲ್ಲಿ ನಡೆದಿದ್ದ ಒಂದು ವಿವಾದ ಮಾತ್ರ ನಟಿ ಬಿಂದಿಯಾ ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್ ನಡುವೆ ದೊಡ್ಡ…

ಭೀಮಾ ನದಿ ತೀರದಲ್ಲಿ ಒಂದೇ ಕುಟುಂಬದ ಐವರು ಸೇರಿ 6 ಜನರ ಭೀಕರ ಕೊ*ಲೆ!

ವಿಜಯಪುರ ಜಿಲ್ಲೆಯ ಭೀಮಾ ನದಿ ತೀರದಲ್ಲಿ ಮತ್ತೆ ನೆತ್ತರ ಹರಿದಿದ್ದು, ಭೀಕರ ಸಾಮೂಹಿಕ ಹತ್ಯಾಕಾಂಡ ಇಡೀ ಜಿಲ್ಲೆಯನ್ನು ತಲ್ಲಣಗೊಳಿಸಿದೆ. ಜಮೀನು ವ್ಯಾಜ್ಯದ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ಐವರು ಹಾಗೂ ಅವರ ಸ್ನೇಹಿತ ಸೇರಿದಂತೆ ಒಟ್ಟು ಆರು ಜನರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ, ಗುಂಡು…

You Missed

ಮತದಾರರ ಪಟ್ಟಿ ಪರಿಷ್ಕರಣೆ (SIR): ಅಧಿಕಾರಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ

ಮತದಾರರ ಪಟ್ಟಿ ಪರಿಷ್ಕರಣೆ (SIR): ಅಧಿಕಾರಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ

3 ದಶಕಗಳ ಬಳಿಕ ನಟಿ ಬಿಂದ್ಯಾ ಕ್ಷಮೆ ಕೇಳಿದ್ದೇಕೆ?

3 ದಶಕಗಳ ಬಳಿಕ  ನಟಿ ಬಿಂದ್ಯಾ  ಕ್ಷಮೆ ಕೇಳಿದ್ದೇಕೆ?

ಭೀಮಾ ನದಿ ತೀರದಲ್ಲಿ ಒಂದೇ ಕುಟುಂಬದ ಐವರು ಸೇರಿ 6 ಜನರ ಭೀಕರ ಕೊ*ಲೆ!

ಭೀಮಾ ನದಿ ತೀರದಲ್ಲಿ  ಒಂದೇ ಕುಟುಂಬದ ಐವರು ಸೇರಿ 6 ಜನರ ಭೀಕರ ಕೊ*ಲೆ!

ಕರ್ನಾಟಕ ನೂತನ ಸಿಎಂ ಆಯ್ಕೆ: ಇಂದು ಸಂಜೆ ವಿಧಾನಸೌಧದಲ್ಲಿ ಮಹತ್ವದ ಸಿಎಲ್‌ಪಿ ಸಭೆ

ಕರ್ನಾಟಕ ನೂತನ ಸಿಎಂ ಆಯ್ಕೆ: ಇಂದು ಸಂಜೆ ವಿಧಾನಸೌಧದಲ್ಲಿ ಮಹತ್ವದ ಸಿಎಲ್‌ಪಿ ಸಭೆ

ಆತ್ಮನಿರ್ಭರ ಭಾರತಕ್ಕೆ ದೊಡ್ಡ ಬಲ: ಅತ್ಯಂತ ಬಲಿಷ್ಠ ‘ವೆಲ್ಡೆಡ್ ಪೈಪ್’ ಉತ್ಪಾದಿಸಿ ದಾಖಲೆ ಬರೆದ AM/NS ಇಂಡಿಯಾ!

ಆತ್ಮನಿರ್ಭರ ಭಾರತಕ್ಕೆ ದೊಡ್ಡ ಬಲ: ಅತ್ಯಂತ ಬಲಿಷ್ಠ ‘ವೆಲ್ಡೆಡ್ ಪೈಪ್’ ಉತ್ಪಾದಿಸಿ ದಾಖಲೆ ಬರೆದ AM/NS ಇಂಡಿಯಾ!

ಕರ್ನಾಟಕ ರಾಜಕೀಯದಲ್ಲಿ ಹೈಡ್ರಾಮಾ: ಸಿದ್ದರಾಮಯ್ಯ ರಾಜೀನಾಮೆಗೆ ಹೈಕಮಾಂಡ್ ಗಡುವು!

ಕರ್ನಾಟಕ ರಾಜಕೀಯದಲ್ಲಿ ಹೈಡ್ರಾಮಾ: ಸಿದ್ದರಾಮಯ್ಯ ರಾಜೀನಾಮೆಗೆ ಹೈಕಮಾಂಡ್ ಗಡುವು!