ಬೆಟ್ಟದಪುರದ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಜಾನುವಾರು ಜಾತ್ರೆ : ಸಿದ್ಧತೆ ಬಲು ಜೋರು!

ಬೆಟ್ಟದಪುರ: ಇಲ್ಲಿನ ಆರಾಧ್ಯ ದೈವ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಜಾನುವಾರು ಜಾತ್ರೆ ಸೋಮವಾರ (ಫೆ.3)ದಿಂದ ಶುಕ್ರವಾರದವರೆಗೆ (ಫೆ.7) ಜರುಗಲಿದ್ದು, ಸಿದ್ದತೆ ಭರದಿಂದ ಸಾಗಿದೆ.
ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಜರುಗುವ ಏಕೈಕ ಜಾನುವಾರು ಜಾತ್ರೆ ಇದಾಗಿದ್ದು, ಮೈಸೂರು ಜಿಲ್ಲೆ ಮಾತ್ರವಲ್ಲದೆ ರಾಜ್ಯದ ಹಲವು ಜಿಲ್ಲೆಗಳಿಂದಲೂ ರೈತರು ಎತ್ತುಗಳನ್ನು ಕರೆತರುತ್ತಾರೆ. ಜಾತ್ರೆ ಆರಂಭಗೊಳ್ಳುವ ಮೂರು ದಿನಗಳ ಮುಂಚಿತವಾಗಿಯೇ ರೈತರು ದನಗಳನ್ನು ಕಟ್ಟಲು ಸ್ಥಳಗಳನ್ನು ಕಾಯ್ದಿರಿಸುತ್ತಿದ್ದಾರೆ.

ಬೆಟ್ಟದಪುರದಲ್ಲಿ ಮಲ್ಲಿಕಾರ್ಜುನ ಸ್ವಾಮಿಗೆ ಇರುವಷ್ಟೇ ಪ್ರಾಧಾನ್ಯತೆ ಬಸವನಿಗೂ (ಬೆಳ್ಳಿಬಸಪ್ಪ) ಇದ್ದು, ರೈತರು ರಾಸುಗಳ ಮೇಲೆ ದೈವಿ ಭಾವ ತೋರುತ್ತಾರೆ. ಬಣ್ಣ ಬಣ್ಣದ ಮಾಲೆ ಹಾಗೂ ಗೆಜ್ಜೆಗಳಿಂದ ಕಣ್ಮನ ಸೆಳೆಯುವಂತೆ ರಾಸುಗಳಿಗೆ ಅಲಂಕಾರ ಮಾಡಿ, ವಾದ್ಯ ಮೇಳಗಳ ಸಹಿತವಾಗಿ ಜಾತ್ರೆಗೆ ಮೆರವಣಿಗೆ ಮೂಲಕ ಕರೆ ತರಲಾಗುತ್ತದೆ. ಸಂಕ್ರಾಂತಿ ಸುಗ್ಗಿಯ ನಂತರ ಆರಂಭವಾಗುವ ಜಾನುವಾರು ಜಾತ್ರೆಗಳಲ್ಲಿ ಸಮೀಪದ ಚುಂಚನಕಟ್ಟೆ, ಹೇಮಗಿರಿ, ಮುಡುಕುತೊರೆ ಕ್ಷೇತ್ರಗಳ ಜಾತ್ರೆ ನಂತರ ಬೆಟ್ಟದಪುರದ ಜಾತ್ರೆ ನಡೆಯುವುದು ರೂಢಿ.
ಬಹುತೇಕ ಕೃಷಿ ಚಟುವಟಿಕೆಗಳು ಪೂರ್ಣಗೊಂಡ ನಂತರ ಪ್ರತಿ ವರ್ಷ ಜಾತ್ರೆ ನಡೆಯಲಿದ್ದು, ಕಳೆದ ಸಾಲಿನಲ್ಲಿ ಒಂದು ಜೋಡಿ ಹಳ್ಳಿಕಾರ್ ಎತ್ತುಗಳು ಕನಿಷ್ಠ ₹ 45 ಸಾವಿರ ದಿಂದ ಗರಿಷ್ಠ ₹ 5 ಲಕ್ಷ ದವರೆಗೆ ಮಾರಾಟವಾಗಿದ್ದವು. ಸಾವಿರಕ್ಕೂ ಹೆಚ್ಚು ಜೋಡಿ ರಾಸುಗಳು ಪಾಲ್ಗೊಳ್ಳುವುದರಿಂದ ಖರೀದಿಗೆ ಹೊರ ಜಿಲ್ಲೆಗಳಿಂದಲೂ ರೈತರು ಆಗಮಿಸುತ್ತಾರೆ. ಅಲ್ಲದೇ ಪ್ರಸಕ್ತ ಸಾಲಿನಲ್ಲಿ ಉತ್ತಮ ಮಳೆಯಾಗಿದ್ದು, ರಾಸುಗಳಿಗೆ ಮೇವಿನ ಕೊರತೆ ಇಲ್ಲದಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಲಿವೆ ಎಂದು ಅಂದಾಜಿಸಲಾಗಿದೆ.
‘ಪ್ರತಿ ವರ್ಷವೂ ಜಾನುವಾರು ಜಾತ್ರೆಗೆ ಭಾಗವಹಿಸುತ್ತೇವೆ. ಉತ್ತಮ ರಾಸುಗಳನ್ನು ಖರೀದಿಸುತ್ತೇವೆ’ ಎಂದು ಅಲ್ಪನಾಯಕನ ಹಳ್ಳಿಯ ರೈತ ಯೋಗೇಶ್ ಹೇಳಿದರು.

ಈ ಮೊದಲು ಬೆಟ್ಟದಪುರದ ಸಂತೆಮಾಳದ ಸಮೀಪ ಜಾನುವಾರು ಜಾತ್ರೆ ನಡೆಸಲಾಗುತ್ತಿತ್ತು. ಆದರೆ, ಕಳೆದ ನಾಲ್ಕು ವರ್ಷಗಳಿಂದ ಜಾಗದ ಮತ್ತು ನೀರಿನ ಕೊರತೆ ಉಂಟಾದ ಕಾರಣ ಹರದೂರು ಗೇಟ್ ಬಳಿ ರೈತರ ಜಮೀನುಗಳಲ್ಲಿಯೇ ಜಾತ್ರೆ ಆಯೋಜಿಸಲಾಗುತ್ತಿದೆ. ಅಲ್ಲಿಗೆ ಬೇಕಾದ ಮೂಲಸೌಕರ್ಯಗಳನ್ನು ಕಂದಾಯ ಇಲಾಖೆಯಿಂದ ಒದಗಿಸಲಾಗಿದೆ. ‘ಕಳೆದ ಬಾರಿ ರಾಸುಗಳಿಗೆ ಯಾವುದೇ ರೀತಿಯ ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗಿತ್ತು. ಈ ವರ್ಷವೂ ಜಾನುವಾರುಗಳ ಸಂಖ್ಯೆ ಹೆಚ್ಚಾಗಲಿದ್ದು, ಮುಂಜಾಗ್ರತೆ ಕ್ರಮ ವಹಿಸಲಾಗಿದೆ’ ಎಂದು ಪಶು ವೈದ್ಯಕೀಯ ಸಹಾಯಕ ನಿರ್ದೇಶಕ ಸೋಮಯ್ಯ ಮಾಹಿತಿ ನೀಡಿದರು.

ಮಗಳಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಪತಿಯನ್ನ ಕೊಂ* ಪತ್ನಿ !


ತಾತ್ಕಾಲಿಕವಾಗಿ ವಿದ್ಯುತ್ ಸಂಪರ್ಕ, 24 x 7 ಪಶು ವೈದ್ಯಕೀಯ ಸೇವೆ, ಅಕ್ಕಪಕ್ಕದ ರೈತರ ಪಂಪ್ಸೆಟ್ಗಳಿಂದ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಜಾತ್ರೆ ಮಾಳದಲ್ಲಿ ತಾತ್ಕಾಲಿಕ ಹೋಟೆಲ್ಗಳು, ಮಂಡಕ್ಕಿ ಹಾಗೂ ಸಿಹಿ ತಿನಿಸುಗಳ ಅಂಗಡಿಗಳು ತಲೆಯೆತ್ತಿದ್ದು, ವ್ಯಾಪಾರ ವಹಿವಾಟಿಗೆ ತಯಾರಿ ನಡೆದಿದೆ.

Related Posts

3 ದಶಕಗಳ ಬಳಿಕ ನಟಿ ಬಿಂದ್ಯಾ ಕ್ಷಮೆ ಕೇಳಿದ್ದೇಕೆ?

ಕನ್ನಡ ಚಿತ್ರರಂಗದ ಕ್ಲಾಸಿಕ್ ಸಿನಿಮಾ ಎಂಬ ಖ್ಯಾತಿ ‘ಹಳ್ಳಿ ಮೇಷ್ಟ್ರು’ ಚಿತ್ರಕ್ಕಿದೆ. ಈ ಸಿನಿಮಾ ಬಿಡುಗಡೆಯಾಗಿ 3 ದಶಕಗಳೇ ಕಳೆದಿವೆ. ಈ ಚಿತ್ರದ ಶೂಟಿಂಗ್ ಸಮಯದಲ್ಲಿ ನಡೆದಿದ್ದ ಒಂದು ವಿವಾದ ಮಾತ್ರ ನಟಿ ಬಿಂದಿಯಾ ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್ ನಡುವೆ ದೊಡ್ಡ…

ಭೀಮಾ ನದಿ ತೀರದಲ್ಲಿ ಒಂದೇ ಕುಟುಂಬದ ಐವರು ಸೇರಿ 6 ಜನರ ಭೀಕರ ಕೊ*ಲೆ!

ವಿಜಯಪುರ ಜಿಲ್ಲೆಯ ಭೀಮಾ ನದಿ ತೀರದಲ್ಲಿ ಮತ್ತೆ ನೆತ್ತರ ಹರಿದಿದ್ದು, ಭೀಕರ ಸಾಮೂಹಿಕ ಹತ್ಯಾಕಾಂಡ ಇಡೀ ಜಿಲ್ಲೆಯನ್ನು ತಲ್ಲಣಗೊಳಿಸಿದೆ. ಜಮೀನು ವ್ಯಾಜ್ಯದ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ಐವರು ಹಾಗೂ ಅವರ ಸ್ನೇಹಿತ ಸೇರಿದಂತೆ ಒಟ್ಟು ಆರು ಜನರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ, ಗುಂಡು…

You Missed

ಮತದಾರರ ಪಟ್ಟಿ ಪರಿಷ್ಕರಣೆ (SIR): ಅಧಿಕಾರಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ

ಮತದಾರರ ಪಟ್ಟಿ ಪರಿಷ್ಕರಣೆ (SIR): ಅಧಿಕಾರಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ

3 ದಶಕಗಳ ಬಳಿಕ ನಟಿ ಬಿಂದ್ಯಾ ಕ್ಷಮೆ ಕೇಳಿದ್ದೇಕೆ?

3 ದಶಕಗಳ ಬಳಿಕ  ನಟಿ ಬಿಂದ್ಯಾ  ಕ್ಷಮೆ ಕೇಳಿದ್ದೇಕೆ?

ಭೀಮಾ ನದಿ ತೀರದಲ್ಲಿ ಒಂದೇ ಕುಟುಂಬದ ಐವರು ಸೇರಿ 6 ಜನರ ಭೀಕರ ಕೊ*ಲೆ!

ಭೀಮಾ ನದಿ ತೀರದಲ್ಲಿ  ಒಂದೇ ಕುಟುಂಬದ ಐವರು ಸೇರಿ 6 ಜನರ ಭೀಕರ ಕೊ*ಲೆ!

ಕರ್ನಾಟಕ ನೂತನ ಸಿಎಂ ಆಯ್ಕೆ: ಇಂದು ಸಂಜೆ ವಿಧಾನಸೌಧದಲ್ಲಿ ಮಹತ್ವದ ಸಿಎಲ್‌ಪಿ ಸಭೆ

ಕರ್ನಾಟಕ ನೂತನ ಸಿಎಂ ಆಯ್ಕೆ: ಇಂದು ಸಂಜೆ ವಿಧಾನಸೌಧದಲ್ಲಿ ಮಹತ್ವದ ಸಿಎಲ್‌ಪಿ ಸಭೆ

ಆತ್ಮನಿರ್ಭರ ಭಾರತಕ್ಕೆ ದೊಡ್ಡ ಬಲ: ಅತ್ಯಂತ ಬಲಿಷ್ಠ ‘ವೆಲ್ಡೆಡ್ ಪೈಪ್’ ಉತ್ಪಾದಿಸಿ ದಾಖಲೆ ಬರೆದ AM/NS ಇಂಡಿಯಾ!

ಆತ್ಮನಿರ್ಭರ ಭಾರತಕ್ಕೆ ದೊಡ್ಡ ಬಲ: ಅತ್ಯಂತ ಬಲಿಷ್ಠ ‘ವೆಲ್ಡೆಡ್ ಪೈಪ್’ ಉತ್ಪಾದಿಸಿ ದಾಖಲೆ ಬರೆದ AM/NS ಇಂಡಿಯಾ!

ಕರ್ನಾಟಕ ರಾಜಕೀಯದಲ್ಲಿ ಹೈಡ್ರಾಮಾ: ಸಿದ್ದರಾಮಯ್ಯ ರಾಜೀನಾಮೆಗೆ ಹೈಕಮಾಂಡ್ ಗಡುವು!

ಕರ್ನಾಟಕ ರಾಜಕೀಯದಲ್ಲಿ ಹೈಡ್ರಾಮಾ: ಸಿದ್ದರಾಮಯ್ಯ ರಾಜೀನಾಮೆಗೆ ಹೈಕಮಾಂಡ್ ಗಡುವು!