ದೇವರಿಗೂ ಮಿಗಿಲು ಅಮ್ಮನ ಮಡಿಲು ….

ಜೀವನದಲ್ಲಿ ಅಮ್ಮ ಎಂಬ ಎರಡಕ್ಷರ ಜೊತೆಗಿರಲು, ಕಷ್ಟ ಎಂಬ ಎರಡಕ್ಷರ ಕಾಣುವುದಿಲ್ಲ. ನವಮಾಸ ಗರ್ಭದಲ್ಲಿ ಹೊತ್ತು, ಜನ್ಮ ನೀಡಿದ ಅವಳು ಜನ್ಮ ಮಾಸುವವರೆಗೂ ಪ್ರೀತಿಯನ್ನು ಬಿಟ್ಟು ಇನ್ನೇನನ್ನೂ ನೀಡಲಾರಳು. ಮಕ್ಕಳು ತಪ್ಪು ಮಾಡಿದಾಗ ಕೋಪವೇ ಅವಳ ಬೆತ್ತ, ನಮಗೆ ನೋವಾದಾಗ ಅವಳು ಕಣ್ಣೀರಾಕುವಳು ಅದುವೇ ಅವಳ ಮುಗ್ಧತೆಯ ಪ್ರೀತಿ. ಶಿಸ್ತು ,ಬದುಕಿನ ಅರ್ಥ ತಿಳಿಸುವ ವೈಖರಿಯಲ್ಲಿಯೇ ಗುರುವಾದವಳು. ನಗುವೆಂಬ ಅಮೂಲ್ಯವಾದ ಆಭರಣ ತೊಟ್ಟವಳು ಅಮ್ಮ. ನಮ್ಮ ಏಳಿಗೆಗಾಗಿ ಕಾಣದ ದೇವರಿಗೆ ಹರಕೆ ಹೊತ್ತು, ಸದಾ ಸುಖವಿರಲಿ ಮಕ್ಕಳ ಬಾಳಿನಲ್ಲಿ ಎಂದು ಬೇಡಿದವಳು ನನ್ನಮ್ಮ. ಹೊಲ-ಗದ್ದೆಗಳಲ್ಲಿ, ಬಿಸಿಲು, ಮಳೆ,ಚಳಿ,ಗಾಳಿ ಎನ್ನದೇ ದೇಹದಂಡಿಸಿ ದುಡಿದು ಮಕ್ಕಳಿಗಾಗಿ ಒಂದಿಷ್ಟು ಹಣ ಕೂಡಿಡುವಳು. ಆ ಹಣದಿಂದ ಮಕ್ಕಳ ಜೀವನ ಹಸನಾಗುವುದನ್ನು ನೋಡುವುದೇ ಅವಳ ಜೀವನದ ಮುಖ್ಯ ಗುರಿ. ನಮಗಾಗಿ ಗುಡಿ-ಗೋಪುರ ಸುತ್ತುವ ಅವಳೇ ಕಣ್ಣಿಗೆ ಕಾಣುವ, ಮುಕ್ಕೋಟಿ ದೇವರನ್ನು ಮೀರಿಸುವ ಮಮತೆಯ ಸಿರಿ ಅಮ್ಮ. ಆಕೆಯ ಕಾಲಿನ ಧೂಳು ಸಹ ನನ್ನಣೆಗೆ ಸಿಂಧೂರವೇ ಸರಿ..

ಈ ಸುಂದರ ಜೀವನ ನೀಡಿದ್ದಕ್ಕೆ ಧನ್ಯವಾದಗಳು ಅಮ್ಮ…. ಎಂದಿಗೂ ನಿನ್ನ ಮಡಿಲಿನಲ್ಲಿ ಪುಟ್ಟ ಮಗು ನಾನು…. ದೇವರಿಗೂ ಸವಾಲಾಕುವೆ ನಿನ್ನ ಪ್ರೀತಿ ಪಡೆದ ನಾನು ಜಗತ್ತಿನ ಶ್ರೀಮಂತೆ ಎಂದು…..ಅಮ್ಮ; ಇದು ಖಂಡಿತ ಒಂದು ಶಬ್ದವಲ್ಲ. ಬದಲಿಗೆ ಅದೊಂದು ಭಾವನೆ. ಸಂತೋಷ, ಸುಖ, ದುಃಖ, ನೋವು, ನಲಿವು ಹೀಗೆ ಎಲ್ಲದಕ್ಕೆ ಅಮ್ಮನೇ ಆಧಾರ. ಆಕೆಯೇ ನಮ್ಮ ಮೊದಲ ನುಡಿ. ಜಗತ್ತಿನಲ್ಲಿ ಅಮ್ಮ ಅನ್ನುವ ಶಬ್ದಕ್ಕಿಂತ ತೂಕದ ಇನ್ನೊಂದು ಶಬ್ದ-ಭಾವನೆ ಇರಲಿಕ್ಕಿಲ್ಲ.ಪ್ರತಿ ವ್ಯಕ್ತಿಯ ಬದುಕಿನಲ್ಲಿ ಅಮ್ಮನ ಮನೆಯಷ್ಟು ಆಪ್ತ ಮನೆ ಇನ್ನೊಂದು ಸಿಗಲಾರದು. ಅಮ್ಮನ ಮಡಿಲು ನೀಡುವ ಸುಖವನ್ನು ಜಗತ್ತಿನ ಯಾವುದೇ ವಸ್ತು ನೀಡಲಾರದು.

ಅಮ್ಮನಿಗೆ ಸರಿ ಸಾಟಿ ಅಮ್ಮನೇ. ಅದಕ್ಕಾಗಿಯೇ ಅಮ್ಮನನ್ನು ನಮ್ಮಲ್ಲಿ ಮಾತೃ ದೇವತೆ ಎಂದೇ ಪೂಜಿಸುತ್ತಾರೆ. ಅಮ್ಮ ಅನ್ನುವುದು ಒಂದು ವ್ಯಕ್ತಿ ಅಲ್ಲ; ಅಮ್ಮ ಅನ್ನುವುದು ಕೇವಲ ಎರಡು ಪದಗಳಲ್ಲ; ಬದಲಿಗೆ ಅಮ್ಮ ಎಂದರೆ ಒಂದು ಸುಂದರ ಭಾವನೆ. ಅಮ್ಮ ಎಂದರೆ ಏನು? ಅದು ಶ್ರೀ ಕೃಷ್ಣ ಪರಮಾತ್ಮನ ವಿಶ್ವರೂಪದಂತೆ.ಅಲ್ಲಿ ಎಲ್ಲವೂ ಇದೆ; ಎಲ್ಲೆಡೆಯೂ ಇರುವುದು ಅಮ್ಮನೇ.ಇಂತಹ ಅಮ್ಮನ ಋಣ ನೆನಪಿಸಿಕೊಳ್ಳಲೊಂದು ಅಮ್ಮಂದಿರ ದಿನ. ಪ್ರಪಂಚದೆಲ್ಲೆಡೆ ಇರುವ ಎಲ್ಲಾ ತಾಯಂದಿರಿಗೂ ವಿಶ್ವ ತಾಯಂದಿರ ದಿನದ ಶುಭಾಶಯಗಳು.

Related Posts

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ರಾಜ್ಯದಲ್ಲಿ ಸೆಪ್ಟೆಂಬರ್ 21ರಿಂದ ಮೂರು ದಿನಗಳ ಕಾಲ ವಿಶೇಷ ವಿಧಾನಮಂಡಲ ಅಧಿವೇಶನ ನಡೆಸಲು ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಸೆ. 21ರಿಂದ ಸೆ.…

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಗುಂಡ್ಲುಪೇಟೆ ಪಟ್ಟಣದ ಇಂದಿರಾ ಕ್ಯಾಂಟೀನ್‌ಗೆ ಸೋಮವಾರ ಬೆಳಿಗ್ಗೆ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ ಆಹಾರದ ಶುಚಿತ್ವ, ಗುಣಮಟ್ಟ ಹಾಗೂ ಕುಡಿಯುವ ನೀರಿನ ಪೂರೈಕೆಯನ್ನು ಕೂಲಂಕಷವಾಗಿ ಪರಿಶೀಲಿಸಿತು. ಬಡವರು ಮತ್ತು ಶ್ರಮಿಕರಿಗೆ ಪೌಷ್ಟಿಕ ಹಾಗೂ ಶುಚಿ-ರುಚಿಯಾದ ಆಹಾರ ದೊರೆಯಬೇಕು ಎಂಬ ಶಾಸಕರ…

You Missed

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!